ಅಧ್ಯಾಯ 9. ಪಂಚಾಯತ್ ರಾಜ್ ವ್ಯವಸ್ಥೆಯ ಪಕ್ಷಿನೋಟ
ಪೀಠಿಕೆ:
ಹಳ್ಳಿಗಳ ಸರ್ವಾಂಗೀಣ ಪ್ರಗತಿಯಾಗಬೇಕಾದರೆ ಅಧಿಕಾರದ ವಿಕೇಂದ್ರೀಕರಣವು ಅತೀ ಅವಶ್ಯಕವಾಗಿದೆ. ಗ್ರಾಮೀಣ
ಸಮುದಾಯಗಳ ಜನರು ತಮ್ಮದೇ ಆದ ಸ್ವತಂತ್ರ ಸಾರ್ವಭೌಮ ಸರ್ಕಾರವನ್ನು ಹೊಂದಿರಬೇಕು. ಅದು ಪ್ರಜಾಪ್ರಭುತ್ವದ
ತಳಹದಿಯ ಮೇಲೆ ರಚಿಸಲ್ಪಟ್ಟ ಸಂಸ್ಥೆಯಾಗಿರಬೇಕು. ಪಂಡಿತ ಜವಾಹರಲಾಲ್ ನೆಹರೂರವರು ಗ್ರಾಮ ಪಂಚಾಯಿತಿಗಳಿಗೆ
ಹೆಚ್ಚಿನ ಅಧಿಕಾರವನ್ನು ನೀಡಬೇಕು. ಪ್ರತಿಯೊಬ್ಬಹಳ್ಳಿಗನು ಗ್ರಾಮದಲ್ಲಿ ನಿಜವಾದ ಸ್ವರಾಜ್ಯವನ್ನು
ಹೊಂದಿರಬೇಕು. ಪ್ರತಿಯೊಂದು ಕಾರ್ಯಕ್ಕಾಗಿ ಉನ್ನತ ಅಧಿಕಾರಿಗಳನ್ನೇ ಆತ ಭೇಟಿಯಾಗುವಂತಾಗಬಾರದು. ಗ್ರಾಮೀಣ
ಬದುಕಿನಲ್ಲಿ ಅಧಿಕಾರಿಗಳ ಅತಿಯಾದ ಹಸ್ತಕ್ಷೇಪವಿರಕೂಡದು. ನಾವು ಸ್ವರಾಜ್ಯವನ್ನು ಗ್ರಾಮೀಣ ಸಮುದಾಯಗಳಿಂದಲೇ ಕಟ್ಟಬೇಕಾಗಿದೆ' ಎಂದು ಪಂಚಾಯತ್ ರಾಜ್ಯ ವ್ಯವಸ್ಥೆಯ ಬಗೆಗೆ ತಮ್ಮ ಅಭಿಪ್ರಾಯಗಳನ್ನು
ವ್ಯಕ್ತಪಡಿಸಿರುತ್ತಾರೆ.
ಮಹಾತ್ಮಾ ಗಾಂಧೀಜಿಯವರಂತೂ "ನಮ್ಮ ಸ್ವರಾಜ್ಯ
ಸಾಕ್ಷಾತ್ಕಾರ ಗ್ರಾಮ ರಾಜ್ಯಗಳಿಂದಲೇ ಆಗಬೇಕು'' ಎಂದು ಹೇಳುತ್ತಿದ್ದರು. ಸಮಾಜದ ಪ್ರತಿಯೊಬ್ಬ ಪ್ರಜೆಯೂ
ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ. ಕೇವಲ
ಚುನಾವಣೆಯ ಸಮಯದಲ್ಲಿ ಮತವನ್ನು ಚಲಾಯಿಸಿ ನಂತರ ರಾಜಕೀಯ ಮತ್ತು ಆಡಳಿತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಿರುವುದು
ನಿಜವಾದ ಪ್ರಜಾಪ್ರಭುತ್ವವಲ್ಲ. ಪ್ರತಿಯೊಬ್ಬ ಪ್ರಜೆಯೂ ಆಡಳಿತ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತಾಗಬೇಕು.
ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿರುವ ಕೆಲವೇ ಜನ ಅಧಿಕಾರಿಗಳಿಂದ ಹಾಗೂ ನಾಯಕರಿಂದ ನಿಜವಾದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಲಾರದು. ಪ್ರತಿಯೊಬ್ಬ ಗ್ರಾಮೀಣ ವಾಸಿಯು
ಆಡಳಿತದಲ್ಲಿ ಪಾಲ್ಗೊಂಡಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಶ್ಚಿತ ಅರ್ಥ ಬರುತ್ತದೆ. ಈ ಹಿನ್ನೆಲೆಯಲ್ಲಿ
ಭಾರತ ಸರ್ಕಾರವು ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ಕಾರ್ಯ ರೂಪದಲ್ಲಿ ತರಲು ಪ್ರಯತ್ನಿಸಿತು.
ಡಾ. ಅಲ್ವೇಕರರು ಗ್ರಾಮ
ಪಂಚಾಯಿತಿಗಳ ಮಹತ್ವವನ್ನು ಕುರಿತು ಗ್ರಾಮ
ಪಂಚಾಯಿತಿಗಳು ಸಾರ್ವಜನಿಕ ಉಪಯುಕ್ತ ಕಾರ್ಯಗಳಾದ ಕೆರೆ, ಬಾವಿ, ಕಾಲುವೆ ತೋಡಿಸುವುದು ರಸ್ತೆ ನಿರ್ಮಾಣ
ಬಂಜರು ಭೂಮಿ ಮತ್ತು ಅರಣ್ಯ ಪ್ರದೇಶಗಳ ಯೋಗ್ಯ ಉಪಯೋಗ ಮುಂತಾದವುಗಳಲ್ಲಿ ತೊಡಗಿರುತ್ತಿದ್ದವು. ಗ್ರಾಮದ
ಪದ್ಧತಿ ಹಾಗೂ ಪರಂಪರೆಗಳೇ ಗ್ರಾಮ ಪಂಚಾಯಿತಿಗಳ ಸಂವಿಧಾನವಾಗಿದ್ದವು' ಎಂದು ಅಭಿಪ್ರಾಯಪಟ್ಟಿರುತ್ತಾರೆ.
ಅಧಿಕಾರದ ವಿಕೇಂದ್ರೀಕರಣವು
ಜನರಲ್ಲಿ ಏಕತೆಯನ್ನು ಹಾಗೂ ಸ್ವಾವಲಂಬ ಮನೋಭಾವನೆಗಳನ್ನು ಹೆಚ್ಚಿಸುತ್ತದೆ. ಒಂದು ಪ್ರದೇಶವು ಆರ್ಥಿಕ,
ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಮುಂದುವರಿಯಬೇಕಾದರೆ ಸ್ಥಳೀಯ ಆಡಳಿತ ವ್ಯವಸ್ಥೆಯು ಅವಶ್ಯಕವಾಗಿದೆ. ಕೇವಲ ಕೇಂದ್ರ ಮತ್ತು ರಾಜ್ಯ ಮಟ್ಟದ ಸರ್ಕಾರಗಳಿಂದ
ಆಡಳಿತವನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗಲಾರದು. ವಿವಿಧ ಪ್ರದೇಶಗಳ ಜನರು ಎದುರಿಸುತ್ತಲಿರುವ
ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕಂಡುಹಿಡಿಯಲು ಪ್ರಾದೇಶಿಕ ಸರ್ಕಾರಗಳನ್ನು ರಚಿಸುವುದು ಅವಶ್ಯಕವಾಗಿರುತ್ತದೆ.
ಸ್ಥಳೀಯರೇ ಸ್ಥಳೀಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬಲ್ಲರು. ಯಾರಿಗೆ ಸಮಸ್ಯೆಯ ಸಂಪೂರ್ಣ ಪರಿಚಯವಿರುತ್ತದೆಯೋ
ಅವರಿಂದ ಮಾತ್ರ ಸಮಸ್ಯೆಗಳಿಗೆ ಯೋಗ್ಯ ಪರಿಹಾರ ದೊರೆಯಬಲ್ಲದು. ಪ್ರಾದೇಶಿಕ ಸರ್ಕಾರಗಳು ಪ್ರಜಾಪ್ರಭುತ್ವದ
ತಳಹದಿಯ ಮೇಲೆ ರಚಿಸಲ್ಪಟ್ಟಿರುವುದರಿಂದ ವಿವಿಧ ಪ್ರದೇಶಗಳ ಕಲ್ಯಾಣವನ್ನು ಸಾಧಿಸುವಲ್ಲಿ ಮಹತ್ವದ ಪಾತ್ರವನ್ನು
ನಿರ್ವಹಿಸಬಲ್ಲವು. " ಒಂದು ರಾಷ್ಟ್ರವು ಸ್ವತಂತ್ರ ಸರ್ಕಾರವನ್ನು ರಚಿಸಬಹುದು. ಆದರೆ ಪ್ರಾದೇಶಿಕ
ಸರ್ಕಾರದ ವ್ಯವಸ್ಥೆಯಿಲ್ಲದೇ ಸ್ವತಂತ್ರ ಮನೋಭಾವನೆಗಳು ಜನರಲ್ಲಿ ಬೆಳೆಯಲಾರವು'' ಎಂದು ಡಾಟೊಕವಿಲ್
ಎಂಬ ತತ್ವಜ್ಞಾನಿ ಹೇಳಿರುವಂತೆ ಪ್ರಾದೇಶಿಕ ಸರ್ಕಾರಗಳು ರಾಷ್ಟ್ರದ ಪ್ರಗತಿಗೆ ಹಾಗೂ ವ್ಯಕ್ತಿಯ ಪ್ರಗತಿಗೆ
ಪೂರಕ ಮತ್ತು ಪರಿಪೂರಕವಾಗಿರುತ್ತದೆ.
ಪಂಚಾಯತ್ ರಾಜ್ಯದ ಅರ್ಥ ಮತ್ತು ಧ್ಯೇಯೋದ್ದೇಶಗಳು
ಗ್ರಾಮೀಣ ಸಮುದಾಯಗಳ ಆಡಳಿತದ ಸುಗಮತೆಗಾಗಿ ಸ್ಥಾಪಿಸಲ್ಪಟ್ಟ
ವ್ಯವಸ್ಥೆಯನ್ನು ಪಂಚಾಯತ್ ರಾಜ್ಯ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಗ್ರಾಮದ ಪ್ರಮುಖರನ್ನು
ಹಿರಿಯರನ್ನು ಹಾಗೂ ಮುಖ್ಯಸ್ಥರನ್ನೊಳಗೊಂಡ ಸಂಸ್ಥೆಗೆ ಗ್ರಾಮ ಪಂಚಾಯಿತಿ (Village Panchayat) ಎಂದು
ಕರೆಯುತ್ತ ಬಂದಿರುತ್ತೇವೆ. ಗ್ರಾಮೀಣ ಸಮುದಾಯಗಳಲ್ಲಿ ಐದು ಜನ ಜ್ಞಾನವೃದ್ಧರು, ವಯೋವೃದ್ಧರು ಹಾಗೂ
ಅನುಭವಿಗಳನ್ನೊಳಗೊಂಡ ಸಂಸ್ಥೆಯು ಗ್ರಾಮ ಪಂಚಾಯಿತಿಯಾಗಿದ್ದಿತು.
ಈ ನಾಯಕರನ್ನು ಗ್ರಾಮೀಣ ಜನರೇ ಆಯ್ಕೆ ಮಾಡುತ್ತಿದ್ದುದರಿಂದ ಪಂಚರು ಅಂದರೆ ಐದು ಜನರು ಆಯ್ಕೆ ಮಾಡಲ್ಪಟ್ಟವರು
ಎನ್ನುವ ಕಾರಣಕ್ಕಾಗಿ ಈ ಸಂಸ್ಥೆಗೆ ಪಂಚಾಯಿತಿ ಎಂದು ಕರೆಯಲಾಯಿತು.
ಅರ್ಥವಿವರಣೆ
: ಗ್ರಾಮೀಣ ಸಮುದಾಯಗಳಲ್ಲಿರುವ ಸರ್ಕಾರದ ಒಂದು ಸ್ವರೂಪವೇ ಪಂಚಾಯಿತಿ. ಈ ವ್ಯವಸ್ಥೆಗೆ ಕೆ.ಎಂ. ಪಣಿಕ್ಕರ್
ಅವರು 'ಪ್ರಾದೇಶಿಕ ಸ್ವತಂತ್ರ ಸರ್ಕಾರಗಳು' (Local Self Governments) ಎಂದು ಕರೆದಿರುತ್ತಾರೆ.
ಡಾ. ಅಲ್ವೇಕರ್ ಗ್ರಾಮ ಪಂಚಾಯಿತಿಗಳನ್ನು “'ಚಿಕ್ಕ ಸ್ವತಂತ್ರ ಗಣರಾಜ್ಯಗಳು' (Small
Independent Republics) ಎಂದು ಕರೆದಿರುತ್ತಾರೆ.
ಪಂಚಾಯತ್ ರಾಜ್ಯವೆಂದರೆ ಪರಸ್ಪರ ಸಮಾಲೋಚನೆಯ ಆಡಳಿತ ಪದ್ಧತಿ.
ಇಲ್ಲಿ ಎಲ್ಲವೂ ಸರ್ವಾನುಮತದಿಂದಲೇ ನಿರ್ಧರಿಸಲ್ಪಡಬೇಕು. ಇದು ಪಂಚಾಯಿತಿಗಳ ಸಮೂಹವಾಗಿದೆ. ನಿಲುವಿನಲ್ಲಿ ರಾಷ್ಟ್ರೀಯ ಮಟ್ಟದವರೆಗೂ ಬೆಳೆದು ಬಂದ ವ್ಯವಸ್ಥೆಯಾಗಿದೆ.”
ಪಂಚಾಯತ್ ರಾಜ್ಯದ ಬಗೆಗೆ
ಎಸ್.ಕೆ.ಡೇ. ಈ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. 'ಪಂಚಾಯತ್ ರಾಜ್ಯವೆಂದರೆ ಕೆಳಗಿನ
ಮೇಲ್ಗಡೆ ಹಾಗೂ ಮೇಲಿಂದ ಕೆಳಗಡೆ ದಕ್ಷತೆ ಮತ್ತು ಸಾಮರ್ಥ್ಯಗಳ ಬೆಳವಣಿಗೆ ಹಾಗೂ ಅಧಿಕಾರ ಮತ್ತು ಜವಾಬ್ದಾರಿಗಳ
ವರ್ಗಾವಣೆ. ಮೇಲಿನ ಹಂತದಲ್ಲಿರುವವರು ತಮ್ಮಭಾರವನ್ನು (ಜವಾಬ್ದಾರಿ) ಆದಷ್ಟು ಕಡಿಮೆ ಮಾಡಿಕೊಳ್ಳಬೇಕು.
ತಮ್ಮ ಮಟ್ಟಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಬೇಕು. ಪಂಚಾಯಿತಿಗಳು ನಿರ್ವಹಿಸಬೇಕಾದ ಕಾರ್ಯವನ್ನು ಹಾಗೂ
ಜವಾಬ್ದಾರಿಯನ್ನು ಅವುಗಳಿಗೇ ಬಿಟ್ಟುಕೊಡಬೇಕು. ಒಟ್ಟಿನಲ್ಲಿ
ಪಂಚಾಯತ್ ರಾಜ್ಯ ವ್ಯವಸ್ಥೆಯು ಸರ್ಕಾರದ ಒಂದು ಘಟಕವಾಗದೆ ಅದೊಂದು ಜೀವನ ಮಾರ್ಗವಾಗಬೇಕು'
ಪಂಚಾಯತ್ ರಾಜ್ ವ್ಯವಸ್ಥೆಯ ಧ್ಯೇಯೋದ್ದೇಶಗಳು
ಪಂಚಾಯತ್ ರಾಜ್ಯ ವ್ಯವಸ್ಥೆಯ
ಧ್ಯೇಯೋದ್ದೇಶಗಳನ್ನು 3ನೇ ಪಂಚ ವಾರ್ಷಿಕ ಯೋಜನೆಯಲ್ಲಿ ಈ ರೀತಿಯಲ್ಲಿ ವಿವರಿಸಲಾಗಿದೆ.
1) ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು.
2) ಗ್ರಾಮೀಣ ಗೃಹ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸುವುದು.
3) ಸಹಕಾರಿ ಸಂಸ್ಥೆಗಳನ್ನು ಬೆಳೆಸುವುದು.
4) ಪಂಚಾಯತ್ ರಾಜ್ಯ ಸಂಸ್ಥೆಗಳಿಗೆ ಭೌತ ಮತ್ತು ಆರ್ಥಿಕ ನೆರವು ದೊರೆಯುವ ಸಲುವಾಗಿ
ಮಾನವ ಶಕ್ತಿ ಮತ್ತು ಸಂಪನ್ಮೂಲಗಳನ್ನು ಯೋಗ್ಯ ರೀತಿಯಿಂದ
ಉಪಯೋಗಿಸಿಕೊಳ್ಳುವುದು.
5) ಗ್ರಾಮೀಣ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ನೆರವನ್ನು
ನೀಡುವುದು.
6) ಐಚ್ಛಿಕ ಸಂಘಟನೆಗೆ ಆಡಳಿತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಆಸ್ಪದಗಳನ್ನು
ನೀಡುವುದು.
7) ಗ್ರಾಮೀಣ
ವಾಸಿಗಳಲ್ಲಿ ಸ್ವಸಹಾಯದ ಪ್ರಜ್ಞೆಯನ್ನು ಜಾಗೃತಗೊಳಿಸುವುದು.
8) ಪಂಚಾಯತ್
ರಾಜ್ಯ ವ್ಯವಸ್ಥೆಯಲ್ಲಿ ಭಾವೀ ಶಾಸಕರಿಗೆ ಮತ್ತು ಆಡಳಿತಗಾರರಿಗೆ ಯೋಗ್ಯ ತರಬೇತಿಯನ್ನು ನೀಡಿದಂತಾಗುತ್ತದೆ.
ಏಕೆಂದರೆ, ಪಂಚಾಯತ್ ರಾಜ್ಯದ ಮೂರು ಹಂತಗಳಲ್ಲಿ ನಾಯಕರಾಗಿ ಸೇವೆ ಸಲ್ಲಿಸುವ ಜನರು ಮುಂದೆ ರಾಜ್ಯ ಮತ್ತು
ಕೇಂದ್ರ ಮಟ್ಟದಲ್ಲಿ ಸಮರ್ಥ ಆಡಳಿತಗಾರರಾಗಬಲ್ಲರು. ಈ ರೀತಿ ಜನರಿಗೆ ಪಂಚಾಯತ್ ರಾಜ್ಯ ಸಂಸ್ಥೆಗಳು
ತರಬೇತಿ ಕೇಂದ್ರಗಳಂತೆ ಕಾರ್ಯನಿರ್ವಹಿಸುತ್ತವೆ.
9) ಕೇಂದ್ರೀಕೃತ ಆಡಳಿತ ಪದ್ಧತಿಯಲ್ಲಿ ಗ್ರಾಮೀಣ ಜನರು ಪ್ರತಿದಿನವೂ ಎದುರಿಸುವ
ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿಯಲು ಸಾಧ್ಯವಾಗಲಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು
ಕೆಲವೇ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತವೆ. ಆದರೆ ಪ್ರಾದೇಶಿಕ ಸರ್ಕಾರಗಳನ್ನೊಳಗೊಂಡ
ಪಂಚಾಯತ್ ರಾಜ್ಯ ವ್ಯವಸ್ಥೆಯಲ್ಲಿ ಮಾತ್ರ ಗ್ರಾಮೀಣ ಸಮಸ್ಯೆಗಳಿಗೆ ಸೂಕ್ತ ಪರಿಹಾರವು ದೊರೆತಂತಾಗಿ
ಗ್ರಾಮೀಣ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ.
10) ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಹಾಗೂ ಯೋಜನೆಗಳು ಫಲಪ್ರದವಾಗುವಲ್ಲಿ
ಗ್ರಾಮೀಣ ಜನರ ಸಹಾಯ ಸಹಕಾರ ಹಾಗೂ ಸಕ್ರಿಯ ಪಾಲ್ಗೊಳ್ಳುವಿಕೆ ಅತೀ ಅವಶ್ಯಕವಾಗಿರುತ್ತವೆ. ಕಾರಣ ಯೋಜನೆಗಳ
ಪ್ರಕ್ರಿಯೆಯು ಗ್ರಾಮೀಣ ಸಮುದಾಯಗಳಿಂದಲೇ ಪ್ರಾರಂಭವಾಗಬೇಕು. ಯೋಜನೆಗಳಲ್ಲಿ ಪ್ರತಿಯೊಂದು ಹಳ್ಳಿಗೂ
ಆದ್ಯತೆ ದೊರಕುವಂತಾಗಬೇಕು. ಈ ಹಂತದಲ್ಲಿ ಪಂಚಾಯತ್ ರಾಜ್ಯ - ವ್ಯವಸ್ಥೆಯು
ಮಧ್ಯವರ್ತಿ ಸಂಸ್ಥೆಯಾಗಿ ಕಾರ್ಯ ಮಾಡುತ್ತದೆ.
11) ಪಂಚಾಯತ್ ರಾಜ್ಯ ವ್ಯವಸ್ಥೆಯಲ್ಲಿ ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯ,
ಮನರಂಜನೆ, ಸಾರಿಗೆ ಸಂಪರ್ಕ ಮುಂತಾದ ಕಾರ್ಯಗಳಿಗಾಗಿ ಉಪ ಸಮಿತಿಗಳನ್ನು ಸ್ಥಾಪನೆ ಮಾಡಿಕೊಳ್ಳಲು ಆಸ್ಪದಗಳಿರುತ್ತವೆ.
ಇದರಿಂದ ಗ್ರಾಮೀಣ ಸಮುದಾಯಗಳ ಬಹುಸಂಖ್ಯಾತ " ಜನರೊಂದಿಗೆ ಸಂಪರ್ಕಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವುದಲ್ಲದೇ
ಗ್ರಾಮೀಣ ಅಭಿವೃದ್ಧಿ ಚಟುವಟಿಕೆಗಳಲ್ಲಿ ಹೆಚ್ಚಿನ ಜನರನ್ನು ತೊಡಗಿಸಿದಂತಾಗುತ್ತದೆ.
12) ಪ್ರಾದೇಶಿಕ ಮಟ್ಟದ ಪ್ರತಿಯೊಂದು ಸಮಸ್ಯೆಗಳನ್ನು ಕೇಂದ್ರ ಮತ್ತು ರಾಜ್ಯ
ಸರ್ಕಾರಗಳ ಗಮನಕ್ಕೆ ತರುವ ಕಾರ್ಯವನ್ನು ಪಂಚಾಯತ್ ರಾಜ್ಯ ವ್ಯವಸ್ಥೆಯು ಸಮರ್ಥ ರೀತಿಯಿಂದ ನಿರ್ವಹಿಸುತ್ತದೆ.
ಇನ್ನೊಂದು ಅರ್ಥದಲ್ಲಿ ಮೂರು ಹಂತಗಳಲ್ಲಿರುವ ಪಂಚಾಯಿತಿ ರಾಜ್ಯ ಸಂಸ್ಥೆಗಳು ಗ್ರಾಮೀಣ ಜನರ ಮತ್ತು
ಸರ್ಕಾರದ ಮಧ್ಯದಲ್ಲಿರುವ ಮಧ್ಯವರ್ತಿ ಘಟಕ ಅಥವಾ ಜೀವಂತ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತದೆ.
ಮಹಾತ್ಮಾ ಗಾಂಧೀಜಿಯವರ
ಅಭಿಪ್ರಾಯದಂತೆ “ಸ್ವಾತಂತ್ರ್ಯವು
ತಳಹದಿಯಿಂದ ಪ್ರಾರಂಭವಾಗಬೇಕು. ಪ್ರತಿಯೊಂದು ಗ್ರಾಮವು ಒಂದು ಗಣರಾಜ್ಯ ಅಥವಾ ಪಂಚಾಯಿತಿಯನ್ನು ಹೊಂದಿರಬೇಕು.
ಪ್ರತಿಯೊಂದು ಗ್ರಾಮವು ಸ್ವತಂತ್ರ, ಸಾರ್ವಭೌಮ ಗಣರಾಜ್ಯದಂತಿರಬೇಕು.”
ಪಂಚಾಯಿತಿಗಳಿಗೆ ಹೆಚ್ಚಿನ
ಅಧಿಕಾರವಿದ್ದರೆ ಜನರಿಗೆ ಹೆಚ್ಚಿನ ಅಧಿಕಾರವಿದ್ದಂತೆ. (The greater the Power of
Panchayats the better for the people)
ಅಂದಿನ ಸಮುದಾಯ ಅಭಿವೃದ್ಧಿ
ವಿಭಾಗದ ಸಚಿವರು ಮತ್ತು ಪಂಚಾಯತ್ ರಾಜ್ಯದ ಶಿಲ್ಪಿಗಳೂ ಆದ ಎಸ್.ಕೆ. ಡೇಯವರು (S.K. Day)
"ರಾಜ್ಯ ಶಾಸನಗಳು ರಾಜ್ಯದ ಪ್ರಮುಖ ನಗರದಿಂದ ಜಿಲ್ಲಾ ಕ್ಷೇತ್ರ ಮತ್ತು ಪಂಚಾಯಿತಿಗಳಿಗೆ ಪ್ರಯಾಣ
ಮಾಡಲು (ಸಾಗಿ ಬರಲು) ಹೊಸ ಸಂಸ್ಥೆಗಳಾದ ಹಾಗೂ ಜನರ ಸಂಘಟನೆಗಳಾದ ಪಂಚಾಯತ್ ರಾಜ್ಯ ಸಂಸ್ಥೆಗಳು ಪ್ರಯತ್ನಿಸುತ್ತವೆ.
ರಾಜ್ಯ ಶಾಸಕಾಂಗವು ಮನ್ನಣೆ ನೀಡಿದ ಯೋಜನೆಗಳನ್ನು ಕಾರ್ಯ ರೂಪದಲ್ಲಿ ತರುವ ಹಾಗೂ ಅದರ ಪ್ರತಿಫಲವನ್ನು
ಗ್ರಾಮೀಣ ಜನರು ಅನುಭವಿಸುವಂತೆ ಮಾಡುವ ಗುರುತರ ಹೊಣೆಗಾರಿಕೆ
ಈ ಸಂಸ್ಥೆಗಳ ಮೇಲಿದೆ'' ಎಂದು ಹೇಳಿರುತ್ತಾರೆ. ಅಲ್ಲದೇ ಅವರು ಸಮುದಾಯ ಅಭಿವೃದ್ಧಿ ಯೋಜನೆಯನ್ನು ಸರ್ವೋದಯ
ಯೋಜನೆಯೆಂದು ಕರೆದಿರುತ್ತಾರೆ. ಅವರು ಮುಂದುವರೆದು 'ಸಮಾಜವಾದಿ ಮಾದರಿಯ ಸಮಾಜದ ಗುರಿಯನ್ನು ತಲುಪಲು
ಸಮುದಾಯವು ಒಂದು ಅಂತಿಮ ಗುರಿ (End) ಯಾದರೆ ಪಂಚಾಯತ್ ರಾಜ್ಯವು ಒಂದು ಸಾಧನ (Means) ವಾಗಿರುತ್ತದೆ.
ಸಮುದಾಯ ಅಭಿವೃದ್ಧಿ ಯೋಜನೆಯನ್ನು ಧ್ಯೇಯೋದ್ದೇಶಗಳನ್ನು ಸಾಧಿಸಲು ಪಂಚಾಯತ್ ರಾಜ್ಯವನ್ನು ಒಂದು ಮಾಧ್ಯಮವನ್ನಾಗಿ
ಉಪಯೋಗಿಸಬೇಕಾಗುತ್ತದೆ” ಎಂದು ಅಭಿಪ್ರಾಯಪಟ್ಟಿರುತ್ತಾರೆ.
ಮೂರನೇ ಪಂಚವಾರ್ಷಿಕ ಯೋಜನೆಯ
ಒಂದು ಉಲ್ಲೇಖದ ಪ್ರಕಾರ ಸಮುದಾಯ ಅಭಿವೃದ್ಧಿ ಯೋಜನೆಯ ಇತ್ತೀಚಿನ ಬೆಳವಣಿಗೆಯೆಂದರೆ 'ಪಂಚಾಯತ್ ರಾಜ್ಯ
ವ್ಯವಸ್ಥೆ ಅಥವಾ ಪ್ರಜಾಪ್ರಭುತ್ವದ ವಿಕೇಂದ್ರೀಕರಣ ವಾಗಿದೆ. ಗ್ರಾಮ, ಕ್ಷೇತ್ರ ಹಾಗೂ ಜಿಲ್ಲಾ ಮಟ್ಟಗಳಲ್ಲಿ
ಜವಾಬ್ದಾರಿಯನ್ನು ಅನುಕ್ರಮವಾಗಿ ಗ್ರಾಮ ಪಂಚಾಯತ್ ಪಂಚಾಯಿತಿ ಸಮಿತಿ ಮತ್ತು ಜಿಲ್ಲಾ ಪರಿಷತ್ ಗಳಿಗೆ
ವಹಿಸಿಕೊಡಲಾಗಿರುತ್ತದೆ. ಗ್ರಾಮೀಣ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಹಾಗೂ ವಿಧಾನದಲ್ಲಿ ಇದೊಂದು ಕ್ರಾಂತಿಕಾರಕ
ಬದಲಾವಣೆಯಾಗಿರುತ್ತದೆ.''
ಮೂರನೇ ಪಂಚವಾರ್ಷಿಕ
ಯೋಜನೆಯ ಇನ್ನೊಂದು ಉಲ್ಲೇಖದಲ್ಲಿ ಯೋಗ್ಯ ಆಡಳಿತ ಮತ್ತು ಯೋಜನೆಗಳಿಗಾಗಿ, ಮತ್ತು ಗ್ರಾಮೀಣ ಸಮುದಾಯಗಳಿಗೆ
ಸಂಪನ್ಮೂಲಗಳನ್ನು ವರ್ಗಾಯಿಸುವ ಸಲುವಾಗಿ ಪ್ರಜಾಪ್ರಭುತ್ವದ ವಿಕೇಂದ್ರೀಕರಣದ ಕ್ರಮವನ್ನು ಕಾರ್ಯರೂಪದಲ್ಲಿ
ತರಲಾಗಿದೆ ಎಂದು ಪಂಚಾಯತ್ ರಾಜ್ಯ ವ್ಯವಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಲಾಗಿದೆ. ಮೂರನೇ ಪಂಚವಾರ್ಷಿಕ ಯೋಜನೆಯಲ್ಲಿ ಪಂಚಾಯತ್ ರಾಜ್ಯದ ಪ್ರಮುಖ ಉದ್ದೇಶದಲ್ಲಿ ಸಮಗ್ರ
ಜನತೆಯ ನಿರಂತರ ಪ್ರಗತಿಯನ್ನು ಸಾಧಿಸಲು ಪ್ರಯತ್ನಿಸುವುದು, ಜನರಿಂದ ಚುನಾಯಿತರಾದ ಪ್ರತಿನಿಧಿಗಳು
ಜನರ ಸೇವೆಗಾಗಿ ತಮಗೆ ಇದೊಂದು ಅವಕಾಶ ದೊರಕಿದೆ ಎಂದು ತಿಳಿಯಬೇಕೇ ಹೊರತು ಅಧಿಕಾರ ಚಲಾಯಿಸುವ ಅವಕಾಶ
ಸಿಕ್ಕಿದೆ ಎಂದು ಭಾವಿಸಕೂಡದು'' ಎಂಬ ಸ್ಪಷ್ಟ
ಉಲ್ಲೇಖವನ್ನು ಕಾಣುತ್ತೇವೆ. ಇದರಿಂದ ಚುನಾಯಿತ ಪ್ರತಿನಿಧಿಳು ಅದರಲ್ಲೂ ವಿಶೇಷವಾಗಿ ಶಾಸಕರು ಮತ್ತು
ಮಂತ್ರಿಗಳು ಪಂಚಾಯತ್ ರಾಜ್ಯ ವ್ಯವಸ್ಥೆಯಲ್ಲಿ ಅನಾವಶ್ಯಕವಾಗಿ ಅಧಿಕಾರ ಚಲಾಯಿಸಲು ಪ್ರಯತ್ನಿಸಕೂಡದೆಂಬ
ಸಂಗತಿಯು ಸ್ಪಷ್ಟವಾಗುತ್ತದೆ.
ಸ್ವಾತಂತ್ರ್ಯಾನಂತರದ ಭಾರತದಲ್ಲಿ ಪಂಚಾಯಿತಿಗಳ
ಬೆಳವಣಿಗೆ
1957ರಲ್ಲಿ ಶ್ರೀ ಬಲವಂತರಾವ್ ಮೆಹತಾರ ಅಧ್ಯಕ್ಷತೆಯಲ್ಲಿ ಭಾರತ ಸರ್ಕಾರವು
ಒಂದು ಅಧ್ಯಯನ ತಂಡವನ್ನು ನೇಮಕಾತಿ ಮಾಡಿತು. ಅಧ್ಯಯನ ತಂಡದ ಪ್ರಮುಖ ಗುರಿಯು ಸಮುದಾಯ ಅಭಿವೃದ್ಧಿ
ಯೋಜನೆಯ ಕಾರ್ಯ ಚಟುವಟಿಕೆಗಳ ಸಮೀಕ್ಷೆ ಮಾಡಿ ಯೋಜನಾ ಆಯೋಗಕ್ಕೆ ವರದಿಯನ್ನೊಪ್ಪಿಸುವುದಾಗಿತ್ತು. ಅಧ್ಯಯನ ತಂಡವು ಗ್ರಾಮಗಳ ಅಭಿವೃದ್ಧಿಯಲ್ಲಿ ಮೂರು
ಹಂತಗಳನ್ನೊಳಗೊಂಡ ಪಂಚಾಯತರಾಜ್ ವ್ಯವಸ್ಥೆಯ ಅವಶ್ಯಕತೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿತು.
1958ರಲ್ಲಿ ರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯು (National development
Council) ಮೆಹ್ತಾ ಸಮಿತಿಯ ಶಿಫಾರಸುಗಳಿಗೆ ಮನ್ನಣೆ ನೀಡಿತು.
1959ರಲ್ಲಿ ಹೈದ್ರಾಬಾದ್‌ನಲ್ಲಿ ಸಮಾವೇಶಗೊಂಡ ಪ್ರಾದೇಶಿಕ ಸ್ವತಂತ್ರ ಸರ್ಕಾರಗಳು ಕೇಂದ್ರಿಯ ಸಮಿತಿಯು
(The Central council of Land self Governments) ರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯ ನಿರ್ಧಾರವನ್ನು
ಕಾರ್ಯಗತಗೊಳಿಸಲು ತನ್ನ ಅನುಮತಿಯನ್ನು ನೀಡಿತು. ಅಂತಿಮವಾಗಿ 2ನೇ ಅಕ್ಟೋಬರ್ 1959ರಂದು ಪಂಡಿತ ಜವಾಹರಲಾಲ್
ನೆಹರೂ ಅವರು ನಾಗಪೂರದಲ್ಲಿ ಪಂಚಾಯತ್ ರಾಜ್ ಸಂಸ್ಥೆಯನ್ನು ಉದ್ಘಾಟನೆ ಮಾಡಿದರು.
ಬಲವಂತರಾವ್ ಮೆಹತಾ ಮತ್ತು ಅಶೋಕ್ ಮೆಹತಾ ಸಮಿತಿಯ
ವರದಿಗಳು
1957ನೇ ಜನೇವರಿಯಂದು ಗುಜರಾತಿನ ಹಿಂದಿನ ಮುಖ್ಯಮಂತ್ರಿಯಾಗಿದ್ದ ಬಲವಂತರಾವ್
ಮೆಹತಾರ ಅಧ್ಯಕ್ಷತೆಯಲ್ಲಿ ಭಾರತ ಸರ್ಕಾರದ ಯೋಜನಾ ಆಯೋಗವು ಒಂದು ಅಧ್ಯಯನ ತಂಡವನ್ನು (Study
Team) ನೇಮಕಾತಿ ಮಾಡಿತು. ಅಧ್ಯಯನ ತಂಡದ ನೇಮಕಾತಿಯ ಪ್ರಮುಖ ಉದ್ದೇಶವು ಸಮುದಾಯ ಅಭಿವೃದ್ಧಿ ಯೋಜನೆಯ
ಕಾರ್ಯ ಚಟುವಟಿಕೆಗಳನ್ನು ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿಯನ್ನೊಪ್ಪಿಸುವುದಾಗಿತ್ತು. ಗ್ರಾಮೀಣ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳಲ್ಲಿ ಗ್ರಾಮೀಣ
ವಾಸಿಗಳು ಯಾವ ರೀತಿಯಾಗಿ ಪಾಲ್ಗೊಳ್ಳುತ್ತಲಿದ್ದಾರೆಂಬ ಸಂಗತಿಯನ್ನು ವಿಮರ್ಶಿಸುವುದು ಅಧ್ಯಯನ ತಂಡದ
ಉದ್ದೇಶವಾಗಿತ್ತು. ಗ್ರಾಮೀಣ ಮತ್ತು ರಾಜ್ಯ ಮಟ್ಟದ ಆಡಳಿತ ವ್ಯವಸ್ಥೆಯಲ್ಲಿ ಯೋಗ್ಯ ಹೊಂದಾಣಿಕೆಯನ್ನು
ತರಲು ಜಿಲ್ಲಾ ಮಟ್ಟದ ಆಡಳಿತದಲ್ಲಿ ಪುನರ್ ಸಂಘಟನೆಯನ್ನು ತರಲು ಪ್ರಯತ್ನಿಸುವುದು ಅಧ್ಯಯನ ತಂಡದ
ಗುರಿಯಾಗಿದ್ದಿತು. ಬಲವಂತರಾವ್ ಮೆಹತಾ ಅಧ್ಯಯನ ತಂಡವು ಗ್ರಾಮ, ಕ್ಷೇತ್ರ ಮತ್ತು ಜಿಲ್ಲಾ ಮಟ್ಟಗಳಲ್ಲಿ
ಚುನಾಯಿತ ಮತ್ತು ಚೈವಿಜನ್ಯ ಸಂಬಂಧವನ್ನು ಹೊಂದಿದಂತಿರುವ ಪ್ರಜಾಪ್ರಭುತ್ವ ಘಟಕಗಳಿರಬೇಕು ಮತ್ತು ಯೋಜನೆಗಳನ್ನು
ರೂಪಿಸುವ ಹಾಗೂ ಅಭಿವೃದ್ಧಿಯನ್ನು ಸಾಧಿಸುವ ಚಟುವಟಿಕೆಗಳನ್ನೆಲ್ಲ ಈ ಘಟಕಗಳಿಗೆ ವಹಿಸಿಕೊಡಬೇಕು ಎಂದು
ಶಿಫಾರಸು ಮಾಡಿತು. ಮೇಲಿನ ಶಿಫಾರಸ್ಸುಗಳನ್ನು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು 1958ರಲ್ಲಿ ಸಂಪೂರ್ಣವಾಗಿ
ಒಪ್ಪಿಕೊಂಡಿತು. ಬಲವಂತರಾವ್ ಮೆಹ್ತಾ ಸಮಿತಿಯ ಶಿಫಾರಸಿನ ಮೇರೆಗೆ ಪಂಚಾಯತ್ ರಾಜ್ಯವು ಹೊಂದಿರಬೇಕಾದ
ಪ್ರಮುಖ ಲಕ್ಷಣಗಳು ಈ ರೀತಿಯಾಗಿವೆ.
1) ಪಂಚಾಯತ್ ರಾಜ್ಯ ವ್ಯವಸ್ಥೆಯು ಮೂರು ಹಂತಗಳ ವ್ಯವಸ್ಥೆ
(Three Tier Struc - ture) ಅಥವಾ ರಚನೆಯಾಗಿರಬೇಕು.
ಪ್ರಾದೇಶಿಕ ಸರ್ಕಾರಗಳನ್ನೊಳಗೊಂಡ ಗ್ರಾಮೀಣ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಈ ವ್ಯವಸ್ಥೆಗಳಲ್ಲಿ
ಅವಿನಾಭಾವ ಸಂಬಂಧಗಳಿರಬೇಕು.
2) ಅಧಿಕಾರ ಮತ್ತು ಜವಾಬ್ದಾರಿಯನ್ನು ಆ ವಿಭಾಗಗಳಲ್ಲಿ ಸೇವೆ
ಸಲ್ಲಿಸುತ್ತಲಿರುವ ಜನರಿಗೆ ಯೋಗ್ಯ ರೀತಿಯಿಂದ ವರ್ಗಾವಣೆ ಮಾಡಬೇಕು.
3)
ಮೂರುಹಂತಗಳ ವ್ಯವಸ್ಥೆಗಳಿಗೆ ಸಾಕಷ್ಟು ಸಂಪನ್ಮೂಲಗಳನ್ನು ಪೂರೈಸಬೇಕು. ಇದರಿಂದ ಅವು ತಮ್ಮ ಕರ್ತವ್ಯಗಳನ್ನು
ಸಮರ್ಥ ರೀತಿಯಿಂದ ನಿರ್ವಹಿಸಲು ಅನುವು ಮಾಡಿಕೊಟ್ಟಂತಾಗುತ್ತದೆ.
4) ವಿಭಾಗದ ಅಭಿವೃದ್ಧಿ ಕಾರ್ಯಗಳೆಲ್ಲ
ಈ ಮೂರು ಘಟಕಗಳ ಮುಖಾಂತರವೇ ಮುಂದುವರೆಯುವಂತಾಗಬೇಕು.
5) ಭವಿಷ್ಯತ್ತಿನಲ್ಲಿಯೂ ಈ ಮೂರು ಘಟಕಗಳು ಯೋಗ್ಯ ರೀತಿಯಿಂದ ಕಾರ್ಯ ನಿರ್ವಹಿಸುವಂತೆ
ಎಲ್ಲ ಜವಾಬ್ದಾರಿಯನ್ನು ಅವುಗಳಿಗೆ ವಹಿಸಿಕೊಡಬೇಕು.
ಸಮಿತಿಯ ಶಿಫಾರಸಿನಂತೆ
ಗ್ರಾಮೀಣ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಕ್ಷೇತ್ರ ಅಥವಾ ತಾಲೂಕಾ ಮಟ್ಟದಲ್ಲಿ ಪಂಚಾಯಿತಿ ಸಮಿತಿ ಹಾಗೂ
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪರಿಷತ್‌ಗಳೆಂಬ ಆಡಳಿತ ವ್ಯವಸ್ಥೆಗಳನ್ನು ಸ್ಥಾಪಿಸಲಾಯಿತು. ಇವುಗಳನ್ನೇ
ಮೂರು ಹಂತಗಳ ರಚನೆ ಎಂದು ಬಲವಂತರಾವ್ ಮೆಹತಾ ಸಮಿತಿಯು ಕರೆದಿರುತ್ತದೆ.
ಬಲವಂತರಾವ್ ಮೆಹತಾ ಸಮಿತಿಯ
ವರದಿಯನ್ನು ಸಂಪೂರ್ಣವಾಗಿ ಒಪ್ಪಿಕೊಂಡ ಕೇಂದ್ರ - ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳು ಅದನ್ನು ಕಾರ್ಯ ರೂಪದಲ್ಲಿ
ತರುವಂತೆ ಶಿಫಾರಸು ಮಾಡಿತು. ಆದರೆ ಪ್ರಾದೇಶಿಕ ಸ್ಥಿತಿಗಳಿಗೆ ತಕ್ಕಂತೆ ಮೂರು ಹಂತಗಳ ಆಡಳಿತ ವ್ಯವಸ್ಥೆಯಲ್ಲಿ
ಕೆಲವೊಂದು ಮಾರ್ಪಾಡುಗಳನ್ನು ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿತು. ಮಧ್ಯದ ಹಂತದಲ್ಲಿರುವ
ಪಂಚಾಯತ್ ಸಮಿತಿಯು ಹೆಚ್ಚು ಬಲಿಷ್ಠವಾಗಿರುತ್ತದೆ
ಎಂದು ಮೆಹತಾ ಸಮಿತಿಯು ಅಭಿಪ್ರಾಯಪಟ್ಟಿರುತ್ತದೆ. ಪಂಚಾಯತ್ ಸಮಿತಿಯ ಆಡಳಿತದಲ್ಲಿ ಸರ್ಕಾರಿ ಅಧಿಕಾರಿಗಳು
ಅತಿಯಾಗಿ ಹಸ್ತಕ್ಷೇಪ ಮಾಡಕೂಡದೆಂಬ ಎಚ್ಚರಿಕೆಯನ್ನು ಬಲವಂತರಾವ್
ಮೆಹತಾ ಸಮಿತಿಯು ನೀಡಿರುತ್ತದೆ.
ಅಶೋಕ್ ಮೆಹ್ತಾ ಆಯೋಗ – 1977.
1977ರಲ್ಲಿ ಗ್ರಾಮ ಪಂಚಾಯಿತಿಗಳನ್ನು
ಪುನರಚಿಸುವ ದಿಶೆಯಲ್ಲಿ ಭಾರತ ಸರ್ಕಾರವು ಗಂಭೀರವಾಗಿ ಆಲೋಚಿಸ ತೊಡಗಿತು. ಏಕೆಂದರೆ ಹಣಕಾಸಿನ ದುಸ್ಥಿತಿ ಹಾಗೂ ಸೀಮಿತ ಅಧಿಕಾರಗಳಿಂದ
ಪಂಚಾಯತ್ ರಾಜ್ಯ ವ್ಯವಸ್ಥೆಯ ಎಲ್ಲ ಸಂಸ್ಥೆಗಳೂ ನಿಷ್ಕ್ರಿಯವಾಗಿದ್ದವು. ಪಂಡಿತ ಜವಾಹರಲಾಲ್ ನೆಹರೂರವರ
ನಿಧನದ ನಂತರ ಮುಂದಿನ ಪ್ರಧಾನಿಗಳು ಪಂಚಾಯತ್ ರಾಜ್ಯದ ಬಗೆಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಲಿಲ್ಲ.
ಇಂಥ ಪರಿಸ್ಥಿತಿಯಲ್ಲಿ (1977) ಭಾರತ ಸರ್ಕಾರವು ಅಶೋಕ್ ಮೆಹತಾ ಸಮಿತಿಯನ್ನು ನೇಮಕ ಮಾಡಿತು.
1978ರಲ್ಲಿ ಅಶೋಕ್ ಮೆಹತಾ ಸಮಿತಿಯು ತನ್ನ ಹಲವಾರು ಶಿಫಾರಸ್ಸುಗಳನ್ನೊಳಗೊಂಡ ಸುದೀರ್ಘವಾದ ವರದಿಯನ್ನು
ಭಾರತ ಸರ್ಕಾರಕ್ಕೆ ಒಪ್ಪಿಸಿತು. 1979ರಲ್ಲಿ ಸೇರಿದ
ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಸಮಿತಿಯು ಶಿಫಾರಸ್ಸುಗಳನ್ನು ಅಂಗೀಕರಿಸಲಾಯಿತು. ಈ ಸಮಿತಿಯು ಮಂಡಲ
ಪಂಚಾಯಿತಿ ಮತ್ತು ಜಿಲ್ಲಾ ಪರಿಷತ್ ಗಳೆಂಬ ದ್ವಿಪಂಕ್ತಿಯ ಆಡಳಿತ ವ್ಯವಸ್ಥೆಯಿರಬೇಕೆಂದು ಸಲಹೆ ಮಾಡಿತು.
ಅಶೋಕ್ ಮೆಹತಾ ಸಮಿತಿಯ ವರದಿಯಲ್ಲಿ ಉಲ್ಲೇಖವಾಗಿರುವಂತೆ ಜಿಲ್ಲಾಮಟ್ಟದಲ್ಲಿ
ಜಿಲ್ಲಾ ಪರಿಷತ್ ಮತ್ತು ಗ್ರಾಮಗಳ ಮಟ್ಟದಲ್ಲಿ ಮಂಡಲ ಪಂಚಾಯಿತಿಗಳು ಅಸ್ತಿತ್ವದಲ್ಲಿರಬೇಕು. ತಾಲೂಕಾ
ಮಟ್ಟದ ಪಂಚಾಯಿತಿ ಸಮಿತಿ ಮತ್ತು ಗ್ರಾಮ ಮಟ್ಟದ ಗ್ರಾಮ ಸಮಿತಿ ಹಾಗೂ ಮಂಡಲ ಪಂಚಾಯಿತಿ ಅಸ್ತಿತ್ವದಲ್ಲಿ
ಬರುವವರೆಗೂ ಮೇಲಿನ ಮೂರು ಹಂತಗಳು ಅಂದರೆ ಗ್ರಾಮ ಪಂಚಾಯಿತಿ (ಗ್ರಾಮ ಸಮಿತಿ) ಪಂಚಾಯತ್ ಸಮಿತಿ ಮತ್ತು
ಜಿಲ್ಲಾ ಪರಿಷತ್ತುಗಳು ಮುಂದುವರಿಯುವುದು ಅನಿವಾರ್ಯವಾಗುತ್ತದೆ. ಹದಿನೈದರಿಂದ ಇಪ್ಪತ್ತು ಸಾವಿರ ಜನಸಂಖ್ಯೆಯನ್ನೊಳಗೊಂಡ
ಮಂಡಲ ಪಂಚಾಯಿತಿಯು ಅಸ್ತಿತ್ವದಲ್ಲಿರಬೇಕೆಂಬುದು ಅಶೋಕ್ ಮೆಹತಾ ಸಮಿತಿಯ ಒಂದು ವೈಶಿಷ್ಟ್ಯ ಪೂರ್ಣವಾದ
ಸಲಹೆಯಾಗಿರುತ್ತದೆ. ಜನರ ಅವಶ್ಯಕತೆಗಳನ್ನು ಮತ್ತು ಆಶೋತ್ತರಗಳನ್ನು ಪೂರೈಸುವಲ್ಲಿ
ಆಡಳಿತ ವ್ಯವಸ್ಥೆಯ ಕೆಳ ಹಂತದಲ್ಲಿರುವ ಮಂಡಲ ಪಂಚಾಯಿತಿಯು ಮಹತ್ವದ ಪಾತ್ರವನ್ನು ನಿರ್ವಹಿಸಬಲ್ಲದೆಂಬುದು
ಅಶೋಕ್ ಮೆಹತಾರ ಅಭಿಪ್ರಾಯವಾಗಿರುತ್ತದೆ.
ಅಶೋಕ್ ಮೆಹತಾ ಸಮಿತಿಯ ದ್ವಿಪಂಕ್ತಿಯ ಆಡಳಿತ ವ್ಯವಸ್ಥೆಯು ಕರ್ನಾಟಕ, ಮಹಾರಾಷ್ಟ್ರ,
ಗುಜರಾತ ಮುಂತಾದ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವುದನ್ನು ಕಾಣುತ್ತೇವೆ. ಪಂಚಾಯತ್ ಸಮಿತಿಗಳನ್ನು
ಜಿಲ್ಲಾ ಪರಿಷತ್ ನ ಕ್ಷೇತ್ರ ಮಟ್ಟದ ಸಮಿತಿ (Block Level Committee) ಗಳನ್ನಾಗಿ ಪರಿವರ್ತನೆ ಮಾಡಬೇಕೆಂಬುದು
ಸಮಿತಿಯ ಮುಖ್ಯ ಸಲಹೆಯಾಗಿದ್ದಿತು. ಅವುಗಳನ್ನೇ ಮಂಡಲ ಪಂಚಾಯಿತಿಗಳೆಂದು
ಕರೆಯಲಾಗುತ್ತದೆ. ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ಪುನರ್ರಚನೆ ಮಾಡುವ ಸಲುವಾಗಿ ಎಲ್ಲ ರಾಜ್ಯಗಳಲ್ಲಿಯೂ
ಪಂಚಾಯತ್ ರಾಜ್ಯ ಮಂತ್ರಿಗಳಿರಬೇಕೆಂದು ಸಮಿತಿ ಶಿಫಾರಸ್ಸು ಮಾಡಿರುತ್ತದೆ. ಈ ವಿಭಾಗವು ಪಂಚಾಯತ್ ರಾಜ್ಯ
ಶಾಸನಗಳ ಚುನಾವಣೆ ಮತ್ತು ಇತರ ಕಾರ್ಯ ಚಟುವಟಿಕೆಗಳನ್ನು ಪರಿಶೀಲನೆ ಮಾಡಿ ಸರ್ಕಾರಕ್ಕೆ ಮೇಲಿಂದ ಮೇಲೆ ವರದಿಯನ್ನು ಸಲ್ಲಿಸುತ್ತಿರಬೇಕು. ರಾಜ್ಯ ಸರ್ಕಾರವು
ಪಂಚಾಯತ್ ರಾಜ್ಯದ ಕಾರ್ಯ ಪರಿಶೀಲನೆಗಾಗಿ ಮೇಲಿಂದ ಮೇಲೆ ತನಿಖೆ ಮಾಡುತ್ತಲಿರಬೇಕು. ಪಂಚಾಯತ್ ರಾಜ್ಯ
ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ಮುಕ್ತ ಅವಕಾಶವಿರಬೇಕೆಂದು ಅಶೋಕ್ ಮೆಹತಾ ಸಮಿತಿಯು ಶಿಪಾರಸ್ಸು
ಮಾಡಿರುತ್ತದೆ. ರಾಜಕೀಯ ಪಕ್ಷಗಳಿಂದ ಗ್ರಾಮೀಣ ಸಮುದಾಯಗಳು ರಾಜಕೀಯವಾಗಿ ಹೆಚ್ಚು ಸಕ್ರೀಯವಾಗಬಲ್ಲವು.
ರಾಜಕೀಯ ಪಕ್ಷಗಳ ಸಹಾಯದಿಂದ ಜನರು ಗ್ರಾಮದ ಆಡಳಿತದಲ್ಲಿ ಪ್ರವೇಶ ಮಾಡುವುದನ್ನು ಕಲಿತುಕೊಳ್ಳಲು ಸಾಧ್ಯವಾಗುತ್ತದೆ.
ಪಂಚಾಯತ್ ರಾಜ್ಯ ವ್ಯವಸ್ಥೆಯ ಸಾಧನೆಗಳ ಬಗೆಗೆ ಅಶೋಕ್ ಮೆಹತಾ ಸಮಿತಿಯು ''ರಾಜಕೀಯವಾಗಿ
ಸಾಮಾನ್ಯ ವ್ಯಕ್ತಿಯಲ್ಲಿಯೂ ತನ್ನ ಹಕ್ಕು ಮತ್ತು ಕರ್ತವ್ಯಗಳ ಬಗೆಗೆ ತಿಳುವಳಿಕೆಯನ್ನು ಬೆಳೆಸಲು ಪಂಚಾಯತ್
ರಾಜ್ಯ ವ್ಯವಸ್ಥೆಯು ಪ್ರಯತ್ನಿಸಿರುತ್ತದೆ. ಆಡಳಿತದ ದೃಷ್ಟಿಯಿಂದ ಜನರ ಮತ್ತು ಅಧಿಕಾರಿಶಾಹಿ ವರ್ಗದ
ಮಧ್ಯದಲ್ಲಿ ಈ ವ್ಯವಸ್ಥೆಯು ಸೇತುವೆಯಂತೆ ಕಂಡುಬರುತ್ತದೆ. ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಹೇಳುವುದಾದರೆ
ಪಂಚಾಯತ್ ರಾಜ್ಯ ವ್ಯವಸ್ಥೆಯು ಯುವ ಪೀಳಿಗೆಗೆ ನಾಯಕತ್ವದ ತರಬೇತಿಯನ್ನು ನೀಡುವ ಸಂಸ್ಥೆಯಂತೆ ಕಂಡುಬರುತ್ತದೆ.
ಅಂತಿಮವಾಗಿ ಈ ವ್ಯವಸ್ಥೆಯು ಗ್ರಾಮೀಣ ಜನರಲ್ಲಿ ಅಭಿವೃದ್ಧಿಯನ್ನು ಕುರಿತು ಚಿಂತನ ಮಾಡುವ ಮನೋಭಾವನೆಗಳನ್ನು
ಬೆಳೆಸಿರುತ್ತದೆ' ಎಂದು ಅಭಿಪ್ರಾಯ ಪಟ್ಟಿರುತ್ತದೆ.
ಸಮಿತಿಯ ಶಿಫಾರಸಿನ ಪ್ರಕಾರ ಯಾವುದೇ ಕಾರಣದಿಂದ ಸರ್ಕಾರ ಪಂಚಾಯತ್ ರಾಜ್ಯ ಸಂಸ್ಥೆಗಳನ್ನು
ವಜಾ ಮಾಡಲು ಬರಲಾರದು. ಹಾಗೇನಾದರೂ ಮಾಡಬೇಕಾದಲ್ಲಿ ರಾಜ್ಯ ಶಾಸಕಾಂಗದ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ. ಪರಿಶಿಷ್ಟಜಾತಿ, ಜನಾಂಗ ಮತ್ತು ಮಹಿಳೆಯರಿಗಾಗಿ
ಕೆಲವೊಂದು ಪ್ರದೇಶಗಳನ್ನು ಮೀಸಲು ಕ್ಷೇತ್ರಗಳೆಂದು ಪರಿಗಣಿಸಬೇಕು. ಮತ್ತು ಅಲ್ಲಿ ರಾಜಕೀಯ ಪಕ್ಷಗಳ
ತಳಹದಿಯ ಮೇಲೆ ಮತದಾನ ನಡೆಯಬೇಕೆಂದು ಸಮಿತಿ ಸಲಹೆ ಮಾಡಿರುತ್ತದೆ. ಗ್ರಾಮೀಣ ಅಭಿವೃದ್ಧಿಗಾಗಿ ಮೀಸಲಾದ
ಹಣದ ದುರುಪಯೋಗವಾಗದಂತೆ ಅಥವಾ ಅದನ್ನು ಬೇರೆ ವಿಭಾಗಗಳಿಗಾಗಿ ವಿನಿಯೋಗಿಸುವುದನ್ನು ತಡೆಯುವಂತೆ ಮೇಲ್ವಿಚಾರಣೆ
ವಹಿಸಲು ಒಂದು ಜಿಲ್ಲಾ ಮಟ್ಟದ ಘಟಕವಿರಬೇಕೆಂದು ಅಶೋಕ್ ಮೆಹತಾ ಸಮಿತಿಯು ಶಿಫಾರಸ್ಸು ಮಾಡಿರುತ್ತದೆ.
*****
06] ಭಾರತದಲ್ಲಿ
"ಸ್ಥಳೀಯ ಸರ್ಕಾರಗಳು" [73 & 74
ನೇ ತಿದ್ದುಪಡಿ] :
* ಸ್ಥಳೀಯ
ಸರ್ಕಾರ ಎಂದರೆ "ಆಡಳಿತ ನಡೆಸಲು ಸ್ಥಳೀಯ ಜನರಿಂದ ಆಯ್ಕೆಯಾದ ಮುಖಂಡರ ಗುಂಪು"
* ಋಗ್ವೇದದಲ್ಲಿ "ಸಭಾ & ಸಮಿತಿ' ಎಂಬ ಸ್ಥಳೀಯ ಸರ್ಕಾರಗಳ
ಉಲ್ಲೇಖವಿದೆ. ಇವುಗಳನ್ನು "ಪ್ರಜಾಪತಿಯ ಅವಳಿ ಮಕ್ಕಳು" ಎಂದು ಕರೆಯಲಾಗಿದೆ.
* ಚೋಳರ
ಆಡಳಿತ ಅವಧಿಯನ್ನು ಸ್ಥಳೀಯ ಸ್ವಯಂ ಆಡಳಿತದ ಸುವರ್ಣಯುಗ' ಎಂದು ಕರೆಯಲಾಗಿದೆ.
* ಗ್ರಾಮಾಡಳಿತದ
ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಭಾರತದ ಏಕೈಕ ಶಾಸನ: ಉತ್ತರ
ಮೇರೂರು ಶಾಸನ [1ನೇ ಪರಾಂತಕ ಚೋಳ).
* 1688ರಲ್ಲಿ
ಮೊದಲ ಬಾರಿಗೆ 'ಮದ್ರಾಸ್ ಮುನ್ಸಿಪಲ್ ಕಾರ್ಪೊರೇಶನ್ ಸ್ಥಾಪನೆಯಾಯಿತು.
* 1776ರಲ್ಲಿ
"ಮುಂಬೈ & ಕಲ್ಕತ್ತಾಗಳಲ್ಲಿ ಮುನ್ಸಿಪಲ್
ಕಾರ್ಪೊರೇಷನ್‌ಗಳು ಸ್ಥಾಪನೆಯಾದವು.
* ಲಾರ್ಡ್
ರಿಪ್ಪನ್ ಸ್ಥಳೀಯ ಆಡಳಿತ ಸಂಸ್ಥೆಗಳ ಸ್ಥಾಪನೆಗೆ ಅವಕಾಶ ನೀಡಿದನು.
* ಲಾರ್ಡ್
ರಿಪ್ಪನರನ್ನು "ಭಾರತದ ಸ್ಥಳೀಯ ಸಂಸ್ಥೆಗಳ ಪಿತಾಮಹ" ಎಂದು ಕರೆಯುವರು.
* ಮಹಾತ್ಮ
ಗಾಂಧೀಜಿಯವರು ಮೊದಲ ಬಾರಿಗೆ ಗ್ರಾಮ
ಸ್ವರಾಜ್' ಎಂಬ ಪದವನ್ನು ಬಳಸಿದರು.
* ಸಂವಿಧಾನದ
4ನೇ ಭಾಗದಲ್ಲಿನ" ರಾಜ್ಯ ನಿರ್ದೇಶಕ ತತ್ವಗಳ 40ನೇ ವಿಧಿಯು” ಪಂಚಾಯತ್ ರಾಜ್ ಸಂಸ್ಥೆಗಳ ಸ್ಥಾಪನೆಗೆ
ಅವಕಾಶ ಕಲ್ಪಿಸಿದೆ.
01] ಭಾರತದಲ್ಲಿ
ಪಂಚಾಯತ್ ರಾಜ್ ವಿಕಾಸಕ್ಕೆ ಸಂಬಂಧಿಸಿದ
ಪ್ರಮುಖ ಸಮಿತಿಗಳು :
1]ಬಲವಂತರಾಯ್
ಮೆಹ್ತಾ ಸಮಿತಿ - 1957
: “3 ಹಂತದ ಪಂಚಾಯತಿಗಳ ರಚನೆಗೆ ಶಿಫಾರಸ್ಸು ಮಾಡಿತು.
2] ಕೆ.
ಸಂತಾನಮ್ ಸಮಿತಿ - 1963 : ಪಂಚಾಯಿತಿಗಳಿಗೆ ಹಣಕಾಸು ಸಹಕಾರ ನೀಡುವುದು.
3], ಅಶೋಕ
ಮೆಹ್ತಾ ಸಮಿತಿ - 1977 : "2 ಹಂತದ ಪಂಚಾಯಿತಿಗಳ ರಚನೆಗೆ
ಶಿಫಾರಸ್ಸು ಮಾಡಿತು.
4] ಜಿ.ವಿ.ಕೆ.ರಾವ್
ಸಮಿತಿ - 1985 : ಪಂಚಾಯತ್ ರಾಜ್ ವ್ಯವಸ್ಥೆ ದುರ್ಬಲ
ಗೊಂಡಿರುವುದನ್ನು
"gross without root" ಎಂದು
ಪ್ರಸ್ತಾಪಿಸಿತು.
5] ಎಲ್.ಎಮ್. ಸಿಂಗ್ವಿಸಮಿತಿ - 1986 : 3 ಹಂತದ ಪಂಚಾಯಿತಿಗಳ
ರಚನೆಗೆ ಶಿಫಾರಸು ಮಾಡಿತು.
6], ಪಿ.ಕೆ. ತುಂಗನ್ ಸಮಿತಿ
- 1988 : ಪಂಚಾಯತ್ ರಾಜ್ ಸಂಸ್ಥೆಗಳಿಗೆ 'ಸಂವಿಧಾನಾತ್ಮಕ
ಸ್ಥಾನಮಾನ ನೀಡಿತು.
7] ಗಾಡ್ಗೀಲ್
ಸಮಿತಿ - 1989 : ಪಂಚಾಯಿತಿಗಳಲ್ಲಿ "SC, ST,
OBC & ಮಹಿಳೆಯರಿಗೆ ಮೀಸಲಾತಿ ನೀಡಲು ಶಿಫಾರಸ್ಸು ಮಾಡಿತು.
02] ಕರ್ನಾಟಕದಲ್ಲಿ
ಪಂಚಾಯತ್ ರಾಜ್ ವಿಕಾಸಕ್ಕೆ ಸಂಬಂಧಿಸಿದ
ಪ್ರಮುಖ ಸಮಿತಿಗಳು :
1] ವೆಂಕಟಪ್ಪ
ಸಮಿತಿ - 1949 : 2 ಹಂತದ ಪಂಚಾಯಿತಿಗಳ ರಚನೆಗೆ
ಶಿಫಾರಸ್ಸು ಮಾಡಿತು.
2] ಚಂದ್ರಶೇಖರಯ್ಯ
ಸಮಿತಿ - 1977 : '3 ಹಂತದ ಪಂಚಾಯಿತಿಗಳ ರಚನೆಗೆ
ಶಿಫಾರಸ್ಸು ಮಾಡಿತು.
3] ಕೊಂಡಜ್ಜಿ
ಬಸಪ್ಪ ಸಮಿತಿ - 1962
: "ಬ್ಲಾಕ್ ಮಟ್ಟದ ಯೋಜನೆಗೆ ಶಿಫಾರಸ್ಸು ಮಾಡಿತು.
4] ಹನುಮಂತರಾವ್
ಸಮಿತಿ - 1984 : ನ್ಯಾಯಾ ಪಂಚಾಯಿತಿ ರಚನೆಗೆ ಶಿಫಾರಸ್ಸು ಮಾಡಿತು.
5] ಎಸ್.
ಜಿ. ನಂಜಯ್ಯ ಮಠ - 2014 : ಹೊಸದಾಗಿ 439 ಹಂತದ ಗ್ರಾಮ ಪಂಚಾಯಿತಿಗಳ
ಸ್ಥಾಪನೆ" ಮತ್ತು 50 ಗ್ರಾ.ಪಂ.ಗಳನ್ನು
ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೆರಿಸಲು ಶಿಫಾರಸ್ಸು ಮಾಡಿತು.
6] ಲಮೇಶ
ಕುಮಾರ ಸಮಿತಿ - 2015 : "ಗ್ರಾಮ ಸ್ವರಾಜ್" ಪರಿಕಲ್ಪನೆಗೆ ಹೆಚ್ಚು ಆದ್ಯತೆ ನೀಡಿತು.
* ಭಾರತದಲ್ಲಿ
ಮೊದಲ ಬಾರಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಳವಡಿಸಿಕೊಂಡ
ರಾಜ್ಯ : ರಾಜಸ್ತಾನ [ಅಕ್ಟೋಬರ್ - 2, 1959]
* ಭಾರತದಲ್ಲಿ
'ಬಲವಂತರಾಯ್ ಮೆಹತಾ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸಿದ ಮೊದಲ ರಾಜ್ಯ : ರಾಜಸ್ತಾನ
* ಪಂಚಾಯಿತಿಗಳ
ಚುನಾವಣೆಯಲ್ಲಿ "Sc,
St, OBC" ಅವರಿಗೆ ಮೀಸಲಾತಿಯನ್ನು ನೀಡಿದ ಮೊದಲ ರಾಜ್ಯ : ಕರ್ನಾಟಕ
73ನೇ ಸಂವಿಧಾನ ತಿದ್ದುಪಡಿ ಕಾಯ್ದೆ - 1993
* ಲೋಕಸಭೆಯಲ್ಲಿ
ಅಂಗೀಕಾರ : ಡಿಸೆಂಬರ್ 22, 1992
* ರಾಜ್ಯಸಭೆಯಲ್ಲಿ
ಅಂಗೀಕಾರ : ಡಿಸೆಂಬರ್ 23, 1992
* ರಾಷ್ಟ್ರಪತಿಗಳಿಂದ
ಒಪ್ಪಿಗೆ ಪಡೆದಿದ್ದು : ಜನವರಿ 20, 1993
* ಈ
ಕಾಯ್ದೆಗೆ ಅನುಮೋದನೆ ನೀಡಿದ ರಾಷ್ಟ್ರಪತಿ : ಡಾ. ಶಂಕರ್ ದಯಾಳ್
ಶರ್ಮಾ
* ಈ
ಸಂದರ್ಭದಲ್ಲಿ ಪ್ರಧಾನ ಮಂತ್ರಿಯಾಗಿದ್ದವರು: ಪಿ.ವಿ. ನರಸಿಂಹ
ರಾವ್
* 73 ನೇ
ತಿದ್ದುಪಡಿ ದೇಶದಾದ್ಯಂತ ಜಾರಿಗೆ ಬಂದ ದಿನಾಂಕ : ಏಪ್ರಿಲ್
24, 1993
* 73 ನೇ
ತಿದ್ದುಪಡಿಯ ಮೂಲಕ ಸಂವಿಧಾನಕ್ಕೆ '9ನೇ
ಭಾಗ & 11ನೇ ಅನುಸೂಚಿಯನ್ನು ಸೇರಿಸಲಾಯಿತು.
* ಸಂವಿಧಾನದ
9 ನೇ ಭಾಗದಲ್ಲಿ 243 ರಿಂದ 243(o)" ವರೆಗಿನ ವಿಧಿಗಳು ಕಂಡುಬರುತ್ತದೆ.
* ಈ
ಕಾಯ್ದೆಯು 8 ರಾಜ್ಯಗಳ ಬುಡಕಟ್ಟು ಪ್ರದೇಶಗಳಿಗೆ ವಿಸ್ತರಿಸಿದ್ದು : ಡಿಸೆಂಬರ್ 24, 1996.
* ಈ
ಕಾಯ್ದೆಯು 'ದೆಹಲಿ, ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯ” ಗಳನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಜಾರಿಯಲ್ಲಿದೆ.
* ಕಾಯ್ದೆಯು
ದೇಶದ ಎಲ್ಲ ರಾಜ್ಯಗಳ ಪಂಚಾಯಿತಿಗಳಲ್ಲಿ
ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ
ಕಲ್ಪಿಸಿದೆ.
* ಕೇಂದ್ರ
ಸರಕಾರ ''110ನೇ ತಿದ್ದುಪಡಿ ಮಸೂದೆ"
ಮೂಲಕ "ಅಗಸ್ಟ್ 27, 2007" ರಂದು ಮಹಿಳೆಯರಿಗೆ ಶೇ.50
ರಷ್ಟು ಮೀಸಲಾತಿ ಕಲ್ಪಿಸಿದೆ.
* ಈ
ಕಾಯಿದೆ ದೇಶಾದ್ಯಂತ ''3 ಹಂತದ" ಏಕರೂಪದ ಪಂಚಾಯಿತಿ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
* ಈ
ಕಾಯ್ದೆಯು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ನಿಗದಿ ಮಾಡಿದೆ.
* 73ನೇ
ತಿದ್ದುಪಡಿ ಕಾಯಿದೆಯು ಕರ್ನಾಟಕದಲ್ಲಿ ಜಾರಿಗೆ ಬಂದ ದಿನ : ಮೇ
10, 1993
* ಈ
ಕಾಯ್ದೆಗೆ ಅನುಮೋದನೆ ನೀಡಿದ ಕರ್ನಾಟಕದ ರಾಜ್ಯಪಾಲರು: ಖುರ್ಷಿದ್ ಆಲಂಖಾನ್
* ಈ
ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು : ಎಂ. ವೀರಪ್ಪ ಮೊಯ್ಲಿ
* ಈ
ಕಾಯ್ದೆಯು ಪ್ರಸ್ತುತ ಕರ್ನಾಟಕದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ - 1993" ಎಂಬ
ಹೆಸರಿನಲ್ಲಿ ಜಾರಿಯಲ್ಲಿದೆ.
* 1993ರ
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮವು 18 ಅಧ್ಯಾಯಗಳು,
4 ಅನುಸೂಚಿಗಳು, 321 ಪ್ರಕರಣಗಳನ್ನು" ಒಳಗೊಂಡಿತ್ತು.
* ಪ್ರಸ್ಥುತ
2015ರ ಕರ್ನಾಟಕ ಗ್ರಾಮ್ ಸ್ವರಾಜ್ & ಪಂಚಾಯತ್ ರಾಜ್ ಅಧಿನಿಯಮವು 19 ಅಧ್ಯಾಯಗಳು,
4 ಅನುಸೂಚಿಗಳು, 387 ಪ್ರಕರಣಗಳನ್ನು ಒಳಗೊಂಡಿದೆ.
* ಕರ್ನಾಟಕದಲ್ಲಿ
ಜಾರಿಯಲ್ಲಿರುವ 3 ಹಂತದ ಪಂಚಾಯಿತಿಗಳು :
ಅ. ಗ್ರಾಮ ಪಂಚಾಯತಿ
ಆ. – ತಾಲ್ಲೂಕು
ಪಂಚಾಯತಿ
ಇ. – ಜಿಲ್ಲಾ
ಪಂಚಾಯತಿ
01]. ಗ್ರಾಮ
ಪಂಚಾಯತಿಗಳ ರಚನೆ [ಪ್ರಕರಣ - 5] :
* ಹೊಸ
ಗ್ರಾಮ ಪಂಚಾಯಿತಿಯನ್ನು ರಚಿಸುವ ಅಧಿಕಾರ ಜಿಲ್ಲಾಧಿಕಾರಿಗಳು" ಹೊಂದಿದ್ದಾರೆ.
* "5000 - 7000 ಜನಸಂಖ್ಯೆಗೆ
ಒಂದು ಗ್ರಾಮ ಪಂಚಾಯಿತಿ ರಚನೆಯಾಗುತ್ತದೆ.
* ಮಲೆನಾಡು
ಪ್ರದೇಶಗಳಲ್ಲಿ
"2500 ಜನಸಂಖ್ಯೆಗೆ"
ಒಂದು ಗ್ರಾಮ ಪಂಚಾಯಿತಿ ರಚನೆ
* ಪ್ರತಿ
400 ಮತದಾರರಿಗೆ" ಒಬ್ಬ ಗ್ರಾಮ ಪಂಚಾಯಿತಿ
ಸದಸ್ಯರು ಆಯ್ಕೆಯಾಗುತ್ತಾರೆ.
* ಗ್ರಾಮ
ಪಂಚಾಯಿತಿ ಸದಸ್ಯರು ಕಡ್ಡಾಯವಾಗಿ ತಮ್ಮ ಮನೆಗಳಲ್ಲಿ "ಶೌಚಾಲಯವನ್ನು"
ಹೊಂದಿರಬೇಕು.
* ಗ್ರಾಮ
ಪಂಚಾಯಿತಿಗೆ ಸ್ಪರ್ಧಿಸಲು ಕನಿಷ್ಠ ವಯಸ್ಸು : 21 ವರ್ಷ
* ಗ್ರಾಮ
ಪಂಚಾಯತಿ ಸದಸ್ಯರ ಅಧಿಕಾರಾವಧಿ : 5 ವರ್ಷ
* ಗ್ರಾಮ
ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುವವರು : ಗ್ರಾ.ಪಂ. ಸದಸ್ಯರು
* ಗ್ರಾಮ
ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ" ಅಧಿಕಾರಾವಧಿ : 30 ತಿಂಗಳು
* ಗ್ರಾಮ
ಪಂಚಾಯತಿ ಅಧ್ಯಕ್ಷನು ಯಾರಿಗೆ ರಾಜೀನಾಮೆ ಸಲ್ಲಿಸುತ್ತಾನೆ : ಸಹಾಯಕ ಆಯುಕ್ತರು [AC]
* ಗ್ರಾಮ
ಪಂಚಾಯತಿ ಉಪಾಧ್ಯಕ್ಷನು ಯಾರಿಗೆ ರಾಜೀನಾಮೆ ನೀಡುತ್ತಾನೆ : ಗ್ರಾ.ಪಂ. ಅಧ್ಯಕ್ಷನಿಗೆ,
* ಗ್ರಾಮ
ಸ್ವರಾಜ್ಯದ ಪ್ರಮುಖ ಘಟಕಗಳು :
ಅ. ಜನವಸತಿ
ಸಭೆ : 6 ತಿಂಗಳಿಗೋಮ್ಮೆ
ಆ. ವಾರ್ಡ್
ಸಭೆ : 6 ತಿಂಗಳಿಗೊಮ್ಮೆ
ಇ. - ಗ್ರಾಮ ಸಭೆ : 6 ತಿಂಗಳಿಗೋಮ್ಮೆ
ಜನವಸತಿ ಸಭೆ ಮತ್ತು ವಾರ್ಡ್
ಸಭೆಯ ಕೋರಂ : ಕನಿಷ್ಠ 1/5 ಮತದಾರರು,
ಗ್ರಾಮಸಭೆಯ ಕೋರಂ : ಕನಿಷ್ಠ 1/10 ಮತದಾರರು ಅಥವಾ 100 ಮತದಾರರು.
* ಗ್ರಾಮ
ಪಂಚಾಯತಿಯ ''3 ಸ್ಥಾಯಿ ಸಮಿತಿಗಳು & ಮುಖ್ಯಸ್ತರು" [61ನೇ ವಿಧಿ] :
1]. ಸಾಮಾನ್ಯ
ಸ್ಥಾಯಿ ಸಮಿತಿ : ಗ್ರಾ.ಪಂ. ಉಪಾಧ್ಯಕ್ಷ
2]. ಹಣಕಾಸು
ಲೆಕ್ಕ ಪರಿಶೋಧನಾ ಸಮಿತಿ : ಗ್ರಾ.ಪಂ. ಅಧ್ಯಕ್ಷ
3]. ಸಾಮಾಜಿಕ
ನ್ಯಾಯಾ ಸಮಿತಿ : SC & ST ಸದಸ್ಯರಲ್ಲಿ ಒಬ್ಬರು
02]. ತಾಲ್ಲೂಕು
ಪಂಚಾಯತಿ ರಚನೆ [ಪ್ರಕರಣ - 120] :
* ಪ್ರತಿ
ತಾಲ್ಲೂಕಿಗೊಂದು
""ತಾಲ್ಲೂಕು ಪಂಚಾಯತಿ ರಚನೆ.
*12,500 - 15,000 ಜನಸಂಖ್ಯೆಗೆ
ಒಬ್ಬ ಚುನಾಯಿತ ಪ್ರತಿನಿಧಿ ಆಯ್ಕೆ
* ತಾಲ್ಲೂಕು
ಪಂಚಾಯತಿಗೆ ಸ್ಪರ್ಧಿಸಲು ಕನಿಷ್ಠ ವಯಸ್ಸು : 21 ವರ್ಷ.
* ತಾಲ್ಲೂಕು
ಪಂಚಾಯತಿ ಸದಸ್ಯರ ಅಧಿಕಾರಾವಧಿ : 5 ವರ್ಷ
* ತಾಲ್ಲೂಕು
ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುವವರು : ತಾ.ಪಂ. ಸದಸ್ಯರು
* ತಾಲ್ಲೂಕು
ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ" ಅಧಿಕಾರಾವಧಿ : 5 ವರ್ಷ
* ತಾಲ್ಲೂಕು
ಪಂಚಾಯತಿ ಅಧ್ಯಕ್ಷನು ಯಾರಿಗೆ ರಾಜೀನಾಮೆ ಸಲ್ಲಿಸುತ್ತಾನೆ : ಜಿಲ್ಲಾಧಿಕಾರಿಗೆ [DC]
* ತಾಲ್ಲೂಕು
ಪಂಚಾಯತಿ ಉಪಾಧ್ಯಕ್ಷನು ಯಾರಿಗೆ ರಾಜೀನಾಮೆ ನೀಡುತ್ತಾನೆ : ತಾ.ಪಂ. ಅಧ್ಯಕ್ಷನಿಗೆ
* 2 ತಿಂಗಳಲ್ಲಿ"
ಒಂದು ಬಾರಿ " ತಾಲ್ಲೂಕು ಪಂಚಾಯತಿಯ ಸಾಮಾನ್ಯ ಸಭೆ" ನಡೆಯಬೇಕು.
* ತಾ.ಪಂ.ಸಾಮಾನ್ಯ ಸಭೆಯ
ಕೋರಂ : ಒಟ್ಟು ಸದಸ್ಯರ 1/2 ಭಾಗ
* ತಾಲ್ಲೂಕು
ಪಂಚಾಯತಿಯ 3 ಸ್ಥಾಯಿ ಸಮಿತಿಗಳು & ಮುಖ್ಯಸ್ತರು" [148ನೇ ವಿಧಿ] :
1]. ಸಾಮಾನ್ಯ
ಸ್ಥಾಯಿ ಸಮಿತಿ : ತಾ.ಪಂ. ಉಪಾಧ್ಯಕ್ಷ
2]. ಹಣಕಾಸು
ಲೆಕ್ಕ ಪರಿಶೋಧನಾ ಸಮಿತಿ : ತಾ.ಪಂ. ಅಧ್ಯಕ್ಷ
3]. ಸಾಮಾಜಿಕ
ನ್ಯಾಯಾ ಸಮಿತಿ : ತಾ.ಪಂ. ಸದಸ್ಯರಲ್ಲಿ
ಒಬ್ಬರು.
03]. ಜಿಲ್ಲಾ
ಪಂಚಾಯತಿ ರಚನೆ [ಪ್ರಕರಣ - 159] :
* ಪ್ರತಿ
ಜಿಲ್ಲೆಗೊಂದು ಜಿಲ್ಲಾ ಪಂಚಾಯತಿ" ರಚನೆ.
* "35,500 ರಿಂದ
45,000 ಜನಸಂಖ್ಯೆಗೆ ಒಬ್ಬ ಜಿಲ್ಲಾ ಪಂಚಾಯತಿ
ಸದಸ್ಯನ ಆಯ್ಕೆ
* ಉತ್ತರ
ಕನ್ನಡ & ಚಿಕ್ಕಮಗಳೂರು ಜಿಲ್ಲೆಗಳಲ್ಲಿ 30,000 ಜನಸಂಖ್ಯೆಗೆ ಒಬ್ಬ ಜಿಲ್ಲಾ ಪಂಚಾಯತಿ
ಸದಸ್ಯನ ಆಯ್ಕೆ.
* ಬೆಂಗಳೂರು
ನಗರ ಜಿಲ್ಲೆಯಲ್ಲಿ 120,000 ಜನಸಂಖ್ಯೆಗೆ ಒಬ್ಬ ಜಿಲ್ಲಾ ಪಂಚಾಯತಿ
ಸದಸ್ಯನ ಆಯ್ಕೆ
* ಕೊಡಗು
ಜಿಲ್ಲೆಯಲ್ಲಿ 18,000 ಜನಸಂಖ್ಯೆಗೆ" ಒಬ್ಬ ಜಿಲ್ಲಾ ಪಂಚಾಯತಿ
ಸದಸ್ಯನ ಆಯ್ಕೆ
* ಜಿಲ್ಲಾ
ಪಂಚಾಯತಿಗೆ ಸ್ಪರ್ಧಿಸಲು ಕನಿಷ್ಠ ವಯಸ್ಸು : 21 ವರ್ಷ.
* ಜಿಲ್ಲಾ
ಪಂಚಾಯತಿ ಸದಸ್ಯರ ಅಧಿಕಾರಾವಧಿ : 5 ವರ್ಷ
* ಜಿಲ್ಲಾ
ಪಂಚಾಯತಿ ಅಧ್ಯಕ್ಷರು" ಮತ್ತು "ಉಪಾಧ್ಯಕ್ಷರನ್ನು ಆಯ್ಕೆ ಮಾಡುವವರು : ಜಿ.ಪಂ. ಸದಸ್ಯರು
* ಜಿಲ್ಲಾ
ಪಂಚಾಯತಿ ಅಧ್ಯಕ್ಷ" ಮತ್ತು "ಉಪಾಧ್ಯಕ್ಷರ" ಅಧಿಕಾರಾವಧಿ : 5 ವರ್ಷ
* ಜಿಲ್ಲಾ
ಪಂಚಾಯತಿ ಅಧ್ಯಕ್ಷನು ಯಾರಿಗೆ ರಾಜೀನಾಮೆ ಸಲ್ಲಿಸುತ್ತಾನೆ : ರಾಜ್ಯ ಸರಕಾರಕ್ಕೆ (RDPR ಇಲಾಖೆಯ ಕಾರ್ಯದರ್ಶಿಗೆ]
*****
Comments
Post a Comment