ಅಧ್ಯಾಯ ೧. ಭಾರತ ಸಂವಿಧಾನದ ರಚನೆ – ಸಂವಿಧಾನ ರಚನಾ ಸಭೆ. ಆರನೆ ಸೆಮ್, ಇತಿಹಾಸ ಪತ್ರಿಕೆ 1, ಕರ್ನಾಟಕ ವಿ. ವಿ. ವ್ಯಾಪ್ತಿಯ ಮಹಾವಿದ್ಯಾಲಯಗಳಿಗೆ.
ಪೀಠಿಕೆ [Introduction]: ಜಗತ್ತಿನ ಯಾವುದೇ ವಸಾಹತು ದೇಶವಾಗಲಿ ಸ್ವಾತಂತ್ರ್ಯ ಪಡೆದೊಡನೆ ವಿವಿಧ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆ ಪೈಕಿ ತನ್ನದೇ ಆದ ಆಡಳಿತಾತ್ಮಕ ನಿಯಮಗಳನ್ನು ಒಳಗೊಂಡ ಸಂವಿಧಾನದ ರಚನೆ ಮತ್ತು ಭವಿಷ್ಯದ ರಾಜ್ಯ ರಚನೆಯ ಸ್ವರೂಪದ ನಿರ್ಧಾರಗಳು ಪ್ರಮುಖವಾಗಿರುತ್ತವೆ. ಈ ವಿಚಾರದಲ್ಲಿ 15 ಆಗಸ್ಟ್ 1947 ರಂದು ಸ್ವಾತಂತ್ರ್ಯ ಪಡೆದ ಭಾರತದ ಪರಿಸ್ಥಿತಿಯೂ ಸಹ ಭಿನ್ನವಾಗಿರಲಿಲ್ಲ. ಸ್ವಾತಂತ್ರ್ಯ ಪೂರ್ವದಿಂದಲೇ ಸಂವಿಧಾನದ ರಚನೆ ಮತ್ತು ರಾಜ್ಯ ರಚನೆ ಕುರಿತಂತೆ ಭಾರತೀಯರು ತಮ್ಮದೇ ಆದ ಚರ್ಚೆ ನಡೆಸಿ ಕನಸು ಕಂಡಿದ್ದರು.
ಸಂವಿಧಾನ ರಚನಾ ಸಭೆಯ ರಚನೆಯ ವಿಷಯದಲ್ಲಿ ಅನೇಕ ಟೀಕೆಗಳಿವೆ. ಕಾಂಗ್ರೆಸ್ನ
ಪ್ರಾಬಲ್ಯ, ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು, ಕಾನೂನು ತಜ್ಞರ ಯಜಮಾನಿಕೆ, ಪ್ರಾತಿನಿಧ್ಯದ ಕೊರತೆ, ಪರೋಕ್ಷ ಆಯ್ಕೆಯಿಂದಾಗಿ ಪ್ರಜಾಸತ್ತಾತ್ಮಕವಾಗಿಲ್ಲವಿರುವುದು ಮುಂತಾದ ಟೀಕೆಗಳಿವೆ. ಆದರೆ ಸಂವಿಧಾನ ರಚನಾಸಭೆಯ ಕಾರ್ಯವಿಧಾನ, ಸದಸ್ಯರ ಪ್ರಾಮಾಣಿಕತೆ, ನಿಷ್ಠೆ, ರಾಷ್ಟ್ರ ಹಿತದ ಕುರಿತ ಕಳಕಳಿ ಪ್ರಶ್ನಾತೀತವಾದದ್ದು ಎಂಬುದು ನಿಸ್ಸಂದೇಹ. ವಿವಿಧ ಸರ್ಕಾರಗಳ ಕಾರ್ಯ ವಿಧಾನಗಳಲ್ಲಿ ಇದ್ದ ಅನುಭವ, ಜ್ಞಾನ, ಆಳ್ವಿಕೆಯ ಪರಂಪರೆಯ ಭಂಡಾರಗಳನ್ನೆಲ್ಲ ಬಳಸಿಕೊಂಡು ಭಾರತದ ರಾಜಕೀಯ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗೆ ಹೊಂದಿಕೊಳ್ಳುವಂತಹ ಸೂಕ್ತ ವ್ಯವಸ್ಥೆಯೊಂದನ್ನು ನೀಡಲು ಸಂವಿಧಾನ ರಚನಾಕಾರರು ಪ್ರಯತ್ನಿಸಿದರು. ಈ
ಕಾರಣದಿಂದಾಗಿಯೇ ಭಾರತ ಸಂವಿಧಾನದಲ್ಲಿ ಜಗತ್ತಿನ ವಿವಿಧ ಸಂವಿಧಾನಗಳ ಅಂಶಗಳನ್ನು ಕಾಣಬಹುದಾಗಿದೆ. ಕೆಲವರು ಭಾರತ ಸಂವಿಧಾನವನ್ನು ‘ಎರವಲುಗಳ ಕಂತೆ’ ಎಂದು ಟೀಕಿಸಿದ್ದಾರೆ. ಗ್ರಾನ್ವಿಲ್ಲೆ ಆಸ್ಟಿನ್ (೧೯೯೯)ಸಂವಿಧಾನ ರಚನಾಸಭೆ ಯಾವ ವ್ಯವಸ್ಥೆಯ ನಕಲನ್ನೂ ಮಾಡದೆ ಅತಿ
ಜಾಣತನದಿಂದ ಇತರ
ಸಂವಿಧಾನಗಳ ಆಯ್ದ ಭಾಗಗಳನ್ನು ಅಗತ್ಯಕ್ಕೆ ಅನುಗುಣವಾಗಿ ಮಾರ್ಪಡಿಸಿದೆ ಎಂದಿರುವುದು ಒಪ್ಪಿಕೊಳ್ಳ ಬಹುದಾದ ಹೇಳಿಕೆಯಾಗಿದೆ.
ಗಾತ್ರದಲ್ಲಿ ಅತಿ ದೊಡ್ಡ ಸಂವಿಧಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತ ಸಂವಿಧಾನ ಬೆಳೆಯುತ್ತಲೇ ಇರುವುದು ಅದರ ವಿಶಿಷ್ಟತೆಯ, ಜೀವಂತಿಕೆಯ ಲಕ್ಷಣವಾಗಿದೆ. ಪ್ರಾರಂಭದಲ್ಲಿ ಮೂಲ ಸಂವಿಧಾನ ದೊಡ್ಡದಾಗಲು ಹಲವಾರು ಕಾರಣಗಳಿದ್ದವು; ಸಂವಿಧಾನಗಳ ಪರಂಪರೆ; ಸ್ವಾತಂತ್ರ್ಯ ಬಂದಾಗ ಇದ್ದ ಪ್ರಕ್ಷುಬ್ಧ ಸ್ಥಿತಿ; ತುರ್ತು ಪರಿಸ್ಥಿತಿ ನಿಭಾಯಿಸಲು ಬಲಿಷ್ಠ ಸರ್ಕಾರದ ಅಗತ್ಯ; ವೈವಿಧ್ಯತೆಯನ್ನಾಧರಿಸಿ
ಸಂಯುಕ್ತ ವ್ಯವಸ್ಥೆಗೆ ಅವಕಾಶ ಕಲ್ಪಿಸುವುದು; ರಾಷ್ಟ್ರದ ಐಕ್ಯತೆ ಮತ್ತು ಅಖಂಡತೆಯ ದೃಷ್ಟಿಯಿಂದ ಏಕ ಸಂವಿಧಾನ ರೂಪಿಸುವುದು; ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡರ ರಚನೆ, ಅಧಿಕಾರ ವ್ಯಾಪ್ತಿಯ ನಿರೂಪಣೆ; ಬಹುಭಾಷಿಕ ರಾಷ್ಟ್ರವಾದ್ದರಿಂದ ಅಧಿಕೃತ ಭಾಷೆಗಳ ಉಲ್ಲೇಖ; ಕೆಲವು ಸಂಯುಕ್ತ ಘಟಕಗಳ ವೈಶಿಷ್ಟ್ಯತೆಗಳಿಂದಾಗಿ ಅವುಗಳಿಗೆ ವಿಶೇಷ ವಿಧಿಗಳ ರಚನೆ; ಸಂವಿಧಾನದ ಉದ್ದೇಶಗಳ ಈಡೇರಿಕೆಗಾಗಿ ಸರ್ಕಾರ ಕಾರ್ಯನಿರ್ವಹಿಸಲು ಮಾರ್ಗಸೂಚಿಯಾಗಿ ರಾಜ್ಯ ನಿರ್ದೇಶಕ ತತ್ವಗಳು; ಸರ್ಕಾರದ ಅಧಿಕಾರದ ಮೇಲಿನ ಮಿತಿಯಾಗಿ ಪ್ರಜೆಗಳ ಸ್ವಾತಂತ್ರ್ಯ ಹಕ್ಕುಗಳನ್ನು ಒಳಗೊಂಡ ಮೂಲಭೂತ ಹಕ್ಕುಗಳು ಇನ್ನು ಮುಂತಾದ ಕಾರಣಗಳಿಂದಾಗಿ ಸಂವಿಧಾನ ರಚನಾಕಾರರು ದೀರ್ಘವಾದ ಸಂವಿಧಾನ ನೀಡುವ ಒತ್ತಾಸೆಗೊಳಗಾದರು. ನಂತರದಲ್ಲಿ ಅಗತ್ಯಕ್ಕೆ ಅನುಗುಣವಾಗಿ, ಸಂವಿಧಾನದ ಉದ್ದೇಶಗಳ ಈಡೇರಿಕೆಯ ದೃಷ್ಟಿಯಿಂದಾಗಿ ತಿದ್ದುಪಡಿಗಳ ಮೂಲಕ ಸಂವಿಧಾನ ಬೆಳೆಯಿತು ಮತ್ತು ಬೆಳೆಯುತ್ತಲೇ ಇದೆ.
ಉದಾಹರಣೆಗೆ, ಮೂಲಭೂತ ಕರ್ತವ್ಯಗಳ ಸೇರ್ಪಡೆ; ಬಹುಪಕ್ಷ ಪದ್ಧತಿ ತಂದೊಡ್ಡಿದ ಸಮಸ್ಯೆಗಳಿಂದಾಗಿ ಪಕ್ಷಾಂತರ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯ; ಮೂಲಭೂತ ಹಕ್ಕುಗಳು ಹಾಗೂ ರಾಜ್ಯ ನಿರ್ದೇಶಕ ಪಟ್ಟಿಗಳಲ್ಲಿ ಉಂಟಾದ ಘರ್ಷಣೆ. ಈ ರೀತಿಯಲ್ಲಿ ಸಂವಿಧಾನದ ಗಾತ್ರ ದೊಡ್ಡದಾಗಿದ್ದರೂ ಅದು ಭಾರತದ ಅಂದಿನ ಹಾಗೂ ಇಂದಿನ ಪರಿಸ್ಥಿತಿಗೆ ಸಹಜವೆನಿಸುತ್ತದೆ.
ಭಾರತದ ಸಂವಿಧಾನದಲ್ಲಿ ಸ್ಥಿರತೆಯೊಂದಿಗೆ ಅಭಿವೃದ್ಧಿ ಹಾಗೂ ವಿಕಾಸಕ್ಕೆ ಅವಕಾಶ ಕಲ್ಪಿಸುವುದಕ್ಕಾಗಿಯೇ ಸಂವಿಧಾನ ರಚನಾಕಾರರು ಏಕರೂಪದ ತಿದ್ದುಪಡಿ ವಿಧಾನವನ್ನು ನೀಡದೇ ಕಠಿಣತೆ ಮತ್ತು ನಮ್ರತೆಯ ಮಿಶ್ರಣವನ್ನಾಗಿಸಿದ್ದಾರೆ. ಇದು ಅವರ ದೂರದೃಷ್ಟಿಯ ಸೂಚಕ. ಯಾವುದೇ ಸಂವಿಧಾನ ಉತ್ತಮವೆನಿಸಿಕೊಳ್ಳಬೇಕಾದರೆ ಸ್ಥಿರವ್ಯವಸ್ಥೆ ನೀಡುವುದರೊಂದಿಗೆ ಬದಲಾದ ಪರಿಸ್ಥಿತಿಗಳು ತಂದೊಡ್ಡುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಹಾಯಕವಾಗಿರಬೇಕು. ಸಮಾಜ ನಿಂತ ನೀರಲ್ಲ. ಅದರ ಅಗತ್ಯಗಳು ಮತ್ತು ನಿರೀಕ್ಷೆಗಳು ನಿರಂತರವಾಗಿ ಬದಲಾಗುತ್ತಲೇ ಇರುತ್ತವೆ. ಸರ್ಕಾರದ ವ್ಯವಸ್ಥೆ ಅದರೊಂದಿಗೆ ಹೊಂದಿಕೊಳ್ಳಬೇಕಾದರೆ ಅತಿ ಕಠಿಣ ಸಂವಿಧಾನವಿದ್ದರೆ ಸಾಧ್ಯವಾಗದು.
ಪ್ರಸ್ತುತ ಅಧ್ಯಾಯದಲ್ಲಿ ಸ್ವತಂತ್ರ ಭಾರತದ ಸಂವಿಧಾನ ರಚನೆ ಹಾಗೂ ರಾಜ್ಯ ರಚನೆ ಕುರಿತಂತೆ ಬೆಳಕು ಚೆಲ್ಲಲಾಗಿದೆ.
[I.
ಸಂವಿಧಾನ ರಚನಾ ಸಭೆಯ ರಚನೆ [Composition of Constituent Assembly]:
ಪೀಠಿಕೆ:
ಭಾರತೀಯರಲ್ಲಿ 20 ನೇ ಶತಮಾನದ ಎರಡನೇ ದಶಕದವರೆಗೆ ಸಂವಿಧಾನದ ಸ್ಪಷ್ಟ ಪರಿಕಲ್ಪನೆ ಇರಲಿಲ್ಲ. ರಾಷ್ಟ್ರೀಯತೆಯ
ಉದಯ, ಸ್ವದೇಶಿ ಚಳುವಳಿ, ಗಾಂಧಿ ನೇತೃತ್ವದ ರಾಷ್ಟ್ರೀಯ ಹೋರಾಟಗಳು ಭಾರತೀಯರಲ್ಲಿ ಸಂವಿಧಾನದ ಬಯಕೆಯನ್ನು
ಕ್ರಮೇಣ ಬಿತ್ತಿದವು. ಆರಂಭದಲ್ಲಿ ಸಂವಿಧಾನದ ಬೇಡಿಕೆಯು ಅಸ್ಪಷ್ಟವಾಗಿದ್ದು ಕ್ರಮೇಣ ಅದೊಂದು ಭಾರತೀಯರ
ನಿರ್ದಿಷ್ಟ ಬೇಡಿಕೆಯಾಗಿ ರೂಪುಗೊಂಡಿತು. ಈ ಹಿನ್ನೆಲೆಯಲ್ಲಿ ಭಾರತದ ಸಂವಿಧಾನ ರಚನಾ ಸಭೆಯ ರಚನೆಯನ್ನು
ಅರ್ಥೈಸಿಕೊಳ್ಳಲು ಸಂವಿಧಾನಾತ್ಮಕ ಬೇಡಿಕೆಯ ಇತಿಹಾಸದ ಪರಿಪೂರ್ಣ ಮನವರಿಕೆ ಅಗತ್ಯವೆನಿಸುತ್ತದೆ. ಆದ್ದರಿಂದ
ಪ್ರಸ್ತುತ ಅಧ್ಯಾಯದಲ್ಲಿ ಭಾರತದ ಸಂವಿಧಾನ ರಚನಾ ಸಭೆಯ ರಚನೆಯನ್ನು ವಿವರಿಸುವ ಮೊದಲು ಭಾರತದಲ್ಲಿ
ಸಂವಿಧಾನದ ಬೇಡಿಕೆಯ ಇತಿಹಾಸವನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
[A.
ಭಾರತದಲ್ಲಿನ ಸಂವಿಧಾನಾತ್ಮಕ ಬೇಡಿಕೆಯ ಇತಿಹಾಸ [History of Constitutional Demand in
India]:-
ಸ್ವಾತಂತ್ರ್ಯ ಹೋರಾಟದ ವೇಳೆಯಲ್ಲಿಯೇ ಭಾರತೀಯರು ಸ್ವಾತಂತ್ರಾನಂತರ
ತಮ್ಮ ದೇಶಕ್ಕೆ ಸೂಕ್ತ ಸಂವಿಧಾನವೊಂದರ ಅಗತ್ಯವನ್ನು ಮನಗಂಡರು. ಜೊತೆಗೆ ಭಾರತದ ಸಂವಿಧಾನವು ಭಾರತೀಯರಿಂದಲೇ
ರಚನೆಗೊಳ್ಳಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು. ಹೀಗಾಗಿ ಸಂವಿಧಾನದ ಬೇಡಿಕೆಯು ಸಂವಿಧಾನ ರಚನಾ ಸಭೆಯ
ಬೇಡಿಕೆಯನ್ನೂ ಪ್ರತಿಫಲಿಸುತ್ತಿತ್ತು. ಈ ಕೆಳಗೆ ಭಾರತದಲ್ಲಿನ ಸಂವಿಧಾನದ ಬೇಡಿಕೆಯ ವಿವಿಧ ಹಂತಗಳನ್ನು
ಕುರಿತಾದ ಸಂಕ್ಷಿಪ್ತ ವಿವರಣೆಯನ್ನು ನೀಡಲಾಗಿದೆ.
1. ಸಂವಿಧಾನ ರಚನಾ ಸಭೆಯ ಬೇಡಿಕೆಯ ಕುರುಹನ್ನು ಮೊದಲ ಬಾರಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಡಿಸೆಂಬರ್ 1918 ರ 33 ನೇ ದೆಹಲಿ ಅಧಿವೇಶನದ ನಿರ್ಣಯದಲ್ಲಿ ಗುರುತಿಸಬಹುದು. ಈ ನಿರ್ಣಯವು ಸ್ವಯಂ ನಿರ್ಧಾರ ತತ್ವವನ್ನು ಭಾರತೀಯರಿಗೆ ಅನ್ವಯಿಸಲು ಬ್ರಿಟಿಷರ ಮುಂದೆ ಬೇಡಿಕೆ ಇಟ್ಟಿತು. ಜೊತೆಗೆ ಭಾರತೀಯರು ತಮ್ಮ ಚುನಾಯಿತ ಪ್ರತಿನಿಧಿಗಳ ಮೂಲಕ ಅಭಿವ್ಯಕ್ತಿಯ ಹಕ್ಕನ್ನು ಹೊಂದುವಂತಾಗಬೇಕೆಂದು ಈ ನಿರ್ಣಯ ಾಶಿಸಿತು. ಪ್ರತಿನಿಧಿಗಳು ಮುಕ್ತವಾಗಿ ನಿರ್ಧಾರ ಕೈಗೊಳ್ಳಲು ಅಗತ್ಯವಾದ ನಿಯಮಾವಳಿಗಳ ಅನಿವಾರ್ಯತೆಯನ್ನು ನಿರ್ಣಯವು ಎತ್ತಿ ಹಿಡಿಯಿತು.
2. ಜನೇವರಿ 5, 1922 ರಂದು ಮಹಾತ್ಮಾ ಗಾಂಧೀಜಿ ತಮ್ಮ ಯಂಗ್ ಇಂಡಿಯಾ ಪತ್ರಿಕೆಯಲ್ಲಿ (ಸ್ವಯಂ ಆಳ್ವಿಕೆ ಪರಿಕಲ್ಪನೆಯು ಬ್ರಿಟಿಷ್ ಸಂಸತ್ತಿನ ುಚಿತ ಕೊಡುಗೆಯಾಗಿರದೇ ಭಾರತೀಯರು ತಮ್ಮ ಪ್ರತಿನಿಧಿಗಳ ಮೂಲಕ ಮನದಾಶಯಗಳನ್ನು ಅಭಿವ್ಯಕ್ತಗೊಳಿಸುವುದಾಗಿದೆ) ಎಂದು ಪ್ರತಿಪಾದಿಸಿದರು. ಗಾಂಧೀಜಿಯವರ ಈ ಹೇಳಿಕೆಯು ಸ್ವಯಂ ನಿರ್ಧಾರ ತತ್ವವನ್ನು ಬೆಂಬಲಿಸಿ ಸಂವಿಧಾನದ ಅನಿವಾರ್ಯತೆಯನ್ನು ಧ್ವನಿಸಿತು.
3. ಫೆಬ್ರವರಿ 8, 1924 ರಂದು ಸ್ವರಾಜ್ ಪಕ್ಷದ ನಾಯಕರಾಗಿದ್ದ ಮೋತಿಲಾಲ್ ನೆಹರುರವರು ಕೇಂದ್ರ ಶಾಸಕಾಂಗದಲ್ಲಿ ನಿಲುವಳಿಯೊಂದನ್ನು ಮಂಡಿಸಿ ಭಾರತಕ್ಕೆ ಸಂವಿಧಾನ ರಚನೆಯನ್ನು ಕುರಿತು ಚರ್ಚಿಸಲು ಪ್ರತಿನಿಧಿಗಳ ದುಂಡು ಮೇಜಿನ ಸಮ್ಮೇಳನವೊಂದನ್ನು ಆಯೋಜಿಸಬೇಕೆಂದು ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸಿದರು. ಸ್ವರಾಜ್ ಪಕ್ಷ 1925 ರಲ್ಲೂ ಭಾರತಕ್ಕೆ ಸಂವಿಧಾನ ರಚನೆಯ ತನ್ನ ಬೇಡಿಕೆಯನ್ನು ಪ್ರತಿಪಾದಿಸಿತು. ಆದರೆ ಬ್ರಿಟಿಷ್ ಸರ್ಕಾರ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ.
4. ಮೇ 17, 1927 ರಂದು ಬಾಂಬೆಯಲ್ಲಿ ಜರುಗಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಧಿವೇಶನದಲ್ಲಿ ಮೋತಿಲಾಲ್ ನೆಹರು ನಿಲುವಳಿಯೊಂದನ್ನು ಮಂಡಿಸಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಕೇಂದ್ರ ಹಾಗೂ ಪ್ರಾಂತ್ಯ ಶಾಸನಸಭೆಯ ಸರ್ವ ಪಕ್ಷಗಳ ಪ್ರತಿನಿಧಿಗಳ ಸಮಿತಿಯ ಮೂಲಕ ಭಾರತದ ಸಂವಿಧಾನ ರಚನೆಗೆ ಮುಂದಾಗಬೇಕೆಂದು ಒತ್ತಾಯಿಸಿದರು. ಪರಿಣಾಮವಾಗಿ 19 ಮೇ 1928 ರಂದು ಜರುಗಿದ ಸರ್ವ ಪಕ್ಷಗಳ ಸಮ್ಮೇಳನವು ಮೋತಿಲಾಲ್ ನೆಹರು ಅಧ್ಯಕ್ಷತೆಯಲ್ಲಿ ಮಾದರಿ ಸಂವಿಧಾನ ರಚನೆಗೆ ಸರ್ವ ಪಕ್ಷಗಳ ಸಮಿತಿಯೊಂದನ್ನು ರಚಿಸಿತು. 10 ಆಗಸ್ಟ್ 1928 ರಂದು ಮೋತಿಲಾಲ್ ನೆಹರು ನೇತೃತ್ವದ ಮೇಲಿನ ಸಮಿತಿಯು ನೆಹರೂ ವರದಿ ಎಂದೇ ಚಿರಪರಿಚಿತವಾದ ತನ್ನ ವರದಿ ನೀಡಿತು. ಭಾರತಕ್ಕೆ ಡೊಮೀನಿಯನ್ ಸ್ಥಾನಮಾನ ಹಾಗೂ ಪೂರ್ಣ ಜವಾಬ್ದಾರಿಯುಳ್ಳ ಸಂಸಧೀಯ ಮಾದರಿಯ ಸರ್ಕಾರವನ್ನುಳ್ಳ ಕರಡು ಸಂವಿಧಾನವನ್ನು ಈ ವರದಿಯು ಪ್ರತಿಪಾದಿಸಿತು. ಭಾರತೀಯರ ಈ ಮಾದರಿ ಸಂವಿಧಾನದ ರಚನೆಯು ಬ್ರಿಟಿಷ್ ಸರ್ಕಾರ ಸಂವಿಧಾನಾತ್ಮಕ ಸುಧಾರಣೆಗೆ ಶಿಫಾರಸ್ಸು ಮಾಡಲು ರಚಿಸಿದ್ದ ಜಾನ್ ಸೈಮನ್ ಆಯೋಗಕ್ಕೆ ಪ್ರತಿಸ್ಪರ್ಧಿ ಕ್ರಮವಾಗಿತ್ತು.
5. 1929 ರ ಲಾಹೋರ್ ಅಧಿವೇಶನದಲ್ಲಿ ಕಾಂಗ್ರೆಸ್ ಪೂರ್ಣ ಸ್ವರಾಜ್ಯ ತನ್ನ ಗುರಿಯೆಂದು ಘೋಷಿಸಿದ ಬಳಿಕ ಸಂವಿಧಾನ ರಚನೆ ಕಾಂಗ್ರೆಸ್ನ ಪ್ರಮುಖ ಬೇಡಿಕೆಗಳಲ್ಲಿ ಒಂದಾಯಿತು. 1930 ರಿಂದ 1932 ರವರೆಗೆ ಲಂಡನ್ನಿನಲ್ಲಿ ಜರುಗಿದ ಮೂರು ದುಂಡು ಮೇಜಿನ ಸಮ್ಮೇಳನಗಳ ಚರ್ಚೆಯನ್ನಾಧರಿಸಿ ಬ್ರಿಟಿಷ್ ಸರ್ಕಾರ ಹೊರಡಿಸಿದ ೇಕಪಕ್ಷೀಯ ಸಂವಿಧಾನಾತ್ಮಕ ಸುಧಾರಣೆಗಳ ಶ್ವೇತ ಪತ್ರವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒಪ್ಪಲಿಲ್ಲ.
6. ಅಕ್ಟೋಬರ್ 2, 1933 ರಂದು ಲಕ್ನೌ ಡೇಲಿ ಹೆರಾಲ್ಡ್ಗೆ ಬರೆದ ಲೇಖನದಲ್ಲಿ ಜವಾಹರಲಾಲ್ ನೆಹರು ಭಾರತದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಭಾರತೀಯರ ಪ್ರತಿನಿಧಿಗಳಿಂದ ರಚನೆಗೊಂಡ ಸಂವಿಧಾನದ ಜಾರಿಯು ಮಾತ್ರ ರಾಜಕೀಯ ಪರಿಹಾರವಾಗಬಲ್ಲದು ಎಂದು ಅಭಿಪ್ರಾಯಪಟ್ಟರು. ನೆಹರೂರ ಅಭಿಪ್ರಾಯವನ್ನು 1934 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನವು ಸಂಪೂರ್ಣವಾಗಿ ಬೆಂಬಲಿಸಿತು. ಈ ನಡುವೆ ಎಂ. ಎನ್. ರಾಯ್ ಭಾರತಕ್ಕೆ ಭಾರತೀಯರಿಂದ ಸಂವಿಧಾನ ರಚನೆಯ ಅಗತ್ಯವನ್ನು ಬೆಂಬಲಿಸಿ ಸಂವಿಧಾನ ರಚನಾ ಸಭೆಯ ಬೇಡಿಕೆಯನ್ನು ಮೊದಲ ಬಾರಿಗೆ 1934 ರಲ್ಲಿ ಪ್ರತಿಪಾದಿಸಿದರು.
7. 1935 ರ ಕಾಯಿದೆಯಂತೆ ರಚನೆಗೊಂಡ ಕೇಂದ್ರ ಹಾಗೂ ಪ್ರಾಂತೀಯ ಸರ್ಕಾರಗಳು 1937 ರಲ್ಲಿ ಒಂದು ನಿರ್ಣಯವನ್ನು ಅಂಗೀಕರಿಸಿದವು. ಈ ನಿರ್ಣಯದಲ್ಲಿ 1935 ರ ಭಾರತ ಸರ್ಕಾರ ಕಾಯಿದೆಯು ಭಾರತೀಯರ ಆಶಯಗಳನ್ನು ಪೂರೈಸುವಲ್ಲಿ ವಿಫಲವಾಗಿದ್ದು ಅದನ್ನು ರದ್ದುಗೊಳಿಸಿ ಭಾರತೀಯರಿಂದ ಕೂಡಿದ ಸಂವಿಧಾನ ರಚನಾ ಸಭೆಯನ್ನು ರಚಿಸಬೇಕೆಂದು ಒತ್ತಾಯಿಸಲಾಯಿತು.
8. ಜವಾಹರಲಾಲ್ ನೆಹರು ಕಾಂಗ್ರೆಸ್ ಭಾರತವನ್ನು ಸ್ವತಂತ್ರ ಹಾಗೂ ಪ್ರಜಾಸತ್ತಾತ್ಮಕ ರಾಜ್ಯವನ್ನಾಗಿ ಕಾಣಲು ಇಚ್ಚಿಸುತ್ತದೆ. ಜೊತೆಗೆ ಹೊರಗಿನವರ ಹಸ್ತಕ್ಷೇಪವಿಲ್ಲದೇ ವಯಸ್ಕ ಮತದಾನದ ಮೂಲಕ ಾಯ್ಕೆಯಾದ ಪ್ರತಿನಿಧಿಗಳ ಸಂವಿಧಾನ ರಚನಾ ಸಭೆಯನ್ನು ಹೊಂದಲು ಬಯಸುತ್ತದೆ ಎಂದು ಅಭಿಪ್ರಾಯಪಟ್ಟರು. 1938 ರ ಹರಿಪುರ ಕಾಂಗ್ರೆಸ್ ಅಧಿವೇಶನವು ನೆಹರೂರ ಅಭಿಪ್ರಾಯದಂತೆ ಭಾರತ ಸಂವಿಧಾನ ರಚನಾ ಸಭೆಯ ರಚನೆಗೆ ಬ್ರಿಟಿಷರನ್ನು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿತು.
9. 1939 ರಲ್ಲಿ ಎರಡನೇ ಮಹಾಯುದ್ಧ ಾರಂಭವಾದಾಗ ಬ್ರಿಟಿಷ್ ಸರ್ಕಾರ ಭಾರತೀಯರ ಸಹಕಾರವನ್ನು ಕೋರಿತು. ಆಗ ಕಾಂಗ್ರೆಸ್ ಕಾರ್ಯಕಾರಿ ಮಂಡಳಿಯು ಬ್ರಿಟಿಷರು ಭಾರತದ ಸ್ವಾತಂತ್ರದ ಬೇಡಿಕೆ ಮತ್ತು ಸಂವಿಧಾನ ರಚಿಸಿಕೊಳ್ಳುವ ಭಾರತೀಯರ ಹಕ್ಕನ್ನು ಪರಿಗಣಿಸಿದರೆ ಸಹಕಾರದ ಪರಿಶೀಲನೆ ಮಾಡಬಹುದೆಂಬ ನಿರ್ಣಯ ಕೈಗೊಂಡಿತು. ಮಾರ್ಚ್ 1940 ರ ರಾಮಘರ್ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷವು ವಯಸ್ಕ ಮತದಾನದ ಮೂಲಕ ಾಯ್ಕೆಯಾದ ಭಾರತೀಯರಿಂದ ಭಾರತ ಸಂವಿಧಾನ ರಚನೆಗೊಳ್ಳಬೇಕೆಂಬ ತನ್ನ ಮೊದಲಿನ ಬೇಡಿಕೆಯನ್ನು ಪುನಃ ಪ್ರತಿಪಾದಿಸಿತು.
10. 8 ಆಗಸ್ಟ್ 1940 ರಂದು ವೈಸ್ರಾಯ್ ಲಿನ್ಲಿತ್ಗೊ ಮೂಲಕ ಬ್ರಿಟಿಷ್ ಸರ್ಕಾರ ಘೋಷಣೆ ಹೊರಡಿಸಿ ಭಾರತೀಯರ ಸಂವಿಧಾನ ರಚನಾ ಸಭೆಯ ಬೇಡಿಕೆಯನ್ನು ಪರೋಕ್ಷವಾಗಿ ಮೊದಲ ಬಾರಿ ಅಂಗೀಕರಿಸಿತು. ಯುದ್ಧ ಮುಕ್ತಾಯದ ಬಳಿಕ ಸಂವಿಧಾನ ರಚನಾ ಸಭೆಯನ್ನು ಸ್ಥಾಪನೆ ಮಾಡಲಾಗುವುದೆಂಬ ಭರವಸೆಯನ್ನು ವೈಸ್ರಾಯ್ ಘೋಷಣೆಯು ನೀಡಿತ್ತು. ಆದರೆ ಮಹಾಯುದ್ಧದಲ್ಲಿ ಬ್ರಿಟನ್ನಿನ ಭವಿಷ್ಯವೇ ಅಸ್ಪಷ್ಟವಾದಾಗ ಸಂವಿಧಾನ ರಚನಾ ಸಭೆಯ ಭರವಸೆ ಅವಾಸ್ತವಿಕ ೆಂದು ಭಾರತೀಯರು ಇದನ್ನು ಒಪ್ಪಿಕೊಳ್ಳಲಿಲ್ಲ.
11. ಮಾರ್ಚ್ 1942 ರ ಕ್ರಿಪ್ಸ್ ಆಯೋಗವು ಭಾರತೀಯರ ಸಂವಿಧಾನ ರಚನಾ ಸಭೆಯ ಬೇಡಿಕೆಯನ್ನು ಅಧಿಕೃತವಾಗಿ ಒಪ್ಪಿಕೊಂಡಿತು. ಜೊತೆಗೆಭಾರತಕ್ಕೆ ಡೊಮೀನಿಯನ್ ಸ್ಥಾನಮಾನ ನೀಡಿ ಭಾರತದ ಾಂತರಿಕ ಹಾಗೂ ಬಾಹ್ಯ ಸ್ವಾತಂತ್ರ್ಯದ ಭರವಸೆಯನ್ನು ನೀಡಿತು. ಆದರೆ ಭಾರತದ ನಾಯಕರು ಕ್ರಿಪ್ಸ್ ಆಯೋಗದ ಸಲಹೆಗಳನ್ನು ಅಂಗೀಕರಿಸಲಿಲ್ಲ. ಗಾಂಧೀಜಿ ಈ ಆಯೋಗವನ್ನು ಮುಳುಗುತ್ತಿರುವ ಬ್ಯಾಂಕಿನ ಮುಂದಿನ ದಿನಾಂಕವುಳ್ಳ ಚೆಕ್ ಎಂದು ಟೀಕಿಸಿದರು. ಅಲ್ಲದೇ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿಯನ್ನು 8 ಆಗಸ್ಟ್ 1942 ರಂದು ಆರಂಭಿಸಿದರು.
12. ಎರಡನೇ ಮಹಾಯುದ್ಧದ ಬಳಿಕ ಬ್ರಿಟನ್ನಿನಲ್ಲಿ ಅಧಿಕಾರಕ್ಕೆ ಬಂದ ಕಾರ್ಮಿಕ ಪಕ್ಷವು ಭಾರತೀಯರ ಬೇಡಿಕೆಗಳನ್ನು ಪರಿಶೀಲಿಸಲು ಮಾರ್ಚ್ 1946 ರಲ್ಲಿ ಲಾರ್ಡ್ ಪೆತಿಕ್ ಲಾರೆನ್ಸ್, ಸರ್ ಸ್ಟ್ಯಾಫರ್ಡ್ ಕ್ರಿಪ್ಸ್ ಹಾಗೂ ಎ. ವಿ. ಅಲೆಗ್ಸಾಂಡರ್ ೆಂಬ ಮೂರು ಸದಸ್ಯರ ಕ್ಯಾಬಿನೆಟ್ ಆಯೋಗವನ್ನು ಭಾರತಕ್ಕೆ ಕಳುಹಿಸಿತು. ಮೇ 1946 ರ ಕ್ಯಾಬಿನೆಟ್ ಆಯೋಗದ ಸಲಹೆಯಂತೆ ಭಾರತೀಯರ ಸಂವಿಧಾನ ರಚನಾ ಸಭೆಯ ಬೇಡಿಕೆಯನ್ನು ಅಂತಿಮವಾಗಿ ಒಪ್ಪಿಕೊಳ್ಳಲಾಯಿತು. 389 ಸದಸ್ಯರನ್ನುಳ್ಳ ಭಾರತ ಸಂವಿಧಾನ ರಚನಾ ಸಭೆಯ ರಚನೆಗೆ ಕ್ಯಾಬಿನೆಟ್ ಆಯೋಗ ಅಂಗೀಕಾರ ನೀಡುವ ಮೂಲಕ ಭಾರತೀಯರ ಸಂವಿಧಾನ ರಚನಾ ಸಭೆಯ ಬೇಡಿಕೆಯ ಕನಸು ನನಸಾಯಿತು.
[B. ಭಾರತದ ಸಂವಿಧಾನ ರಚನಾ ಸಭೆಯ ರಚನೆ [Composition of Constituent Assembly of India]:
1946 ರ ಮೇನಲ್ಲಿ ಕ್ಯಾಬಿನೆಟ್ ಆಯೋಗವು ಮಾಡಿದ್ದ ಶಿಫಾರಸಿನಂತೆ ನವೆಂಬರ್ 1946 ರ ವೇಳೆಗೆ ಭಾರತ ಸಂವಿಧಾನ ರಚನಾ ಸಭೆಯು ರಚನೆಗೊಂಡಿತು. ಕ್ಯಾಬಿನೆಟ್ ಆಯೋಗವು ದೇಶ ವಿಭಜನೆಯನ್ನು ನಿರಾಕರಿಸಿ ಅಖಂಡ ಭಾರತಕ್ಕೆ ಏಕೈಕ ಸಂವಿಧಾನ ರಚನಾ ಸಭೆಯನ್ನು ಶಿಫಾರಸು ಮಾಡಿತ್ತು. ಸಂವಿಧಾನ ರಚನಾ ಸಭೆಯ ಸದಸ್ಯರ ಸಂಖೆ, ಸದಸ್ಯರ ನೇಮಕದ ವಿಧಾನ, ಸದಸ್ಯರ ಹಂಚಿಕೆ ಕುರಿತು ಕ್ಯಾಬಿನೆಟ್ ಆಯೋಗವೇ ಸ್ಪಷ್ಟವಾಗಿ ವಿವರಿಸಿದ್ದು ಕೆಳಗಿನ ಅಂಶಗಳಲ್ಲಿ ಆ ಕುರಿತಾದ ಮಾಹಿತಿಯನ್ನು ಕಾಣಬಹುದಾಗಿದೆ.
1. ಸಂವಿಧಾನ ರಚನಾ ಸಭೆಯು ೊಟ್ಟು 389 ಸದಸ್ಯರನ್ನು ಹೊಂದಿರಬೇಕು. ಅವರಲ್ಲಿ
ಬ್ರಿಟಿಷರೇ ನೇರವಾಗಿ ಆಳುತ್ತಿದ್ದ ಬ್ರಿಟಿಷ್ ಪ್ರಾಂತ್ಯಗಳಿಂದ 296 ಸದಸ್ಯರು ಚುನಾಯಿತರಾಗಬೇಕು. ಉಳಿದ 93 ಸದಸ್ಯರು ರಾಜ ಮನೆತನಗಳ ಅಧೀನದ ದೇಶೀಯ ಸಂಸ್ಥಾನಗಳಿಂದ ನಾಮಕರಣಗೊಳ್ಳಬೇಕು.
2.
ಬ್ರಿಟಿಷ್ ಪ್ರಾಂತ್ಯಗಳ 296 ಸ್ಥಾನಗಳ ಪೈಕಿ 4 ಸ್ಥಾನಗಳನ್ನು ಚೀಫ್ ಕಮೀಷನರ್ ಪ್ರಾಂತ್ಯಗಳಾದ
ದೆಹಲಿ, ಅಜ್ಮೀರ್, ಕೂರ್ಗ್ ಾಗೂ ಬ್ರಿಟಿಷ್ ಬಲುಚಿಸ್ತಾನದಿಂದ ಭರ್ತಿ ಮಾಡಬೇಕಾಗಿತ್ತು. ಉಳಿದ 292 ಸ್ತಾನಗಳನ್ನು 11 ಬ್ರಿಟಿಷ್ ಪ್ರಾಂತ್ಯಗಳಿಂದ ಾಯ್ಕೆ ಮಾಡಬೇಕಿದ್ದು. ಅದರಲ್ಲಿ ಸಿಕ್ಕರಿಗೆ 4, ಮುಸ್ಲೀಮರಿಗೆ 78 ಹಾಗೂ ಸಾಮಾನ್ಯರಿಗೆ 210 ಸ್ತಾನ ಮೀಸಲಿಡಲಾಗಿತ್ತು. ಅಂದರೆ ಸಿಕ್, ಮುಸ್ಲೀಮ್ ಹಾಗೂ ಸಾಮಾನ್ಯ ಎಂಬ ಮೂರು ವರ್ಗದಿಂದ ಅವರವರ ಜನಸಂಖೆ ಆಧರಿಸಿ ಬ್ರಿಟಿಷ್ ಪ್ರಾಂತ್ಯದ 292 ಪ್ರತಿನಿಧಿಗಳು ಾಯ್ಕೆಯಾಗಬೇಕಿತ್ತು.
3. ಸಂವಿಧಾನ ರಚನಾ ಸಭೆಯ ೊಬ್ಬ ಸದಸ್ಯ ಹತ್ತು ಲಕ್ಷ ಜನರನ್ನು ಪ್ರತಿನಿಧಿಸಬೇಕಾಗಿತ್ತು. ಹೀಗಾಗಿ ಆಯಾ ಬ್ರಿಟಿಷ್ ಪ್ರಾಂತ್ಯ ಹಾಗೂ ದೇಶೀಯ ಸಂಸ್ಥಾನಗಳ ಜನಸಂಖೆಯನ್ನಾಧರಿಸಿ ಅವುಗಳು ಪ್ರತಿನಿಧಿಸಬೇಕಾದ ಸದಸ್ಯರ ಸಂಖೆಯನ್ನು ಹಂಚಲಾಗಿತ್ತು.
4. ಸಂವಿಧಾನ ರಚನಾ ಸಭೆಯ ಪ್ರತಿನಿಧಿಗಳು ಪ್ರಾಂತೀಯ ಶಾಸನಸಭೆಯ ತಮ್ಮ ವರ್ಗದ ಪ್ರತಿನಿಧಿಗಳಿಂದ ಪ್ರಮಾಣಾನುಗುಣ ಪ್ರಾತಿನಿಧ್ಯತಾ ಏಕಮತ ವರ್ಗಾವಣಾ ತತ್ವದಂತೆ ಮತ ಪಡೆದು ಆಯ್ಕೆಯಾಗಬೇಕಿತ್ತು.
5. ದೇಶೀಯ ಸಂಸ್ಥಾನಗಳಿಗೆ ನಿಗಧಿಪಡಿಸಲಾದ ಸಂಖೆಯ ಸದಸ್ಯರು ಆಯಾ ದೇಶೀಯ ಸಂಸ್ಥಾನಗಳ ಮುಖ್ಯಸ್ಥರಿಂದ ನಾಮಕರಣಗೊಳ್ಳಬೇಕಾಗಿತ್ತು.
ಬ್ರಿಟಿಷ್ ಪ್ರಾಂತ್ಯಗಳಿಗೆ ಮೀಸಲಾಗಿದ್ದ 296 ಸ್ಥಾನಗಳಿಗೆ ಜುಲೈ ಹಾಗೂ ಆಗಸ್ಟ್ 1946 ರಲ್ಲಿ ಚುನಾವಣೆ ಜರುಗಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ 208, ಮುಸ್ಲೀಮ್ ಲೀಗ್ 73 ಮತ್ತು ಇತರರು 15 ಸ್ಥಾನಗಳನ್ನು ಜಯಿಸಿದರು. ದೇಶೀಯ ಸಂಸ್ಥಾನಗಳಿಗೆ ಮೀಸಲಾಗಿದ್ದ 93 ಸ್ಥಾನಗಳ ನಾಮಕರಣ ನಿಧಾನವಾಯಿತು. ಹಿಂದೂ, ಮುಸ್ಲೀಮ್, ಕ್ರೈಸ್ತ, ಪಾರಸೀ, ಆಂಗ್ಲೊ ಇಂಡಿಯನ್, ಮಹಿಳೆಯರನ್ನು ಒಳಗೊಂಡಿದ್ದ ಸಂವಿಧಾನ ರಚನಾ ಸಭೆ ಆಡಳಿತಾನುಭವಿಗಳು, ಶಿಕ್ಷಣ ತಜ್ನರು, ಪತ್ರಿಕೋದ್ಯಮಿಗಳು, ನ್ಯಾಯವಾದಿಗಳು, ಸಮಾಜ ಚಿಂತಕರಿಂದ ಕೂಡಿತ್ತು. ಮಹಾತ್ಮಾ ಗಾಂಧಿ ಹಾಗೂ ಮಹಮದಲಿ ಜಿನ್ನಾ ಸಂವಿಧಾನ ರಚನಾ ಸಭೆಯಿಂದ ಹೊರಗುಳಿದರು. ಉಳಿದಂತೆ ಪ್ರಮುಖ ಸ್ವತಂತ್ರ ಹೋರಾಟಗಾರರು ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಆಯ್ಕೆಯಾದರು. ರಾಜಕುಮಾರಿ ಅಮೃತ್ ಕೌರ್, ಹಂಸ ಮೆಹ್ತಾ, ದುರ್ಗಾ ಬಾಯಿ ದೇಶಮುಖ್, ಪೂರ್ಣಿಮ ಬ್ಯಾನರ್ಜಿ, ವಿಜಯಲಕ್ಶ್ಮೀ ಪಂಡಿತ್, ಸರೋಜಿನಿ ನಾಯ್ಡು, ಅಮ್ಮು
ಸ್ವಾಮಿನಾಥ್, ಶ್ರೀಮತಿ ಸುಚೇತ ಕೃಪಲಾನಿ, ಕುದ್ಸಿಯಾ ಅಜುಲ್ಲಾ ರಸುಲ್ಲಾ, ಕಮಲಾ ಚೌಧರಿ, ದಾಕ್ಷಾಯಿಣಿ
ವೇಲಾಯುಧನ್, ಲೀಲಾ ರಾಯ್, ಮಾಲತಿ ಚೌಧರಿ, ಅಣ್ಣಿ ಮ್ಯಾಸ್ಕರೆನೆ ಮತ್ತು ರೇಣುಕಾ ರಾಯ್ ಸೇರಿ 15 ಮಹಿಳೆಯರು ಸಂವಿಧಾನ ರಚನಾ ಸಭೆಯಲ್ಲಿದ್ದರು. ಒಟ್ಟಾರೆ ಭಾರತ ಸಂವಿಧಾನ ರಚನಾ ಸಭೆಯು ಪರೋಕ್ಷವಾಗಿ ಚುನಾಯಿತ ಮತ್ತು ನಾಮಕರಣಗೊಂಡ ಸದಸ್ಯರಿಂದ ರಚನೆಗೊಂಡಿತ್ತು.
[III. ಸಂವಿಧಾನ ರಚನಾ ಸಭೆಯ ಸ್ವರೂಪ ಮತ್ತು
ಕಾರ್ಯಗಳು: ಜಗತ್ತಿನ ಸುದೀರ್ಘ ಸಂವಿಧಾನ ರಚನೆಗೆ ಭಾರತ ಸಂವಿಧಾನ ರಚನಾ ಸಭೆಯು ಶ್ರಮಿಸಿತು. ಈ ಜವಾಬ್ದಾರಿಯನ್ನು
ನಿರ್ವಹಿಸಿದ ಸಂವಿಧಾನ ರಚನಾ ಸಭೆಯು ಹಲವು ವಿಶೇಷತೆಗಳಿಂದ ಕೂಡಿತ್ತು. ಆ ವಿಶೇಷತೆಗಳ ನೆರಳಿನಲ್ಲಿ
ಸಂವಿಧಾನ ರಚನಾ ಸಭೆಯ ಸ್ವರೂಪ ಮತ್ತು ಅದು ನಿರ್ವಹಿಸಿದ ಕಾರ್ಯಗಳನ್ನು ಮನವರಿಕೆ ಮಾಡಿಕೊಳ್ಳಬಹುದಾಗಿದೆ.
[1.
ಕಾರ್ಯಾರಂಭ: ಸಂವಿಧಾನ ರಚನಾ ಸಭೆಯು 9 ಡಿಸೆಂಬರ್ 1946 ಸೋಮವಾರ ಬೆಳಿಗ್ಗೆ 11 ಗಂಟೆಗೆ ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ಮೊದಲ ಅಧಿವೇಶನ ಸೇರಿತು. ಮುಸ್ಲೀಮ್ ಲೀಗ್ ಸದಸ್ಯರು ಪ್ರತ್ಯೇಕ ರಾಷ್ಟ್ರಕ್ಕೆ ಒತ್ತಾಯಿಸಿ ಸಂವಿಧಾನ ರಚನಾ ಸಭೆಗೆ ಹಾಜರಾಗಲಿಲ್ಲ. ಮೊದಲ ದಿನ ೊಟ್ಟು 207 ಸದಸ್ಯರು ಹಾಜರಾಗಿದ್ದರು. ಫ್ರಾನ್ಸ್ ಸಂಪ್ರದಾಯದಂತೆ ಸಭೆಯ ಹಿರಿಯ ಸದಸ್ಯರಾದ ಸತ್ಚಿದಾನಂದ ಸಿನ್ಹಾರನ್ನು ಹಂಗಾಮಿ ಅಧ್ಯಕ್ಷತೆ ವಹಿಸಿಕೊಳ್ಳಲು ಜೆ. ಬಿ. ಕೃಪಲಾನಿ ಆಹ್ವಾನಿಸಿದರು. 11 ಡಿಸೆಂಬರ್ 1946 ರಂದು ಸಂವಿಧಾನ ರಚನಾ ಸಭೆಯ ಸದಸ್ಯರು ಡಾ. ಬಾಬು ರಾಜೇಂದ್ರ ಪ್ರಸಾದರನ್ನು ಖಾಯಂ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡರು. ಅಲ್ಲದೇ ಎಚ್. ಸಿ. ಮುಖರ್ಜಿ ಹಾಗೂ ವ್ಹಿ. ಟಿ. ಕೃಷ್ಣಮಾಚಾರಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಜೊತೆಗೆ ಸಂವಿಧಾನ ರಚನಾ ಸಭೆಯ ಸದಸ್ಯನಲ್ಲದ ಕನ್ನಡಿಗ ಬಿ. ಎನ್. ರಾವ್ ಸಂವಿಧಾನಾತ್ಮಕ ಸಲಹೆಗಾರರಾಗಿ ನೇಮಕಗೊಂಡರು.
2.
ಧ್ಯೇಯಗಳ ನಿರ್ಣಯದ ಮಂಡನೆ: 13 ಡಿಸೆಂಬರ್ 1946 ರಂದು ಜವಾಹರಲಾಲ್ ನೆಹರು ಸಂವಿಧಾನ ರಚನಾ ಸಭೆಯಲ್ಲಿ ಧ್ಯೇಯಗಳ ನಿರ್ಣಯವನ್ನು ಮಂಡಿಸಿದರು. ಈ ನಿರ್ಣಯವು ಸ್ವಾಯತ್ತ ಪ್ರಾಂತ್ಯಗಳಿಂದ ಕೂಡಿದ ೊಕ್ಕೂಟ, ಜನತಾ ಪರಮಾಧಿಕಾರ, ವಿವಿಧ ವರ್ಗಗಳಿಗೆ ಹಕ್ಕುಗಳ ಭರವಸೆ, ಮನುಕುಲದ ಕಲ್ಯಾಣ, ದೇಶದ ಸಾರ್ವಬೌಮತ್ವ ಹಾಗೂ ಐಖ್ಯತೆಯನ್ನು ಪ್ರತಿಪಾದಿಸಿತು. ಸರಳವಾಗಿ ಸಂವಿಧಾನ ರಚನಾ ಸಭೆಯು ಸಾಧಿಸಬೇಕಾದ ಗುರಿಗಳು, ಸಂವಿಧಾನ ೊಳಗೊಳ್ಳಬೇಕಾದ ತತ್ವಾದರ್ಶಗಳು ಹಾಗೂ ಸಂವಿಧಾನ ರಚನಾ ಸಭೆಯ ಕಾರ್ಯವ್ಯಾಪ್ತಿಯ ಮೇಲೆ ಬೆಳಕು ಚೆಲ್ಲಿತು. ನೆಹರೂ ಮಂಡಿಸಿದ ಧ್ಯೇಯಗಳ ನಿರ್ಣಯ ಕುರಿತು ಸಂವಿಧಾನ ರಚನಾ ಸಭೆಯ ಸದಸ್ಯರು ಸುದೀರ್ಘ ಚರ್ಚೆ ನಡೆಸಿ 22 ಜನವರಿ 1947 ರಂದು ನಿರ್ಣಯವನ್ನು ಅಂಗೀಕರಿಸಿದರು.
3.
ಸಮಿತಿಗಳ ರಚನೆ: ಸಂವಿಧಾನ ರಚನಾ ಸಭೆಯು ಪ್ರಮುಖ ವಿಚಾರಗಳ ಕುರಿತು ತೀರ್ಮಾನ ಕೈಗೊಳ್ಳಲು ವಿವಿಧ ಸಮಿತಿಗಳನ್ನು ರಚಿಸಿತು. 22 ಪ್ರಧಾನ ಹಾಗು 5 ಉಪ ಸಮಿತಿಗಳು ತಮಗೆ ಸೂಚಿತ ವಿಷಯದಲ್ಲಿ ವರದಿಯನ್ನು ತಯಾರಿಸಿ ಸಲ್ಲಿಸಬೇಕಿತ್ತು. ಎಲ್ಲ ಸಮಿತಿಗಳು ಫೇಬ್ರವರಿ ಮತ್ತು ಆಗಸ್ಟ್ 1947 ರವರೆಗೆ ತಮ್ಮ ವರದಿ ಸಲ್ಲಿಸಿದವು. ಪ್ರಮುಖ ಸಂವಿಧಾನ ರಚನಾ ಸಭೆಯ ಸಮಿತಿಗಳು ಹಾಗು ಅವುಗಳ ಅಧ್ಯಕ್ಷರ ವಿವರ ಕೆಳಗಿನಂತಿವೆ.
[*
ಆಡ್ಹಾಕ್ ಕಮೀಟಿ ಆನ್ ನ್ಯಾಷನಲ್ ಫ್ಲಾಗ್, ಸ್ಟೀರಿಂಗ್ ಕಮೀಟಿ, ಫೈನಾನ್ಸ್ ಆಯಂಡ್ ಸ್ಟ್ಯಾಫ್ ಕಮೀಟಿ, ಕಮೀಟಿ ಆನ್ ದಿ ರೂಲ್ಸ್ ಆಫ್ ಪ್ರೊಸೀಜರ್: ಅಧ್ಯಕ್ಷತೆ ಬಾಬೂ ರಾಜೇಂದ್ರ ಪ್ರಸಾದ್.
* ಯೂನಿಯನ್ ಪವರ್ಸ್ ಕಮೀಟಿ, ಯೂನಿಯನ್ ಕಾನ್ಸ್ಟಿಟ್ಯೂಷನ್ ಕಮೀಟಿ, ಸ್ಟೇಟ್ಸ್ ಕಮೀಟಿ ಅಧ್ಯಕ್ಷತೆ ಜವಾಹರಲಾಲ್ ನೆಹರು.
* ಅಡ್ವಾಯ್ಜರಿ ಕಮೀಟಿ ಆನ್ ಫಂಡಮೆಂಟಲ್ ರೈಟ್ಸ್, ಮೈನಾರಿಟಿಸ್, ಟ್ರೈಬಲ್ಸ್ ಾಯ್ಂಡ್ ಎಕ್ಸಕ್ಲುಡೆಡ್ ಏರಿಯಾಸ್ ಅಧ್ಯಕ್ಷತೆ ಸರ್ದಾರ್ ಪಟೇಲ್.
* ಫಂಡಮೆಂಟಲ್ ರೈಟ್ಸ್ ಸಬ್ ಕಮೀಟಿ ಅಧ್ಯಕ್ಷತೆ ಜೆ. ಬಿ. ಕೃಪಲಾನಿ.
* ಮೈನಾರಿಟಿಸ್ ಸಬ್ ಕಮೀಟಿ ಅಧ್ಯಕ್ಷತೆ ಎಚ್ ಸಿ. ಮುಖರ್ಜಿ.
* ನಾರ್ತ್ ಈಸ್ಟ್ ಫ್ರಂಟಿಯರ್ ಟ್ರೈಬಲ್ ಏರಿಯಾಸ್, ಅಸ್ಸಾಂ ಎಕ್ಸ್ಕ್ಲುಡೆಡ್ ಏರಿಯಾ ಆಯ್ಂಡ್ ಪಾರ್ಶಲಿ ಎಕ್ಸ್ಕ್ಲುಡೆಡ್ ಏರಿಯಾಸ್ ಸಬ್ ಕಮೀಟಿ ಅಧ್ಯಕ್ಷತೆ ಗೋಪಿನಾಥ್ ಬಾರ್ಡೊಲಿ.
* ಎಕ್ಸ್ಕ್ಲುಡೆಡ್ ಆಯ್ಂಡ್ ಪಾರ್ಶಲಿ ಎಕ್ಸ್ಕ್ಲುಡೆಡ್ ಏರಿಯಾಸ್ [ಅದರ್ ದ್ಯಾನ್ ದೋಜ್ ಇನ್ ಅಸ್ಸಾಂ] ಸಬ್ ಕಮೀಟಿ ಅಧ್ಯಕ್ಷತೆ ಎ. ವ್ಹಿ. ಠಾಕೂರ್
* ಕ್ರಿಡೆನ್ಶಿಯಲ್ ಕಮೀಟಿ ಅಧ್ಯಕ್ಷತೆ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್.
* ಹೌಸ್ ಕಮೀಟಿ ಅಧ್ಯಕ್ಷತೆ ಬಿ. ಪಟ್ಟಾಬಿ ಸೀತಾರಾಮಯ್ಯಾ.
* ಆರ್ಡರ್ ಆಫ್ ಬಿಜ್ನೆಸ್ಸ್ ಕಮೀಟಿ ಅಧ್ಯಕ್ಷತೆ ಕೆ. ಎಂ. ಮುನ್ಶಿ
* ಕಮೀಟಿ ಆನ್ ದಿ ಫಂಕ್ಷನ್ಸ್ ಆಫ್ ದಿ ಕನ್ಸಿಸ್ಟುಯಂಟ್ ಅಸೆಂಬ್ಲಿ ಅಧ್ಯಕ್ಷತೆ ಜಿ. ವಿ. ಮಾವಳಂಕರ್.
* ಡ್ರಾಫ್ಟಿಂಗ್ ಕಮೀಟಿ ಅಧ್ಯಕ್ಷತೆ ಬಿ. ಆರ್. ಅಂಬೇಡ್ಕರ್
4.
ದೇಶ ವಿಭಜನೆ ಹಾಗೂ ಪುನರ್ರಚನೆ: ಸಂವಿಧಾನ ರಚನಾ ಸಭೆ ಕಾರ್ಯಾಚರಿಸುತ್ತಿರುವ ನಡುವೆಯೇ 3 ಜೂನ್ 1947 ರ ಮೌಂಟ್ ಬ್ಯಾಟನ್ ಯೋಜನೆಯಂತೆ ಭಾರತವು
ಭಾರತ ಮತ್ತು ಪಾಕಿಸ್ತಾನ ಎಂಬುದಾಗಿ
ವಿಭಜನೆಗೊಂಡಿತು. 26 ಜುಲೈ 1947 ರಂದು ಭಾರತದಂತೆ
ಪಾಕಿಸ್ತಾನಕ್ಕೆ ಪ್ರತ್ಯೇಕವಾದ ಸಂವಿಧಾನ ರಚನಾ ಸಭೆ ಹೊಂದಲು ಅವಕಾಶ ದೊರೆಯಿತು. ಮುಸ್ಲೀಮ್ ಪ್ರಾಬಲ್ಯದ ಪ್ರದೇಶಗಳು ಪಾಕಿಸ್ತಾನಕ್ಕೆ ಸೇರಬೇಕಾದ್ದರಿಂದ ಾ ಪ್ರದೇಶಗಳ ಸ್ಥಾನಗಳು ಸಂವಿಧಾನ ರಚನಾ ಸಭೆಯಲ್ಲಿ ಕಡಿತಗೊಂಡವು. ಹೀಗಾಗಿ ಭಾರತ ಸಂವಿಧಾನ ರಚನಾ ಸಭೆಯ ಸದಸ್ಯರ ಸಂಖೆ 389 ರಿಂದ 299ಕ್ಕೆ ಸೀಮಿತವಾಯಿತು. 299 ಸದಸ್ಯರ ಪೈಕಿ ಬ್ರಿಟಿಷ್ ಪ್ರಾಂತ್ಯಗಳಿಂದ 229 ಹಾಗೂ ದೇಶೀಯ ಸಂಸ್ಥಾನಗಳಿಂದ 70 ಸದಸ್ಯರು ಸಂವಿಧಾನ ರಚನಾ ಸಭೆಯಲ್ಲಿ ಉಳಿದುಕೊಂಡರು. ಗಮನಿಸಬೇಕಾದ ಅಂಶವೇನೆಂದರೆ ಅಂಬೇಡ್ಕರರು ಮುಸ್ಲೀಮ್ ಲೀಗ್ ಅಧಿಕಾರದಲ್ಲಿದ್ದ ಅವಿಭಜಿತ ಬಂಗಾಳ ಪ್ರಾಂತ್ಯದಿಂದ ಾರಂಭದಲ್ಲಿ ಸಂವಿಧಾನ ರಚನಾ ಸಭೆಗೆ ಆಯ್ಕೆಗೊಂಡಿದ್ದರು. ಆದರೆ ಅವರು ಆಯ್ಕೆಯಾಗಿದ್ದ ಜೆಸ್ಸೊರ್ ಹಾಗೂ ಕುಲ್ನಾ ಕ್ಷೇತ್ರ ದೇಶ ವಿಭಜನೆಯಿಂದ ಪಾಕಿಸ್ತಾನಕ್ಕೆ ಸೇರಿದ ಕಾರಣ ಅಂಬೇಡ್ಕರ್ ರಾಜೀನಾಮೆ ನೀಡಿದರು. ಬಳಿಕ ೆಂ. ಆರ್. ಜಯಕರ್ ಸ್ಥಾನ ತೆರವುಗೊಳಿಸಿ ಬಾಂಬೆ ಪ್ರಾಂತ್ಯದಿಂದ ಜುಲೈ 1947 ರಲ್ಲಿ ಸಂವಿಧಾನ ರಚನಾ ಸಭೆಗೆ ಮರು ಆಯ್ಕೆಯಾದರು. ೊಟ್ಟಾರೆ ದೇಶ ವಿಭಜನೆಯ ಬಳಿಕ 31 ಡಿಸೆಂಬರ್, 1947 ರಲ್ಲಿದ್ದಂತೆ 12 ಬ್ರಿಟಿಷ್ ಪ್ರಾಂತ್ಯಗಳು 229 ಮತ್ತು 29 ದೇಶೀಯ ಸಂಸ್ಥಾನಗಳು 70 ಸದಸ್ಯರನ್ನು ಭಾರತೀಯ ಸಂವಿಧಾನ ರಚನಾ ಸಭೆಯಲ್ಲಿ
ಪ್ರತಿನಿಧಿಸುತ್ತಿದ್ದವು.
ಗಮನಿಸಿ:
1947 ರಲ್ಲಿ ಇಂದಿನ ಕರ್ನಾಟಕವು ಮೈಸೂರು ಸಂಸ್ಥಾನವೆನಿಸಿತ್ತು. ಮೈಸೂರು ಸಂಸ್ಥಾನದಿಂದ ಸಂವಿಧಾನ
ರಚನಾ ಸಭೆಗೆ 7 ಸದಸ್ಯರು ನೇಮಕವಾಗಿದ್ದರು. ಅವರುಗಳೆಂದರೆ
ಕೆ. ಸಿ. ರೆಡ್ಡಿ, ಟಿ. ಸಿದ್ಧಲಿಂಗಯ್ಯ, ೆಚ್. ಆರ್. ಗುರುವರೆಡ್ಡಿ, ಎಸ್. ವ್ಹಿ. ಕೃಷ್ಣಮೂರ್ತಿ ರಾವ್, ಕೆ. ಹನುಮಂತಯ್ಯ, ೆಚ್. ಸಿದ್ಧವೀರಪ್ಪ ಹಾಗೂ ಟಿ. ಚನ್ನಯ್ಯ. ಇವರೊಡನೆ ಕನ್ನಡಿಗರಾದ ೆನ್ ಮಾಧವರಾವ್, ಆರ್. ಆರ್. ದಿವಾಕರ್ ಹಾಗೂ ಎಸ್. ನಿಜಲಿಂಗಪ್ಪ ಅನ್ಯ ಪ್ರದೇಶದಿಂದ ಸಂವಿಧಾನ ರಚನಾ ಸಭೆಯ ಭಾಗವಾಗಿದ್ದರು.
5.
ಕರಡು ರಚನಾ ಸಮಿತಿಯ ಪಾತ್ರ: ಕರಡು ರಚನಾ ಸಮಿತಿಯು ಸಂವಿಧಾನ ರಚನಾ ಸಭೆಯ ನಿರ್ಣಯದಂತೆ 29 ಆಗಸ್ಟ್ 1947 ರಂದು ಸ್ಥಾಪನೆಗೊಂಡಿತು. 7 ಸದಸ್ಯರನ್ನುಳ್ಳ ಕರಡು ರಚನಾ ಸಮಿತಿಯಲ್ಲಿ ಎನ್. ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಬಿ. ಆರ್. ಅಂಬೇಡ್ಕರ್, ಕೆ. ಎಂ. ಮುನ್ಶಿ, ಸಯ್ಯದ್ ಮಹಮದ್ ಸಾದುಲ್ಲಾ, ಬಿ. ಎಲ್. ಮಿತ್ತರ್ ಹಾಗೂ ಡಿ. ಪಿ. ಕೈಥಾನ್ ಸದಸ್ಯರಾಗಿದ್ದರು. 30 ಆಗಸ್ಟ್ 1947ರಂದು ಸಭೆ ಸೇರಿದ ಕರಡು ರಚನಾ ಸಮಿತಿಯ ಸದಸ್ಯರು ಡಾ. ಅಂಬೇಡ್ಕರರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡರು. ಕಾಲಾನಂತರ ಅನಾರೋಗ್ಯದ ಕಾರಣಕ್ಕೆ ಬಿ. ಎಲ್. ಮಿತ್ತರ್ ಬದಲು
ಎನ್. ಮಾಧವರಾವ್ ಹಾಗೂ ಮರಣದ ಕಾರಣಕ್ಕೆ ಡಿ. ಪಿ. ಕೈಥಾನ್ ಬದಲು
ಟಿ. ಟಿ. ಕೃಷ್ಣಮಾಚಾರಿ ಕರಡು ರಚನಾ ಸಮಿತಿಯ ಸದಸ್ಯರಾದರು. ೆನ್. ಮಾಧವರಾವ್ ಕರಡು ರಚನಾ ಸಮಿತಿಯಲ್ಲಿದ್ದ ೇಕೈಕ ಕನ್ನಡಿಗ ಸದಸ್ಯರಾಗಿದ್ದರು. ಸಂವಿಧಾನ ರಚನಾ ಸಭೆಯ ನಿರ್ಣಯಗಳು ಹಾಗೂ ವಿವಿಧ ಸಮಿತಿಗಳ ವರದಿಗಳನ್ನು ಆಧರಿಸಿ ಸಂವಿಧಾನಾತ್ಮಕ ಸಲಹೆಗಾರ ಬಿ. ಎನ್. ರಾವ್ 240 ವಿಧಿಗಳು ಹಾಗೂ 13 ಅನುಸೂಚಿಗಳುಳ್ಳ ಕರಡು ಸಂವಿಧಾನವನ್ನು ತಯಾರಿಸಿದ್ದರು. ಅಕ್ಟೋಬರ್ 1947 ರಿಂದ ಆ ಕರಡು ಸಂವಿಧಾನವನ್ನು ಪರಿಶೀಲಿಸಿ ಹಲವು ಅಗತ್ಯ ಬದಲಾವಣೆಯೊಂದಿಗೆ 315 ವಿಧಿಗಳು ಮತ್ತು 13 ಅನುಸೂಚಿಗಳುಳ್ಳ ಹೊಸ ಕರಡು ಸಂವಿಧಾನವನ್ನು ಈ ಸಮಿತಿ ತಯಾರಿಸಿತು. 21 ಫೇಬ್ರವರಿ 1948 ರಂದು ಸಮಿತಿಯು ತಾನು ತಯಾರಿಸಿದ ಕರಡು ಸಂವಿಧಾನವನ್ನು ಸಂವಿಧಾನ
ರಚನಾ ಸಭೆಯ ಅಧ್ಯಕ್ಷರಿಗೆ ಸಲ್ಲಿಸಿತು. ಹೀಗೆ ರಚನೆಯಾದ ಕರಡು ಸಂವಿಧಾನವನ್ನು ಎಂಟು ತಿಂಗಳುಗಳ ಕಾಲ ಜನರ ಚರ್ಚೆ ಹಾಗೂ ವಿಮರ್ಷೆಗೆ
ನೀಡಲಾಯಿತು. ಈ ಸಮಯದಲ್ಲಿ ಜನರಿಂದ ವ್ಯಕ್ತವಾದ
ಸಲಹೆ, ಸೂಚನೆ ಹಾಗೂ ತಿದ್ದುಪಡಿಗಳನ್ನು ಆಧರಿಸಿ ಕರಡು ರಚನಾ ಸಮಿತಿಯು ಅಕ್ಟೋಬರ್ 1948 ರಲ್ಲಿ ಎರಡನೇ ಕರಡು ಸಂವಿಧಾನವನ್ನು ರಚಿಸಿತು.
6.
ಸಂವಿಧಾನದ ಅಂಗೀಕಾರ: 4 ನವೆಂಬರ್ 1948 ರಂದು ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಿ ಕರಡು ಸಂವಿಧಾನದ ಪ್ರಥಮ ವಾಚನ ಮಾಡಲಾಯಿತು. 9 ನವೆಂಬರ್ 1948 ರವರೆಗೆ ಸಾಮಾನ್ಯ ಚರ್ಚೆ ನಡೆಸಲಾಯಿತು. 15 ನವೆಂಬರ್ 1948 ರಿಂದ 17 ಅಕ್ಟೋಬರ್ 1949 ರವರೆಗೆ ಕರಡು ಸಂವಿಧಾನದ ದ್ವಿತೀಯ ವಾಚನ ಜರುಗಿತು. ಈ ವೇಳೆಯಲ್ಲಿ ಕರಡು ಸಂವಿಧಾನದ ಪ್ರತಿಯೊಂದು ನಿಯಮಾವಳಿ ಕುರಿತು ಕೂಲಂಕುಶ ಚರ್ಚೆ ಸಂವಿಧಾನ ರಚನಾ ಸಭೆಯಲ್ಲಿ ಜರುಗಿತು. ಸಭೆಯು ಸೂಚಿಸಿದ್ದ 7653 ತಿದ್ದುಪಡಿಗಳ ಪೈಕಿ 2473 ಅಂಶಗಳ ಕುರಿತು ಚರ್ಚಿಸಲಾಯಿತು. ಚರ್ಚೆಯ ಸಮಯದಲ್ಲಿ ಸದಸ್ಯರ ಸಂದೇಹ, ಗೊಂದಲ, ಾತಂಕಗಳನ್ನು ಅಂಬೇಡ್ಕರರು ಬಗೆ ಹರಿಸುತ್ತಿದ್ದರು. 14 ನವೆಂಬರ್ 1949 ರಂದು ತೃತೀಯ ವಾಚನ ವಾಚಿಸಿದ ಅಂಬೇಡ್ಕರ್ ಕರಡು ಸಂವಿಧಾನದ ಅಂಗೀಕಾರಕ್ಕೆ ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಿದರು. ಅಂತಿಮವಾಗಿ ಸಂವಿಧಾನ ರಚನಾ ಸಭೆಯು 26 ನವೆಂಬರ್ 1949 ರಂದು ಸಂವಿಧಾನಕ್ಕೆ ಅಂಗೀಕಾರ ನೀಡಿತು. ಈ ದಿನದಂದು ಒಟ್ಟು 299 ಸದಸ್ಯರ ಪೈಕಿ 284 ಸದಸ್ಯರು ಹಾಜರಿದ್ದು ಭಾರತ ಸಂವಿಧಾನಕ್ಕೆ ತಮ್ಮ ಅಂಕಿತ ನೀಡಿದರು. ಆದರೆ ಮೂಲ ಸಂವಿಧಾನಕ್ಕೆ ಸದಸ್ಯರು ಅಂಕಿತ ನೀಡಿದ್ದು 24 ಜನೇವರಿ 1950 ರಂದು. ಭಾರತ ಸಂವಿಧಾನಕ್ಕೆ ಸಂವಿಧಾನ ರಚನಾ ಸಭೆಯ ಸದಸ್ಯರು ಅನುಮೋದನೆ ನೀಡಿದ 26 ನವೆಂಬರನ್ನು ನಾವಿಂದು ಸಂವಿಧಾನ ದಿನಾಚರಣೆ ಅಥವಾ ರಾಷ್ಟ್ರೀಯ ಕಾನೂನು ದಿನಾಚರಣೆಯಾಗಿ ಪ್ರತಿ ವರ್ಷ ಾಚರಿಸುತ್ತೇವೆ.
7.
ಅವಧಿ ಮತ್ತು ಅಧಿವೇಶನಗಳು: ಭಾರತದ ಸಂವಿಧಾನ ರಚನೆಗೆ ಸಂವಿಧಾನ ರಚನಾ ಸಭೆ ಸುದೀರ್ಘ ಸಮಯ ತೆಗೆದುಕೊಂಡಿತು. 2 ವರ್ಷ, 11 ತಿಂಗಳು ಹಾಗೂ 18ದಿನಗಳ ಕಾಲ ಅಂದರೆ ಒಟ್ಟು 1084 ದಿನಗಳ ಅವಧಿಯನ್ನು ಸಂವಿಧಾನ ರಚನೆಗೆ ವ್ಯಯಿಸಲಾಯಿತು. ಈ ಸುದೀರ್ಘ ಅವಧಿಯಲ್ಲಿ ಭಾರತ ಸಂವಿಧಾನವನ್ನು ರಚಿಸಲು ಸಂವಿಧಾನ ರಚನಾ ಸಭೆಯು ಒಟ್ಟು ಹನ್ನೊಂದು ಬಾರಿ ಸಭೆ ಸೇರಿತ್ತು. ಗಮನಿಸಬೇಕಾದ ಅಂಶವೇನೆಂದರೆ ಸಂವಿಧಾನ ರಚನಾ ಸಭೆಯೇ 15 ಆಗಸ್ಟ್, 1947 ರಿಂದ
ಹಂಗಾಮಿ ಶಾಸಕಾಂಗವಾಗಿಯೂ ದೇಶಕ್ಕೆ ಅಗತ್ಯವಾದ ಸಾಮಾನ್ಯ ಕಾನೂನುಗಳನ್ನು ರಚಿಸುವ ಅಧಿಕಾರ ಪಡೆದಿತ್ತು.
ಈ ಹಂಗಾಮಿ ಶಾಸಕಾಂಗದ ಅಧಿವೇಶನಗಳನ್ನು ಹೊರತುಪಡಿಸಿ
ಸಂವಿಧಾನ ರಚನೆಗೆಂದೇ ಪ್ರತ್ಯೇಕವಾಗಿ ಹನ್ನೊಂದು ಬಾರಿ ಸಂವಿಧಾನ ರಚನಾ ಸಭೆಯು ಸಮಾವೇಶಗೊಂಡಿತ್ತು. 11 ಅಧಿವೇಶನಗಳಲ್ಲಿ ಸಂವಿಧಾನ ರಚನಾ ಸಭೆಯ ಸದಸ್ಯರು 165 ದಿನಗಳ ಕಾಲ ಅಧಿವೇಶನದಲ್ಲಿದ್ದರು. ಈ ಪೈಕಿ ಅಧಿವೇಶನದ 114 ದಿನಗಳನ್ನು ಕರಡು ಸಂವಿಧಾನವನ್ನು ಚರ್ಚಿಸಲು ಸಂವಿಧಾನ ರಚನಾಕಾರರು ಮೀಸಲಿಟ್ಟಿದ್ದರು. ಜೊತೆಗೆ 63,96,273 ರೂಪಾಯಿಗಳನ್ನು ವೆಚ್ಚ ಮಾಡಲಾಯಿತು. ಸಂವಿಧಾನ ರಚನೆ ಪೂರ್ಣಗೊಂಡ ನಂತರ ಸಂವಿಧಾನ ರಚನಾ ಸಭೆಯ ಸದಸ್ಯರು 24 ಜನೇವರಿ 1950 ರಂದು ಕೊನೆಯ ಬಾರಿ ಸಮಾವೇಶಗೊಂಡು ಸಂವಿಧಾನಕ್ಕೆ ಅಂಕಿತ ಹಾಕಿದರು.
ಅಲ್ಲದೇ ಕೆಳಗಿನ ನಿರ್ಧಾರಗಳನ್ನು ಅಂದಿನ ಕೊನೆಯ ಸಂವಿಧಾನ ರಚನಾ ಸಭೆಯ ಸಮಾವೇಶದಲ್ಲಿ ಕೈಗೊಳ್ಳಲಾಯಿತು.
1. ರವೀಂದ್ರನಾಥ ಢಾಗೂರ್ ರಚಿಸಿದ ಜನಗಣಮನವನ್ನು ರಾಷ್ಟ್ರ ಗೀತೆಯನ್ನಾಗಿ ಅಳವಡಿಸಿಕೊಳ್ಳಲು ತೀರ್ಮಾನಿಸಲಾಯಿತು.
2. ಬಂಕಿಮಚಂದ್ರ ಚಟರ್ಜಿಯವರ ೊಂದೇ ಮಾತರಂ ಗೀತೆಯನ್ನು ರಾಷ್ಟ್ರೀಯ ಹಾಡು ಎಂದು ಪರಿಗಣಿಸಲಾಯಿತು.
3. ಸಂವಿಧಾನ ರಚನಾ ಸಭೆಯ ಅಧ್ಯಕ್ಷ ರಾಗಿದ್ದ ಬಾಬೂ ರಾಜೇಂದ್ರ ಪ್ರಸಾದರನ್ನು ಭಾರತದ ರಾಷ್ಟ್ರಪತಿಯನ್ನಾಗಿ ಚುನಾಯಿಸಲಾಯಿತು. ಇದರಿಂದ ಸಿ. ರಾಜಗೋಪಾಲಾಚಾರಿ ನಿರ್ವಹಿಸುತ್ತಿದ್ದ ಗೌರ್ನರ್ ಜನರಲ್ ಸ್ಥಾನವು ರದ್ದಾಗಿ 26 ಜನೇವರಿ 1950 ರಿಂದ ಭಾರತ ಗಣರಾಜ್ಯವಾಗಲು ಸಾಧ್ಯವಾಯಿತು.
8.
ಸಂವಿಧಾನದ ಜಾರಿ: ಸಂವಿಧಾನ ರಚನಾಕಾರರು ಭಾರತ ಸಂವಿಧಾನಕ್ಕೆ 26 ನವೆಂಬರ್ 1949ರಂದು ಅಂಗೀಕಾರ ನೀಡಿದ್ದರು. ಅಂದಿನಿಂದಲೇ ಪೌರತ್ವ, ಚುನಾವಣೆ ಮುಂತಾದವುಗಳಿಗೆ ಸಂಬಂಧಿಸಿದ ಸಂವಿಧಾನದ
ಕೆಲವು ವಿಧಿಗಳು ಜಾರಿಗೊಂಡವು. ಅಧಿಕೃತವಾಗಿ ಪೂರ್ಣ ಭಾರತೀಯ ಸಂವಿಧಾನವು 26 ಜನೇವರಿ 1950 ರಂದು ಜಾರಿಗೊಂಡಿತು. ಕಾರಣ 1929 ರ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ
ಪೂರ್ಣ ಸ್ವರಾಜ್ಯವನ್ನು ಘೋಷಿಸಿ ಭಾರತದಾದ್ಯಂತ 26 ಜನೇವರಿ 1930ರಂದು ಸ್ವತಂತ್ರ ದಿನವನ್ನು ಆಚರಿಸಲು ಕರೆಕೊಟ್ಟಿತ್ತು. ಅಂದು ಜವಾಹರಲಾಲ್ ರಾವಿ ನದಿಯ ದಂಡೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದರಲ್ಲದೇ ಭಾರತ ಸ್ವಯಂ ಸ್ವತಂತ್ರ್ಯ ಘೋಷಿಸಿಕೊಂಡಿತ್ತು. ಆ ದಿನದ ಸವಿ ನೆನಪಿಗಾಗಿ ಸಂವಿಧಾಣ ಅಂಗೀಕಾರವಾದರೂ 26 ಜನೇವರಿ 1950ರವರೆಗೆ ಜಾರಿಗೊಳಿಸಿರಲಿಲ್ಲ. 26 ಜನೇವರಿ 1950ರಂದು ಸಂವಿಧಾನ ಜಾರಿಯೊಡನೆ ಭಾರತ ಸಾರ್ವಭೌಮ, ಪ್ರಜಾಸತ್ತಾತ್ಮಕ, ಗಣರಾಜ್ಯವಾಯಿತು. ಈ ದಿನವನ್ನು ಇಂದಿಗೂ ನಾವು ಗಣರಾಜ್ಯೋತ್ಸವ ದಿನಾಚರಣೆಯನ್ನಾಗಿ ಪ್ರತಿ ವರ್ಷ ಾಚರಿಸುತ್ತೇವೆ. ಚಿಂತಕ ಗ್ರ್ಯಾನ್ವಿಲ್ ಆಸ್ಟೀನ್ ಅಮೇರಿಕದ ಫಿಲೆಡೆಲ್ಫಿಯಾ ಸಮ್ಮೇಳನದ ನಂತರ ಜರುಗಿದ ಮಹತ್ವದ ರಾಜಕೀಯ ಮೈಲಿಗಲ್ಲು ಎಂದು ಭಾರತ ಸಂವಿಧಾನದ ಅನುಷ್ಟಾನವನ್ನು ಬಣ್ಣಿಸಿದ್ದಾರೆ.
ಮೇಲೆ
ವಿವರಿಸಲಾಗಿರುವ ವಿವಿಧ ವಿಶೇಷತೆಗಳಿಂದ ಕೂಡಿದ್ದ ಭಾರತ ಸಂವಿಧಾನ ರಚನಾ ಸಭೆಯು ಭಾರತಕ್ಕೆ ಅನುರೂಪವಾದ
ಸಂವಿಧಾನವೊಂದನ್ನು ರಚಿಸಲು ಯಶಸ್ವಿಯಾಯಿತು. 1950 ರಲ್ಲಿ ಜಾರಿಗೊಂಡ ಮೂಲ ಸಂವಿಧಾನವು 395 ವಿಧಿಗಳು, 22 ಭಾಗಗಳು ಹಾಗೂ 8 ಅನುಸೂಚಿಗಳನ್ನು ಒಳಗೊಂಡಿತ್ತು. ಆದರೆ ಸಂವಿಧಾನಕ್ಕೆ ಕಾಲಾನುಕ್ರಮದಲ್ಲಿ ತರಲಾದ 104 ತಿದ್ದುಪಡಿಗಳಿಂದಾಗಿ ಪ್ರಸ್ತುತ ಭಾರತ ಸಂವಿಧಾನವು 460 ಕ್ಕೂ ಹೆಚ್ಚು ವಿಧಿಗಳು, 25 ಭಾಗಗಳು ಮತ್ತು 12 ಅನುಸೂಚಿಗಳನ್ನು ಹೊಂದಿದೆ. ವಿಶ್ವದ ಬೃಹತ್ ಪ್ರಜಾಪ್ರಭುತ್ವಕ್ಕೆ ಪೂರಕವಾದ, ಪ್ರಪಂಚದ ಅತೀ ದೊಡ್ಡ ಹಾಗೂ ವೈವಿಧ್ಯತೆಯಲ್ಲಿ ೇಕತೆಯ ಗುರಿ ಸಾಧಿಸಬಲ್ಲ ಸಂವಿಧಾನವನ್ನು ಭಾರತೀಯರಿಗೆ ರಚಿಸಿದ ಕೀರ್ತಿ ಸಂವಿಧಾನ ರಚನಾ ಸಭೆಗೆ ಸಲ್ಲುತ್ತದೆ. ಅದರಲ್ಲೂ ಕರಡು ಸಂವಿಧಾನವನ್ನು ತಯಾರಿಸಿ, ಸಂವಿಧಾನ ರಚನಾಕಾರರ ಗೊಂದಲಗಳನ್ನು ಪರಿಹರಿಸಿ, ಆದರ್ಶ ಸಂವಿಧಾನಕ್ಕೆ ಅನುಮೋದನೆ ಪಡೆಯುವಲ್ಲಿ ಡಾ. ಬಿ. ಆರ್. ಅಂಬೇಡ್ಕರರ ಪಾತ್ರ ಅವರ್ಣನೀಯ. ಹೀಗಾಗಿ ಡಾ. ಅಂಬೇಡ್ಕರರನ್ನು ಸಂವಿಧಾನದ ಶಿಲ್ಪಿ ಹಾಗೂ ಆಧುನಿಕ ಮನು ಎನ್ನಲಾಗುತ್ತದೆ.
ಹೆಚ್ಚುವರಿ
ಮಾಹಿತಿ: ಅಧಿವೇಶನಗಳು ಮತ್ತು ಅವುಗಳು ನಡೆದ ದಿನಾಂಕಗಳು:
ಮೊದಲ ಅಧಿವೇಶನ:9 ರಿಂದ 23 ಡಿಸೆಂಬರ್, 1946
ಎರಡನೇ
ಅಧಿವೇಶನ:20 ರಿಂದ 25 ಜನೇವರಿ, 1947
ಮೂರನೇ
ಅಧಿವೇಶನ:ಏಪ್ರಿಲ್ 28 ರಿಂದ ಮೇ 2, 1947
ನಾಲ್ಕನೇ ಅಧಿವೇಶನ:14 ರಿಂದ 31 ಜುಲೈ, 1947
ಐದನೇ ಅಧಿವೇಶನ: 14 ರಿಂದ 30 ಾಗಸ್ಟ್, 1947
ಆರನೇ ಅಧಿವೇಶನ: 27 ಜನೇವರಿ, 1948
ಏಳನೇ ಅಧಿವೇಶನ: 4 ನವೆಂಬರ್, 1948 ರಿಂದ 8 ಜನೇವರಿ, 1949
ಎಂಟನೇ
ಅಧಿವೇಶನ:16 ಮೇ ರಿಂದ 16 ಜೂನ್, 1949
ಒಂಬತ್ತನೇ ಅಧಿವೇಶನ: 30 ಜುಲೈ
ರಿಂದ 18 ಸೆಪ್ಟೆಂಬರ್, 1949
ಹತ್ತನೇ ಅಧಿವೇಶನ: 6 ರಿಂದ 17 ಅಕ್ಟೋಬರ್, 1949
ಹನ್ನೊಂದನೇ ಅಧಿವೇಶನ:14 ರಿಂದ 26 ನವೆಂಬರ್, 1949
*****
Comments
Post a Comment