VI. ಬ್ರಾಹ್ಮಿ ಲಿಪಿಯ ಶೋಧನೆ

       ಸುಮಾರು 2,000 ವರ್ಷಗಳಿಗೂ ಅಧಿಕ ಕಾಲ ನಿಗೂಢವಾಗಿದ್ದ ಬ್ರಾಹ್ಮಿ ಲಿಪಿಯನ್ನು ಮೊಟ್ಟಮೊದಲ ಬಾರಿಗೆ ಸರ್ವಸಮ್ಮತವಾಗಿ ಓದಿ ಅರ್ಥೈಸಿದವನು ಭಾರತಜ್ಞ (Indologist) ಮತ್ತು ಬಹುವಿಷಯಜ್ಞ ಎನಿಸಿದ್ದ ಜೇಮ್ಸ್ಪ್ರಿನ್ಸೆಪ್. ಈತ ಬ್ರಿಟಿಷ್ಪ್ರಜೆ. ಕಾಲ: 20 ಆಗಸ್ಟ್, 1799 – 23 ಏಪ್ರಿಲ್‌, 1840. ಬ್ರಿಟನ್ನಿನಲ್ಲಿ ಜನಿಸಿ, ಅಲ್ಲಿಯೇ ವಿದ್ಯಾಭ್ಯಾಸ ಮುಗಿಸಿದ ಈತ ತನ್ನ 20ನೆಯ ವಯಸ್ಸಿನಲ್ಲಿ (1819) ಭಾರತಕ್ಕೆ ಬಂದನು. ಮೊದಲು ಕಲ್ಕತ್ತಾ ಟಂಕಸಾಲೆಯಲ್ಲಿ ಗುಣಮಟ್ಟ ಪರಿಶೀಲಕನಾಗಿ ಕೆಲಸಕ್ಕೆ ಸೇರಿದ ಈತ ನಂತರ ಬನಾರಸ್ಟಂಕಸಾಲೆಗೆ ವರ್ಗಾವನೆಗೊಂಡನು. ಅಲ್ಲಿಯೇ ಈತ ಹತ್ತು ವರ್ಷಗಳ ಸೇವೆ ಸಲ್ಲಿಸಿ ನಂತರ ಕಲ್ಕತ್ತಾಕ್ಕೆ ಮರಳಿದನು. ಕಲ್ಕತ್ತಾದಲ್ಲಿ ಈತನ ಮೇಲಾಧಿಕಾರಿಯಾಗಿದ್ದ ಹೋರಸ್ಹೇಮನ್ವಿಲ್ಸನ್ಪ್ರಭಾವದಿಂದ ಬಾರತದ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಈತನು ಬನಾರಸ್ಸಿನಲ್ಲಿದ್ದಾಗ ಪ್ರಾಚೀನ ನಾಣ್ಯಗಳ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡನು.

   1830ರಲ್ಲಿ ಕಲ್ಕಾತ್ತಕ್ಕೆ ಮರಳಿದ ಈತನಿಗೆ ಅವನ ಮೇಲಾಧಿಕಾರಿ ವಿಲ್ಸನ್ಕೆಲವು ನಿಗೂಢ ಬರವಣಿಗೆಗಳನ್ನು ಹೊಂದಿದ್ದ ನಾಣ್ಯಗಳ ಪಟ್ಟಿಯನ್ನು ಸಿದ್ಧಪಡಿಸಲು ತಿಳಿಸಿದನು. ನಾಣ್ಯಗಳ ಮೇಲಿನ ಲಿಪಿಯು ಆತನ ಆಸಕ್ತಿಯನ್ನು ಕೆರಳಿಸಿತು. ಮುಂದೆ 1833 ರಲ್ಲಿ ಆತನಿಗೆ ದೆಹಲಿಯ ಫಿರೋಜ್ಶಾ ಅರಮನೆಯ ಆವರಣದಲ್ಲಿದ್ದ ಶಿಲಾಸ್ತಂಭವನ್ನು ಹೋಲುವ ಮತ್ತೊಂದು ಸ್ತಂಭ ಪ್ರಯಾಗದಲ್ಲಿ (ಅಲಹಾಬಾದ್) ದೊರೆತಿತು. ಅವುಗಳ ಮೇಲಿನ ಶಾಸನಗಳನ್ನು ಸಂಸ್ಕೃತ ವಿದ್ವಾಂಸರೊಬ್ಬರ ನೆರವಿನಿಂದ ಓದಲು ಪ್ರಯತ್ನಿಸಿದ ಅವನಿಗೆ ಅಲ್ಲಿ ಮೇಲೆ ಮತ್ತೊಂದು ಲಿಪಿಯು ಇರುವುದು ಕಂಡುಬಂದಿತು. ಅಲ್ಲದೇ ಅದಾಗಲೇ ಏಷ್ಯಾಟಿಕ್‌  ಸೊಸೈಟಿ ಆಫ್ಬೆಂಗಾಲ್ ಸಂಶೋಧನಾ ಪತ್ರಿಕೆಯ ಸಂಪಾದಕನಾಗಿದ್ದ ಈತನಿಗೆ ದೇಶದ ವಿವಿಧ ಭಾಗಗಳಿಂದ ನಾಣ್ಯಗಳು, ಶಾಸನಗಳು, ಪಳೆಯುಳಿಕೆಗಳು ಅದ್ಯಯನಕ್ಕಾಗಿ ಬರುತ್ತಿದ್ದವು. ಪರಿಣಾಮವಾಗಿ ನೇಪಾಳದಲ್ಲಿದ್ದ ಆಂಗ್ಲ ಅಧಿಕಾರಿಯೊಬ್ಬನು ಈತನಿಗೆ ಅಲ್ಲಿನ ಶಾಸನದ ನಕಲು ಪ್ರತಿಯೊಂದನ್ನು ಅಧ್ಯಯನಕ್ಕಾಗಿ ಕಳುಹಿಸಿದನು. ಹಿಂದಿನ ಪ್ರಯಾಗ ಶಾಸನದ ಜೊತೆಗೆ ನೇಪಾಳದ ಭಾಗದಲ್ಲಿನ ಶಾಸನದ ನಕಲನ್ನು ಹೋಲಿಸಿ ನೋಡಿದ ಈತನಿಗೆ ಅವುಗಳ ಲಿಪಿ ಒಂದೇ ತೆರನಾಗಿರುವುದು ಕಂಡುಬಂದಿತು. ನಂತರ ಸಾಂಚಿಯಿಂದ ಬಂದ ಅಂತಹುದೇ ಮತ್ತೊಂದು ಶಾಸನದ ಬರವಣಿಗೆಯನ್ನು ಮೊದಲೆರಡು ಶಾಸನಗಳ ಲಿಪಿಯೊಂದಿಗೆ ಹೋಲಿಸಿದ ಅವನಿಗೆ ಮೂರೂ ಮಾದರಿಗಳಲ್ಲಿನ ಕೆಲವು ಅಕ್ಷರಗಳನ್ನು ಓದಲು ಸಾಧ್ಯವಾಯಿತು.

   ಶಾಸನಗಳ ಮೇಲಿನ ನಿಗೂಢ ಲಿಪಿಯ ಬಗೆಗಿನ ತನ್ನ ಸಂಶೋಧನೆಯನ್ನು ನಾಲ್ಕು ವರ್ಷಗಳ ಕಾಲ ಮುಂದುವರಿಸಿದ ಪ್ರಿನ್ಸೆಪ್ಪನಿಗೆ 1837 ವೇಳೆಗೆ ಲಿಪಿಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಲು ಸಾಧ್ಯವಾಯಿತು. ಅವನು ತನ್ನ ಸಂಶೋಧನೆಯನ್ನು 1838ರಲ್ಲಿ ಏಷ್ಯಾಟಿಕ್ಸೊಸೈಟಿಯ ಸದಸ್ಯರ ಮುಂದೆ ಪ್ರಸ್ತುತಪಡಿಸಿದನು. ಮೂಲಕವಾಗಿ ಅಶೋಕನ ಶಾಸನಗಳ ಬ್ರಾಹ್ಮಿ ಲಿಪಿಯನ್ನು ಓದಿದ ಮೊದಲಿಗನಾದನು. ಅವನು ಮುಂದೆ ಕರೋಷ್ಠಿ ಲಿಪಿಯನ್ನೂ ಸಹಾ ಓದಿ ಅರ್ಥೈಸಿದನು. ಆದರೆ ಅವನ ನಿರಂತರ ದುಡಿಮೆಯ ಫಲವಾಗಿ ಆರೋಗ್ಯ ಕ್ಷೀಣಿಸಿತು. ಚಿಕಿತ್ಸೆಗಾಗಿ ತಾಯ್ನಾಡಿಗೆ ಮರಳುವಾಗ ಅವನು ತನ್ನ 41ನೆ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದನು.

***** 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ