ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿನ ಪರಿಸ್ಥಿತಿ
ತುರ್ತು ಪರಿಸ್ಥಿತಿಯ
ಘೋಷಣೆಯಿಂದ ಸಂವಿಧಾನದ ಸಂಯುಕ್ತ ವ್ಯವಸ್ಥೆಯ ನಿಬಂಧನೆಗಳು, ಮೂಲಭೂತ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ
ಗಳು ರದ್ದಾದವು. ಪತ್ರಿಕೆಗಳನ್ನು ಕಟ್ಟುನಿಟ್ಟಾದ ದೋಷವಿಮರ್ಶಾನ ಅಧಿಕಾರ (Censorship) ಕ್ಕೆ ಒಳಪಡಿಸಲಾಯಿತು.
ಸರಕಾರದ ವಿರುದ್ಧದ ಪ್ರತಿಭಟನೆ ಮತ್ತು ವಿರೋಧಗಳನ್ನು ತಡೆಹಿಡಿಯಲಾಯಿತು.
26ನೇ ಜೂನ್ 1975ರ ಬೆಳಗಿನ ಜಾವ ವಿರೋಧಪಕ್ಷದ ಮುಖಂಡರುಗಳನ್ನು MISA (Maintenance
of Internal Security Act)ಅಡಿಯಲ್ಲಿ ಬಂಧನಕ್ಕೆ ಗುರಿಪಡಿಸಲಾಯಿತು. ಅವರುಗಳಲ್ಲಿ JP, ಮೊರಾರ್ಜಿ
ದೇಸಾಯ್, ಅಟಲ್ ಬಿಹಾರಿ ವಾಜ್‌ಪೇಯ್ ಮತ್ತು ಕಾಂಗ್ರೆಸ್‌ನ ಭಿನ್ನಮತೀಯರಾಗಿದ್ದ ಚಂದ್ರಶೇಖರ್‌ರವರೂ
ಸೇರಿದ್ದರು. Academicians, ಪತ್ರಕರ್ತರು, ವ್ಯಾಪಾರಿ ಮುಖಂಡರು ಮತ್ತು ವಿದ್ಯಾರ್ಥಿ ಮುಖಂಡರನ್ನು
ಸೆರೆಮನೆಗೆ ತಳ್ಳಲಾಯಿತು. ಅನಾರೋಗ್ಯದ ಆಧಾರದ ಮೇಲೆ 1975ರಲ್ಲಿ JPಯವರನ್ನು ಬಿಡುಗಡೆಗೊಳಿಸಿದರೆ,
1976ರಲ್ಲಿ ಚರಣ್‌ಸಿಂಗ್ ಮತ್ತು ವಾಜ್‌ಪೇಯ್‌ರವರನ್ನು ಬಂಧನದಿಂದ ವಿಮುಕ್ತಿಗೊಳಿಸಲಾಯಿತು.
ಮತೀಯ ಹಾಗೂ ಎಡ ಪಂಥೀಯ ಸಂಘಟನೆಗಳಾದ RSS, ಅನಂದ ಮಾರ್ಗ್, ಜಮಾತ್-ಇ-ಇಸ್ಲಾಮಿ
ಮತ್ತು ಮಾವೋ CP(ML) ಸಂಘಟನೆಗಳನ್ನು ನಿಷೇಧಿಸಲಾಯಿತು.
ತುರ್ತು ಪರಿಸ್ಥಿತಿ ಇರುವವರೆಗೂ (19 ತಿಂಗಳು) ಪ್ರತಿಭಟನಾಕಾರರ ಬಂಧನ ಮುಂದುವರೆಯಿತು.
ಬಂಧನಕ್ಕೆ ಒಳಗಾಗುತ್ತಿದ್ದ ವ್ಯಕ್ತಿಗಳನ್ನು ಕೆಲವು ದಿನಗಳಲ್ಲಿ ಅಥವಾ ಒಂದು ತಿಂಗಳಲ್ಲಿ ಬಿಡುಗಡೆಗೊಳಿಸಲಾಗುತ್ತಿತ್ತು.
ಒಟ್ಟಾರೆ, 1,00,000 ಜನರು ಈ ಕಾಲಾವಧಿಯಲ್ಲಿ ಬಂಧನಕ್ಕೆ ಗುರಿಯಾದರು. ಬಂಧನಕ್ಕೆ ಗುರಿಯಾದವರಲ್ಲಿ
ಸಮಾಜ ವಿರೋಧಿ ಶಕ್ತಿಗಳಾದ ದರೋಡೆಕಾರರು, ದಾಸ್ತಾನು ಸಂಗ್ರಹಗಾರರು, ಕಾಳಸಂತೆಕೋರರು ಮತ್ತು ಗೂಂಡಾಗಳೂ
ಇದ್ದರು.
ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸಂಸತ್ತು ಸಂಪೂರ್ಣವಾಗಿ ನಿಷ್ಕ್ರಿಯವಾಗಿತ್ತು.
ರಾಜ್ಯ ಸರಕಾರಗಳನ್ನು ಇಂದಿರಾಗಾಂಧಿಯವರು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರು. ತಮಿಳುನಾಡಿನಲ್ಲಿನ
DMK(Jan, 1976) ಮತ್ತು ಗುಜರಾತ್ ಗಳಲ್ಲಿನ ಜನತಾ ಸರಕಾರ (March, 1976) ಗಳನ್ನು (ಕಾಂಗ್ರೆಸ್ಸೇತರ
ಸರಕಾರಗಳು) ವಜಾ ಮಾಡಲಾಯಿತು ವಿಶ್ವಾಸಕ್ಕೆ ಅನರ್ಹರಾಗಿದ್ದ ಉತ್ತರ ಪ್ರದೇಶ ಮತ್ತು ಒರಿಸ್ಸಾಗಳಲ್ಲಿನ
ಕಾಂಗ್ರೆಸ್ ಮುಖ್ಯಮಂತ್ರಿಗಳನ್ನು ಬದಲಾಯಿಸಲಾಯಿತು. ಕಾಂಗ್ರೆಸ್ ಪಕ್ಷದಲ್ಲಿನ ಪ್ರಜಾಪ್ರಭುತ್ವದ ಅಂಶಗಳು
ಕಣ್ಮರೆಯಾದವು. 1976ರ ಉತ್ತರಾರ್ಧದಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತ ಸಂಜಯ್ ಗಾಂಧಿಯವರ ನೇತೃತ್ವದಲ್ಲಿನ
ಯುವ ಕಾಂಗ್ರೆಸ್ ಹೆಚ್ಚು ಮಹತ್ವದ ಸಂಘಟನೆಯಾಗಿ ಕಾಣಿಸಿಕೊಂಡಿತು.
ಹಲವು ಆಜ್ಞೆಗಳು, ಕಾನೂನುಗಳು ಮತ್ತು ಸಂವಿಧಾನದ ತಿದ್ದುಪಡಿಗಳು ನ್ಯಾಯಾಂಗದ ಅಧಿ ಕಾರಗಳಿಗೆ ಮತ್ತು ಕಾರ್ಯಾಂಗದ ಕಾರ್ಯಗಳಿಗೆ ತಡೆಯನ್ನು ಹಾಕಿದವು. ಭಾರತದ ರಕ್ಷಣಾ ಕಾಯ್ದೆ (Defence of India Act) ಮತ್ತು MISA ಕಾಯ್ದೆಯನ್ನು ಜುಲೈ 1975ರಲ್ಲಿ ತಿದ್ದುಪಡಿ ಮಾಡಲಾಯಿತು. ಆ ಮೂಲಕ ನಾಗರಿಕರ ಸ್ವಾತಂತ್ರ್ಯವನ್ನು ನಾಶಗೊಳಿಸಲಾಯಿತು. Nov. 1976 ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ಮಾಡುವುದರ ಮೂಲಕ ಮೂಲ ನಾಗರಿಕ ಸಂಕಲ್ಪ ಸ್ವಾತಂತ್ರ್ಯ ರಚನೆ (Basic Civil Libertarian Structure) ಯಲ್ಲಿ ಮಹತ್ತರ ಬದಲಾವಣೆ ಯನ್ನು ಮಾಡಲಾಯಿತು. ಅಲ್ಲದೆ, ಬಡವರ ಪರವಾದ ಭೂ ಸುಧಾರಣೆ (Land Reforms) ಗಳಂತಹ ಕಾಯ್ದೆಗಳನ್ನು ಸರಕಾರ ಜಾರಿಗೊಳಿಸುವ ಕ್ರಿಯೆಯಲ್ಲಿ ನಿರತವಾಯಿತು. ಆ ಸಂದರ್ಭದಲ್ಲಿ, ಮೂಲಭೂತ ಹಕ್ಕುಗಳ ರಕ್ಷಣೆಯ ಸಬೂಬನ್ನು ಹೇಳುವುದರ ಮೂಲಕ ನ್ಯಾಯಾಲಯ ಸರಕಾರದ ಕಾರ್ಯಚಟುವಟಿಕೆಗಳನ್ನು ಅಡ್ಡಿಪಡಿಸುತ್ತದೆ ಎಂದು ಹೇಳಿತು. ಅಲ್ಲದೆ, ಸಂವಿಧಾನಾತ್ಮಕ ತಿದ್ದುಪಡಿಗೆ ಸಂಬಂಧಿಸಿದ ನ್ಯಾಯಿಕ ಪುನರ್ ಪರಿಶೀಲನೆ (Judicial Review)ಯಲ್ಲಿ ಸರಕಾರ ಮಹತ್ತರ ಬದಲಾವಣೆ ಯನ್ನು ತಂದಿತು. ಆ ಮೂಲಕ ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂಪೂರ್ಣ ಅಧಿಕಾರ ಸಂಸತ್ತಿಗೆ ಇದೆ ಎಂದು ಹೇಳಿ ಮೂಲಭೂತ ಹಕ್ಕುಗಳನ್ನು ಪರೋಕ್ಷವಾಗಿ ನಿಶ್ಯಕ್ತಗೊಳಿಸಲಾಯಿತು. ಈ ರೀತಿಯ ಸಂವಿಧಾನಾತ್ಮಕ ತಿದ್ದುಪಡಿಗಳ ಫಲವಾಗಿ, ಪ್ರಧಾನ ಮಂತ್ರಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರು ಪ್ರಶ್ನಾತೀತ ಅಧಿಕಾರಗಳನ್ನು ಪಡೆದರು.
Comments
Post a Comment