1973ರ ನಂತರ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧಿಸಿದ ಮೈಲುಗಲ್ಲುಗಳು:
ಭಾರತದಲ್ಲಿ
1947 ರ
ನಂತರ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಬೆಳವಣಿಗೆಗಳು
ಪೀಠಿಕೆ:-
ಭಾರತದಲ್ಲಿ ಸ್ವಾತಂತ್ರ್ಯಾನಂತರದಲ್ಲಿ
ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯು ಸಾಮಾನ್ಯ ಜನಜೀವನವನ್ನು ಸುಗಮಗೊಳಿಸಿದೆ. ಭಾರತವು ಈ
ಅವಧಿಯಲ್ಲಿ ಉಪಗ್ರಹ ನಿರ್ಮಾಣ, ಅನ್ಯಗ್ರಹಗಳಿಗೆ ಅವುಗಳ ರವಾನೆ, ಅಣುವಿದ್ಯುತ್ ಸ್ಥಾವರಗಳ ನಿರ್ಮಾಣ,ಅಣುಬಾಂಬ್
ತಯಾರಿಕೆಯಷ್ಟೇ ಅಲ್ಲದೇ ಅವುಗಳನ್ನು ಹೊತ್ತೊಯ್ಯುವ ಕ್ಷಿಪಣಿ ಕ್ಷೇತ್ರದಲ್ಲೂ ಸಹ ಸ್ವಾವಲಂಬನೆ ಸಾಧಿಸಿದೆ.
ಈ ಎಲ್ಲಾ ಕ್ಷೇತ್ರಗಳಲ್ಲಿನ ಅಭಿವೃದ್ಧಿಯು ನಮ್ಮ ವಿಜ್ಞಾನಿ ಮತ್ತು ತಂತ್ರಜ್ಞಾನಿಗಳ ಅದ್ಭುತ ಸಾಧನೆಗಳೆನಿಸಿವೆ. ಈಕ್ಷೇತ್ರಗಳಲ್ಲಿನ ಸಾಧನೆಗಳಿಗೆ ಪೂರಕವಾಗಿ
ಸರಕಾರದ ಆಡಳಿತಾತ್ಮಕ ನೀತಿಗಳೂ ರೂಪುಗೊಂಡಿದ್ದರಿಂದ ನಾವು ಆಹಾರೋತ್ಪಾದನೆ, ಕ್ಷೀರೋತ್ಪಾದನೆ, ಹಣ್ಣು-ತರಕಾರಿಗಳ
ಉತ್ಪಾದನೆ, ಮತ್ತು ಔಷಧಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಸಾಧ್ಯವಾಗಿದೆ..
ಇದರಿಂದ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿನ ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗಿದ್ದಲ್ಲದೇ
ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾಮಾನ್ಯ ಜನರ ಜೀವನಮಟ್ಟದಲ್ಲೂ ಸುಧಾರಣೆಗೆ ಕಾರಣವಾಗಿದೆ.
ಉದಾ: ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ
ಕ್ಷೇತ್ರದಲ್ಲಿನ ಅಭಿವೃದ್ಧಿಯು ಹವಾಮಾನ ವೈಪರಿತ್ಯಗಳ ಮುನ್ಸೂಚನೆಗೆ ಕಾರಣವಾಗಿದ್ದು, ಆ ಮೂಲಕ ಬಿರುಗಾಳಿ-ಚಂಡಮಾರುತಗಳಂತಹ
ನೈಸರ್ಗಿಕ ವಿಪತ್ತುಗಳಿಂದ ಜನರ ಜೀವ-ಆಸ್ತಿಗಳ ರಕ್ಷಣೆಗೂ ಅನುಕೂಲ ಕಲ್ಪಿಸಿದೆ. ಇವೆಲ್ಲವೂ ಸ್ವಾತಂತ್ರ್ಯಾನಂತರದಲ್ಲಿ ಭಾರತವು
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ ಹೂಡಿಕೆಗಳಿಂದ ಮತ್ತು ಅದರಿಂದುಂಟಾದ ಸಂಶೋಧನೆಗಳ
ಫಲವೆನಿಸಿವೆ. ಏಕೆಂದರೆ 1947ರಲ್ಲಿ
ವೈಜ್ಞಾನಿಕ ಸಂಶೋಧನೆಗಳ ಮೇಲೆ ವಿನಿಯೋಗಿಸಿದ ಹಣವು ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ. 0.1ರಷ್ಟಿದ್ದರೆ, ತದನಂತರದ
ಒಂದು ದಶಕದಲ್ಲಿ ಅದರ ಪ್ರಮಾಣವು ಶೇ. 0.5ರಷ್ಟಕ್ಕೆ
ಏರಿತು. ಶಾಂತಿ ಸ್ವರೂಪ್ ಭಟ್ನಾಗರ್,
ಹೋಮಿ ಜಹಾಂಗೀರ್ ಭಾಭಾ ಮತ್ತು ಪಿ.ಸಿ. ಮಹಾಲನೊಬಿಸ್‌ರಂತಹ ವಿಜ್ಞಾನಿಗಳು ಕೇವಲ ಸಂಶೋಧನೆಗಳಿಗೆ ಕೊಡುಗೆ
ನೀಡಿದ್ದಲ್ಲದೇ ಅದಕ್ಕೆ ಪೂರಕವಾಗಿ ಆಡಳಿತಾತ್ಮಕ ನೀತಿಗಳು
ರೂಪುಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ವಿಜ್ಞಾನ ಮತ್ತು
ತಂತ್ರಜ್ಞಾನದ ಕೊಡುಗೆಗಳು: 1947ರಿಂದ
1973ರವರೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಕೆಲವು ಬೆಳವಣಿಗೆಗಳೆಂದರೆ, :
1. ಹಸಿರು
ಕ್ರಾಂತಿ: 1947ರಲ್ಲಿ ನಮ್ಮ
ಗೋಧಿ ಉತ್ಪಾದನೆಯು 6 ಮಿಲಿಯನ್
ಟನ್ನುಗಳಷ್ಟಿದ್ದುದು ಭೂಸುಧಾರಣೆಗಳು, ನೀರಾವರಿ
ಸೌಲಭ್ಯಗಳು, ರಸಗೊಬ್ಬರಗಳು
ಮತ್ತು ಕೃಷಿ ಜಿಲ್ಲೆಗಳ ಯೋಜನೆಗಳಿಂದಾಗಿ 1964ರ
ವೇಳೆಗೆ 12 ಮಿಲಿಯನ್ ಟನ್ನುಗಳಿಗೇರಿತು. ಆದರೂ ಈ ಬೆಳವಣಿಗೆಯಿಂದ ಆಹಾರದ ಸ್ವಾವಲಂಬನೆಯನ್ನು ಸಾಧಿಸಲು
ಸಾಧ್ಯವಾಗಿರಲಿಲ್ಲ. ಬೆಂಜಮಿನ್ ಪಿಯರಿ ಪಾಲ್ (Benjamin Peary Pal) ಅವರು ನಡೆಸಿದ ರೋಗನಿರೋಧಕ ಮತ್ತು ಅಧಿಕ ಇಳುವರಿ
ಕೊಡುವ ಗೋಧಿ ತಳಿಯ ಸಂಶೋಧನೆಯಿಂದಾಗಿ 1970ರ ವೇಳೆಗೆ ನಮ್ಮ ಆಹಾರದ ಉತ್ಪಾದನೆಯು 20 ಮಿಲಿಯನ್ ಟನ್ನುಗಳಷ್ಟು
ಗೋಧಿ ಮತ್ತು 40 ಮಿಲಿಯನ್ ಟನ್ನುಗಳಷ್ಟು ಅಕ್ಕಿಯ ಉತ್ಪಾದನೆಗೆ ಕಾರಣವಾಯಿತು. ಇದೇ ತಂತ್ರಜ್ಞಾನವನ್ನು
ಜೋಳ, ಧಾನ್ಯಗಳು ಮತ್ತು ಬೇಳೆಕಾಳುಗಳ
ಬೆಳೆಗಳಿಗೂ ಅನುಸರಿಸಲಾಯಿತು. The All India Coordinated Wheat Research
Project under Pal remains an outstanding example of agriculture research. By
1970, wheat production went up to 20 million tonnes and rice production to 42
million tonnes. Thus began the Green Revolution, making India self-sufficient
in foodgrain production in the decades to come.
2. ಕ್ಷೀರ
ಕ್ರಾಂತಿ: ಸ್ವಾತಂತ್ರ್ಯದ
ಕಾಲಕ್ಕೆ ಭಾರತವು ಕೇವಲ ಆಹಾರ ಧಾನ್ಯಗಳಷ್ಟೇ ಅಲ್ಲ ಹಾಲಿನ ಉತ್ಪನ್ನಗಳಾಗಿದ್ದ ಶಿಶು ಆಹಾರ,
ಬೆಣ್ಣೆ ಮತ್ತು ಚೀಸ್‌ಗಳನ್ನೂ ಸಹ ಆಮದು
ಮಾಡಿಕೊಳ್ಳುತ್ತಿತ್ತು . ಉದಾ;
1955ರಲ್ಲಿ ಭಾರತವು
500 ಟನ್ನುಗಳಷ್ಟು ಬೆಣ್ಣೆ
ಮತ್ತು 3000 ಟನ್ನುಗಳಷ್ಟು
ಶಿಶು ಆಹಾರವನ್ನು ಯೂರೋಪಿನ ಕಂಪೆನಿಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇದಕ್ಕೂ ಮುನ್ನವೇ (1946) ಭಾರತದಲ್ಲಿ ಗುಜರಾತಿನ ಖೈರ ಜಿಲ್ಲೆಯಲ್ಲಿ
ಖೈರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘವು (Kaira District Cooperative Milk
Producers Union Limited) ತ್ರಿಭುವನ್
ದಾಸ್ ಪಟೇಲರ ನಾಯಕತ್ವದಲ್ಲಿ ಆರಂಭವಾಗಿತ್ತು. ಇದಾದನಂತರ
1949ರಲ್ಲಿ ಡಾ. ವರ್ಗೀಸ್
ಕುರಿಯನ್ (Verghese Kurien) ಅವರು
ಅಮೆರಿಕಾದಲ್ಲಿನ ತಮ್ಮ ಉನ್ನತ ಶಿಕ್ಷಣವನ್ನು ಪೂರೈಸಿ ಭಾರತಕ್ಕೆ ಬಂದು ಮೇಲಿನ ಸಂಘಟನೆಯೊಂದಿಗೆ ಕೆಲಸದಲ್ಲಿ
ತೊಡಗಿದರು. ಅವರು ಮುಂದೆ 1950ರಲ್ಲಿ
ಸಂಘಟನೆಯ ಮುಖ್ಯ ವ್ಯವಸ್ಥಾಪಕರಾದರು. ಅಧಿಕ
ಹಾಲಿನ ಉತ್ಪಾದನೆಯಿಂದಾಗಿ ಹಾಲನ್ನು ಇತರ ರೂಪದಲ್ಲಿ ಬಳಸಲು ಬೇಕಾದ ತಂತ್ರಜ್ಞಾನವನ್ನು ಯೂರೋಪಿನ ಕಂಪೆನಿಗಳು
ಭಾರತದೊಂದಿಗೆ ಹಂಚಿಕೊಳ್ಳಲಿಲ್ಲ. ಅಲ್ಲದೇ ಎಮ್ಮೆಯ ಹಾಲನ್ನು ಹಾಲಿನ ಪುಡಿಯಾಗಿ ಮಾಡುವುದು ಅಸಾಧ್ಯವೆಂದು
ಅವುಗಳು ನಂಬಿದ್ದವು. ಆಗ ಕುರಿಯನ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ಹೆಚ್. ಎಂ. ದಲಾಯ (H
M Dalaya) ಎಂಬ ಯುವ ಡೈರಿ ತಂತ್ರಜ್ಞನು
ದೇಶೀಯವಾಗಿ ಅಭಿವೃದ್ಧಿಗೊಳಿಸಿದ್ದ ಉಪಕರಣದ
ಮೂಲಕ ಎಮ್ಮೆಯ ಹಾಲನ್ನು ಹಾಲಿನಪುಡಿಯಾಗಿ ಮಾಡುವ ತಂತ್ರಜ್ಞಾನವನ್ನು ಪ್ರದರ್ಶಿಸಿದನು. ಆತನು “spray
paint gun ಮತ್ತು air
heater” ಗಳನ್ನು ಬಳಸಿಕೊಂಡು ಅಭಿವೃದ್ಧಿಗೊಳಿಸಿದ ಉಪಕರಣವು
ಪ್ರಪಂಚದಲ್ಲಿಯೇ ಮೊಟ್ಟಮೊದಲ ಬಾರಿಗೆ ಎಮ್ಮೆಯ ಹಾಲಿನ ಪುಡಿಯನ್ನು ಸಿದ್ಧಪಡಿಸಿತು. ಅಲ್ಲದೇ ಅವನು “Niro Atomizer” ಎಂಬ ಯಂತ್ರವನ್ನು ಬಳಸಿಕೊಂಡು ವಾಣಿಜ್ಯ ಮಟ್ಟದಲ್ಲಿ
ಹಾಲಿನಪುಡಿಯನ್ನು ಉತ್ಪಾದಿಸಬಹುದು ಎಂಬುದನ್ನು ತೋರಿಸಿಕೊಟ್ಟನು. ಇದರಿಂದಾಗಿ ರಾಷ್ಟ್ರೀಯ ಹಾಲಿನ
ಉತ್ಪನ್ನಗಳ ಸಂಘಟನೆಗಳು ಆರಂಭವಾಗಲು ಮತ್ತು ಧೇಶವು ಆ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ಸಾಧ್ಯವಾಯಿತು.
3. ಉಪಗ್ರಹ
ಮತ್ತು ಸಂಪರ್ಕ ಕ್ರಾಂತಿ:
1960ರ ದಶಕದ ಮಧ್ಯದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿಯ ಅಧ್ಯಕ್ಷರಾಗಿದ್ದ ವಿಕ್ರಂ ಸಾರಾಭಾಯಿ
ಅವರು ಕೃತಕ ಉಪಗ್ರಹಗಳನ್ನು ಸಂಪರ್ಕ, ದೂರ
ಸಂವೇದಿ (remote sensing) ಮತ್ತು
ಹವಾಮಾನ ಮುನ್ಸೂಚನೆಗೆ ಬಳಸುವುದನ್ನು ಪ್ರಸ್ತಾಪಿಸಿದಾಗ ಬೆರಳೆಣಿಕೆಯಷ್ಟು ಜನ ಮಾತ್ರ ಅವರ ಮಾತನ್ನು
ನಂಬಿದ್ದರು; ಏಕೆಂದರೆ ಭಾರತವು ಅಂದಿಗೆ ಯಾವುದೇ ರಾಕೆಟ್ ಮತ್ತು ಉಪಗ್ರಹಗಳ ತಯಾರಿಕೆ ಮತ್ತು ಉಡಾವಣೆಯ
ತಂತ್ರಜ್ಞಾನವನ್ನು ಹೊಂದಿರಲಿಲ್ಲ. ಆದರೂ ಸಾರಾಭಾಯಿ ಅವರು ಭಾರತವು ಅಂತರಿಕ್ಷ ತಂತ್ರಜ್ಞಾನವನ್ನು
ಶಿಕ್ಷಣ, ಗ್ರಾಮೀಣ ಅಭಿವೃದ್ಧಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿನ ಸುಧಾರಣೆಗೆ ಬಳಸಲು ಬಯಸಿದ್ದರು.
ಆಶ್ಚರ್ಯವೆಂದರೆ, ಮುಂದಿನ ಒಂದೇ ದಶಕದಲ್ಲಿ ಭಾರತವು ಅಂತಹ ಸಾಮರ್ಥ್ಯವನ್ನು ಬೆಳೆಸಿಕೊಂಡದ್ದಲ್ಲದೇ
ಬಾಹ್ಯಾಕಾಶ ತಂತ್ರಜ್ಞಾನವನ್ನು ಶಾಂತಿಯುತ ಉದ್ದೇಶಗಳಿಗೆ ಬಳಸಿಕೊಂಡದ್ದನ್ನು ಜಗತ್ತಿಗೆ ತೋರಿಸಿಕೊಟ್ಟಿತು.
ಅದಕ್ಕಾಗಿ ಆರ್ಯಭಟ ಕೃತಕ ಉಪಗ್ರಹವನ್ನು ರಷ್ಯಾದ ನೆರವಿನಿಂದ ಉಡಾಯಿಸುವ ಮೂಲಕ ಉಪಗ್ರಹ ಆಧಾರಿತ ದೂರದರ್ಶನ
ಪ್ರದರ್ಶನ (Satellite Instructional Television Experiment - SITE) ಅನ್ನು ಅಭಿವೃದ್ಧಿಗೊಳಿಸಿತು. ಅದರ ಮುಂದಿನ
ದಶಕದಲ್ಲಿ ಭಾರತೀಯ ವಿಜ್ಞಾನಿಗಳು ಇನ್ಸ್ಯಾಟ್ ಮತ್ತು ಐಆರ್‌ಎಸ್ (INSAT and IRS) ಸರಣಿಯ ಉಪಗ್ರಹಗಳನ್ನು ಉಡಾಯಿಸುವ ಮೂಲಕ ದೇಶದಾದ್ಯಂತ
ದೂರಸಂಪರ್ಕ ಮತ್ತು ದೂರದರ್ಶನ ಸೇವೆಯನ್ನು ಲಕ್ಷಾಂತರ ಸಾಮಾನ್ಯ ಜನರಿಗೂ ಒದಗಿಸಿದರು. ಅಲ್ಲದೇ ಹವಾಮಾನ
ವೈಪರಿತ್ಯದ (ಬಿರುಗಾಳಿ, ಚಂಡಮಾರುತ, ಮಳೆ ಇತ್ಯಾದಿ) ಸಕಾಲಿಕ ಮುನ್ಸೂಚನೆಗಳಿಂದ ಜನರ ಪ್ರಾಣ ಮತ್ತು
ಆಸ್ತಿಗಳು ಉಳಿಯುವಂತಾದವು. ಮುಂದುವರಿದು, 1980ರ ವೇಳೆಗೆ ಪ್ರಪ್ರಥಮ ಬಾರಿಗೆ VSAT
(Very Small Aperture Terminal) ತಂತ್ರಜ್ಞಾನವನ್ನು
ಬ್ಯಾಂಕಿಂಗ್ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಬಳಸುವ ಮೂಲಕ ಆ ಕ್ಷೇತ್ರದಲ್ಲಿನ ಕ್ರಾಂತಿಕಾರಿ ಬದಲಾವಣೆಗೆ
ಸಾಧ್ಯವಾಯಿತು.
4. ಔಷಧಿ
ಮತ್ತು ಲಸಿಕೆಗಳ ಉತ್ಪಾದನೆ: ಭಾರತವು
ಇಂದು ಜಾಗತಿಕ ೌಷಧಿ ತಯಾರಿಕಾ ಘಟಕವೆಂದು ಗುರುತಿಸಲ್ಪಡುತ್ತಿದೆ. ಇದಕ್ಕೆ ಕಾರಣವೆಂದರೆ, ಭಾರತವು
ಔಷಧಿಗಳು ಮತ್ತು ಲಸಿಕೆಗಳನ್ನು ಕೈಗೆಟುಕುವ ಬೆಲೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಮಾತ್ರವಲ್ಲ
ಅಭಿವೃದ್ಧಿ ಹೊಂದಿದ ದೇಶಗಳಿಗೂ ಪೂರೈಸುತ್ತಿದೆ. ಅಂದರೆ ಭಾರತೀಯ ಔಷಧಿ ಕಂಪೆನಿಗಳು ಈ ಗುರಿಯನ್ನು
ಸಾಧಿಸಲು ದುಬಾರಿ ಬೆಲೆಯ ವಿದೇಶಿ ಔಷಧಿ ಕಂಪೆನಿಗಳ ಏಕಸ್ವಾಮ್ಯದ ವಿರುದ್ಧ ಸೆಣಸಬೇಕಾಯಿತು. ಅದಕ್ಕಾಗಿ
ಭಾರತದ ಸಾರ್ವಕಾಲಿಕ ಮಿತ್ರ ರಷ್ಯಾದ ಜೊತೆಗೂಡಿ ಭಾರತ ಸರ್ಕಾರವು 1954 ರಲ್ಲಿ Hindustan Antibiotics
Limited ಮತ್ತು Indian
Drugs and Pharmaceuticals Limited (IDPL) ಗಳನ್ನು
ಸ್ಥಾಪಿಸಿತು. ಈ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲದೇ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯ (National
Chemicals Laboratory - NCL) ಮತ್ತು
ಹೈದ್ರಾಬಾದಿನ ಪ್ರಾದೇಶಿಕ ಸಂಶೋಧನಾ ಕೇಂದ್ರಗಳು (ಪ್ರಸ್ತುತ
Indian Institute of Chemical Technology) ಮತ್ತು
ಕೇಂದ್ರೀಯ ೌಷಧಿ ಸಂಶೋಧನಾ ಸಂಸ್ಥೆಗಳು ಭಾರತೀಯ ಔಷಧಿ ಕ್ಷೇತ್ರದ ಉದ್ಯಮಕ್ಕೆ ಬೇಕಾದ ತಂತ್ರಜ್ಞಾನ
ಮತ್ತು ಮಾನವ ಸಂಪನ್ಮೂಲವನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು. 1970ರ ಹಕ್ಕುಸ್ವಾಮ್ಯ
ಕಾಯ್ದೆಯು ಕೇವಲ ಉತ್ಪಾದನಾ ಹಕ್ಕನ್ನು ಮಾತ್ರವೇ ಮಾನ್ಯ ಮಾಡಿದ್ದರಿಂದ ಭಾರತೀಯ ಕಂಪೆನಿಗಳು ಅದಾಗಲೇ
ಹಕ್ಕುಸ್ವಾಮ್ಯ ಪಡೆದಿರುವ ಔಷಧಿಗಳನ್ನು ಪರ್ಯಾಯ ಉತ್ಪಾದನಾ ಕ್ರಮಗಳ ಮೂಲಕ ತಯಾರಿಸುತ್ತಿದ್ದವು. ಪರಿಣಾಮವಾಗಿ
ಭಾರತೀಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ (Council of Scientific
& Industrial Research - CSIR) ಪ್ರಯೋಗಾಲಯವು
ciprofloxacin, diclofenac,
salbutamol, omeprazole, azithromycin ಇತ್ಯಾದಿ
ಆವಶ್ಯಕ ಔಷಧಿಗಳಿಗೆ ತಯಾರಿಕಾ ಸೂತ್ರಗಳನ್ನು ಅಭಿವೃದ್ಧಿಪಡಿಸಿದ್ದಲ್ಲದೇ ಖಾಸಗಿ ಕಂಪೆನಿಗಳಿಗೂ ಅದನ್ನು ವರ್ಗಾಯಿಸಿತು. ಇದರಿಂದ ಮುಂದಿನ
ಎರಡು ದಶಕಗಳಲ್ಲಿ ಸಂಶೋಧನೆ & ಅಭಿವೃದ್ಧಿ ಕ್ಷೇತ್ರದ ಬೆಳವಣಿಗೆಯ ಜೊತೆಗೆ ಉತ್ಪಾದನೆಯೂ ಗಣನೀಯವಾಗಿ
ಹೆಚ್ಚಿತು.
The ‘blue revolution’ refers to adoption of a set of
measures to boost production of fish and other marine products.
It was formally launched with the establishment of the Fish
Farmers’ Development Agency during the Fifth Five-year Plan in 1970.
Later on, similar development agencies were set up for
brackish water development to boost aquaculture in several states.
The objective of all this was to induce new techniques of
fish breeding, rearing and marketing, as well as initiate production of other
marine products like prawns, oysters, seaweeds, pearls and so on, using new
techniques and scientific inputs.
Scores of new technologies developed by research institutes
under the Indian Council of Agriculture Research (ICAR) have been transferred
to fish farmers all over the country.
*****
8. 1973ರ ನಂತರ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ
ಕ್ಷೇತ್ರಗಳಲ್ಲಿ ಸಾಧಿಸಿದ ಮೈಲುಗಲ್ಲುಗಳು:
ಅ. ಆರ್ಯಭಟ ಕೃತಕ
ಉಪಗ್ರಹದ ಉಡಾವಣೆ: ಎಪ್ರಿಲ್ 19, 1975. ಈ
ಉಪಗ್ರಹವನ್ನು ಇಸ್ರೊ (ISRO) ಸಂಸ್ಥೆಯು
X-ray ಆಧಾರಿತ ಖಗೋಳ ಅಧ್ಯಯನ,
aeronomics, ಮತ್ತು solar
physics ಕ್ಷೇತ್ರಗಳಲ್ಲಿನ ಸಂಶೋಧನೆಗಳಿಗಾಗಿ
ಅಭಿವೃದ್ಧಿಗೊಳಿಸಿತ್ತು.
ಆ. ಪ್ರನಾಳ ಶಿಶು
ದುರ್ಗಾ ಜನನ:
ಭಾರತದ ಮೊದಲ
ಹಾಗು ಜಗತ್ತಿನ ಎರಡನೆ ಪ್ರಣಾಳ ಶಿಶುವು ಕಲ್ಕತ್ತಾದಲ್ಲಿ
ಅಕ್ಟೋಬರ್ 3, 1978 ರಂದು
ಜನಿಸಿತು. ಇದು ನಡೆದುದು ಜಗತ್ತಿನ
ಮೊದಲ ಪ್ರನಾಳ ಶಿಶು ಜನಿಸಿದ ಕೇವಲ 67 ದಿನಗಳ
ನಂತರ. (Marie Louise Brown, ಇಂಗ್ಲೆಂಡ್)
ಇ. ಬ್ರಹ್ಮೋಸ್
ಕ್ಷಿಪಣಿಗೆ ದೇಶೀಯ ಮಾರ್ಗದರ್ಶಿ (seeker).
ಬ್ರಹ್ಮೋಸ್
ಕ್ಷಿಪಣಿಯು ಜಗತ್ತಿನ ವೇಗದ ಕ್ಷಿಪಣಿಗಳಲ್ಲಿ ಒಂದಾಗಿದ್ದು, ನೌಕಾದಳದಲ್ಲಿ ಹಡಗು-ಕ್ಷಿಪಣಿ ನಿರೋಧಕವಾಗಿ
ಬಳಸಲಾಗುತ್ತದೆ. ಇದಕ್ಕೆ ನಮ್ಮ
ತಂತ್ರಜ್ಞರು ದೇಶೀಯ ತಂತ್ರಜ್ಞಾನ ಆಧಾರಿತ ಮಾರ್ಗದರ್ಶಿಯನ್ನು ಅಭಿವೃದ್ಧಿಗೊಳಿಸಿರುವುದು ಶಬ್ದಾತೀತ
ಕ್ಷಿಪಣಿಗಳ (supersonic missile) ಕ್ಷೇತ್ರದಲ್ಲಿ
ಮಾಡಿದ ಸಾಧನೆಯಾಗಿದೆ. ಇದರಿಂದ ವಿದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗಿದೆ.
ಈ. ಅಂಟಾರ್ಟಿಕ್
ಸಂಶೋಧನೆಗಳು – ದಕ್ಷಿಣ ಧೃವದಲ್ಲಿ ಗಂಗೋತ್ರಿ
1983ರಲ್ಲಿ ಭಾರತದ
ಮೊದಲ ವೈಜ್ಞಾನಿಕ ಆಧಾರಿತ ಸಂಶೋಧನಾ ಕೇಂದ್ರ ದಕ್ಷಿಣ ಗಂಗೋತ್ರಿಯನ್ನು ಅಂಟಾರ್ಟಿಕಾದಲ್ಲಿರುವ ದಕ್ಷಿಣ
ಧೃವದಿಂದ 2,500 ಕಿ.ಮೀಗಳಷ್ಟು
ದೂರದಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ
ಯಾಂತ್ರೀಕೃತ ಹವಾಮಾನ ಮಾಪಕ ಯಂತ್ರವನ್ನು ಅಳವಡಿಸಿರುವುದಲ್ಲದೇ, ರೇಡಿಯೊ ತರಂಗಗಳ ಮೇಲಿನ ಸಂಶೋಧನೆಗೂ
ಅವಕಾಶ ಕಲ್ಪಿಸಲಾಗಿದೆ. ಭೌತಿಕ ಸಾಗರಶಾಸ್ತ್ರ, ಸಿಹಿನೀರಿನ
ರಾಸಾಯನಿಕ ಅಧ್ಯಯನ, ಭೂಗರ್ಭಶಾಸ್ತ್ರ,
ಹಿಮಪದರಗಳ ಅಧ್ಯಯನ ಮತ್ತು ಭೂಗುರುತ್ವಾಕರ್ಷಣೆಯ
(geomagnetism) ಮೇಲೂ ಸಂಶೋಧನೆ
ನಡೆಸಲಾಗುತ್ತಿದೆ. ಇದರ ಕಾರ್ಯವು
ಸ್ಥಗಿತಗೊಂಡ ನಂತರ ಮೈತ್ರಿ ಎಂಬ ನೂತನ ಶಾಶ್ವತ ಸಂಶೋಧನಾ ಕೇಂದ್ರವನ್ನು
90 ಕಿ.ಮೀ. ಗಳಷ್ಟು
ದೂರದಲ್ಲಿ 1988ಸ್ಥಾಪಿಸಲಾಯಿತು ().
ಉ. ಅಗ್ನಿ-1
1988ರಲ್ಲಿ ಕಡಿಮೆ
ದೂರದ ಪೃಥ್ವಿ ಬ್ಯಾಲೆಸ್ಟಿಕ್ ಕ್ಷಿಪಣಿಯ ಪರೀಕ್ಷೆಯ ನಂತರ ಭಾರತವು ಅಗ್ನಿ ಬ್ಯಾಲೆಸ್ಟಿಕ್ ಕ್ಷಿಪಣಿಯನ್ನು
ಅಭಿವೃದ್ಧಿಗೊಳಿಸಿತು. ಮುಂದೆ
ಅಭಿವೃದ್ಧಿಗೊಳಿಸಿದ ಭಾರತೀಯ ಕ್ಷಿಪಣಿಗಳಿಗೆ ಅಗ್ನಿ ಸರಣಿಯ ಹೆಸರುಗಳನ್ನು ಕೊಡಲಾಗಿದೆ. ಅವು ಖಂಡಾಂತರ
ಕ್ಷಿಪಣಿಗಳಾಗಿದ್ದು, ಅಣುಬಾಂಬುಗಳನ್ನು 5,000 ಕಿ.ಮೀ.ಗಳಷ್ಟು
ದೂರದವರೆಗೂ ಹೊತ್ತೊಯ್ಯಬಲ್ಲವು. ಇದರ
ಪ್ರಥಮ ಪ್ರಯೋಗಾರ್ಥ ಪರೀಕ್ಷೆಯನ್ನು ಮೆ 22, 1989 ರಲ್ಲಿ
ಒರಿಸ್ಸಾದ ಚಾಂಡಿಪುರದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ನಡೆಸಲಾಯಿತು. ಇದು 18 ಮೀ.ಉದ್ದ ಮತ್ತು
7 ಟನ್‌ಗಳಷ್ಟು ತೂಕವನ್ನು ಹೊಂದಿದೆ.
ಇದು ದೇಶೀಯವಾಗಿ ಅಭಿವೃದ್ಧಿಗೊಳಿಸಿದ ಕ್ಷಿಪಣಿಯಾಗಿದ್ದು, 1995ರ ನಂತರ 5 ವಿವಿಧ ಸಾಮರ್ಥ್ಯದ ಅಗ್ನಿ ಕ್ಷಿಪಣಿಗಳನ್ನು
ಸೇನೆಗೆ ನೀಡಲಾಗಿದೆ. ಇವುಗಳನ್ನು ರಸ್ತೆ, ರೈಲು ಮತ್ತು ಸಮುದ್ರ ಮಾರ್ಗಗಳಲ್ಲಿಯೂ ಸಾಗಿಸಬಹುದಾಗಿದೆ.
ಕಾಲಕ್ರಮೇಣ ಇವುಗಳಿಗೆ ಆಧುನಿಕ ತಂತ್ರಜ್ಞಾನವನ್ನು
ಅಳವಡಿಸಲಾಗುತ್ತಿದೆ.
ಊ. ದೇಶೀಯ ನಿರ್ಮಿತ
ಪರಮ್ supercomputer (1991)
ಈ ಕಂಪ್ಯೂಟರ್‌ನ್ನು
ಭಾರತದ ಮೇಲೆ ವಿಧಿಸಿದ ತಾಂತ್ರಿಕ ನಿರ್ಬಂಧದ ವಿರುದ್ಧ ಪಣತೊಟ್ಟು ತಯಾರಿಸಲಾಯಿತು. 1987ರಲ್ಲಿ ಭಾರತ ಮತ್ತು ಅಮೆರಿಕಾದ ನಡುವೆ ನಡೆದ
ಉನ್ನತ ಮಟ್ಟದ ತಾಂತ್ರಿಕ ಸಭೆಯಲ್ಲಿ ಅಂದಿನ ಅಮೆರಿಕಾದ ಅಧ್ಯಕ್ಷ ರೊನಾಳ್ಡ್ ರೇಗನ್ ಅವರು ರಾಜೀವ್
ಗಾಂಧಿಯವರಿಗೆ ಆಧುನಿಕ CRAY ಸುಪರ್
ಕಂಪ್ಯೂಟರ್‌ಗಳನ್ನು ಮಾರಾಟ ಮಾಡಲು ನಿರಾಕರಿಸಿದರು. ಅಲ್ಲದೇ ನಮಗೆ ಅವರು ಬಳಸಿದ ನಿರುಪಯುಕ್ತ ಕಂಪ್ಯೂಟರ್‌ಗಳನ್ನು
ಕೊಡುವುದಾಗಿಯೂ ಮತ್ತು ಅವುಗಳನ್ನು ಹವಾಮಾನದ ಮುನ್ಸೂಚನೆಗಲ್ಲದೇ ಬೇರೆ ಉದ್ದೇಶಗಳಿಗೆ ಬಳಸಬಾರದೆಂದು
ಷರತ್ತು ವಿಧಿಸಲಾಯಿತು. ಆದರೆ, ಸುಪರ್ ಕಂಪ್ಯೂಟರ್‌ಗಳು ಆಧುನಿಕ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ
ಅತ್ಯವಶ್ಯಕವಾಗಿದ್ದವು. ಉದಾ; ಅಗ್ನಿಯಂತಹ ಖಂಡಾಂತರ ಕ್ಷಿಪಣಿಗಳನ್ನು ತಯಾರಿಸುವಾಗ ಅದರ ವೇಗವನ್ನು
ಅಳೆಯಲು ಸೂಪರ್ ಕಂಪ್ಯೂಟರ್‌ಗಳು ಅನಿವಾರ್ಯ. ಪರಿಣಾಮವಾಗಿ 1988ರಲ್ಲಿಸೂಪರ್ ಕಂಪ್ಯೂಟರ್‌ಗಳ ಉತ್ಪಾದನೆಯಲ್ಲಿ
ಸ್ವಾವಲಂಬನೆಯನ್ನು ಸಾಧಿಸುವ ಸಲುವಾಗಿ “Centre
for Development of Advanced Computing (C-DAC) ಅನ್ನು
ಸ್ಥಾಪಿಸಿತು. ಕೇವಲ 3 ವರ್ಷಗಳ
ಕಾಲಮಿತಿ ಮತ್ತು 30 ಕೋಟಿಗಳ
ಅಂದಾಜು ವೆಚ್ಚದೊಂದಿಗೆ ಪರಮ್ 8000 ಎಂಬ
ದೇಶೀಯ ಸೂಪರ್ ಕಂಪ್ಯೂಟರ್ ಅನ್ನು 1991ರಲ್ಲಿ
ಬಳಕೆಗೆ ತರಲಾಯಿತು.
ಋ. ಪೋಕ್ರಾನ್
- II: ಅಣುಶಕ್ತ ರಾಷ್ಟ್ರವಾಗಿ
ಭಾರತ
ಮೇ 13,
1998 ರಂದು ಪ್ರಧಾನಿಗಳಾಗಿದ್ದ ಅಟಲ್
ಬಿಹಾರಿ ವಾಜಪೇಯಿಯವರು ಜಗತ್ತಿನ ಆರನೆ ಅನುಶಕ್ತ ರಾಷ್ಟ್ರವಾಗಿ ಭಾರತವು ಹೊರಹೊಮ್ಮಿದೆ ಎಂಬ ಪತ್ರಿಕಾ
ಪ್ರಕಟಣೆಯನ್ನು ನೀಡಿದರು. ಅದಕ್ಕೆ Two ದಿನಗಳಿಗೂ ಮುನ್ನ ಅಂದರೆ ಮೇ 11ರಂದು ಆಪರೇಶನ್
ಶಕ್ತಿಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿತ್ತು. ಭಾರತವು
ಆಗ ೫ ಸರಣಿ ಅಣುಬಾಂಬುಗಳನ್ನು ಪರೀಕ್ಷಿಸುವ ಮೂಲಕ ಜಗತ್ತನ್ನು ನಿಬ್ಬೆರಗಾಗಿಸಿತ್ತು. 1974ರ ನಂತರ ಭಾರತವು ನಡೆಸಿದ ಎರಡನೆ ಅಣುಬಾಂಬ್
ಪರೀಕ್ಷೆಯಲ್ಲಿ ಮೂರು ತೆರನಾದ ಸ್ಪೋಟದ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. (one
fusion or thermonuclear weapon, two fission devices and two sub-kiloton devices).
Every year on May 11, India celebrates National Technology
Day.
On this day in 1998, India carried out three successful
nuclear tests at the Indian Army’s Pokhran Test Range, located in Rajasthan.
The tests, codenamed ‘Operation Shakti’, were conducted on May 11 in 1998 were
led by the late President Dr APJ Abdul Kalam. It was followed up by two more
nuclear tests that were carried out on May 13, 1998. At the time, India became
the sixth country in the world to join the elite nations of the world to have
nuclear weapons. The first National Technology Day was celebrated a year after
on May 11, 1999, to commemorate the achievement.
*****
Comments
Post a Comment