ಪ್ರಾಚೀನ ಭಾರತದ ಸಾಹಿತ್ಯ ಕೃತಿಗಳು

ಧಾರ್ಮಿಕ ಕೃತಿಗಳು

ವಿನಯಪೀಠಕ – ಬೌದ್ಧಭಿಕ್ಷುಗಳು ಪಾಲಿಸಬೇಕಾದ ನಿಯಮಗಳು.

ಸುತ್ತ ಪೀಠಕ – ಬುದ್ಧನ ಬೋಧನೆಗಳು.

ಅಭಿಧಮ್ಮ ಪೀಠಕ – ಬುದ್ಧನ ಜೀವನ ಮತ್ತು ಮಹಾಜನಪದಗಳ ಕುರಿತ ಮಾಃಇತಿ.

ಅಂಗುತ್ತರ ನಿಖಾಯ – ಮಹಾಜನಪದಗಳ ಉಲ್ಲೇಖ, ಶ.ಪೂ. ಆರನೆ ಶತಮಾನದ ಸಾಮಾಜಿಕ ಜೀವನ.

ದಿಗ ನಿಖಾಯ – ಶ.ಪೂ. ಆರನೆ ಶತಮಾನದ ಸಾಮಾಜಿಕ ಜೀವನ ಕುರಿತ ಮಾಹಿತಿ.

ಜಾತಕ ಕತೆಗಳು – ಬುದ್ಧನ ಪೂರ್ವಜನ್ಮದ ಕತೆಗಳು. 549 ಇವೆ.

ದೀಪವಂಶ & ಮಹಾವಂಶ – ಸಿಂಹಳಿ ಭಾಷೆಯಲ್ಲಿರುವ ಇವು ಪ್ರಾಚೀನ ಶ್ರೀಲಂಕಾದ ಇತಿಹಾಸ ಮತ್ತು ಭಾರತದೊಂದಿಗಿನ ಸಂಬಂಧಗಳ ವಿವರಗಳನ್ನು ಒಳಗೊಂಡಿವೆ.

ಮಿಲಿಂದ ಪನ್ಹ – ಇಂಡೋ-ಗ್ರೀಕ್‌ ಅರಸ ಮಿನಾಂಡರ ಮತ್ತು ಬೌದ್ಧಪಂಡಿತ ನಾಗಸೇನರ ನಡುವಣ ಸಂಭಾಷಣೆಗಳ ಸಾರವನ್ನು ಒಳಗೊಂಡಿದೆ.

ಬುದ್ಧಚರಿತೆ-ಅಶ್ವಘೋಷ – ಬುದ್ಧನ ಜೀವನ ಚರಿತ್ರೆ.

ಅಭಿಧಮ್ಮಕೋಶ,

ದಿವ್ಯಾವದಾನ,,

ಮಾಧ್ಯಮಿಕ ಸೂತ್ರ,

ಮಹಾಭಾಷ್ಯ.

 

ಆ. ಐತಿಹಾಸಿಕ ಅಥವಾ ಲೌಕಿಕ ಸಾಹಿತ್ಯ

ಸಂಗಂ ಕಾಲದ ಕೃತಿಗಳು

ಇಳಂಗೊ ಅಡಿಗಳ್ ರಚಿತ ಶಿಲಪ್ಪದಿಕಾರಂ,

ಚತ್ತನಾರನ ಮಣಿಮೇಖಲೈ,

ತಿರುವಳ್ಳುವರನ ತಿರುಕ್ಕುರಳ್‌

ಸೆಕಿಲಾರನ ಪೆರಿಯಪುರಾಣಗಳು ಅಲ್ಲದೇ ಜಯಗೊಂಡರ್‌ ರಚಿತ ಕಳಿಂಗತುಪ್ಪರಣಿ ಒಂದನೆ ಕುಲೋತ್ತುಂಗ ಚೋಳನ ಒರಿಸ್ಸಾ ಮೇಲಿನ ವಿಜಯದ ಮಾಹಿತಿ ಒದಗಿಸುತ್ತದೆ. ಮಾಣಿಕ್ಯ ವಾಚಕರ್‌ ಬರೆದಿರುವ ತಿರುವಾಚಕಂ ತಮಿಳುನಾಡಿನ ಅಂದಿನ ಭಕ್ತಿಪಂಥ ಕುರಿತ ಮಾಹಿತಿ ಒದಗಿಸುತ್ತದೆ.

 

ಶುಶ್ರೂತನ ಶುಶ್ರೂತ ಸಂಹಿತೆ,

ಚರಕನ ಚರಕ ಸಂಹಿತೆ,

ವಾಗ್ಭಟನ ಅಷ್ಟಾಂಗ ಸಂಗ್ರಹ ಮತ್ತು ಅಷ್ಟಾಂಗ ಹೃದಯ,

ಬ್ರಹ್ಮಗುಪ್ತನ ಶೂನ್ಯಸಿದ್ಧಾಂತ,

ವರಾಹಮಿಹಿರನ ಬೃಹತ್‌ ಜಾತಕ,

ಲಘು ಜಾತಕ,

ಬೃಹತ್‌ ಸಂಹಿತೆ,

ಆರ್ಯಭಟನ ಆರ್ಯಭಟೀಯಂ,

ಆರ್ಯಸಿದ್ಧಾಂತ, ದುರ್ವಿನೀತನ ಗಜಾಷ್ಟಕ,

ಶಿವಮಾರನ ಗಜಶಾಸ್ತ್ರ,

ಕೀರ್ತಿವರ್ಮನ ಗೋವೈದ್ಯ,

ಚಾವುಂಡರಾಯನ ಲೋಕೋಪಕಾರ,

ಭಾಸ್ಕರಾಚಾರ್ಯನ ಲೀಲಾವತಿ

ಅ. ಗ್ರೀಕೋರೋಮನ್‌ ಬರವಣಿಗೆಗಳು:

ಇತಿಹಾಸದ ಪಿತಾಮಹ ಅರೊಡಾಟಸನ ಹಿಸ್ಟರಿಸ್‌,

ಟಾಲೆಮಿಯ ಭೂಗೋಳ ಅಥವಾ Geography,

ಅನಾಮಧೇಯ ರಚಿತ ದಿ ಪೆರಿಪ್ಲಸ್‌ ಆಫ್‌ ದಿ ಎರಿತ್ರಿಯನ್‌ ಸೀ,

ಗ್ರೀಕ್‌ ದೊರೆ ಡೇರಿಯಸ್ಸನ ದಾಳಿಗೆ ಮುನ್ನ ಇಲ್ಲಿನ ಪರಿಸ್ಥಿತಿ ಅಧ್ಯಯನಕ್ಕೆ ಅವನ ಪ್ರತಿನಿಧಿಯಾಗಿ ಭಾರತದ ವಾಯುವ್ಯ ಭಾಗವನ್ನು ಸಂದರ್ಶಿಸಿದ್ದ ಸ್ಕೈಲ್ಯಾಕ್ಸ್‌ ನ ಬರವಣಿಗೆಗಳು,

ಅರಿಯನ್‌,

ನಿಯಾರ್ಕಸ್‌

ಅರಿಸ್ಟೋಬಲಸ್‌ ಅವರ ಯುದ್ಧದ ವಿವರಗಳು

ಭಾರತದ ಮೇಲಿನ ಗ್ರೀಕರ ದಾಳಿಗಳು ಮತ್ತು ವಿದೇಶಿಯ ಸಂಬಂಧಗಳ ವಿವರಗಳನ್ನು ಒದಗಿಸುತ್ತವೆ. ಸಿರಿಯಾದ ಡಿಮ್ಯಾಕಸ್‌, ಡೆಮಿಟ್ರಿಯಸ್‌ ಮತ್ತು ಈಜಿಪ್ಟಿನ ಡಯೋನಿಸಿಸ್‌ ಇವರ ಬರವಣಿಗೆಗಳು ಪಾರ್ಥಿಯನ್ನರ ಬಗ್ಗೆ ವಿವರ ಒದಗಿಸುತ್ತವೆ. ಸೆಲ್ಯೂಕಸನ ರಾಯಭಾರಿ ಮೆಗಸ್ತಾನೀಸನ ಇಂಡಿಕಾ ಮೌರ್ಯರ ಕಾಲದ ಮಾಹಿತಿ ಒದಗಿಸುತ್ತದೆ. ಪ್ಲೀನಿಯ ಬರವಣಿಗೆಗಳು ಭಾರತದಲ್ಲಿನ ಪ್ರಕೃತಿ ಮತ್ತು ಪ್ರಾಣಿ ಹಾಗೂ ಸಸ್ಯವರ್ಗಗಳ ವಿವರ ನೀಡುತ್ತವೆ.

 

ಬಾದಾಮಿ ಚಾಲುಕ್ಯರ ಇಮ್ಮಡಿ ಪುಲಕೇಶಿಯ ಆಸ್ಥಾನಕ್ಕೆ ಭೇಟಿ ನೀಡಿದ್ದ ಪರ್ಷಿಯಾದ ಎರಡನೆ ಖುಸ್ರೊನ ರಾಯಬಾರಿ ತಬರಿ,

ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಆಸ್ಥಾನಕ್ಕೆ ಭೇಟಿ ನೀಡಿದ್ದ ಸುಲೇಮಾನ್‌ (ಸಾ.ಶ.ವ. 851),

ಅಲ್‌ ಮಸೂದಿ,

ಅಬು ರಿಹಾನ್‌ ಅಲ್ಬೇರೂನಿ,

ವಿಜಯನಗರದ ಅರಸು ದೇವರಾಯನ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಅಬ್ದುಲ್‌ ರಜಾಕ್‌ 

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧