ಸಂಗಂ ಸಾಹಿತ್ಯದ ಪ್ರಮುಖ ಕೃತಿಗಳು
ತಮಿಳು ಸಾಹಿತ್ಯ ಬಹಳ ಪ್ರಾಚೀನವಾದುದು. ಇದು ಮೂರು ಸಂಘಗಳ
ಆಶ್ರಯದಲ್ಲಿ ಬೆಳೆಯಿತೆಂಬ ಐತಿಹ್ಯವಿದೆ. ಈ ಸಾಹಿತ್ಯವನ್ನು ಅನುಕೂಲಕ್ಕಾಗಿ ಸಂಗಂ ಸಾಹಿತ್ಯ ಎಂದು
ಕರೆಯಲಾಗುತ್ತದೆ. ಇದನ್ನು ಸಹಜ ಸಾಹಿತ್ಯದ ಕಾಲವೆಂದು ವಿದ್ವಾಂಸರು ಗುರುತಿಸಿದ್ದಾರೆ. ತಮಿಳು ನೆಲದ
ಇತಿಹಾಸಾರಂಭ ಕಾಲದಲ್ಲಿ ಸಂಗಂ ಸಾಹಿತ್ಯದ ಉಗಮವಾಯಿತು ಎಂದು ನಂಬಲಾಗಿದೆ. ಇದನ್ನು ಪೋಷಿಸಿದವರು ಆದಿ
ಚೇರ, ಚೋಳ ಮತ್ತು ಪಾಂಡ್ಯರು. ಆ ಕಾಲದ ಕವಿಗಳು ಅಕಂ
(ಪ್ರಣಯ) ಮತ್ತು ಪುರಂ(ವೀರ)
ಎಂಬ ಎರಡು ಪ್ರಭೇಧಗಳಲ್ಲಿ
ಕಾವ್ಯ ರಚನೆ ಮಾಡಿದರೆಂದು ಭಾವಿಸಲಾಗಿದೆ.
ಅಹಂ ಸಾಹಿತ್ಯವು ಮಾನವನ ಪ್ರೀತಿ, ಪ್ರಣಯ, ಭಯ, ಹತಾಶೆಗಳಂತಹ ಆಂತರಿಕ ಭಾವನೆಗಳ ಸಾಹಿತ್ಯವಾದರೆ. ಪುರಂ
ಸಮಾಜ, ಸಂಸ್ಕೃತಿ, ರಾಜಕೀಯ ಸ್ಥಿತಿಗತಿಗಳನ್ನು ಕುರಿತದ್ದಾಗಿದೆ.
ಅಗತ್ತಿಯಂ
ಮತ್ತು
ತೊಲ್ಕಾಪ್ಪಿಯಂ ವ್ಯಾಕರಣ ಗ್ರಂಥಗಳು.
ಪದಿನೇಣ್ ಮೇಲ್‍ಕಣಕ್ಕು (ಹದಿನೆಂಟು ಮೇಲ್‍ಗಣಗಳು): ಇದರಲ್ಲಿ ಎಟ್ಟುತ್ತೊಕ್ಕೈ (8 ಕವನ ಸಂಗ್ರಹಗಳು)
ಮತ್ತು ಪತ್ತುಪ್ಪಾಟ್ಟು(ಹಾಡುಗಳುಳ್ಳ 10 ಸಂಗ್ರಹಗಳು) ಎಂಬೆರಡು ಭಾಗಗಳಿವೆ. ಅವುಗಳೆಂದರೆ,
1.
ಎಟ್ಟುತ್ತೊಕೈ (ಎಂಟು ಕವನ ಸಂಗ್ರಹಗಳು): (೧) ನಟ್ಟಿಣೈಗಳ
ಕವನ ಸಂಗ್ರಹ, (೨) ಕುರುಂತೊಗೈ- ಕಿರು ಕವನಗಳ ಸಂಗ್ರಹ, (೩) ಐನ್‍ಕುರುನೂರು-ಐನೂರು ಕಿರು ಪದ್ಯಗಳು,
(೪) ಪದಿರುಪ್ಪತ್ತು-ಹತ್ತರ ಹತ್ತು ಹಾಡುಗಳು, (೫) ಪರಿಪಾಡಲ್- ಛಂದಸ್ಸಿನ ಹಾಡುಗಳು, (೬) ಕಲಿತ್ತೊಗೈ-
ಛಂದಸ್ಸಿನ ಸಂಗ್ರಹ , (೭) ಅಹನಾನೂರು ಅಥವಾ
ನೆಡುಂತೊಕೈ – ಅಹಂ ನಾನೂರು ಕವನಗಳು ಅಥವಾ ಪ್ರೇಮ
ಕವನಗಳ ಸಂಗ್ರಹ ಮತ್ತು (೮) ಪುರನಾನೂರು-ಪುರ ನಾಲ್ಕುನೂರು ಕವಿತೆಗಳು.
೨.
ಪತ್ತುಪ್ಪಾಟ್ಟು (ಹತ್ತು ಹಾಡುಗಳು): (೧) ತಿರುಮುರುಗಾರುಪ್ಪಾಟ್ಟೈ- ತಿರುಮುರುಗನೆಡೆಗೆ ಮಾರ್ಗದರ್ಶನ,
(೨) ಪುರನಾರಾರುಪ್ಪಾಟ್ಟೈ- ಪುರಂ ಗಾಯಕರಿಗೆ ಮಾರ್ಗದರ್ಶನ, (೩) ಚಿರುಪಾಳಾರುಪ್ಪಾಟ್ಟೈ- ಕಿರಿಯ ಪಾಣಾರ್’ಗಳಿಗೆ
ಮಾರ್ಗದರ್ಶನ, (೪) ಪೆರುಂಪಾಣಾರ್ರುಪ್ಪಾಟ್ಟೈ- ಹಿರಿಯ ಪಾಳಾರ್’ಗಳಿಗೆ ಮಾರ್ಗದರ್ಶನ, (೫) ಮುಲ್ಲೈಪ್ಪಾಟ್ಟು- ಕಾಡಿನ ಹಾಡು , (೬) ಮಧುರೈಕಾಂಚಿ- ಮಧುರೈಪ್ರತಿಬಿಂಬ, (೭) ನೆಟುನಳವಾಟೈ-
ನಿಡಿದಾದ ಒಳ್ಳೆಯ ಬಡಗುಗಾಳಿ, (೮) ಕುರಿಂಚಿಪ್ಪಾಟ್ಟು- ಕುರಿಂಜಿ ಹಾಡು , (೯) ಪತ್ತಿನ ಪಾಳೈ- ಪಟ್ಟಣದ ಪಾಳು ಮತ್ತು (೧೦) ಮಲೈಪಾಟ್ಟುಕಟುಂ-
ಬೆಟ್ಟದ ಹಾಡಿನ ಸದ್ದು.
ಇಳಂಗೊ ಅಡಿಗಳ್ ಬರೆದಿರುವ ಶಿಲಪ್ಪದಿಗಾರಂ(ಶಿಲಪ್ಪಧಿಕಾರಂ) ಮತ್ತು ಸತ್ತನಾರ್ ಬರೆದಿರುವ ಮಣಿಮೇಗಲೈ (ಮಣಿಮೆಖಲೆ); ಇವು ಕಾವ್ಯಗಳು.
ತಿರುವಳ್ಳುವರ್ ಬರೆದಿರುವ ತಿರುಕ್ಕುರಳ್ ತ್ರಿಪದಿಗಳ ಒಂದು ಕೃತಿಯಾಗಿದೆ.
*****
Comments
Post a Comment