ಅಕ್ಬರನ ಆಡಳಿತ ಪದ್ಧತಿ

ಅಕ್ಬರ್ದಕ್ಷ ಆಡಳಿಥಗಾರ: ತೀಕ್ಷ್ಣ ಬುದ್ಧಿವಂತಿಕೆಯಿಂದ ಉತ್ತಮ & ಏಕರೂಪದ ಆಡಳಿತ:

ಹಿಂದೂ-ಮುಸ್ಲೀಂ ಸಮನ್ವಯದ ಆಡಳಿತ

ದೆಹಲಿಯ ಸುಲ್ತಾನರಂತೆ ಸಂಕುಚಿತ ಆಡಳಿತ ಅಲ್ಲ

ಧರ್ಮವನ್ನು ರಾಜಕೀಯದಿಂದ ಪ್ರತ್ಯೇಕ

ಶೇರ್ಶಹಾನ ಪದ್ಧತಿಯ ಅನುಸರಣೆ: ಆದರೆ ತಕ್ಕ ಮಾರ್ಪಾಟುಗಳು

 

I. ಕೇಂದ್ರಾಡಳಿತ – Central Administration:- ಬಾದಶಹಾನೇ ಸರ್ವೋಚ್ಛ ಅಧಿಕಾರಿ

ಎಲ್ಲಾ ಅಧಿಕಾರಗಳೂ ಅವನಲ್ಲೇ ಕೇಂದ್ರೀಕೃತ

ನಾಗರೀಕ ಮತ್ತು ಸೈನಿಕ ಸರ್ವೋಚ್ಛ ಅಧಿಕಾರಿ

ದರ್ಪಿಷ್ಠ ಕೇಂದ್ರಾಡಳಿತ

ಆದರೆ, ಉಲೇಮಾ & ಖಲೀಫರಿಗಿಂತ ಉತ್ತಮ

ಅಬುಲ್ ಫಜಲ್:- “ಬಾದಶಹಾ ಭೂಮಿಯ ಮೇಲಿನ ದೇವರು; ದೇವರ ನೆರಳು ಜಿಲ್ಲಿ ಇ ಅಲಿ”

“ರಾಜತ್ವ ದೈವದತ್ತವಾದದ್ದು”

ದರ್ಪಿಷ್ಠನಾದರೂ ಪರೋಪಕಾರಿ:

ಪ್ರಜೆಗಳನ್ನು ಮಕ್ಕಳಂತೆ ಪ್ರೀತಿಸುತ್ತಿದ್ದ

ದಿನಕ್ಕೆ ೧೬ ಗಂಟೆಗಳ ಕಾಲ ಕಾರ್ಯ!

 

ಅಕ್ಬರ್ನಾಮಾ:- ದಿನಚರಿ: ಪ್ರಜಾ ದರ್ಶನ - ಜರೋಕಾ ಇ ದರ್ಶನ್

ದರ್ಬಾರ್– ಸು. ೪.೩೦ ಗಂಟೆಗಳ ಕಾಲ – ಮನಸಬದ?ರರ ಮೇಲ್ವಿಚಾರಣೆ

ದಿವಾನ್ ಇ ಆಲಾ ದಲ್ಲಿ ಮಂತ್ರಾಲೋಚನೆ- ೨ ತಾಸುಗಳು

ಬಾದಶಹಾನ ಅಲ್ಪ ವಿಶ್ರಾಂತಿ

ಸಂಜೆ ರಾಯಭಾರಿಗಳೊಡನೆ ಚರ್ಚೆ

ಖಾಸಗಿ ಸಂದರ್ಶನ

ರಾತ್ರಿ ಯುದ್ಧ ವಿಚಾರಗಳ ಚರ್ಚೆ

ವಿದ್ವಾಂಸರೊಡನೆ ಕಾಲ ವಿನಿಯೋಗ

 

ಮಂತ್ರಿಮಂಡಲ: ಆಡಳಿತದ ಸಹಾಯಕ್ಕಾಗಿ: ಕಾರ್ಯದರ್ಶಿಗಳಂತೆ ಇದ್ದರು: ನೇಮಕ-ವಜಾ ಎರಡೂ ಬಾದಶಹಾನ ಕೈಯಲ್ಲೇ! ಸಲಹೆ ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕು ಬಾದಶಹಾನದೇ!

 

1.       ವಕೀಲ್ – ಪ್ರಧಾನಮಂತ್ರಿ – ಕೇಂದ್ರದ ಎಲ್ಲಾ ಇಲಾಖೆಗಳ ಮೇಲ್ವಿಚಾರಕ

2.       ದಿವಾನ್ ಇ ಆಲಾ – ಅರ್ಥಸಚಿವ: ಆಯ-ವ್ಯಯ, ಸಿಬ್ಬಂದಿ ವೇತನದ ಮೇಲ್ವಿಚಾರಕ

3.       ಆರಿಜ಼್ ಇ ಮುಮಲಿಕ್ – ಮುಖ್ಯ ಸೇನಾಧಿಕಾರಿ

4.       ಮೀರ್ಬಕ್ಷಿ – ಸೇನಾ ಇಲಾಖೆಯ ವೇತನಾಧಿಕಾರಿ

5.       ದಿವಾನ್ ಇ ಅಶ್ರಫ್ – ಕಂದಾಯ ಮಂತ್ರಿ

6.       ಸದರ್ಉಸ್ ಸದರ್- ದಾನ-ದತ್ತಿಗಳ ಮಂತ್ರಿ: ಧಾರ್ಮಿಕ ವ್ಯವಹಾರಗಳ ಮೇಲ್ವಿಚಾರಕ; ರಾಜನಿಗೆ ಸಲಹೆ: ಕೆಲವೊಮ್ಮೆ ನ್ಯಾಧೀಶನಾಗಿಯೂ ಕಾರ್ಯ

7.       ಖಾಜಿ ಉಲ್ ಖಾಜಿ – ಮುಖ್ಯ ನ್ಯಾಯಾಧೀಶ

8.       ಖಾನ್ ಇ ಸಮನ್ – ಗೃಹಸಚಿವ; ಅರಮನೆಗಳ ಮೇಲ್ವಿಚಾರಕ

9.       ಮಹತಾಸಿಬ್ – ಪ್ರಜೆಗಳ ಕುಂದು-ಕೊರತೆಗಳ ಮೇಲ್ವಿಚಾರಕ; ಧರ್ಮಾಧಿಕಾರಿ

10.   ದರೋಗ್ ಇ ಡಾಕ್ ಚೌಕಿ – ಗೂಢಾಚಾರ ವ್ಯವಸ್ಥೆಯ ಮುಖ್ಯಸ್ಥ; ಅಂಚೆ ಇಲಾಖೆಯ ಮೇಲ್ವಿಚಾರಕನೂ ಹೌದು

11.   ಮಸ್ತೌಫ಼ಿ – ಮುಖ್ಯ ಲೆಕ್ಕಾಧಿಕಾರಿ

12.   ಮೀರ್ಆತಿಶ್ – ಫಿರಂಗಿ ದಳದ ಮುಖ್ಯಸ್ಥ

13.   ಮುರ್ಶಿಫ಼್ – ಬಂದರುಗಳ ಮುಖ್ಯಸ್ಥ

14.   ಮೀರ್ಅರೀಜ಼್ – ನಿವೃತ್ತಿ ವೇತನಗಳ ಇಲಾಖೆ

15.   ಮೀರ್ಬಾರ್- ಅರಣ್ಯಗಳ ಮೇಲ್ವಿಚಾರಕ

16.   ದರೋಗ್ ಇ ತಕ್ಷಲ್ – ಟಂಕಸಾಲೆಗಳ ಮೇಲ್ವಿಚಾರಕ

 

II. ಪ್ರಾಂತ್ಯಾಡಳಿತ – Provincial Administration: ಸುಬಾಗಳು – ಸುಬೇದಾರ: ಒಟ್ಟು ೧೫ ಸುಬಾಗಳು

ಪ್ರಾಂತ್ಯಗಳಲ್ಲಿ ಕಾನೂನು, ಶಾಂತಿ ಪಾಲನೆ & ಸೈನ್ಯ ಸಂಘಟನೆ ಮುಖ್ಯ ಕರ್ತವ್ಯ: ಬಾದಶಹಾನಿಂದ ನೇಮಕ: ಸಹಾಯಕ್ಕೆ

1.       ದಿವಾನ – ಅರ್ಥಸಚಿವ (ಕಂದಾಯ ಇಲಾಖೆಯ ಮುಖ್ಯಸ್ಥ)

2.       ಬಕ್ಷಿ – ಸೈನಿಕರ ವೇತನ ವಿತರಣಾಧಿಕಾರಿ

3.       ಸದರ್– ಧಾರ್ಮಿಕ ವ್ಯವಹಾರಗಳ ನಿವಾಹಕ

4.       ಖಾಜಿ – ನ್ಯಾಯಾಧೀಶ

5.       ಕೊತ್ವಾಲ – ನಗರಗಳ ರಕ್ಷಕ

6.       ಆರೋಗ್ಯ-ನೈರ್ಮಲ್ಯ ನಿರ್ವಹಣಾಧಿಕಾರಿ

   ಪ್ರಾಂತ್ಯಾಡಳಿತವು ಕೇಂದ್ರಾಡಳಿತದ ಪ್ರತಿರೂಪದಂತಿತ್ತು

 

A. ಸರ್ಕಾರಗಳು: ಜಿಲ್ಲೆಗಳಂತೆ – ಸುಬಾಗಳನ್ನು ಸರ್ಕಾರಗಳಾಗಿ ವಿಂಗಡನೆ: ಫ಼ೌಜುದಾರ ಮುಖ್ಯಸ್ಥ: ಮಿಲಿಟರಿ ಅಧಿಕಾರಿ: ಶಾಂತಿ-ಕಾನೂನು ಪಾಲಕ: ಬಾದಶಹಾನ ಆಜ್ಞೆಗಳ ಜಾರಿ:ಸುಮಾರು ೧೦೦ ಸರ್ಕಾರಗಳು

1.       ಡಾಕಿಯಾ ನವೀಸ್ – ವರದಿಗಾರ: ದಾಖಲೆಗಳ ಸಂಗ್ರಾಹಕ;

2.       ಅಮಲ್ ಗುಜಾರ್– ಭೂಕಂದಾಯ ಸಂಗ್ರಾಹಕ

3.       ಖಾಜ಼ಿ – ನ್ಯಾಯಾಧೀಶ

4.       ಕೊತ್ವಾಲ – ಪಟ್ಟಣ ರಕ್ಷಕ

5.       ಚಿಟಿಕ್ಜಿ – ಭೂ ದಾಖಲೆಗಳ ನಿರ್ವಾಹಕ

6.       ಖಜಾನುದಾರ - ಕಜಾಂಚಿ

 

 

B. ಪರಗಣಗಳು

 ಸರ್ಕಾರಗಳನ್ನು ಪರಗಣ (ತಾಲ್ಲೂಕುಗಳಂತೆ) ಗಳಾಗಿ ವಿಭಾಗ: ಶಿಕ್ ದಾರ – ಮುಖ್ಯಸ್ಥ;

1.       ಅಮೀಲ್ – ಕಂದಾಯಾಧಿಕಾರಿ

2.       ಪೋತೇದಾರ – ಕಜಾಂಚಿ

3.       ಕಾರಕೂನ – ಗುಮಾಸ್ತ

4.       ಕನಂಗೊ & ಚೌಧರಿಗಳು

C. ಗ್ರಾಮಾಡಳಿತ ಗ್ರಾಮಗಳು ಸ್ವತಂತ್ರ ಆಡಳಿತ ಘಟಕಗಳು; ಮುಕ್ದಮ್ ಗ್ರಾಮಗಳ ಮುಖ್ಯಸ್ಥ; ಪಟುವಾರಿ & ಚೌಕಿದಾರರ ನೆರವು

 

III. ನ್ಯಾಯಾಡಳಿತ:- ಬಾದಶಹಾನ ಆಸ್ಥಾನವೇ ಅಂತಿಮ ನ್ಯಾಯಾಲಯ: ಅಲ್ಲಿನ ತೀರ್ಪೇ ಅಂತಿಮ: ಗುರುವಾರ ನ್ಯಾಯದಾನಕ್ಕೆ ಮೀಸಲು: ಮುಖ್ಯ ಖಾಜಿ ನ್ಯಾಯತೀರ್ಪಿಗೆ ಸಹಾಯಕ

ನಿಶ್ಪಕ್ಷಪಾತ ನ್ಯಾಯದಾನ: “If I am guilt of an unjust act, I must rise judgement against myself

 

ಪ್ರಾಂತ್ಯಗಳಲ್ಲಿ ಸುಬೇದಾರ, ಸರ್ಕಾರಗಳಲ್ಲಿ ಫ಼ೌಜುದಾರ ಮತ್ತು ಪರಗಣಗಳಲ್ಲಿ ಶಿಖ್ ದಾರ ನ್ಯಾಯತೀರ್ಪು ನೀಡುತ್ತಿದ್ದರು.

ಪ್ರತಿ ಹಂತದಲ್ಲೂ ಪ್ರತ್ಯೇಕ ಖಾಜಿ ನ್ಯಯಾಲಯಗಳು: ಅಮೀಲರಿಂದ  ಭೂವಿವಾದಗಳ ವಿಚಾರಣೆ; ಹಿಂದೂ ಕಾನೂನುಗಳ ಪ್ರಕಾರ ತೀರ್ಪು-ಶೇ ಶಹಾನಂತೆ;

ಪ್ರಥಮ ಬಾರಿಗೆ ಹಿಂದೂ ನ್ಯಾಯಾಧೀಶರ ನೇಮಕ

ದಂಡ, ಛಡಿ ಏಟು, ಅಂಗಚ್ಛೇದ, ಗಡಿಪಾರು, ಆನೆತುಳಿತ, ಆಸ್ತಿ ಮುಟ್ಟುಗೋಲು, ಸೆರೆವಾಸ, ಮರಣದಂಡನೆ

 

IV. ಪೋಲೀಸ್ ವ್ಯವಸ್ಥೆ:- ಕೊತ್ವಾಲ, ಫ಼ೌಜುದಾರ, ಶಿಕ್ ದಾರರು ರಕ್ಷಣೆಯ ಜವಾಬ್ದಾರಿಯನ್ನೂ ಹೊಂದಿದ್ದರು;

ಕೊತ್ವಾಲನ ಕಾರ್ಯಗಳು-  ಅಳತೆ-ತೂಕ ಪರಿಶೀಲನೆ, ಕಳ್ಳತನ ಪತ್ತೆ, ಖೋಟಾ ನಾಣ್ಯ ಪತ್ತೆ, ವಿದೇಶಿಯರಿಗೆ ಸೌಲಭ್ಯ, ಮೃತರ ಆಸ್ತಿ ಮುಟ್ಟುಗೋಲು, ಸತ್ತ ಪ್ರಾಣಿಗಳ ದಹನ ಇತ್ಯಾದಿ ಕಾರ್ಯಗಳು

ಹೆದ್ದಾರಿಗಳು ಸುರಕ್ಷಿತ; ಶೇರ್ಶಹಾನ ಸ್ಥಾನಿಕ ಜವಾಬ್ದಾರಿ ಪದ್ಧತಿ & ಅಧಿಕಾರಿಗಳ ವರ್ಗಾವಣೆ ಮುಂದುವರಿಕೆ; ಕಠಿಣ ಶಿಕ್ಷೆಗಳ ಕಾರಣ ಅಪರಾಧಗಳ ಪ್ರಮಾಣ ಕಡಿಮೆ

 

V. ಭೂಕಂದಾಯ ಸುಧಾರಣೆ

ಗಮನಾರ್ಹ ಸುಧಾರಣೆಗಳು;

ಮೊಗಲ್ ಕಂದಾಯ ಪದ್ಧತಿಯ ಅಸ್ಥಿಭಾರಕ

ಮುಜ಼ಾಫರ್ಖಾನ್

ಮುನೀಂ ಖಾನ್

ರಾಜಾ ತೋದರಮಲ್ಲ

ಅಬ್ದುಲ್  ಮಜ಼ದ್ ಖಾನ್ ರಂಥಹ ಶ್ರೇಷ್ಠ ಕಂದಾಯಾಧಿಕಾರಿಗಳ ಮೂಲಕ;

ಜಹಗೀರು ರದ್ದು – ೧೫೭೫ ರಲ್ಲಿ;

ಕಂದಾಯ ವಸೂಲಿಗೆ ಸಾಮ್ರಾಜ್ಯದ ವಿಭಜನೆ

೧೮೨ ಸರ್ಕಾರ್‌ಗಳಾಗಿ ವಿಭಜನೆ

ಸರ್ಕಾರ್‌ಗಳನ್ನು ಪರಗಣಗಳಾಗಿ ವಿಭಾಗ

ಪರಗಣಗಳನ್ನು ಮತ್ತೆ ಮಹಲ್‌ಗಳಾಗಿ

ಮಹಲ್‌ಗಳನ್ನು ಮತ್ತೆ ಭಿಗಾಗಳಾಗಿ

೩೬೦೦ ಚದರ ಗಜಗಳಿಗೆ ಒಂದು ಭಿಗಾ

ಒಂದು ಭಿಗಾ ಇಂದಿನ ಅರ್ಧ ಎಕರೆಗೆ ಸಮ

ಅಮೀಲ್, ಅಮಲ್ ಗುಜಾರ್& ಕರೋರಿ ಎಂಬ ಕಂದಾಯ ಅಧಿಕಾರಿಗಳ ನೇಮಕ

 

ಜಫ಼್ತ್ ಅಥವಾ ದಹಸಾಲ್ ಪದ್ಧತಿ:- ತೋದರಮಲ್: ೧೫೮೨ ರಲ್ಲಿ ನೇಮಕ:

ಭೂಕಂದಾಯ ನಿಗದಿ ಮಾಡಲು ಭೂಮಿಯ ಅಳತೆ ಮಾಡುವ ಪದ್ಧತಿ;

ಬಿಹಾರ, ಕಾಶ್ಮೀರ, ಅಲಹಾಬಾದ್, ಲಾಹೋರ್, ದಿಲ್ಲಿ, ಆಗ್ರಾ, ಔಧ್, ಮುಲ್ತಾನ, ಮಾಳವ & ಗುಜರಾತ್ ಗಳಲ್ಲಿ ಜಾರಿ

 

ಲಕ್ಷಣಗಳು:-

1.       ಭೂಮಾಪನ: ಘಟಕ ಎಂದು ಪರಿಗಣನೆ: ಭಿಗಾ = ೩೬೦೦ ಚದರ ಗಜ: ಅರ್ಧ ಎಕರೆಗೆ ಸಮ: ಹಗ್ಗದ ಬದಲು ಕಬ್ಬಿಣದ ಬಳೆಗಳಿಂದ ಬಂಧಿಸಿದ  ಬಿದಿರು ಕಡ್ಡಿಯ ಬಳಕೆ:  ಗಜ್ ಇ ಸಿಕಂದರಿ ಬದಲು ಗಜ್ ಇ ಇಲಾಹಿ ಬಳಕೆ ಭೂದಾಖಲೆಗಳ ನಿರ್ವಹಣೆ

2.       ಭೂ ವರ್ಗೀಕರಣ

3.       :- ಫಲವತ್ತತೆಗೆ ಅನುಗುಣವಾಗಿ ೪ ವಿಭಾಗಗಳು

A.      ಪೋಲಜ಼್: ಪ್ರತಿವರ್ಷ ಉಳುಮೆ

B.      ಪರೌತಿ – ಫಲವತ್ತತೆ ಮರಳಿ ಪಡೆಯಲು ಬೀಳು ಬಿಟ್ಟ ಭೂಮಿ

C.      ಚಚಾರ್೩-೪ ವರ್ಷಗಳ ಕಾಲ ಬೀಳು ಬಿಟ?ಟ ಭೂಮಿ

D.      ಬಂಜರು: ೫ ಅಥವಾ ಅದಕ್ಕೂ ಹೆಚ್ಚು ಕಾಲ ಬೀಳು ಬಿಟ್ಟ ಭೂಮಿ

ಪೋಲಜ಼್ & ಪರೌತಿ ಜಮೀನುಗಳನ್ನು ಪುನಃ ಉತ್ತಮ, ಮಧ್ಯಮ & ಕನಿಷ್ಠ ಎಂದು ವರ್ಗೀಕರಣ

ಕಂದಾಯ ನಿಗದಿ:- ಹಿಂದಿನ ಉತ್ಪನ್ನ ಆಧಾರಿತ ವಾರ್ಷಿಕ ಕಂದಾಯ ನಿಗದಿ ಬದಲು ೧೦ ವರ್ಷಗಳ ಸರಾಸರಿ ಉತ್ಪನ್ನ ಆಧರಿಸಿ ಕಂದಾಯ ನಿಗದಿ:

ಮೊದಲೆರಡು ವರ್ಗದ ಭೂಮಿಗಳಿಗೆ ೧/೩ ರಷ್ಟು ಕಂದಾಯ ನಿಗದಿ

ಚಚಾರ್ವರ್ಗಕ್ಕೆ ೧/೧೫ ರಷ್ಟು ನಿಗದಿ

ಬಂಜರು ಭೂಮಿಗೆ ೧/೨೬ ರಷ್ಟು ನಿಗದಿ

ಧನ ಅಥವಾ ಧಾನ್ಯದ ರೂಪದಲ್ಲಿ ವಸೂಲಿ

ಬಂದೋಬಸ್ತ್ ಪದ್ಧತಿ:- ರೈತರ ಹಿತ ಕಾಯಲು ಅಧಿಕಾರಿಗಳ ನೇಮಕ: ಸಾಲ ಸೌಲಭ್ಯ-ಸುಲಭ ಕಂತುಗಳಲ್ಲಿ ಮರುಪಾವತಿ: ವಿಕೋಪಗಳ ಸಮಯದಲ್ಲಿ ಕಂದಾಯ ರಿಯಾಯಿತಿ; ಉದಾರ ತೆರಿಗೆ ನಿಗದಿ; ರೈತರ ಕುಂದು-ಕೊರತೆಗಳ ನಿವಾರಣೆಗೆ ಆದೇಶ: ಫಸಲು ಹೆಚ್ಚಿದರೂ ಕಂದಾಯ ಏರಿಕೆ ಇಲ್ಲ: ಭ್ರಷ್ಟಾಚಾರದ ಮೇಲೆ ನಿಗಾ: ರೈತರ ಈ ಪುರೋಗಾಮಿ ನೀತಿಯನ್ನು ಬಂದೋಬಸ್ತ್ ಎನ್ನಲಾಗಿದೆ.

೫ ರೈತವಾರಿ ಪದ್ಧತಿ:-

ಮಧ್ಯವರ್ತಿಗಳ ಹಾವಳಿ ಇಲ್ಲ

ಪಟ್ಟಾ & ಕಾಬೂಲಿಯಾತ್ ಜಾರಿ

ರೈತರಿಗೆ ಭೂಮಾಲಿಕತ್ವ

ಕಂದಾಯ ಕಟ್ಟದಿದ್ದರೂ ಒಡೆತನ ನಷ್ಟ ಇಲ್ಲ

ದನ-ಕರು, ಉಪ್ಪು, ವೃತ್ತಿ ತೆರಿಗೆಗಳು ಇರಲಿಲ್ಲ

“ರೈತರ ಸುಖ-ಸಮೃದ್ಧಿ ಸಾಮ್ರಾಜ್ಯದ ಸಮೃದ್ಧಿ” ಎಂಬುದು ಅಕ್ಬರನ ನಂಬಿಕೆ.

V.A. Smith:- ಅಕ್ಬರನ ಕಂದಾಯ ನೀತಿ ಮೆಚ್ಚುವಂಥಾದ್ದು.

 

VI. ನಾಣ್ಯಗಳ ಸುಧಾರಣೆ

೧೫೭೭ ರಲ್ಲಿ ಸುಧಾರಣೆ ಆರಂಭ

ಕ್ವಾಜಾ ಅಬ್ದುಲ್‌ ಸಮದ್‌ ಸಿರಾಜಿಯ ನೇಮಕ

ದೆಹಲಿ ಟಂಕಸಾಲೆಗೆ

ಇಲಾಹಿ & ಮೊಹರ್(ಚಿನ್ನ),

ಜಲಾಲಿ (ಬೆಳ್ಳಿ),

ದಾಮ್ (ತಾಮ್ರ) ಎಂಬ ನಾಣ್ಯಗಳ ಜಾರಿ

ವಿನಿಮಯ ದರ ನಿಗದಿ:-

೧ ಇಲಾಹಿ = ೧೦ ಜಲಾಲಿ

೧ ಜಲಾಲಿ = ೪೦ ದಾಮ್

೧ ದಾಮ್ = ೨೫ ಜಿತಾಲ್ (ಪೈಸೆ)

ಬಾದಶಹಾನ ಹೆಸರು, ಕಾಲ & ಟಂಕಸಾಲೆಯ ಹೆಸರು

 

ಲಾಹೋರ್, ಜೋನಪುರ್, ಅಹಮದಾಬಾದ್, ತಾಂಡಾ & ಪಾಟ್ನಾಗಳಲ್ಲಿ ಟಂಕಸಾಲೆಗಳು

ಅಲ್ಲದೇ ಒಟ್ಟು ಇತರೆ ೭೬ ಟಂಕಸಾಲೆಗಳಿದ್ದವು

ಲೋಹದ ಗುಣಮಟ್ಟ, ತೂಕದ ನಿಖರತೆ ಮತ್ತು ಕಲಾತ್ಮಕತೆಯ ದೃಷ್ಟಿಯಿಂದ ಉತ್ಕೃಷ್ಟ.

V.A. Smith:- “ಅಕ್ಬರನ ನಾಣ್ಯಗಳು ಪರಿಶುದ್ಧತೆ, ಪರಿಪೂರ್ಣ ತೂಕ & ಕಲಾತ್ಮಕತೆಗೆ ಹೆಸರಾಗಿದ್ದವು. ಸಮಕಾಲೀನ ಎಲಿಜಬೆತ್  ರಾಣಿಯ ನಾಣ್ಯಗಳಿಗಿಂತ ಉತ್ಕೃಷ್ಟವಾಗಿದ್ದವು”

 

VII. ಕಲಾಪೋಷಣೆ

ಪ್ರತಿಭಾವಂತ ಹಿಂದೂ ಮುಸ್ಲೀಮರಿಗೆ ಪೋಷಣೆ

ಮುಸ್ಲೀಮರನ್ನು ಹಿಂದೂ ಕಲೆ ಸಾಹಿತ್ಯಗಳೆಡೆಗೆ ಸೆಳೆದನು

೧೭ನೆ ಶತಮಾನದ ಸಾಂಸ್ಕೃತಿಕ ಕೊಡುಗೆಯ ರೂವಾರಿ

ಪರ್ಷಿಯನ್‌ ಮತ್ತು ಹಿಂದಿ ಸಾಹಿತ್ಯದ ಸುವರ್ಣ ಯುಗ

ಭಾಷಾಂತರಗಳು

ಅಥರ್ವ ವೇದ – ಇಬ್ರಾಹಿಂ ಸರ್‌ಹಿಂದಿ

ರಾಮಾಯಣ, ಮಹಾಭಾರತ ಬದೌನಿ

ಲೀಲಾವತಿ ಫೈಜಿ

ಬಾಬರ್‌ ನಾಮಾ ಪರ್ಷಿಯಾಕ್ಕೆ

ಫೈಜಿ, ಫಜಲ್‌, ಬೀರ್‌ಬಲ್‌, ತುಳಸಿದಾಸ್‌ ಮತ್ತು ಸೂರ್‌ದಾಸ್‌

೨೪ ಸಾವಿರ ಹಸ್ತಪ್ರತಿಗಳು

ತಾನ್‌ಸೇನ್‌ ಇವನ ಆಸ್ಥಾನಿಕ

೧೦೦ ಜನ ಖ್ಯಾತ ಚಿತ್ರಕಾರರು

ಫತೇಪುರ್‌ ಸಿಕ್ರಿ ನೂತನ ರಾಜಧಾನಿ

 

ವ್ಯಕ್ತಿತ್ವ: ಅಕ್ಬರ್‌ = ಘನವಂತ.

ಹೆಸರಿಗೆ ತಕ್ಕ ವ್ಯಕ್ತಿತ್ವ.

ಆಕರ್ಷಕ ವ್ಯಕ್ತಿತ್ವ.

ಸಾಧಾರಣ ಎತ್ತರದ ದೃಢಕಾಯ.

ಮಿತಹಾರಿ.

ಮಾಂಸಹಾರ ತ್ಯಾಗ.

ತೀಕ್ಷ್ಣ ಬುದ್ಧಿ.

ಸತ್ಯಾನ್ವೇಷಕ.

ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ.

ಯಂತ್ರಗಾರಿಕೆ.

ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸುವ ಬುದ್ಧಿವಂತಿಕೆ.

ಮಹಾಮುತ್ಸದ್ದಿ.

ಇಸ್ಲಾಮಿಕ್‌ ಸಾರ್ವಭೌಮತ್ವ ನಿರಾಕರಿಸಿದ ಮೊದಲಿಗ

ಪ್ರಾಚೀನ ಭಾರತದ ರಾಜತ್ವದ  ತತ್ವ ಪಾಲನೆ

ರಾಜಕೀಯ ಏಕತೆ ಮಾತ್ರವಲ್ಲ ಸಾಂಸ್ಕೃತಿಕ ಐಕ್ಯತೆಯ ಗುರಿ. 

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources