ತುಘಲಕ್ ಸಂತತಿಯ ಅವನತಿ & ಸೈಯ್ಯದ್ ಸಂತತಿಯ ಆರಂಭ
ನಂತರದ ತುಘಲಕ್ ಸುಲ್ತಾನರು.
ತುಘಲಕ್
ಶಾ: ೧೩೮೮-೮೯:- ಫಿರೋಜ
ಶಾನ ಮೊಮ್ಮೊಗ. ಸುಖಲೋಲುಪನಾದ ಕಾರಣ ಕೊಲೆಗೀಡಾದನು.
ಅಬೂಬಕರ್: ೧೩೮೯-೯೦:- ಅವ್ಯವಸ್ಥೆ ಸರಿಪಡಿಸಲು ಪ್ರಯತ್ನಿಸಿದನಾದರೂ
ಫಿರೋಜ್‌ನ ಮಕ್ಕಳ ವಿರೋಧದ ಕಾರಣ ಸಿಂಹಾಸನ ತ್ಯಜಿಸಿದನು.
ನಾಸಿರುದ್ದೀನ್
ಬಿನ್ ಫಿರೋಜ್ ೧೩೯೦=೯೪:-
ಫಿರೋಜನ ಕಿರಿಯ ಮಗ. ದೊ-ಅಬ್ ದಂಗೆ ಅಡಗಿಸಿದನು. ಕೊನೆಗಾಲದಲ್ಲಿ ಅನಾರೋಗ್ಯಪೀಡಿತನಾಗಿ ಜನವರಿ ೧೫,
೧೩೯೪ ರಲ್ಲಿ ಮರಣ.
ಹುಮಾಯೂನ್ ೧೩೯೪: ಏನನ್ನೂ ಸಾಧಿಸದೆ ಮರಣ ಹೊಂದಿದನು.
ಮಹಮದ್ ನಾಸೀರುದ್ದೀನ್ ೧೩೯4=೧೪೧೩:- ತೈಮೂರನ ದಾಳಿಯ ಕಾಲಕ್ಕೆ ಪಲಾಯನ.
ಮತ್ತೆ ೧೪೦೧ ರಲ್ಲಿ ದೆಹಲಿಗೆ ವಾಪಾಸ್ಸು. ಮಾಲು ಇಕ್ಬಾಲ್ ತಾನೇ ಸರ್ವಾಧಿಕಾರಿಯಂತೆ ಆಡಳಿತ ಸೂತ್ರಗಳನ್ನು
ನಿರ್ವಹಿಸುತ್ತಿದ್ದ ಕಾರಣ ಮಹಮದ್ ನಾಸಿರುದ್ದೀನ್ ರಾಜಧಾನಿ ತೊರೆದನು. ಇಕ್ಬಾಲ್ ಮುಲ್ತಾನದ ಕಿಜರ್‌ಖಾನನೊಂದಿಗೆ
ನಡೆದ ಹೋರಾಟದಲ್ಲಿ ಸತ್ತನು. ಅವನ ಮರಣದ ನಂತರ ದೌಲತ್‌ಖಾನ್ ಇವನಿಗೆ ದೆಹಲಿ ಗದ್ದುಗೆ ಪಡೆಯಲು ಸಹಾಯ
ಮಾಡಿದನು. 1413 ರಲ್ಲಿ ಸುಲ್ತಾನನು ಮಡಿದ ನಂತರ ಅಮೀರರ ಅಭಿಪ್ರಾಯದಂತೆ ದೌಲತ್‌ಖಾನ್ ತಾನೇ ಸುಲ್ತಾನನೆಂದು
ಘೋಷಿಸಿಕೊಂಡನು. ಆದರೆ ಇನ್ನಿತರ ಕೆಲವರು ಮುಲ್ತಾನದ ಕಿಜರ್‌ಖಾನನನ್ನು ಬೆಂಬಲಿಸಿದ ಕಾರಣ ಇಬ್ಬರ ನಡುವೆ
ನಡೆದ ಸಂಘರ್ಷದಲ್ಲಿ ದೌಲತ್‌ಖಾನ್ ಸತ್ತು ಕಿಜರ್‌ಖಾನ್ ದೆಹಲಿ ಸಿಂಹಾಸನ ಏರಿದನು. ಹೀಗೆ ಮಹಮದ್
ನಾಸಿರುದ್ದೀನನ ಮರಣದೊಂದಿಗೆ ತುಘಲಕ್ ಸಂತತಿ ಅಂತ್ಯಗೊಂಡಿತು.
ತುಘಲಕ್ ಸಂತತಿಯ ನಾಶಕ್ಕೆ ಕಾರಣಗಳು:
೧. ಮಹಮದ್ ಬಿನ್
ತುಘಲಕ್‌ನ ಆಡಳಿತದ ಪ್ರಭಾವ.
೨. ಫಿರೋಜ್
ಶಾ ತುಘಲಕನ ಸೈನಿಕ ಅಸಮರ್ಥತೆ.
೩. ಅಸಮರ್ಥ ಉತ್ತರಾಧಿಕಾರಿಗಳು.
೪. ಫಿರೋಜನ ಮತಾಂಧತೆ
ಮತ್ತು ಗುಲಾಮ ಪದ್ಧತಿಯ ಪೋಷಣೆ
೫. ತೈಮೂರನ ದಾಳಿ
ಸೈಯ್ಯದ್ ಸಂತತಿ
ಅಹಮದ್ ಸರ್‌ಹಿಂದಿಯ
ತಾರೀಕ್ ಇ ಮುಬಾರಕ್ ಶಾಹಿ ಕೃತಿಯಿಂದ
ಈ ಮನೆತನದ ಬಗ್ಗೆ ಐತಿಹಾಸಿಕ ಮಾಹಿತಿಗಳು ಲಭ್ಯ.
ಸೈಯ್ಯದ್ ಸಂತತಿಯವರು ಪ್ರವಾದಿ ಮಹಮದ್ ಪೈಗಂಬರನ ಸಂಬಂಧಿಗಳೆಂದು
ಹೇಳಲಾಗಿದೆ. ಸರ್‌ಹಿಂದಿಯ ತಾರೀಕ್ ಇ ಮುಬಾರಕ್ ಶಾಹಿಯಲ್ಲಿ ಇದಕ್ಕೆ ಮಾಹಿತಿ ಲಭ್ಯ. ಅದರ ಪ್ರಕಾರ,
ಒಮ್ಮೆ ಸೈಯ್ಯದ್ ಮುಖ್ಯಸ್ಥನಾದ ಜಲಾಲುದ್ದೀನ್ ಭುಕಾರಿ ಮುಲ್ತಾನದ ರಾಜ್ಯಪಾಲನಾಗಿದ್ದ ನಾಜೀರ್
ಉಲ್ ಮುಲ್ಕ್‌ನಲ್ಲಿಗೆ ಭೇಟಿ ನೀಡಿದ್ದನು. ಆಗ ಏರ್ಪಡಿಸಿದ್ದ ಔತಣಕೂಟದಲ್ಲಿ ರಾಜ್ಯಪಾಲನು ಭುಕಾರಿಯ
ಕೈ ತೊಳೆಯುವಂತೆ ಕಿಜರ್ಖಾನನ ಸೋದರನಿಗೆ ಹೇಳಿದನು. ಇದನ್ನು ಕೇಳಿದ ಭುಕಾರಿಯು “ಅವನು ಸೈಯ್ಯದ್‌ನು,
ಅವನಿಂದ ಇಂತಹ ಕೆಲಸ ಮಾಡಿಸಬಾರದು” ಎಂದನಂತೆ. ಇದರಿಂದ ಕಿಜರ್‌ಖಾನ್‌ನು ಸೈಯ್ಯದ್ ವಂಶಕ್ಕೆ ಸೇರಿದವನೆಂದು
ತಿಳಿದುಬರುತ್ತದೆ. ಆದರೆ ಸರ್‌ಹಿಂದಿಯ ವಿವರಣೆ ಮಾತ್ರ ಈ ಬಗ್ಗೆ ಲಭ್ಯವಿರುವುದು.
ಕಿಜರ್‌ಖಾನನ ತಂದೆ ಮಲಿಕ್ ಸುಲೇಮಾನ್. ಅವನು ಮುಲ್ತಾನದ
ರಾಜ್ಯಪಾಲನಾಗಿದ್ದನು. ಅವನ ಮರನದ ನಂತರ ಮಗ ಕಿಜರ್‌ಖಾನನು ಅಧಿಕಾರಕ್ಕೆ ಬಂದನು. ಆದರೆ ಅವನು ದೀಪಾಳಪುರದ
ಅಧಿಕಾರಿಯೊಂದಿಗೆ ಕಲಹದಲ್ಲಿ ತೊಡಗಿದ್ದರಿಂದ ಅವನನ್ನು ಮುಲ್ತಾನದ ಆಡಳಿತಗಾರನ ಹುದ್ದೆಯಿಂದ ವಜಾ ಮಾಡಲಾಯಿತು.
ಅದೇ ಸಮಯಕ್ಕೆ ಭಾರತದ ಮೇಲೆ ದಾಳಿ ಮಾಡಲು ಬಂದಿದ್ದ ತೈಮೂರ್ ಲಂಗನ ಸೇವೆಗೆ ಕಿಜರ್‌ಖಾನ್ ಸೇರಿಕೊಂಡನು.
ತೈಮೂರ್ ದಾಳಿಯ ನಂತರ ತನ್ನ ದೇಶಕ್ಕೆ ವಾಪಾಸ್ಸು ಹೋಗುವಾಗ ಕಿಜರ್‌ಖಾನನನ್ನು ಮುಲ್ತಾನದ ರಾಜ್ಯಪಾಲನಾಗಿ
ನೇಮಿಸಿದನು. ಇತ್ತ ದೆಹಲಿಯಲ್ಲಿ ತುಘಲಕ್ ಸುಲ್ತಾನ ಮಹಮದ್ ನಾಸೀರುದ್ದೀನ್ ಮತ್ತೆ ತನ್ನ ಮಂತ್ರಿ
ಮಾಲು ಇಕ್ಬಾಲನ ನೆರವಿನಿಂದ ಪಟ್ಟಕ್ಕೆ ಬಂದನಾದರೂ, ಮಾಲು ಇಕ್ಬಾಲ್ ಸರ್ವಾಧಿಕಾರಿಯಂತೆ ವರ್ತಿಸತೊಡಗಿದನು.
ಇಕ್ಬಾಲನು ದಂಗೆಗಳನ್ನು ಅಡಗಿಸಲು ಮತ್ತು ಕೆಲವು ನೆರೆ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದನು.
ಅಲ್ಲದೇ ಮುಲ್ತಾನದಲ್ಲಿ ಆಳುತ್ತಿದ್ದ ಕಿಜರ್ಖಾನನೊಂದಿಗೂ ಸಹಾ ಸಂಘರ್ಷಗಳಲ್ಲಿ ತೊಡಗಿದನು. ಅವನ ಮರಣದ
ನಂತರ ಮಹಮದ್ ನಾಸೀರುದ್ದೀನನು ದೌಲತ್‌ಖಾನ್ ಎಂಬ ಅಮೀರನ ನೆರವಿನಿಂದ ದೆಹಲಿ ಗದ್ದುಗೆ ನಿರ್ವಹಿಸುತ್ತಿದ್ದನು.
ಆದರೆ ಅವನು 1412 ರಲ್ಲಿ ಮರಣ ಹೊಂದಿದಾಗ, ದೌಲತ್‌ಖಾನನು ಅಮೀರರು ಮತ್ತು ಸರದಾರರ ಸಲಹೆಯಂತೆ ತಾನೇ
ಸುಲ್ತಾನನೆಂದು ಗೋಷಿಸಿಕೊಂಡನು. ಇತ್ತ ಮುಲ್ತಾನದ ರಾಜ್ಯಪಾಲನಾಗಿದ್ದ ಕಿಜರ್‌ಖಾನನಿಗೂ ಅವನ ಬೆಂಬಲಿಗರು
ದೆಹಲಿ ವಶಪಡಿಸಿಕೊಳ್ಳಲು ಬೆಂಬಲ ನೀಡಿ ಒತ್ತಾಯಿಸಿದರು. ಹೀಗೆ ಪ್ರೇರಿತನಾದ ಕಿಜರ್‌ಖಾನನು 1414 ರಲ್ಲಿ
ದೌಲತ್‌ಖಾನನನ್ನು ಸೋಲಿಸಿ ದೆಹಲಿ ಸಿಂಹಾಸನ ಏರಿದನು. ಇದರಿಂದ ಸೈಯ್ಯದ್ ಸಂತತಿಯವರ ಆಡಳಿತ ದೆಹಲಿಯಲ್ಲಿ
ಆರಂಭವಾಯಿತು.
ಕಿಜರ್‌ಖಾನನು ತಾನು ಸಿಂಹಾಸನದಲ್ಲಿ ಕುಳಿತನಾದರೂ ಸ್ವತಂತ್ರ
ಸುಲ್ತಾನನಂತೆ ವರ್ತಿಸಲಿಲ್ಲ. ಅವನು ಮೊದಲು ತೈಮೂರನಿಗೂ ಮತ್ತು ಅವನ ಮರಣದ ನಂತರ ಅವನ ಮಗನಿಗೂ ನಿಷ್ಠನಾಗಿ
ಉಳಿದನು. ತನ್ನ ಹೆಸರಿನಲ್ಲಿ ಯಾವುದೇ ನಾಣ್ಯಗಳನ್ನು ಅವನು ಟಂಕಿಸಲಿಲ್ಲ. ಇವನ ಕಾಲದಲ್ಲಿ ತುಘಲಕ್
ಕಾಲದ ನಾಣ್ಯಗಳೇ ಮುಂದುವರಿದವು. ಇವನು ತನ್ನ ಆಡಳಿತಾವಧಿಯಲ್ಲಿ ಅನೇಕ ದಂಗೆಗಳನ್ನು ಎದುರಿಸಬೇಕಾಯಿತು.
1415 ರಲ್ಲಿ ಕಾಥೇಹಾರದ ಹರಿಸಿಂಗನ ದಂಗೆಯನ್ನು ಇವನ ಪ್ರಧಾನಿ ತಾಜ್ ಉಲ್ ಮುಲ್ಕ್‌ನು ಅಡಗಿಸಿದನು.
ಬದಾಯೂನದ ಮಹಮದ್ ದಂಗೆಯನ್ನು ಅಡಗಿಸಲಾಯಿತು. 1416 ರಲ್ಲಿ ಗ್ವಾಲಿಯರ್ ಮತ್ತು ಬಯಾನಗಳನ್ನು ವಶಪಡಿಸಿಕೊಳ್ಳಲಾಯಿತು.
ಅದೇ ವರ್ಷ ಮಗ ಮುಬಾರಕ್ ಶಾನನ್ನು ಪಶ್ಚಿಮದ ಗಡಿಗಳ ರಕ್ಷಣೆಗೆ ನೇಮಿಸಲಾಯಿತು. 1419 ರಲ್ಲಿ ಒಮ್ಮೆ
ಇವನನ್ನು ಕೊಲ್ಲುವ ಯತ್ನ ನಡೆಸಿದವರನ್ನು ಸೆರೆ ಹಿಡಿದು ಮರಣದಂಡನೆಗೆ ಗುರಿಪಡಿಸಿದನು. 1421 ರಲ್ಲಿ
ಇವನ ನಿಷ್ಠ ಮಂತ್ರಿ ತಾಜ್ ಉಲ್ ಮುಲ್ಕ್‌ನು ಮರಣ ಹೊಂದಿದನು. ಅದೇ ವರ್ಷ ಸುಲ್ತಾನನೂ ಸಹಾ ಗತಿಸಿದನು.
ಕಿಜರ್‌ಖಾನನು ತಾನು ಸಾಯುವ ಮುನ್ನ ಮಗ ಮುಬಾರಕ್ ಶಾನನ್ನು
ಉತ್ತರಾದಿಕಾರಿಯನ್ನಾಗಿ ನೇಮಿಸಿದ್ದರಿಂದ ಎಲ್ಲರೂ ಅವನ ಅಧಿಕಾರವನ್ನು ಒಪ್ಪಿಕೊಂಡರು. ಇವನು ತನ್ನ
ತಂದೆಯ ಕಾಲದಲ್ಲಿ ಅಪಾರ ಆಡಳಿತದ ಅನುಭವ ಪಡೆದಿದ್ದನು. ತಾರೀಕ್ ಇ ಮುಬಾರಕ್ ಶಾಹಿ ಗ್ರಂಥವು ಇವನ
ಚರಿತ್ರೆಯ ಮಾಹಿತಿ ಒದಗಿಸುತ್ತದೆ. ಇವನು ತನ್ನ ತಂದೆಯಂತಲ್ಲದೇ ಸ್ವತಂತ್ರ ಮನೋಭಾವದವನಾಗಿದ್ದನು ಆದ್ದರಿಂದ
ತಾನು “ಶಾ” ಎಂಬ ಬಿರುದು ಧರಿಸಿದನು. ತೈಮೂರನ ವಂಶಸ್ಥರಿಗೆ ನೀಡುತ್ತಿದ್ದ ವಾರ್ಷಿಕ ಕಪ್ಪವನ್ನು ನಿಲ್ಲಿಸಿದನು.
ನಾಣ್ಯಗಳನ್ನು ತನ್ನ ಹೆಸರಿನಲ್ಲಿ ಟಂಕಿಸಿದನು. ಆಡಳಿತದಲ್ಲಿ ಹಿಂದೂಗಳಿಗೂ ಅವಕಾಶ ನೀಡಿದನು. ಕೋಕಾರರ
ನಾಯಕ ಜಸ್ರಾತ್ ಎಂಬುವನು ಪಂಜಾಬಿನಲ್ಲಿದ್ದ ರೂಪರ್ ಮತ್ತು ಲೂಧಿಯಾನಗಳ ನಡುವಣ ಪ್ರದೇಶದಲ್ಲಿ ಲೂಟಿ
ಮತ್ತು ಸುಲಿಗೆಯಲ್ಲಿ ತೊಡಗಿದ್ದನು. ಸುಲ್ತಾನನು ಅವನ ದಂಗೆಯನ್ನು ಅಡಗಿಸಲು ಅನೇಕ ಸಲ ಪ್ರಯತ್ನಿಸಿದನು.
ಆದರೆ ಜಸ್ರಾತನು ಸ್ಥಳದಿಂದ ಸ್ಥಳಕ್ಕೆ ನೆಲೆ ಬದಲಾಯಿಸುತ್ತಾ ಲಾಹೋರ್ ಕಡೆಗೆ ಹೋದನು. ಅಲ್ಲಿಗೂ ಸುಲ್ತಾನನು
ತೆರಳಿ ಅಲ್ಲಿನ ಕೋಟೆಯನ್ನು ಭದ್ರಪಡಿಸಿ ದಕ್ಷ ಅಧಿಕಾರಿಯನ್ನು ಅದರ ಆಡಳಿತಕ್ಕೆ ನೇಮಿಸಿದನು. ಹೀಗೆ
ಜಸ್ರಾತನ ಪ್ರಬಲ ವಿರೋಧವನ್ನು ಎದುರಿಸಿ ಸುಲ್ತಾನ ಪದವಿಯನ್ನು ರಕ್ಷಿಸಿಕೊಂಡನು.
ಇವನು ಪೋಲಾದ್‌ನ
ದಂಗೆಯನ್ನು ಯಶಸ್ವಿಯಾಗಿ ಅಡಗಿಸಿ ಅವನನ್ನು ಮರಣದಂಡನೆಗೆ ಗುರಿಪಡಿಸಿದನು.
1432 ರಲ್ಲಿ
ಮೇವಾತಿಯನ್ನು ವಶಪಡಿಸಿಕೊಂಡನು.
ಮರಣ: ಮುಬಾರಕ್
ಶಾನನ್ನು ಅವನೇ ನಿರ್ಮಿಸಿದ ಮುಬಾರಕಾಬಾದ್‌ನಲ್ಲಿ ಫೆಬ್ರವರಿ, 1434 ರಲ್ಲಿ ಸಿಂಧಪಾಲ ಮತ್ತು ರಾಣೊ
ಎಂಬುವರು ಕೊಲೆ ಮಾಡಿದರು.
ಮುಬಾರಕ್ ಶಾನ
ಮರಣದ ನಂತರ ಅವನ ಅಣ್ಣನ ಮಗ ಮಹಮದ್ ಶಾನು ಅಧಿಕಾರಕ್ಕೆ ಬಂದನು. ಇವನ ಪೂರ್ಣ ಹೆಸರು ಮಹಮದ್ ಫರೀದ್‌ಖಾನ್.
ಇವನನ್ನು ಮುಬಾರಕ್ ಶಾನು ದತ್ತು ಸ್ವೀಕರಿಸಿದ್ದನು. ಇವನ ಕಾಲದಲ್ಲಿ ಅನೇಕ ಆಂತರಿಕ ಕಲಹ ಮತ್ತು ಬಾಹ್ಯ
ದಾಳಿಗಳಿಂದ ಅರಾಜಕತೆ ಉಂಟಾಗಿದ್ದರೂ ಇವನು ಸುಖಲೋಲುಪನಾಗಿ ಆಡಳಿತವನ್ನು ನಿರ್ಲಕ್ಷಿಸಿದನು. ಇವನ ಸರ್‌ಹಿಂದ್‌ದ
ಪ್ರಾಂತ್ಯಾದಿಕಾರಿಯಾಗಿದ್ದ ಬಹಾಲೂಲ್ ಲೋದಿಯು ಸ್ವತಂತ್ರ ಘೋಷಿಸಿಕೊಂಡನು. ಅಲ್ಲದೇ 1443 ರಲ್ಲಿ
ಒಮ್ಮೆ ಇವನನ್ನು ಪದಚ್ಯುತನಾಗಿ ಮಾಡಲು ಯತ್ನಿಸಿ ವಿಫಲನಾದನು. ಇವನು ತನ್ನ ಮಗನನ್ನು ಉತ್ತರಾದಿಕಾರಿಯೆಂದು
ನೇಮಿಸಿ ಇಹಲೋಕ ತ್ಯಜಿಸಿದನು.
ಅಲ್ಲಾವುದ್ದೀನನು
ಅಸಮರ್ಥ ಸುಲ್ತಾನನಾಗಿದ್ದು, ಸುಖಲೋಲುಪನಾಗಿದ್ದನು. ಇವನು ಬಹಾಲೋಲ್ ಲೋದಿಯ ಭಯದ ಕಾರಣ 1447 ರಲ್ಲಿ
ದೆಹಲಿಯನ್ನು ತೊರೆದು ಬದಾಯೂನದಲ್ಲಿ ನೆಲೆಸಿದನು. ಇದರ ಸದುಪಯೋಗವನ್ನು ಪಡೆದ ಲೋದಿಯು 1451 ರಲ್ಲಿ
ದೆಹಲಿಯನ್ನು ವಶಪಡಿಸಿಕೊಂಡು ಲೋದಿ ಸಂತತಿಯನ್ನು ಸ್ಥಾಪಿಸಿದನು. ಆದರೆ ಅಲ್ಲಾವುದ್ದೀನನು 1478 ರಲ್ಲಿ
ತಾನು ಸಾಯುವವರೆಗೂ ಜೀವಿಸಿದ್ದನು.
*****
Comments
Post a Comment