ಉತ್ತರ ವೈದಿಕ ಕಾಲ

ಪೀಠಿಕೆ : ವೈದಿಕ ಸಂಸ್ಕೃತಿಯ ಕಾಲವನ್ನು ಸಾಮಾಜಿಕ, ಧಾರ್ಮಿಕಮತ್ತು ರಾಜಕೀಯ ಸ್ಥಿತಿಗಳಲ್ಲಿ ಉಂಟಾದ ಬದಲಾವಣೆಗಳನ್ನು ಆಧರಿಸಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಪೂರ್ವ ಮತ್ತು ಉತ್ತರ ವೈದಿಕ ಕಾಲ. ಉತ್ತರ ವೈದಿಕ ಕಾಲವು ಸಾ. .ಪೂ 1600 ರಿಂದ ಸಾ.. ಪೂ 600 ರವರೆಗೆ ಅಂದರೆ ಹೊಸ ಮತಗಳ ಉದಯದವರೆಗೆ ಅಸ್ತಿತ್ವದಲ್ಲಿತ್ತು ಎಂದು ನಂಬಲಾಗಿದೆ. ಕಾಲವನ್ನು ಹಲವಾರು ಬದಲಾವಣೆಗಳಿಗೆ ಒಳಗಾದ ಕಾಲವೆಂದು ಗುರುತಿಸಲಾಗಿದೆ. ಅಂತಹ ಬದಲಾವಣೆಗಳಿಂದಲೇ ಭೌಗೋಳಿಕ ಚಲನೆಕಬ್ಬಿಣದ ಅಧಿಕ ಬಳಕೆ, ಕೃಷಿಯ ವಿಸ್ತರಣೆ ಮತ್ತು ನಗರಗಳ ಬೆಳವಣಿಗೆ ರಾಜ್ಯದ ಕಲ್ಪನೆಯ ಉದಯ, ಆಶ್ರಮ  ವ್ಯವಸ್ಥೆ ಮತ್ತು ಸಂಸ್ಕಾರಗಳ ಏಳಿಗೆ, ವೃತ್ತಿ ಆಧಾರಿತ ಜಾತಿ ಪದ್ಧತಿಗಳ ಉದಯ ಮತ್ತು ಸಾಮಾಜಿಕವಾಗಿ ಉಂಟಾದವುಗಳೇ ಆಗಿವೆ.

1. ಭೌಗೋಳಿಕ ಚಲನೆ :-

     ಪೂರ್ವ ವೈದಿಕ ಕಾಲದಲ್ಲಿ ಕಾಲದ ಜನರು ಸಿಂಧೂ ಮತ್ತು ಅದರ ಉಪನದಿಗಳ ಸುತ್ತಲಿನ ಪ್ರದೇಶಗಳಲ್ಲಿ ನೆಲೆಸಿದ್ದರು. ಇದನ್ನು ಸಪ್ತಸಿಂಧೂ ಪ್ರದೇಶ ಎಂದು ಕರೆಯಲಾಗಿದೆ. ಆದರೆ ಉತ್ತರ ವೇದಿಕ ಕಾಲದ ವೇಳೆಗೆ ಅಧಿಕ ಸಂಖ್ಯೆಯ ಜನರು ಪೂರ್ವದಲ್ಲಿ ಗಂಗಾ, ಯಮುನಾ ನದಿಗಳ ಬಯಲಿಗೆ ವಲಸೆ ಹೋದರು. ಇದನ್ನು ಪೂರ್ವದ ಕಡೆಗಿನ ಚಲನೆ ಅಥವಾ ಭೌಗೋಳಿಕ ಸ್ಥಿತ್ಯಂತರ ಎಂತಲೂ ಕರೆಯಲಾಗಿದೆ. ರೀತಿಯ ಭೌಗೋಳಿಕ ಸ್ಥಿತ್ಯಂತರಕ್ಕೆ ಕಾರಣವೆಂದರೆ ಹೆಚ್ಚಾದ ಜನಸಂಖ್ಯೆ, ಕೃಷಿಯ ಮೇಲಿನ ಅಧಿಕ ಅವಲಂಬನೆ ಮತ್ತು ಕಬ್ಬಿಣದ ಅನ್ವೇಷಣೆ ಎಂದು ತಿಳಿದುಬರುತ್ತದೆ.

2. ಕಬ್ಬಿಣದ ಅಧಿಕ ಬಳಕೆ:-

       ಕಾಲದ ಜನರು ಅದಾಗಲೇ ಬಳಕೆಯಲ್ಲಿದ್ದ ಲೋಹಗಳ ಜೊತೆಗೆ ಕಬ್ಬಿಣವನ್ನು ಅಧಿಕವಾಗಿ ಬಳಸ ತೊಡಗಿದರು. ಏಕೆಂದರೆ ಕಬ್ಬಿಣದ ಸಂಶೋಧನೆಯಿಂದ ವಿವಿಧ ರೀತಿಯ ಕೃಷಿ ಉಪಕರಣಗಳು ಮತ್ತು ಆಯುಧಗಳನ್ನು ತಯಾರಿಸ ತೊಡಗಿದರು. ಅವುಗಳ ಮೂಲಕ ಕೃಷಿ ಯೋಗ್ಯವಾದ ಭೂಮಿಯ ಹೆಚ್ಚಳಕ್ಕಾಗಿ ಗಂಗಾ ಯಮುನಾ ನದಿಗಳ ಬಯಲಿನಲ್ಲಿದ್ದ ಕಾಡನ್ನು ಕಡಿದು ಕೃಷಿ ಭೂಮಿಯ ವಿಸ್ತರಣೆಯತ್ತ ತೊಡಗಿದರು.

3. ಕೃಷಿ ವಿಸ್ತರಣೆ ಮತ್ತು ಬೆಳವಣಿಗೆ:-

     ಮೊದಲೇ ತಿಳಿಸಿದಂತೆ ಹೆಚ್ಚಾಗುತ್ತಿದ್ದ ಜನಸಂಖ್ಯೆಗೆ ಬೇಕಾಗುವಷ್ಟು ಆಹಾರ ಪದಾರ್ಥಗಳ ಉತ್ಪಾದನೆಗೆ ತೊಡಗಿದ್ದರಿಂದ ಕಾಲದಲ್ಲಿ ಕೃಷಿಯ ಅಧಿಕ ಅವಲಂಬನೆ ಹೆಚ್ಚಾಯ್ತು. ಇದರಿಂದ ಪೂರ್ವ ವೈದಿಕ ಕಾಲದಲ್ಲಿ ಇದ್ದ ಪಶುಪಾಲನೆ ಮತ್ತು ಅಲೆಮಾರಿ ಜೀವನದ ಸ್ವರೂಪ ಬದಲಾಗಿ ಒಂದೆಡೆ ಸ್ಥಿರ ಜೀವನ ನಡೆಸುವ ಪದ್ಧತಿ ಆರಂಭವಾಯಿತು. ಇದರಿಂದ ಕ್ರಮೇಣ ವ್ಯವಸಾಯ ಚಟುವಟಿಕೆಗಳ ಜೊತೆಗೆ ವ್ಯಾಪಾರ ವಹಿವಾಟುಗಳು ಬೆಳೆಯತೊಡಗಿ ನಗರಗಳ ಸ್ಥಾಪನೆ ಆರಂಭವಾಯಿತುಬೆಲೆಬಾಳುವ ಲೋಹಗಳಿಂದ ತಯಾರಿಸಲ್ಪಟ್ಟ ವಿನಿಮಯ ರೂಪದ ನಾಣ್ಯ ಚಲಾವಣೆಯು ವಾಣಿಜ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ನಗರಗಳ ಏಳಿಗೆಗೆ ಕಾರಣವಾಯಿತು.

4. ರಾಜ್ಯಗಳ ಕಲ್ಪನೆಯ ಉದಯ:-

      ಉತ್ತರ ವೈದಿಕ ಕಾಲದಲ್ಲಿ ಬದಲಾದ ಮತ್ತೊಂದು ಪ್ರಮುಖ ಅಂಶವೆಂದರೆ ರಾಜತ್ವದ ಉದಯ. ಅಂದರೆ ಪೂರ್ವ ವೈದಿಕ ಕಾಲದಲ್ಲಿದ್ದ ಸಭಾ ಮತ್ತು ಸಮಿತಿಗಳ ಪ್ರಾಬಲ್ಯ ಕುಂಠಿತವಾಗಿ ರಾಜರ ಪ್ರಾಬಲ್ಯ ಅಧಿಕವಾಯಿತು. ಇದರಿಂದ ಕ್ಷತ್ರಿಯ ಪ್ರಾಬಲ್ಯ ವಿಜ್ರಂಭಿಸಿ ವಂಶ ಪಾರಂಪರ್ಯದ ರಾಜ ಪ್ರಭುತ್ವದ ಆಳ್ವಿಕೆ ಆರಂಭವಾಯಿತು.

5. ಆಶ್ರಮ ವ್ಯವಸ್ಥೆ

     ಈ ಕಾಲದ ಧಾರ್ಮಿಕ ಸ್ಥಿತಿಗಳಲ್ಲಿ ಉಂಟಾದ ಪ್ರಮುಖ ಬದಲಾವಣೆ ಎಂದರೆ ಆಶ್ರಮ ಪದ್ಧತಿಯ ಬೆಳವಣಿಗೆ ಮತ್ತು ಸಂಸ್ಕಾರಗಳ ಬೆಳವಣಿಗೆ ಆಶ್ರಮವೆಂದರೆ ಇರುವುದು ಅಥವಾ ನಿಲೆಸುವುದು ಎಂಬರ್ಥವಿದ್ದರೂ ಕಾಲದ ಆಶ್ರಮ ವ್ಯವಸ್ಥೆಗೆ ಇದನ್ನು ಅನ್ವಯಿಸುವಾಗ ಮನುಷ್ಯ ಜೀವನದ ಜೀವಿತಾವಧಿಯನ್ನು 100 ವರ್ಷಗಳೆಂದು ಪರಿಗಣಿಸಿ ಪ್ರತಿ 25 ವರ್ಷಗಳಿಗೆ ಒಂದು ಅವ್ಯವಸ್ಥೆಯನ್ನು ನಿಗದಿ ಮಾಡಲಾಗಿದೆ. ಅಂತಹ ಅವ್ಯವಸ್ಥೆಗಳೆಂದರೆ ಬ್ರಹ್ಮಚಾರಿ    (0-25) ಗೃಹಸ್ಥ (25-50) ವಾನಪ್ರಸ್ಥ (50-75) ಮತ್ತು ಸನ್ಯಾಸ (75-100) ಆಶ್ರಮಗಳನ್ನು ಅರ್ಥೈಸಲಾಗಿದೆ. ಪ್ರತಿಯೊಂದು ಅವ್ಯವಸ್ಥೆಯಲ್ಲೂ ನಿರ್ದಿಷ್ಟ ಜವಾಬ್ದಾರಿಗಳನ್ನು ಮಾನವ ಜೀವನಕ್ಕೆ ನಿಗದಿ ಮಾಡಲಾಗಿದೆ. ಬ್ರಹ್ಮಚರ್ಯದಲ್ಲಿ ಶಿಕ್ಷಣ ಪಡೆಯುವುದು, ಗೃಹಸ್ಥದಲ್ಲಿ ಸಂಸಾರಿಕ ಜೀವನದಲ್ಲಿ ತೊಡಗುವುದು, ವಾನ ಪ್ರಸ್ಥದಲ್ಲಿ ಪತ್ನಿ ಯೊಂದಿಗೆ ಅರಣ್ಯ ವಾಸದಲ್ಲಿ ಇರುವುದು ಮತ್ತು ಸಮಯದಲ್ಲಿ ಸಾಂಸರಿಕ ಬಂದನಗಳಿಂದ ಮುಕ್ತರಾಗಿ ಮೋಕ್ಷದ ಸಾಧನೆಗಾಗಿ ಆಧ್ಯಾತ್ಮಿಕ ಜೀವನದಲ್ಲಿ ತೊಡಗುವುದನ್ನು ನಿಗದಿ ಮಾಡಲಾಗಿದೆ.

6. ಸಂಸ್ಕಾರಗಳ ಏಳಿಗೆ :-

     ಅಂತೆಯೇ ಮನುಷ್ಯನ ಜನನದಿಂದ ಮರಣದವರೆಗಿನ ಅವಧಿಯಲ್ಲಿ ಬೇರೆ ಬೇರೆ ಕಾಲಘಟ್ಟದಲ್ಲಿ ಅವನ ಜೀವನದ ಉನ್ನತಿಗಾಗಿ ಕೆಲವು ಧಾರ್ಮಿಕ ಆಚರಣೆಗಳ ಅನುಸರಣೆ ಆರಂಭವಾಯಿತು. ಆಚರಣೆಗಳನ್ನೆ ಸಂಸ್ಕಾರಗಳೆಂದು ಕರೆಯಲಾಗಿದೆ. ಸಂ- ಎಂದರೆ ಉತ್ತಮ ಒಳ್ಳೆಯ ಎಂಬ ಅರ್ಥವಿದ್ದು ಇವುಗಳನ್ನು ಶ್ರೇಷ್ಠ ಆಚರಣೆಗಳೆಂತಲೂ ತಿಳಿಯಬಹುದು. ವೇದ ಸಾಹಿತ್ಯದಲ್ಲಿ ಸುಮಾರು 40 ಸಂಸ್ಕಾರಗಳ ಉಲ್ಲೇಖವಿದ್ದು ಸಾಮಾನ್ಯವಾಗಿ ಶೋಡಷ ಸಂಸ್ಕಾರವನ್ನು ಆಚರಿಸಲಾಗುತ್ತಿತ್ತು. ಗರ್ಭಧಾನದಿಂದ ಅಂತ್ಯೇಷ್ಠಿಯವರೆಗಿನ ಆಚರಣೆಗಳನ್ನು ಶೋಡಷ ಸಂಸ್ಕಾರಗಳೆಂದು ಕರೆಯಲಾಗಿದೆ.

 

A. ಸಂಸ್ಕಾರಗಳು: ಒಟ್ಟು ೪೦ ಸಂಸ್ಕಾರಗಳು. ಶೋಡಶ ಸಂಸ್ಕಾರಗಳ ಆಚರಣೆ. ಶೋಡಶ ಸಂಸ್ಕಾರಗಳು ಅಂದರೆ (ಹದಿನಾರು) ಸಂಸ್ಕಾರಗಳು:

  • ಗರ್ಭದಾನ: ವಿವಾಹದ ನಂತರ ವಧು-ವರರ ಪ್ರಥಮ ಮಿಲನಕ್ಕೆ ಮುನ್ನ ಆರೋಗ್ಯವಂತ ಸಂತಾನ ಕರುಣಿಸುವಂತೆ ದೇವರಿಗೆ ಪ್ರಾರ್ಥನೆ ಸಲ್ಲಿಸುವುದು.
  • ಪುಂಸವನ: ಗಂಡು ಸಂತಾನಕ್ಕಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದು.
  • ಸೀಮಂತೋನಯನ: ಗರ್ಭಿಣಿಗೆ ಏಳು ತಿಂಗಳು ತುಂಬಿದಾಗ ನಡೆಸುವ ಶುಭ ಸಮಾರಂಭ.
  • ಜಾತಕರ್ಮ: ಹೆರಿಗೆ ಆದ ಕೂಡಲೇ ಕರುಳು ಬಳ್ಳಿ ಕತ್ತರಿಸುವುದು ಮತ್ತು ಮಗುವನ್ನು ಶುಚಿಗೊಳಿಸಿ ತಾಯಿಯ ರಕ್ಷಣೆಗೆ ನೀಡುವುದು.
  • ನಾಮಕರಣ: ಮಗುವಿಗೆ ನಿಗದಿತ ಸಮಯದಲ್ಲಿ ಸೂಕ್ತ ನಾಮಕರಣ ಮಾಡುವುದು. ನಾಮಕರಣಕ್ಕೆ ಮೂರು ಉದ್ದೇಶಗಳಿವೆ; ವ್ಯಾವರ್ತನ ಅಂದರೆ ವಸ್ತುವೊಂದು ಇನ್ನೊಂದಕ್ಕೆ ಭಿನ್ನವಾಗಿದೆ ಎಂಬುದನ್ನು ಗುರ್ತಿಸುವುದು. ನಿರ್ದೇಶನ ಯಾವುದು ಎಂಬುದನ್ನು ನಿರ್ದಿಷ್ಟವಾಗಿ ಹೇಳುವುದು. ಆದರ್ಶನ ಅಂದರೆ ಹೆಸರಿನ ಮೂಲಕ ಮಗುವಿನ ಜೀವನಕ್ಕೆ ಒಂದು ಗುರಿಯನ್ನು ನೀಡುವುದು. ಹೆಸರಿನ ಅರ್ಥ ತಂದೆ-ತಾಯಿಗಳಿಗೆ ಮತ್ತು ಮಗುವಿಗೂ ತಿಳಿದಿರಬೇಕು ಮತ್ತು ಅದರಂತಹ ವ್ಯಕ್ತಿತ್ವ ಮಗುವಿನಲ್ಲಿ ರೂಪುಗೊಳ್ಳಬೇಕು.
  • ನಿಷ್ಕ್ರಮಣ: ಹುಟ್ಟಿದ ಮಗುವನ್ನು ಮೊದಲ ಸಲ ಹೊರಪ್ರಪಂಚಕ್ಕೆ ಪರಿಚಯಿಸುವುದು ಅಂದರೆ ಹಿತವಾದ ವಾತಾವರಣವಿರುವಾಗ ಮಗುವನ್ನು ಮನೆಯಿಂದ ಹೊರಗೆ ಕರೆತರುವುದು.
  • ಅನ್ನಪ್ರಾಶನ: ಮಗುವಿಗೆ ತಾಯಿಯ ಹಾಲಿನ ಬದಲು ಇತರೆ ಆಹಾರ ನೀಡುವುದನ್ನು ಆರಂಭಿಸುವಾಗ ನಡೆಸುವ ಆಚರಣೆ. ಅನ್ನಪತೇರನ್ನಸ್ಯನೊ   ದೇ ಶನಮೀವಸ್ಯ ಸುಶ್ಮಿಣಹ ಪ್ರಪ್ರದಾತಾರಿಂ ತಾರಿಶ ಊಜ್ಯನ್ನೊಧೇಹಿ  ದ್ವಿಪಾದೇ ಚತುಷ್ಪಾದೆ ಎಂಬುದು ಮಗುವಿಗೆ ಅನ್ನಪ್ರಾಶನ ಸಂಸ್ಕಾರ ನೆರವೇರಿಸುವಾಗ ಉದ್ಗರಿಸುವ ವೇದಮಂತ್ರ. ಅಂದರೆ ಅನ್‌ ಪ್ರಾಣನೆ ಅಂದರೆ ಯಾವುದು ನಿಮಗೆ ಶಕ್ತಿಯನ್ನು ನೀಡುತ್ತದೋ ಅದೆಲ್ಲವೂ ಅನ್ನ. ಅನ್ನವು ಅನಮೀವಾ ಆಗಿರಬೇಕು ಅಂದರೆ ರೋಗವನ್ನುಂಟು ಮಾಡದಂತಿರಬೇಕು. ಅಮೀವಾ = ರೋಗ. ಅನ್ನವನ್ನು ನೀಡುವ ಭಗವಂತನಿಗಲ್ಲದೇ ಅದನ್ನು ಬೆಳೆದು ನೀಡುವ ರೈತನಿಗೂ ನಮಸ್ಕಾರ. ಪ್ರದಾತಾರಿಂ ಶುದ್ಧವಾಗಿರುವುದು. ತಾರೀಶ ಅಂದರೆ ರೈತರನ್ನೂ ರಕ್ಷಿಸು ಎಂದರ್ಥ. ಕೋಟಿ ವಿದ್ಯೆಗಳಲಿ ಮೇಟಿ ವಿದ್ಯೆಯೆ ಮೇಲು, ಮೇಟಿಯಿಂ ರಾಟೆ ನಡೆವುದಲ್ಲದೇ ಲೋಕದಾಟವೇ ಕೆಡುಗು ಸರ್ವಜ್ಞ. ರೈತನು ಶುದ್ಧವಾದ ಆಹಾರ ನೀಡಬೇಕೆ ಹೊರತು ರಾಸಾಯನಿಕಗಳಿಂದ ಕೂಡಿದ ಆಹಾರವನ್ನಲ್ಲ; ಸಾವಯವ ಕೃಷಿಯಲ್ಲಿ ಬೆಳೆದ ರಾಸಾಯನಿಕಮುಕ್ತ ಆಹಾರವನ್ನು ನೀಡಬೇಕು. ಇಲ್ಲಿ ಮಹರ್ಷಿ ದಯಾನಂದ ಸರಸ್ವತಿಯವರ ವೇದಗಳಿಗೆ ಹಿಂತಿರುಗಿ ಎಂಬ ಮಾತು ನೆನಪಾಗುತ್ತದೆ. ವೇದಗಳ ಕಾಲದಲ್ಲಿ ಆಹಾರವು ರಾಸಾಯನಿಕಮುಕ್ತವಾಗಿ ಶುದ್ಧವಾಗಿತ್ತು. ಕಾರಣ ವೇದಮಂತ್ರದಲ್ಲಿ ರೈತನನ್ನೂ ರಕ್ಷಿಸು ಎಂದು ಹೇಳಿದೆ. ಇತ್ತೀಚಿಗೆ ಜನಪ್ರಿಯವಾಗುತ್ತಿರುವ ಸಾವಯವ ಕೃಷಿಯು ನಾವು ಶುದ್ಧವಾದ ಆಹಾರವನ್ನು ಬೆಳೆಯಬೇಕು ಎಂಬ ಭಾವನೆಯಿಂದಲೇ ಮೂಡಿಬಂದಿದೆ. ಅಂದರೆ ನಾವು ಪುನಃ ವೇದಗಳ ಕಾಲಕ್ಕೆ ಹಿಂತಿರುಗುತ್ತಿದ್ದೇವೆಯೇ ಎಂಬ ಪ್ರಶ್ನೆ ಇಲ್ಲಿ ಕಾಡದಿರದು.
  • ಚೂಡಾಕರ್ಮ: ಜನ್ಮಸಹಿತವಾದ ಕೂದಲು ತೆಗೆಸುವ ಕ್ರಿಯೆ.
  • ಕರ್ಣವೇದನ: ಕಿವಿಗಳಿಗೆ ಆಭರಣ ತೊಡಿಸಲು ಕಿವಿ ಚುಚ್ಚಿಸುವ ಕ್ರಿಯೆ.
  • ಅಕ್ಷರಾರಂಭ: ಶುಭಘಳಿಗೆಯಲ್ಲಿ ಮಗುವಿಗೆ ಅಕ್ಷರ ಕಲಿಕೆ ಆರಂಭಿಸುವುದು.
  • ಉಪನಯನ: ಮಗುವನ್ನು ಶಿಕ್ಷಣಕ್ಕಾಗಿ ಗುರುಕುಲಕ್ಕೆ ಕಳುಹಿಸುವ ಮುನ್ನ ನಡೆಸುವ ಸಂಸ್ಕಾರ.
  • ವೇದಾರಂಭ: ವೇದಗಳು ಮತ್ತು ಉಪನಿಷತ್ತುಗಳ ಕಲಿಕೆ ಆರಂಭಿಸುವುದು.
  • ಕೇಶಾಂತ: ಹುಡುಗರಿಗೆ ಮೊದಲ ಮುಖಕ್ಷೌರ ಮಾಡಿಸುವಾಗ ನಡೆಸುವ ಆಚರಣೆ.
  • ಸಮಾವರ್ತನ: ಗುರುಕುಲದ ಶಿಕ್ಷಣ ಮುಗಿದ ನಂತರ ಶಿಷ್ಯರನ್ನು ಮನೆಗೆ ಕಳುಹಿಸುವಾಗ ನಡೆಸುವ ಆಚರಣೆ.
  • ವಿವಾಹ: ಬ್ರಹ್ಮಚರ್ಯದ ಅವಧಿ ಮುಗಿದ ನಂತರ ಸೂಕ್ತ ಸಂಗಾತಿಯೊಂದಿಗೆ ಮದುವೆ ಮಾಡಿಸುವುದು.
  • ಅಂತ್ಯೇಷ್ಠಿ:  ವ್ಯಕ್ತಿ ಮರಣ ಹೊಂದಿದಾಗ ನಡೆಸುವ ಅಂತಿಮ ಕ್ರಿಯೆಗಳು.

 

B. ವೈವಾಹಿಕ ಆಚರಣೆಗಳು:

  • ವಧು-ವರ ಗಣಪರೀಕ್ಷಾ: ಮಗ ಅಥವಾ ಮಗಳಿಗೆ ಸೂಕ್ತ ವದು ಅಥವಾ ವರನನ್ನು ಹುಡುಕುವುದು.
  • ವರಪ್ರಯಾಣ: ವಧುವಿನ ಮನೆಗೆ ಹೆಣ್ಣು ಕೇಳಲು ಹೋಗುವುದು.
  • ವಾಗ್ದಾನ ಅಥವಾ ವಾನ್ನಿಶ್ಚಯ: ಪರಸ್ಪರ ಒಪ್ಪಿಗೆಯ ನಂತರ ಮದುವೆಯನ್ನು ನಿಶ್ಚಯಿಸುವುದು.
  • ನಾನದಿ ಶ್ರದ್ಧಾ : ಮದುವೆಯ ಶುಭಕಾರ್ಯಗಳ ಆರಂಭಕ್ಕೆ ಮುನ್ನ ಪಿತೃಗಳನ್ನು ಪೂಜಿಸುವುದು ಅಂದರೆ ದೇವತಾಕಾರ್ಯದಿಂದ ಮದುವೆಯ ಕೆಲಸ-ಕಾರ್ಯಗಳ ಆರಂಭ ಮಾಡುವುದು.
  • ಮಂಟಪಕರಣ : ಮದುವೆಯ ಕಾರ್ಯಗಳು ನಡೆಯಲು ಮಂಟಪ ಅಥವಾ ಚಪ್ಪರದ ಸಿದ್ಧತೆ ಮಾಡುವುದು.
  • ಗೌರಿಹರ ಪೂಜಾ : ವಧುವಿನಿಂದ ಶಿವ-ಪಾರ್ವತಿಯರ ಪೂಜೆ ಮಾಡಿಸುವುದು. (ಇಂದು ಮನೆದೇವರುಗಳ ಪೂಜೆ ಮಾಡಿಸಲಾಗುತ್ತದೆ)
  • ತೈಲಹರಿದ್ರಾರೋಪಣ : ವಧು-ವರರಿಗೆ ಅರಿಶಿಣಮಿಶ್ರಿತ ಎಣ್ಣೆಯ ಲೇಪನ ಮಾಡುವುದು.
  • ಸ್ನಾಪನಾ-ಪರಿಧಾಪನ ಮತ್ತು ಸಮ್ನಾಹನ: ವಧು-ವರರಿಗೆ ಸ್ನಾನ ಮಾಡಿಸುವುದು, ನವವಸ್ತ್ರಗಳನ್ನು ತೊಡಿಸುವುದು ಮತ್ತು ಕಂಕಣಧಾರಣೆ ಮಾಡಿಸುವುದು.
  • ಮಧುಪಾಕ: ವಧುವಿನ ಮನೆಯಲ್ಲಿ ವರನ ಕಡೆಯವರಿಗೆ ನಡೆಯುವ ಊಟೋಪಚಾರ. (ಪ್ರಾಚೀನ ಕಾಲದಲ್ಲಿ ಜೇನು, ಹಾಲು, ಮೊಸರುಗಳನ್ನು ಬಳಸುತ್ತಿದ್ದ ಕಾರಣದಿಂದ ಮಧುಪಾಕವೆಂಬ ಹೆಸರು)
  • ಪ್ರತಿಸರಬಂದ : ವಧು-ವರರಿಗೆ ಶುಭಕಂಕಣ ಧಾರಣೆ ಮಾಡಿಸುವುದು.
  • ಪರಸ್ಪರ ಸಮೀಕ್ಷಣ: ಮಾಂಗಲ್ಯಧಾರಣೆಗೆ ಮುನ್ನ ಅಂತರಪಟ (ಪರದೆ) ತೆಗೆದು ವಧು-ವರರ ಪರಸ್ಪರ ಮುಖದರ್ಶನ ಮಾಡಿಸುವುದು.
  • ಕನ್ಯಾದಾನ: ವಧುವಿನ ತಂದೆ-ತಾಯಿಗಳು ಮಗಳನ್ನು ವರನ ಮನೆಯವರಿಗೆ ಗುರು-ಹಿರಿಯರ ಸಮ್ಮುಖದಲ್ಲಿ ಧಾರೆ ಎರೆದು ಕೊಡುವುದು.
  • ಮಂಗಳಸೂತ್ರ ಬಂಧನ: ಶುಭಮುಹೂರ್ತದಲ್ಲಿ ವಧುವಿಗೆ ಮಾಂಗಲ್ಯಧಾರಣೆ ಮಾಡಿಸುವುದು.
  • ಅಗ್ನಿಸ್ಥಾಪನ ಮತ್ತು ಹೋಮ: ಅಗ್ನಿಯ ಸ್ಥಾಪನೆ ಮತ್ತು ಅದರ ಮೂಲಕ ಪವಿತ್ರ ವಸ್ತುಗಳನ್ನು ದೇವರಿಗೆ ಅರ್ಪಿಸುವುದು.
  • ಪಾಣಿಗ್ರಹಣ: ವಧುವಿನ ಕೈಯನ್ನು ವರನ ಕೈಗೆ ನೀಡುವುದು.
  • ಲಾಜಹೋಮ: ಹೋಮದಲ್ಲಿ ವಧುವು ಧಾನ್ಯಗಳನ್ನು ದೇವರಿಗೆ ಅರ್ಪಿಸುವುದು.
  • ಸಪ್ತಪದಿ: ವಧು-ವರರು ಅಗ್ನಿಯ ಸುತ್ತಲೂ ಏಳು ಹೆಜ್ಜೆ ನಡೆಯುವುದು.
  • ಮುರ್ಧಾಭಿಷೇಕ: ವಧು-ವರರಿಗೆ ಪವಿತ್ರ ಜಲವನ್ನು ಸಿಂಪಡಿಸುವುದು ಅಥವಾ ಗುರು-ಹಿರಿಯರು ಅಕ್ಷತೆ ಹಾಕುವುದು.

 

7. ವಿವಾಹ ಪದ್ಧತಿಗಳು:

A. ಬ್ರಹ್ಮ ವಿವಾಹ:- ತಂದೆ ಸೂಕ್ತ ವರನಿಗೆ ಮಗಳನ್ನು ಕೊಡುವುದು.

B. ದೈವ  ವಿವಾಹ:- ತಂದೆ ಪುರೋಹಿತನಿಗೆ ಮಗಳನ್ನು ಧಾರೆ ಎರೆದುಕೊಡುವುದು.

C.  ಪ್ರಜಾಪತ್ಯ ವಿವಾಹ:- ವರದಕ್ಷಿಣೆ ಇಲ್ಲದೇ ವರನು ಧರ್ಮಪಾಲನೆಗಾಗಿ ವಧುವಿನ ಕೈ ಹಿಡಿಯುವುದು.

D. ಆರ್ಷ್ಯ ವಿವಾಹ:- ತಂದೆ ಹಸುವನ್ನು ಕಾಣಿಕೆಯಾಗಿ ಪಡೆದು ಮಗಳನ್ನು ಧಾರೆ ಎರೆದುಕೊಡುವುದು.

E. ಗಂಧರ್ವ ವಿವಾಹ:- ವಧು-ವರರು ಪರಸ್ಪರ ಮೆಚ್ಚಿ ಮದುವೆಯಾಗುವುದು.

F. ರಾಕ್ಷಸ ವಿವಾಹ:- ವಧುವನ್ನು ಮದುವೆ ಮಂಟಪದಿಂದ ಅಪಹರಿಸಿ ವಿವಾಹವಾಗುವುದು.

G. ಅಸುರ ವಿವಾಹ:- ಕನ್ಯೆಯು ವರನಿಗೆ ಶುಲ್ಕ ಕೊಟ್ಟು ವಿವಾಹವಾಗುವುದು.

H. ಪೈಶಾಚ ವಿವಾಹ: ಕನ್ಯೆ ನಿದ್ರೆಯಲ್ಲಿದ್ದಾಗ ಅಪಹರಿಸಿ ವಿವಾಹವಾಗುವುದು.

     ಅಲ್ಲದೇ ಕೆಳಕಂಡ ವಿವಾಹದ ವಿಧಗಳೂ ಆ ಕಾಲದಲ್ಲಿ ಕಂಡು ಬರುತ್ತವೆ.

I. ಅನುಲೋಮ ವಿವಾಹ:- ಮೇಲ್ಜಾತಿಯ ಹುಡುಗ ಕೆಳಜಾತಿಯ ಹುಡುಗಿಯನ್ನು ವಿವಾಹವಾಗುವುದು.

II. ಪ್ರತಿಲೋಮ ವಿವಾಹ:- ಕೆಳಜಾತಿಯ ಹುಡುಗ ಮೇಲ್ಜಾತಿಯ ಹುಡುಗಿಯನ್ನು ಮದುವೆಯಾಗುವುದು.

III. ವಿಲೋಮ ವಿವಾಹ:- ಮೇಲ್ಜಾತಿಯ ಪುರುಷ ಚಂಡಾಲ ಜಾತಿಯ ಕನ್ಯೆಯನ್ನು ವಿವಾಹವಾಗುವುದು.

 

೭. ಕುಂಠಿತಗೊಂಡ ಮಹಿಳೆಯರ ಸ್ಥಾನ-ಮಾನಗಳು:-

೮. ಬ್ರಾಹ್ಮಣ-ಕ್ಷತ್ರಿಯ ಪೈಪೋಟಿ.

೯. ಸೇನೆ: ಗಜಪಡೆ ಸೇರ್ಪಡೆ. ನೂತನ ಆಯುಧಗಳ ಆವಿಷ್ಕಾರ.

೧೦. ಅಧಿಕಾರಿ ವರ್ಗ: ಸೂತ-ಸಾರಥಿ, ಗ್ರಾಮವಾದಿನ್‌, ಶತಪತಿ-ನೂರು ಗ್ರಾಮಗಳ ಮುಖಂಡ,

***** 

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources