ವಿಜಯನಗರ ಕಾಲದ ಸಂಗೀತ ಮತ್ತು ನೃತ್ಯಕಲೆ
ಸಂಗೀತ ಕಲೆ
ವಿಜಯನಗರದ ಅರಸರು ಕೊಟ್ಟ ಪ್ರೋತ್ಸಾಹದಿಂದಾಗಿ
ಸಂಗೀತ ಮತ್ತು ನೃತ್ಯಗಳು ಹಲವು ಬಗೆಯಲ್ಲಿ ಅಭಿವೃದ್ಧಿಹೊಂದಿದವು. ದಾಕ್ಷಿಣಾತ್ಯ
ಸಂಗೀತ ಪದ್ಧತಿಗೆ
ಕರ್ಣಾಟಕ ಸಂಗೀತ ಎಂಬ ಹೆಸರು ಚಾಳುಕ್ಯ ಸೋಮೇಶ್ವರನ
ಕಾಲದಲ್ಲಿಯೇ ಬಂದಿತೆಂದು
ಹೇಳಲಾಗಿದ್ದರೂ ಅದು ಪ್ರಚಲಿತವಾದದ್ದು ವಿಜಯನಗರ ಕಾಲದಲ್ಲಿಯೆ. ಈ ಕಾಲದಲ್ಲಿ ಲಕ್ಷ್ಯವಿಭಾಗಗಳು
ಬಹುವಾಗಿ ಅಭಿವೃದ್ಧಿ
ಹೊಂದಿದುವು. ವಿಜಯನಗರ ಸಾಮ್ರಾಜ್ಯಸ್ಥಾಪನೆಗೆ ಮೂಲಕಾರಣರೆಂದು
ಲಕ್ಷಣಗ್ರಂಥವನ್ನು ರಚಿಸಿದ್ದು
ದಾಗಿ ತಿಳಿದುಬರುತ್ತದೆ.
ಈ ಮೂಲಗ್ರಂಥ
ದೊರೆತಿಲ್ಲವಾದರೂ ತಂಜಾವೂರಿನ
ರಾಜ ರಘುನಾಥ ನಾಯಕನ ಹೆಸರಿನಲ್ಲಿ
ರಚಿತವಾದ ಗೋವಿಂದ ದೀಕ್ಷಿತನ ಸಂಗೀತಸುಧಾ
ಎಂಬ ಲಕ್ಷಣಗ್ರಂಥದಲ್ಲಿ ವಿದ್ಯಾರಣ್ಯರ
ಸಂಗೀತ ಸಾರವನ್ನು
ಅನುಸರಿಸಿ ಈ ಗ್ರಂಥವನ್ನು ರಚಿಸಿದುದಾಗಿ
ಕೃತಿಕಾರ ಹೇಳಿಕೊಂಡಿದ್ದಾನೆ. ಅದರಲ್ಲಿ ರಾಗ ಅಥವಾ ಆಲಾಪದ ಬಗೆಗೆ ವಿವರಗಳನ್ನು ಕೊಡುತ್ತ ಅವುಗಳನ್ನು ವಿದ್ಯಾರಣ್ಯರ
ಸಂಗೀತಸಾರದಲ್ಲಿಯ ರಾಗಾಧ್ಯಾಯದಿಂದ
ನೇರವಾಗಿ ಎತ್ತಿಕೊಂಡು
ದಾಗಿಯೂ 15 ಮೇಳಗಳಿಂದ
ಕೂಡಿದ ಅವರ ಮೇಳಪದ್ಧತಿಯೇ ಬಹುಪ್ರಾಚೀನವೆಂದೂ ತಿಳಿಸಿದ್ದಾನೆ.
ಇಮ್ಮಡಿ ಪ್ರೌಢದೇವರಾಯನ
ಆಸ್ಥಾನದಲ್ಲಿದ್ದ ಅಭಿನವಭರತಾಚಾರ್ಯ,
ರಾಯವಾಗ್ಗೇಯಕಾರ ಮುಂತಾದ ಬಿರುದುಗಳನ್ನು ಹೊಂದಿದ್ದ
ಕಲ್ಲಪ್ಪ ದೇಶಿಕ ಅಥವಾ ಚತುರ ಕಲ್ಲಿನಾಥ ಶಾಙ್ರ್ಗದೇವನ
ಸಂಗೀತರತ್ನಾಕರಕ್ಕೆ ಕಲಾನಿಧಿ ಎಂಬ ವಿದ್ವತ್ಪೂರ್ಣವಾದ ವ್ಯಾಖ್ಯಾನವನ್ನು
ರಚಿಸಿದ. ಅದರಲ್ಲಿ ಅಲ್ಲಿಯವರೆಗೆ ಸಂಗೀತಶಾಸ್ತ್ರದ
ಬಗೆಗೆ ಬೆಳೆದು ಬಂದಿದ್ದ ಸಾಹಿತ್ಯವನ್ನು
ಕೂಲಂಕಷವಾಗಿ ವಿಚಾರಮಾಡಿದ್ದಾನೆ. ಇದು ಸಂಗೀತ ಶಾಸ್ತ್ರದ
ವಿಕಾಸಕ್ಕೆ ಮುಂದೆ ಮಾರ್ಗದರ್ಶಕವಾಯಿತು. ಅವನ ಈ ಗ್ರಂಥ ಸಂಗೀತದ ಬಗೆಗೆ ಒಂದು ಕಿರುವಿಶ್ವಕೋಶವೆನ್ನಬಹುದು. ಅದು ಮುಂದಿನ ಲಕ್ಷಣಕಾರರ
ಮೇಲೂ ತನ್ನ ಪ್ರಭಾವ ಬೀರಿತು. ಅಲ್ಲದೆ ಕಲ್ಲಿನಾಥಮತವೆಂಬ
ಒಂದು ವಿಶಿಷ್ಟ ಸಂಪ್ರದಾಯವೇ ಪ್ರಚಲಿತವಾಯಿತು.
ಗಾಂಧರ್ವ ಗುಣಗಂಭೀರನಾಗಿದ್ದ ಪ್ರೌಢದೇವರಾಯನಿಂದ ಈತನಿಗೆ ಅಪಾರ ಪ್ರೋತ್ಸಾಹ
ದೊರೆಯಿತೆಂದು ತಿಳಿಯುತ್ತದೆ.
ಕೃಷ್ಣದೇವರಾಯ ಸಂಗೀತದಲ್ಲಿ ಕುಶಲಿಯಾಗಿದ್ದ.
ಸಂಗೀತದಲ್ಲಿ ಆತನನ್ನು ಮೀರಿಸುವವರೇ ಇರಲಿಲ್ಲವೆಂದು
ಶಾಸನವೊಂದು ತಿಳಿಸುತ್ತದೆ.
ಕಲ್ಲಿನಾಥನಿಂದೀಚೆಗೆ ಸಂಗೀತಶಾಸ್ತ್ರ
ವಿಪುಲವಾಗಿ ಬೆಳೆದುದಲ್ಲದೆ
ಸಂಗೀತ ಕಲೆಯೂ ಅಪಾರವಾಗಿ ಬೆಳೆದು ಮನೆಮನೆಯಲ್ಲಿಯೂ ಒಂದು ಆವಶ್ಯಕ ಕಲೆಯಾಗಿ ಪರಿಗಣಿಸಲ್ಪಟ್ಟಿತು.
1500-50 ಅವಧಿಯಲ್ಲಿ ಹಲವರು ಸಂಗೀತದ ಬಗೆಗೆ ಉದ್ಗ್ರಂಥ ಗಳನ್ನು ಬರೆದರು. ಈ ಕಾಲದ ಲಕ್ಷಣಗ್ರಂಥಗಳೆಂದರೆ ದೇವಣಭಟ್ಟನ
ಸಂಗೀತ ಮುಕ್ತಾವಳಿ,
ಲಕ್ಷ್ಮಣಭಟ್ಟ ಅಥವಾ ಲಕ್ಷ್ಮೀಧರ ರಚಿಸಿದ ಸಂಗೀತಸೂರ್ಯೋದಯ, ಗೋಪೇಂದ್ರ
ತಿಪ್ಪಭೂಪಾಲನ ತಾಳದೀಪಿಕೆ,
ಕಾಮದೇವಿ ಬರೆದ ಸಂಗೀತ ಮತ್ತು ನಾಟ್ಯವನ್ನು ವಿವರಿಸುವ
ಸಂಗೀತಯುಗದರ್ಪಣ ಮತ್ತು ಸಂಗೀತವಿದ್ಯಾವಿನೋದ ಮುಂತಾದುವು.
ಇದೇ ಕಾಲದಲ್ಲಿದ್ದ
ಕರ್ನಾಟಕದವನೇ ಆಗಿದ್ದ ಪುಂಡರೀಕವಿಠಲ ಉತ್ತರದ ಮುಸ್ಲಿಮ್ ದೊರೆಗಳ ಆಶ್ರಯದಲ್ಲಿದ್ದು ಸದ್ರಾಗಚಂದ್ರೋದಯ,
ರಾಗಮಂಜರಿ, ರಾಗಮಾಲಾ ಮತ್ತು ನರ್ತನ ನಿರ್ಣಯ ಎಂಬ ನಾಲ್ಕು ಶಾಸ್ತ್ರಗ್ರಂಥಗಳನ್ನು ರಚಿಸಿದ.
ಕೃಷ್ಣದೇವರಾಯನ ಅಳಿಯ ರಾಮರಾಯನಿಗಂತೂ
ಸಂಗೀತದಲ್ಲಿ ಅಪಾರ ಆಸಕ್ತಿ. ಆತನ ಇಚ್ಛೆಯ ಮೇರೆಗೆ ರಾಮಾಮಾತ್ಯ ಸ್ವರಮೇಳ ಕಲಾನಿಧಿ ಎಂಬ ಗ್ರಂಥವನ್ನು ರಚಿಸಿದ. ಈ ರಾಮಾಮಾತ್ಯ
ತಾನು ಕಲ್ಲಿನಾಥನ
ಮೊಮ್ಮಗನೆಂದು ಹೇಳಿಕೊಂಡಿದ್ದಾನೆ. ವಿಜಯನಗರದ
ಕಡೆಯ ಕಾಲದಲ್ಲಿ
ಕರ್ನಾಟಕದಿಂದ ತಂಜಾವೂರಿಗೆ
ಹೋಗಿ ಅಲ್ಲಿ ರಘುನಾಥಭೂಪಾಲನ ಮಂತ್ರಿಯಾಗಿದ್ದ
ಗೋವಿಂದ ದೀಕ್ಷಿತನ
ಕೃತಿ ಸಂಗೀತಸುಧಾ
ಮತ್ತು ಅವನ ಮಗ ವೆಂಕಟಮಖಿಯ
ಚತುರ್ದಂಡಿ ಪ್ರಕಾಶಿಕಾ
ಸಂಗೀತಶಾಸ್ತ್ರದಲ್ಲಿ ಮೈಲುಗಲ್ಲುಗಳಾಗಿವೆ.
ವಿಜಯನಗರದ ಕಾಲದಲ್ಲಿ ಸಂಗೀತ ಸಾಮಾಜಿಕ, ಧಾರ್ಮಿಕ, ತಾತ್ತ್ವಿಕ ರಂಗಗಳಲ್ಲಿ
ಜನಮನವನ್ನು ಉನ್ನತಮಟ್ಟಕ್ಕೊಯ್ಯುವ ಸಾಧನ ವಾಯಿತು. ಆಸ್ಥಾನದಲ್ಲಿ
ಪ್ರೌಢಾವಸ್ಥೆ ಪಡೆದ ಸಂಗೀತ, ಆಸ್ಥಾನದ ಹೊರಗೂ ಭಕ್ತಿಪಂಥದ
ಸಾಧುಸಂತರ ಮೂಲಕ ಹೊಸದಿಕ್ಕುಗಳನ್ನು ಹಿಡಿದು ಬೆಳೆಯಿತು. ಸಾಮಾನ್ಯ ಜನತೆಯನ್ನು ಸಂಗೀತಮಾಧ್ಯಮದಿಂದ ಭಕ್ತಿಮಾ ರ್ಗಕ್ಕೊಯ್ಯುವ ಈ ಹೊಸ ಪಂಥ ದಾಸಪಂಥ ಎನ್ನಿಸಿ ಕೊಂಡಿತು. ಈ ಪಂಥ ಶ್ರೀಪಾದರಾಜರು,
ನರಹರಿತೀರ್ಥರು ಮತ್ತು ವ್ಯಾಸರಾಯರಿಂದ ಪ್ರಚಾರಕ್ಕೆ
ಬಂದಿತು. ವ್ಯಾಸರಾಯರ
ನೇತೃತ್ವದಲ್ಲಿ ಅವರ ಹಲವಾರು ಶಿಷ್ಯರು ಅಸಂಖ್ಯಾತ ಕೃತಿಗಳನ್ನು
ರಚಿಸಿ ಜನತೆಯಲ್ಲಿ
ಹರಡಿದರು; ಸಂಗೀತಕಲೆಗೆ
ಒಂದು ಜೀವಂತಸ್ವರೂಪ
ವನ್ನು ಕೊಟ್ಟರು. ಇವರಲ್ಲಿ ಪುರಂದರದಾಸರು
ಮತ್ತು ಕನಕದಾಸರು
ಪ್ರಮುಖರು. ಪುರಂದರದಾಸರು
ಈಗ ಪ್ರಚಾರದಲ್ಲಿರುವ
ಸಂಗೀತಕಲೆಗೆ ಆದ್ಯಪ್ರವರ್ತಕರಾಗಿ ಕರ್ಣಾಟಕ ಸಂಗೀತಪಿತಾಮಹರೆನ್ನಿಸಿಕೊಂಡಿದ್ದಾರೆ. ಇವರು ಲಕ್ಷಾವಧಿ ಕೀರ್ತನೆಗಳನ್ನು
ರಚಿಸಿದ್ದರೆನ್ನಲಾಗಿದೆ. ಅನೇಕ ಜನಪದ ಮಟ್ಟುಗಳಿಗೆ
ಶಾಸ್ತ್ರೀಯವಾದ ಸಂಗೀತ ರಾಗಗಳ ಸ್ವರೂಪ ಕೊಟ್ಟುದೂ ಸಾಮಾನ್ಯ ಜನತೆ ಸುಲಭವಾಗಿ
ಗ್ರಹಿಸಬಲ್ಲಂತೆ ಸಾಹಿತ್ಯವಿದ್ದುದೂ ಮತ್ತು ಭಕ್ತಿಮಾರ್ಗದ ಮೂಲಕ ಭಗವತಾರಾಧನೆ ಯೆಂಬ ಸಂದೇಶಕ್ಕೆ ವಾಹಕವಾದದ್ದೂ
ಕೀರ್ತನೆಗಳು ಜನಪ್ರಿಯವಾಗಲು
ಕಾರಣವಾದುವು. ಶಿವಶರಣರಲ್ಲಿ
ನಿಜಗುಣಶಿವಯೋಗಿ ಪ್ರಮುಖ. ಈತನ ವಿವೇಕಚಿಂತಾಮಣಿಯಲ್ಲಿ ಸಂಗೀತಕಲೆಯನ್ನು
ಕುರಿತ ಒಂದು ಭಾಗವಿದೆ. ಶ್ರುತಿ, ಸ್ವರ, ಅಲಂಕಾರ, ರಾಗ ಮತ್ತು ವಾದ್ಯಗಳನ್ನು ಇವನು ವಿವರಿಸಿದ್ದಾನೆ. ತ್ರಿಪದಿ ಸಾಂಗತ್ಯ ಮುಂತಾದ ಛಂದಸ್ಸಿನಲ್ಲಿ ಗಾನಯೋಗ್ಯ
ಕೃತಿಗಳನ್ನು ಕೈವಲ್ಯಪದ್ಧತಿಯ
ಹಾಡುಗಳು ಎಂಬ ಹೆಸರಿನಲ್ಲಿ ಈತನು ರಚಿಸಿದ್ದಾನೆ. ವಿಜಯನಗರ ಕಾಲದ ಕಡೆಯ ದಿನಗಳಲ್ಲಿದ್ದ ರತ್ನಾಕರವರ್ಣಿ
ತನ್ನ ಭರತೇಶ ವೈಭವದಲ್ಲಿ ಸಂಗೀತ ಮತ್ತು ನೃತ್ಯಗಳ ವಿಷಯವಾಗಿ ಅಲ್ಲಲ್ಲಿ
ತಿಳಿಸುವ ಚಿತ್ರವತ್ತಾದ
ವರ್ಣನೆಗಳು ಸ್ವಾರಸ್ಯಕರವೂ
ಕುತೂಹಲ ಕರವೂ ಆಗಿವೆ. ಭರತನ ಆಸ್ಥಾನದ ಸಂಗೀತಮೇಳಗಳನ್ನು
ವಿವರಿಸುತ್ತ ನಾನಾ ರಾಗಭೇದಗಳನ್ನೂ ಗಾಯಕದೋಷಗಳನ್ನೂ
ತಿಳಿಸಿರುತ್ತಾನೆ. ಧ್ವನಿ, ಲಯ, ಮೇಳ, ಜತಿ, ಜಾತಿ, ಕಟ್ಟಣಿ, ಗಮಕ, ಆಲಾಪಗಳನ್ನು ಹೆಸರಿಸಿ ವಿವರಿಸಿರುವುದಲ್ಲದೆ ವೀಣೆ, ಚೆಂಗು, ಉಪಾಂಗ, ರಿಂಚೆಯ, ಚಿನುಚಿಂಪೆ,
ತುಡುಮು, ದಂಡಿಗೆ, ಸ್ವರಮಂಡಲ, ಕಿನ್ನರಿ ಮುಂತಾದ ಹಲವು ವಾದ್ಯಗಳನ್ನೂ ಹೆಸರಿಸಿದ್ದಾನೆ.
ನೃತ್ಯಕಲೆ
ನೃತ್ಯದ ಬಗೆಗೆ ಹೇಳುವುದಾದರೆ
ವಿಜಯನಗರದ ಆಸ್ಥಾನದಲ್ಲಿ
ಅದಕ್ಕೆ ಅತಿ ಹೆಚ್ಚಿನ ಮನ್ನಣೆ ದೊರೆತಿತ್ತು. ಅಂತಃಪುರ ಸ್ತ್ರೀಯರು ನಿತ್ಯವೂ ನೃತ್ಯವನ್ನು ಅಭ್ಯಾಸಮಾಡುತ್ತಿದ್ದುದನ್ನು ಡೊಮಿಂಗೊ ಪೇಯಿಸ್ ವರ್ಣಿಸಿದ್ದಾನೆ.
ಕೃಷ್ಣದೇವರಾಯನ ಅರಮನೆಯಲ್ಲಿ
ನೃತ್ಯಸಭಾಗೃಹ ವೊಂದಿತ್ತು.
ವಿಸ್ತಾರವಾದ ಆ ಸಭಾಗೃಹದಲ್ಲಿ ಅವುಗಳ ಕಂಬಗಳ ಹಾಗೂ ಗೋಡೆಗಳ ಮೇಲೆಲ್ಲ ನಾಟ್ಯಭಂಗಿಗಳನ್ನು ಚಿತ್ರಿಸಿದ್ದು
ಅವು ಒಂದೊಂದೂ ನಾಟ್ಯದ ಅಂತಃಸ್ಥಿತಿಯನ್ನು ಸೂಚಿಸುವಂತಿದ್ದು
ನಾಟ್ಯ ಕಲಿಯುವವರಿಗೆ
ಮುಕ್ತಾಯದ ಹಂತದಲ್ಲಿ
ಹೇಗೆ ನಿಲ್ಲಿಸಬೇಕೆಂಬುದರ ಕಲ್ಪನೆಯನ್ನು
ಮಾಡಿಕೊಡುತ್ತಿದ್ದುವೆಂದೂ ನರ್ತಕಿಯರು
ತಮ್ಮ ದೇಹ ಸೌಷ್ಠವವನ್ನು ಕಾಪಾಡಿಕೊಳ್ಳಲು
ಮೈಚಾಚಿ ಕೈಕಾಲು ಸಡಿಲಿಸಿಕೊಳ್ಳುವ ಬಗೆಯನ್ನು
ಕೂಡ ಮತ್ತೊಂದೆಡೆ
ತೋರಿಸಿಕೊಡಲಾಗುತ್ತಿತ್ತೆಂದೂ ಪೇಯಿಸ್ ತಿಳಿಸಿದ್ದಾನೆ. ಆದರೆ ಈಗ ಆ ನಾಟ್ಯಮಂದಿರವಾಗಲಿ ನೃತ್ಯಭಂಗಿಗಳ
ಚಿತ್ರ, ಶಿಲ್ಪಗಳಾಗಲಿ
ಉಳಿದುಬಂದಿಲ್ಲ.
ದೇವಾಲಯಗಳಲ್ಲಿ ದೇವರ ಪೂಜಾಸಮಯದಲ್ಲಿ,
ಉತ್ಸವದ ಕಾಲಗಳಲ್ಲಿ
ನೃತ್ಯಸೇವೆ ಒಂದು ಅಗತ್ಯವಾದ ಅಂಗವಾಗಿ ಈ ಕಾಲದಲ್ಲಿ
ಬೆಳೆದು ಬಂದಿತ್ತು.
ಅದಕ್ಕಾಗಿ ವಿಶಾಲವಾದ
ನೃತ್ಯಮಂಟಪಗಳ ನಿರ್ಮಾಣ ವಾಗಿತ್ತು. ಇಂಥ ನಾಟ್ಯ ಸೇವೆಗಾಗಿಯೇ
ದೇವದಾಸಿಯರಿರುತ್ತಿದ್ದರು. ಇವರಲ್ಲದೆ
ವೇಶ್ಯೆಯರೂ ನಾಟ್ಯಕಲೆಯಲ್ಲಿ
ಪರಿಣತಿಯನ್ನು ಪಡೆದು ದೇವಾಲಯಗಳಲ್ಲಿ ವಿಶೇಷ ಉತ್ಸವಾದಿಗಳಲ್ಲಿ ತಮ್ಮ ನೃತ್ಯವೈಖರಿಯನ್ನು ಪ್ರದರ್ಶಿಸುತ್ತಿದ್ದರು. ಇದಲ್ಲದೆ ಸಮಾಜದ ಗಣ್ಯ ವರ್ಗದ, ಶ್ರೀಮಂತ ವರ್ಗದ ಮನೋರಂಜನೆಗಾಗಿಯೂ
ಇವರು ನಾಟ್ಯಪ್ರದರ್ಶನಗಳನ್ನು ನಡೆಸುತ್ತಿದ್ದರು.
ನಾಟ್ಯಕಲೆಯಲ್ಲಿ ನಿಷ್ಣಾತರಾಗಿದ್ದ
ವೇಶ್ಯೆಯರಿಗೆ ಸಮಾಜದಲ್ಲಿ
ಗೌರವದ ಸ್ಥಾನವಿತ್ತು.
ರಾಜರಂತೆ ಅವರ ಸಾಮಂತರು, ಅಧಿಕಾರಿಗಳು,
ಇತರ ಪ್ರತಿಷ್ಠಿತರು
ಇವರಿಗೆ ಹೇರಳವಾಗಿ
ಪ್ರೋತ್ಸಾಹ ಕೊಟ್ಟಿದ್ದರಿಂದ
ಈ ಕಲೆಗಳು ಅವರಲ್ಲಿ ಮನೆಮಾಡಿಕೊಂಡವು.
ಇಂಥ ವೇಶ್ಯಾವಾಟಿಕೆಗಳ
ವರ್ಣನೆಗಳು ಆ ಕಾಲದ ಕಾವ್ಯಗಳಲ್ಲಿ
ಕಂಡು ಬರುತ್ತವೆ.
ಆದರೆ ಆ ಕಾಲದ ನಾಟ್ಯದ ಪೂರ್ಣಸ್ವರೂಪ, ಅವರು ಪಡೆದಿದ್ದ ಪರಿಣತಿಯ ರೀತಿಯನ್ನು ಈಗ ಅರಿಯುವುದು ಅಸಾಧ್ಯವಾದರೂ
ದೇವಾಲಯಗಳ ಗೋಡೆ, ಗೋಪುರಗಳ ಮೇಲಿರುವ ನೃತ್ಯಭಂಗಿಗಳು ಆ ಕಾಲದ ನಾಟ್ಯವಿದ್ಯೆಯ
ತಜ್ಞತೆಯನ್ನು ಸೂಚಿಸುತ್ತವೆ.
ಚಿದಂಬರದ ಗೋಪುರದ ಮೇಲೆ ವಿಜಯನಗರ ಕಾಲದ ಇಂಥ ನೂರೆಂಟು ನೃತ್ಯಭಂಗಿಗಳನ್ನು ನೋಡಬಹುದು.
ಇವುಗಳೊಂದಿಗೆ ಜನಪದ ನೃತ್ಯ, ಜನಪದ ಮೇಳಗಳ ಅಭಿವೃದ್ಧಿಯೂ
ಸಾಕಷ್ಟು ಆಗಿರಬೇಕು.
ಮಹಾನವಮಿ ದಿಬ್ಬ, ಹಜಾರ ರಾಮಸ್ವಾಮಿ
ದೇವಾಲಯ ಮೊದಲಾದವುಗಳ
ಮೇಲಿರುವ ಕೋಲಾಟ, ಯಕ್ಷಗಾನ ಮೇಳ ಮುಂತಾದ ಸುಂದರ ಶಿಲ್ಪಗಳಿಂದ ಇದನ್ನರಿಯಬಹುದು.
*****
Comments
Post a Comment