ಶಿಲಾಯುಗ ಸಂಸ್ಕೃತಿಯ ಕಲ್ಲಿನ ಆಯುಧ ಪತ್ತೆ

ಶಿರ್ವ: ಉಡುಪಿ ಜಿಲ್ಲೆ

TEAM UDAYAVANI, JUN 9, 2020, 5:03 AM IST

ಶಿಲಾಯುಗ ಸಂಸ್ಕೃತಿಯ ಕಲ್ಲಿನ ಆಯುಧ ಪತ್ತೆ

ಕುಂದಾಪುರ: ತಾಲೂಕಿನ ಇಡೂರು- ಕುಂಜಾಡಿ ಸಮೀಪದ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ಒಳಭಾಗ ದಲ್ಲಿರುವ ಒಂದು ದೊಡ್ಡ ಪಾರೆಯಲ್ಲಿ ರವಿವಾರ ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ಕಲ್ಲಿನ ಆಯುಧಗಳು ಪತ್ತೆಯಾಗಿವೆ ಎಂದು ಶಿರ್ವ ಎಂಎಸ್‌ಆರ್‌ಎಸ್‌ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ| ಟಿ.ಮುರುಗೇಶ ತಿಳಿಸಿದ್ದಾರೆ.

ಈ ನಿವೇಶನಕ್ಕೆ ಸಮೀಪದಲ್ಲಿಯೇ ಇರುವ ಅವಲಕ್ಕಿಪಾರೆಯಲ್ಲಿ ಆದಿ ಕಾಲದ ಕುಟ್ಟು ಚಿತ್ರಗಳು ಕಂಡುಬಂದಿವೆ. ಈ ಆಯುಧೋಪಕರಣಗಳಲ್ಲಿ ಕೊರೆಯುಳಿಗಳು, ಬ್ಲೇಡ್‌ಗಳು, ಫ್ಲೂಟೆಡ್‌ ಕೋರ್‌ಗಳು, ಹೆರೆಗತ್ತಿಗಳು ಹಾಗೂ ಬಾಣದ ಮೊನೆಗಳು ಕಂಡುಬಂದಿವೆ.

ಇವು ದ.ಕ. ಜಿಲ್ಲೆಯ ಉಪ್ಪಿನಂಗಡಿ ಮತ್ತು ಮಾಣಿಗಳಲ್ಲಿ ದೊರೆತ ಕಲ್ಲಿನ ಆಯುಧಗಳನ್ನು ಹೋಲುತ್ತವೆ. ಈ ಸಂಶೋಧನೆಯಲ್ಲಿ ಕೊಲ್ಲೂರಿನ ಮುರಳೀಧರ ಹೆಗಡೆ ಅವರು ಸಹಕರಿಸಿದ್ದರು.

 

ಶಿಲಾಯುಗ ಸಂಸ್ಕೃತಿಯ ಸಮಾಧಿ ಪತ್ತೆ

Manjunathaswamy K | ವಿಕ ಸುದ್ದಿಲೋಕUpdated: 1 Dec 2015, 4:00 am

ಮೈಸೂರು: ತಾಲೂಕಿನ ಇಲವಾಲ ಹೋಬಳಿ ಬೊಮ್ಮೇನಹಳ್ಳಿಯಲ್ಲಿ ಸುಮಾರು 3000 ವರ್ಷಗಳ ಕಾಲಾವಧಿಯ ಬೃಹತ್ ಶಿಲಾಯುಗ ಸಂಸ್ಕೃತಿಯ ಡಾಲ್ಮನ್ ಸಿಸ್ಟ್ ಸಮಾಧಿ, ಹಾಸು ಬಂಡೆ ಸಮಾಧಿ, ಕಬ್ಬಿಣ ತಯಾರಿಸಲು ಮಾಡಿಕೊಂಡ ಕುಲುಮೆ ಹಾಗೂ ಇತರೆ ಅವಶೇಷಗಳು ಪತ್ತೆಯಾಗಿವೆ.

 

ಕುವೆಂಪುನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ.ರಾಮದಾಸರೆಡ್ಡಿ ಅವರು ಎನ್ಎಸ್ಎಸ್ ಸ್ವಯಂಸೇವಕ ಚಾಮರಾಜು ಹಾಗೂ ಗ್ರಾಮದ ಯುವಕರಾದ ಶ್ರೀನಿವಾಸ, ಮಧುಸೂದನ, ರವಿ ಇತರರೊಡನೆ ಕ್ಷೇತ್ರ ಕಾರ್ಯ ಮಾಡಿ ಪತ್ತೆ ಹಚ್ಚಿದ್ದಾರೆ.

ಬೊಮ್ಮೇನಹಳ್ಳಿ-ಹುಯಿಲಾಳು ಗ್ರಾಮಗಳ ಗಡಿ ಭಾಗದಲ್ಲಿರುವ ಚಿಕ್ಕೇಗೌಡರ ಹೊಲದಲ್ಲಿ ಡಾಲ್ಮನ್ ಸಿಸ್ಟ್ ಸಮಾಧಿಯಿದೆ. ನೆಲೆಯನ್ನು ಪಾಳೂರು ನೆಲೆ, ಹಾಳೂರು ನೆಲೆ ಎನ್ನುತ್ತಾರೆ. ನೆಲೆಯ ಪಕ್ಕದಲ್ಲೇ ಕರಿಕಲ್ಲು ಗುಚ್ಚಗಳಿವೆ ಹಾಗೂ ಗ್ರಾಮದ ದಕ್ಷಿಣಕ್ಕೆ ಹಾಸುಬಂಡೆ ಸಮಾಧಿ ಇದೆ. ಇದನ್ನು ಸಾಕುದೇವಮ್ಮ ಗುಡಿ ಎನ್ನುತ್ತಾರೆ. ರೀತಿಯ ಸಮಾಧಿಗಳು ಕರ್ನಾಟಕ ವಿವಿಧ ನೆಲೆಗಳಲ್ಲಿ ಕಂಡು ಬಂದರೂ ಗ್ರಾಮದಲ್ಲಿ ಹಾಗೂ ತಾಲೂಕಿನಲ್ಲಿ ವಿಶೇಷವಾಗಿದೆ.

 

ಹೂಳುತ್ತಿದ್ದರಂತೆ...: ಗ್ರಾಮದ ಪೂರ್ವಕ್ಕೆ ಶಿಗಳ್ಳಿಮಂಟಿಯ ಕಲ್ಲಾಸರೆಯ ಕೆಳಗಡೆ ಕಪ್ಪು ಮತ್ತು ಕೆಂಪು ಬಣ್ಣದ ಮಡಿಕೆಯ ಚೂರುಗಳು ದೊರಕಿವೆ. ಮಂಟಿಯ ಭೂ ಭಾಗದಲ್ಲಿ, ಹೆಣಗಳನ್ನು ತಂದು ಪ್ರಾಣಿ ಪಕ್ಷಿಗಳಿಗೆ ಇಡುತ್ತಿದ್ದರೆಂದು ನಂತರ ಉಳಿದ ಮೂಳೆ ಭಾಗಗಳನ್ನು ಹೂಳುತಿದ್ದರೆಂದು ಗ್ರಾಮದ ಹಿರಿಯರಾದ ಮಾದಯ್ಯ ಅಭಿಪ್ರಾಯಪಟ್ಟರು. ಎಚ್.ಡಿ.ಕೋಟೆ ತಾಲೂಕಿನ ಹಳ್ಳದಮನುಗನಹಳ್ಳಿ ನೆಲೆಯಲ್ಲಿಯೂ ನಡೆದ ಕ್ಷೇತ್ರ ಕಾರ್ಯದಲ್ಲಿಯೂ ಮಾಹಿತಿ ದೊರಕಿದೆ ಎಂದು ರಾಮದಾಸರೆಡ್ಡಿ ತಿಳಿಸಿದ್ದಾರೆ.

 

ಮಂಟಿಯಿಂದ ಸುಮಾರು 50 ಅಡಿ ದೂರದಲ್ಲಿ ಕಬ್ಬಿಣ ತಯಾರಿಸಲು ಮಾಡಿಕೊಂಡಿರುವ ಕುಲುಮೆ, ಕಬ್ಬಿಣ ಕರಗಿಸಿದ ನಂತರ ಉಳಿದ ಕಿಟ್ಟ, ಸುಟ್ಟ ಮಣ್ಣಿನ ಕೊಳವೆಗಳು, ಕಬ್ಬಿಣದ ಅದಿರು, ಕಬ್ಬಿಣದ ತುಂಡುಗಳು ದೂರಕಿವೆ. ಕಬ್ಬಿಣ ತಯಾರಿಸಲು ಮಾಡಿಕೊಂಡಿರುವ ರೀತಿಯ ಕುಲುಮೆಗಳು ಕರ್ನಾಟಕದ ವಿವಿಧ ನೆಲೆಗಳಲ್ಲಿ ಕಂಡುಬಂದಿವೆ. ಆದರೆ ಮೈಸೂರು ಜಿಲ್ಲೆಯಲ್ಲಿ ದೊರಕಿರುವುದು ಅಪರೂಪವೆಂದೇ ಹೇಳಬೇಕು ಎನ್ನುತ್ತಾರೆ ಅವರು.

 

ಸೋಮಣ್ಣನವರ ಹೊಲದಲ್ಲಿ ನೇಗಿಲು ಹೊಡೆಯುವಾಗ ಧಾನ್ಯ ತುಂಬುವ ಕಣಜ (ಹಗೇವು) ಪತ್ತೆಯಾಗಿದೆ. 2 ಅಡಿ ಚೌಕಾಕಾರದ ಬಾಯಿಯಿದ್ದು, ಸುಮಾರು 10 ಅಡಿ ಆಳವಿದೆ. ಇಂಥ ಹಗೇವುಗಳು ಕೆ.ಆರ್.ಪೇಟೆ ತಾಲೂಕಿನ ಹಳೇಮಾಡರಹಳ್ಳಿಯಲ್ಲಿ ಹೆಚ್ಚಾಗಿ ಕಂಡುಬಂದಿವೆ.

 

: ಹುಯಿಲಾಳು ಚಿಕ್ಕೇಗೌಡರ ಹೊಲದಲ್ಲಿ ಸುಮಾರು 10-11ನೇ ಶತಮಾನದ ಅಪ್ರಕಟಿತ ಪಾಳು ಬಿದ್ದಿರುವ ನನ್ನೇಶ್ಪರ, ಕಾಡು ಬಸವೇಶ್ವರ ಎಂದು ಕರೆಯುವ ಹೊಯ್ಸಳರ ಕಾಲದ ದೇವಾಲಯವಿದೆ. ಇಲ್ಲಿ ಭುವನೇಶ್ಪರಿ, ನಂದಿ ಇದೆ. ಇದೇ ರೀತಿಯ ನಂದಿ, ಭುವನೇಶ್ವರಿಯನ್ನು ಇದೇ ತಾಲೂಕಿನ ಹಿನಕಲ್ ನನ್ನೇಶ್ವರ ದೇವಾಲಯದಲ್ಲಿ ಕಾಣಬಹುದು. ಹೊಯ್ಸಳರ ಕಾಲದ ಸುಟ್ಟ ಇಟ್ಟಿಗೆಗಳ ಚಾವಣಿ ಇದೆ. ದೇವಾಲಯದ ಸುತ್ತ ಸುಮಾರು 20ಕ್ಕೂ ಹೆಚ್ಚು ನೆಲ ಮಟ್ಟದಲ್ಲಿರುವ ವೀರ ಮಾಸ್ತಿಕಲ್ಲುಗಳಿವೆ. ಅಪ್ರಕಟಿತ ಎಣ್ಣೆ ಗಾಣ ಶಾಸನ ಬೊಮ್ಮೇನಹಳ್ಳಿಯ ಬ್ರಹ್ಮಲಿಂಗೇಶ್ವರ ದೇವಾಲಯದ ಮುಂದೆ ಇದೆ.

 

ಎಲ್ಲಾ ಅಂಶಗಳನ್ನು ಗಮನಿಸಿದಾಗ ಗ್ರಾಮ ಶಿಲಾಯುಗದ ಕಾಲಮಾನದಿಂದ ಇಂದಿನವರೆಗೂ ಪ್ರಮುಖ ಗ್ರಾಮವಾಗಿದ್ದು, ಕರ್ನಾಟಕದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಗ್ರಾಮವಾಗಿದೆ. ನಿಟ್ಟಿನಲ್ಲಿ ಸಮಾಧಿಗಳು, ಶಾಸನ, ದೇವಾಲಯ ಸಂರಕ್ಷಿಸುವ ಅಗತ್ಯತೆ ಇದೆ ಎಂದು ಡಾ.ಎಸ್.ಜಿ.ರಾಮದಾಸ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ