ಕರ್ನಾಟಕದ ಇತಿಹಾಸ ಪುನರ್‌ರಚನೆಯ ಸಾಹಿತ್ಯಾಧಾರಗಳು:-

   ಯಾವುದೇ ದೇಶ ಅಥವಾ ರಾಜಮನೆತನಗಳ ಇತಿಹಾಸ ಪುನರ್‌ರಚನೆಗೆ ವಿವಿದ ಆಧಾರಗಳು ಲಭ್ಯವಿರುವಂತೆ ಕರ್ನಾಟಕದ ಇತಿಹಾಸ ಪುನರ್‌ರಚನೆಗೂ ಪುರಾತತ್ವ ಆಧಾರಗಳ ಜೊತೆಗೆ ಲಿಖಿತ ಅಥವಾ ಸಾಹಿತ್ಯಾಧಾರಗಳು ಸಹಾ ಲಭ್ಯವಿವೆ. ಕರ್ನಾಟಕದಲ್ಲಿ ಪ್ರಾಕೃತ, ಸಂಸ್ಕೃತ, ಕನ್ನಡ ಭಾಷೆಗಳು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದ್ದರೂ ಸಾಹಿತ್ಯ ಕೃತಿಗಳು ಲಭಿಸುವುದು ಸುಮಾರು ಆರನೇ ಶತಮಾನದ ನಂತರವೇ. ಇಲ್ಲಿನ ಸಾಹಿತ್ಯಾಧಾರಗಳನ್ನು ಭಾರತದ ಇತಿಹಾಸ ಪುನರ್‌ರಚನೆಗೆ ಲಭ್ಯವಿರುವ ಸಾಹಿತ್ಯಾಧಾರಗಳಂತೆ ವರ್ಗೀಕರಣ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ವೈದಿಕ ಸಾಹಿತ್ಯ ಅಲಭ್ಯ. ಲಭ್ಯವಿರುವ ಕೃತಿಗಳನ್ನು ದೇಶೀಯ ಸಾಹಿತ್ಯಾಧಾರಗಳು (ಧಾರ್ಮಿಕ, ಐತಿಹಾಸಿಕ ಮತ್ತು ವೈಜ್ಞಾನಿಕ) ಮತ್ತು ವಿದೇಶಿಯ ಸಾಹಿತ್ಯಾಧಾರಗಳೆಂದು ವಿಭಜಿಸಿಕೊಳ್ಳಬಹುದು. ಆದರೆ ಕೆಲವು ಜೈನ ಮತ್ತು ಬೌದ್ಧ ದಾಖಲೆಗಳಲ್ಲಿ ಕರ್ನಾಟಕ ಕುರಿತ ಮಾಹಿತಿಗಳು ಲಭ್ಯವಿವೆ. ಉದಾ: ಭದ್ರಬಾಹುವಿನ ಬರವಣಿಗೆಗಳಲ್ಲಿ ಶ್ರವಣಬೆಳಗೊಳದ ಮಾಹಿತಿ ಮತ್ತು ಹಾಲನ ಗಾಥಾಸಪ್ತಶತಿಯಲ್ಲಿ ಕರ್ನಾಟಕದ ವಿವರಗಳು ಲಭ್ಯ. ಅಂತೆಯೇ, ವಿದೇಶೀಯರ ಬರವಣಿಗೆಗಳೂ ಸಹಾ ಕರ್ನಾಟಕದ ಇತಿಹಾಸ ಪುನರ್‌ರಚನೆಗೆ ಲಭ್ಯವಿವೆ. ಕೆಳಗೆ ಕರ್ನಾಟಕದ ಇತಿಹಾಸ ಪುನರ್‌ರಚನೆಗೆ ಲಭ್ಯವಿರುವ ಕೆಲವು ಕೃತಿ, ಕರ್ತೃ ಮತ್ತು ಒದಗಿಸುವ ಮಾಹಿತಿಗಳ ವಿವರಗಳನ್ನು ನೀಡಲಾಗಿದೆ.

ಕನ್ನಡ ಕೃತಿಗಳು

  1. ಕವಿರಾಜಮಾರ್ಗ – ಶ್ರೀವಿಜಯ – ಪ್ರಾಚೀನ ಕರ್ನಾಟಕದ ವಿಸ್ತಾರ
  2. ವಿಕ್ರಮಾರ್ಜುನ ವಿಜಯ – ಪಂಪ - ರಾಷ್ಟ್ರಕೂಟ ಅರಸರ ಮಾಹಿತಿ
  3. ಗದಾಯುದ್ಧ – ರನ್ನ – ಕಲ್ಯಾಣದ ಚಾಲುಕ್ಯರ ಮಹಿತಿ
  4. ಚಾವುಂಡರಾಯಪುರಾಣ – ಚಾವುಂಡರಾಯ – ಗಂಗರ ಇತಿಹಾಸ
  5. ಕುಮಾರರಾಮ ಚರಿತೆ – ನಂಜುಂಡ ಕವಿ – ಕಂಪಿಲೆಯ ಅರಸರ ಮಾಹಿತಿ

ಕೃಷ್ಣದೇವರಾಯನ ದಿನಚರಿ – ಕರ್ತೃ ಅಲಭ್ಯ – ದೈನಂದಿನ ಚಟುವಟಿಕೆಗಳ ವಿವರಗಳು

  1. ಕೆಳದಿನೃಪ ವಿಜಯಂ – ಲಿಂಗಣ್ಣ ಕವಿ – ಕೆಳದಿ ಮತ್ತು ವಿಜಯನಗರ ಕುರಿತ ವಿವರಗಳು
  2. ಕಂಠೀರವ ನರಸರಾಜ ವಿಜಯಂ – ಗೋವಿಂದ ವೈದ್ಯ – ರಣಧೀರ ಕಂಠೀರವ ನರಸರಾಜ ಒಡೆಯರ ಮಾಹಿತಿ
  3. ವಚನ ಸಾಹಿತ್ಯ – ವಚನಕಾರರು – ಅಂದಿನ ಕಾಲದ ಸಾಮಾಜಿಕ, ಆರ್ತಿಕ, ಧಾರ್ಮಿಕ ಮತ್ತು ರಾಜಕೀಯ ಸ್ಥಿತಿ-ಗತಿಗಳ ವಿವರಗಳನ್ನು ಒದಗಿಸುತ್ತವೆ.

ಸಂಸ್ಕೃತ ಭಾಷೆಯ ಕೃತಿಗಳು

  1. ವಿಕ್ರಮಾಂಕದೇವ ಚರಿತಂ – ಬಿಲ್ಹಣ – ಕಲ್ಯಾಣದ ಚಾಲುಕ್ಯರ ಆರನೆ ವಿಕ್ರಮಾದಿತ್ಯನ ಸಾಧನೆಗಳು
  2. ಮಾನಸೋಲ್ಲಾಸ ಅಥವಾ ಅಭಿಲಾಷಿತಾರ್ತ ಚಿಂತಾಮಣಿ – ಮೂರನೇ ಸೋಮೇಶ್ವರ (ಕಲ್ಯಾಣದ ಚಾಲುಕ್ಯರ ಅರಸ) – ವಿವಿದ ವಿಷಯಗಳ ವಿಶ್ವಕೋಶದಂತಿದೆ
  3. ಚತುರ್ವರ್ಗ ಚಿಂತಾಮಣಿ – ಹೇಮಾದ್ರಿ – ಸೇವುಣರ ಇತಿಹಾಸ
  4. ಸೂಕ್ತಿಮುಕ್ತಾವಳಿ – ಜಲ್ಹಣ ಸೇವುಣರ ಐದನೆಯ ಬಿಲ್ಲಮನ ಸಾಧನೆಗಳು
  5. ಗದ್ಯಕರ್ಣಾಮೃತ – ಎರಡನೆ ವಿದ್ಯಾಚಕ್ರವರ್ತಿ – ಹೊಯ್ಸಳರ ಇಮ್ಮಡಿ ನರಸಿಂಹನು ಪಾಂಡ್ಯರ ಜೊತೆ ನಡೆಸಿದ ಯುದ್ಧಗಳ ವಿವರಗಳು
  6. ಮಧುರಾವಿಜಯಂ ಅಥವಾ ವೀರಕಂಪಣರಾಯ ಚರಿತಂ – ಗಂಗಾಂಬಿಕೆ – ವಿಜಯನಗರದ ರಾಜಕುಮಾರ ಕಂಪಣರಾಯನು ಮಧುರೆಯ ಸುಲ್ತಾನರ ಮೇಲೆ ಸಾಧಿಸಿದ ವಿಜಯದ ಮಾಹಿತಿ
  7. ಸಾಳುವಾಭ್ಯುದಯಂ – ಒಂದನೆ ರಾಜನಾಥ ಡಿಂಡಿಮ – ಸಾಳುವ ಮನೆತನದ ಉದಯದ ಮಾಹಿತಿ
  8. ಅಚ್ಯುತಾಭ್ಯುದಯಂ – ಮೂರನೆ ರಾಜನಾಥ ಡಿಂಡಿಮ – ಅಚ್ಯುತರಾಯನ ಸಾದನೆಗಳು
  9. ವರದಾಂಬಿಕಾ ಪರಿಣಯಂ – ತಿರುಮಲಾಂಬಿಕೆ – ಅಚ್ಯುತರಾಯ-ವರದಾಂಬಿಕೆಯರ ವಿವಾಹದ ಮಾಹಿತಿ
  10. ರಾಜಕಲಾ ನಿರ್ಣಯ, ಶಂಕರವಿಜಯಂ, ಸರ್ವದರ್ಶನಸಂಗ್ರಹ – ವಿದ್ಯಾರಣ್ಯರು – ವಿಜಯನಗರ ಇತಿಹಾಸದ ವಿವರಗಳು

 

ತೆಲುಗು ಕೃತಿಗಳು

  1. ವರಾಹಪುರಾಣಮು – ಸಿಂಗಯ್ಯ ಮತ್ತು ಮಲ್ಲಯ್ಯ – ವಿಜಯನಗರದ ಇತಿಹಾಸ
  2. ರಾಯವಾಚಕಮು – ವಿಶ್ವನಾಥ ನಾಯಿನಿ – ಕೃಷ್ಣದೇವರಾಯನ ಸಾಧನೆಗಳು
  3. ಅಮುಕ್ತ ಮಾಲ್ಯದ ಅಥವಾ ಗೋದಾದೇವಿ ಪ್ರಕರಣ – ಕೃಷ್ಣದೇವರಾಯ – ರಾಜ್ಯನೀತಿಯ ವಿವರಗಳು
  4. ಮನುಚರಿತಮು – ಅಲ್ಲಸಾನಿ ಪೆದ್ದಣ್ಣ – ಕೃಷ್ಣದೇವರಾಯನ ಕಾಲದ ಮಾಹಿತಿ
  5. ಪಾರಿಜಾತಪಹರಣಮು – ನಂದಿ ತಿಮ್ಮಣ್ಣ – ಕೃಷ್ಣದೇವರಾಯನ ಒರಿಸ್ಸಾದ ಮೇಲಿನ ವಿಜಯಗಳು
  6. ಕೃಷ್ಣದೇವರಾಜವಿಜಯಮು – ಕುಮಾರ ದೂರ್ಜಟಿ – ಕೃಷ್ಣದೇವರಾಯನ ದಿಗ್ವಿಜಯಗಳು

 

ವೈಜ್ಞಾನಿಕ ಕೃತಿಗಳು:

  1. ಗಂಗರ ದುರ್ವೀನಿತನ ಗಜಶಾಸ್ತ್ರ
  2. ಗಂಗರ ಶಿವಮಾರನ ಗಜಾಷ್ಟಕ
  3. ಕೀರ್ತಿವರ್ಮನ ಗೋವೈದ್ಯ
  4. ಉಗ್ರಾದಿತ್ಯ ಪಂಡಿತನ ಕಲ್ಯಾಣಕಾರಕ
  5. ಚಾವುಂಡರಾಯನ ಲೋಕೋಪಕಾರ

 

ಮುಸ್ಲಿಂ ದಾಖಲೆಗಳು

   ದೇಶೀಯವಾಗಿ ರಚಿತವಾದ ಕೆಲವು ಮುಸ್ಲಿಂ ದಾಖಲೆಗಳನ್ನು ದೇಶೀಯ ಆಧಾರಗಳ ವರ್ಗಕ್ಕೆ ಸೇರಿಸಬಹುದು. ಅಂತಹುಗಳಲ್ಲಿ ಪ್ರಮುಖವಾದವುಗಳೆಂದರೆ,

  1. ತಾರೀಖ್‌ ಎ ಫೆರಿಶ್ತಾ ಅಥವಾ ಗುಲ್ಶನ್‌ ಎ ಇಬ್ರಾಹಿಮಿ – ಫೆರಿಶ್ತಾ – ಆದಿಲ್‌ ಶಾಹಿಗಳ ಮಾಹಿತಿ
  2. ಫತು-ಉಸ್-ಸಲಾತಿನ್‌ - ಇಸಾಮಿ – ಬಹಮನಿ ಸುಲ್ತಾನರ ಮಾಹಿತಿ
  3. ಬುಹ್ರಾನ್‌ ಎ ಮಾಸೀರ್‌ - ತಬಾ ತಬಾ - ಬಹಮನಿ ಸುಲ್ತಾನರ ಮಾಹಿತಿ
  4. ಪರ್ಷಿಯಾ ಭಾಷೆಯಲ್ಲಿರುವ ಸಿರಾಜಿಯ ತಜ್‌ಕಿರತ್‌ ಉಲ್‌ ಮುಲ್ಕ್‌, ಹುಸೇನ್‌ ಚೌಕಿಯ ಜಾಫರ್‌ನಾಮಾ ನಿಜಾಮ್‌ಶಾಹಿ, ಎರಡನೇ ಅಲಿ ಆದಿಲ್‌ ಶಾಹಿಯ ಬಗ್ಗೆ ತಿಳಿಸುವ ಅಲಿನಾಮಾ, ಮುಲ್ಲಾ ನುಸ್ರುದ್ದಿಯ ತಾರೀಖ್‌ ಎ ಇಸ್ಕಂದರಿ ಹಾಗೂ ಜುಬೇರಿ ಬರೆದಿರುವ ಬಸಾತಿನ್-‌ಉಸ್-ಸಲಾತಿನ್‌  ಎಂಬ ಕೃತಿಗಳು ಆದಿಲ್‌ ಶಾಹಿಗಳ ಬಗೆಗಿನ ಆಧಾರ ಕೃತಿಗಳಾಗಿವೆ.
  5. ಹೈದರ್‌ ಎ ನಿಶಾನಿ – ಕಿರ್ಮಾನಿ – ಹೈದರಾಲಿಯ ಬಗೆಗಿನ ಮಾಹಿತಿ.

 

ವಿದೇಶೀಯ ಬರವಣಿಗೆಗಳು: ಇವುಗಳನ್ನು ಯೂರೋಪ್ ಮತ್ತು ಮುಸ್ಲೀಂ ದಾಖಲೆಗಳೆಂದು ಅಧ್ಯಯನ ಮಾಡಬಹುದು.

  1. ಪೆರಿಪ್ಲಸ್‌ ಆಫ್‌ ದಿ ಎರಿತ್ರಿಯನ್‌ ಸೀ – ಅನಾಮಧೇಯ (ಲ್ಯಾಟೀನ್) – ಪ್ರಾಚೀನ ಕರ್ನಾಟಕದ ಬಂದರುಗಳ ಮತ್ತು ವ್ಯಾಪಾರ ಕೇಂದ್ರಗಳ ಮಾಹಿತಿ
  2. ಭೂವಿವರಣೆ ಅಥವಾ The Geography – ಟಾಲೆಮಿ (ಗ್ರೀಕ್) – ಕರ್ನಾಟಕದ ವಿದೇಶಿ ವ್ಯಾಪಾರದ ಕುರಿತ ಮಾಹಿತಿ
  3. ಸಿ-ಯೂ-ಕಿ - ಹು-ಎನ್-ತ್ಸಾಂಗ್‌ ನರ್ಮದಾ ನದಿ ಕಾಳಗ, ಬಾದಾಮಿ ಮತ್ತು ಬನವಾಸಿಯ ವಿವರಗಳು
  4. ತಬರಿಯ ಬರವಣಿಗೆಗಳು – ಇಮ್ಮಡಿ ಪುಲಕೇಶಿ ಮತ್ತು ಇಮ್ಮಡಿ ಖುಸ್ರೋನ ರಾಯಭಾರ ಸಂಬಂಧಗಳ ವಿವರಗಳು
  5. ಸುಲೇಮಾನ್‌ ಬರವಣಿಗೆಗಳು (ಸಾ.ಶ.ವ. 851) – ರಾಷ್ಟ್ರಕೂಟರ ಅಮೋಘವರ್ಷನ ಆಳ್ವಿಕೆಯ ಮಾಹಿತಿ
  6. ರಹೆಲ್ಲಾ – ಇಬ್ನ ಬತೂತ (ಸಾ.ಶ.ವ. 1342-43) – ಹೊಯ್ಸಳ ಮೂರನೆ ಬಲ್ಲಾಳನ ಅಂತ್ಯದ ವಿವರಗಳು
  7. ನಿಕೊಲೊ ಕೋಂಟಿ – ಇಟಲಿ – ಒಂದನೇ ದೇವರಾಯನ ಆಸ್ಥಾನಕ್ಕೆ ಭೇಟಿ
  8. ಅಬ್ದುಲ್‌ ರಜಾಕ್‌ - (ಸಾ.ಶ.ವ. 1342-43) – ಇಮ್ಮಡಿ ದೇವರಾಯನ ಆಸ್ಥಾನ
  9. ಬಾರ್ಬೋಸಾ – ಪೋರ್ಚುಗೀಸ್‌ ಪ್ರವಾಸಿ – (ಸಾ.ಶ.ವ. 1500-11) – ಕೃಷ್ಣದೇವರಾಯನ ಆಸ್ಥಾನ
  10. ಡೊಮಿಂಗೊ ಪಯಸ್‌ - ಪೋರ್ಚುಗೀಸ್‌ ಪ್ರವಾಸಿ – (ಸಾ.ಶ.ವ. 1520-22) – ಕೃಷ್ಣದೇವರಾಯನ ಆಸ್ಥಾನ
  11. ಫರ್ನಾವೊ ನ್ಯೂನೀಜ್‌ ಪೋರ್ಚುಗೀಸ್‌ ಪ್ರವಾಸಿ – (ಸಾ.ಶ.ವ. 1537) – ಅಚ್ಯುತರಾಯನ ಆಸ್ಥಾನ
  12. ಸಿಜರ್‌ ಪ್ರೆಡ್ರಿಕ್‌ - ಇಟಲಿ – (ಸಾ.ಶ.ವ. 1567) ರಕ್ಕಸ-ತಂಗಡಿ ಯುದ್ಧಾನಂತರ ಹಂಪೆಯ ವರ್ಣನೆ
  13. ನಿಕೆಟಿನ್‌ - ರಷ್ಯಾ – ಬಹಮನಿಗಳ ಆಸ್ಥಾನದ ಭೇಟಿ
  14. ಇಂಗ್ಲೆಂಡಿನ ರಾಲ್ಫಿಚ್‌, ಪ್ರಾನ್ಸಿನ ಬರ್ನೆಯಿ ಮತ್ತು ಟ್ರವೆರ್ನಿಯರ್‌ ಇನ್ನಿತರ ವಿದೇಶಿಯರು
  15. ಪಿಟ್ರೊ ಡೆಲ್ಲಾ ವೆಲ್ಲಿ – ಇಟಲಿ ಹಾಗೂ ಇಂಗ್ಲೆಂಡಿನ ಪೀಟರ್‌ ಮಂಡಿ – ಕೆಳದಿ ಅರಸರ ಆಸ್ಥಾನ

   ಡಾ. ಹೆಚ್.‌ ಎಲ್.‌ ನಾಗೇಗೌಡರು (ಪ್ರವಾಸಿ ಕಂಡ ಇಂಡಿಯಾ) ಎಂಬ ಕೃತಿಯಲ್ಲಿ ವಿವಿದ ವಿದೇಶಿ ಪ್ರವಾಸಿಗರ ಬರವಣಿಗೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

**********

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources