ಕಲ್ಯಾಣದ ಚಾಲುಕ್ಯರ ಕೊನೆಯ ಅರಸರು.

ಮೂರನೆ ಸೋಮೇಶ್ವರ – 1127- 1139. 

ವೆಂಗಿ ಚೋಳರ ವಶವಾಯಿತು. ಸ್ವತಂತ್ರನಾಗಲು ಬಯಸಿದ ವಿಷ್ಣುವರ್ದನನು ಇವನಿಂದ ಸೋತನು.

ವಿದ್ವಾಂಸ, ಕವಿ. ಮಾನಸೋಲ್ಲಾಸದ ಕರ್ತೃ.ಸರ್ವಜ್ಞ ಚಕ್ರವರ್ತಿ.

ಎರಡನೆ ಜಗದೇಕಮಲ್ಲ 1139=49.

ಸಾಮ್ರಾಜ್ಯ ಪತನದತ್ತ ಸಾಗಿತು. ಹೊಯ್ಸಳರು, ಗೋವೆಯ ಕದಂಬರು ಮತ್ತು ಸಾಮಂತ ಬಿಜ್ಜಳ ಪ್ರಬಲರಾದರು.

ಮೂರನೆ ತೈಲಪ 1149-58.

ಸಾಮಂತನಾಗಿದ್ದ ಕಾಕತೀಯ ಮನೆತನದ ಪ್ರೋಲನ ಬಂಡಾಯವನ್ನು ಅಡಗಿಸಲು ಸೇನಾ ಸಮೇತನಾಗಿ ಹೊರಟನು. ಆದರೆ ಅಲ್ಲಿ ಸೋಲನ್ನು ಅನುಭವಿಸಿದನು. ಇತ್ತ ಕಲಚೂರಿ ಬಿಜ್ಜಳನು ಸಾಮ್ರಾಟನ ರಕ್ಷಣೆಗೆ ಹೋಗುವ ಬದಲು ರಾಜಧಾನಿಯನ್ನು ವಶಪಡಿಸಿಕೊಂಡು ಕಲಚೂರಿ ಮನೆತನದ ಆಳ್ವಿಕೆ ಆರಂಬಿಸಿದನು.

ತೈಲಪನು ರಾಜಧಾನಿಗೆ ಮರಳದೇ ಅಣ್ಣಿಗೇರಿಗೆ ಹೋಗಿ ಅಲ್ಲಿ ಮುಂದಿನ ನಾಲ್ಕು ವರ್ಷಗಳ ಕಾಲ ಬದುಕಿದ್ದನು.


Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ