ಮಧ್ವಾಚಾರ್ಯರು ಮತ್ತು ದ್ವೈತ ಸಿದ್ಧಾಂತ
(ಬ್ರಹ್ಮ ಮೀಮಾಂಸಾಶಾಸ್ತ್ರ ಅಥವಾ ತತ್ವವಾದ)
ಜನನ
: ಉಡುಪಿ ಬಳಿಯ ಪಾಜಕ. ತಂದೆ ಮಧ್ವಗೇಹ
ಭಟ್ಟ; ತಾಯಿ ವೇದಾವತಿ
ಬಾಲ್ಯದ
ಹೆಸರು: ವಾಸುದೇವ
ಜೀವಿತಾವದಿ
ಸಾ.ಶ.ವ.
1238–1317
ಜೀವಿತಾವಧಿ ಕುರಿತ
ಭಿನ್ನಾಭಿಪ್ರಾಯ: Many
sources date him to 1238–1317 period, but some place him about the 1199-1278
period.
ಜೀವನ ಕುರಿತ ಆಧಾರಗಳು: ಸುಮಧ್ವವಿಜಯ – ಶ್ರೀ ನಾರಾಯಣ ಪಂಡಿತಾಚಾರ್ಯ. ವಾಯುವಿನ
ಅವತಾರ ಎಂಬ ನಂಬಿಕೆ. ಸ್ವಯಂ ಮಧ್ವರ ಕೃತಿಗಳಲ್ಲಿ ಉಲ್ಲೇಖ.
ಆಚಾರ್ಯರ ಆಶ್ರಮ ನಾಮಧೇಯ
ಪೂರ್ಣಪ್ರಜ್ಞ. ವೇದಾಂತ ಸಾಮ್ರಾಜ್ಯದಲ್ಲಿ ಅಭಿಷಿಕ್ತರಾದಾಗ ಇಟ್ಟ ಹೆಸರು ಆನಂದತೀರ್ಥ. ಮಧ್ವ ಎನ್ನುವುದು
ಅವರ ವೈದಿಕ ನಾಮಧೇಯ. ಮುಂದೆ ಈ ಹೆಸರಿನಿಂದಲೇ ಅವರು ಪ್ರಸಿದ್ಧರಾದರು.
ಕೃತಿಗಳು:
ಸು. 37 ಕೃತಿಗಳ ರಚನೆ ಎಂಬ
ನಂಬಿಕೆ ಇದೆ.
ತತ್ತ್ವವಾದವನ್ನು
ಜನರಿಗೆ ತಿಳಿಯಪಡಿಸಲು ‘ಪ್ರಸ್ಥಾನತ್ರಯ’
(ಗೀತೆ, ದಶೋಪನಿಷತ್ತುಗಳು ಮತ್ತು ಬ್ರಹ್ಮಸೂತ್ರ)ಗಳಿಗೆ
ಭಾಷ್ಯ ಬರೆದರು.
ಮಹಾಭಾರತ,
ಪುರಾಣಗಳ ತಾತ್ತ್ವಿಕ ವಿಮರ್ಶೆಗಾಗಿ “ಮಹಾಭಾರತ
ತಾತ್ಪರ್ಯ ನಿರ್ಣಯ”
ಭಾಗವತಕ್ಕೆ
ತಾತ್ಪರ್ಯ.
ಋಗ್ವೇದದ
40 ಸೂಕ್ತಗಳಿಗೆ ಭಾಷ್ಯ.
ಪುರಾಣ ಶ್ಲೋಕಗಳನ್ನು ಸಂಗ್ರಹಿಸಿ ‘ಕೃಷ್ಣಾಮೃತ ಮಹಾರ್ಣವ’.
ವಾಸ್ತುಶಿಲ್ಪ
-ಪ್ರತಿಮಾಶಿಲ್ಪದ ಅಪೂರ್ವ ವಿವರಗಳನ್ನೊಳಗೊಂಡ ‘ತಂತ್ರಸಾರಸಂಗ್ರಹ’.
ಅಪೂರ್ವ ಗಣಿತ ಗ್ರಂಥ ‘ತಿಥಿ
ನಿರ್ಣಯ’.
ಶ್ರೇಷ್ಠ ಗೇಯಕಾವ್ಯವಾದ ದ್ವಾದಶ ಸ್ತೋತ್ರಗಳ ರಚನೆ.
ಅಣುವ್ಯಾಖ್ಯಾನ ಇವರ
ಅತ್ಯಂತ ಪ್ರಸಿದ್ಧ ಕೃತಿ.
ದೇಹಾಂತ್ಯ, ಮಧ್ವನವಮಿಯ
ಆಚರಣೆ
೭೯ ವರ್ಷಗಳ ಕಾಲ ಸಾರ್ಥಕ
ಬದುಕನ್ನು ಬಾಳಿ ಪಿಂಗಲ ಸಂವತ್ಸರದ (ಕ್ರಿ.ಶ. ೧೩೧೭) ಮಾಘ ಶುದ್ಧನವಮಿಯಂದು ಎಲ್ಲ ಶಿಷ್ಯರನ್ನು ಬೀಳ್ಕೊಟ್ಟು
ಬದರಿಗೆಂದು ತೆರಳಿದರು. ಅನಂತರ ಅವರನ್ನು ಕಂಡವರಿಲ್ಲ. ಇಂದಿಗೂ ಈ ದಿನವನ್ನು ‘ಮಧ್ವನವಮಿ’
ಎಂದು ಅವರ ಪುಣ್ಯತಿಥಿಯನ್ನಾಗಿ ಆಚರಿಸಲಾಗುತ್ತಿದೆ.
ಬೋದನೆಗಳು:-
“ಗುಣಪೂರ್ಣವಾದ ಭಗವಂತನೊಬ್ಬನಿದ್ದಾನೆ,
ಅವನನ್ನು ‘ನಾರಾಯಣ’ ಎಂದು ಹೆಸರಿಸುತ್ತಾರೆ. ಈಶ್ವರ, ಬ್ರಹ್ಮ, ವಿಷ್ಣು
ಇವೆಲ್ಲವೂ ಅವನದೇ ಹೆಸರು. ದೇವರನ್ನು ಯಾವ ಹೆಸರಿನಿಂದ ಕರೆದರೂ ಸರಿಯೆ.
“ಈ ಜೀವ ಒಂದು ಪ್ರತಿಬಿಂಬ. ಭಗವಂತ ಅದರ ಬಿಂಬ. ಪ್ರತಿಬಿಂಬದ
ಮೂಲಕವೆ ಬಿಂಬದ ಅರಿವು. ಜೀವದ ಅರಿವಿಲ್ಲದೆ ದೇವನ ಅರಿವು ಸಾಧ್ಯವಿಲ್ಲ. ಮೊದಲು ‘ನಾನು’
ತಿಳಿಯಬೇಕು. ಆಗ ಅವನು ತಿಳಿಯಲ್ಪಡುತ್ತಾನೆ.”
“ವೇದಗಳು ಮೂಲ ಪ್ರಮಾಣಗಳು. ತತ್ತ್ವವನ್ನು ತಿಳಿಯಲೆಂದು
ತರ್ಕಕ್ಕೆ ಶರಣಾಗಬೇಡ. ತರ್ಕ ದಾರಿ ತಪ್ಪಿಸುವ ಭಯವುಂಟು. ಸತ್ಯದ ಅರಿವಿಗಾಗಿ ವೇದಗಳಿಗೇ ಶರಣಾಗಬೇಕು.”ಅವೆರಡೂ
ಒಂದೇ
“ಕರ್ತವ್ಯ, ಕರ್ಮವನ್ನು
ಎಂದೂ ಮರೆಯಬೇಡ. ನಿನಗಿಂತ ಹೆಚ್ಚು ಕಷ್ಟದಲ್ಲಿರುವವರ ಸೇವೆಯೆ ನಿಜವಾದ ಕರ್ತವ್ಯ ಕರ್ಮ. ನೀನು ಭಗವಂತನ
ರಾಜ್ಯದ ಪ್ರಜೆಯಾದುದಕ್ಕಾಗಿ ಅವನಿಗೆ ಸಲ್ಲಿಸಬೇಕಾದ ಕಂದಾಯವೆ ಈ ಲೋಕಸೇವೆ.”
0“ಈ
ಜಗತ್ತು ಭಗವಂತನ ಅದ್ಭುತ ಸೃಷ್ಟಿ. ಜಗತ್ತು ಸತ್ಯ. ಭಗವಂತನ ಹಿರಿಮೆಯನ್ನು ಅರಿತುಕೊ. ನಿನ್ನ ಸೀಮೆಯನ್ನೂ
ಅರಿತುಕೊ. ಆ ಮಹಾ ಶಕ್ತಿಗೆ ಶರಣಾಗು. ಬಾಳಿನ ಬಂಧನವನ್ನು ದಾಟಲು ಇದೊಂದೇ ದಾರಿ.”
ದ್ವೈತ ಸಿದ್ಧಾಂತ:
ಜೀವ ಮತ್ತು ಪರಮಾತ್ಮನ ನಡುವೆ ಭೇದವಿದೆ. ಸರ್ವಂ ಖಲ್ವಿದಂ ಬ್ರಹ್ಮ
ಎಂದರೆ ಎಲ್ಲವೂ ಬ್ರಹ್ಮವೆಂದಲ್ಲ. ಎಲ್ಲವೂ ಬ್ರಹ್ಮಕ್ಕೆ (ವಿಷ್ಣುವಿಗೆ) ಅಧೀನ ಎಂದರ್ಥ. ಅವೆರಡೂ ಒಂದೇ ಎಂದರ್ಥವಲ್ಲ.
ಅಹಂ ಬ್ರಹ್ಮಾಸ್ಮಿ ಎಂದರೆ ನಾನೇ ಬ್ರಹ್ಮನಲ್ಲ. ನಾನು ಬ್ರಹ್ಮನಂತೆ ಆನಂದಾದಿ ಗುಣಗಳಿರುವವನು ಎಂದು
ಅರ್ಥಮಾಡಿಕೊಳ್ಳಬೇಕು.
ಮೋಕ್ಷದಲ್ಲೂ ಜೀವ ಮತ್ತು ಈಶ್ವರರಿಗೆ ಬೇಧ ಉಂಟು. ಮೋಕ್ಷದಲ್ಲಿ ಜೀವನ ಅಸ್ತಿತ್ವ ನಾಶವಾದರೆ ಮೋಕ್ಷಕ್ಕೆ ಅರ್ಥವಿಲ್ಲ.
Comments
Post a Comment