ಚೋಖಾಮೇಳನ ಕುರಿತ ಪ್ರಶ್ನೆಗಳು

   ಆತ್ಮೀಯ ವಿದ್ಯಾರ್ಥಿಗಳೇ, ನಿಮಗೆ ಈಗಾಗಲೇ ನೀಡಿರುವ ಚೋಖಾಮೇಳನ ಕುರಿತ ಅಧ್ಯಯನ ಸಾಮಗ್ರಿಯನ್ನು ಅವಲೋಕಿಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ಸಿದ್ಧಪಡಿಸಿರಿ. ತರಗತಿಯಲ್ಲಿನ ಎಲ್ಲಾ ವಿದ್ಯಾರ್ಥಿಗಳೂ 12 ಗುಂಪುಗಳಾಗಿ ರಚನೆಗೊಂಡು, ಪ್ರತಿಯೊಂದು ಗುಂಪು ಒಂದು ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕು. ನಿಮ್ಮ ಉತ್ತರಗಳು ಕನಿಷ್ಠ ಒಂದು ಪುಟಕ್ಕಿಂತ ಹೆಚ್ಚಾಗಿರಬೇಕು.

 

  1. ಚೋಖಾಮೇಳ ಎಂದು ಹೆಸರು ಬರಲು ಕಾರಣವೇನು? ಅವನ ಸಮಕಾಲೀನ ಮತ್ತು ನಂತರದ ವಾರಕಾರಿ ಪಂಗಡದವರು ಅವನ ಮಹತ್ವವನ್ನು ಹೇಗೆ ವರ್ಣಿಸಿದ್ದಾರೆ? ವಿವರಿಸಿ.
  2. ಚೋಖಾಮೇಳನ ಜನನದ ಕತೆಯ ಹಿಂದಿರುವ ಸಾರವೇನು?
  3. ಚೋಖಾಮೇಳನ ಜನ್ಮಸ್ಥಳ ಮತ್ತು ಜನ್ಮ ದಿನಾಂಕಗಳ ಬಗ್ಗೆ ಇರುವ ಅಭಿಪ್ರಾಯಗಳೇನು?
  4. ಮಹಾರಾಷ್ಟ್ರದ ಧ್ಯಾತ್ಮಿಕ ಇತಿಹಾಸದಲ್ಲಿ ಕ್ರಿಸ್ತಶಕ ಹದಿಮೂರನೆಯ ಶತಮಾನವು ಹೇಗೆ ಸುವರ್ಣಕಾಲವಾಗಿ ಮೆರೆಯಿತು? ವಿವರಿಸಿ.
  5. ಚೋಖಾಮೇಳನ ಪರಿವಾರದವರು ವಿಠ್ಠಲ ಭಕ್ತಿವಾಹಿನಿಯಲ್ಲಿ ಹೇಗೆ ಮಿಂದು ಸಂತುಷ್ಟರಾದರು? ತಿಳಿಸಿ.
  6. ಚೋಖಾಮೇಳನನ್ನು ಫಂಡರಾಪುರದಿಂದ ಏಕೆ ಹೊರಕ್ಕೆ ಹಾಕಲಾಯಿತು ಮತ್ತು ಅವನು ಆ ವೇಳೆ ತನ್ನ ಭಕ್ತಿಯನ್ನು ಹೇಗೆ ಪ್ರದರ್ಶಿಸಿದನು?
  7. ಮಧ್ಯರಾತ್ರಿಯಲ್ಲಿ ಬಂದ ಅತಿಥಿಯಿಂದ ಚೋಖಾಮೇಳನಿಗೆ ಒದಗಿದ ಕಷ್ಟವೇನು? ವಿವರಿಸಿ.
  8. ತುಕಾರಾಮರು ಚೋಖಾಮೇಳನ ಪವಿತ್ರತೆಯನ್ನು ಹೇಗೆ ವರ್ಣಿಸಿದ್ದಾರೆ? ತಿಳಿಸಿ.
  9. ಅಭಂಗಗಳೆಂದರೇನು? ಚೋಖಾಮೇಳನ ಅಭಂಗಗಳ ಕುರಿತು ಚರ್ಚಿಸಿರಿ.
  10. ಜೋಹಾರ ಪದಗಳು ಎಂದರೇನು? ವಿವರಿಸಿ.
  11. ಚೋಖಾಮೇಳನ ಭಕ್ತಿ ಪಾರಮ್ಯತೆಯನ್ನು ವಿವರಿಸುವ ಘಟನೆ ಯಾವುದು? ವಿವರಿಸಿ.
  12. ಚೋಖಾಮೇಳನ ಜೀವನ ಸಂದೇಶವೇನು? ಇಂದು ಆತನನ್ನು ಹೇಗೆ ಸ್ಮರಿಸಲಾಗುತ್ತಿದೆ? ವಿವರಿಸಿ.

***** 

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧