ಬಸವಣ್ಣನವರ ಜೀವಿತದ ಪರಮಾವಧಿಯ ಕಾಲ.

   ಹನ್ನೆರಡನೇ ಶತಮಾನದಲ್ಲಿ ಜೀವಿಸಿದ್ದ ವಚನಕಾರರ ಕಾಲವನ್ನು ಖಚಿತವಾಗಿ ಗುರುತಿಸಲು ಶಾಸನಗಳು ಪ್ರಮುಖ ನೆರವನ್ನು ನೀಡಿವೆ. ಅಂತೆಯೇ ಬಸವಣ್ಣನವರ ಜೀವಿತಾವಧಿಯ ಕಾಲವನ್ನು ಶಾಸನಗಳ ಪೂರಕ ಮಾಹಿತಿಗಳಿಂದ ಕ್ರಿ..1167ಕ್ಕೆ ಬದಲಾಗಿ ಕ್ರಿ..1185-86 ಎಂದು ಸುಮಾರು 19 ವರ್ಷಗಳಷ್ಟು ಮುಂದಕ್ಕೆ ಹಾಕಲಾಗಿದೆ. ಏಕೆಂದರೆ, ಬಸವಣ್ಣನವರ ಸಮಕಾಲೀನರೂ ಅನುಯಾಯಿಗಳೂ ಸಮವಯಸ್ಕರೂ ಆದ ಮಲ್ಲಿಕಾರ್ಜುನ ಪಂಡಿತಾರಾಧ್ಯರ ಕೊನೆಯ ತೆಲಂಗಾಣ ಶಾಸನ ಕ್ರಿ. 1187 ರಲ್ಲಿ ದೊರೆತಿದೆ. ಅಲ್ಲದೇ, ಬಸವಣ್ಣನವರ ಅಭಿಮಾನಿ ಮತ್ತು ಅನುಯಾಯಿಯಾದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಐಕ್ಯರಾಗುವುದಕ್ಕೆ ಒಂದು ವರ್ಷ ಮುಂಚೆ ಬಸವಣ್ಣನವರು ಐಕ್ಯರಾದರೆಂದು ಪಂಡಿತಾರಾಧ್ಯುಲ ಚರಿತ್ರೆಯಿಂದ ತಿಳಿಯಬಹುದಾಗಿದೆ. ತೆಲಂಗಾಣ ಶಾಸನದಲ್ಲಿಯ ಉಲ್ಲೇಖದಿಂದ ಕ್ರಿ. 1187 ರಲ್ಲಿ ಪಂಡಿತಾರಾಧ್ಯರು ಐಕ್ಯರಾದರು ಎಂದು ತಿಳಿದುಬರುವುದರಿಂದ ಅವರ ಸಮಕಾಲೀನರಾದ ಬಸವಣ್ಣನವರು ಕ್ರಿ. . 1185-86 ರವರೆವಿಗೂ ಬದುಕಿದ್ದರು ಎಂಬುದಾಗಿ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಬಸವಣ್ಣನವರ ಜೀವಿತದ ಪರಮಾವಧಿಯ ಕಾಲ ಕ್ರಿ. 1167 ಕ್ಕೆ ಬದಲಾಗಿ ಕ್ರಿ. 1185-86 ಎಂದು ಇಟ್ಟುಕೊಳ್ಳಬಹುದಾಗಿದೆ ಎಂಬ ನಿಲುವು ಇತ್ತೀಚೆಗೆ ಸಂಶೋಧಕರಿಂದ ವ್ಯಕ್ತವಾಗಿದೆ.

***** 

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources