ಬಂಗಾಳದಲ್ಲಿ ಕುಲೀನತೆ
ಕುಲೀನತೆ ಪದದ ಅರ್ಥ:
ಎತ್ತರವಾಗಿರುವುದು, ಶ್ರೇಷ್ಠತೆ, ಅಥವಾ ಉತ್ತಮ ಅಂತಸ್ತು.
ಹಾಗಾದರೆ ಯಾರನ್ನು
ಕುಲೀನರು ಎಂದು ಕರೆಯಬಹುದು?
ಪದಾರ್ಥ ಚಿಂತಾಮಣಿಯ
ಪ್ರಕಾರ ಪುರುಷನ ಯೋಗ್ಯತೆಯನ್ನು ವರ್ಧಿಸುವ ಅಷ್ಟ ಗುಣಗಳು:
ಬುದ್ಧಿ, ಕುಲೀನತೆ,
ದಮ, ಶ್ರುತ
ಪರಾಕ್ರಮ, ಮಿತಭಾಷಣ,
ಯಥಾಶಕ್ತಿದಾನ, ಕೃತಜ್ಞತೆ.
ವಾಚಸ್ಪತಿ ಮಿಶ್ರ ಎಂಬುವವರ
ಪ್ರಕಾರ: ಆಚಾರ, ವಿದ್ಯೆ, ವಿನಯ, ಪ್ರತಿಷ್ಠೆ, ತೀರ್ಥಯಾತ್ರೆ, ನಿಷ್ಠೆ, ತಪಸ್ಸು, ವಿವಾ ಹ ಸಮಾನಕುಲದವರಲ್ಲಿ ಮತ್ತು ದಾನ ಮಾಡುವ ಗುಣಗಳಿದ್ದರೆ ಅವರನ್ನು
ಕುಲೀನರೆಂದು ಕರೆಯಬಹುದು.
ಇಂತಹ ಕುಲೀನ ಕುಟುಂಬಗಳಲ್ಲಿ
ಜನಿಸಿದ ಮಹಿಳೆಯರನ್ನೂ ಸಹ ಕುಲೀನ ಸ್ತ್ರೀ ಎಂದು ಕರೆಯುವರು.
ಬಂಗಾಳದಲ್ಲಿ ಕುಲೀನ
ಪದ್ಧತಿ ಬೆಳೆಯಲು ಕಾರಣಗಳು:-
ಆದಿಶೂರ ಎಂಬ ಅರಸನ
ಕಾಲದಲ್ಲಿ ಕನ್ಯಾಕುಬ್ಜದಿಂದ ಐದು ಬ್ರಾಹ್ಮಣ ಕುಟುಂಬಗಳಿಗೆ ಸೇರಿದ ಬ್ರಾಹ್ಮಣರನ್ನು ಬಂಗಾಳಕ್ಕೆ ಆಹ್ವಾನಿಸಲಾಯಿತು.
ಅವುಗಳೆಂದರೆ, ಕ್ಷಿತಿಶಾ, ಮೇಧಾದಿತಿ, ವೀತರಾಗ, ಸುಧಾನಿಧಿ & ಸಂಭಾರಿ.
ಅಲ್ಲದೇ ಗೌಡ ಮನೆತನದ
ಶಶಾಂಕ ಮತ್ತು ವರ್ಮನ್ ಮನೆತನದ ಹರಿವರ್ಮನ ಕಾಲದಲ್ಲೂ ಶಕದ್ವೀಪಿ ಮತ್ತು ವೈದಿಕ ಬ್ರಾಹ್ಮಣರೆಂಬ ಎರಡು
ಗುಂಪುಗಳನ್ನು ಬಂಗಾಳಕ್ಕೆ ಕರೆತರಲಾಯಿತು.
ಆದರೆ ಆದಿಶೂರನ ಬಗ್ಗೆ
ಐತಿಹಾಸಿಕ ದಾಖಲೆಗಳು ಲಭ್ಯವಿಲ್ಲ.
ಸೇನ ಅರಸ ಬಲ್ಲಾಳ ಸೇನನ
ಕಾಲದಲ್ಲಿ ಕುಲೀನತೆಯನ್ನು ಪರಿಚಯಿಸಲಾಯಿತು ಎಂದು ಹೇಳುತ್ತಾರಾದರೂ ಅದಕ್ಕೆ ಲಿಖಿತ ಆಧಾರಗಳು ಲಭ್ಯವಿಲ್ಲ.
ಅಲ್ಲದೇ ಪಾಲ ಮನೆತನದ
3ನೆ ವಿಗ್ರಹಪಾಲನ ಬಂಗಾಯನ ತಾಮ್ರಶಾಸನದಲ್ಲಿ ಅವನ ಅಧಿಕಾರಿಯಾಗಿದ್ದ “ಘಂಟಿಸ”
ಎಂಬುವನ ವಂಶವು ಅವನ ತಾಯಿಯ ಕಡೆಯಿಂದ
ಕನ್ಯಾಕುಬ್ಜ ಬ್ರಾಹ್ಮಣರಿಗೆ ಸೇರಿದ್ದು ಎಂಬ ಉಲ್ಲೇಖವಿದೆ.
ಹೀಗೆ ಕುಲೀನರೆನಿಸಿಕೊಂಡವರೊಂದಿಗೆ
ಬೆಳೆಸಿದ ಸಾಮಾಜಿಕ ಅಂದರೆ ವೈವಾಹಿಕ ಸಂಬಂಧಗಳೇ ಬಂಗಾಳದಲ್ಲಿ ಕುಲೀನ ಪದ್ಧತಿ ಬೆಳೆಯಲು ಕಾರಣವಾಯಿತು.
ಆದ್ದರಿಂದ ಸು.
6-7ನೆ ಶತಮಾನಗಳ ಕಾಲದಲ್ಲಿ ಬಂಗಾಳದಲ್ಲಿನ ಕುಲೀನ ಪದ್ಧತಿಯ ಅಂಕುರಾರ್ಪಣೆ ಆಯಿತು ಎನ್ನಬಹುದು.
ಇವರ ಸಂಖ್ಯೆಯು
8-12 ಶತಮಾನಗಳಲ್ಲಿ ಉತ್ತರ ಭಾರತ, ಗುಜರಾತ್ ಮತ್ತು ಮಧ್ಯಭಾರತದಿಂದ ನಡೆದ ಮತ್ತಷ್ಟು ವಲಸೆಯಿಂದ ಅಧಿಕಗೊಂಡಿತು.
ಕಾಲಾಂತರದಲ್ಲಿ ಬಂಗಾಳದ
ಈ ಬ್ರಾಹ್ಮಣರಲ್ಲಿ 4 ಪ್ರಮುಖ ಗುಂಪುಗಳು ರೂಪುಗೊಂಡವು. ಅವುಗಳೆಂದರೆ-
ರಾಧೀಯ, ವಾರೇಂದ್ರ,
ವೈದಿಕ ಮತ್ತು ಶಕದ್ವೀಪಿ.
ಇವರು ಕುಲಜಿಗಳು, ಕುಲಶಾಸ್ತ್ರಗಳು,
ಕುಲಗ್ರಂಥಗಳು ಅಥವಾ ಕುಲಪಂಜಿಕಾಗಳು ಎಂಬ ಗ್ರಂಥಗಳ ಮೂಲಕ ತಮ್ಮ ಕುಲವನ್ನು ಗುರುತಿಸಿಕೊಳ್ಳುತ್ತಾರೆ.
ಈ ರೀತಿಯ ಕುಲಮೂಲದ
ಪದ್ಧತಿಯು ಸಮಾಜಪತಿ ಅಥವಾ ಘಟಕ ಎಂಬ ವೈವಾಹಿಕ ದಲ್ಲಾಳಿಗಳಿಂದ ಮತ್ತಷ್ಟು ಬಲಗೊಂಡಿತು.
ಕುಲೀನ ಪದ್ಧತಿಯ ವಿಸ್ತರಣೆ
ಮತ್ತು ಉಪವರ್ಗಗಳ ಏಳಿಗೆ
ಕೇವಲ ಬ್ರಾಹ್ಮಣರಲ್ಲಿದ್ದ
ಈ ಪದ್ಧತಿಯು ಕ್ರಮೇಣ ವೈದ್ಯ ಮತ್ತು ಕಾಯಸ್ಥ ಎಂಬ ಬಂಗಾಳದ ಇತರ ಸಮುದಾಯಗಳಿಗೂ ವ್ಯಾಪಿಸಿತು.
ಅಲ್ಲದೇ ಇವರಲ್ಲಿಯೇ
ಪುನಃ ಉಪವರ್ಗಗಳು ಬೆಳೆದು ಬಂದವು. ಉದಾ: ರಾಧೀಯ ಬ್ರಾಹ್ಮಣರು ತಮ್ಮಲ್ಲಿಯೇ ಕುಲೀನ, ಸಿದ್ಧ, ಸದ್ಧ ಮತ್ತು ಕಾಶ್ಟ ಶ್ರೋತ್ರೀಯರೆಂಬ ಉಪವರ್ಗಗಳನ್ನು
ಬೆಳೆಸಿಕೊಂಡರು.
ರಾಧೀಯ ಬ್ರಾಹ್ಮಣರು
ಕೇವಲ ತಮ್ಮ ಉಪವರ್ಗಗಳಲ್ಲಿ ಮಾತ್ರ ವಿವಾಹವಾಗುವ ಮೂಲಕ ತಮ್ಮ ಕುಲದ ಪಾವಿತ್ರ್ಯತೆಯನ್ನು ಕಾಪಾಡುತ್ತಿದ್ದರು.
ಹಾಗಾದರೆ ಭಾರತದಲ್ಲಿರುವ
ಇತರ ಜಾತಿಗಳಲ್ಲಿ ಈ ಉಪವರ್ಗ ಅಥವಾ ಉಪಜಾತಿ ಎಂಬ ವರ್ಗೀಕರಣಗಳಿಲ್ಲವೇ?
ಕುಲೀನತೆ ಕಾಪಾಡಲು
ಉಂಟಾದ ಸಮಸ್ಯೆ
ಕುಲೀನ ಪದ್ಧತಿ'ಯಿಂದ
ಪ್ರಾರಂಭವಾದ ಅತ್ಯಂತ ಆಘಾತಕರ ಸಂಗತಿಯೆಂದರೆ ಬಹುಪತ್ನಿತ್ವದ ಬೆಳವಣಿಗೆ.
ವಂಶಪರಂಪರೆಯನ್ನು ಉಳಿಸಿಕೊಳ್ಳಲು
ಕುಲೀನ ಗಂಡಸರು ಶ್ರೋತ್ರಿಯ ವರ್ಗಕ್ಕೆ ಸೇರಿದ ಹೆಣ್ಣು ಮಕ್ಕಳನ್ನು ಅಧಿಕವಾಗಿ ವಿವಾಹವಾಗತೊಡಗಿದರು.
ಅಲ್ಲದೇ ವರದಕ್ಷಿಣೆಯ
ಮೂಲಕ ಸಂಪತ್ತಿನ ಗಳಿಕೆ ಮಾಡುವುದೂ ಸಹಾ ಒಂದು ಕಾರಣವಾಗಿತ್ತು.
ಅದಕ್ಕಾಗಿ ವಯಸ್ಸು
ಅಥವಾ ವೈವಾಹಿಕ ಹೊಂದಾಣಿಕೆಗಳಿಗೂ ಗಮನಕೊಡದೆ, ಅಧಿಕ ಸಂಖ್ಯೆಯ ಹೆಂಗಸರನ್ನು ಮದುವೆಯಾಗಿ ಅಪಾರ ಸಂಪತ್ತನ್ನು
ಗಳಿಸುತ್ತಿದ್ದರು.
ಕೆಲವು ಸಲ ಹಣಕಾಸಿಗೆ
ಸಂಬಂಧಿಸಿದ ಕಾರಣವಾಗಿ, ಪೂರ್ಣ ಪ್ರೌಢಳಾದ ಹುಡುಗಿಯೊಬ್ಬಳನ್ನು 12 ಅಥವಾ 13 ವರ್ಷ ವಯಸ್ಸಿನ ಹುಡುಗನಿಗೆ
ಹಾಗೂ ಯುವತಿಯನ್ನು ಮುದುಕನಿಗೆ ಮದುವೆ ಮಾಡಿಕೊಡಲಾಗುತ್ತಿತ್ತು.
'ಕುಲೀನ'ರು ಎಂದೂ ತಮ್ಮ
ಹೆಂಡಂದಿರೊಂದಿಗೆ ಜೀವಿಸುತ್ತಿದ್ದಿಲ್ಲ; ಅವರು ತಮ್ಮ ತಂದೆಯ ಅಥವಾ ಸಹೋದರರ ಮನೆಗಳಲ್ಲಿ ತೀವ್ರ ಮಾನಸಿಕ
ಯಾತನೆಯನ್ನು ಅನುಭವಿಸುತ್ತ ತಮ್ಮ ದಿನಗಳನ್ನು ಕಳೆಯುತ್ತಿದ್ದರು.
ಗಂಡಂದಿರು ಹಣವನ್ನು
ಬಲಾತ್ಕಾರದಿಂದ ಪಡೆಯುವುದಕ್ಕಾಗಿಯೇ ಆಗಾಗ ತಮ್ಮ ಹೆಂಡಂದಿರನ್ನು ಭೇಟಿಮಾಡುತ್ತಿದ್ದರು.
ಬುಕಾನನ್ ವರದಿ ಮಾಡಿರುವಂತೆ:-
”ಒಬ್ಬ ಕುಲೀನ ಬ್ರಾಹ್ಮಣನು ತನಗೆ ಇಷ್ಟ ಬಂದಷ್ಟು ಹೆಂಗಸರನ್ನು ಮದುವೆಯಾಗಬಹುದಾಗಿತ್ತು; ಕೆಲವರು
60 ಮಂದಿ ಹೆಂಗಸರನ್ನು ಮದುವೆಯಾದುದೂ ಉಂಟು.
ಆದರೆ ಸಾಮಾನ್ಯವಾಗಿ
ಅವರು 8 ಅಥವಾ 10 ಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವಂತಿರಲಿಲ್ಲ.
ಅವರು ಒಬ್ಬಳ ಅನಂತರ
ಇನ್ನೊಬ್ಬಳಂತೆ ಹೆಂಡಂದಿರನ್ನು ಭೇಟಿಯಾಗುತ್ತಿದ್ದರು ಅವರು ಅಥವಾ ಅವರ ಮಕ್ಕಳ ಜೀವನ ನಿರ್ವಹಣೆಗೆ
ಸಂಬಂಧಿಸಿದಂತೆ ಯಾವ ತೊಂದರೆಯನ್ನೂ ಉಂಟುಮಾಡುತ್ತಿರಲಿಲ್ಲ.”
ಮಿಥಿಲಾದ ಬಗ್ಗೆ ಅವನು
ಹೀಗೆ ಬರೆದಿದ್ದಾನೆ
"ಹಲ್ಲುಗಳನ್ನು
ಕಳೆದುಕೊಂಡ ಅಥವಾ ಇನ್ನೇನು ಸಾಯುವಂತಿರುವ ಕುಲೀನ
ವ್ಯಕ್ತಿಯನ್ನು ಶ್ರೋತ್ರಿಯ ಹೆಣ್ಣು ಶಿಶುವಿನೊಂದಿಗೆ ಮದುವೆ ಮಾಡಲು ಪ್ರಯತ್ನಿಸಲಾಗುತ್ತಿತ್ತು.
ಅವನು ಸತ್ತಾಗ ವಿಧವೆಯಾದ ಅವನ ಹೆಂಡತಿ ಮರುಮದುವೆಯಾಗುವಂತಿರಲಿಲ್ಲ. ಏಕೆಂದರೆ ತನ್ನ ತಂದೆಯ ಕುಟುಂಬದ
ಸದಸ್ಯರ ಪೋಷಣೆಗಾಗಿ ಹಾಗೂ ತನ್ನ ಸಹೋದರರು ಹೆಚ್ಚು ಸುಲಭವಾಗಿ ಮದುವೆಯಾಗುವ ಅವಕಾಶಮಾಡಿ ಕೊಡುವುದಕ್ಕಾಗಿ
ಅವಳು ವಿಧವೆಯಾಗಿಯೇ ಉಳಿಯುತ್ತಿದ್ದಳು".
ಇದನ್ನು ತಡೆಯಲು ದರ್ಭಾಂಗಾದ
ರಾಜನು ಕೈಗೊಂಡ ಕ್ರಮವೇನು?
1805ರಲ್ಲಿ, ಮಿಥಿಲಾ
ಬ್ರಾಹ್ಮಣರ ವಿವಾದಾತೀತ ಮುಖ್ಯಸ್ಥನೆಂದು ಭಾವಿಸಲಾದ ದರ್ಭಾಂಗಾದ ರಾಜನು "ತನ್ನ ಅಧಿಕಾರವ್ಯಾಪ್ತಿಯ
ಪ್ರದೇಶದಲ್ಲಿ ಯಾವನೇ ವ್ಯಕ್ತಿ ಐವರಿಗಿಂತ ಹೆಚ್ಚು ಮಂದಿ ಹೆಂಗಸರನ್ನು ಮದುವೆಯಾಗದಂತೆ ಪ್ರತಿಬಂಧಿಸಿದ;
ಆ ಮೊದಲು ಐವರಿಗಿಂತ ಹೆಚ್ಚು ಮಂದಿಯನ್ನು ವ್ಯಕ್ತಿ ಮದುವೆಯಾಗುವುದು ಸಾಮಾನ್ಯವಾಗಿತ್ತು".
*****
Comments
Post a Comment