ಅಚ್ಯುತರಾಯ ೧೫೨೯-೪೨; ಅಳಿಯ ರಾಮರಾಯ ಮತ್ತು ರಕ್ಕಸ-ತಂಗಡಿ ಕದನ
ಕೃಷ್ಣದೇವರಾಯನ ಮಲಸೋದರ. ಓಬಾಂಬಿಕೆಯ ಮಗ. ಸಂಧಿಗ್ದ ಪರಿಸ್ಥಿತಿಯಲ್ಲಿ
ಅಧಿಕಾರಕ್ಕೆ. ಅಳಿಯ ರಾಮರಾಯನ ವಿರೋಧ. ಸಾಮಂತರ ಬಂಡಾಯಗಳು. ಗೋಲ್ಕೊಂಡ ಮತ್ತು ಗಜಪತಿಗಳ ದಾಳಿಗಳು.
ರಾಯಚೂರು ಕೈಬಿಟ್ಟಿತ್ತು. ೧೫೩೫ ರಲ್ಲಿ ಮತ್ತೆ ವಶ. ತಿರುವಾಂಕೂರು ದಂಗೆ ಅಡಗಿಸಿದ.
ರಾಮರಾಯನ ನೀತಿ:
೧೫೪೩ ರಲ್ಲಿ ವಿಜಾಪುರದ ವಿರುದ್ಧ ಅಹಮದ್‌ನಗರ, ಗೋಲ್ಕೊಂಡ ಮತ್ತು ಬೀದರ್‌ಗಳ ಜೊತೆ.
೧೫೪೪ ರಲ್ಲಿ
ವಿಜಾಪುರದ ವಿರುದ್ಧ ಅಹಮದ್‌ನಗರದ ಜೊತೆಗೂಡಿ.
೧೫೫೨ ರಲ್ಲಿ
ಅಹಮದ್‌ನಗರದ ಜೊತೆಗೂಡಿ ವಿಜಾಪುರದ ವಿರುದ್ಧ – ರಾಯಚೂರು ದೊ-ಅಬ್ ವಶ.
೧೫೫೫ ರಲ್ಲಿ
ನೀತಿ ಬದಲಾವಣೆ; ವಿಜಾಪುರದ ಜೊತೆಗೂಡಿ ಅಹಮದ್‌ನಗರದ ವಿರುದ್ಧ.
೧೫೫೮-೫೯ ರಲ್ಲಿ
ಅಹಮದ್‌ನಗರ ಮತ್ತು ಗೋಲ್ಕೊಂಡಗಳ ವಿರುದ್ಧ ವಿಜಾಪುರಕ್ಕೆ ಬೆಂಬಲ.
೧೫೬೨-೬೩ ರಲ್ಲಿ
ಅಹಮದ್‌ನಗರದ ವಿರುದ್ಧ ವಿಜಾಪುರಕ್ಕೆ ಬೆಂಬಲ.
ವಿಜಯನಗರದ ವಿರುದ್ಧ
ಶಾಹಿ ವೈವಾಹಿಕ ಸಂಬಂಧಗಳು.
ಸೇನೆ: ವಿಜಯನಗರ
೭೦ ಸಾವಿರ ಅಶ್ವಪಡೆ & ೯೦ ಸಾವಿರ ಕಾಲ್ದಳ. ಜೊತೆಗೆ ಗಜ & ಫಿರಂಗಿ ಪಡೆಗಳು.
ಮೈತ್ರಿಕೂಟ:
೫೦ ಸಾವಿರ ಅಶ್ವ & ೩೦ ಸಾವಿರ ಕಾಲ್ದಳ. ಆದರೆ ಬಲಿಷ್ಠ ಫಿರಂಗಿ ಪಡೆ.
ಆರಂಭಿಕ ಮುನ್ನಡೆ
ವಿಜಯನಗರಕ್ಕೆ. ಆದರೆ, ಚಲಾಬಿ ರೂಮಿಖಾನನ ಫಿರಂಗಿ ಪಡೆಯಿಂದ ಸ್ಥಿತಿ ಬದಲಾವಣೆ.
ರಾಮರಾಯನ ಸೆರೆ
ಮತ್ತು ಕಗ್ಗೊಲೆ.
ತಿರುಮಲರಾಯ ಮತ್ತು
ವೆಂಕಟಾದ್ರಿಗಳು ಪಲಾಯನ.
ತಕ್ಷಣದ ಪರಿಣಾಮಗಳು:
ಲೂಟಿ ಮತ್ತು ರಾಜಧಾನಿಯ ಪತನ.
ಸೋಲಿನ ಕಾರಣಗಳು:
ವಿಶ್ವಾಸಘಾತಕತನ – ಸೀಜರ್ ಫೆಡ್ರಿಕ್. ವಿಜಯನಗರದ ದುರ್ಬಲ ಫಿರಂಗಿ ಮತ್ತು ಬಿಲ್ಲಾಳು ಪಡೆ. ಗಜಪಡೆಯ
ಗೊಂದಲ.
ದೀರ್ಘಕಾಲಿಕ ಪರಿಣಾಮಗಳು: ವೈಭವದ ಪತನ. ರಾಜಧಾನಿಯ ಬದಲಾವಣೆ. ತುಳುವ ಮನೆತನದ ಅಂತ್ಯ. ಮಧುರಾ, ತಂಜಾವೂರು ಮತ್ತು ಜಿಂಜಿಗಳ ಸಾಮಂತರು ಸ್ವತಂತ್ರ. ರಾಯಚೂರು ಕೈಬಿಟ್ಟಿತು. ಶಾಹಿಗಳು ಒಳಜಗಳದಲ್ಲಿ ತೊಡಗಿದರು. ಪೋರ್ಚುಗೀಸರ ಪತನದ ಆರಂಬ.
Comments
Post a Comment