ಭಾರತದಲ್ಲಿನ ಕೆಲವು ಪ್ರಾದೇಶಿಕವಾದದ ಪ್ರತಿಭಟನೆಗಳು
- ದ್ರಾವಿಡಸ್ತಾನದ
ಬೇಡಿಕೆ: 1925 ರಲ್ಲಿ ಆರಂಬವಾದ ಸ್ವಾಭಿಮಾನ ಅಥವಾ ಸ್ವಗೌರವದ ಚಳವಳಿಯು ಆರಂಭದಲ್ಲಿ ಬ್ರಾಹ್ಮಣ
ವಿರೋಧಿಯಾಗಿದ್ದರೂ, ಮುಂದೆ 1960ರ ವೇಳೆಗೆ ಅದು ಆಂಧ್ರ, ತಮಿಳುನಾಡು ಮತ್ತು ಕೇರಳಗಳನ್ನು ಒಗ್ಗೂಡಿಸಿದ
ಪ್ರತ್ಯೇಕ ದ್ರಾವಿಡನಾಡು ಅಥವಾ ತಮಿಳ್ಯಾಂಡ್ ಎಂಬ ಪ್ರತ್ಯೇಕ ರಾಷ್ಟ್ರದ ನಿರ್ಮಾಣದತ್ತ ತಿರುಗಿತು.
- ತೆಲಂಗಾಣದ ಬೇಡಿಕೆ: 1956 ರಲ್ಲಿ ಏರ್ಪಟ್ಟ Gentleman's
agreement ನಲ್ಲಿನ ಕರಾರುಗಳನ್ನು
ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಕಾರಣಕ್ಕೆ 1969ರಲ್ಲಿಯೇ ಪ್ರತಿಭಟನೆಗಳು ಆರಂಭವಾಗಿದ್ದವು.
ಏಕೆಂದರೆ ಆಂಧ್ರದ ಭಾಗವಾಗಿದ್ದ ತೆಲಂಗಾಣವು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಈ ಸಮಸ್ಯೆಯು
ಬ್ರಿಟಿಷರ ಕಾಲದಲ್ಲಿಯೇ ಉಂಟಾಗಿತ್ತು. ಏಕೆಂದರೆ ತೆಲಂಗಾಣವು ನಿಜಾಮನ ಆಡಳಿತದಲ್ಲಿದ್ದು, ಪ್ರಗತಿಯಿಂದ
ವಂಚಿತವಾಗಿತ್ತು. ಪರಿಣಾಮವಾಗಿ 2013ರಲ್ಲಿ ವಿದ್ಯಾರ್ಥಿಗಳು ಆರಂಭಿಸಿದ ಹೋರಾಟಕ್ಕೆ ರಾಜ್ಯವ್ಯಾಪಿ
ಬೆಂಬಲ ವ್ಯಕ್ತವಾದ ಕಾರಣ ಅಂದಿನ ಕೇಂದ್ರ ಸರ್ಕಾರ ನೂತನ ತೆಲಂಗಾಣ ರಾಜ್ಯವನ್ನು ರಚಿಸಿತು.
- ಕನ್ನಡಿಗರ
ವಿರುದ್ಧ ಶಿವಸೇನೆಯ ಪ್ರತಿಭಟನೆಗಳು: 1966ರಲ್ಲಿ ಮರಾಠಿಗರು ತಮ್ಮ ಹೆಮ್ಮೆಯ ಪ್ರತೀಕವಾಗಿ ಮುಂಬೈನಲ್ಲಿದ್ದ
ಕನ್ನಡಿಗ ಹೋಟೆಲ್ ಉದ್ದಯಮಿಗಳು ಮತ್ತು ಕೆಲಸಗಾರರ ವಿರುದ್ಧ ಪ್ರತಿಭಟನೆಗಳನ್ನು ಆರಂಭಿಸಿದರು.
- ಬೋಡೋಲ್ಯಾಂಡ್
ಚಳವಳಿ: ಅಸ್ಸಾಂನಲ್ಲಿನ ಬೋಡೊ ಜನಾಂಗದ ಯುವಕರು ಶಿಕ್ಷಣ, ಉದ್ಯೋಗ, ಕೈಗಾರಿಕೆಗಳಂತಹ ಕ್ಷೇತ್ರಗಳಲ್ಲಿನ
ಅಸಮರ್ಪಕ ಅಭಿವೃದ್ಧಿಯ ಕಾರಣದಿಂದಾಗಿ ಪ್ರತ್ಯೇಕ ಬೋಡೋಲ್ಯಾಂಡ್ ಚಳವಳಿಯನ್ನು ಆರಂಭಿಸಿದರು.
ಚಳವಳಿಯು ಹಿಂಸಾತ್ಮಕ ಸ್ವರೂಪದಿಂದ ಕೂಡಿತ್ತು. ಮುಂದೆ ಈ ಚಳವಳಿಗೆ ಹೊರಗಿನವರ ವಲಸೆ, ಜಾತಿ
ಮೊದಲಾದ ವಿಷಯಗಳೂ ಕಾರಣವಾದವು.
- ಖಲಿಸ್ತಾನ
ಚಳವಳಿ: 1980ರಲ್ಲಿ ಪಂಜಾಬಿನಲ್ಲಿ ಆರಂಭವಾದ ಪ್ರತ್ಯೇಕ ಖಲಿಸ್ತಾನದ ಚಳವಳಿಯು ಭಯೋತ್ಪಾದಕತೆಯ
ಸ್ವರೂಪವನ್ನು ಪಡೆಯಿತು. ಇದನ್ನು ಹತ್ತಿಕ್ಕಲು ಕೇಂದ್ರಸರ್ಕಾರವು ಸೈನಿಕ ಕಾರ್ಯಾಚರಣೆ ನಡೆಸಬೇಕಾಯಿತು.
ಅಂತಿಮವಾಗಿ ಇದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಹತ್ಯೆಯಲ್ಲಿ ಕೊನೆಗೊಂಡಿತು. ಆದರೂ ಕೆನಡಾದಲ್ಲಿ
ನೆಲೆಸಿರುವ ಖಲಿಸ್ತಾನಿ ಉಗ್ರರು ಇಂದಿಗೂ ಅದರ ಬೇಡಿಕೆಯನ್ನಿಟ್ಟುಕೊಂಡು ಭಾರತದ ವಿರುದ್ಧ ಭಯೋತ್ಪಾದಕ
ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
- ULFA ದಿಂದ
ಬಿಹಾರಿಗಳ ಮೇಲಿನ ದಾಳಿಗಳು: 2003ರಲ್ಲಿ ಅಸ್ಸಾಂ ಬಾಲಕಿಯರ ಮೇಲೆ ಬಿಹಾರದಲ್ಲಿ ನಡೆದ ಅತ್ಯಾಚಾರಗಳಿಂದಾಗಿ
ULFA ಸಂಘಟನೆಯವರು ಅಸ್ಸಾಂನಲ್ಲಿದ್ದ ಬಿಹಾರಿ ಕೂಲಿಕಾರ್ಮಿಕರನ್ನು ಕೊಂದರು. ಅಲ್ಲದೇ 2004ರ
ಸ್ವಾತಂತ್ರ್ಯ ದಿನದಂದು ULFA ವತಿಯಿಂದ ನಡೆದ ಸ್ಪೋಟದಲ್ಲಿ 10-12 ಜನ ಸತ್ತರು. ಮುಂದೆ
2007ರ ಜನವರಿ ಮತ್ತು ಮಾರ್ಚ್ ತಿಂಗಳಲ್ಲಿನ ಸ್ಪೋಟಗಳಲ್ಲಿಯೂ 62 ಜನ ಹಿಂದಿ ಭಾಷಿಕ ಕೂಲಿಯವರು
ಮತ್ತು 6 ಜನ ನಾಗರೀಕರು ಸತ್ತರು. ಜೊತೆಗೆ ರಕ್ಷಣಾ ಪಡೆಗಳ ವಿರುದ್ಧವೂ ULFA ಪ್ರತಿಭಟನೆಗಳು
ನಡೆದವು.
- ಉತ್ತರ ಭಾರತೀಯರ
ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS) ಪ್ರತಿಭಟನೆಗಳು: ಉತ್ತರ ಭಾರತೀಯರ ಅಧಿಕ ವಲಸೆ
ಮತ್ತು ಉದ್ಯೋಗವಕಾಶಗಳ ಕೊರತೆಯಿಂದಾಗಿ 2008ರಲ್ಲಿ ಉತ್ತರ ಭಾರತೀಯರ ವಿರುದ್ಧ ನಡೆಸಿದ ಪ್ರತಿಭಟನೆಗಳಲ್ಲಿ
ಹಿಂದಿ ಭಾಷಾ ಸಿನಿಮಾಗಳ ಬಹಿಷ್ಕಾರ ಮತ್ತು ಮಹಾರಾಷ್ಟ್ರದಾದ್ಯಂತ ಉತ್ತರ ಭಾರತೀಯ ವ್ಯಾಪಾರಿಗಳ
ವಿರುದ್ಧ ಪ್ರತಿಭಟನೆಗಳು ನಡೆದವು.
- ಬಿಹಾರಿಗಳ ವಿರುದ್ಧ ತಮಿಳರ ಪ್ರತಿಭಟನೆಗಳು: ಇತ್ತೀಚಿಗೆ 2023ರಲ್ಲಿ ತಮಿಳುನಾಡಿನಲ್ಲಿನ ಬಿಹಾರದ ಕಟ್ಟಡ ಕಾರ್ಮಿಕರ ವಿರುದ್ಧ ಅಲ್ಲಿನ ಜನರು ಪ್ರತಿಭಟನೆಗಳನ್ನು ನಡೆಸಿದರು. ಆಗ ಕೇಂದ್ರ ಸರ್ಕಾರವು ಬಿಹಾರಿಗರಿಗೆ ಸುರಕ್ಷತೆ ಒದಗಿಸಬೇಕಾಯಿತು.
- ಕನ್ನಡಿಗರ ಚಳವಳಿಗಳು: ಅನ್ಯಭಾಷಿಕರ ಅಧಿಕ ವಲಸೆಯ ಕಾರಣದಿಂದಾಗಿ (ತಮಿಳು ಮತ್ತು ಹಿಂದಿ) ಕನ್ನಡಿಗರು ಉದ್ಯೋಗವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಮತ್ತು ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿದೆ ಎಂಬ ಕಾರಣಗಳಿಂದಾಗಿ ಅನೇಕ ಕನ್ನಡಪರ ಚಳವಳಿಗಳು ನಡೆದಿವೆ.
Comments
Post a Comment