ಅಧ್ಯಾಯ-1. 18ನೆ ಶತಮಾನದ ಮಧ್ಯಭಾಗದಲ್ಲಿ ಭಾರತದ ಆರ್ಥಿಕತೆ. ವಾಣಿಜ್ಯ ನೀತಿಗಳು -ಮುಕ್ತ ವ್ಯಾಪಾರ ನೀತಿ ಮತ್ತು ಭಾರತೀಯ ವ್ಯಾಪಾರ.
VI. ಆರ್ಥಿಕತೆ:-
18 ನೇ ಶತಮಾನದ ಭಾರತವು
ಆರ್ಥಿಕ ಪ್ರಗತಿಯನ್ನು ಸಾಧಿಸಲು ವಿಫಲವಾಗಿದ್ದು. ಏಕೆಂದರೆ, ಆಡಳಿತಗಾರರ ಅಧಿಕ ಆದಾಯದ ಬೇಡಿಕೆಗಳು, ಅಧಿಕಾರಿಗಳ ದಬ್ಬಾಳಿಕೆ, ಶ್ರೀಮಂತರು ಮತ್ತು ಜಮೀನ್ದಾರರ ದುರಾಸೆ, ಯುದ್ಧಗಳು ಮತ್ತು ದಂಗೆಗಳು 18ನೇ ಶತಮಾನದ ಮಧ್ಯಭಾಗದ
ಜನರ ಜೀವನವನ್ನು ತೀರಾ ಹೇಯವಾಗಿಸಿದ್ದವು.
ಭಾರತವು ಅಂದಿಗೆ
ಆರ್ಥಿಕವಾಗಿ ವೈರುಧ್ಯಗಳ ನಾಡಾಗಿತ್ತು. ಒಂದೆಡೆ, ಐಷಾರಾಮಿ ಸೌಕರ್ಯದಲ್ಲಿ ವಾಸಿಸುವ ಶ್ರೀಮಂತ ಮತ್ತು ಶಕ್ತಿಯುತ ಗಣ್ಯರು ಇದ್ದರು
ಮತ್ತೊಂದೆಡೆ, ಹಿಂದುಳಿದ, ತುಳಿತಕ್ಕೊಳಗಾದ ಮತ್ತು ಬಡ ರೈತರು ಕನಿಷ್ಠಮಟ್ಟದ ಜೀವನ
ನಡೆಸುತ್ತಿದ್ದರು. ಅದೇನೇ ಇದ್ದರೂ, 100 ವರ್ಷಗಳ ಬ್ರಿಟಿಷ್ ಆಳ್ವಿಕೆಯ ನಂತರದ ಜೀವನಕ್ಕಿಂತ ಈ ಕಾಲದ
ಭಾರತೀಯ ಜನಸಾಮಾನ್ಯರ ಜೀವನವು ಉತ್ತಮವಾಗಿತ್ತು
ಅ.
ಆರ್ಥಿಕತೆಯ ಲಕ್ಷಣಗಳು
ಶತಮಾನದ ಆರಂಭದ
ವೇಳೆಗೆ ಮೊಘಲರ ಆಳ್ವಿಕೆಯಲ್ಲಿ
ವಿದೇಶಿ ವ್ಯಾಪಾರವು ಸಾಕಷ್ಟು ಪ್ರಗತಿಯನ್ನು ಸಾಧಿಸಿತ್ತು. ಆದರೆ
ಕೃಷಿಯು ಜನರ ಪ್ರಾಥಮಿಕ ಆದಾಯದ ಮೂಲವಾಗಿತ್ತು. ಆದರೂ
ಆಡಳಿತಗಾರರು ನಿರಂತರವಾಗಿ
ಯುದ್ಧದಲ್ಲಿದ್ದ ಕಾರಣ, ಕೃಷಿ ಸೌಲಭ್ಯಗಳನ್ನು
ಸುಧಾರಿಸಲು ಅವರಿಗೆ ಸಮಯವಿರಲಿಲ್ಲ. ಸಿಖ್ಖರು, ಜಾಟ್ಗಳು ಮತ್ತು
ಮರಾಠರ ದಂಗೆಗಳು ಮತ್ತು ನಾದಿರ್ ಶಾ (1739) ಮತ್ತು ಅಹ್ಮದ್ ಶಾ ಅಬ್ದಾಲಿ (1761) ನಂತಹ
ವಿದೇಶಿ ಆಕ್ರಮಣಗಳು ಆರ್ಥಿಕತೆಗೆ ಹಿನ್ನಡೆಉಂಟು ಮಾಡಿದವು.
ಫ್ರಾನ್ಸ್, ಇಂಗ್ಲೆಂಡ್, ಪೋರ್ಚುಗಲ್
ಮತ್ತು ಸ್ಪೇನ್ನಂತಹ ಯುರೋಪಿಯನ್ ರಾಷ್ಟ್ರಗಳು
ಹದಿನೆಂಟನೇ ಶತಮಾನದ ವೇಳೆಗೆ ಭಾರತದೊಂದಿಗೆ ವ್ಯಾಪಾರ ಮಾಡಲು ಆಸಕ್ತಿ ಹೊಂದಿದ್ದವು. ಅವರು ದೇಶದ ರಾಜಕೀಯ
ಮತ್ತು ಆರ್ಥಿಕ ಅಸ್ಥಿರತೆಗೆ ಕೊಡುಗೆ ನೀಡಿದರೂ ಅಂತಿಮವಾಗಿ ಅದರ ಆರ್ಥಿಕತೆಯನ್ನು ನಾಶಪಡಿಸಿದರು.
ಆದಾಗ್ಯೂ, ಸುಂದರವಾದ
ಕರಕುಶಲ ವಸ್ತುಗಳ ನಾಡು ಎಂಬ ಭಾರತದ
ಖ್ಯಾತಿಯು ಆ ಕಾಲಕ್ಕೆ ಪ್ರಪಂಚದಾದ್ಯಂತ ಹರಡಿತ್ತು.
ಆ. 18 ನೇ ಶತಮಾನದಲ್ಲಿ ವ್ಯಾಪಾರ
ಭಾರತೀಯ
ಗ್ರಾಮಗಳು ಸ್ವಾವಲಂಬಿಯಾಗಿದ್ದು, ಕೆಲವೇ ವಸ್ತುಗಳನ್ನು ಮಾತ್ರ ಆಮದು
ಮಾಡಿಕೊಳ್ಳುತ್ತಿದ್ದವು. ಸಾರಿಗೆ ವ್ಯವಸ್ಥೆಯು ಉತ್ತಮವಾಗಿಲ್ಲದಿದ್ದರೂ ಮೊಘಲರು
ಆಂತರಿಕ ಮತ್ತು ವಿದೇಶಗಳೊಂದಿಗಿನ ವ್ಯಾಪಾರವನ್ನು
ಅಭಿವೃದ್ಧಿಗೊಳಿಸಿದ್ದರು. ಭಾರತವು ಅಂದಿಗೆ
ಕೆಳಗಿನ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು
ಪರ್ಷಿಯನ್
ಗಲ್ಫ್ ಪ್ರದೇಶದಿಂದ ಕಚ್ಚಾ ರೇಷ್ಮೆ, ಉಣ್ಣೆ, ಖರ್ಜೂರ, ಒಣಗಿದ ಹಣ್ಣುಗಳು ಮತ್ತು ರೋಸ್ ವಾಟರ್; ಅರೇಬಿಯಾದಿಂದ
ಕಾಫಿ, ಚಿನ್ನ, ಔಷಧಗಳು ಮತ್ತು ಜೇನುತುಪ್ಪ; ಚೀನಾದಿಂದ ಚಹಾ, ಸಕ್ಕರೆ, ಪಿಂಗಾಣಿ
ಮತ್ತು ರೇಷ್ಮೆ; ಟಿಬೆಟ್ನಿಂದ ಚಿನ್ನ, ಕಸ್ತೂರಿ
ಮತ್ತು ಉಣ್ಣೆಯ ಬಟ್ಟೆ; ಸಿಂಗಾಪುರದಿಂದ ತವರ; ಇಂಡೋನೇಷಿಯನ್ ದ್ವೀಪಗಳಿಂದ
ಮಸಾಲೆಗಳು, ಸುಗಂಧ ದ್ರವ್ಯಗಳು ಮತ್ತು ಸಕ್ಕರೆ; ಆಫ್ರಿಕಾದಿಂದ ದಂತ ಮತ್ತು ಔಷಧಗಳು;
ಮತ್ತು ಯುರೋಪ್ನಿಂದ ಉಣ್ಣೆಯ ಬಟ್ಟೆ,
ತಾಮ್ರ, ಕಬ್ಬಿಣ ಮತ್ತು ಸೀಸದಂತಹ ಲೋಹಗಳು ಮತ್ತು ಕಾಗದ.
ಭಾರತದ
ಪ್ರಮುಖ ರಫ್ತು ವಸ್ತುಗಳಾದ ಹತ್ತಿಬಟ್ಟೆಗಳು ತಮ್ಮ ಶ್ರೇಷ್ಠತೆಗಾಗಿ ಪ್ರಸಿದ್ಧವಾಗಿದ್ದು,
ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆಯನ್ನು ಹೊಂದಿದ್ದವು. ಅಲ್ಲದೇ ರೇಷ್ಮೆ ಬಟ್ಟೆಗಳು, ಇಂಡಿಗೊ,
ಅಫೀಮು, ಅಕ್ಕಿ, ಗೋಧಿ, ಸಕ್ಕರೆ, ಮೆಣಸು ಮತ್ತು ಇತರ ಮಸಾಲೆಗಳು, ಅಮೂಲ್ಯ
ಕಲ್ಲುಗಳು ಮತ್ತು ಔಷಧಗಳನ್ನು ರಫ್ತು ಮಾಡುತ್ತಿತ್ತು.
ಪ್ರಮುಖ
ಜವಳಿ ಉದ್ಯಮ ಕೇಂದ್ರಗಳೆಂದರೆ ಬಂಗಾಳದ ಡಾಕಾ ಮತ್ತು ಮುರ್ಷಿದಾಬಾದ್;
ಬಿಹಾರದ ಪಾಟ್ನಾ;
ಗುಜರಾತ್‌ನ ಸೂರತ್, ಅಹಮದಾಬಾದ್
ಮತ್ತು ಬ್ರೋಚ್; ಮಧ್ಯಪ್ರದೇಶದ ಚಂದೇರಿ; ಮಹಾರಾಷ್ಟ್ರದ ಬುರ್ಹಾನ್ಪುರ; ಉತ್ತರ ಪ್ರದೇಶದ
ಜೌನ್ಪುರ್, ವಾರಣಾಸಿ, ಲಕ್ನೋ ಮತ್ತು ಆಗ್ರಾ; ಪಂಜಾಬ್ನಲ್ಲಿ ಮುಲ್ತಾನ್ ಮತ್ತು ಲಾಹೋರ್; ಆಂಧ್ರದಲ್ಲಿ ಮಚಲಿಪಟ್ಟಣಂ, ಔರಂಗಾಬಾದ್ ಮತ್ತು ವಿಶಾಖಪಟ್ಟಣಂ; ಮೈಸೂರಿನಲ್ಲಿ ಬೆಂಗಳೂರು, ಕೊಯಮತ್ತೂರು ಮತ್ತು ಮಧುರೈ. ಕಾಶ್ಮೀರವು ಉಣ್ಣೆಯ ತಯಾರಿಕೆಯ
ಕೇಂದ್ರವಾಗಿತ್ತು. ಜೊತೆಗೆ ಹಡಗು ನಿರ್ಮಾಣ
ಉದ್ಯಮವು ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಬಂಗಾಳದಲ್ಲಿ ಪ್ರವರ್ಧಮಾನಕ್ಕೆ ಬಂದಿತ್ತು.
18 ನೇ
ಶತಮಾನದುದ್ದಕ್ಕೂ ನಡೆದ ನಿರಂತರ ಯುದ್ಧಗಳು ಮತ್ತು ಕಾನೂನು-ಸುವ್ಯವಸ್ಥೆಯ ಕೊರತೆಯಿಂದಾಗಿ ದೇಶದ ಆಂತರಿಕ ವ್ಯಾಪಾರವು ಕುಸಿಯಿತು ಮತ್ತು ವಿದೇಶಿ ವ್ಯಾಪಾರವು ತೊಂದರೆಗೀಡಾಯಿತು ದರೋಡೆಕೋರರ ಕಾರಣದಿಂದಾಗಿ ವ್ಯಾಪಾರಿ ಮಾರ್ಗಗಳು ಸುರಕ್ಷಿತವಾಗಿರಲಿಲ್ಲ. ಅನೇಕ ಸ್ಥಳೀಯ ಆಡಳಿತ ಕೇಂದ್ರಗಳ ಉದಯದಿಂದಾಗಿ ತೆರಿಗೆ ವಸೂಲಿ
ಮಾಡುವ ಸ್ಥಳಗಳು ಹೆಚ್ಚಾದವು. ಪ್ರತಿಯೊಬ್ಬ
ಆಡಳಿತಗಾರ ಹೆಚ್ಚಿನ ವ್ಯಾಪಾರಿ ಸುಂಕವನ್ನು ವಿಧಿಸುವ
ಮೂಲಕ ತನ್ನ ಆದಾಯವನ್ನು ಹೆಚ್ಚಿಸಲು
ಪ್ರಯತ್ನಿಸಿದನು ಐಷಾರಾಮಿ ವಸ್ತುಗಳ ಅತಿ ದೊಡ್ಡ ಬಳಕೆದಾರರಾಗಿದ್ದ
ಶ್ರೀಮಂತರ ಕುಸಿತದಿಂದಾಗಿ ಆಂತರಿಕ
ವ್ಯಾಪಾರಕ್ಕೂ ಹಾನಿಯಾಯಿತು. ಅನೇಕ ವ್ಯಾಪಾರಿ
ನಗರಗಳು ಮತ್ತು ಕೈಗಾರಿಕಾ ಕೇಂದ್ರಗಳನ್ನು ನಾಶಪಡಿಸಲಾಯಿತು. ಉದಾ: ನಾದಿರ್ ಶಾ
ದೆಹಲಿಯನ್ನು ಲೂಟಿ ಮಾಡಿದ; ಅಹ್ಮದ್ ಷಾ
ಅಬ್ದಾಲಿ ಲಾಹೋರ್, ದೆಹಲಿ ಮತ್ತು ಮಥುರಾವನ್ನು ಲೂಟಿ ಮಾಡಿದನು; ಜಾಟರು ಆಗ್ರಾವನ್ನು
ಲೂಟಿ ಮಾಡಿದರು; ಮರಾಠಾ ಮುಖ್ಯಸ್ಥರು
ಸೂರತ್, ಗುಜರಾತ್ ಮತ್ತು ಡೆಕ್ಕನ್‌ನ ಇತರ ನಗರಗಳನ್ನು
ಲೂಟಿ ಮಾಡಿದರು; ಸಿಖ್ಖರು ಸರ್ಹಿಂದ್
ಅನ್ನು ಲೂಟಿ ಮಾಡಿದರು.
ಹೀಗೆ ಆಂತರಿಕ ಮತ್ತು ವಿದೇಶಿ
ವ್ಯಾಪಾರದಲ್ಲಿನ ಕುಸಿತವು ದೇಶದ ಕೆಲವು ಭಾಗಗಳಲ್ಲಿನ
ಕೈಗಾರಿಕೆಗಳ ಮೇಲೆ ಗಮನಾರ್ಹ ಪರಿಣಾಮ
ಬೀರಿತು. ಆದರೂ, ಯುರೋಪಿಯನ್
ವ್ಯಾಪಾರ ಕಂಪನಿಗಳ ಚಟುವಟಿಕೆಗಳ ಪರಿಣಾಮವಾಗಿ ಯುರೋಪ್ನೊಂದಿಗೆ ಹೆಚ್ಚಿದ ವ್ಯಾಪಾರದಿಂದ ದೇಶದ ಇತರ ಭಾಗಗಳಲ್ಲಿನ
ಕೆಲವು ಕೈಗಾರಿಕೆಗಳು ಲಾಭ ಪಡೆದವು.
ಇ. 18 ನೇ ಶತಮಾನದ ಅವಧಿಯಲ್ಲಿ
ಕೃಷಿ
ಭಾರತೀಯ
ಕೃಷಿಯು 18ನೇ ಶತಮಾನದಲ್ಲಿ ತಾಂತ್ರಿಕವಾಗಿ
ಹಿಂದುಳಿದಿತ್ತು. ಉತ್ಪಾದನಾ ತಂತ್ರಗಳು ಹಿಂದುಳಿದಿದ್ದವು. ಇದರಿಂದ ರೈತರು ಅತ್ಯಂತ ಕಷ್ಟಪಟ್ಟು ಕೆಲಸ ಮಾಡುವ ಮೂಲಕ
ತಮ್ಮ ತಾಂತ್ರಿಕ ಹಿನ್ನಡೆಯನ್ನು ಸರಿದೂಗಿಸಲು ಪ್ರಯತ್ನಿಸುತ್ತಿದ್ದರು. ಅಂದರೆ ಅವರು ಉತ್ಪಾದನೆಯನ್ನು
ಹೆಚ್ಚಿಸಲು ಅಧಿಕ ಶ್ರಮ ಹಾಕಬೇಕಾಗುತ್ತಿತ್ತು.
ಭೂಮಿಯ ಕೊರತೆ ಇಲ್ಲದಿದ್ದರೂ
ಕಡಿಮೆ ತಾಂತ್ರಿಕತೆಯ ಕಾರಣ ಉತ್ಪಾದನೆ ಕಡಿಮೆಯಾಗಿರುತ್ತಿತ್ತು. ರೈತರ ಉತ್ಪನ್ನವು
ಸಮಾಜದ ಬೇಡಿಕೆಗಳನ್ನು ಈಡೇರಿಸುತ್ತಿದ್ದರೂ ಅವರು ಅಸಂತುಷ್ಟರಾಗಿದ್ದರು.
ಕಾಲಾನಂತರದಲ್ಲಿ ಯುರೋಪಿಯನ್ ವ್ಯಾಪಾರ
ಶಕ್ತಿಗಳ ವಾಣಿಜ್ಯ ಉದ್ದೇಶಗಳು ಕಣ್ಮರೆಯಾಗಿ ರಾಜಕೀಯ ಮಹತ್ವಾಕಾಂಕ್ಷೆಗೆ ದಾರಿ ಮಾಡಿಕೊಟ್ಟವು ಮತ್ತು
ಹದಿನೆಂಟನೇ ಶತಮಾನದ ಅಂತ್ಯದ ವೇಳೆಗೆ, ಭಾರತವು ಕೈಗಾರಿಕಾವಾಗಿ ತಯಾರಿಸಿದ ಸರಕುಗಳ ಬೃಹತ್ ರಫ್ತುದಾರ ದೇಶದ ಸ್ಥಾನದಿಂದ ಆಮದುದಾರ ದೇಶವಾಗಿ
ಬದಲಾಯಿತು.
VII. ವಾಣಿಜ್ಯ ನೀತಿಗಳು -ಮುಕ್ತ ವ್ಯಾಪಾರ ನೀತಿ ಮತ್ತು ಭಾರತೀಯ ವ್ಯಾಪಾರ:- ಆರಂಭದಲ್ಲಿ ಬ್ರಿಟಿಷ್ ಕಂಪೆನಿಯ ವ್ಯಾಪಾರವು ಭಾರತೀಯ ವಸ್ತುಗಳನ್ನು
ವಿದೇಶಗಳಲ್ಲಿ ಮಾರಾಟ ಮಾಡಿ ಲಾಭ ಗಳಿಸುವಷ್ಟಕ್ಕೆ ಸೀಮಿತವಾಗಿತ್ತು. ಇದರಿಂದ ಅದು ಭಾರತೀಯ ಸಿದ್ಧವಸ್ತುಗಳ
ಉತ್ಪಾದನೆಯನ್ನು ಪ್ರೋತ್ಸಾಹಿಸಿತು ಮತ್ತು ಭಾರತೀಯ ಉತ್ಪಾದಕರೂ ಸಹ ಆಂಗ್ಲ ಕಂಪೆನಿಯ ವ್ಯಾಪಾರವನ್ನು
ಉತ್ತೇಜಿಸಿದರು.
ಆದರೆ,
1757ರ ನಂತರ ಮೇಲಿನ ಕ್ರಮವು ಬದಲಾಯಿತು. ಏಕೆಂದರೆ ಪ್ಲಾಸಿ ಮತ್ತು ಬಕ್ಸಾರ್ ಕದನಗಳ ನಂತರ ಕಂಪೆನಿಯು
ಭಾರತದಲ್ಲಿ ರಾಜಕೀಯ ಅಧಿಕಾರ ಗಳಿಸಿತು. ಇದರಿಂದ ಅದು ರಾಜಕೀಯ ಶಕ್ತಿಯ ಬಳಕೆ ಮಾಡಿಕೊಂಡು ಭಾರತದಲ್ಲಿನ
ಅದುವರೆಗಿನ ತನ್ನ ವ್ಯಾಪಾರದ ನೀತಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳತೊಡಗಿತು. ಇದಕ್ಕೆ ಇನ್ನೊಂದು
ಕಾರಣವೂ ಇದ್ತುದಿ. ಅದೆಂದರೆ ಇದೇ ವೇಳೆಗೆ ಇಂಗ್ಲೆಂಡಿನಲ್ಲಿ ಆರಂಭವಾದ ಕೈಗಾರಿಕಾ ಕ್ರಾಂತಿ. ಇದರಿಂದ
ಅಲ್ಲಿನ ಕೈಗಾರಿಕೆಗಳಿಗೆ ಕಚ್ಚಾವಸ್ತುಗಳು ಬೇಕಾದವು. ಆದರೆ ಭಾರತದಿಂದ ಇಂಗ್ಲೆಂಡಿಗೆ ರಫ್ತಾಗುತ್ತಿದ್ದ
ಸಿದ್ಧವಸ್ತುಗಳ ಆಮದನ್ನು ತಡೆಯದೇ ಕಚ್ಚಾವಸ್ತುಗಳ ಆಮದನ್ನು ಹೆಚ್ಚಿಸಲು ಸಾಧ್ಯವಿರಲಿಲ್ಲ. ಇದರಿಂದಾಗಿ
ಇಂಗ್ಲೆಂಡಿನ ತಮ್ಮ ಕೈಗಾರಿಕೆಗಳಿಗೆ ರಕ್ಷಣೆ ಒದಗಿಸಲು ಅಲ್ಲಿನ ಉದ್ಯಮಿಗಳು ಬ್ರಿಟನ್ ಪ್ರಭುತ್ವದ
ಮೇಲೆ ಒತ್ತಡ ಹೇರತೊಡಗಿದರು. ಇದರಿಂದಾಗಿ ಬ್ರಿಟನ್ ಸರ್ಕಾರವು ಭಾರತದಿಂದ ಅಲ್ಲಿಗೆ ಆಮದಾಗುತ್ತಿದ್ದ
ಸಿದ್ಧವಸ್ತುಗಳ ಮೇಲೆ ಅಧಿಕ ತೆರಿಗೆ (ಆಮದು ಮತ್ತು ಮಾರಾಟ ತೆರಿಗೆ) ವಿಧಿಸತೊಡಗಿದರು. ಇದರಿಂದಾಗಿ
ಅದುವರೆಗೂ ಇಂಗ್ಲೆಂಡಿನ ವಸ್ತುಗಳಿಗಿಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದ್ದ ಭಾರತೀಯ ಉತ್ಪನ್ನಗಳು
ದುಬಾರಿಯಾದವು. ಇದರಿಂದ ಭಾರತದ ವಸ್ತುಗಳ ಬೇಡಿಕೆ ಕುಗ್ಗಿತು. ಅಲ್ಲದೇ ಭಾರತದಲ್ಲೂ ಅವುಗಳ ಉತ್ಪಾದನೆ
ಇಳಿಮುಖವಾಯಿತು. ಅದೇ ವೇಳೆಯಲ್ಲಿ ಕಂಪೆನಿಯು ಭಾರತದ ಕಚ್ಚಾವಸ್ತುಗಳನ್ನು ಇಂಗ್ಲೆಂಡಿಗೆ ರಫ್ತು ಮಾಡತೊಡಗಿತು.
ಇದರಿಂದಾಗಿ ಭಾರತದ ಕೈಗಾರಿಕೆಗಳು ನಾಶಗೊಂಡು ಭಾರತವು ಕೇವಲ ಇಂಗ್ಲೆಂಡಿಗೆ ಕಚ್ಚಾವಸ್ತುಗಳನ್ನು ರಫ್ತು
ಮಾಡುವ ರಾಷ್ಟ್ರವಾಯಿತು. ಅಲ್ಲದೇ ಬಕ್ಸಾರ್ ಯುದ್ಧಕ್ಕೂ ಮುನ್ನ ಕಂಪೆನಿಯು ಭಾರತದಲ್ಲಿ ವಸ್ತುಗಳನ್ನು
ಖರೀದಿಸಲು ಇಂಗ್ಲೆಂಡಿನಿಂದ ಹಣ ಅಥವಾ ಬೆಲೆಬಾಳುವ ಲೋಹಗಳನ್ನು ತರಬೇಕಾಗುತ್ತಿತ್ತು. ಆದರೆ ಅಲಹಾಬಾದ್
ಒಪ್ಪಂದದ ನಂತರ ದಿವಾನಿ ಹಕ್ಕು ದೊರೆತ ಕಾರಣ ಭಾರತೀಯರಿಂದಲೇ ವಸೂಲಿ ಮಾಡಿದ ಕಂದಾಯದ ಹಣದಿಂದ ಇಲ್ಲಿನ
ವಸ್ತುಗಳನ್ನು ಖರೀದಿಸಲು ಸಾಧ್ಯವಾಯಿತು. ಇದರಿಂದಾಗಿ ಕಂಪೆನಿಗೆ ಎರಡು ಬಗೆಯ ಲಾಭಗಳಾದವು. ಒಂದು ಅವರ
ದೇಶದ ಹಣ ಉಳಿತಾಯ ಆದುದು ಮತ್ತು ನಮ್ಮ ದೇಶದ ಕಚ್ಚಾವಸ್ತುಗಳನ್ನು ಖರೀದಿಸಲು ಕಂದಾಯದ ಹಣ ದೊರೆತುದು.
ಇದರಿಂದ ಭಾರತವು ಸಹಾ ಎರಡು ಬಗೆಯಲ್ಲಿ ನಷ್ಟಗಳನ್ನು ಅನುಭವಿಸಬೇಕಾಯಿತು.
1813ರ
ನಂತರ ಕಂಪೆನಿಯ ವಾಣಿಜ್ಯ ನೀತಿಯಲ್ಲಿ ಪ್ರಮುಖ ಬದಲಾವಣೆ ಉಂಟಾಯಿತು. ಅದೆಂದರೆ ಮುಕ್ತ ವ್ಯಾಪಾರ ನೀತಿಯ
ಅಳವಡಿಕೆ. ಏಕೆಂದರೆ 1813 ರಲ್ಲಿ ಕಂಪೆನಿಯ ವ್ಯಾಪಾರ ಪರವಾನಗಿ ನವೀಕರಣದ ಸನ್ನದು ಕಾಯ್ದೆ ಜಾರಿಗೆ
ಬಂದಿತು. ಆ ವೇಳೆಗೆ ಬ್ರಿಟನ್ನಿನಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಅದುವರೆಗೆ ಭಾರತದಲ್ಲಿ
ನೀಡಿದ್ದ ವ್ಯಾಪಾರದ ಏಕಸ್ವಾಮ್ಯವನ್ನು ರದ್ದುಗೊಳಿಸಿ, ಇಂಗ್ಲೆಂಡಿನಲ್ಲಿದ್ದ ಇತರ ಕಂಪೆನಿಗಳೂ ಸಹ
ಭಾರತದೊಂದಿಗೆ ಮುಕ್ತ ವ್ಯಾಪಾರದಲ್ಲಿ ತೊಡಗಲು ಅವಕಾಶ ನೀಡಲಾಯಿತು. ಇದರಿಂದಾಗಿ ಬ್ರಿಟನ್ನಿನ ಕೈಗಾರಿಕೆಗಳು
ಮತು ವ್ಯಾಪಾರಗಳನ್ನು ರಕ್ಷಿಸಲು ಬ್ರಿಟನ್ ಸರ್ಕಾರವು ರಕ್ಷಣಾತ್ಮಕ ವ್ಯಾಪಾರ ನೀತಿಯನ್ನು ಅಂದರೆ
ಭಾರತೀಯ ವಸ್ತುಗಳಿಗೆ ಅಧಿಕ ಆಮದು ತೆರಿಗೆ ವಿಧಿಸುವುದು ಮತ್ತು ಇಂಗ್ಲೆಂಡಿನಿಂದ ಭಾರತಕ್ಕೆ ರಫ್ತಾಗುವ
ವಸ್ತುಗಳಿಗೆ ಕಡಿಮೆ ತೆರಿಗೆ ವಿಧಿಸುವ ನೀತಿಯನ್ನು ಅಳವಡಿಸಿಕೊಂಡಿತು. ಇದರಿಂದಾಗಿ 1813 ರಲ್ಲಿ ಭಾರತಕ್ಕೆ
ಇಂಗ್ಲೆಂಡಿನಿಂದ ಆಮದಾಗುತ್ತಿದ್ದ ಸು. 11 ಲಕ್ಷ ಪೌಂಡುಗಳಷ್ಟಿದ್ದ
ಇಂಗ್ಲೆಂಡಿನ ಬಟ್ಟೆ ಉತ್ಪನ್ನಗಳ ಆಮದು 1856ರ ವೇಳೆಗೆ 63 ಲಕ್ಷ ಪೌಂಡುಗಳಿಗೆ ಏರಿತು. ಪರಿಣಾಮವಾಗಿ
ಸಿದ್ಧವಸ್ತುಗಳ ರಫ್ತು ದೇಶವಾಗಿದ್ದ ಭಾರತವು ಕಚ್ಚಾ ವಸ್ತುಗಳ ಪೂರೈಕೆ ದೇಶವಾಯಿತು. ಅಲ್ಲದೇ ಇಂಗ್ಲೆಂಡಿನ
ಸಿದ್ಧವಸ್ತುಗಳಿಗೆ ಭಾರತವು ಮಾರುಕಟ್ಟೆಯಾಯಿತು.
ಇದರಿಂದಾಗಿ
1813ರ ಚಾರ್ಟರ್ ಕಾಯ್ದೆಯ ನಂತರ ಬ್ರಿಟಿಷರ ವಾಣಿಜ್ಯ ನೀತಿಯು ಭಾರತವನ್ನು ಕಚ್ಚಾವಸ್ತುಗಳ ಪೂರೈಕೆ
ದೇಶವನ್ನಾಗಿಸುವುದು ಮತ್ತು ಅಲ್ಲಿನ ಸಿದ್ಧವಸ್ತುಗಳ ಮಾರುಕಟ್ಟೆಯನ್ನಾಗಿ ಪರಿವರ್ತಿಸುವುದೇ ಆಗಿತ್ತು.
ಅದುವರೆಗೂ ಸ್ವಾವಲಂಬಿ ಆರ್ಥಿಕತೆಯಾಗಿದ್ದ ಭಾರತವು ಬ್ರಿಟಿಷರ ಆಗಮನದಿಂದಾಗಿ ವಸಾಹತುಶಾಹಿ ಮಾರುಕಟ್ಟೆಯಾಯಿತು.
ಅಂತಿಮವಾಗಿ ಭಾರತದ ವ್ಯಾಪಾರಿಗಳ ಕೈಯಲ್ಲಿದ್ದ ದೇಶೀಯ ಉತ್ಪನ್ನಗಳ ವ್ಯಾಪಾರವು ಕುಸಿದು ಅದರ ಬದಲಿಗೆ ಕೇವಲ ಕಚ್ಚಾವಸ್ತುಗಳನ್ನು ಮಾತ್ರ ವಿದೇಶಗಳಿಗೆ ರಫ್ತು ಮಾಡುವ ಪರಿಸ್ಥಿತಿ ಭಾರತಕ್ಕೆ ಒದಗಿತು. ಇದರಿಂದಾಗಿ ನಮ್ಮ ಕಚ್ಚಾವಸ್ತುಗಳ ವ್ಯಾಪಾರವು ಕೇವಲ ದೇಶೀಯ ಮಾರುಕಟ್ಟೆಗಳಿಗೆ ಮಾತ್ರ ಸೀಮಿತಗೊಂಡಿತು. ಅಲ್ಲದೇ ಅದುವರೆಗೂ ವಿದೇಶಗಳಿಂದ ಹರಿದು ಬರುತ್ತಿದ್ದ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯ ಹರಿವು ಸಹಾ ನಿಂತಿತು. ಏಕೆಂದರೆ ಬ್ರಿಟಿಷರು ಭಾರತದಿಂದಲೇ ಸಂಗ್ರಹಿಸಿದ ಕಂದಾಯದ ಹಣದಿಂದ ಕಚ್ಚಾವಸ್ತುಗಳ ಖರೀದಿ ಮಾಡುವ ಅವಕಾಶವಿದ್ದರಿಂದ ವಿದೇಶದ ಹಣ ಭಾರತಕ್ಕೆ ಬರುವುದು ನಿಂತಿತು.
*****
Comments
Post a Comment