ಕಿತ್ತೂರು ರಾಜ್ಯದ ಪೂರ್ವ ಇತಿಹಾಸ

ಸಾ... 1585-1824

ಆರಂಭಿಕ ರಾಜಧಾನಿ ಸಂಪಗಾವಿ. ನಂತರ ಕಿತ್ತೂರು.

ಹಿರೆಮಲ್ಲಶೆಟ್ಟಿ ಮತ್ತು ಚಿಕ್ಕಮಲ್ಲಶೆಟ್ಟಿ ಎಂಬ ಸೋದರರಿಂದ ಸ್ಥಾಪನೆ.

ವೀರಶೈವ ಸಂಪ್ರದಾಯಕ್ಕೆ ಸೇರಿದವರು.

ವಿಜಾಪುರದ ಸುಲ್ತಾನರಿಗೆ ಸಲ್ಲಿಸಿದ ನಿಷ್ಠ  ಸೇವೆಗಾಗಿ ಕಿತ್ತೂರಿನ ಆಡಳಿತದ  ಬಳುವಳಿ.

ಇಂದಿನ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಭೂಪ್ರದೇಶಗಳು ಕಿತ್ತೂರಿನ ವ್ಯಾಪ್ತಿಗೊಳಪಟ್ಟಿದ್ದವು.

ಹಾಲಪ್ಪ ದೇಸಾಯಿ (1661-91) ಕಾಲದಲ್ಲಿ ರಾಜಧಾನಿ ಕಿತ್ತೂರಿಗೆ ಸ್ಥಳಾಂತರ.

1686ರಲ್ಲಿ ವಿಜಾಪುರ ಮೊಗಲರ ವಶವಾದಾಗ ಹಾಲಪ್ಪ ದೇಸಾಯಿ ಅವರೊಂದಿಗೆ ಒಪ್ಪಂದ ಮಾಡಿಕೊಂಡು ಕಿತ್ತೂರಿನ ಅಧಿಕಾರ ಉಳಿಸಿಕೊಂಡ.

ಮುಂದೆ ಮುದಿಮಲ್ಲಪ್ಪಗೌಡ ಸರ್‌ದೇಸಾಯಿ, ಶಿವನಗೌಡ  ಸರ್‌ದೇಸಾಯಿ (1717-34), ಮಲ್ಲನರುದ್ರಗೌಡ (1734-49) ಆಳಿದರು.

ಆ ಕಾಲಕ್ಕೆ ವರಮಾನ 4 ಲಕ್ಷ; ಕಪ್ಪಕಾಣಿಕೆ 70,000.

ಮುಂದೆ ಸವಣೂರು ನವಾಬ ಇದನ್ನು ಮರಾಠರಿಗೆ ಬಿಟ್ಟುಕೊಟ್ಟ

ಪುತ್ರಸಂತಾನವಿಲ್ಲದ ಮಲ್ಲನರುದ್ರಗೌಡನ ಮರಣಾನಂತರ ಸೋದರನ ಮಗ ವೀರಪ್ಪಗೌಡ ದೇಸಾಯಿ (1749-82) ಆಳಿದನು.

ಇವನ ಕಾಲದಲ್ಲಿ ಹೈದರ್‌ ಅಲಿ ಪ್ರಾಬಲ್ಯನಾದ ಕಾರಣ ಪೇಶ್ವೆಗಳ ಅಧೀನದಲ್ಲಿದ್ದ ಕಿತ್ತೂರು ಮೈಸೂರು ವಶವಾಯಿತು.

ಸಾ.ಶ.ವ. 1779 ರಲ್ಲಿ ಮರಾಠರು ಕಿತ್ತೂರು ಗೆದ್ದು, ವೀರಪ್ಪಗೌಡನನ್ನು ಮೀರಜ್‌ ಸೆರೆಯಲ್ಲಿಟ್ಟರು.

ಅಲ್ಲಿ ಆತ ಮಕ್ಕಳಿಲ್ಲದೇ ಗತಿಸಿದ.

ಮಲ್ಲಸರ್ಜ ದತ್ತು ಪುತ್ರನಾಗಿ ಅದಿಕಾರವಹಿಸಿಕೊಂಡ

ಮಲ್ಲಸರ್ಜ ದೇಸಾಯಿ – ಸಾ.ಶ.ವ. 1782-1816.

ಕೇವಲ 17ರ ಹರಯದಲ್ಲಿ ಪಟ್ಟಕ್ಕೆ.

ಸಕಲವಿದ್ಯಾ ಪಾರಂಗತ; ಯುದ್ಧಪ್ರಿಯ.

ಬದಲಾದ ರಾಜಕೀಯ ಪರಿಸ್ಥಿತಿಯ ಕಾರಣ ರಾಜ್ಯಕ್ಕೆ ಯೂರೋಪಿಯನ್ನರು, ಮರಾಠರು, ಮೈಸೂರು ಮತ್ತು ನಿಜಾಮರ ಭಯ

ಆಂತರಿಕವಾಗಿಯೂ ಸರದಾರರಿಂದ ಇವನ ವಿರುದ್ಧ ಅತೃಪ್ತಿ.

ಸಾ.ಶ.ವ. 1785 ರಲ್ಲಿ ಟಿಪ್ಪು ಆಕ್ರಮಣ; ಮರಾಠರಿಂದ ರಕ್ಷಣೆ.

ಕಿತ್ತೂರು ಪುನಃ ಟಿಪ್ಪುವಿನ ವಶವಾದಾಗ ಮಲ್ಲಸರ್ಜನನ್ನು ಕಬ್ಬಾಳದುರ್ಗದಲ್ಲಿ ಬಂಧಿಸಿದ.

ಅಲ್ಲಿಂದ ತಪ್ಪಿಸಿಕೊಂಡು ಬಂದನಾದರೂ ಟಿಪ್ಪುವಿನ ಪ್ರತಿನಿಧಿ ಕೊಟ್ಟ ಪಿಂಚಣಿ ಹಣದಲ್ಲಿ ಜೀವನ ಯಾಪನೆ.

ಟಿಪ್ಪು ಮರಣಾನಂತರ ಕಿತ್ತೂರು ಮರಾಠರ ಅಧೀನಕ್ಕೆ ಬಂದಿತು.

ಮರಾಠರು ಕಿತ್ತೂರು ಸಂಸ್ಥಾನವನ್ನು ರದ್ದುಪಡಿಸಲು ಆಂಗ್ಲರಿಗೆ ಸೂಚಿಸಿದರೂ ವೆಲ್ಲೆಸ್ಲಿ ಅದಕ್ಕೆ ಒಪ್ಪಲಿಲ್ಲ.

ಪೇಶ್ವೆ 2ನೆ ಬಾಜಿರಾಯನ ಕಾಲಕ್ಕೆ ಕಪ್ಪಕಾಣಿಕೆ 1.75 ಲಕ್ಷಗಳಿಗೆ ಏರಿಸಿ ಸಂಸ್ಥಾನವನ್ನು ಉಳಿಸಿಕೊಂಳ್ಳುವ ಯತ್ನ ನಡೆಸಿದನು.

ಆದರೆ ಮರಾಠರು ಇವನನ್ನು ಮೋಸದಿಂದ ಬಂಧಿಸಿ ಪೂನಾದ ಸೆರೆಯಲ್ಲಿಟ್ಟರು.

ಜೀವನದ ಕೊನೆಯ ವರ್ಷಗಳನ್ನು ಯಾತನೆಯಿಂದ ಕಳೆದ ಮಲ್ಲಸರ್ಜ ಅನಾರೋಗ್ಯದ ಕಾರಣದಿಂದ ಬಿಡುಗಡೆ ಹೊಂದಿದನಾದರೂ ರಾಜ್ಯಕ್ಕೆ ಮರಳಿದ ಕೆಲದಿನಗಳಲ್ಲಿಯೇ ಕೊನೆಯುಸಿರೆಳೆದನು

ಇವನ ಎರಡನೇ ರಾಣಿಯೇ ಚನ್ನಮ್ಮ. (ಮೊದಲನೆ ರಾಣಿ ರುದ್ರಮ್ಮ)

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧