ಶ್ರೀ ರಾಮಾನುಜಾಚಾರ್ಯರು, ಶ್ರೀವೈಷ್ಣವ ಸಂಪ್ರದಾಯ ಮತ್ತು ವಿಶಿಷ್ಟಾದ್ವೈತ ಸಿದ್ಧಾಂತ

ವೈಯುಕ್ತಿಕ ವಿವರಗಳು: ಕಾಲ:- 1017 – 1137. ಜನ್ಮಸ್ಥಳ:- ಶ್ರೀಪೆರಂಬದೂರು, ತಮಿಳುನಾಡು. ತಂದೆ:-ಕೇಶವ ಸೋಮಯಾಜಿ. ತಾಯಿ:- ಕಾಂತಿಮತಿ. ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನನ.

ಬಾಲ್ಯ ಮತ್ತು ವಿದ್ಯಾಭ್ಯಾಸ: ಕಂಚಿಯಲ್ಲಿ ಶಿಕ್ಷಣ. ಗುರು:- ಯಾದವ ಪ್ರಕಾಶರು. ಬಾಲ್ಯದಲ್ಲಿಯೇ ಅಪಾರ ಬುದ್ಧಿವಂತಿಕೆ. ಗುರುಗಳೊಂದಿಗೆ ವಾಗ್ವಾದ. ಕಾರಣ ಯಾದವರು ಅದ್ವೈತಿಗಳು. ವಿವಾಹವಾದರೂ ಸನ್ಯಾಸ ಸ್ವೀಕಾರ

ಶ್ರೀರಂಗಂ ಮಠದ ಮುಖ್ಯಸ್ಥರು: ಶ್ರೀರಂಗಂ ಮಠದ ಯಾಮುನಾಚಾರ್ಯರ ಕೋರಿಕೆ. ಮಠದ ಮುಖ್ಯಸ್ಥರಾಗಿ ಅಧಿಕಾರ ಗ್ರಹಣ. ಶ್ರೀವೈಷ್ಣವ ಪಂಥದ ಪ್ರಚಾರ. ಕುಲೋತ್ತುಂಗ ಚೋಳನ ವಿರೋಧ. ಕರ್ನಾಟಕಕ್ಕೆ ವಲಸೆ. ವಿಷ್ಣುವರ್ಧನನ ಆಶ್ರಯ; ಮೇಲುಕೋಟೆಯಲ್ಲಿ ವಾಸ್ತವ್ಯ. ಕುಲೋತ್ತುಂಗ ಚೋಳನ ಮರಣಾನಂತರ ತಮಿಳುನಾಡಿಗೆ ಹಿಂತಿರುಗಿದರು

ಧಾರ್ಮಿಕ ಕೃತಿಗಳು: ವೇದಾಂತ ಸಾರ, ವೇದಾಂತ ಸಂಗ್ರಹ ಮತ್ತು ವೇದಾಂತ ಸೂತ್ರಗಳಿಗೆ ಭಾಷ್ಯಗಳು. ಶ್ರೀಭಾಷ್ಯ ಸೂತ್ರ [ಬ್ರಹ್ಮಸೂತ್ರ ಭಾಷ್ಯ], ವೇದಾಂತ ದೀಪಿಕಾ, ಗೀತಾ ಭಾಷ್ಯ, ಶ್ರೀರಂಗ ಗದ್ಯ,    ಶ್ರೀವೈಕುಂಠ ಗದ್ಯ, ಶರಣಾಗತ ಗದ್ಯ   ಮತ್ತು ನಿತ್ಯ ಗದ್ಯ.

ವಿಶಿಷ್ಟಾದ್ವೈತ ಸಿದ್ಧಾಂತ: ವಿಶಿಷ್ಟಾದ್ವೈತ ಎಂದರೆ ವಿಷೇಶಣಗಳಿಂದ ಕೂಡಿರುವ ಅದ್ವೈತ ಎಂದು ಅರ್ಥ.  ಇದು ಆಗಮಗಳ ಅಂದರೆ ವೇದಗಳ ಆಧಾರಿತವಾದ ಸಿದ್ಧಾಂತ. ಅದ್ವೈತದ ನಿರಾಕರಣೆ. ದೇವರು ಸುಗುಣ; ಸೃಷ್ಠಿಕರ್ತ ಅವನೇ. ಸರ್ವಜೀವಿಗಳಿಗೂ ಆಧಾರ ಮತ್ತು ನಿಯಂತ್ರಕ.

   ಬ್ರಹ್ಮ ಅಥವಾ ಪರಮಾತ್ಮ ಮತ್ತು ಆತ್ಮ ಅಥವಾ ಜೀವಾತ್ಮ ಎರಡಲ್ಲದೆ ಒಂದೇ ಆಗಿರುವುದು ಅದ್ವೈತ. ಅಲ್ಲದೇ ಈ ಸೃಷ್ಟಿ ಮಾಯೆ ಎನ್ನುತ್ತದೆ ಅದ್ವೈತ. ಆದರೆ, ರಾಮಾನುಜರು ಪರಮಾತ್ಮನು ಸಗುಣ; ಸರ್ವಶಕ್ತ. ಅಲ್ಲದೇ ಈ ಜಗತ್ತು ಸತ್ಯವೆಂದು ವಾದಿಸುತ್ತಾರೆ. ವಿಶಿಷ್ಟಾದ್ವೈತ ಸಿದ್ಧಾಂತದಲ್ಲಿ ಬ್ರಹ್ಮ, ಚಿತ್, ಅಚಿತ್ ಎಂಬ ಮೂರು ಅಂಶಗಳು ಇವೆ. ಬ್ರಹ್ಮ ಎಂದರೆ ದೇವರು, ಪರಮಾತ್ಮ. ಚಿತ್ ಎಂದರೆ ಆತ್ಮ. ಅಚಿತ್ ಎಂದರೆ ಜಡವಸ್ತು ಅಥವಾ ಜಗತ್ತು. ವಿಶಿಷ್ಟಾದ್ವೈತವು ಸಕಲ ಕಲ್ಯಾಣ ಗುಣನಿಧಿಯಾದ ವಿಷ್ಣುವನ್ನು ಪರಬ್ರಹ್ಮವೆಂದೂ ಅವನ ಅನುಗ್ರಹದಿಂದ ಮುಕ್ತಿದೊರೆಯುವುದೆಂದೂ ನಿರೂಪಿಸುತ್ತದೆ.

ಮೋಕ್ಷದ ಪರಿಕಲ್ಪನೆ: ಮೋಕ್ಷವೆಂದರೆ ಭಗವಂತನೊಡನೆ ಪಡೆದ ಸಖ್ಯವೇ ಹೊರತು ಜೀವಾತ್ಮನು ಪರಮಾತ್ಮನಲ್ಲಿ ಐಕ್ಯನಾಗುವುದಿಲ್ಲ. ಅಂದರೆ ಆತ್ಮನು ಪರಮಾತ್ಮನ ಸನ್ನಿಧಾನವನ್ನು ಅಥವಾ ಸಾನ್ನಿಧ್ಯವನ್ನು ಪಡೆಯುತ್ತಾನೆಯೇ ಹೊರತು ಅದ್ವೈತದಲ್ಲಿ ಹೇಳಿರುವಂತೆ ಪರಮಾತ್ಮನಲ್ಲಿ ಐಕ್ಯನಾಗುವುದಿಲ್ಲ. ಇಲ್ಲಿ ಮುಕ್ತಿಗೆ ಭಕ್ತಿ ಮಾರ್ಗದ ಪ್ರತಿಪಾದನೆ ಮಾಡಲಾಗಿದೆ.

***** 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources