ಸ್ಯಾದ್ವಾದ ಅಥವಾ ಅನೇಕಾಂತ ತತ್ವ

ಸತ್ಯದ ಜಟಿಲ ಸಂಕೀರ್ಣತೆಯ ಬಗೆಗೆ ವಿಚಾರ ಮಾಡುವುದೇ ಅನೇಕಾಂತವಾದ; ಅನೇಕಾಂತವಾದವೇ -ಸ್ಯಾದ್ವಾದ. (ಎಲ್ಲಾ ಬಗೆಯ ಸಂಭಾವ್ಯತೆ ಯನ್ನು ಒಪ್ಪುವುದು)

ಸತ್ಯವು ಹೀಗೆ ಇರಬಹುದು ಎಂಬ ಸಂಭಾವ್ಯತಾ ಸಿದ್ಧಾಂತ. ವಿಶ್ವವನ್ನು ಅನೇಕ ದೃಷ್ಠಿಯಿಂದ ನೋಡಬಹುದು. ಪ್ರತ್ಯೇಕ ನಿರ್ಣಯಕ್ಕೂ ಬರಬಹುದು; ಸತ್ಯದ ಪೂರ್ಣ ಸ್ವರೂಪವನ್ನು ನಿರ್ಣಯಿಸುವುದಿಲ್ಲ. ಏಳು ಹಂತಗಳಿಂದ ಸತ್ಯವನ್ನು ತಿಳಿಯುವ ಪ್ರಯತ್ನವನ್ನು ಮಾಡಬಹುದು.

1. ಸ್ಯಾದಸ್ತಿ -ಹೀಗಿರಬಹುದು.

2. ಸ್ಯಾನ್ನಾಸ್ತಿ - ಹೀಗಿರಲಾರದು.

3. ಸ್ಯಾದಸ್ತಿಚ ನಾಸ್ತಿಚ -ಬಹುಶಃ ಇದ್ದೀತು, ಇಲ್ಲದೆ ಇದ್ದೀತು.

4. ಸ್ಯಾದವ್ಯಕ್ತಮ್ - ಅದನ್ನು ವಿವರಿಸಲಾಗದು.

5. ಸ್ಯಾದ್ ಅಸ್ತಿಚ ಅವ್ಯಕ್ತಂಚ - ಬಹುಶಃ ಇದೆ -ವರ್ಣನಾತೀತವಾಗಿದೆ.

6. ಸ್ಯಾನ್ನಾಸ್ತಿಚ ಅವ್ಯಕ್ತಂಚ - ಬಹುಶಃ ಇಲ್ಲ, ವರ್ಣನಾತೀತವೂ ಆಗಿದೆ.

7. ಸ್ಯಾದಸ್ತಿಚ ನಾಸ್ತಿಚ ಅವ್ಯಕ್ತಂಚ.- ಬಹುಶಃ ಇದೆ, / ಬಹುಶಃ ಇಲ್ಲ ; ವರ್ಣನಾತೀತವೂ ಆಗಿದೆ.

ವಾದ ಜೈನ ಧರ್ಮದ ದೃಷ್ಠಿ ವೈಶಾಲ್ಯವನ್ನೂ ತೋರಿಸುತ್ತದೆ.



ವಸ್ತುವಿನ ಆಧ್ಯಾತ್ಮಿಕ ತಾತ್ಪರ್ಯವನ್ನು ಗ್ರಹಿಸುವ ಶಕ್ತಿಯೇ ದರ್ಶನ


Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ