ಸಾಹಿತ್ಯಾಧಾರಗಳು - Literary Sources. ಪೀಠಿಕೆ: ಲಿಖಿತ ಅಂದರೆ ಬರವಣಿಗೆಯ ರೂಪದಲ್ಲಿರುವ ಆಧಾರಗಳನ್ನು ಸಾಹಿತ್ಯಾಧಾರಗಳು ಎನ್ನುವರು. ಇವುಗಳು ದೇಶೀಯ ಮತ್ತು ವಿದೇಶೀಯ ಬರವಣಿಗೆ ಎರಡರಲ್ಲೂ ಕಂಡುಬರುತ್ತವೆ. ದೇಶೀಯ ಭಾಷೆಗಳಾದ ಪಾಲಿ, ಪ್ರಾಕೃತ, ಸಂಸ್ಕೃತ, ಅರ್ಧಮಾಗಧಿ, ಕನ್ನಡ, ತೆಲುಗು, ತಮಿಳು ಮತ್ತು ಇನ್ನಿತರ ಭಾಷೆಗಳಲ್ಲಿ ಈ ಆಧಾರಗಳು ಕಂಡುಬರುತ್ತವೆ. ವಿದೇಶೀಯ ಭಾಷೆಗಳಾದ ಗ್ರೀಕ್, ರೋಮನ್, ಪರ್ಷಿಯಾ, ಅರಬ್, ತುರ್ಕಿ ಮತ್ತು ಚೀನೀ ಭಾಷೆಗಳಲ್ಲೂ ಸಹ ಕಂಡುಬರುತ್ತವೆ. ಧಾರ್ಮಿಕ ಕೃತಿಗಳು, ಲೌಕಿಕ ಕೃತಿಗಳು, ಐತಿಹಾಸಿಕ ಕೃತಿಗಳು, ಪ್ರವಾಸ ಕಥನಗಳು – ಹೀಗೆ ವಿವಿಧ ರೀತಿಯ ಬರವಣಿಗೆಗಳನ್ನು ಇವು ಒಳಗೊಳ್ಳುತ್ತವೆ. ವರ್ಗೀಕರಣ: ಅಧ್ಯಯನದ ದೃಷ್ಟಿಯಿಂದ ಇವುಗಳನ್ನು 1. ದೇಶೀಯ ಮತ್ತು 2. ವಿದೇಶೀಯ ಬರವಣಿಗೆಗಳು ಎಂದು ವಿಭಾಗಿಸಬಹುದು. 1. ದೇಶೀಯ ಬರವಣಿಗೆಗಳು : ಭಾರತೀಯ ಭಾಷೆಗಳಲ್ಲಿ (ಮೇಲೆ ಹೇಳಿರುವ) ರಚಿತವಾದ ಆಧಾರಗಳಿವು. ಇವುಗಳನ್ನು ಮತ್ತೆ ೪ ಉಪವಿಭಾಗಗಳಾಗಿ ಮಾಡಬಹುದು: ಅವುಗಳೆಂದರೆ, ಅ. ಧಾರ್ಮಿಕ ಸಾಹಿತ್ಯ. ಆ. ಐತಿಹಾಸಿಕ ಸಾಹಿತ್ಯ. ಇ. ಸಂಗಂ ಸಾಹಿತ್ಯ ಮತ್ತು ಈ. ವೈಜ್ಞಾನಿಕ ಸಾಹಿತ್ಯ. ಅ. ಧಾರ್ಮಿಕ ಸಾಹಿತ್ಯ: ಧರ್ಮನಿಷ್ಠರಾದ ಪ್ರಾಚೀನ ಭಾರತೀಯರು ವಿಫುಲ ಧಾರ್ಮಿಕ ಸಾಹಿತ್ಯ ರಚಿಸಿದ್ದಾರೆ. ಈ ಸಾಹಿತ್ಯವನ್ನು ಮತ್ತೆ ವೈದಿಕ, ಜೈನ ಮತ್ತು ಬೌದ್ಧ ಸಾಹಿತ್ಯವೆಂದ...
Comments
Post a Comment