ಬಕ್ಸಾರ್ ಕದನ ಅಕ್ಟೋಬರ್ 22, 1764 ಮತ್ತು ಅಲಹಾಬಾದ್ ಒಪ್ಪಂದ – ಆಗಸ್ಟ್ 16, 1765
• ಮೀರ್ ಖಾಸೀಂ, ಶೂಜ ಉದ್ ದೌಲ್ ಮತ್ತು ಮೊಗಲ್ ಚಕ್ರವರ್ತಿ 2ನೆ ಶಾ ಆಲಂ ಹಾಗೂ ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿಯ ನಡುವೆ ನಡೆಯಿತು.
• ಕೆಲವು
ಪೂರಕ ಮಾಹಿತಿಗಳು.
• ಬಕ್ಸಾರ್ - ಇದು ಪಾಟ್ನಾದಿಂದ (ಬಿಹಾರ) ಸು. ೧೮೦ ಕಿ.ಮೀ. ದೂರದಲ್ಲಿರುವ ಪ್ರದೇಶ.
• ಅಂದಿಗೆ ಇದೊಂದು ವ್ಯಾಪಾರಿ ಕೇಂದ್ರ ಮತ್ತು ಸಣ್ಣ ಕೋಟೆಯೊಂದರಿಂದ ಕೂಡಿತ್ತು.
• ಗಂಗಾನದಿಯ ದಡದಲ್ಲಿದೆ.
• ಸ್ವಲ್ಪ ಹಿನ್ನೆಲೆ. . .
• ಪ್ಲಾಸಿ ಕದನಾನಂತರ ಮೀರ್ ಜಾಫರನನ್ನು ಬಂಗಾಳದ ನವಾಬನನ್ನಾಗಿ ಮಾಡಲಾಗಿತ್ತು.
• ಈತ ಮತ್ತು ಕಂಪೆನಿಯ ನಡುವೆ ಆರಂಭದಲ್ಲಿ ಬಾಂಧವ್ಯ ಉತ್ತಮವಾಗಿತ್ತು.
• ಆದರೆ, ಕ್ರಮೇಣ ಬ್ರಿಟಿಷರ ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸಲು ಜಾಫರನಿಗೆ ಆಗಲಿಲ್ಲ.
• ಬ್ರಿಟಿಷರ ಹಿಡಿತದಿಂದ ಮುಕ್ತನಾಗಲು ಬಂಗಾಳದ ಚಿನ್ಸುರದಲ್ಲಿದ್ದ ಡಚ್ಚರ ಸಹಾಯ ಕೋರಿದ.
• ಈ ವೇಳೆಗೆ ಬಂಗಾಳದ ಗವರ್ನರ್
ಆಗಿದ್ದ ರಾಬರ್ಟ್ ಕ್ಲೈವ್ ಡಚ್ಚರನ್ನು ಪುಲ್ಟಾ ಎಂಬಲ್ಲಿ ನಿರ್ಣಾಯಕವಾಗಿ ಸೋಲಿಸಿ “ಚಿನ್ಸುರ ಒಪ್ಪಂದ” ಮಾಡಿಕೊಂಡ.
• ಚಿನ್ಸುರ ಒಪ್ಪಂದ – ಬ್ರಿಟಿಷರು ಮತ್ತು ಡಚ್ಚರ ನಡುವೆ.
1. ಡಚ್ಚರ ಅಧಿಕಾರ ಚಿನ್ಸುರಕ್ಕೆ ಸೀಮಿತ.
2. ದೇಶೀಯ ಅರಸರ ವ್ಯವಹಾರಗಳಲ್ಲಿ ತಲೆ ಹಾಕದಿರುವುದು.
• ಇದರಿಂದ ಮೀರ್ ಜಾಫರ್
ಮತ್ತು ಬ್ರಿಟಿಷರ ನಡುವೆ ಸಂಬಂಧ ಹದಗೆಟ್ಟಿತು.
• ರಾಬರ್ಟನ ನಂತರ ಬಂದ ಗವರ್ನರ್
ಗಳು ಮೀರ್ ಜಾಫರನ ಬದಲು ಅವನ ಅಳಿಯ “ಮೀರ್ ಖಾಸಿಂನನ್ನು ಬಂಗಾಳದ ನವಾಬ ಹುದ್ದೆಗೆ ಏರಿಸಿದರು.
• ಮೀರ್ ಖಾಸೀಂ ನವಾಬನಾದ ಮೇಲೆ. . .
• ಬ್ರಿಟಿಷರಿಗೆ ಮಿಡ್ನಾಪುರ, ಚಿತ್ತಗಾಂಗ್ ಮತ್ತು ಬರ್ದ್ವಾನ್
ಪ್ರದೇಶಗಳನ್ನು ಬಿಟ್ಟುಕೊಟ್ಟ.
• ಆದರೆ,
ಇವನು ಮಹತ್ವಾಕಾಂಕ್ಷಿ ಆಗಿದ್ದ.
• ಆಡಳಿತದ ಸುಧಾರಣೆಗೆ ಅನೇಕ ಕ್ರಮಗಳನ್ನು ಕೈಗೊಂಡ.
• ರಾಜಧಾನಿಯನ್ನು ಮುರ್ಶಿದಾಬಾದ್‌ನಿಂದ ಮೋಂಗೇರ್ ಗೆ ಬದಲಾಯಿಸಿದ.
ಘರ್ಷಣೆಗೆ ಕಾರಣವಾದ ಅಂಶಗಳು.
1. ದಸ್ತಕ್ (ಪರವಾನಗಿ ಪತ್ರ) ಗಳ ದುರುಪಯೋಗದಿಂದ ನವಾಬನ ಖಜಾನೆಗೆ ಆರ್ತಿಕ ನಷ್ಟವಾಗುತ್ತಿತ್ತು.
2. ಇದನ್ನು ತಡೆಯಲು ಬ್ರಿಟಿಷ್ ಅಧಿಕಾರಿಗಳಿಗೆ ನವಾಬನ
ಸೂಚನೆ;ಬ್ರಿಟಿಷರು ಇದಕ್ಕೆ ಯಾವುದೇ ಗಮನ ಕೊಡಲಿಲ್ಲ.
೩. ಕಾರಣ, ನವಾಬ ಆಂಗ್ಲರ ಕೆಲವು ವಿಶೇಷ ಸವಲತ್ತುಗಳನ್ನು ರದ್ದುಪಡಿಸಿದ.
೪. ಜೊತೆಗೆ, ಭಾರತೀಯ ವ್ಯಾಪಾರಿಗಳಿಗೂ “ತೆರಿಗೆ ಮುಕ್ತ ವ್ಯಾಪಾರ” ಮಾಡಲು ಅನುಮತಿ ನೀಡಿದ.
೫. ನವಾಬನ ಕ್ರಮದಿಂದ ಮಾರುಕಟ್ಟೆಯಲ್ಲಿ ಬ್ರಿಟಿಷರು ಮತ್ತು ಭಾರತೀಯ ವ್ಯಾಪಾರಿಗಳ ನಡುವೆ ಪೈಪೋಟಿ ಏರ್ಪಟ್ಟಿತು.
೬. ಬ್ರಿಟಿಷರು ನವಾಬನಿಗೆ ತನ್ನ ತೆರಿಗೆ ಮುಕ್ತ ವ್ಯಾಪಾರದ ಸೌಲಭ್ಯವನ್ನು ತಡೆಯುವಂತೆ ಸೂಚಿಸಿದರು.
೭. ನವಾಬ ಇದಕ್ಕೆ ಒಪ್ಪಲಿಲ್ಲ. ಪರಿಣಾಮ ನವಾಬ ಮತ್ತು ಆಂಗ್ಲರ ನಡುವೆ ಘರ್ಷಣೆಗಳು ಆರಂಭವಾದವು.
ಆರಂಭಿಕ ಘರ್ಷಣೆಗಳು
• ಮೋಂಗೇರ್, ಮುರ್ಶಿದಾಬಾದ್, ಕಾಟ್ವಾ, ಗಿರಿಯ, ಸೂಟಾ ಮತ್ತು ಉದಯನಾಲಾ
ಎಂಬಲ್ಲಿ ನಡೆದ ಕದನಗಳಲ್ಲಿ ಮೀರ್ ಖಾಸೀಂನಿಗೆ ಸೋಲು.
• ಬ್ರಿಟೀಷರು ಪಾಟ್ನಾವನ್ನು ತಮ್ಮ ವಶಕ್ಕೆ
ಪಡೆದರು.
• ನವಾಬನು ಅದನ್ನು ತನ್ನ ವಶಕ್ಕೆ ಪಡೆದು
ಅಲ್ಲಿದ್ದ ೧೪೮ ಕ್ಕೂ ಹೆಚ್ಚು ಆಂಗ್ಲರನ್ನು ಸೆರೆ ಹಿಡಿದನು.
• ಇತ್ತ ಕಲ್ಕತ್ತಾ ಕೌನ್ಸಿಲ್ ಮೀರ್
ಖಾಸೀಂ ಬದಲಿಗೆ ಮತ್ತೆ ಮೀರ್ ಜಾಫರನನ್ನು ನವಾಬನ ಹುದ್ದೆಗೇರಿಸಿತು.
• ಕೋಪಗೊಂಡ ಮೀರ್ ಖಾಸೀಂ ಬಂಧಿತ ಆಂಗ್ಲರನ್ನು
ಕೊಂದನು.
• ಮುಂದೆ ಮೀರ್ ಖಾಸೀಂ ಅವಧ್ ಪ್ರಾಂತ್ಯಕ್ಕೆ ಪಲಾಯನ
ಮಾಡಿದ.
• ಅಲ್ಲಿ ಮೀರ್ ಖಾಸೀಂ ಬ್ರಿಟಿಷರ ವಿರುದ್ಧ ಮೈತ್ರಿಕೂಟ ರಚಿಸಿದ.
ಮೈತ್ರಿಕೂಟದ ಸದಸ್ಯರು ಮತ್ತು ಯುದ್ಧದ ಘಟನೆಗಳು.
• ಅವಧ್ ನವಾಬ ಶೂಜ ಉದ್ ದೌಲ ಮತ್ತು
ಮೊಗಲ್ ಚಕ್ರವರ್ತಿ ೨ನೆ ಶಾ ಆಲಂ ಉಳಿದಿಬ್ಬರು ಸದಸ್ಯರು.
• ಆಂಗ್ಲರನ್ನು ಬಂಗಾಳದಿಂದ ಓಡಿಸುವುದು ಮೈತ್ರಿಕೂಟದ ಉದ್ಧೇಶ.
• ಮೈತ್ರಿಕೂಟದಲ್ಲಿ ಸು. ೫೦ ಸಾವಿರದಷ್ಟು ಸೈನ್ಯವಿತ್ತು.
• ಬ್ರಿಟಿಷರ ಬಳಿ ೭೦೭೨ ರಷ್ಟು
ಸೈನ್ಯ; ಹೆಕ್ಟೆರ್ ಮನ್ರೊ ನಾಯಕನಾಗಿದ್ದ.
• ಯುದ್ಧ
ಕೇವಲ ಅರ್ಧ ದಿನದಲ್ಲಿ ಮುಗಿದು ಹೋಯಿತು.
ಪರಿಣಾಮಗಳು.
• ಬ್ರಿಟಿಷರ ಕಡೆ ಸು. ೮೪೭ ರಷ್ಟು ಸಾವು ಮತ್ತು ಮೈತ್ರಿಕೂಟದ ಸು. ೨೦೦೦ ಸೈನಿಕರು ಸತ್ತರು. ಮೀರ್ ಖಾಸೀಂ ರಣರಂಗದಿಂದ ಪಲಾಯನ
ಮಾಡಿದ.
• ಶೂಜ ಉದ್ ದೌಲ ಮತ್ತು
ಮೊಗಲ್ ಚಕ್ರವರ್ತಿ ಇಬ್ಬರೂ ಬ್ರಿಟಿಷರಿಗೆ ಶರಣಾಗತರಾದರು.
• ಅಲಹಾಬಾದ್ ಒಪ್ಪಂದದ ಮೂಲಕ ಬಕ್ಸಾರ್ ಯುದ್ಧ ಮುಕ್ತಾಯವಾಯಿತು.
ಅಲಹಾಬಾದ್ ಒಪ್ಪಂದ – ಆಗಸ್ಟ್ 16, ೧೭೬೫.
• ೧೭೬೫ ರಲ್ಲಿ
ರಾಬರ್ಟ್ ಕ್ಲೈವ್ ೨ನೆ ಸಲ ಬಂಗಾಳದ ಗವರ್ನರ್
ಆಗಿ ಭಾರತಕ್ಕೆ ಬಂದನು.
• ಅವನು ಯುದ್ಧವನ್ನು ಮುಂದುವರಿಸಲು ಇಚ್ಛಿಸದೇ ಶೂಜ್ ್ಉದ್ ದೌಲ್ ಮತ್ತು
ಎರಡನೆ ಶಾ ಆಲಂರೊಂದಿಗೆ ಒಪ್ಪಂದ ಮಾಡಿಕೊಂಡ.
• ಒಪ್ಪಂದ ಅಲಹಾಬಾದ್ ನಲ್ಲಿ ನಡೆಯಿತು.
• ಒಪ್ಪಂದದ ಕರಾರುಗಳೆಂದರೆ:-
1. ಶೂಜ ಉದ್ ದೌಲನಿಗೆ ಕಾರಾ, ಮಾಣಿಕ್ ಪುರ ಮತ್ತು ಅಲಹಾಬಾಧ್ ಹೊರತು ಪಡಿಸಿದ ಅವಧ್ ಪ್ರಾಂತ್ಯವನ್ನು ಹಿಂತಿರುಗಿಸಲಾಯಿತು.
2. ಇದಕ್ಕೆ ಪ್ರತಿಯಾಗಿ ಅವನು ಕಂಪೆನಿಗೆ ೫೦ ಲಕ್ಷ ಕೊಡಲು ಒಪ್ಪಿದ.
೩. ಅವಧ್ ನವಾಬನ
ಆಸ್ಥಾನದಲ್ಲಿ ಬ್ರಿಟಿಷ್ ಸೈನ್ಯವೊಂದನ್ನು ಇಡುವುದು ಮತ್ತು ಅದರ ವಾರ್ಷಿಕ
ವೆಚ್ಚವನ್ನು ಕಂಪೆನಿಗೆ ನವಾಬ ಸಲ್ಲಿಸಲು ಒಪ್ಪಿದ. (ಟಿಪ್ಪಣಿ: ಸಹಾಯಕ ಸೈನ್ಯ ಪದ್ಧತಿಯ ಮೊದಲ ಲಕ್ಷಣಗಳನ್ನು
ಇಲ್ಲಿ ಕಾಣಬಹುದು)
4. ಕಾರಾ ಮತ್ತು
ಅಲಹಾಬಾದ್ಗಳನ್ನು ಮೊಗಲ್ ಚಕ್ರವರ್ತಿಗೆ ಕೊಡಲಾಯಿತು.
5. ಬಂಗಾಳದ “ದಿವಾನಿ ಹಕ್ಕು” (ಕಂದಾಯ ವಸೂಲಿ ಮಾಡುವ ಅಧಿಕಾರ) ವನ್ನು ಕಂಪೆನಿಗೆ ಕೊಡಲಾಯಿತು.
6. ಪ್ರತಿಯಾಗಿ ಕಂಪೆನಿ ಚಕ್ರವರ್ತಿಗೆ ವಾರ್ಷಿಕ ೨೬ ಲಕ್ಷಗಳ ವಿಶ್ರಾಂತಿ
ವೇತನ ಅಥವಾ
ಗೌರವ ಧನ (Tribute) ಕೊಡಲು ಒಪ್ಪಿತು.
ಯುದ್ಧದ ಪ್ರಾಮುಖ್ಯತೆ.
• ಪ್ಲಾಸಿ ಕದನಕ್ಕಿಂತಲೂ ದೂರಗಾಮಿ ಪರಿಣಾಮಗಳನ್ನು ಉಂಟು ಮಾಡಿತು.
• ಪ್ಲಾಸಿಯ ಕದನದಂತೆ ಇದು ಮೋಸದ ಯುದ್ಧವಾಗಿರಲಿಲ್ಲ.
• ಬ್ರಿಟಿಷರು ಮೂವರು ಧೇಶಿಯ ಅರಸರನ್ನು ಸೋಲಿಸಿದ್ದರು.
• ಬ್ರೂಮನ್:- “ಭಾರತದ ಅದೃಷ್ಟವು ಬಕ್ಸಾರ್ ಕದನದ ಮೇಲೆ ನಿಂತಿತ್ತು.”
• ರಾಮ್ಸೆ ಮೈರ್:- “ಯುದ್ಧವು ಬಂಗಾಳದಲ್ಲಿ ಬ್ರಿಟಿಷರ ಅಧಿಕಾರವನ್ನು ಸ್ಥಿರಪಡಿಸಿತು.
*****
Comments
Post a Comment