Badami Chalukyas Questionnaire for students activities

   ಆತ್ಮೀಯ ವಿದ್ಯಾರ್ಥಿಗಳೇ, ಕೆಳಗಿನ ಪ್ರಶ್ನೆಗಳಿಗೆ ನಿಮಗೆ ಈಗಾಗಲೇ ನೀಡಿರುವ ಅಧ್ಯಯನ ಸಾಮಗ್ರಿಯನ್ನು ಉಪಯೋಗಿಸಿಕೊಂಡು ಉತ್ತರಿಸಿರಿ.


  • ಬಾದಾಮಿ ಚಾಲುಕ್ಯರ ಯಾವ ಅರಸನ ಕಾಲದಿಂದ ಅವರ ಇತಿಹಾಸವು ಆರಂಭವಾಗುತ್ತದೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ?
  • ಬಾದಾಮಿಯ ಪೌರಾಣಿಕ ಹೆಸರೇನು?
  • ಸ್ವತಂತ್ರ ಅದಿಕಾರ ಸ್ಥಾಪನೆಗೆ ಮುನ್ನ ಇವರು ಯಾರ ಸಾಮಂತರಾಗಿದ್ದರು?
  • ಒಂದನೆ ಪುಲಕೇಶಿಯು ಬಾದಾಮಿಯ ಕೋಟೆಯನ್ನು ಕಟ್ಟಿಸಿದ ಕಾಲ ಯಾ
  • ವುದು?
  • ಒಂದನೆ ಪುಲಕೇಶಿಯ ಮಕ್ಕಳಲ್ಲಿ ಹಿರಿಯವನಾದ ಕೀರ್ತಿವರ್ಮನ ತಾಯಿ ಯಾರು?
  •  ೧ನೆ ಕೀರ್ತಿವರ್ಮನ ನಂತರ ಅವನ ಮಕ್ಕಳಲ್ಲಿ ಅಧಿಕಾರಕ್ಕೆ ಬಂದವರು ಯಾರು?
  •  ಕೆಳಗಿನ ಯಾವ ಅರಸನನ್ನು ಮಂಗಳೇಶನು ಸೋಲಿಸಿದ್ದನು?
  •  ಮಂಗಳೇಶನು ಬಾದಾಮಿಯಲ್ಲಿ ನಿರ್ಮಿಸಿದ ಗುಹಾಂತರ ದೇವಾಲಯ ಯಾವುದು?
  •  ದಕ್ಷಿಣ ಭಾರತದಲ್ಲಿ ಮೊದಲು ಗುಹಾಂತರ ದೇವಾಲಯಗಳ ನಿರ್ಮಾಣವನ್ನು ಆರಂಭಿಸಿದವರು ಯಾರು?
  •  ಕರ್ನಾಟಕದ ಮೊದಲ ತ್ರಿಕೂಟ ದೇವಾಲಯ ಇಂದು ಯಾವ ಹೆಸರಿನಿಂದ ಕರೆಯಲ್ಪಡುತ್ತದೆ?
  •  “ಕಾಂಚಿಯಾನ್ಮೂಮೆ ಪರಾಜಿಸಿದೊರ್ ಮಾತು ಯಾರಿಗೆ ಅನ್ವಯಿಸುತ್ತದೆ?
  •  ವಿನಯಾದಿತ್ಯನ ಕಾಲದಲ್ಲಿ ನಡೆದ ಉತ್ತರ ಭಾರತದ ದಂಡಯಾತ್ರೆಯ ನೇತೃತ್ವವನ್ನು ವಹಿಸಿದ್ದವರು ಯಾರು?
  •  ಕನ್ನಡದ ಮೊದಲ ತ್ರಿಪದಿ ಪದ್ಯಗಳು ಯಾವ ಶಾಸನದಲ್ಲಿ ಕಂಡುಬರುತ್ತವೆ?
  •  ಇಮ್ಮಡಿ ಪುಲಕೇಶಿಯ ಆರಂಭದ ಹೆಸರು ಯಾವುದು?
  •  ಗೋವಿಂದ ಮತ್ತು ಅಪ್ಪಾಯಿಕ - ಇಬ್ಬರಲ್ಲಿ ಯಾರು ಇಮ್ಮಡಿ ಪುಲಕೇಶಿಯೊಂದಿಗೆ ಒಪ್ಪಂದ ಮಾಡಿಕೊಂಡರು?
  •  ಇಮ್ಮಡಿ ಪುಲಕೇಶಿಯು ಯಾವ ಮನೆತನದ ರಾಜಕುಮಾರಿಯನ್ನು ವರಿಸಿದ್ದನು?
  • ನರ್ಮದಾ ನದಿ ಕಾಳಗದ ಕುರಿತು ನೂತನ ಮಾಹಿತಿ ನೀಡುವ ಶಾಸನ ಯಾವುದು?
  •  ವಾತಾಪಿಕೊಂಡ ಎಂಬ ಬಿರುದು ಧರಿಸಿದ ಪಲ್ಲವ ನೃಪ ಯಾರು?
  •  ೨ನೆ ವಿಕ್ರಮಾದಿತ್ಯನು ಪಟ್ಟಾಭಿಷಿಕ್ತನಾದ ಮಾಹಿತಿಯು ಯಾವ ಶಾಸನದಿಂದ ತಿಳಿದುಬರುತ್ತದೆ?
  •  ನೆರೂರು ಶಾಸನವನ್ನು ಬರೆಯಿಸಿದ ಚಾಲುಕ್ಯರ ರಾಣಿ ಯಾರು?
  •  ಪಲ್ಲವರಿಂದ ಚ್ಯುತಿಗೊಳಗಾದ ಚಾಲುಕ್ಯರ ಕೀರ್ತಿಯನ್ನು ಮರುಸ್ಥಾಪಿಸಿದವರು ಯಾರು?
  •  ಇಮ್ಮಡಿ ವಿಕ್ರಮಾದಿತ್ಯನು ಪಲ್ಲವರ ಯಾವ ದೇವಾಲಯದಲ್ಲಿ ತನ್ನ ವಿಜಯದ ಶಾಸನವನ್ನು ಬರೆಯಿಸಿದ್ದಾನೆ?
  •  ಕುಂಕುಮ ಮಹಾದೇವಿಯು ಕೆಳಗಿನ ಯಾವ ಸ್ಥಳದಲ್ಲಿ ಜೈನರಿಗಾಗಿ ಬಸದಿಯೊಂದನ್ನು ನಿರ್ಮಿಸಿದಳು?
  •  ವಿಜಯ ಭಟ್ಟಾರಿಕೆ ರಚಿಸಿದ ಕೃತಿ ಯಾವುದು?
  •  ಯಾವ ಬಂದರಿನ ಮೇಲೆ ದಾಳಿ ಮಾಡಿದ ಅರಬ್ಬರನ್ನು ಇಮ್ಮಡಿ ಪುಲಕೇಶಿಯ ಕಾಲದಲ್ಲಿ ಹಿಮ್ಮೆಟ್ಟಿಸಲಾಯಿತು?
  •  ಗುಜರಾತಿನ ಭಾಗದಲ್ಲಿ ಅರಬ್ಬರನ್ನು ಸದೆಬಡಿದ ಚಾಲುಕ್ಯರ ಮಾಂಡಲೀಕ ಅವನಿಜಾಶ್ರಯ. ಯಾವ ಚಾಳುಕ್ಯ ಅರಸನ ಕಾಲದಲ್ಲಿ ಘಟನೆ ನಡೆಯಿತು?
  •  ವೈಷ್ಣವ ಮತಾವಲಂಬಿಗಳಾಗಿದ್ದ ಚಾಲುಕ್ಯ ಅರಸರು ಯಾರ ಕಾಲದಲ್ಲಿ ಶೈವ ಮತವನ್ನು ಸ್ವೀಕರಿಸಿದರು?
  • ಚಾಲುಕ್ಯರ ಸೇನೆಗೆ ಇದ್ದ ಹೆಸರೇನು?
  • ಇಮ್ಮಡಿ ಕೀರ್ತಿವರ್ಮನು ಯಾರಿಂದ ಸೋತು ಮನೆತನದ ಅಂತ್ಯಕ್ಕೆ ಕಾರಣನಾದನು?
  •  ತಮ್ಮ ಮಾಂಡಲೀಕನಾದ ದಂತಿದುರ್ಗನಿಂದ ಸೋಲನುಭವಿಸಿದ ಚಾಲುಕ್ಯರ ಅರಸು ಯಾರು?

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources