ಲೋಧಿ ಸಂತತಿ ೧೪೫೧-೧೫೨೬ (ದೆಹಲಿ ಸುಲ್ತಾನರ ಕೊನೆಯ ಸಂತತಿ)

ಮೂಲದ ಲಭ್ಯ ಮಾಹಿತಿ:- ಭಾರತವನ್ನಾಳಿದ ಮೊದಲ ಅಫ್ಗನ್ ಪಠಾಣ ವಂಶವಿದು. ಗುಲಾಮ ಸಂತತಿಯ ನಾಸಿರುದ್ದೀನ್ಮಹಮ್ಮದ್ದನ ಕಾಲದಲ್ಲಿ ಭಾರತಕ್ಕೆ ಬಂದರು. ನಂತರ ಬಲ್ಬನ್ಇವರನ್ನು ಸುಲ್ತಾನರ ಸೇವೆಗೆ ಸೇರಿಸಿಕೊಂಡನು

ಅಧಿಕಾರದಲ್ಲಿ ಮೇಲೇರಿದುದು: ಖಿಲ್ಜಿ ಮತ್ತು ತುಘಲಕ್ಸಂತತಿಯ ಆಳ್ವಿಕೆಯ ಕಾಲದಲ್ಲಿ ಆಡಳಿತ ಮತ್ತು ಸೈನಿಕ ಸೇವೆ ಮಾಡತೊಡಗಿದರು. ಫಿರೋಜ್ಶಾ ತುಗಲಕ್ ಕಾಲದಲ್ಲಿನ ಜಹಗೀರು ಪದ್ಧತಿ ಇವರಿಗೆ ಹೆಚ್ಚಿನ ಅದಿಕಾರಗಳನ್ನು ನೀಡಿತು. ತುಘಲಕ್‌  ಸಂತತಿಯ ಕೊನೆಯ ಅರಸರ ಕಾಲದಲ್ಲಿ ಮತ್ತಷ್ಟು ಪ್ರಾಬಲ್ಯ ಪಡೆದರು

ಬಹಲೂಲ್ಲೋಧಿಯ ಪೂರ್ವಿಕರು: ಲೋಧಿ ಪಂಗಡಕ್ಕೆ ಸೇರಿದ್ದ ಮಲಿಕ್‌ ಬಹ್ರಾಮ್‌ ಎಂಬುವನು ಮುಲ್ತಾನದ ರಾಜ್ಯಪಾಲನಲ್ಲಿ ಸೇವೆಗೆ ಸೇರಿದನು. ಬಹ್ರಾಮ್‌ ಖಾನನಿಗೆ ಒಟ್ಟು ಐದು ಮಕ್ಕಳು. ಇವನ ಮಗನಾದ ಖಲ್‌ಖಾನನು ದೌರಾದಲ್ಲಿ ಪ್ರಾಂತ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದನು. ಇವನ ಮಗನೇ ಲೋಧಿ ಸಂತತಿಯ ಸ್ಥಾಪಕ “ಬಹಾಲೂಲ್‌ ಲೋಧಿ

ಬಹಲೂಲ್‌ ಲೋಧಿಯ ಆರಂಭಿಕ ಜೀವನ: ತಂದೆಯಿಂದ ಉತ್ತಮ ಶಿಕ್ಷನ. ಸರ್‌ಹಿಂದ್‌ದ ಪ್ರಾಂತ್ಯಾದಿಕಾರಿ. ಸೈಯ್ಯದ್‌ ಸಂತತಿಯ ಮಹಮದ್‌ ಶಾ ಕಾಲದಲ್ಲಿ ದೆಹಲಿ ಮೇಲಿನ ಮಾಳವದ ಸುಲ್ತಾನನ ದಾಳಿಯ ವಿರುದ್ಧ ಮಹಮದ್ ಶಾನಿಗೆ ನೆರವು. ಖಾನ್‌ ಎ ಖಾನ್‌ ಎಂಬ ಬಿರುದು ನೀಡಲಾಯಿತು. ಲೋಧಿ ಮಹಮದ್‌ಶಾನ ಅಂತ್ಯದ ವೇಳೆಗೆ ಸ್ವತಂತ್ರನಂತೆ ವರ್ತಿಸುತ್ತಿದ್ದ

ರಾಜ್ಯ ಸ್ಥಾಪನೆ ಅಥವಾ ಆಳ್ವಿಕೆ ಆರಂಭ: ಸೈಯದ್‌ ಸಂತತಿಯ ಅಲಾವುದ್ದೀನ್‌ ಶಾ ಬದಾಯೂನ್‌ಗೆ ತೆರಳಿದಾಗ ದೆಹಲಿ ಆಕ್ರಮಣ ಮತ್ತು ಅಧಿಕಾರ ಸ್ಥಾಪನೆ. ಇದಕ್ಕೆ ಮುನ್ನ ಒಮ್ಮೆ 1443 ರಲ್ಲಿ ದೆಹಲಿ ವಶಪಡಿಸಿಕೊಳ್ಳಲು ವಿಫಲ ಯತ್ನ – ಮಹಮ್ಮದ್‌ ಶಾ ಅದನ್ನು ವಿಫಲಗೊಳಿಸಿದ್ದ. 1451 ರಲ್ಲಿ ದೆಹಲಿ ಸಿಂಹಾಸನ ಅಲಂಕರಿಸಿದನು. ಇವನು 1489 ವರೆಗೆ ಆಳಿದನು

ಆರಂಭಿಕ ಸಮಸ್ಯೆಗಳು: ಸ್ಥಾನ ಭದ್ರಪಡಿಸಿಕೊಳ್ಳಲು ಪಠಾನರನ್ನು ಹೆಚ್ಚಾಗಿ ತನ್ನ ಸೇವೆಗೆ ಸೇರಿಸಿಕೊಂಡನು. ದೆಹಲಿ ಸುತ್ತ ಪಠಾಣರ ಕಾವಲು ಏರ್ಪಡಿಸಿ ಶಾಂತಿ ಸ್ಥಾಪನೆ ಮಾಡಿದನು. ಆಂತರಿಕ ಸಮಸ್ಯೆಗಳ ಪರಿಹಾರದ ನಂತರ ರಾಜ್ಯ ಬಲಪಡಿಸಲು ಯತ್ನ ನಡೆಸಿದನು

ಜೋನಪುರದ ಶಾರ್ಕಿಗಳ ದಮನ: ಬಹಾಲೂಲನು ಪಂಜಾಬ್‌ನಲ್ಲಿ ಶಾಂತಿ ಸ್ಥಾಪನೆಗೆ ತೆರಳಿದ್ದ ಸಮಯದಲ್ಲಿ ಜೋನಪುರ್‌ದ ಶಾರ್ಕಿ ಮನೆತನದ ಮಹಮದ್‌ ಹುಸೇನ್‌ ಶಾ ದೆಹಲಿ ಮೇಲೆ ದಾಳಿ ಮಾಡಿದ. ಲೋಧಿ ದಾಳಿ ಹಿಮ್ಮೆಟ್ಟಿಸಿ ದೆಹಲಿ ರಕ್ಷಿಸಿಕೊಂಡನು. ಮಹಮದ್‌ ಹುಸೇನ್‌ ಶಾ ಪಲಾಯನ. ಜೋನಪುರಕ್ಕೆ ತನ್ನ ಮಗ ಬರ್ಬಕ್‌ ಶಾನನ್ನು ಆಡಳಿತಾದಿಕಾರಿಯಾಗಿ ನೇಮಿಸಿದ. ಈ ವೇಳೆ ಮಹಮದ್‌ ಶಾನಿಗೆ ನೆರವು ನೀಡಿದ್ದ ಮೇವಾಡದ ಅಹಮದ್‌ಖಾನ್‌ ಮತ್ತು ದರಿಯಾಖಾನರನ್ನು ಸದೆಬಡಿದು ತನ್ನ ಅಧೀನಕ್ಕೆ ಒಳಪಡಿಸಿದ.

ಆಡಳಿತ ಸಂಘಟನೆ: ರೇವಾರಿ, ಇಟಾವಾ, ಮಣಿಪುರ, ಚಾಂದ್ವಾರ್‌ ಮೊದಲಾದ ಪ್ರದೇಶಗಳ ವಶ. 1458 ರಲ್ಲಿ ರಾಜ್ಯದ ಆಡಳಿತ ಘಟಕಗಳ ಮರುವಿಂಗಡಣೆ ಮಾಡಿದನು. 1489 ರಲ್ಲಿ ಮರಣ ಹೊಂದಿದನು

ಸಿಕಂದರ್‌ ಲೋದಿ ಸಾ.ಶ.ವ ೧೪೮೯-೧೫೧೭

ಸಿಕಂದರನ ಯುದ್ಧಗಳು: ಇವನು ಲೋಧಿಗಳಲ್ಲೆಲ್ಲಾ ಸಮರ್ಥನಾಗಿದ್ದನು. ಇವನು ಬಿಹಾರ ಮತ್ತು ತಿಹ್ರತ್‌ಗಳನ್ನು ವಶಪಡಿಸಿಕೊಂಡನು. ಅವನು ಬಂಗಾಳದ ಅಲ್ಲಾವುದ್ದೀನ್‌ ಶಾನೊಡನೆ ಸ್ನೇಹದ ಒಪ್ಪಂದ ಮಾಡಿಕೊಂಡನು . ಅದರ ಫಲವಾಗಿ ದರಿಯಾಖಾನನು ಬಂಗಾಳದ ರಾಜ್ಯಪಾಲನಾಗಿ ನೇಮಕಗೊಂಡನು. ದೋಲಪುರ ಮತ್ತು ಚಾಂದೇರಿಗಳನ್ನು ಗೆದ್ದು ತನ್ನ ರಾಜ್ಯವನ್ನು ವಿಸ್ತರಿಸಿದನು.

ಆಲಂ ಖಾನನ ದಮನ: ರೂಪರ್‌ ಮತ್ತು ಚಂದಾವರ್‌ಗಳಲ್ಲಿ ಸ್ವತಂತ್ರನಾಗಿ ಆಳುತ್ತಿದ್ದ. ಅವನನ್ನು ಸೋಲಿಸಿ ಇಟಾವಾ ಎಂಬಲ್ಲಿ ನೇಮಿಸಿದ. ಫಟಿಯಾಲದ ಇಸಾಖಾನನ ವಿರುದ್ಧ ಯುದ್ಧ: ಇವನು ಆಲಂಖಾನನಿಗೆ ಸಹಾಯಕನಾಗಿದ್ದ. ಅವನನ್ನು ಸೋಲಿಸಿ ಕೊಲ್ಲಲಾಯಿತು. ಫಟಿಯಾಲಕ್ಕೆ ರಾಜಾ ಗಣೇಶನನ್ನು ನೇಮಿಸಲಾಯಿತು

ಬರ್ಬಕ್‌ ಶಾ ದಮನ:  ಇವನು ಸಿಕಂದರನ ಸೋದರ; ಆದರೆ ಅಣ್ಣನ ಸರ್ವಾಧಿಕಾರವನ್ನು ಒಪ್ಪಲಿಲ್ಲ. ಕಾರಣ ಕನೋಜದ ಬಳಿ ಯುದ್ಧ; ಬರ್ಬಕ್‌ ಶಾ ನ ಸೇನಾಪತಿ ಕಾಲಾಪಹಾರ ಸೆರೆ ಸಿಕ್ಕ. ಅವನಿಗೆ ಗೌರವ ದೊರೆತ ಕಾರಣ ಪಕ್ಷ ಬದಲಿಸಿದ. ಬರ್ಬಕ್‌ ಶಾಪಲಾಯನ: ಆದರೆ ಅವನನ್ನು ಮನ್ನಿಸಿ ಜೋನಪುರದಲ್ಲಿಯೇ ಮುಂದುವರಿಸಲಾಯಿತು.

ಕಾಲ್ಪಿಯ ಹುಮಾಯೂನ್‌ ಲೋದಿಯ ದಮನ: ಸಿಕಂದರನ ವಿರೋಧಿಯಾಗಿದ್ದನು. ಅವನನ್ನು ಸೋಲಿಸಿ ಕಾಲ್ಪಿಯಲ್ಲಿ ಮಹಮೂದ್‌ ಖಾನ್‌ ಲೋದಿಯನ್ನು ನೇಮಿಸಲಾಯಿತು.

ರಜಪೂತರ ಮೇಲೆ ಯುದ್ಧ
ಜುಗಾನ್‌ ವಿರುದ್ಧ:  ಜುಗಾನನು ಜೋನಪುರದ ಅಫ್ಘನ್‌ ನಾಯಕರಿಬ್ಬರನ್ನು ಕೊಂದು ಹಾಕಿದನು. ಬರ್ಬಕ್‌ ಶಾ ದೆಹಲಿಗೆ ಪಲಾಯನ ಮಾಡಿದನು. ಸಿಕಂದರ್‌ ಜುಗಾನನ ಮೇಲೆ ದಂಡೆತ್ತಿ ಹೋದನು; ಜುಗಾನ್‌ ಪಲಾಯನ ಮಾಡಿ ಹುಸೇನ್‌ ಶಾರ್ಕಿಯ ಆಶ್ರಯ. ಅಲ್ಲಿಗೂ ಧಾಳಿ ಮಾಡಿ ಶಾರ್ಕಿಯನ್ನು ಸೋಲಿಸಿ ಜೋನಪುರವನ್ನು ಮರಳಿ ಪಡೆದನು

ಬಂಗಾಳದ ಸುಲ್ತಾನನೊಡನೆ ಯುದ್ಧ: ಪಲಾಯನಗೈದಿದ್ದ ಹುಸೇನ್‌ ಶಾರ್ಕಿಯ ಬೆನ್ನಟ್ಟಿದ್ದ ಸಿಕಂದರನ ಸೈನ್ಯ ಬಿಹಾರದ ಕೆಲವು ಪ್ರದೇಶಗಳ ಮೇಲೆ ದಾಳಿ ಮಾಡಿತು. ಇದನ್ನು ವಿರೋಧಿಸಿ ಬಂಗಾಳದ ಅಲ್ಲಾವುದ್ದೀನ್‌ ಶಾ ಸಿಕಂದರನನ್ನು ಎದುರಿಸಿದನು. ಆದರೆ ಸೋತು ಸಿಕಂದರನೊಂದಿಗೆ ಒಪ್ಪಂದ ಮಾಡಿಕೊಂಡನು. ಬಿಹಾರದ ಕೆಲವು ಭಾಗಗಳು, ತಿರ್ಹತ್‌ ಮತ್ತು ಸರ್ಗನಾಗಳು ಸಿಕಂದರನಿಗೆ ಸೇರಿದವು

ಸಿಕಂದರ್‌ ಶಾನ ಗುಣಾವಗುಣಗಳು: ಇವನು ತನ್ನ ನೊಬಲ್ಲರು ಮತ್ತು ಜಹಗೀರುದಾರರ ಮೇಲೆ ಗುಪ್ತಚಾರ ವ್ಯವಸ್ಥೆಯನ್ನು ಬಲಪಡಿಸಿದನು. ಇವನು ನಿಷ್ಠಾವಂತ ಸುನ್ನಿ ಮುಸ್ಲೀಮನಾಗಿದ್ದು, ಮತಾಂಧನಾಗಿದ್ದನು. ಹಿಂದೂಗಳ ಮೇಲೆ ಜೆಸಿಯಾ ಮತ್ತು ಯಾತ್ರಿಕರ ತೆರಿಗೆಗಳನ್ನು ಹೇರಿದನು. ಆದರೆ ಇವನು ಕಲೆ ಮತ್ತು ಸಾಹಿತ್ಯಗಳ ಉದಾರ ಪೋಷಕನಾಗಿದ್ದನು. ಗುಲ್‌ರಖಿ ಎಂಬ ಕಾವ್ಯನಾಮದಲ್ಲಿ ಇವನು ಪರ್ಷಿಯಾದಲ್ಲಿ ಕವನಗಳನ್ನು ರಚಿಸಿದನು.

ಇಬ್ರಾಹಿಂ ಲೋದಿ ಸಾ.ಶ.ವ ೧೫೧೭-೨೬: ಮನೆತನದ ಕೊನೆಯ ಸುಲ್ತಾನ. ಇವನು ಲೋಧಿಗಳ ಕೊನೆಯ ಸುಲ್ತಾನನಷ್ಟೇ ಅಲ್ಲ; ದೆಹಲಿ ಸುಲ್ತಾನರ ಕೊನೆಯ ಸುಲ್ತಾನನೂ ಆಗಿದ್ದನು.

ಸಿಕಂದರನ ಮಕ್ಕಳಾದ ಇಬ್ರಾಹಿಂ ಆಗ್ರಾದಲ್ಲೂ ಮತ್ತು ಜಲಾಲನು ಜೋನಪುರದಲ್ಲಿ ಏಕಕಾಲಕ್ಕೆ ಅಧಿಕಾರಕ್ಕೆ ಬಂದರು. ನಂತರ ಇಬ್ರಾಹಿಂ ಜಲಾಲನನ್ನು ಕೊಂದು ತಾನೇ ಸಂಪೂರ್ಣ ಉತ್ತರಾಧಿಕಾರಿಯಾದನು.

ಮನೆತನದ ಅವನತಿಯತ್ತ: ಇವನ ಕಾಲದಲ್ಲಿ ಅನೇಕ ದಂಗೆಗಳು ನಡೆದವು. ಬಿಹಾರದಲ್ಲಿ ದರಿಯಾಖಾನ್‌ ಲೊಹಾನಿ ಸ್ವತಂತ್ರನಾದನು.

ಇವನ ಲೊಹಾನಿಗಳ ವಿರುದ್ಧದ ದಮನಕಾರಿ ನೀತಿ ಮತ್ತು ಲಾಹೋರಿನ ರಾಜ್ಯಪಾಲನಾಗಿದ್ದ ದಿಲಾವರ್‌ಖಾನನ ಜೊತೆಗೆ ಅನುಚಿತವಾಗಿ ನಡೆದುಕೊಂಡದ್ದು ನೊಬಲ್ಲರ ಅಸಮಾಧಾನಕ್ಕೆ ಕಾರಣವಾಯಿತು.

ಪರಿಣಾಮವಾಗಿ ದೌಲತ್ತಖಾನನು ಬಾಬರನನ್ನು ಭಾರತದ ಮೇಲೆ ಧಾಳಿ ನಡೆಸಲು ಆಹ್ವಾನಿಸಿದನು.

ಪ್ರಥಮ ಪಾಣಿಪತ್‌ ಕದನ ಸಾ.ಶ.ವ ೧೫೨೬: ಮಂಗೋಲ್‌ ಮೂಲದ ಬಾಬರನು ದೆಹಲಿ ಮೇಲೆ ದಾಳಿ ನಡೆಸಲು ಪಾಣಿಪತ್‌ನಲ್ಲಿ ಬೀಡು ಬಿಟ್ಟನು. ಲೋಧಿ ಅವನನ್ನು ಎದುರಿಸಿ ಯುದ್ದದಲ್ಲಿ ಸೋತು ಹತನಾದನು. ಹೀಗೆ ದೆಹಲಿಯು ಬಾಬರನ ವಶವಾಗಿ, ಅವನು ಮೊಗಲ್‌ ಮನೆತನದ ಸ್ಥಾಪನೆ ಮಾಡಿದನು. 

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources