ಕರ್ನಾಟಕದಲ್ಲಿ ಆರಂಭಿಕ ಹೋರಾಟಗಳು, ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ
ಸೂಚನೆ:- ಇಲ್ಲಿ ನೀಡಿರುವ ವಿವರಗಳನ್ನು ವಿವಿಧ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ, ಸಂಕಲಿಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಲ್ಲಿ ನೀಡಲಾಗಿದೆ.
ಕಿತ್ತೂರು ರಾಣಿ ಚೆನ್ನಮ್ಮ
ಜನನ:- ೨೩ ಅಕ್ಟೋಬರ್
೧೭೭೮, ಕಾಕತಿ, ಬೆಳಗಾವಿ
ಮರಣ:- 2
February 1829 (aged 50), ಬೈಲಹೊಂಗಲ,
ಬೆಳಗಾವಿ
ಕಿತ್ತೂರು
ರಾಣಿ ಚೆನ್ನಮ್ಮ ಕಿತ್ತೂರಿನ
ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ.
ತನ್ನ ಪುಟ್ಟ ರಾಜ್ಯದ ಸ್ವಾತಂತ್ರ
ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ
ವಿರುದ್ಧ ಹೋರಾಡಿದ್ದಳು.
ಬಾಲ್ಯ ಜೀವನ ಮತ್ತು
ವಿವಾಹ:- ಕಿತ್ತೂರು ಚೆನ್ನಮ್ಮ
ಹುಟ್ಟಿದ್ದು 23 ಅಕ್ಟೋಬರ್ ೧೭೭೮ರಲ್ಲಿ. ಬೆಳಗಾವಿಯಿಂದ
ಉತ್ತರಕ್ಕೆ ಸುಮಾರು ೬ ಕಿ.ಮಿ. ದೂರದಲ್ಲಿರುವ ಕಾಕತಿ
ಅವಳ ಹುಟ್ಟೂರು. ತಂದೆ
ಕಾಕತಿಯ ದೇಸಾಯಿ ಧೂಳಪ್ಪಗೌಡರು. ಚನ್ನಮ್ಮ
ಎಳೆ ವಯಸ್ಸಿನಲ್ಲಿಯೆ ಕುದುರೆ
ಸವಾರಿ ಹಾಗು ಬಿಲ್ಲುವಿದ್ಯೆಗಳನ್ನು ಕರಗತ
ಮಾಡಿಕೊಂಡಿದ್ದಳು. ಅವಳು ದೇಸಾಯಿ ಮನೆತನದ
ರಾಜಾ ಮಲ್ಲಸರ್ಜ ಅವರನ್ನು 15 ನೇ
ವಯಸ್ಸಿನಲ್ಲಿ ವಿವಾಹವಾದಳು. ಸ್ವಂತ ಮಕ್ಕಳಿಲ್ಲದ ರಾಣಿ
ಚೆನ್ನಮ್ಮ ರಾಜನಿಷ್ಠರಾದ ಗುರುಸಿದ್ದಪ್ಪ, ಹಿಮ್ಮತಸಿಂಗ, ಸಂಗೊಳ್ಳಿ ರಾಯಣ್ಣ, ನರಸಿಂಗರಾವ,
ಗುರುಪುತ್ರ ಮತ್ತು ಇತರ ಬೆಂಬಲಿಗರ
ನೆರವಿನಿಂದ ತನ್ನ ದತ್ತಕ ಮೊಮ್ಮಗನಿಗೆ
ಪಟ್ಟ ಕಟ್ಟಿದಳು.
ಕಿತ್ತೂರಿನ
ಇತಿಹಾಸ:- ಕಿತ್ತೂರಿನ
ಇತಿಹಾಸವು ಕ್ರಿ.ಶ. ೧೫೮೬ರಿಂದಲೇ
ಆರಂಭವಾಗುತ್ತದೆ. ಮೂಲತಃ ಮಲೆನಾಡಿನ ಬೇಡ
ಮನೆತನದಿಂದ ಬಂದ ಮಲ್ಲ ಹೆಸರಿನ
ಸೋದರರಿಬ್ಬರು ಬಿಜಾಪುರದ ಆದಿಲಶಾಹಿ ಸೈನ್ಯದಲ್ಲಿ
ಸೇರಿಕೊಂಡಿದ್ದರು. ಈ ಸೋದರರಲ್ಲಿ
ಹಿರಿಯ ಮಲ್ಲನಿಗೆ “ ಶಮಶೇರ ಜಂಗಬಹಾದ್ದೂರ " ಎನ್ನುವ
ಬಿರುದನ್ನು ಹಾಗೂ ಹುಬ್ಬಳ್ಳಿ ವಿಭಾಗದ
ಸರದೇಶಮುಖಿಯನ್ನು ನೀಡಲಾಗಿತ್ತು. ವಿಜಾಪುರದ ಪತನದ ನಂತರ
ಕಿತ್ತೂರು ದೇಸಾಯಿಗಳು ತಮ್ಮ ರಕ್ಷಣೆಗಾಗಿ
ಅನೇಕ ಕಾಳಗಗಳನ್ನು ಎದುರಿಸ ಬೇಕಾಯಿತು. ಬ್ರಿಟಿಷರು
ಭಾರತದಲ್ಲಿ ಕಾಲೂರುವ ಸಮಯದಲ್ಲಿ ಇಲ್ಲಿಯ
ರಾಜಕೀಯ ಪರಿಸ್ಥಿತಿ ಬಹಳ ವಿಲಕ್ಷಣವಾಗಿತ್ತು.
ಉತ್ತರ ಹಿಂದುಸ್ಥಾನದಲ್ಲಿ ಮೊಗಲ ಬಾದಶಾಹಿ ನಿರ್ಬಲವಾಗಿತ್ತು.
ದಕ್ಷಿಣದಲ್ಲಿ ಸ್ವರಾಜ್ಯದ ವಿಸ್ತರಣೆಗಾಗಿ ಹೋರಾಡುತ್ತಿದ್ದ
ಪೇಶವಾಯಿ, ಆಕ್ರಮಣಕಾರಿ ಧೋರಣೆಯ ಹೈದರಾಬಾದಿನ ನಿಜಾಮಶಾಹಿ
ಹಾಗು ಮೈಸೂರಿನ ಹೈದರ್ ಅಲಿ
ಇವರೆಲ್ಲರ ನಡುವೆ ತಮ್ಮ ಉಳಿವಿಗಾಗಿ
ಹೋರಾಡುತ್ತಿದ್ದ ಚಿಕ್ಕ ಪುಟ್ಟ ಪಾಳೆಗಾರರು.
ಇಂತಹ ರಾಜಕೀಯ ಪರಿಸ್ಥಿತಿ ಧೂರ್ತ,
ಕ್ರೂರ ಧೋರಣೆಯ ಬ್ರಿಟಿಷ ಈಸ್ಟ
ಇಂಡಿಯಾ ಕಂಪನಿಗೆ ಸುವರ್ಣಾವಕಾಶವನ್ನು ಒದಗಿಸಿತ್ತು.
ಇಂತಹ ಸಮಯದಲ್ಲಿ ಮಲ್ಲಸರ್ಜನ ದೊರೆಯನ್ನು
ಟಿಪ್ಪು ಸುಲ್ತಾನನು ಸೆರೆ ಹಿಡಿದು
ಕಪಾಲದುರ್ಗದಲ್ಲಿ ಸೆರೆಯಿಟ್ಟಿದ್ದನು. ಉಪಾಯದಿಂದ ತಪ್ಪಿಸಿಕೊಂಡ ದೊರೆ
೧೮೦೩ರಲ್ಲಿ ವೆಲ್ಲೆಸ್ಲಿಗೆ ನೆರವು ನೀಡಿ ಕಿತ್ತೂರನ್ನು
ಭದ್ರ ಗೊಳಿಸಿದ್ದನು. ೧೮೦೯ರಲ್ಲಿ ಪೇಶವೆಯವರಿಗೆ ರೂ.೧,೭೫,೦೦೦ ಕೊಟ್ಟು, ಅವರ
ಸ್ಥಾನಿಕ ಕಾವಲು ಸೈನ್ಯದ ಖರ್ಚನ್ನು
ನೀಡಿ ಅವರಿಂದ ಸನದು ಪಡೆದಿದ್ದನು.
ಆದರೆ ಪೇಶ್ವೆಯವರು ವಿಶ್ವಾಸಘಾತ ಮಾಡಿ ಮಲ್ಲಸರ್ಜನನ್ನು ಸೆರೆ
ಹಿಡಿದು ೩ ವರ್ಷ
ಕಾಲ ಪುಣೆಯಲ್ಲಿಟ್ಟರು. ೧೮೧೬ರಲ್ಲಿ
ಬಿಡುಗಡೆ ಹೊಂದಿ ಮರಳುವಾಗ ದಾರಿಯಲ್ಲಿಯೆ
ಮಲ್ಲಸರ್ಜನು ಕೊನೆಯುಸಿರನ್ನೆಳೆದ. ಅವನ ಮಗ ಶಿವಲಿಂಗ
ರುದ್ರಸರ್ಜನು ಮರಾಠ ಹಾಗು ಟಿಪ್ಪು
ಸುಲ್ತಾನ ಇವರ ಕಿರಿಕಿರಿ ತಪ್ಪಿಸಲು
ಬ್ರಿಟಿಷರ ಜೊತೆಗೆ ಸ್ನೇಹದಿಂದಿದ್ದ. ಆದರೆ
ಅದೆಂತಹ ಸ್ನೇಹವೆಂದರೆ! ಪ್ರತಿ ವರ್ಷ ರೂ.
೧,೭೦,೦೦೦
ಕಾಣಿಕೆ ಕೊಡುವ ಕರಾರಿನ ಮೇಲೆ
ಬ್ರಿಟಿಷರು ಈ ದೊರೆಗೆ
ಸನ್ನದು ನೀಡಿದರು. ಶಿವಲಿಂಗರುದ್ರ ಸರ್ಜನು
೧೧ ಸೆಪ್ಟೆಂಬರ ೧೮೨೪
ರಂದು ವಾರಸುದಾರರಿಲ್ಲದೆ ತೀರಿಕೊಂಡನು. ಈ ಎಳೆವಯಸ್ಸಿನ
ದೊರೆಯ ಹೆಂಡತಿ ವೀರಮ್ಮನಿಗೆ ಆಗ
೧೧ ವರ್ಷ ವಯಸ್ಸು!
ಮರಣದ ಪೂರ್ವದಲ್ಲಿ ಶಿವಲಿಂಗರುದ್ರಸರ್ಜ ಮಾಸ್ತಮರಡಿ ಗೌಡರ ಪುತ್ರ
ಶಿವಲಿಂಗಪ್ಪನನ್ನು ದತ್ತಕ ತೆಗೆದುಕೊಂಡ. ಈ
ದತ್ತಕವನ್ನು ಧಾರವಾಡದ ಕಲೆಕ್ಟರ ಥ್ಯಾಕರೆ
ತಿರಸ್ಕರಿಸುತ್ತಾನೆ. ೧೩ ಸೆಪ್ಟೆಂಬರ
೧೮೨೪ ರಂದು ಥ್ಯಾಕರೆ ಸ್ವತಃ
ಕಿತ್ತೂರಿಗೆ ಬಂದು ಕಂಪನಿ ಸರ್ಕಾರದಿಂದ
ಮುಂದಿನ ಆದೇಶ ಬರುವವರೆಗೂ ತಾತ್ಕಾಲಿಕವಾಗಿ
ಮಲ್ಲಪ್ಪಶೆಟ್ಟಿ ಹಾಗು ಹಾವೇರಿ ವೆಂಕಟರಾವ
ಇವರನ್ನು ಸಂಸ್ಥಾನದ ವ್ಯವಹಾರ ನಿರ್ವಹಿಸಲು
ನೇಮಕ ಮಾಡುತ್ತಾನೆ ಹಾಗು ಕಿತ್ತೂರಿನ ಭಂಡಾರಕ್ಕೆ
ಬೀಗ ಮುದ್ರೆ ಹಾಕುತ್ತಾನೆ.
ಆದರೆ ಇದನ್ನು ಕೆಚ್ಚೆದೆಯಿಂದ ಎದುರಿಸಿದವಳು
ಮೃತ ಶಿವಲಿಂಗರುದ್ರಸರ್ಜನ ಮಲತಾಯಿ
ಚೆನ್ನಮ್ಮ!
ಕಿತ್ತೂರಿನ
ಮೇಲೆ ಬ್ರಿಟಿಷರ ಆಕ್ರಮಣ/ಇತರ
ರಾಜಕೀಯ ಬೆಳವಣಿಗೆ:- ಕಿತ್ತೂರಿನ
ಮೇಲೆ ಬ್ರಿಟಿಷರು ಮಾಡಬಹುದಾದ ಆಕ್ರಮಣವನ್ನು
ತಪ್ಪಿಸಲು ಚೆನ್ನಮ್ಮ ಥ್ಯಾಕರೆಗೆ, ಮನ್ರೋನಿಗೆ
ಹಾಗು ಚಾಪ್ಲಿನ್ನನಿಗೂ ಸಹ ಸಂಧಾನಕ್ಕಾಗಿ
ಪತ್ರ ಬರೆಯುತ್ತಾಳೆ. ಮುಂದಾಲೋಚನೆಯಿಂದ ಕೊಲ್ಲಾಪುರ ಮೊದಲಾದ ನೆರೆಯ
ಸಂಸ್ಥಾನಗಳ ಸಹಾಯ ಕೋರಿ ಪತ್ರವ್ಯವಹಾರ
ಮಾಡುತ್ತಾಳೆ. ೨೧ ಅಕ್ಟೋಬರ್
೧೮೨೪ರಂದು ಥ್ಯಾಕರೆ ಕಿತ್ತೂರಿಗೆ ಬಂದನು.
ಮೂರನೆಯ ದಿನ ಅಂದರೆ ಅಕ್ಟೋಬರ
೨೩ರಂದು ಕೋಟೆಯ ಮೇಲೆ ತೋಪು
ಹಾರಿಸಲು ತನ್ನ ಸೈನ್ಯಕ್ಕೆ ಅಪ್ಪಣೆ
ಕೊಟ್ಟ. ಥಟ್ಟನೆ ತೆಗೆದ ಕೋಟೆಯ
ಬಾಗಿಲಿನಿಂದ ಸಾವಿರಾರು ಜನ ಕಿತ್ತೂರು
ವೀರರು ಸರದಾರ ಗುರುಸಿದ್ದಪ್ಪನವರ ಮುಂದಾಳುತನದಲ್ಲಿ
ಥ್ಯಾಕರೆಯ ಸೈನ್ಯದ ಮೆಲೆ ಮುಗಿಬಿದ್ದರು.
ಚೆನ್ನಮ್ಮ ರಾಣಿಯ ಅಂಗರಕ್ಷಕ ಅಮಟೂರು
ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾದ.
ಸ್ಟೀವನ್ಸನ್ ಹಾಗು ಈಲಿಯಟ್ ಸೆರೆಯಾಳಾದರು.
ಈ ವಿಜಯೋತ್ಸವವನ್ನು ಕರ್ನಾಟಕ
ಸರ್ಕಾರ ಕಿತ್ತೂರು ಉತ್ಸವ ಅನ್ನುವ
ಹೆಸರಿನಲ್ಲಿ ಪ್ರತಿ ವರ್ಷವೂ ಆಚರಣೆ ಮಾಡುತ್ತದೆ.
ದೇಶದ್ರೋಹಿಗಳಾದ
ಕನ್ನೂರು ವೀರಪ್ಪ, ಸರದಾರ ಮಲ್ಲಪ್ಪ
ಅವರೂ ಬಲಿಯಾದರು. ಚೆನ್ನಮ್ಮನಿಗೆ ಹಾಗು
ಬ್ರಿಟಿಷರಿಗೆ ಮತ್ತೆ ಪತ್ರವ್ಯವಹಾರ ನಡೆಯುತ್ತದೆ.
೧೮೨೪ ಡಿಸೆಂಬರ್ ೨ ರಂದು
ಸ್ಟೀವನ್ಸನ್ ಹಾಗು ಈಲಿಯಟ್ ಇವರ
ಬಿಡುಗಡೆಯಾಗುತ್ತದೆ. ಆದರೆ ಮಾತಿಗೆ ತಪ್ಪಿದ
ಬ್ರಿಟಿಷರು ಡಿಸೆಂಬರ್ ೩ ರಂದು
ಅಪಾರ ಸೈನ್ಯದೊಂದಿಗೆ ಮುತ್ತಿಗೆ ಹಾಕಿ ಕೋಟೆಯನ್ನು
ಒಡೆಯಲು ಪ್ರಾರಂಭಿಸುತ್ತಾರೆ. ಡಿಸೆಂಬರ್ ೪ ರಂದು
ಸರದಾರ ಗುರುಸಿದ್ದಪ್ಪ ಸೆರೆಯಾಳಾಗುತ್ತಾನೆ. ಡಿಸೆಂಬರ್ ೫ ರಂದು
ಚೆನ್ನಮ್ಮ ತನ್ನ ಸೊಸೆಯರಾದ ವೀರಮ್ಮ
ಮತ್ತು ಜಾನಕಿಬಾಯಿಯರ ಜೊತೆಗೆ ಕೈದಿಯಾಗುತ್ತಾಳೆ. ಡಿಸೆಂಬರ್೧೨
ರಂದು ಚೆನ್ನಮ್ಮ ಹಾಗು ವೀರಮ್ಮರನ್ನು
ಬೈಲಹೊಂಗಲಕ್ಕೆ ಒಯ್ಯಲಾಗುತ್ತದೆ. ಅಲ್ಲಿ ೪ ವರ್ಷಗಳವರೆಗೆ
ಸೆರೆಯಾಳಾಗಿ ಉಳಿದ ಚೆನ್ನಮ್ಮ ೧೮೨೯
ಫೆಬ್ರುವರಿ ೨ ರಂದು
ನಿಧನಹೊಂದುತ್ತಾಳೆ. ಮುಂದೆ ಮೇ ೨೦ರಂದು
ಜಾನಕಿಬಾಯಿ ನಿಧನಳಾಗುತ್ತಾಳೆ. ಆದರೆ ದೇಶ ನಿಷ್ಠರ
ಹೋರಾಟ ನಿಂತಿರುವುದಿಲ್ಲ. ಕಾಳಗದಲ್ಲಿ ಸೆರೆ ಸಿಕ್ಕು
ಆ ಮೇಲೆ ಬಿಡುಗಡೆಯಾದ
ಸಂಗೊಳ್ಳಿ ರಾಯಣ್ಣ ೧೮೨೯ರಲ್ಲಿ ಹೋರಾಟ
ಮುಂದುವರೆಸುತ್ತಾನೆ. ಇವನ ಹೋರಾಟಕ್ಕೆ ನೆರವು
ನೀಡುತ್ತಿರುವ ಸಂಶಯದ ಮೇಲೆ ವೀರಮ್ಮನನ್ನು
ಬ್ರಿಟಿಷರು ಮೊದಲು ಕುಸುಗಲ್ಲಿಗೆ, ಆ
ಬಳಿಕ ಬೇರೊಂದು ಸ್ಥಳಕ್ಕೆ ಒಯ್ಯುತ್ತಾರೆ.
ಇತ್ತ ರಾಯಣ್ಣನ ಹೋರಾಟ ಮುಂದುವರೆದಿರುತ್ತದೆ.
ವಿಶ್ವಾಸದ್ರೋಹಿಗಳು ಇವನ ಸಂಗಡಿಗರಂತೆ ನಟಿಸುತ್ತ
೧೮೩೦ ಫೆಬ್ರುವರಿಯಲ್ಲಿ ಇವನನ್ನು ಬ್ರಿಟಿಷರಿಗೆ ಹಿಡಿದುಕೊಡುತ್ತಾರೆ.
ಕಂಪನಿ ಸರಕಾರ ಈ ಕಾರ್ಯಕ್ಕಾಗಿ
ಲಿಂಗನಗೌಡ ಮತ್ತು ವೆಂಕನಗೌಡರಿಗೆ ೩೦೦
ರೂಪಾಯಿ ಬಹುಮಾನ ಕೊಡುತ್ತದೆ. ಮೇ
೧೮೩೦ ರಲ್ಲಿ ದತ್ತುಪುತ್ರ ಶಿವಲಿಂಗಪ್ಪ
ಹಾಗು ಇತರ ೪೦೦ ಜನರು
ಬ್ರಿಟಿಷರಿಗೆ ಸ್ವಯಂ ಸೆರೆಯಾಗುತ್ತಾರೆ. ಜುಲೈ
೧೮೩೦ ರಂದು ವೀರಮ್ಮ ಸೆರೆಮನೆಯಲ್ಲಿ
ಮರಣಹೊಂದುತ್ತಾಳೆ. ವಿಷ ತೆಗೆದುಕೊಂಡು ಮರಣ
ಹೊಂದಿದಳೆಂದೂ, ಇಂಗ್ಲಿಷರೆ ವಿಷ ಹಾಕಿ
ಕೊಂದರೆಂದೂ ಪ್ರತೀತಿ. ೧೮೩೧ ಜನೆವರಿ
೨೬ ರಂದು ಸಂಗೊಳ್ಳಿ
ರಾಯಣ್ಣನನ್ನು ನಂದಗಡದಲ್ಲಿ ಗಲ್ಲಿಗೇರಿಸಲಾಗುತ್ತದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಜನನ:- ಆಗಸ್ಟ್ ೧೫, ೧೭೯೬
ಜನ್ಮ ಸ್ಥಳ:- ಸಂಗೊಳ್ಳಿ, ಕಿತ್ತೂರು ಸಾಮ್ರಾಜ್ಯ, (ಇಂದಿನ ಬೆಳಗಾವಿ
ಮರಣ:- ಜನವರಿ ೨೬, ೧೮೩೧
ಮರಣ ಸ್ಥಳ:- ನಂದಗಡ
ತಂದೆ:- ಭರಮಪ್ಪ ರೋಗಣ್ಣವರ
ತಾಯಿ:- ಕೆಂಚವ್ವ ರೋಗಣ್ಣವರ
ಸಂಗೊಳ್ಳಿ ರಾಯಣ್ಣ (15 ಆಗಸ್ಟ್ 1796 - 26 ಜನವರಿ 1831) ಕರ್ನಾಟಕ, ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು - ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರು. ಕಿತ್ತೂರು ಚೆನ್ನಮ್ಮಳ ಬಲಗೈ ಬಂಟರಾಗಿದ್ದರು. [೧]ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಅವರ ಸಾವಿನವರೆಗೂ ಹೋರಾಡಿದರು.
ಪರಿಚಯ/ಹಿನ್ನೆಲೆ
ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್ ೧೫ ನೆಯ ದಿನ ೧೭೯೬. ಆಗಸ್ಟ ಹದಿನೈದು ಭಾರತೀಯರಿಗೆ ಸ್ವಾತಂತ್ರ್ಯ ದೊರಕಿದ ದಿನವಾಗಿದೆ. ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ (ಸಂಪಗಾವಿ)ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ತಂದೆ ಭರಮಪ್ಪ ತಾಯಿ ಕೆಂಚಮ್ಮಾಜಿಯ ಪುತ್ರನಾಗಿ ಜನಿಸಿದನು, ಈತನ ಸಹೋದರಿ ಮಾಯವ್ವ.
ರಾಯಣ್ಣನಿಗೆ, ವೀರ ರಾಯ , ವೀರ ಸಂಗೊಳ್ಳಿ ರಾಯಣ್ಣ, ಶೂರ ರಾಯಣ್ಣ ಧೀರ ರಾಯಣ್ಣ, ಕ್ರಾಂತಿವೀರ ರಾಯಣ್ಣ ಇತ್ಯಾದಿ ದಾಖಲೆಗಳು ಜನಮನದಾಳದಿಂದ, ಜನಪದರಿಂದ ನಾಟಕಕಾರರಿಂದ, ಇತಿಹಾಸಕಾರರಿಂದ ಹೆಸರಿಸಲ್ಪಟ್ಟಿವೆ.
ಕಿತ್ತೂರಿನಿಂದ ಕೆಲವೇ ದೂರದಲ್ಲಿರುವ ಸಂಗೊಳ್ಳಿ ಗ್ರಾಮದಲ್ಲಿ ಭರಮಪ್ಪ ಮತ್ತು ಕೆಂಚವ್ವ ದಂಪತಿಯ ಪುತ್ರನಾಗಿ ರಾಯಣ್ಣ ಜನಿಸುತ್ತಾನೆ. ಇವರದು ಪ್ರಸಿದ್ಧ ಕುಟುಂಬ. ಇವರ ತಾತ ರೋಗಪ್ಪ ವೀರಪ್ಪ ದೇಸಾಯಿ ಯುದ್ಧದಲ್ಲಿ ತೋರಿದಂತಹ ಶೌರ್ಯಕ್ಕಾಗಿ ‘‘ಸಾವಿರ ಒಂಟೆ ಸರದಾರ’’ ಎಂಬ ಬಿರುದು ನೀಡಿ ರಕ್ತಮಾನ್ಯ ಭೂಮಿಯನ್ನು ಬಳುವಳಿಯಾಗಿ ನೀಡಿದನು
ರೋಗಪ್ಪ ಆಯುರ್ವೇದ ಪಂಡಿತರಾಗಿದ್ದರು. ರಾಯಣ್ಣನ ತಂದೆ ಭರಮಣ್ಣ ಮಹಾನ್ ಸಾಹಸಿ. ಕಿತ್ತೂರ ಸಂಸ್ಥಾನದ ಜನರಿಗೆ ಕಾಟ ಕೊಡುತ್ತಿದ್ದ ಹೆಬ್ಬುಲಿಯನ್ನು ಕೊಂದ ಕೀರ್ತಿ ಇವರದ್ದು. ಈ ಸಾಹಸಕ್ಕಾಗಿ ಕಿತ್ತೂರು ಮಲ್ಲಸರ್ಜ ದೇಸಾಯಿ ನೀಡಿದ ಹೊಲವೇ ರಕ್ತಮಾನ್ಯದ ಹೊಲ. ಸಂಗೊಳ್ಳಿಯಲ್ಲಿನ ಗರಡಿ ಮನೆ ಅತ್ಯಂತ ಪ್ರಸಿದ್ಧಿಯಿರುವ ಗರಡಿ.
ರಾಯಣ್ಣನಿಗೆ ಮರಣದಂಡನೆಯಾಗಿ ಗಲ್ಲುಗಂಬಕ್ಕೇರಿದ ದಿನ ಜನವರಿ ೨೬ನೆಯ ದಿನ ೧೮೩೧; ಜನವರಿ ಇಪ್ಪತ್ತಾರು ಭಾರತೀಯರ ನಿಜವಾದ ಸ್ವಾತಂತ್ರ್ಯ ದಿನವಾಗಿದೆ ಹಾಗೂ ಗಣರಾಜ್ಯ ದಿನವೂ ಹೌದು, ಪ್ರಜಾಸತ್ತಾತ್ಮಕ ದಿನ, ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ಇವೆರಡು ದಿನಗಳು ಜನನ ಮರಣದವುಗಳು ರಾಯಣ್ಣನಿಗೆ ಮಾತ್ರವಲ್ಲ, ಭಾರತೀಯರಿಗೆ ರಾಷ್ಟ್ರೀಯ ಉತ್ಸವದ ದಿನಗಳಾಗಿವೆ. ಇಡೀ ಜೀವಮಾನ ಆಂಗ್ಲರನ್ನು ನಾಡಿನಿಂದ-ದೇಶದಿಂದ ಹೊರಹಾಕಲು ಮಾಡಿದ ಹೋರಾಟ (ಲಡಾಯಿ)ಗಳು ಸ್ಮರಣೀಯವಾಗಿವೆ.
ಜನ್ಮದಾರಭ್ಯದಿಂದ ಮೂವತ್ತೈದು ವರುಷಗಳ ಕಾಲ ಅಂದರೆ ಸ್ವರ್ಗವಾಸಿಯಾಗುವವರೆಗೆ, ತನ್ನ ಸರ್ವಸ್ವವನ್ನು ಕಿತ್ತೂರ ನಾಡಿನ ಸ್ವಾತಂತ್ಯ್ರಕ್ಕಾಗಿ ಅರ್ಪಣೆ ಮಾಡಿದವನು ಸಂಗೊಳ್ಳಿ ರಾಯಣ್ಣ. ಬ್ರಿಟಿಷರು ಸಂಗೊಳ್ಳಿ ರಾಯಣ್ಣನ ವಿಚಾರಣೆ ನಡೆಸಿ ಮರಣದಂಡನೆ ನೀಡಿದರು. ಆತನ ಜೊತೆ ಇತರ ಏಳು ಜನ ಅನುಯಾಯಿಗಳಿಗೆ ವಿಚಾರಣೆ ನಡೆಸಿ ಮರಣ ದಂಡನೆ ನೀಡಿದರು. ಆರು ಜನರಿಗೆ ಜೀವಾವಧಿ ಶಿಕ್ಷೆ ನೀಡಿ, ಸಮುದ್ರದಾಚೆಗೆ ಕಳಿಸಿದರು. ಅವರ ವಿವರ ಕೆಳಗಿನಂತಿದೆ.
ಜೀವಾವಧಿ ಶಿಕ್ಷೆಗೊಳಪಟ್ಟು ಸಮುದ್ರದಾಚೆಗೆ ಕಳಿಸಲ್ಪಟ್ಟವರು:
೧. ರುದ್ರನಾಯಕ ೫೦
೨. ಎಲ್ಲಾನಾಯಕ ೪೦
೩. ಅಪ್ಪೂಜಿ ೪೦
೪. ರಾಣಮೋಜಿಕೊಂಡ ೩೦
೫. ಕೋನೇರಿ ೪೦
೬. ನೇಮಣ್ಣ ೪೦
ಮರಣದ ನಂತರ
ಸಂಗೊಳ್ಳಿ ಗ್ರಾಮದ ಬಿಚ್ಚುಗತ್ತಿ ಚನ್ನಬಸವಣ್ಣ ಮಾರುವೇಷದಲ್ಲಿ ರಾಯಣ್ಣನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಇವನ ಸಮಾಧಿಯ ಮೇಲೆ ಆಲದ ಸಸಿ ನೆಡುವ ಮೂಲಕ ತನ್ನ ಗೆಳೆಯರಿಗೆ ಅಂತಿಮ ನಮನ ಸಲ್ಲಿಸಿದನು. ಅಂದು ನೆಟ್ಟ ಆಲದ ಸಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ನಮ್ಮ ರಾಷ್ಟ್ರೀಯ ವೃಕ್ಷವಾಗಿ ದೇಶಾಭಿಮಾನಿಗಳಿಗೆ ಸದಾಕಾಲ ಸ್ಪೂರ್ತಿಯ ಸಂಕೇತವಾಗಿ ಬೃಹದಾಕಾರವಾಗಿ ಬೆಳೆದು ಇಂದು ಪೂಜ್ಯ ಭಾವನೆಗಳಿಗೆ ಇಂಬು ನೀಡುವ ಪುಣ್ಯ ಸ್ಥಳವಾಗಿದೆ.
ರಾಯಣ್ಣನ ನಿಸ್ವಾರ್ಥ ಹೋರಾಟ, ದೇಶಪ್ರೇಮ ಯುವಜನತೆಯಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಇದ್ದರೆ ರಾಯಣ್ಣನಂತಹ ದೇಶಪ್ರೇಮಿಗಳಿರಬೇಕು ಎನ್ನುವುದು ಎಲ್ಲರ ಮಾತಾಗಿದೆ. ರಾಯಣ್ಣನ ದಂಡಿನಲ್ಲಿ ಸ್ಮರಿಸಬೇಕಾದ ಅತ್ಯಂತ ಮಹತ್ವದ ವಿಷಯವೆಂದರೆ ಒಗ್ಗಟ್ಟು ಉಂಟು ಮಾಡಿರುವ ಬಗೆಯನ್ನು ತಿಳಿಯುವುದು. ರಾಯಣ್ಣನ ಹೆಸರನ್ನು ಅಮರವಾಗಿಸಲು ಬೆಂಗಳೂರಿನ ರೈಲು ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಹೆಸರಿಡಲಾಗಿದೆ.
ಸಿಪಾಯಿ ದಂಗೆಗೂ ಮುನ್ನ ರಾಜ್ಯದಲ್ಲಿ ರೈತ ದಂಗೆ: ಕೊಪ್ಪಳದ ಬಹದ್ದೂರು ಬಂಡಿ ಕೋಟೆ ಸಾಕ್ಷಿ
ಕೊಪ್ಪಳ ಜಿಲ್ಲೆಯ ಬಹದ್ದೂರು ಬಂಡಿ
ಕೋಟೆ ನಿಜಾಮರ ಜತೆಗಿನ ಹೋರಾಟವಷ್ಟೇ
ಅಲ್ಲ, ರೈತ ಬಂಡಾಯದ ಮೂಲಕ
ನಡೆದ ಸ್ವಾತಂತ್ರ್ಯ ಹೋರಾಟಕ್ಕೂ ಸಾಕ್ಷಿಯಾಗಿ ನಿಂತಿದೆ.
ವೀರಪ್ಪ ದೇಸಾಯಿ ಎಂಬ ಹೋರಾಟಗಾರ
ಸ್ವತಂತ್ರ ಸೇನೆ ಕಟ್ಟಿಬ್ರಿಟಿಷರು ಮತ್ತು
ನಿಜಾಮರು ಇಬ್ಬರ ವಿರುದ್ಧವೂ ಹೋರಾಡಿ
ಈ ಭಾಗದಲ್ಲಿ ಸ್ವಾತಂತ್ರ್ಯದ
ಕಿಚ್ಚು ಹಚ್ಚಿದ್ದು ಇತಿಹಾಸದಲ್ಲಿ ದಾಖಲಾಗಿದೆ.
1800ರ ಅವಧಿಯಲ್ಲಿ ಬ್ರಿಟಿಷರು ಮತ್ತು
ನಿಜಾಮರ ದಬ್ಬಾಳಿಕೆಯಿಂದ ಜನ ಬೇಸತ್ತಿದ್ದರು.
ಇದನ್ನು ಅವಲೋಕನ ಮಾಡುತ್ತಿದ್ದ ಕಲಿಕೇರಿ
ಗ್ರಾಮದ ವೀರಪ್ಪ ದೇಸಾಯಿ ಅವರು
ಸ್ವಾತಂತ್ರ್ಯಕ್ಕಾಗಿ ಈ ಭಾಗದಲ್ಲಿ
ಮೊದಲ ಬಾರಿ ಕಹಳೆ ಊದಿದರು.
ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿದ್ದರೂ ದೇಸಾಯಿ ಮನೆತನದ ವೀರಪ್ಪ
ಅವರು ಸ್ವಾತಂತ್ರ್ಯಕ್ಕಾಗಿ ಸಿಡಿದು ನಿಂತರು. ರೈತರ
ಚಳವಳಿ ಸಂಘಟನೆ ಮಾಡಿದರು. ಕರವಿರೋಧಿ
ಚಳವಳಿ ಜತೆಗೆ ಸ್ವಾತಂತ್ರ್ಯಕ್ಕಾಗಿನ ಹೋರಾಟ
ಶುರು ಮಾಡಿದರು.
ಇದಕ್ಕಾಗಿ
ಸುಮಾರು 500 ಸೈನಿಕರ ಶಸ್ತ್ರಸಜ್ಜಿತ ಸೈನ್ಯ
ಕಟ್ಟಿ, ಕೊಪ್ಪಳ ಕೋಟೆ ಮತ್ತು
ಬಹದ್ದೂರು ಬಂಡಿ ಕೋಟೆಯಲ್ಲಿ ಅಳ್ವಿಕೆ
ನಡೆಸಿದರು. ಆಗ ಹೈದರಾಬಾದ್
ನಿಜಾಮರು ಮತ್ತು ಬ್ರಿಟಿಷರು ಜಂಟಿಯಾಗಿ
ವೀರಪ್ಪ ದೇಸಾಯಿ ವಿರುದ್ಧ ಯುದ್ಧ
ಸಾರಿದರು. ಅಲ್ವಸ್ವಲ್ಪ ಬಂಡಾಯಗಾರರು ಇರಬಹುದು ಎಂದು ಸಣ್ಣ
ಸೈನ್ಯದೊಂದಿಗೆ ದಾಳಿ ಮಾಡಿದ ಬ್ರಿಟಿಷರು
ಮತ್ತು ನಿಜಾಮರಿಗೆ ಸುಮಾರು 500 ಸೈನಿಕರು
ಹಾಗೂ ರೈತ ಸಮುದಾಯದ ಬೆಂಬಲದೊಂದಿಗೆ
ವೀರಪ್ಪ ಭಾರೀ ಆಘಾತ ಕೊಟ್ಟರು.
ಇದರಿಂದ ಸಿಟ್ಟಿಗೆದ್ದ ಬ್ರಿಟಿಷ್ ಅಧಿಕಾರಿಗಳು ದೊಡ್ಡ
ಪಡೆಯನ್ನೇ ಕರೆಸಿಕೊಂಡರು. ಅಶ್ವದಳವೂ ಸೇರಿ ಮದ್ದುಗುಂಡುಗಳನ್ನು
ಅಪಾರ ಪ್ರಮಾಣದಲ್ಲಿ ತರಿಸಿ, ವೀರಪ್ಪ ದೇಸಾಯಿ
ಬೆನ್ನಟ್ಟಿದರು. ವೀರಪ್ಪ ದೇಸಾಯಿ ಅವರು
ಕಲಿಕೇರಿ ಗ್ರಾಮದಲ್ಲಿ ಸಂಗ್ರಹಿಸಿಟ್ಟಿದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಂಗ್ರಹದ
ಮೇಲೆ ದಾಳಿ ಮಾಡಲು ಯೋಜನೆ
ಹಾಕಿದರು. ಅದರಂತೆ ಬ್ರಿಟಿಷರ ಒಂದು
ಪಡೆ 1819ರ ಮೇ
7ರಂದು ಗದಗ-ಡಂಬಳ ಮೂಲಕ
ಆಗಮಿಸಿ ಅಳವಂಡಿಯಲ್ಲೇ ಬಿಡಾರ ಹೂಡಿತು.
ವೀರಪ್ಪ ದೇಸಾಯಿಯನ್ನು ಸುತ್ತುವರಿದು ದಾಳಿಗೆ ಮುಂದಾಯಿತು. ಈ
ವೇಳೆ ಬ್ರಿಟಿಷರ ಜತೆಗಿನ ಕಾದಾಟದಲ್ಲಿ
ಹಿನ್ನಡೆ ಅನುಭವಿಸಿದ ವೀರಪ್ಪ ದೇಸಾಯಿ
ಅವರು ಕೊನೆಗೆ ತಪ್ಪಿಸಿಕೊಂಡು ಪರಾರಿಯಾದರು.
ನಂತರ ಅಜ್ಞಾತವಾಗುಳಿದು ಜೀವಮಾನದುದ್ದಕ್ಕೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ
ಮಾಡಿದರು ಎಂದು ಇತಿಹಾಸಕಾರರು ಹೇಳುತ್ತಾರೆ.
ಅದಾದ ಮೇಲೆ ವೀರಪ್ಪ ದೇಸಾಯಿ
ಎಲ್ಲಿ ಹೋದರು ಎನ್ನುವ ಕುರಿತು
ಸರಿಯಾದ ಮಾಹಿತಿ ಎಲ್ಲೂ ದಾಖಲಾಗಿಲ್ಲ.
ಈ ಕುರಿತು ಇನ್ನಷ್ಟುಸಂಶೋಧನೆ
ಆಗಬೇಕಿದೆ ಎನ್ನುತ್ತಾರೆ ಸ್ಥಳೀಯ ಇತಿಹಾಸಕಾರರು.
ಸಿಪಾಯಿ ದಂಗೆಗೂ ಮೊದಲೇ ಬ್ರಿಟಿಷರು
ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ಎದುರಿಸಿದ
ಮೊದಲ ಸಶಸ್ತ್ರ ದಂಗೆ ವೀರಪ್ಪ
ದೇಸಾಯಿ ಮೂಲಕ ಎದುರಿಸಿದರು ಎನ್ನುವುದು
ಅನೇಕ ಸ್ಥಳೀಯ ಇತಿಹಾಸಕಾರರ ವಾದ.
ವೀರಪ್ಪ ದೇಸಾಯಿ ಆ ಸಮಯದಲ್ಲೇ
ರೈತ ಬಂಡಾಯ ಸಾರಿದ್ದು,
ರೈತರ ಬೆಂಬಲದೊಂದಿಗೆ ಸೈನ್ಯ ಕಟ್ಟಿದ್ದು ನಿಜಾಮರು
ಕೂಡ ತಮ್ಮ ಚರಿತ್ರೆಯಲ್ಲಿ
ದಾಖಲು ಮಾಡಿದ್ದಾರೆ.
ಕರಭಾರ ಮತ್ತು ರೈತರ ಶೋಷಣೆಯನ್ನು
ಮುಂದಿಟ್ಟುಕೊಂಡು ವೀರಪ್ಪ ದೇಸಾಯಿ ಬ್ರಿಟಿಷರ
ಮತ್ತು ನಿಜಾಮರ ವಿರುದ್ಧ ಶಸ್ತ್ರಾಸ್ತ್ರ
ಹೋರಾಟ ಮಾಡಿದ ಮಹಾನ್ ನಾಯಕ
ಎನ್ನುತ್ತಾರೆ ನಿವೃತ್ತ ಇತಿಹಾಸ ಉಪನ್ಯಾಸಕ
ಎಂ.ಎಂ.ಕಂಬಾಳಿಮಠ.
ತಲುಪುವುದು
ಹೇಗೆ?
ಕೊಪ್ಪಳ ನಗರ ಕೇಂದ್ರದಿಂದ ಬಹದ್ದೂರ್
ಬಂಡಿ ಕೋಟೆ ಕೇವಲ ನಾಲ್ಕೈದು
ಕಿ.ಮೀ. ದೂರದಲ್ಲಿದೆ.
ಖಾಸಗಿ ವಾಹನದ ಮೂಲಕ ಇಲ್ಲಿಗೆ
ತಲುಪಬಹುದಾಗಿದೆ.
ಬಾಬಾಸಾಹೇಬ ಅಥವಾ ಭಾಸ್ಕರರಾವ್ ಭಾವೆ
ನರಗುಂದ ಸಂಸ್ಥಾನದ ಪ್ರಭು (1842-58)
ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಒಬ್ಬ ವೀರ. ಬಾಬಾ ಸಾಹೇಬ ಇವನ ಜನಪ್ರಿಯ ನಾಮ. ಹುಟ್ಟು ಹೆಸರು ಭಾಸ್ಕರರಾವ್ ಭಾವೆ.
ಅಧಿಕಾರಕ್ಕೆ:- ತಂದೆ ದಾದಾಜಿಯ ಆಡಳಿತ ಕಾಲದಲ್ಲಿ ಸಂಸ್ಥಾನ ಸಾಲದಲ್ಲಿ ಮುಳುಗಿಹೋಗಿತ್ತು. ಬಾಬಾ ಸಾಹೇಬ ಪಟ್ಟವೇರಿದ ತರುಣದಲ್ಲೇ ಆಡಳಿತವನ್ನು ಪುನರ್ವ್ಯವಸ್ಥೆಗೊಳಿಸಿ ದಕ್ಷತೆಯಿಂದ ಆಳತೊಡಗಿದ. ಸಂಸ್ಥಾನದ ಸಾಲದ ಹೊರೆ ಕಡಿಮೆಮಾಡಿ ಪ್ರಜೆಗಳ ಪ್ರೀತ್ಯಾದರ ಗಳಿಸಿದ.
ದತ್ತು ಸ್ವೀಕಾರಕ್ಕೆ ಅನುಮತಿ ನೀಡದ ಬ್ರಿಟಿಷರು:- ದುರದೃಷ್ಟವಶಾತ್ ಬಾಬಾಸಾಹೇಬನಿಗಿದ್ದ ಒಬ್ಬನೇ ಮಗ ತೀರಿಕೊಂಡು ಸಂಸ್ಥಾನ ಉತ್ತರಾಧಿಕಾರಿಯಿಲ್ಲದೆ ಹೋಗುವಂಥ ಪರಿಸ್ಥಿತಿಯೊದಗಿತು. ಆಗ ಬಾಬಾ ಸಾಹೇಬ ಕಂಪನಿ ಸರ್ಕಾರಕ್ಕೆ ಪತ್ರ ಬರೆದು (1846) ದತ್ತು ಸ್ವೀಕಾರಕ್ಕೆ ಅನುಮತಿ ಕೋರಿದ. ಈ ಪ್ರಶ್ನೆ ಇನಾಮ್ ಕಮಿಷನರ್ ಮ್ಯಾನ್ಸನ್ ಎಂಬುವನ ಪರಿಶೀಲನೆಗೆ ಬಂತು. ಮ್ಯಾನ್ಸನ್ ಸಂಸ್ಥಾನದ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿದೆ ಎಂಬ ನೆಪ ಒಡ್ಡಿ ದತ್ತಕ ಸ್ವೀಕಾರಕ್ಕೆ ಅನುಮತಿ ನಿರಾಕರಿಸಿದ. ಇದರಿಂದ ರೋಷಗೊಂಡ ಬಾಬಾಸಾಹೇಬ ಮ್ಯಾನ್ಸನ್ನನ ಮೇಲೂ ಬ್ರಿಟಿಷರ ಮೇಲೂ ಸೇಡು ತೀರಿಸಿಕೊಳ್ಳಬಯಸಿದ.
ಬಂಡಾಯ:- ಆ ಕಾಲದಲ್ಲಿ ಲಾರ್ಡ್ ಡಾಲ್ಹೌಸಿಯ ನಿರಾಕರಣಸೂತ್ರ ಮತ್ತು ಅದರ ಹಿಂದೆಯೇ ಬಂದ ಇನಾಮ್ ಕಮಿಷನ್ನಿನ ಕಾರ್ಯ ಚಟುವಟಿಕೆಗಳೇ ಮೂಲ ಕಾರಣವಾಗಿ ಉತ್ತರ ಭಾರತಾದ್ಯಂತ ಮಹಾಕ್ರಾಂತಿ ಹತ್ತಿ ಉರಿಯುತ್ತಿತ್ತು (1857). ಯಾವುದೇ ಹಕ್ಕು ಪತ್ರಗಳಿಲ್ಲದೆ ಹೋದರೆ ಅಥವಾ ಸಂಬಂಧಪಟ್ಟ ದಾಖಲೆಗಳು ಸ್ಪಷ್ಟವಾಗಿಲ್ಲವೆಂದು ಕಂಡುಬಂದರೆ ಅಂಥವರ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಇನಾಮ್ ಕಮಿಷನ್ನಿಗೆ ಕೊಡಲಾಗಿತ್ತು. ದಕ್ಷಿಣ ಮರಾಠಾ ದೇಶವೊಂದರಲ್ಲೇ ಇನಾಮ್ ಕಮಿಷನ್ ಸುಮಾರು 35,000 ಜಮೀನ್ದಾರರ ಒಡೆತನ ಹಕ್ಕುಗಳನ್ನು ಪರಿಶೀಲಿಸಿ, 21,000 ಜಮೀನ್ದಾರರ ಸ್ವತ್ತನ್ನು ಸರ್ಕಾರಕ್ಕೆ ಸೇರಿಸಿಕೊಂಡಿತ್ತು. ಇದರಿಂದಾಗಿ ನಿಪ್ಪಾಣಿ, ಜಂಬೋಟಿ ಮುಂತಾದ ಕಡೆಯ ಜಮೀನ್ದಾರರು ಒಟ್ಟುಗೂಡಿ ಬಂಡಾಯವೆದ್ದರು. ಬ್ರಿಟಿಷರ ವಿರುದ್ಧ ಎದ್ದು ನಿಂತರೆ ಇವರೆಲ್ಲರ ಸಹಾನುಭೂತಿ ಸಹಾಯ ತನಗೆ ದೊರಕುವುದೆಂದು ಬಾಬಾಸಾಹೇಬ ಭಾವಿಸಿದ.
ಸಿಪಾಯಿ ದಂಗೆಯಲ್ಲಿ ಮುಖ್ಯಪಾತ್ರ ವಹಿಸಿದ್ದ ಪೇಶ್ವೆ ನಾನಾಸಾಹೇಬನೊಡನೆ ಇವನು ಪತ್ರವ್ಯವಹಾರ ನಡೆಸಿದ. ಅನಂತರ ಡಂಬಳದ ಮತ್ತು ಹಮ್ಮಿಗೆಯ ದೇಸಾಯಿಗಳೊಡನೆ ಮತ್ತು ಮುಂಡರಗಿ ಭೀಮರಾವ್ ಇವರೊಂದಿಗೆ ರಹಸ್ಯ-ಸಮಾಲೋಚನೆ ನಡೆಸಿದ. ಕೊನೆಗೆ ಉತ್ತರ ಕರ್ನಾಟಕಾದ್ಯಂತ ಒಮ್ಮೆಲೆ ಬಂಡಾಯವೆದ್ದು ನರಗುಂದದವರು ಧಾರವಾಡ ಮತ್ತು ಅದರ ಪಶ್ಚಿಮ ಭಾಗವನ್ನೂ ಮುಂಡರಗಿ ಭೀಮರಾಯ ಕೊಪ್ಪಳವನ್ನೂ ವಶಪಡಿಸಿಕೊಳ್ಳಬೇಕೆಂಬ ನಿರ್ಣಯಕ್ಕೆ ಬರಲಾಯಿತು. ಈ ಮಧ್ಯೆ ಬ್ರಿಟಿಷರು ಶಸ್ತ್ರಾಸ್ತ್ರ ಕಾಯಿದೆಗೆ ಅನುಗುಣವಾಗಿ ಬಾಬಾಸಾಹೇಬ ತನ್ನ ಕೋಟೆಯಲ್ಲಿಟ್ಟಿದ್ದ ದೊಡ್ಡ ತೋಪುಗಳು ಮದ್ದುಗುಂಡು ಇತ್ಯಾದಿಗಳನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಆಜ್ಞೆ ಮಾಡಿದರು. ಆಗ ದಕ್ಷಿಣ ಮರಾಠಾ ದೇಶದ ರಾಜಕೀಯ ಪ್ರತಿನಿಧಿಯಾಗಿದ್ದವ ಮ್ಯಾನ್ಸನ್. ಅಂದಿನ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಈ ಶಸ್ತ್ರಾಸ್ತ್ರಗಳು ಆಂಗ್ಲರ ವಿರೋಧಿಗಳಿಗೆ ದಕ್ಕುವಂತಾಗಬಾರದೆಂಬುದೇ ಬ್ರಿಟಿಷ್ ಸರ್ಕಾರದ ಆಶಯವೆಂದು ಹೇಳಿ, ನಂಬಿಸಿ ಬಾಬಾ ಸಾಹೇಬನಿಂದ ಶಸ್ತ್ರಾಸ್ತ್ರ ಒಪ್ಪಿಸುವ ಆಶ್ವಾಸನೆ ಪಡೆದ. ಬಾಬಾಸಾಹೇಬ ಅತಿಯಾದ ಮಳೆ ಸುರಿಯುತ್ತಿದೆಯೆಂಬ ನೆಪವೊಡ್ಡಿ ಮೂರು ತೋಪುಗಳನ್ನು ದುರ್ಗದಲ್ಲೇ ಉಳಿಸಿಕೊಂಡು ಉಳಿದೆಲ್ಲ ಸಾಮಗ್ರಿಗಳನ್ನೂ ಧಾರವಾಡದತ್ತ ಕಳುಹಿಸಿದ. ಜೊತೆಗೆ ಮಧ್ಯದಾರಿಯಲ್ಲಿ ಇವನೇ ಕಳುಹಿಸಿದ ಜನ ಸಾಗಣೆ ಸಿಬ್ಬಂದಿಯವರ ಮೇಲೆ ಬಿದ್ದು ಎಲ್ಲ ಶಸ್ತ್ರಾಸ್ತ್ರಗಳನ್ನು ದೋಚಿಕೊಂಡು ಬಂದರು. ಕಾರಣಾಂತರದಿಂದ ಮುಂಡರಗಿ ಭೀಮರಾವ್ ರಹಸ್ಯವಾಗಿ ನಿಗದಿಮಾಡಿದ್ದ ದಿನಕ್ಕೆ ಮೊದಲೇ ಬಂಡಾಯವೆದ್ದ. ಡಂಬಳದ ಖಜಾನೆಯನ್ನು ಲೂಟಿಮಾಡಿ ಕೊಪ್ಪಳ ದುರ್ಗವನ್ನಾಕ್ರಮಿಸಲು ಹೊರಟ. ಈ ವಿಷಯ ತಿಳಿದಾಕ್ಷಣ ಬಾಬಾ ಸಾಹೇಬ ತನ್ನ ಬಳಿಯಿದ್ದ ದೊಡ್ಡ ತೋಪುಗಳನ್ನು ದುರ್ಗದ ಮೇಲೆ ಸರಿಯಾದ ಸ್ಥಳಗಳಲ್ಲಿರಿಸಿ ಯುದ್ಧ ಸನ್ನದ್ಧನಾದ.
ಆರಂಭಿಕ ಗೆಲುವು:-
ನರಗುಂದದೊಡೆಯನ ಈ ಅಪಾಯಕಾರಿ ಕ್ರಮಗಳ ವಿಷಯ ಮ್ಯಾನ್ಸನ್‌ಗೆ ಕುರುಂದವಾಡದಲ್ಲಿ ತಿಳಿಯಿತು. ಏನಾದರೂ ಮಾಡಿ ಇವನು ದಂಗೆ ಏಳದಂತೆ, ಅದು ಸಾಧ್ಯವಾಗದಿದ್ದರೆ ರಾಮದುರ್ಗದ ಸಂಸ್ಥಾನದ ಒಡೆಯನಾಗಿದ್ದ ಇವನ ಮಲತಮ್ಮ ದಂಗೆಕೋರರಿಗೆ ಸಹಾಯ ನೀಡದಂತೆ ಮಾಡಬೇಕೆಂಬ ಉದ್ದೇಶದಿಂದ ಮ್ಯಾನ್ಸನ್ ಮೇ 25 ರಂದು ಒಳದಾರಿ ಹಿಡಿದು ನರಗುಂದದ ಕಡೆಗೆ ಸಾಗಿದ. ಜೊತೆಯಲ್ಲಿ ದಕ್ಷಿಣ ಮರಾಠಾ ಅಶ್ವದಳದ 12 ಮಂದಿಯನ್ನು ಮಾತ್ರ ತನ್ನ ರಕ್ಷಣೆಗಾಗಿ ಕರೆದೊಯ್ದ. ಆದರೆ, ಕರ್ನಲ್ ಮಾಲ್ಕಮ್ ರಾಮದುರ್ಗದಲ್ಲಿ ದಕ್ಷಿಣ ಮರಾಠಾ ಆಶ್ವದಳದೊಡನೆ ತನ್ನನ್ನು ಸಂಧಿಸಬೇಕೆಂದು ಆಜ್ಞಾಪಿಸಿದೆ. ದುರದೃಷ್ಟವಶಾತ್, ಈ ಆಜ್ಞೆ ತಲುಪುವಷ್ಟರಲ್ಲಿ, ಕರ್ನಲ್ ಮಾಲ್ಕಮ್ 250 ಕುದುರೆ ಸವಾರರೊಡನೆ ಡಂಬಳದ ಖಜಾನೆ ಲೂಟಿಮಾಡಿದ ಬಂಡುಕೋರರೊಡನೆ ಹೋರಾಟಕ್ಕೆ ಸಿದ್ಧನಾಗಿ ನಿಂತಿದ್ದ. ಇದರಿಂದ ಮ್ಯಾನ್ಸನ್ ರಾಮದುರ್ಗವನ್ನು ತಲುಪಿದಾಗ ಅವನ ರಕ್ಷಣೆಗಾಗಿ ಮಾಲ್ಕಮ್ ಅಲ್ಲಿರಲಾಗಲಿಲ್ಲ. ರಾಮದುರ್ಗದ ಒಡೆಯನೇನೋ ಸ್ನೇಹಭಾವವನ್ನೇ ತೋರಿದ. ಬಾಬಾಸಾಹೇಬ ಬರೆದಿದ್ದ ಪತ್ರ ತೋರಿಸಿ ಅಲ್ಲಿಗೆ ಹೋಗಕೂಡದೆಂದು ಎಚ್ಚರಿಸಿದ. ಈ ಪತ್ರದಲ್ಲಿ ನರಗುಂದದೊಡೆಯ ಅಪಮಾನಕ್ಕಿಂತ ಮರಣವೇ ಲೇಸೆಂದು ರಾಮದುರ್ಗ ಸಹ ದಂಗೆಯಲ್ಲಿ ಪಾಲ್ಗೊಳ್ಳಬೇಕೆಂದೂ ಒತ್ತಿ ಹೇಳಿದ್ದ. ಧಾರವಾಡಕ್ಕೆ ಹೋಗಿ ಅಲ್ಲಿ ಮಾಲ್ಕಮನ ಪಡೆಯನ್ನು ಕೂಡಿಕೊಳ್ಳುವ ಉದ್ದೇಶದಿಂದ, ಎಷ್ಟು ಹೇಳಿದರೂ ಲಕ್ಷಿಸದೆ ಮ್ಯಾನ್ಸನ್ ಮೇ 29ರ ಮಧ್ಯಾಹ್ನ ರಾಮದುರ್ಗದಿಂದ ಹೊರಟ. ಹನ್ನೆರಡು ಮಂದಿ ಆಶ್ವೀಕರಲ್ಲದೆ ಅವನ ಜೊತೆ ಕೆಲವೇ ಪರಿಚಾರಕರಿದ್ದರು. ರಾಮದುರ್ಗದಿಂದ ಧಾರವಾಡದತ್ತ ಹೋಗುವ ದಾರಿ ನರಗುಂದದ ಸಮೀಪದಲ್ಲೇ ಹಾಯುತ್ತಿತ್ತು. ಹೀಗಾಗಿ ಮ್ಯಾನ್ಸನ್ನನ ಸಾಹಸ ಅಪಾಯದಿಂದ ಕೂಡಿತ್ತು. ರಾತ್ರಿಯಾಗುತ್ತಲೇ ಸುರೆಬಾನ ಎಂಬ ಹಳ್ಳಿಯಲ್ಲಿ ಇವನು ತಂಗಿದ. ಇಷ್ಟರಲ್ಲಿ ಮ್ಯಾನ್ಸನ್ ರಾಮದುರ್ಗದಿಂದ ಕಳುಹಿಸಿದ್ದ ಪತ್ರ ಓದಿ ಕೋಪೋದ್ರಿಕ್ತನಾಗಿದ್ದ ಬಾಬಾಸಾಹೇಬ ಸುಮಾರು 700-800 ಕುದುರೆ ಮತ್ತು ಕಾಲ್ದಳದೊಂದಿಗೆ ರಾಮದುರ್ಗದತ್ತ ಬಂದು ಮ್ಯಾನ್ಸನ್ ಸುರೆಬಾನದಲ್ಲಿ ತಂಗಿರುವ ವಿಷಯ ತಿಳಿದು ಅತ್ತ ಧಾವಿಸಿದ. ಬಾಬಾಸಾಹೇಬನ ಸೈನಿಕರು ಮ್ಯಾನ್ಸನ್ನನ ತಲೆ ಕಡಿದು ಹಾಕಿದರು. ಕತ್ತಲಲ್ಲಿ ಕೇವಲ ಆರು ಮಂದಿ ಸೈನಿಕರು ತಪ್ಪಿಸಿಕೊಂಡರು. ದಕ್ಷಿಣ ಮಹಾರಾಷ್ಟ್ರರ ಅಶ್ವದಳದ ಅಧಿಕಾರಿಗಳಲ್ಲಿ ಶ್ರೇಷ್ಠ ಎನಿಸಿದ್ದ ಪೂರ್ಣಸಿಂಗನೂ ಕೊಲ್ಲಲ್ಪಟ್ಟ. ಮ್ಯಾನ್ಸನ್ನನ ರುಂಡವನ್ನು ನರಗುಂದ ಪಟ್ಟಣದ ದ್ವಾರವೊಂದಕ್ಕೆ ನೇತುಹಾಕಲಾಯಿತು.
ಮ್ಯಾನ್ಸನ್ನ ಬಳಿಯಿದ್ದ ಕಾಗದಪತ್ರಗಳ ಪರಿಶೀಲನೆ ನಡೆಸಿದಾಗ ತನ್ನ ಅನುಚರರೇ ಆದ ಕೃಷ್ಣಾಜಿಪಂತ ಜೋಶಿ ಮೊದಲಾದ ದ್ರೋಹಿಗಳ ಮೂಲಕ ತನ್ನ ಗುಪ್ತ ಕಾರ್ಯಾಗಾರಗಳೆಲ್ಲ ಬ್ರಿಟಿಷರಿಗೆ ಗೊತ್ತಿರುವ ವಿಷಯ ಗಮನಕ್ಕೆ ಬಂದು ಬಾಬಾ ಸಾಹೇಬನಿಗೆ ಗಾಬರಿಯಾಯಿತು. ಈ ದ್ರೋಹಿಗಳು ಮದ್ದಿನ ಮನೆಗೆ ಸಗಣಿ ತುಂಬಿದ್ದರು. ಅಷ್ಟಾದರೂ ಇವನು ಹೋರಾಟಕ್ಕೆ ಸಿದ್ಧನಾದ.
ಸೋಲು:- ಮ್ಯಾನ್ಸನ್ ಮತ್ತು ಇತರರಿಗೊದಗಿದ ಘೋರ ಮರಣ ವೃತ್ತಾಂತ ಧಾರವಾಡಕ್ಕೆ ಮಾರನೇ ದಿನ ತಲುಪಿತು. ಕೂಡಲೇ ಧಾರವಾಡದಿಂದ ಅಮರಗೋಳಕ್ಕೆ ಸಣ್ಣ ಪಡೆಯೊಂದನ್ನು ರವಾನಿಸಲಾಯಿತು. ಜೂನ್ 1ರಂದು ಕರ್ನಲ್ ಮಾಲ್ಕಮ್ ದಕ್ಷಿಣ ಮರಾಠಾ ಅಶ್ವದಳದ 150 ಮಂದಿ ದೇಶೀಯ ಪದಾತಿದಳದ 28ನೆಯ ರೆಜಿಮೆಂಟ್ ಮತ್ತು 74ನೆಯ ಪರ್ವತ ಪಡೆಯ ಎರಡು ತುಕಡಿಗಳೊಡನೆ ನರಗುಂದ ತಲುಪಿದ. ನಡೆದ ಹೋರಾಟದಲ್ಲಿ ಪಟ್ಟಣ ಬ್ರಿಟಿಷರ ವಶವಾಯಿತು. ಮಾರನೆಯ ದಿನ ಬ್ರಿಟಿಷರು ಕೋಟೆ ವಶಪಡಿಸಿಕೊಳ್ಳಲು ಹೊರಟರು. ಬಾಬಾಸಾಹೇಬನಿಗೆ ಹೋರಾಟ ಮುಂದುವರಿಸುವುದರಿಂದ ಪ್ರಯೋಜನವಿಲ್ಲವೆಂಬ ಅರಿವಾಯಿತು. ಅಂದು ರಾತ್ರಿಯೇ ಆರು ಮಂದಿ ಆಪ್ತರೊಡನೆ ದುರ್ಗ ತೊರೆದು ಹೋದ.
ಬೆಳಗಾಂವಿಯ ಪೊಲೀಸ್ ಸೂಪರಿಂಟೆಂಡೆಂಟ್ ಆಗಿದ್ದ ಫ್ರಾಂಕ್ ಸೌಟರ್ ಮಾರನೆಯ ದಿನ ಪಂಢರಾಪುರಕ್ಕೆ ತೆರಳುವ ಯಾತ್ರಾರ್ಥಿಗಳಂತೆ ವೇಷ ಧರಿಸಿದ್ದ ಬಾಬಾಸಾಹೇಬ ಮತ್ತು ಅವನ ಅನುಚರರನ್ನು ತೊರಗಲ್ ಕಾಡಿನಲ್ಲಿ ಸೆರೆಹಿಡಿದು ಬೆಳಗಾಂವಿಗೆ ತಂದ. ವಿಚಾರಣೆ ನಡೆಸಿ ಬಾಬಾಸಾಹೇಬನಿಗೆ ಮರಣದಂಡನೆ ವಿಧಿಸಲಾಯಿತು. 1858 ಜೂನ್ 12ರಂದು ಸಾವಿರಾರು ಮಂದಿಯ ಸಮ್ಮುಖದಲ್ಲಿ ಬೆಳಗಾಂವಿಯಲ್ಲಿ ಈ ವೀರನನ್ನು ನೇಣುಹಾಕಲಾಯಿತು. ಶೋಕತಪ್ತರಾದ ಇವನ ತಾಯಿ ಯಮುನಾಬಾಯಿ ಮತ್ತು ಹೆಂಡತಿ ಸಾವಿತ್ರಿಬಾಯಿ ಮಲಪ್ರಭಾ ನದಿಗೆ ಹಾರಿಕೊಂಡು ಸತ್ತರು. ಬಾಬಾಸಾಹೇಬ ಸ್ಥಾಪಿಸಿದ್ದ ಸುಮಾರು 3-4 ಸಹಸ್ರ ಗ್ರಂಥಗಳನ್ನೊಳಗೊಂಡಿದ್ದ ಪುಸ್ತಕ ಭಂಡಾರವನ್ನು ಬ್ರಿಟಿಷರು ಸುಟ್ಟರು. 1858 ಜೂನ್ 3ರಂದು ನರಗುಂದ ಸಂಸ್ಥಾನವನ್ನು ಬ್ರಿಟಿಷ್ ಅಧಿಪತ್ಯಕ್ಕೆ ಒಳಪಡಿಸಿಕೊಂಡರು.
ಸುರಪುರದ ವೆಂಕಟಪ್ಪನಾಯಕ
ಸುರಪುರ ಸಂಸ್ಥಾನದ ದೊರೆ (1842-58). ಸುರಪುರದ
ನಾಯಕ ರಾಜವಂಶದ ಈತನು ಪ್ರಮುಖ
ಮತ್ತು ಕೊನೆಯ ಆಡಳಿತಗಾರ. ಅವನು
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ
ಸಾರ್ವಭೌಮತ್ವವನ್ನು ಸ್ವೀಕರಿಸಲು ನಿರಾಕರಿಸಿದನು ಮತ್ತು ಅವರ ವಿರುದ್ಧ
ಯುದ್ಧ ಮಾಡಿದನು. ಸುರಪುರ (ಅಥವಾ
ಶೋರಾಪುರ) ಪ್ರಸ್ತುತ ಕರ್ನಾಟಕ ರಾಜ್ಯದ
ಯಾದಗಿರಿ ಜಿಲ್ಲೆಯಲ್ಲಿದೆ.
ಹೋರಾಟದ ಬದುಕು:-
ಕೃಷ್ಣಪ್ಪನಾಯಕ
ಮತ್ತು ಈಶ್ವರಮ್ಮ ಇವನ ತಂದೆತಾಯಿಗಳು.
ಬಾಲ್ಯದಲ್ಲೆ ತಂದೆಯನ್ನು ಕಳೆದುಕೊಂಡು ತಾಯಿಯ
ಪೋಷಣೆಯಲ್ಲಿ ಬೆಳೆದ. ಈತ ಅಪ್ರಾಪ್ತವಯಸ್ಕನಾಗಿದ್ದುದರಿಂದ
ಇವನ ಹೆಸರಿನಲ್ಲಿ ಇವನ
ತಾಯಿ ಸುರಪುರ ಸಂಸ್ಥಾನವನ್ನು ಆಳುತ್ತಿದ್ದಳು.
ಈ ಸಂದರ್ಭದಲ್ಲಿ ಕೃಷ್ಣಪ್ಪನಾಯಕನ
ತಮ್ಮ ಪಿಡ್ಡನಾಯಕನನ್ನು ವೆಂಕಟಪ್ಪನಾಯಕನ ಪಾಲಕನನ್ನಾಗಿ ನೇಮಿಸಬೇಕೆಂಬ ಪ್ರಯತ್ನಗಳು ನಡೆದವು. ರಾಣಿಯ ವಿರೋಧವನ್ನೂ
ಕಡೆಗಣಿಸಿ ಬ್ರಿಟಿಷ್ ಸರ್ಕಾರವೂ ಪಿಡ್ಡನಾಯಕನನ್ನೆ
ಪಾಲಕನನ್ನಾಗಿ ನೇಮಿಸಬೇಕೆಂಬ ನಿರ್ಧಾರ ತಳೆಯಿತು. ಈ
ಕಾಲದಲ್ಲಿ ಮೆಡೋಸ್ ಟೇಲರ್ ಎಂಬಾತ
ಇಲ್ಲಿಗೆ ಬ್ರಿಟಿಷ್ ಪ್ರತಿನಿಧಿಯಾಗಿ ಬಂದ.
ಅಧಿಕಾರಕ್ಕಾಗಿ ನಡೆಯುತ್ತಿದ್ದ ಒಳಜಗಳಗಳನ್ನು ನಿವಾರಿಸಲು ಯತ್ನಿಸುತ್ತ ಸಂಸ್ಥಾನದ
ಸುಧಾರಣೆಗೆ ದುಡಿದು ಸ್ಥಳೀಯ ಜನರ
ವಿಶ್ವಾಸ ಗಳಿಸಿದ. ಈತ ವೆಂಕಟಪ್ಪನಾಯಕನ
ಶಿಕ್ಷಣದ ಸಲುವಾಗಿ ಮುರ್ರೆ ಎಂಬ
ವಿದ್ವಾಂಸನನ್ನು ನೇಮಿಸಿ ಇಂಗ್ಲಿಷ್ ಕಲಿಸುವ
ವ್ಯವಸ್ಥೆ ಮಾಡಿದ. ಹಾಗೆಯೇ ತೆಲುಗು,
ಮರಾಠಿ ಹಾಗೂ ಪಾರ್ಸಿ ಭಾಷೆಗಳನ್ನೂ
ಕಲಿಸುವ ವ್ಯವಸ್ಥೆ ಮಾಡಿದ. ಇದೇ
ಸಂದರ್ಭದಲ್ಲಿ ರಾಜಕುಮಾರನನ್ನು ಕೊಲೆಗೈಯುವ ಶತ್ರುಗಳ ಯತ್ನ
ಟೇಲರನ ಮುಂಜಾಗರೂಕತೆಯಿಂದಾಗಿ ಸಫಲವಾಗಲಿಲ್ಲ.
1853ರ ಜೂನ್ ತಿಂಗಳಲ್ಲಿ ವೆಂಕಟಪ್ಪನಾಯಕ
ಟೇಲರನಿಂದ ರಾಜ್ಯಾಡಳಿತವನ್ನು ವಹಿಸಿಕೊಂಡ. ಟೇಲರ್ ಸಂಸ್ಥಾನದಲ್ಲಿ ರಾಜಕೀಯ
ಪ್ರತಿನಿಧಿಯಾಗಿರಬೇಕೆಂಬ ಸಲಹೆ ನಾಯಕನಿಗೆ ಪ್ರಿಯವಾದುದಾಗಿದ್ದರೂ
ಭಾರಿ ಮೊತ್ತದ ವೇತನ ನೀಡಲು
ಅಶಕ್ಯವಿದ್ದುದರಿಂದ ಅದನ್ನೊಪ್ಪಿ ಕೊಳ್ಳಲಿಲ್ಲ. ನಾಯಕ ಅಧಿಕಾರವಹಿಸಿಕೊಂಡಾಗ ರಾಜ್ಯದ
ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಸಂಬಳ,
ಸಾರಿಗೆ ಸರಿಯಾಗಿ ಪಾವತಿಯಾಗದೆ ಸೈನ್ಯದಲ್ಲಿ
ಗೊಂದಲವೆದ್ದಿತು. ಜೊತೆಗೆ ನಿಜಾಮನಿಗೆ ಸಲ್ಲಬೇಕಾಗಿದ್ದ
ಬಂಡಣಿಯನ್ನೂ ಸಲ್ಲಿಸಿರಲಿಲ್ಲ. ಈ ಮಧ್ಯೆ
ಪಿಡ್ಡನಾಯಕನ ಮಕ್ಕಳ ಜಹಗೀರಿಯನ್ನು ವೆಂಕಟಪ್ಪನಾಯಕ
ಕಿತ್ತುಕೊಂಡದ್ದರಿಂದ ಅವರೂ ಬ್ರಿಟಿಷರಿಗೆ ದೂರಿತ್ತರು.
ಈ ಸಲುವಾಗಿ ನಾಯಕನಿಗೂ
ಅವನ ತಾಯಿಗೂ ಮನಸ್ತಾಪ
ಉಂಟಾಗಿತ್ತು. ರಾಜ್ಯದಲ್ಲೂ ಎರಡು ಗುಂಪುಗಳಾಗಿದ್ದವು.
ದೇಶದ ರಾಜಕೀಯ ಪರಿಸ್ಥಿತಿ 1857ರಲ್ಲಿ
ಗಂಭೀರವಾಗತೊಡಗಿತು. ಎಲ್ಲ ಕಡೆ ಬ್ರಿಟಿಷರ
ವಿರುದ್ಧ ಬಂಡಾಯಗಳು ಏಳತೊಡಗಿದವು. ವೆಂಕಟಪ್ಪನಾಯಕನೂ
ಈ ಬಂಡಾಯದಲ್ಲಿ ತೊಡಗಿರಬಹುದೆಂಬ
ಸಂದೇಹ ಬ್ರಿಟಿಷರಿಗೆ ತಲೆದೋರಿತು. ವೆಂಕಟಪ್ಪನಾಯಕ ತನ್ನ ಸೈನ್ಯಕ್ಕೆ ಅಶ್ವ
ಮತ್ತು ಕಾಲ್ದಳಗಳನ್ನು ಸೇರಿಸಿ ಸೈನ್ಯವನ್ನು ಬಲಪಡಿಸಿಕೊಂಡದ್ದು,
ಬ್ರಿಟಿಷರಿಗೆ ಆಗದ ರೋಹಿಲೆ ಮತ್ತು
ಅರಬರನ್ನು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ
ಸೈನ್ಯಕ್ಕೆ ನೇಮಿಸಿಕೊಂಡದ್ದು, ಬ್ರಿಟಿಷರಿಗೆ ಸೆರೆಸಿಕ್ಕ ಮಹಿಪಾಲ್ಸಿಂಗ್
(ಜವಾಹರ್ಸಿಂಗ್) ನಾಯಕನೇ ತನ್ನನ್ನು
ಕಳುಹಿಸಿದ ನೆಂದು ಹೇಳಿದ್ದು, ನಾನಾಸಾಹೇಬನ
ಬಳಿಗೆ ನಾಯಕ ನಾನಾಸಂಕೇಶ್ವರ ನೆಂಬ
ಬ್ರಾಹ್ಮಣನನ್ನು ಒಪ್ಪಂದಕ್ಕಾಗಿ ಕಳಿಸಿದ್ದಾನೆಂಬ ದಟ್ಟ ವದಂತಿ ಮುಂತಾದ
ಸಂಗತಿಗಳು ಬ್ರಿಟಿಷರು ಸಂದೇಹಪಡಲು ಪ್ರಮುಖ
ಕಾರಣಗಳಾದವು.
1857 ಡಿಸೆಂಬರ್ನಲ್ಲಿ ಬ್ರಿಟಿಷರು ಕ್ಯಾಪ್ಟನ್
ಕ್ಯಾಂಬೆಲ್ ಎಂಬಾತ ನನ್ನು ಪರಿಶೀಲನೆಗಾಗಿ
ಸುರಪುರಕ್ಕೆ ಕಳಿಸಿದರು. ಅವನ ಆದೇಶದಂತೆ
ಫೆಬ್ರವರಿ ತಿಂಗಳಲ್ಲಿ ಲಿಂಗಸುಗೂರಿನಿಂದ ಸೈನ್ಯದ
ತುಕಡಿಯೊಂದು ಕ್ಯಾಪ್ಟನ್ ವಿಂಡ್ಹ್ಯಾಮಿನ ನೇತೃತ್ವದಲ್ಲಿ
ಸುರಪುರಕ್ಕೆ ಬಂದು ಊರ ಹೊರಗಿನ
ಬಯಲಲ್ಲಿ ಬೀಡುಬಿಟ್ಟಿತು. ಕಲಾದಗಿಯಿಂದ ಮಾಲ್ಕಮ್ ಸಾಹೇಬನ ಸೈನ್ಯವೂ
ಬಂದು ಸೇರಿತು. ಸೈನ್ಯ ಊರ
ಮೇಲೆ ದಾಳಿಮಾಡಿತು. ನಾಯಕ ತಲೆತಪ್ಪಿಸಿಕೊಂಡು ಹೈದರಾಬಾದಿನ
ಹಾದಿ ಹಿಡಿದ. ರಾಣಿಯರು ತಲೆಮರೆಸಿಕೊಂಡು
ಸುರಪುರದಲ್ಲಿ ಶಾಂತಿ ನೆಲಸಿದ ಮೇಲೆ
ಅಲ್ಲಿಗೆ ಬಂದು ಸೇರಿದರು. ಹೈದರಾಬಾದಿನ
ವನಪರ್ತಿ ರಾಜ ಇವನನ್ನು ಬ್ರಿಟಿಷರಿಗೊಪ್ಪಿ
ಸಿದ. ಈತನನ್ನು ಅವರು ಸಿಕಂದರಾಬಾದಿನಲ್ಲಿ
ಸೆರೆಯಿಟ್ಟರು. ಆಗ ಟೇಲರ್
ಬಂದು ನಾಯಕನನ್ನು ಭೇಟಿಯಾಗಿ ಸಂಧಾನಕ್ಕಾಗಿ
ಪ್ರಯತ್ನಿಸಿದ. ನಾಯಕನಿಗೆ ವಿಧಿಸಿದ್ದ ಮರಣದಂಡನೆ
ಜೀವಾವಧಿಶಿಕ್ಷೆಗೆ ಇಳಿಯಿತು. ಕೊನೆಗೆ ಅದೂ
ಕಡಿಮೆಯಾಗಿ ನಾಲ್ಕುವರ್ಷಗಳ ಸೆರೆವಾಸದ ಅನಂತರ ರಾಜ್ಯವನ್ನು
ವೆಂಕಟಪ್ಪನಾಯಕನಿಗೊಪ್ಪಿಸಬೇಕೆಂಬ
ತೀರ್ಮಾನವಾಯಿತು. ಮದರಾಸು ಬಳಿಯ ಚೆಂಗಲ್ಪೇಟೆಯಲ್ಲಿ ಈತ ತನ್ನ
ರಾಣಿಯರೊಂದಿಗೆ ಇರುವ ವ್ಯವಸ್ಥೆ ಮಾಡಲಾಯಿತು.
ರಾಣಿಯರು ಕರ್ನೂಲಿನಲ್ಲಿ ಈತನನ್ನು ಸೇರಿಕೊಳ್ಳುವ ವ್ಯವಸ್ಥೆ
ನಡೆಯಿತು. ಆದರೆ ಅಷ್ಟರಲ್ಲೇ ನಾಯಕ
ಗುಂಡೇಟಿನಿಂದ ಮರಣ ಹೊಂದಿದ. ಈ
ಮರಣ ಆಕಸ್ಮಿಕವೇ ಕೊಲೆಯೇ
ಆತ್ಮಹತ್ಯೆಯೇ ಎಂಬ ಸಂಗತಿ ನಿಗೂಢವಾಗಿ
ಉಳಿದಿದೆ. ಮರಣಹೊಂದಿದಾಗ ನಾಯಕನಿಗಿನ್ನೂ ಶಿಕ್ಷಾವಧಿಯ ಒಂದು ವರ್ಷವೂ ತುಂಬಿರಲಿಲ್ಲ.
ಅಷ್ಟರೊಳಗೆ ಆತ ಮರಣಹೊಂದುತ್ತಾನೆಂಬ
ಭವಿಷ್ಯವನ್ನು ಬರೆದಿಟ್ಟುದನ್ನು ಟೇಲರ್ ತನ್ನ ಆತ್ಮಕಥೆಯಲ್ಲಿ
ಉಲ್ಲೇಖಿಸಿದ್ದಾನೆ. ಅನಂತರ ಸುರಪುರ ಸಂಸ್ಥಾನ
ಎರಡು ವರ್ಷಗಳ ಕಾಲ ಬ್ರಿಟಿಷರ
ಅಧೀನದಲ್ಲಿದ್ದು, ಬಂಡಾಯಕಾಲದಲ್ಲಿ ತಮಗೆ ಮಾಡಿದ ಸಹಾಯಕ್ಕಾಗಿ
ಅದನ್ನು ನಿಜಾಮನಿಗೆ ಒಪ್ಪಿಸಲಾಯಿತು.
ಕನ್ನಡ ನೆಲದಲ್ಲಿ ಗಾಂಧೀಜಿ
ಪ್ರಥಮ ಕರ್ನಾಟಕ ಭೇಟಿ: ಗಾಂಧೀಜಿಯವರ ಪ್ರಥಮ ಕರ್ನಾಟಕ ಭೇಟಿ
೧೯೧೫ರ ಮೇ ೧೫ರಂದು
ಬೆಂಗಳೂರಿಗೆ. ಸಾಹಿತಿ ವಿಧ್ವಾಂಸರಾದ ಡಿ.
ವಿ. ಗುಂಡಪ್ಪನವರ ಆಗ್ರಹದೊಂದಿಗೆ
ತಮ್ಮ ಪತ್ನಿ ಕಸ್ತೂರಬಾರೊಂದಿಗೆ ಕಾಥೇವಾಡಿ
ರೈತನ ವೇಶದಲ್ಲಿ. ಅವರ ಪತ್ನಿ
ಕೆಂಪಂಚಿನ ಬಿಳಿ ಸೀರೆಯೊಂದಿಗೆ ಬೆಂಗಳೂರುರೈಲು
ನಿಲ್ದಾಣದಲ್ಲಿ ಬಂದಿಳಿದರು. ಅವರ ಸಾಮಾನುಗಳೆಂದರೆ ಒಂದು
ಕೈಗಂಟು ಮತ್ತು ಕುಡಿಯುವ ನೀರಿನ
ಹೂಜಿ.
ಅವರಿಗಾಗಿ
ಕುದುರೆ ಸಾರೋಟು ಸಿದ್ಧ ವಾಗಿದ್ದು
ವಿಧ್ಯಾರ್ಥಿಗಳೆಲ್ಲ 'ಕುದುರೆಗಳನ್ನು ಬಿಚ್ಚಿ, ನಾವೇ ಎಳೆಯುತ್ತೇವೆ,
ಎಂದರು. 'ನರವಾಹನ ಬೇಡ'ಎಂದ
ಅವರು, ಕಾಲ್ನಡಿಗೆಯಲ್ಲಿ ತಮ್ಮ ಬಿಡಾರವಾದ ಈಗಿನ
ಆನಂದರವ್ ಸರ್ಕಲ್ಬಳಿಯ ಶೇಷಾದ್ರಿ ರಸ್ತೆಯಲ್ಲಿ ಜಿಲ್ಲಾ
ನ್ಯಾಯಾಧೀಶ ಬಿ. ಎಸ್. ಕೃಷ್ಣಸ್ವಾಮಿ
ಕಟ್ಟಿಸಿದ ನೂತನ ಗೃಹದತ್ತ ಸಾಗಿದರು.
ಅವರ ಆಹಾರ ನೆಲಗಡಲೆ ಬೀಜ
ಮತ್ತು ಪಪ್ಪಾಯ ಹಣ್ಣು. ಅವರ
ಮೊದಲ ಕಾರ್ಯಕ್ರಮ ಈಗಿನ ಆರ್ಟ್ಸ್
ಮತ್ತು ಸೈನ್ಸ್ ಕಾಲೇಜು ಮೈದಾನವಾಗಿತ್ತು.
ಆರಂಭದಲ್ಲಿ ಗೋಖಲೆ ಭಾವಚಿತ್ರ ಅನಾವರಣ
ಮಾಡಿ ತಮಗಿತ್ತ ಬಿನ್ನವತ್ತಲಳೆಗೆ ಆಂಗ್ಲ
ಭಾಷೆಯಲ್ಲಿ ಉತ್ತರಿಸಿದರು. ನಂತರ
ಲಾಲ್`ಬಾಗಿನ ಸಾರ್ವಜನಿಕ ಸಭೆಯಲ್ಲಿ
ಪಾಲ್ಗೊಂಡರು.
ಬೆಳಗಾವಿಯಲ್ಲಿ
ಎರಡನೆಯ ಭೇಟಿ: ಗಾಂಧೀಜಿಯವರ
ಎರಡನೆಯ ಭೇಟಿ ೧೯೧೫ರ ಏಪ್ರಿಲ್
೧೬ರಂದು ಬೆಳಗಾವಿಗೆ. ಮುಂಬಯಿ ಪ್ರಾಂತೀಯ ಪರಿಷತ್ತು
ಸಮಾವೇಶದಲ್ಲಿ
ಭಾಗವಹಿಸಲು ಮಗ ರಾಮದಾಸ
ಮತ್ತು ಸರ್ವೋದಯ ಧುರೀಣ ಕಾಕಾ
ಕಾಲೇಲ್ಕರ್ ರೊಂದಿಗೆ ಬಂದಿದ್ದರು. ಹಿಂದಿ
ಭಾಷೆಯಲ್ಲಿ ಮಾತನಾಡಿದರು.
ಮೂರನೆಯ ಭೇಟಿ:- ಮೂರನೆಯ ಭೇಟಿ
೧೯೧೮ಮೇ ೫ರಂದು ಮುಂಬಯಿ ಪ್ರಾಂತದ
ರಾಜಕೀಯ ಪರಿಷತ್ತಿನಲ್ಲಿ ಭಾಗವಹಿಸಲು ಪಾಣಪುರಕ್ಕೆ ಬಂದಿದ್ದರು.
(ವಿವರ ಸೇರಿಸಬಹುದು)
ನಾಲ್ಕನೆಯ
ಭೇಟಿ: ನಾಲ್ಕನೆಯ
ಭೇಟಿ ೧೯೨೦ ಆಗಸ್ಟ್ ೨೦ರಂದು
ರಾಜ್ಯ ಪ್ರವಾಸಕ್ಕಾಗಿ ಬೆಂಗಳೂರಿಗೆ ಬಂದರು. ಆಗಸ್ಟ್ ೧೯ರಂದುರಾಜ್ಯ
ಪ್ರವಾಸಕ್ಕಾಗಿ ಬೆಂಗಳೂರಿಗೆ ಬಂದರು. ಆಗಸ್ಟ್ ೧೯ರಂದು
ಅಸಹಕಾರ ಆಂದೋಲನ ಮತ್ತು ಅಸ್ಪ್ರಶ್ಯತಾ
ನಿವಾರಣಾ ಸಂದೇಶವನ್ನು ಸಾರಲು ಮಂಗಳೂರು, ಕಾಸರಗೋಡಿಗೆ
ಭೇಟಿ ಕೊಟ್ಟರು. ಅವರ ಜೊತೆ
ಶೌಕತ್ ಅಲಿ ಇದ್ದರು.
ಐದನೆಯ ಭೇಟಿ: ಐದನೆಯ
ಭೇಟಿ ೧೯೨೦ ನವೆಂಬರ್ ೨೦ರಂದು
ತಮ್ಮ ತತ್ವಗಳ ಸಂದೇಶ ಬೀರಲು
ನಿಪ್ಪಣಿ, ಚಿಕ್ಕೋಡಿ, ಧಾರವಾಡ, ಹುಬ್ಬಳ್ಳಿ,
ಗದಗ ಮತ್ತು ಬೆಳಗಾವಿಗಳನ್ನು
ಸಂದರ್ಶಿಸಿದ್ದರು.
ಆರನೆಯ ಭೇಟಿ: ೧೯೨೧
ಮೇ ೨೮, ವಿಜಾಪುರಕ್ಕೆ
ಭೇಟಿ ನೀಡಿ ಮಹಿಳೆಯರ ಸಭೆಯಲ್ಲಿ
ಪಾಲುಗೊನಂಡರು ಮುಂದೆ ಬಾಗಲಕೋಟೆ ಸೊಲ್ಲಾಪುರಗಳಿಗೆ
ಭೇಟಿ ನೀಡಿದ್ದರು.
ಏಳನೆಯ ಭೇಟಿ: ಅಕ್ಟೋಬರ್
೧, ೧೯೨೨ರಂದು ಆಂಧ್ರದ
ತಿರುಪತಿ ಮೂಲಕ ಬಳ್ಳಾರಿಗೆ ಭೇಟಿ
ಕೊಟ್ಟರು.
ಎಂಟನೆಯ ಭೇಟಿ: ಎಂಟನೆಯ
ಭೇಟಿ ಅತ್ಯಂತ ಮಹತ್ವದ್ದು. ೧೯೨೪ರಲ್ಲಿ
ಬೆಳಗಾವಿಯ ೨೯ನೇ ಅಖಿಲ ಭಾರತ
ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿ ಅವರು
ಆಗಮಿಸಿದ್ದರು. ಡಿಸೆಂಬರ್ ನಲ್ಲಿ ನಡೆದ
ಸಮ್ಮೇಳನದಲ್ಲಿ ವೇದಿಕೆಯಿಂದ ಇಳಿದು ಸಾರ್ವಜನಿಕರ ಎದುರು
ನಿಂತು ಭಾಷಣ ಮಾಡಿದರು. ಹತ್ತು
ನಿಮಿಷ ಹಿಂದಿಯಲ್ಲಿ ಭಾಷಣ. ಅದಿವೇಶನದ
ನೆನಪಿಗಾಗಿ ಬೆಳಕವಾಡಿಯಲ್ಲಿ ಕಟ್ಟಿಸಿದ ಪಂಪಾ ಸರೋವರದ
ಅಡಿಗಲ್ಲನ್ನು ಇಟ್ಟರು.
ಒಂಭತ್ತನೆಯ
ಭೇಟಿ: ಜುಲೈ
೧೯೨೭ ನಾಲ್ಕು ತಿಂಗಳ ಕಾಲ
ಕರ್ನಾಟಕದಲ್ಲಿದ್ದರು. ರಕ್ತದೊತ್ತಡ ಹೆಚ್ಛಾದ್ದರಿಂದ ನಂದಿ ಬೆಟ್ಟದಲ್ಲಿ ವಿಶ್ರಾಂತಿ
ಪಡೆದರು. ಬೆಂಗಳೂರಿಗೆ ತೆರಳಿ ಅಲ್ಲಿಂದ ರಾಜ್ಯದ
ಪ್ರವಾಸ ಆರಂಭಿಸಿದರು. ಮೈಸೂರುಪ್ರವಾಸದಲ್ಲಿ
ಕಲಾವಿದ ವೆಂಕಟಪ್ಪನವರ ಕಲಾ ಚಿತ್ರಗಳನ್ನು ನೋಡಿದರು.
ಕನಕಪುರಕ್ಕೆ ಭೇಟಿ ಕೊಟ್ಟರು. ನಂತರದ ಪ್ರವಾಸದಲ್ಲಿ ಹಾಸನ, ಶಿವಮೊಗ್ಗ, ಚಿತ್ರದುರ್ಗಗಳಿಗೂ
ಭೇಟಿ ನೀಡಿದರು. ಆಗಸ್ಟ್ ೧೨,
೧೯೨೭ರಂದು ದಾವಣಗೆರೆಗೆ ಬಂದು ಖಾದಿ ಪ್ರಚಾರ
ಆಂದೋಲನ ನಡೆಸಿ ರಾತ್ರಿ ಅಲ್ಲಿ
ತಂಗಿದ್ದು, ಆಗಸ್ಟ್
೧೩ ರಂದು ಹರಿಹರಕ್ಕೆ
ಹೋಗಿ ಹರಿಹರೇಶ್ವರ ದೇವಸ್ತಾನದ ಮುಂದೆ ನೇತಾರನನ್ನು
ಕುರಿತು ಭಾಷಣ ಮಾಡಿ ಮಧ್ಯಾಹ್ನ
ಹೊನ್ನಾಳಿಗೆ ಬಂದರು.
ಖಾದಿ ಪ್ರಚಾರ (ಪ್ರವಾಸ) ಮಾಡುವ
ಉದ್ದೇಶದಿಂದ ಹೊರಟ ಅವರು ಖಾದಿ
ಬಟ್ಟೆ - ಅದನ್ನು ತಯಾರಿಸುವ ವಿಧಾನದ
ಬಗ್ಗೆ ಹೇಳಿದರು. ಹೊನ್ನಾಳಿಯಲ್ಲಿ ತುಂಗಭದ್ರಾ
ನದಿಯ ದಡದಲ್ಲಿ ೧೮೬೨ರಲ್ಲಿ ಬ್ರಿಟಿಷರು
ಕಟ್ಟಿಸಿರುವ ಪ್ರವಾಸ ಮಂದಿರದ ಕಟ್ಟಡದಲ್ಲಿ
ಕೆಲಕಾಲ ತಂಗಿದ್ದರು. ಹರಿಯುತ್ತಿರುವ ತುಂಗಾಭದ್ರ ನದಿಯ ಶುಭ್ರತೆ
ಮತ್ತು ಹಸಿರಿನಿಂದ ಕೂಡಿದ ವಾತಾವರಣ
ಕಂಡು 'ನನಗೆ ಸಾಬರಮತಿ ಆಶ್ರಮ
ನೆನಪಾಗುತ್ತಿದೆ'ಎಂದಿದ್ದರು. ಅಲ್ಲಿಯ ನವಾಬ್`ಷೆರ್ಖಾನ್
ಉರ್ದುವಿನಲ್ಲಿ ಬಿನ್ನವತ್ತಳೆ ಓದಿ , ಗಾಂಧೀಜಿ ಹಿಂದಿ
ಭಾಷೆಯಲ್ಲಿ ಮಾತನಾಡಿದನ್ನು ಕನ್ನಡ ಭಾಷೆಗೆ ಭಾಷಾಂತರಿಸಿದ್ದರು.
ಗಾಂಧೀಜಿ ಜೊತೆಯಲ್ಲಿ ಕಸ್ತೂರಬಾ, ಮಹಾದೇವ
ದೇಸಾಯಿ, ರಾಜಾಜಿ, ದೇವದಾಸ ಗಾಂಧಿ, ರಾಜಾಜಿಯವರ
ಮಗಳು ಲಕ್ಷ್ಮೀ ಗಂಗಾಧರ ದೇಶಪಾಂಡೆ
ಇದ್ದರು. ನಂತರ ಸಾಗರಕ್ಕೆ ತೆರಳಿದರು. ಚಿಕ್ಕಮಗಳೂರು
ಪ್ರವಾಸದ ನಂತರ ಆಗಸ್ಟ್ ೨೦ರಂದು
ಬೇಲೂರಿನ ದೇವಾಲಯಕ್ಕೆ ಗಾಂಧಿ ಪರಿವಾರ ಭೇಟಿ
ನೀಡಿತು.
ಆಧಾರ:
(ಕರ್ನಾಟಕದ
ಸ್ವಾತಂತ್ರ್ಯ ಹೋರಾಟದ ಇತಿಹಾಸ)??
'ಮಾಧವ ಹನುಮಂತ ಕೌಜಲಗಿ,' ಒಬ್ಬ
ಖ್ಯಾತ ಪ್ರಕಾಶಕ, ಹಿರಿಯ ಪತ್ರಕರ್ತ,
ಮತ್ತು ಗಾಂಧಿವಾದಿ, ಸ್ಪೂರ್ಥಿಯ ಚಿಲುಮೆಯಾಗಿದ್ದರು. ತಮ್ಮ
ಜೀವದುದ್ದಕ್ಕೂ ಖಾದಿ ಬಟ್ಟೆಯನ್ನೇ ಉಡುತ್ತಿದ್ದರು.ಮಹಾತ್ಮಾ ಗಾಂಧಿಯವರ ನಿಷ್ಠ
ಅನುಯಾಯಿಯಾಗಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ,
ರಾಮಕೃಷ್ಣ ಹೆಗ್ಗಡೆಯವರ ಗೆಳೆಯರು. ಆದರೆ, ರಾಜಕೀಯದಲ್ಲಿ
ಆಸಕ್ತಿ ವಹಿಸಲಿಲ್ಲ. ಸಮಾಜ ಸೇವೆ, ಅವರ
ಹೃದಯಕ್ಕೆ ಹತ್ತಿರವಾಗಿತ್ತು.ಕರ್ನಾಟಕದ ಖಾದಿ ಗ್ರಾಮೋದ್ಯೋಗದ
ಜನಕ, ಪ್ರವರ್ತಕರಾಗಿ, ತಮ್ಮ ಜೀವನದುದ್ದಕ್ಕೂ ರಾಷ್ಟ್ರಕ್ಕಾಗಿ
ದುಡಿದರು.
ಜನನ, ಬಾಲ್ಯ, ವಿದ್ಯಾಭ್ಯಾಸ,ವೃತ್ತಿಜೀವನ:- 'ಮಾಧವ
ಹನುಮಂತ ಕೌಜಲಗಿ', ಮಾಧವ ಕೌಜಲಗಿಯವರ
ಒಬ್ಬನೇ ಮಗ. ಜೂನ್ ೬,
೧೯೨೨ ರಲ್ಲಿ ಜನಿಸಿದರು. ಅಹಮದಾಬಾದ್
ನಲ್ಲಿ ಬಿ.ಕಾಂ
ಪದವಿ ಗಳಿಸಿದ ಬಳಿಕ, 'ಠಕ್ಕರ್
ಬಾಪಾ' ಜೊತೆ ೨ ವರ್ಷ
ಕೆಲಸಮಾಡಿದರು. ಹುಬ್ಬಳ್ಳಿ, ಮತ್ತು ಬೆಂಗಳೂರಿನಲ್ಲಿ ರಂಗನಾಥ
ದಿವಾಕರ, ಮೊಹರೆ ಹನುಮಂತರಾವ್, ಜೊತೆ
ಸೇರಿ, ಅವರ ಮಾರ್ಗದರ್ಶನದಲ್ಲಿ 'ಸಂಯುಕ್ತ
ಕರ್ನಾಟಕ ಪತ್ರಿಕೆ', ಮತ್ತು, 'ಕರ್ಮವೀರ
ವಾರಪತ್ರಿಕೆ'ಗಳನ್ನು ಪ್ರಕಟಿಸಿ ಜನಪ್ರಿಯ
ಮಾಡಿದರು. ೧೯೬೪ ರಲ್ಲಿ ಬೆಂಗಳೂರಿನಲ್ಲಿ,
'ಬೃಂದಾವನ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್ ಮುದ್ರಣಾಲಯ'ವನ್ನು ಸ್ಥಾಪಿಸಿ, ಅದನ್ನು
ಉತ್ತುಂಗಕ್ಕೇರಿಸಿದರು.
ಘಟಪ್ರಭಾದ
ಕರ್ನಾಟಕ ಆರೋಗ್ಯಧಾಮ,, ಕಸ್ತುರ್ ಬಾ ಟ್ರಸ್ಟ್,
ಗಾಂಧಿ ಸ್ಮಾರಕ ನಿಧಿ, ಲೋಕಸೇವಾ
ಟ್ರಸ್ಟ್, ಖಾದಿ ಗ್ರಾಮೋದ್ಯೋಗ, ಮೊದಲಾದ
ಸಂಘ ಸಂಸ್ಥೆಗಳ ಸದಸ್ಯರಾಗಿ
ದುಡಿದರು.
ನಿಧನ:- ೮೯
ವರ್ಷವಯಸ್ಸಿನ, ಮಾಧವ ಹನುಮಂತ ಕೌಜಲಗಿ
೨೦೧೦ ರ, ಸೆಪ್ಟೆಂಬರ್
೨೭ ರಂದು ಬೆಂಗಳೂರಿನಲ್ಲಿ
ದೈವಾಧೀನರಾದರು. ಇಬ್ಬರು ಪುತ್ರರು, ಮತ್ತು
ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಹಳ್ಳಿಕೇರಿ ಗುದ್ಲೆಪ್ಪನವರು
ಇವರು ಹಾವೇರಿ
ಜಿಲ್ಲೆಯ ಹೊಸರಿತ್ತಿಯಲ್ಲಿ ೧೯೦೬ ಜೂನ್ ೬
ರಂದು ಜನಿಸಿದರು. ತಂದೆ ವೀರಪ್ಪ,
ತಾಯಿ ವೀರಮ್ಮ. ಪ್ರಾಥಮಿಕ ಶಿಕ್ಷಣದ
ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಧಾರವಾಡದ
ಕರ್ನಾಟಕ ಹೈಸ್ಕೂಲು ಸೇರಿಕೊಂಡರು. ೧೯೨೪
ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ
ಸ್ವಯಂಸೇವಕರಾಗಿದ್ದರು. ಗಾಂಧೀಜಿಯಿಂದ ಪ್ರಭಾವಿತರಾದ ಗುದ್ಲೆಪ್ಪನವರು ಸ್ವಾತಂತ್ರ್ಯ ಆಂದೋಲನದಲ್ಲಿ ಸೇರ್ಪಡೆಯಾದರು. ೧೯೨೮ರಿಂದ ೧೯೪೨ರ ವರೆಗಿನ
ಅವಧಿಯಲ್ಲಿ ಗುದ್ಲೆಪ್ಪನವರು ಅನೇಕ ವಿಧಾಯಕ ಕಾರ್ಯಕ್ರಮಗಳನ್ನು
ಕೈಗೊಂಡರು. ಹೊಸರಿತ್ತಿಯಲ್ಲಿ ಭಾರತೀಯ ತರುಣ ಸಂಘ,
ಗಾಂಧೀ ಆಶ್ರಮ, ಗ್ರಾಮಿಣ ಮಕ್ಕಳಿಗಾಗಿ
ಪ್ರೌಢಶಾಲೆ ಪ್ರಾರಂಭಿಸಿದರು. ೧೯೩೦ರಲ್ಲಿ ದಂಡಿಯಾತ್ರೆಗೆ ಕರ್ನಾಟಕದ
ಪ್ರಥಮ ಸತ್ಯಾಗ್ರಹಿಯಾಗಿ ಆಯ್ಕೆಯಾದರು. ಉಪ್ಪಿನ ಸತ್ಯಾಗ್ರಹದಲ್ಲಿ ಎರಡು
ಬಾರಿ ಜೈಲುವಾಸ ಅನುಭವಿಸಿದರು. ೧೯೩೨ರಲ್ಲಿ
ಅಸಹಕಾರ ಆಂದೋಲನದಲ್ಲಿ ಎರಡು ವರ್ಷ ಜೈಲುಶಿಕ್ಷೆಗೊಳಗಾದರು.
೧೯೪೨ರಲ್ಲಿ ಚಲೇಜಾವ್ ಚಳುವಳಿಯಲ್ಲಿ ೩
ವರ್ಷ ಜೈಲುವಾಸಕ್ಕೊಳಗಾದರು.
ಗುದ್ಲೆಪ್ಪನವರು
೧೯೪೬ ರಿಂದ ೧೯೬೦ ರವರೆಗೆ
ನಿರಂತರ ೧೫ ವರ್ಷ
ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
೧೯೫೦ ರಿಂದ ೧೯೫೫ ರವರೆಗೆ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ
ಕಾರ್ಯದರ್ಶಿಯಾಗಿದ್ದರು. ೧೯೫೨ರಲ್ಲಿ ಮುಂಬಯಿ ರಾಜ್ಯ
ವಿಧಾನಸಭೆಗೆ ಹಾವೇರಿ ತಾಲೂಕಿನಿಂದ ಅಯ್ಕೆಯಾದರು.೧೯೫೪ರಲ್ಲಿ ಚೀನಾ ಪ್ರವಾಸವನ್ನು
ಮಾಡಿದರು.೧೯೬೦ರಲ್ಲಿ ರಾಷ್ಟ್ರೀಯ ನಿಯೋಗದ
ಪ್ರತಿನಿಧಿಯಾಗಿ ಇಂಗ್ಲಂಡ,ಜರ್ಮನಿ ಹಾಗು
ಇಜಿಪ್ತ ದೇಶಗಳಿಗೆ ಭೆಟ್ಟಿ ನೀದಿದರು.
೧೯೫೬ ರಿಂದ ೧೯೬೧ ರವರೆಗೆ
ಕರ್ನಾಟಕ ರಾಜ್ಯ ಗಾಮೋದ್ಯೋಗ ಮಂಡಳಿಯ
ಅಧ್ಯಕ್ಷರಾಗಿದ್ದರು. ೧೯೬೦ ರಲ್ಲಿ ಮೈಸೂರು
ವಿಧಾನ ಪರಿಷತ್ತಿಗೆ ಆಯ್ಕೆಯಾದರು. ೧೯೬೧ ರಿಂದ ೧೯೬೬
ರವರೆಗೆ ವಿಧಾನ ಪರಿಷತ್ ಸಭಾಪತಿಯಾಗಿದ್ದರು.
೧೯೬೭ ರಲ್ಲಿ ಕರ್ನಾಟಕ ಪ್ರದೇಶ
ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದರು. ೧೯೭೧ರಲ್ಲಿ
ಎರಡನೆ ಅವಧಿಗೆ ವಿಧಾನ ಪರಿಷತ್
ಸಭಾಪತಿಯಾದರು.
ಹಳ್ಳಿಕೇರಿ
ಗುದ್ಲೆಪ್ಪನವರು ೧೫ ಮೇ
೧೯೭೧ ರಂದು ನಿಧನರಾದರು.
Tagaduru Ramachandra Rao (1898 – c. 1989) was a veteran
freedom fighter and social activist from Karnataka (erstwhile Mysore state),
noted as the founder of Swarajya Mandir and Satyagraha Ashram at Tagadur
village in Mysore district in 1921.
Biography:- Ramachandra
Rao was born in a Halenadu Karnataka Brahmin family in a place called Tagaduru
which is in Nanjangud Taluk of Mysore district. His ancestors were very
affluent zamindars, but by the time Ramachandra Rao became a young boy, the family
property was reduced considerably.
Ramachandra Rao was a follower of Mahatma Gandhi, deeply
influenced by Satyagraha movement. He was called "Father of Political
Unrest" in princely Mysore. Ramachandra Rao was arrested for opposing the
visit of the Simon Commission to India in 1928 and became the first political
prisoner in Mysore State. He was popularly known as Mysore Gandhi.
Ramachandra Rao founded the Khaddar Sahakara Sangha in 1925.
Because of his influence and efforts Mahatma Gandhi made his visit to Mysore
State in 1932 while, he visited Tagadur and a village nearby-Badanavalu village
in Nanjangud Taluk of Mysore district.
Apart from freedom movement, Ramachandra Rao took part in
other social and national movements. Some of the movements initiated by him are
as follows.
Cow protection movement in Mysore state
Anti untouchability movement - made many temples to open
their doors to Dalits
Anti conversion drive in Mysore state against the conversion
by missionaries.
Instrumental in admitting many lower caste people into
schools
Ramachandra Rao has written many articles and books. His
autobiography "Nanna alilu seve" gives an account of journey of his
life. Although he could have become minister in the Mysore state after the
freedom of India he was not attracted by power. He opted for a quiet life with
his children and grand children. He lived in Mysore till his death. There is a
circle in Vidyaranyapuram in Mysore which is named after him.
In 1983Ramachandra Rao was conferred with the Jamnalal Bajaj
Award for Application of Science and Technology for Rural Development. GV Iyer
made documentary on Tagaduru Ramachandra Rao during 1980's along with the
family members.
*****
Comments
Post a Comment