ರಾಷ್ಟ್ರಕೂಟರ ಆರಂಭ, ಸ್ಥಾಪಕ, ಆಧಾರಗಳು, ಧೃವ & ಗೋವಿಂದರ ಕುರಿತ ಪ್ರಶ್ನಾವಳಿ.
ಆತ್ಮೀಯ ವಿದ್ಯಾರ್ಥಿಗಳೇ, ತರಗತಿಯಲ್ಲಿ ಹಾಜರಿರುವ ಎಲ್ಲಾ ವಿದ್ಯಾರ್ಥಿಗಳಲ್ಲಿ ಒಟ್ಟು ಐದು ಗುಂಪುಗಳನ್ನಾಗಿ ಮಾಡಿಕೊಂಡು, ನಿಮಗೆ ಈಗಾಗಲೇ ನೀಡಿರುವ ರಾಷ್ಟ್ರಕೂಟರ ಅಧ್ಯಯನ ಸಾಮಗ್ರಿಯನ್ನು ಬಳಸಿಕೊಂಡು ಪ್ರತಿ ಗುಂಪು ತಲಾ ಹತ್ತು ಪ್ರಶ್ನೆಗಳಿಗೆ ಉತ್ತರಗಳನ್ನು ಸಿದ್ಧಪಡಿಸಿರಿ:-
- ರಾಷ್ಟ್ರಕೂಟರ ಆಳ್ವಿಕೆಯ ಶತಮಾನಗಳು ಯಾವುವು?
- ರಾಷ್ಟ್ರಕೂಟರ ಇತಿಹಾಸ ರಚನೆಗೆ ಲಭ್ಯವಿರುವ ಶಾಸನಗಳು ಯಾವುವು?
- ರಾಷ್ಟ್ರಕೂಟರ ಇತಿಹಾಸ ರಚನೆಗೆ ಲಭ್ಯವಿರುವ ಸಾಹಿತ್ಯಾಧಾರಗಳು ಯಾವುವು?
- ಕರ್ನಾಟಕವನ್ನಾಳಿದ ರಾಷ್ಟ್ರಕೂಟರ ರಾಜಧಾನಿ ಯಾವುದಾಗಿತ್ತು?
- ಕರ್ನಾಟಕದಲ್ಲಿ ರಾಷ್ಟ್ರಕೂಟರ ಮನೆತನ ಸ್ಥಾಪಿಸಿದವನು ಯಾರು?
- ಅವನು ಯಾರ ಮಾಂಡಲೀಕನಾಗಿದ್ದನು?
- ರಾಷ್ಟ್ರಕೂಟರ ರಾಜಲಾಂಛನ ಯಾವುದು?
- ಮಾನ್ಯಪುರದ ರಾಷ್ಟ್ರಕೂಟರಿಗೂ ಮಾನ್ಯಕೇಟದ ರಾಷ್ಟ್ರಕೂಟರಿಗೂ ಇರುವ
ವ್ಯತ್ಯಾಸವೇನು?
- ರಾಷ್ಟ್ರಕೂಟರ ಯಾದವ ಕುಲದ ಮೂಲವನ್ನು ಏಕೆ ತಿರಸ್ಕರಿಸಲಾಗಿದೆ?
- ರಾಷ್ಟ್ರಕೂಟರ ಬಗೆಗಿನ R.G. ಭಂಡಾರ್ಕರ್ ಅವರ
ಅಭಿಪ್ರಾಯವನ್ನು ಏಕೆ ನಿರಾಕರಿಸಲಾಗಿದೆ?
- ಡಾ. A C ಬರ್ನೆಲ್
ಅವರು ಯಾವ ಮೂಲವನ್ನು ಪ್ರತಿಪಾದಿಸಿದ್ದಾರೆ?
- ಡಾ. ಪ್ಲೀಟ್ ಅವರ ಪ್ರಕಾರ ರಾಷ್ಟ್ರಕೂಟರ ಮೂಲ ಯಾವುದು?
- ಡಾ. C.V. ವೈದ್ಯ ಅವರ ಪ್ರತಿಪಾದನೆ ಯಾವುದು? ಮತ್ತು ಏಕೆ ನಿರಾಕರಿಸಲಾಗಿದೆ?
- ಕನ್ನಡ ಮೂಲದ ಪ್ರತಿಪಾದಕರು ಯಾರು?
- ಕನ್ನಡ ಮೂಲಕ್ಕೆ ಅವರು ನೀಡುವ ಆಧಾರಗಳು ಯಾವುವು?
- ರಾಷ್ಟ್ರಕೂಟ ಪದ ಯಾವುದರ ಸೂಚಕವಾಗಿದೆ??
- ಕೂಟ ಎಂಬ ಪದವು ಏನನ್ನು ಸೂಚಿಸುತ್ತದೆ?
- ಸ್ವತಂತ್ರ ಅಧಿಕಾರ ಸ್ಥಾಪಿಸುವ ಮುನ್ನ ದಂತಿದುರ್ಗನು ಯಾವ ಸ್ಥಾನವನ್ನು ಅಲಂಕರಿಸಿದ್ದನು?
- ರಾಷ್ಟ್ರಕೂಟರ ಮೂಲನೆಲೆ ಯಾವುದಾಗಿತ್ತು?
- ಅವರ ಮೂಲನೆಲೆ ಇಂದು ಎಲ್ಲಿದೆ?
- ಐ. ಮ.
ಮುತ್ತಣ್ಣ ಅವರ ಹೇಳಿಕೆ ಏನನ್ನು ಸೂಚಿಸುತ್ತದೆ?
- ರಾಷ್ಟ್ರಕೂಟರ ಆರಂಭಿಕರ ಹೆಸರುಗಳೇನು?
- ರಾಷ್ಟ್ರಕೂಟರ ಆರಂಭಿಕರು ಯಾರ ಅಧೀನಾಧಿಕಾರಿಗಳಾಗಿದ್ದರು?
- ರಾಷ್ಟ್ರಕೂಟರ ಬಗೆಗಿನ ಶಾಸನಾಧಾರಗಳನ್ನ ಪಟ್ಟಿ ಮಾಡಿರಿ.
- ಅವರ ಕುರಿತ ಸಾಹಿತ್ಯಾಧಾರಗಳು ಯಾವುವು?
- ಇವರ ಬಗ್ಗೆ ಆಧಾರ ಒದಗಿಸುವ ವಿದೇಶೀ ಬರವಣಿಗೆಗಳು ಯಾವುವು?
- ದಂತಿದುರ್ಗನು ತನ್ನ ಮೂಲವನ್ನು ಶಾಸನಗಳಲ್ಲಿ ಏನೆಂದು ಹೇಳಿಕೊಂಡಿದ್ದಾನೆ?
- ಅವನ ಕಾಲಾವಧಿ ತಿಳಿಸಿರಿ.
- ದಂತಿದುರ್ಗನು ಚಾಲುಕ್ಯರಿಗೆ ಹೇಗೆ ಸೇವೆ ಸಲ್ಲಿಸಿದ್ದನು?
- ಹಿರಣ್ಯಗರ್ಭದಾನ ಯಾಗವನ್ನು ಎಲ್ಲಿ ಆಚರಿಸಿದ್ದನು?
- ಹಿರಣ್ಯಗರ್ಭದಾನ ಯಾಗವನ್ನು ಯಾವ ಸಂದರ್ಭದಲ್ಲಿ ಆಚರಿಸಿದ್ದನು?
- ದಂತಿದುರ್ಗನು ಚಾಲುಕ್ಯರಿಂದ ಸ್ವತಂತ್ರಗೊಂಡ ಕಾಲಾವದಿ ಯಾವುದು?
- ದಂತಿದುರ್ಗನು ಯಾವ ಬಿರುದುಗಳಿಗೆ ಪಾತ್ರನಾಗಿದ್ದನು?
- ದಂತಿದುರ್ಗನಿಗೆ ಎಷ್ಟು ಜನ ಗಂಡುಮಕ್ಕಳಿದ್ದರು?
- ದಂತಿದುರ್ಗನ ನಂತರ ಅಧಿಕಾರಕ್ಕೆ ಬಂದವರು ಯಾರು?
- ಒಂದನೆ ಕೃಷ್ಣ ಮತ್ತು ದಂತಿದುರ್ಗನ ನಡುವಿನ ಸಂಬಂಧವೇನಾಗಿತ್ತು?
- ಒಂದನೆ ಕೃಷ್ಣನ ನಂತರ ಅದಿಕಾರಕ್ಕೆ ಬಂದವರು ಯಾರು?
- ಧೃವನು ತನ್ನ ಸೋದರನನ್ನು ಪದಚ್ಯುತನನ್ನಾಗಿಸಲು ಕಾರಣವೇನು?
- ಅಂತಃಕಲಹದ ಸಂದರ್ಭದಲ್ಲಿ ದೃವನು ಯಾರನ್ನು ಸೆರೆಗೆ ಹಾಕಿದನು?
- ಧೃವನಿಂದ ಸೋತ ಪ್ರತಿಹಾರರ ರಾಜ ಯಾರು?
- ತನ್ನ ಉತ್ತರದ ದಂಡಯಾತ್ರೆಗಳ ಕಾಲಕ್ಕೆ ಮಾಳವ ಮತ್ತು ಸುತ್ತಲಿನ ಪ್ರದೇಶಗಳ
ರಕ್ಷಣೆಯ ಜವಾಬ್ದಾರಿಯನ್ನು ಧೃವನು ಯಾರಿಗೆ ವಹಿಸಿದ್ದನು?
- ಧೃವನ ಮಕ್ಕಳ ಹೆಸರುಗಳೇನು ಮತ್ತು ಅವನಿಗಿದ್ದ ಬಿರುದುಗಳು ಯಾವುವು?
- ಮೂರನೇ ಗೋವಿಂದನು ಅಧಿಕಾರಕ್ಕೆ ಬಂದುದರ ಪರಿಣಾಮವೇನು?
- ಸ್ತಂಭನನ್ನು ಯಾರು ಸೋಲಿಸಿದರು ಮತ್ತು ಏಕೆ?
- ಗೋವಿಂದನು ಉತ್ತರದ ದಿಗ್ವಿಜಯ ಕೈಗೊಂಡಾಗ ಪ್ರತಿಹಾರರ ರಾಜನಾಗಿದ್ದವನು
ಯಾರು?
- ಶರ್ವನ ಜನನ ಎಲ್ಲಿ ಆಯಿತು ಮತ್ತು ಯಾವಾಗ?
- ಗೋವಿಂದನು ಉತ್ತರದ ದಿಗ್ವಿಜಯಗಳಿಂದ ಮರಳಿದ ನಂತರ ದಕ್ಷಿಣದ ದಂಡಯಾತ್ರೆಗಳನ್ನು
ಕೈಗೊಂಡನು. ಏಕೆ?
- ಗೋವಿಂದನ ವರ್ಣನೆಯನ್ನು ಹೊಂದಿರುವ ಶಾಸನಗಳು ಯಾವುವು?
- ಗೋವಿಂದನ ಕುರಿತು ಸಾ.ಶ.ವ. 805ರ ಶಾಸನದ ವರ್ಣನೆ ಏನನ್ನು ತಿಳಿಸುತ್ತದೆ?
- ಗೋವಿಂದನಿಗಿದ್ದ ಬಿರುದುಗಳು ಯಾವುವು?
Comments
Post a Comment