ವಿಜಾಪುರ-ಮುಂಬೈ ಶಾಸನ: ನರ್ಮದಾ ನದಿ ಯುಧ್ದದ ಕುರಿತು ಹೊಸ ಮಾಹಿತಿ

   ಚಾಲುಕ್ಯ ಮನೆತನದ ಇಮ್ಮಡಿ ಪುಲಕೇಶಿ ಮತ್ತು ವರ್ದನ ಮನೆತನದ ಹರ್ಷವರ್ದನರ ನಡುವೆ ನರ್ಮದಾ ನದಿ ತೀರದಲ್ಲಿ ನಡೆಯಿತು ಎನ್ನಲಾದ ನಿರ್ಣಾಯಕ ಕಾಳಗವು ಶಕ ವರ್ಷ ೬೩೦ ರಿಂದ ೩೪ ನಡುವೆ ನಡೆದಿರಬಹುದು ಎಂಬ ಮಾಹಿತಿಯನ್ನು ಶಾಸನಗಳನ್ನು ಆಧರಿಸಿ (೬೩೦ ಲೋಹನೆರ್ ಶಾಸನ ಮತ್ತು ೬೩೪ ಐಹೊಳೆ ಶಾಸನ) ಉಲ್ಲೇಖಿಸಲಾಗಿತ್ತು. ಆದರೆ ಹೊಸ ಸಂಶೋಧನೆಯಂತೆ ಮೇಲಿನ ಯುಧ್ದವು ಶಕ ವರ್ಷ ೬೧೮ರ ಚಳಿಗಾಲದಲ್ಲಿ ನಡೆದಿದೆ ಎಂಬುದಕ್ಕೆ ಲಿಖಿತ ತಾಮ್ರಶಾಸನಒಂದರ ಆಧಾರವು ಲಭ್ಯವಾಗಿದೆ.

ಯಾವುದಿದು ಹೊಸ ಶಾಸನ?

ತಾಮ್ರಶಾಸನಕ್ಕೆ ವಿಜಾಪುರ ಮತ್ತು ಮುಂಬೈ ತಾಮ್ರಶಾಸನವೆಂದು ಹೆಸರಿಡಲಾಗಿದೆ. ೧೯೯೦ ದಶಕದಲ್ಲಿ ರಘುನಾಥ ಪೈ ಎಂಬುವವರು ವಿಜಾಪುರದ ಹಳೆಯ ವ್ಯಾಪಾರಿ ಒಬ್ಬನಿಂದ ಖರೀದಿಸಿದ ತಾಮ್ರಪಟಗಳನ್ನು ಶುಧ್ಧೀಕರಿಸಿ ಅದರಲ್ಲಿನ ಮಾಹಿತಿಯನ್ನು ಮುಂಬೈನಲ್ಲಿರುವ ಭಂಡಾರ್ಕರ್ಓರಿಯಂಟಲ್ಸಂಶೋಧನಾ ಸಂಸ್ಥೆಯ ಸಂಶೋಧಕರಾದಶ್ರೀನಂದ ಎಲ್ಬಾಪಟ್‌” ಮತ್ತು ಅವರ ಸಹೋದ್ಯೋಗಿಗಳು ೨೦೧೭ ರಲ್ಲಿ ಪ್ರಕಟಿಸಿದ್ದಾರೆ.

ಶಾಸನದ ಹೊಸ ಮಾಹಿತಿ ಏನು ಗೊತ್ತೆ?

ಶಾಸನವನ್ನು ೬೧೯ ವೈಶಾಕ ಪೊರ್ಣಮಿಯ ಚಂದ್ರಗ್ರಹಣದಂದು ಹೊರಡಿಸಿದ್ದು ಇದರ ದಿನಾಂಕವು ಏಪ್ರೀಲ್೦೪ ಕ್ಕೆ ಸರಿಹೋಗುತ್ತದೆ. ನರ್ಮದಾ ಕಾಳಗದ ನಂತರ ರಾಜಧಾನಿಗೆ ಹಿಂತಿರುಗುವಾಗ ಔರಂಗಬಾದ್ಬಳಿಯ ಬ್ರಾಹ್ಮಣ ಅಗ್ರಹಾರಕ್ಕೆ ಸೇರಿದ್ದ ನಾಗಶರ್ಮ ಎಂಬುವವನಿಗೆ ನೀಡಿದ ೫೦ ನಿವರ್ತನಗಳ ಭೂದಾನದ ಮಾಹಿತಿ ಜೊತೆಗೆ ಪುಲಕೇಶಿ ಹರ್ಷನ ವಿರುಧ್ದ ನರ್ಮದೆಯ ಬಳಿ ಸಾಧಿಸಿದ ವಿಜಯದ ಬಗ್ಗೆ ಮಾಹಿತಿಯನ್ನು ಶಾಸನವು ಒಳಗೊಂಡಿದೆ. ಜೊತೆಗೆ ಇದನ್ನು ಪುಲಕೇಶಿಯು ಅಧಿಕಾರಕ್ಕೆ ಬಂದ ೯ನೇ ವರ್ಷದಲ್ಲಿ ಹೊರಡಿಸಿದ್ದು ಅದರ ದಿನಾಂಕವು ಮೇಲಿನ ಏಪ್ರೀಲ್೦೪-೬೧೯ಕ್ಕೆ ಸರಿಹೊಂದುತ್ತದೆ.

   ವಿಶೇಷವೆಂದರೆ, ವಿ. ಎ. ಸ್ಮಿತ್‌ ಎಂಬ ಆಂಗ್ಲ ವಿದ್ವಾಂಸರು ಹರ್ಷ & ಪುಲಕೇಶಿಯರ ನಡುವಿನ ಯುದ್ಧವು ಸು. ಸಾ.ಶ.ವ. 619-20 ರಲ್ಲಿ ನಡೆದಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಇಲ್ಲಿ ಗಮನಿಸಬಹುದು. ಆದರೆ ಕೆ. ವಿ. ರಮೇಶ್‌ ಮೊದಲಾದ ವಿದ್ವಾಂಸರು ಪುಲಕೇಶಿಯು ಪರಮೇಶ್ವರ ಎಂಬ ಬಿರುದು ಧರಿಸಿದ ಕಾಲವಾದ ಸಾ.ಶ.ವ. 612-13 ರ ಆಸುಪಾಸಿನಲ್ಲಿ ಈ ಯುದ್ಧ ನಡೆದಿರಬಹುದು ಎಂದು ಹೇಳಿದ್ದರು. ಆದರೆ ಆಗ ನಡೆದ ಯುದ್ಧವು ಬಹುಶಹ ರಣವಿಕ್ರಮನೆಂದು ಹೆಸರಾಗಿದ್ದ ಮಂಗಳೇಶನೊಂದಿಗೆ ನಡೆದ ಯುದ್ಧವಾಗಿರಬಹುದು ಎಂದು ನಂಬಲಾಗಿದೆ. ಅಲ್ಲದೇ ಹು ಯೆನ್‌ ತ್ಸಾಂಗನು ತನ್ನ ಕೃತಿಯಲ್ಲಿ ಹರ್ಷನು ತನ್ನ ಆಡಳಿತದ ಮೊದಲ ಆರು ವರ್ಷಗಳ ಯುದ್ಧಗಳ ನಂತರ ಶಾಂತಿಯುತ ಆಡಳಿತ ನಡೆಸಿದನು ಎಂಬ ಮಾಹಿತಿ ನೀಡಿರುವುದನ್ನು ಆಧರಿಸಿ ಮೇಲಿನಂತೆ ಅಭಿಪ್ರಾಯಪಟ್ಟಿದ್ದಾರೆ.

ಘೋಷಣೆ: ಮೇಲಿನ ವಿವರಗಳನ್ನು ಶ್ರೀನಂದ್‌ ಎಲ್‌ ಬಾಪಟ್‌ ಅವರು ಪ್ರಕಟಿಸಿರುವ ವಿಜಾಪುರ-ಮುಂಬೈ ಶಾಸನದ ವಿವರಗಳಿಂದ ಸಂಗ್ರಹಿಸಿ, ಅನುವಾದಿಸಿ ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧