ಸುಗ್ರಿವಾಜ್ಞೆ ಹೊರಡಿಸುವ ರಾಷ್ಟ್ರಪತಿಗಳ ಅಧಿಕಾರದ ಮೇಲಿನ ಚರ್ಚೆ
ರಾಷ್ಟ್ರಪತಿಗಳ ಸುಗ್ರಿವಾಜ್ಞೆ ಹೊರಡಿಸುವ ಕರಡು
ಸಂವಿಧಾನದ ವಿದಿ 102ರ ಮೇಲಿನ ಚರ್ಚೆಯು ಮೆ 23, 1949ರಂದು ನಡೆಯಿತು. ಪ್ರಸ್ತುತ ನಮ್ಮ ಸಂವಿಧಾನದ
123ನೆ ವಿಧಿಯು ಈ ಅವಕಾಶವನ್ನು
ರಾಷ್ಟ್ರಪತಿಗಳಿಗೆ ನೀಡುತ್ತದೆ. ಅದರ ಪ್ರಕಾರ ರಾಷ್ಟ್ರಪತಿಗಳು ಸಂಸತ್ತು ಅಧಿವೇಶನದಲ್ಲಿ ಇಲ್ಲದಿದ್ದಾಗ
ಸುಗ್ರಿವಾಜ್ಞೆಗಳನ್ನು ಹೊರಡಿಸಬಹುದು.
ವಿಧಿ 102, ಕರಡು ಸಂವಿಧಾನ, 1948
(1) ಯಾವುದೇ
ಸಮಯದಲ್ಲಿ, ಆದರೆ ಸಂಸತ್ತಿನ ಎರಡೂ ಸದನಗಳು ಅಧಿವೇಶನದಲ್ಲಿ ಇಲ್ಲದಿದ್ದಾಗ, ಸುಗ್ರಿವಾಜ್ಞೆಯನ್ನು
ಹೊರಡಿಸುವ ಸನ್ನಿವೇಶವು ಉಂಟಾಗಿದ್ದು ಮತ್ತು ರಾಷ್ಟ್ರಪತಿಗಳಿಗೆ ಅದು ಮನವರಿಕೆಯಾಗಿದ್ದಲ್ಲಿ ಮತ್ತು ತಕ್ಷಣವೇ ಕ್ರಮ ಕೈಗೊಳ್ಳುವ
ಅಗತ್ಯವಿದ್ದಾಗ ಸುಗ್ರಿವಾಜ್ಞೆಗಳನ್ನು ಹೊರಡಿಸಬಹುದು.
ಪ್ರಸ್ತಾಪಿತ
ವಿಧಿಗೆ ಸದಸ್ಯರೊಬ್ಬರು ಸಂಸತ್ತಿನ ಎರಡೂ ಸದನಗಳು ಅಧಿವೇಶನದಲ್ಲಿ ಇರದಿದ್ದಾಗ ಸುಗ್ರಿವಾಜ್ಞೆ ಹೊರಡಿಸುವ
ರಾಷ್ಟ್ರಪತಿಗಳ ಅಧಿಕಾರವನ್ನು ಮೊಟಕುಗೊಳಿಸುವ ತಿದ್ದುಪಡಿಯೊಂದನ್ನು ಸೂಚಿಸಿದರು. ಏಕೆಂದರೆ ಸುಗ್ರಿವಾಜ್ಞೆ
ಹೊರಡಿಸುವ ಅವಕಾಶ ನೀಡುವ ವಿಧಿಯು ಅಧಿಕ ವೆಚ್ಚದಾಯಕವಾಗಿದೆ ಎಂಬುದು ಅವರ ಅಭಿಪ್ರಾಯವಾಗಿತ್ತು.
ಡಾ. ಅಂಬೇಡ್ಕರ್
ಅವರು ಇದಕ್ಕೆ ಪ್ರತ್ಯುತ್ತರವಾಗಿ ಶಾಸನವೊಂದರ ಜಾರಿಗೆ ಎರಡೂ ಸದನಗಳ ಅನುಮೋದನೆಯು ಅಗತ್ಯವಾಗಿರುವುದರಿಂದ
ಸದರಿ ಅಧಿಕಾರವು ನಿರುಪಯುಕ್ತವಾಗುತ್ತದೆ. ಆದ್ದರಿಂದ ಒಂದು ಸದನವು ಅಧಿವೇಶನದಲ್ಲಿದ್ದಾಗ ರಾಷ್ಟ್ರಪತಿಗಳು
ಸುಗ್ರಿವಾಜ್ಞೆಯನ್ನು ಹೊರಡಿಸುವ ಅಧಿಕಾರವನ್ನು ಹೊಂದಿರಬೇಕು ಎಂದರು.
ಇದೇ ತಿದ್ದುಪಡಿಯಲ್ಲಿ “ಎರಡೂ ಸದನಗಳು” ಎಂಬುದಕ್ಕೆ ಬದಲಾಗಿ
“ಒಂದು ಅಥವಾ ಎರಡೂ ಸದನಗಳು” ಮತ್ತು “ಸುಗ್ರಿವಾಜ್ಞೆಗಳು” ಎಂಬ ಪದಕ್ಕೆ ಬದಲಾಗಿ “ಸುಗ್ರಿವಾಜ್ಞೆ
ಅಥವಾ ಸುಗ್ರಿವಾಜ್ಞೆಗಳು” ಎಂಬ ಪದಗಳನ್ನು ಸೂಚಿಸಲಾಯಿತು. ಆದರೆ ಸದರಿ ತಿದ್ದುಪಡಿಯು ತಿರಸ್ಕೃತವಾಯಿತು.
ಮತ್ತೋರ್ವ ಸದಸ್ಯರು ಈ ವಿಧಿಗೆ, ನ್ಯಾಯಾಲಯಗಳಿಂದ ಶಿಕ್ಷೆಗೊಳಗಾದ
ಸಂದರ್ಭವನ್ನು ಹೊರತುಪಡಿಸಿ, ಪ್ರಜೆಗಳ ವೈಯುಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡಬಾರದೆಂಬ ಉಪವಿಧಿಯನ್ನು
ಸೇರಿಸುವಂತೆ ಸೂಚಿಸಿದರು.
ಇದಕ್ಕೆ ಪ್ರತ್ಯುತ್ತರವಾಗಿ ಡಾ. ಅಂಬೇಡ್ಕರ್ ಅವರು ಸದರಿ
ವಿದಿಯಲ್ಲಿನ ಉಪವಿಧಿ 3 ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಸುಗ್ರಿವಾಜ್ಞೆಗಳಿಂದ ರಕ್ಷಣೆ ಒದಗಿಸುವುದರಿಂದ
ಈ ತಿದ್ದುಪಡಿಯು ಅನವಶ್ಯಕ ಎಂಬ ವಿವರಣೆ ನೀಡಿದರು. ಪರಿಣಾಮವಾಗಿ ಈ ತಿದ್ದುಪಡಿಯ ಸಲಹೆಯನ್ನು ತಿರಸ್ಕರಿಸಲಾಯಿತು.
(2) ಈ ವಿಧಿಯ
ಪ್ರಕಾರ ಜಾರಿಗೊಂಡ ಸುಗ್ರಿವಾಜ್ಞೆಗಳನ್ನು ಸಂಸತ್ತಿನ ಅನುಮೋದನೆಗಾಗಿ ಅದರ ಅಧಿವೇಶನ ಆರಂಭವಾದ 6 ವಾರ ಇಲ್ಲವೇ 4 ವಾರಗಳಒಳಗಾಗಿ ಸಂಸತ್ತಿನಲ್ಲಿ ಮಂಡಿಸಿ
ಅದರ ಅನುಮೋದನೆ ಪಡೆಯುವ ಕಾಲಮಿತಿಯನ್ನು ನಿಗದಿಗೊಳಿಸುವ ಬಗ್ಗೆ ಮತ್ತು ಸುಗ್ರಿವಾಜ್ಞೆ ಜಾರಿಗೊಂಡ 1 ತಿಂಗಳ ಕಾಲಾವಧಿಯ ನಂತರ ಅದು
ರದ್ದಾಗುವ ತಿದ್ದುಪಡಿಗಳನ್ನು ಸೂಚಿಸಲಾಯಿತು.
ಮೇಲಿನ ತಿದ್ದುಪಡಿಗಳಿಗೆ ಡಾ. ಅಂಬೇಡ್ಕರ್ ಅವರು
ʼಸೂಚಿತ ತಿದ್ದುಪಡಿಗಳು ಸಂಸತ್ತು ಅಧಿವೇಶನದಲ್ಲಿಲ್ಲದಿದ್ದಾಗ ಮತ್ತು ತುರ್ತು ಪರಿಸ್ಥಿತಿಗಳಲ್ಲಿ
ಅಧಿವೇಶನ ಸೇರಲು ಸಾಧ್ಯವಾಗದಿದ್ದಾಗ ಸುಗ್ರಿವಾಜ್ಞೆಗಳಿಗೆ ಸಂಸತ್ತಿನ ಅನುಮೋದನೆ ಪಡೆಯುವ ಕುರಿತು
ಏನನ್ನೂ ವಿವರಿಸಿಲ್ಲ. ಅಲ್ಲದೇ ಸುಗ್ರಿವಾಜ್ಞೆ ಹೊರಡಿಸುವ ಅಧಿಕಾರವು ತುರ್ತು ಸಂದರ್ಭದಲ್ಲಿನ ಅಧಿಕಾರವಾಗಿದ್ದು,
ಅದು ಸೀಮಿತ ವ್ಯಾಪ್ತಿಯನ್ನು ಹೊಂದಿದೆ ಮತ್ತು ಅದರ ದುರುಪಯೋಗವನ್ನು ತಡೆಯಲು ಕರಡು ವಿಧಿಯಲ್ಲಿ ಸೂಕ್ತ
ನಿರ್ಬಂಧಗಳಿವೆ ಎಂದು ವಿವರಣೆ ನೀಡಿದರು.
ಉಪಸಂಹಾರ: ನಮ್ಮ
ಸಂವಿಧಾನದ ರಚನಾಕಾರರು ರಾಷ್ಟ್ರಪತಿಗಳಿಗೆ ಸಂಸತ್ತು ಅಧಿವೇಶನದಲ್ಲಿ ಇರದಿದ್ದಾಗ ಸುಗ್ರಿವಾಜ್ಞೆಗಳನ್ನು
ಹೊರಡಿಸುವ ವಿಶೇಷ ಅಧಿಕಾರವನ್ನು ನೀಡಿದ್ದಾರೆ. ಅವರು ಈ ಅಧಿಕಾರವನ್ನು ಕೇವಲ ತುರ್ತು ಪರಿಸ್ಥಿತಿಗಳಲ್ಲಿ
ಮಾತ್ರವೇ ಬಳಸಬಹುದು. ಅವರ ಈ ಅಧಿಕಾರವು ಸಾಮಾನ್ಯ ಸನ್ನಿವೇಶದಲ್ಲಿ ಸಂಸತ್ತು ಕಾನೂನು ರೂಪಿಸುವ ವಿಧಾನದಂತೆಯೇ
ಇರುತ್ತದೆ. ಗಮನಾರ್ಹವಾದ ವಿಷಯವೆಂದರೆ, ಶಾಸಕಾಂಗವು ಹೊರಡಿಸುವ ಯಾವುದೇ ಕಾನೂನು ಪ್ರಜೆಗಳ ಮೂಲಭೂತ
ಹಕ್ಕುಗಳಿಗೆ ಧಕ್ಕೆ ಉಂಟುಮಾಡುವಂತಿಲ್ಲ ಮತ್ತು ಈ ನಿರ್ಬಂಧವು ಸುಗ್ರಿವಾಜ್ಞೆಗಳಿಗೂ ಸಹ ಅನ್ವಯವಾಗುತ್ತದೆ.
Comments
Post a Comment