ಅಧ್ಯಾಯ-2: ವಸಾಹತು ವಿಸ್ತರಣೆ -ಬಂಗಾಳ -ಅವಧ್ ಮತ್ತು ಪಂಜಾಬ್; ಪ್ಲಾಸಿ ಕದನ ಮತ್ತು ಬಕ್ಸಾರ್ ಕದನ, ಆಂಗ್ಲೊ-ಮೈಸೂರು ಕದನಗಳು ಮತ್ತು ಆಂಗ್ಲೊ-ಮರಾಠಾ ಯುದ್ಧಗಳು.
ಪೀಠಿಕೆ: ಹದಿನೆಂಟನೆ ಶತಮಾನದ ಮಧ್ಯಭಾಗದಲ್ಲಿ ದಖನ್ನಿನಲ್ಲಿ ಫ್ರೆಂಚರೊಂದಿಗೆ ಪೈಪೋಟಿಗೆ ಇಳಿದ ಬ್ರಿಟಿಷರು ಮೂರು ಕರ್ನಾಟಿಕ್ ಯುದ್ಧಗಳಲ್ಲಿ ಅಂತಿಮವಾಗಿ ಮೇಲುಗೈ ಸಾಧಿಸಿ, ಫ್ರೆಂಚರ ಅಧಿಕಾರವನ್ನು ಪಾಂಡಿಚೇರಿಗೆ ಸೀಮಿತಗೊಳಿಸಿದರು. ಹೀಗೆ ದಕ್ಷಿಣದಲ್ಲಿ ದೊರೆತ ಸೈನಿಕ ಗೆಲುವುಗಳು ಅವರಿಗೆ ಉತ್ತರದಲ್ಲೂ ತಮ್ಮ ರಾಜಕೀಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿತು. ಅಂದರೆ ಅದೇ ಸಮಯದಲ್ಲಿ ಬಂಗಾಳದಲ್ಲಿ ಸಿರಾಜ್ ಉದ್ ದೌಲನು ನವಾಬನಾಗಿ ಫ್ರೆಂಚರೊಂದಿಗೆ ಸ್ನೇಹ ಬೆಳೆಸಿಕೊಂಡು, ಬ್ರಿಟಿಷರ ವಿರುದ್ಧ ಸೈನಿಕ ಚಟುವಟಿಕೆಗಳಲ್ಲಿ ತೊಡಗಿದನು. ಇದರಿಂದ ರಾಬರ್ಟ್ ಕ್ಲೈವ್ ಬಂಗಾಳಕ್ಕೆ ಬಂದು ಅಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಸಿರಾಜನ ವಿರುದ್ಧ ಬಳಸಿಕೊಂಡು ಪ್ಲಾಸಿ ಕದನದಲ್ಲಿ ಗೆಲುವು ಸಾಧಿಸಿದನು. ಪರಿಣಾಮವಾಗಿ ಬಂಗಾಳದಲ್ಲಿ ಆಂಗ್ಲರು ರಾಜನಿರ್ಮಾಪಕರಾದರು. ನಂತರ ಅಧಿಕಾರಕ್ಕೆ ಬಂದ ಮೀರ್ ಜಾಫರ್ ಮತ್ತು ಮೀರ್ ಖಾಸಿಂ ಇಬ್ಬರೂ ಆಂಗ್ಲರೊಂದಿಗೆ ನಡೆದ ಹೋರಾಟಗಳಲ್ಲಿ ಸೋತು ಬಂಗಾಳವು ಸಂಪೂರ್ಣವಾಗಿ ಬ್ರಿಟಿಷರ ಅದಿಕಾರಕ್ಕೆ ಒಳಪಡುವಂತೆ ಮಾಡಿದರು. ಅಂದರೆ ಬಕ್ಸಾರ್ ಕದನದಲ್ಲಿ ಸೋತ ಮೀರ್ ಖಾಸಿಂ ಪಲಾಯನ ಮಾಡಿದರೆ, ಸೋತ ಮೊಗಲ್ ಬಾದಷಹಾ ಶಾ ಆಲಂ ಮತ್ತು ಅವಧ್ ನವಾಬ ಬ್ರಿಟಿಷರೊಂದಿಗೆ ಅಲಹಾಬಾದ್ ಒಪ್ಪಂದ ಮಾಡಿಕೊಂಡು ಬಂಗಾಳದ ದಿವಾನಿ ಹಕ್ಕನ್ನು ಅವರಿಗೆ ಬಿಟ್ಟುಕೊಟ್ಟರು. ಇದರಿಂದ ಆಂಗ್ಲರು ಬಂಗಾಳದ ನಿಜವಾದ ಒಡೆಯರಾದರು. ಮುಂದೆ ಪಂಜಾಬ್ ಸಹ ರಣಜಿತ್ ಸಿಂಗನ ಮರಣಾನಂತರ ನಡೆದ ಮೂರು ಸಿಖ್ ಯುದ್ಧಗಳಲ್ಲಿ ಅಂತಿಮವಾಗಿ ಬ್ರಿಟಿಷರು ಗೆಲುವು ಸಾಧಿಸಿ 1850ರ ವೇಳೆಗೆ ಪಂಜಾಬ್ ಮೇಲೆ ಪ್ರಭುತ್ವ ಸಾಧಿಸಿದರು. ಹೀಗೆ ಕರ್ನಾಟಿಕ್ ಯುದ್ಧಗಳಿಂದ ಆರಂಭವಾದ ಬ್ರಿಟಿಷರ ವಸಾಹತು ವಿಸ್ತರಣೆಯು ಪ್ಲಾಸಿ ಮತ್ತು ಬಕ್ಸಾರ್ ಕದನಗಳ ಮೂಲಕ ಬಂಗಾಳದಿಂದ ದೆಹಲಿಯವರೆಗೆ ಪ್ರಭುತ್ವ ಸಾಧಿಸಿದ್ದಲ್ಲದೇ ಸಿಖ್ಖರ ಮೇಲಿನ ವಿಜಯಗಳಿಂದಾಗಿ ಬಂಗಾಳ ಅವಧ್ ಮತ್ತು ಪಂಜಾಬ್‌ಗಳನ್ನು ತಮ್ಮ ವಸಾಹತು ಆಡಳಿತಕ್ಕೆ ಒಳಪಡಿಸಿದರು.
ಪ್ಲಾಸಿ ಕದನ – ಜೂನ್ 23, 1757
ಸ್ಥಳ: ಬಂಗಾಳದಲ್ಲಿದ್ದ ಪ್ಲಾಸಿ ಎಂಬ ಗ್ರಾಮ.
ಕಾರಣಗಳು:-
1. ರಾಜಕೀಯ ಕಾರಣಗಳು:
1940ರ ನಂತರ ಬಂಗಾಳದ ನವಾಬನಾಗಿದ್ದ ಅಲಿವರ್ದಿಖಾನನಿಗೆ 3 ಹೆಣ್ಣುಮಕ್ಕಳಿದ್ದರು. ಅವನಿಗೆ ಗಂಡು ಸಂತಾನವಿರಲಿಲ್ಲವಾದ್ದರಿಂದ
ಅವನು 1756ರಲ್ಲಿ ತೀರಿಕೊಂಡಾಗ ಅವನ ಮೂರನೆ ಮಗಳ ಮಗ ಮಿರ್ಜಾ ಮಹಮದ್ ಎಂಬುವವನು ಸಿರಾಜ್ ಉದ್ ದೌಲ
ಎಂಬ ಹೆಸರಿನಿಂದ ಬಂಗಾಳದ ನವಾಬನಾದನು. ಆದರೆ ಅಲಿವರ್ದಿಖಾನನ ಮತ್ತೊಬ್ಬ ಮೊಮ್ಮೊಗ ಶೌಕತ್ ಜಂಗನ ಅಧಿಕಾರದ ಆಸೆಯು ಅವನು
ಸಿರಾಜ್ ಉದ್ ದೌಲನ ವಿರುದ್ಧ ಅಸಮಾಧಾನಗೊಳ್ಳಲು ಕಾರಣವಾಗಿತ್ತು. ಇದಕ್ಕೆ ಅಲಿವರ್ದಿಖಾನನ ಹಿರಿಯ
ಮಗಳು ಗಾಸಿಟಿ ಬೇಗಂ ಸಹಾ ಬೆಂಬಲ ನೀಡಿದಳು. ಜೊತೆಗೆ ರಾಜವಲ್ಲಭ ಎಂಬ ಸಿರಾಜ್ ುದ್ ದೌಲನ ಮಂತ್ರಿ
ಇವರಿಬ್ಬರಿಗೆ ಸಹಾಯ ಮಾಡುತ್ತಿದ್ದನು. ಅಲ್ಲದೇ ಸಿರಾಜನು ರಾಜವಲ್ಲಭನ ಮಗ ಕೃಷ್ಣದಾಸನನ್ನು ಆಸ್ಥಾನದಿಂದ
ಹೊರಹಾಕಿದ್ದು, ಅವನಿಗೆ ಆಂಗ್ಲರು ಆಶ್ರಯ ನೀಡಿದ್ದರು. ಜೊತೆಗೆ ಸಿರಾಜನು ಆಂಗ್ಲರೊಂದಿಗೆ ಸ್ನೇಹದಿಂದಿರಲಿಲ್ಲ.
2. ಆರ್ಥಿಕ ಕಾರಣಗಳು:
ದಸ್ತಕ್‌ಗಳ ದುರುಪಯೋಗ. ಇವುಗಳು ಫರುಕ್ ಸಿಯಾರ್ ಎಂಬ ಮೊಗಲ್ ಬಾದಶಹಾ ಆಂಗ್ಲರಿಗೆ 1717 ರಲ್ಲಿ
ನೀಡಿದ್ದ ವ್ಯಾಪಾರದ ಪರವಾನಗಿ ಪತ್ರಗಳಾಗಿದ್ದವು. ಅದರಂತೆ ಆಂಗ್ಲರು ಬಂಗಾಳದಲ್ಲಿ ತೆರಿಗೆಮುಕ್ತ ವ್ಯಾಪಾರ
ಮಾಡಬಹುದಾಗಿತ್ತು. ಆದರೆ ಕೇವಲ ಕಂಪೆನಿಯ ಉಪಯೋಗಕ್ಕೆ ನೀಡಿದ್ದ ಅವುಗಳನ್ನು ಕಂಪೆನಿಯ ಅಧಿಕಾರಿಗಳು
ತಮ್ಮ ಖಾಸಗಿ ವ್ಯಾಪಾರಕ್ಕೂ ಬಳಸಿಕೊಳ್ಳುತ್ತಿದ್ದರು. ಜೊತೆಗೆ ಹೆಚ್ಚಿನ ಲಾಭದ ಕಾರಣ ಆ ಪರವಾನಗಿ ಪತ್ರಗಳನ್ನು
ಭಾರತೀಯ ವ್ಯಾಪಾರಿಗಳಿಗೆ ಹಣಕ್ಕಾಗಿ ಮಾರಿಕೊಳ್ಳುತ್ತಿದ್ದರು. ಇದರಿಂದ ಬಂಗಾಳದ ನವಾಬನಿಗೆ ತೆರಿಗೆ
ನಷ್ಟವಾಗುತ್ತಿತ್ತು. ಅಲ್ಲದೇ ದಸ್ತಕ್‌ಗಳನ್ನು ಕೇವಲ ವಿದೇಶಗಳಿಗೆ ಕೊಂಡೊಯ್ಯುವ ವಸ್ತುಗಳನ್ನು ಮಾತ್ರ
ಕೊಳ್ಳಲು, ಸಾಗಿಸಲು ಬಳಸುವ ನಿರ್ಬಂಧವಿತ್ತು. ಆದರೆ ಆಂಗ್ಲರು ಅವುಗಳನ್ನು ಬಂಗಾಳದಲ್ಲಿನ ಸ್ಥಳೀಯ
ವ್ಯಾಪಾರಕ್ಕೂ ಬಳಸುತ್ತಿದ್ದರಿಂದ ನವಾಬನಿಗೆ ಮತ್ತಷ್ಟು ಆರ್ಥಿಕ ನಷ್ಟ ಉಂಟಾಗುತ್ತಿತ್ತು.
3. ಸೈನಿಕ ಕಾರಣಗಳು:
ಆಸ್ಟ್ರಿಯಾ ಉತ್ತರಾಧಿಕಾರದ ಯುದ್ಧಗಳ ಕಾರಣ ಯೂರೋಪಿನಲ್ಲಿ ಆರಂಭವಾಗಿದ್ದ ಆಂಗ್ಲೊ-ಫ್ರೆಂಚ್ ಕದನಗಳ
ಕಾರಣ ಆಂಗ್ಲರು ಕಲ್ಕತ್ತಾ ಕೋಟೆಯನ್ನು ಬಲಪಡಿಸಿಕೊಳ್ಳತೊಡಗಿದರು. ಅದರಂತೆ ಫ್ರೆಂಚರೂ ಮಾಡಿದರು. ಸಿರಾಜನು
ಅವರಿಗೆ ಕೋಟೆಗಳನ್ನು ನಾಶಪಡಿಸುವಂತೆ ಆದೇಶಿಸಿದನು. ಫ್ರೆಂಚರು ಅದನ್ನು ಫಾಲಿಸಿದರೂ ಆಂಗ್ಲರು ಅದರಂತೆ
ಮಾಡಲಿಲ್ಲ. ಇದರಿಂದ ಸಿರಾಜನು ಆಂಗ್ಲರ ವಿರುದ್ಧ ಸೈನಿಕ ಕ್ರಮಕ್ಕೆ ಮುಂದಾಗಬೇಕಾಯಿತು.
4. ಫ್ರೆಂಚರಿಗೆ
ಆಶ್ರಯ ನೀಡಿದ್ದು: 1757 ರಲ್ಲಿ ಚಂದ್ರನಾಗೋರ್‌ನಲ್ಲಿದ್ದ ಫ್ರೆಂಚರು ಆಂಗ್ಲರಿಂದ ಸೋತರು. ಅವರಿಗೆ
ಸಿರಾಜನು ಆಶ್ರಯ ನೀಡಿದನು. ಇದು ಬ್ರಿಟಿಷರ ಕೋಪಕ್ಕೆ ಕಾರಣವಾಗಿತ್ತು.
5. ತಕ್ಷಣದ ಕಾರಣ
– ಆಂಗ್ಲರು ಅವರ ಕೋಟೆಗಳನ್ನು ನಾಶಪಡಿಸಬೇಕೆಂಬ ತನ್ನ ಆದೇಶವನ್ನು ಪಾಲಿಸದಿದ್ದಾಗ ಕೋಪಗೊಂಡ ಸಿರಾಜನು
ಜೂನ್ 16, 1756 ರಲ್ಲಿ ಬ್ರಿಟಿಷರ ಪ್ರಮುಖ ವ್ಯಾಪಾರಿ ಕೇಂದ್ರ ಕಾಸಿಂ ಬಜಾರ್ ಮೇಲೆ ಆಕ್ರಮಣ ಮಾಡಿ
ಅದನ್ನು ವಶಪಡಿಸಿಕೊಂಡನು. ಅಲ್ಲಿ ಸೆರೆ ಸಿಕ್ಕ
146 ಆಂಗ್ಲರನ್ನು 18 ಅಡಿ ಉದ್ದ ಮತ್ತು 14 ಅಡಿ ಅಗಲದ ಚಿಕ್ಕ ಕೋಣೆಯಲ್ಲಿ ಜೂನ್ 20ರ ರಾತ್ರಿಯಿಡೀ
ಬಂಧಿಸಿಟ್ಟನು ಎಂದು ಆಂಗ್ಲ ದಾಖಲೆಗಳು ತಿಳಿಸುತ್ತವೆ. ಬಂಧಿಸಲ್ಪಟ್ಟವರಲ್ಲಿ ಮರುದಿನ ಕೇವಲ 23 ಜನರನ್ನು
ಹೊರತುಪಡಿಸಿ ಉಳಿದವರು ಮರಣಹೊಂದಿದರು. ಇದನ್ನು ಕಪ್ಪುಕೋಣೆ ದುರಂತ ಎಂದು ಕರೆಯಲಾಗಿದೆ. ಕಪ್ಪುಕೋಣೆ
ದುರಂತದ ವಿಚಾರವು ಮದ್ರಾಸ್ ತಲುಪಿ, ಅಲ್ಲಿದ್ದ ರಾಬರ್ಟ್ ಕ್ಲೈವ್ ಹೆಚ್ಚಿನ ಸೇನೆಯೊಂದಿಗೆ ಬಂಗಾಳಕ್ಕೆ
ಬಂದನು. ಕ್ಲೈವ್ ನೇತೃತ್ವದ ಆಂಗ್ಲರು ಜನವರಿ 2, 1757 ರಲ್ಲಿ ಕಾಸಿಂಬಜಾರ್‌ನ್ನು ಮರುವಶ ಮಾಡಿಕೊಂಡರು.
ಸೋತ ಸಿರಾಜನೊಂದಿಗೆ ಆಂಗ್ಲರು ಫೆಬ್ರವರಿ 9, 1757ರಂದು ಅಲಿನಗರ ಒಪ್ಪಂದ ಮಾಡಿಕೊಂಡರು. ಅದರಂತೆ ಸಿರಾಜ್
ಉದ್ ದೌಲನು ಬ್ರಿಟಿಷರಿಗೆ ಬಂಗಾಳದಲ್ಲಿ ಹಿಂದಿನ ವ್ಯಾಪಾರಿ ರಿಯಾಯಿತಿಗಳನ್ನು ನೀಡುವುದು, ಕಲ್ಕತ್ತಾದಲ್ಲಿ
ಕೋಟೆ ಕಟ್ಟಿಕೊಳ್ಳಲು ಅನುಮತಿ ನೀಡುವುದು, ಯುದ್ಧ ನಷ್ಟ ಕೊಡುವುದು ಮತ್ತು ನಾಣ್ಯ ಟಂಕಿಸಲು ಅನುಮತಿ
ನೀಡಲು ಒಪ್ಪಿಕೊಂಡನು.
ನವಾಬನ ವಿರುದ್ಧ
ಸಂಚು:- ಫ್ರೆಂಚರಿಗೆ ಆಶ್ರಯ ನೀಡಿದ್ದ ಕಾರಣ ಕ್ಲೈವನು ನವಾಬನ ವಿರುದ್ಧ ಸಂಚು ರೂಪಿಸಿ ಅವನನ್ನು ಅಧಿಕಾರದಿಂದ
ಕೆಳಗಿಳಿಸುವ ಉಪಾಯ ಮಾಡಿದನು. ಅದರಲ್ಲಿ ಅದಾಗಲೇ ಸಿರಾಜನ ವಿರುದ್ಧ ಅತೃಪ್ತರಾಗಿದ್ದ ಶೌಕತ್ ಜಂಗ್, ಘಾಸಿಟಿ ಬೇಗಂ, ರಾಯ್ ದುರ್ಲಬ್, ಕಿಶನ್‌ದಾಸ್,
ಜಗತ್ ಸೇಠ್, ಅಮೀನ್ ಚಂದ್, ಖದೀಂ ಖಾನ್ ಮತ್ತು ಮೀರ್ ಜಾಫರ್ ಬ್ರಿಟೀಷರೊಂದಿಗೆ ಸೇರಿಕೊಂಡರು.
ಸಂಚಿನಂತೆ ಮೀರ್
ಜಾಫರನನ್ನು ನವಾಬನನ್ನಾಗಿ ಮಾಡಲು ಬ್ರಿಟಿಷರು ಒಪ್ಪಿಕೊಂಡರು. ಅದಕ್ಕೆ ಪ್ರತಿಯಾಗಿ ಅವನು ಬ್ರಿಟಿಷರಿಗೆ
ಕಲ್ಕತ್ತಾ ಆಕ್ರಮಣದಕಾಲಕ್ಕೆ ಸಿರಾಜನಿಂದ ಉಂಟಾದ ನಷ್ಟ ತುಂಬಿಕೊಡಲು 1 ಕೋಟಿ ಕೊಡುವುದು, ವ್ಯಾಪಾರದ
ರಿಯಾಯಿತಿಗಳನ್ನು ನೀಡುವುದು ಮತ್ತು ಬ್ರಿಟಿಷರಿಗೆ ಉಡುಗೊರೆಗಳನ್ನು ನೀಡಲು ಒಪ್ಪಿಕೊಂಡನು. ಈ ಸಂಚಿನ
ನಂತರ ಕ್ಲೈವನು ಸಿರಾಜ್ ಉದ್ ದೌಲನು ಅಲಿನಗರ ಒಪ್ಪಂದದ ಕರಾರುಗಳನ್ನು ಪಾಲಿಸುತ್ತಿಲ್ಲವೆಂದು ನೆಪ
ಹೂಡಿ ನವಾಬನ ವಿರುದ್ಧ ಯುದ್ಧ ಆರಂಭಿಸಿದನು.
ಪ್ಲಾಸಿ ಕದನ:
ಜೂನ್ 23, 1757. ನವಾಬನ ಕಡೆ ಸು. 50 ಸಾವಿರ ಸೈನ್ಯವಿತ್ತು. ಬ್ರಿಟಿಷರ ಕಡೆ ಕೇವಲ 3,200 ಸೈನಿಕರು
ಮತ್ತು 10 ಬಂದೂಕುಗಳಿದ್ದವು. ಆದರೆ ನವಾಬನ ಸಂಪೂರ್ಣ ಸೈನ್ಯ ಯುದ್ಧದಲ್ಲಿ ಭಾಗವಹಿಸಿರಲಿಲ್ಲ. ದಂಡನಾಯಕ
ಮೀರ್ ಜಾಫರ್ ತಟಸ್ಥನಾಗಿದ್ದನು. ಮೋಹನ್‌ಲಾಲ್ ಮತ್ತು ಮೀರ್ ಮದನ್ ಎಂಬ ನವಾಬನ ಕಡೆಯವರು ವೀರಾವೇಶದಿಂದ
ಹೋರಾಟ ಮಾಡಿದರೂ ಬ್ರಿಟಿಷರ ಕೈ ಮೇಲಾಯಿತು. ಬ್ರಿಟಿಷರ 29 ಮತ್ತು ನವಾಬನ 500 ಸೈನಿಕರು ಸತ್ತರು.
ನಿರೀಕ್ಷೆಯಂತೆ ಗೆಲುವು ಬ್ರಿಟಿಷರದಾಯಿತು. ಏಕೆಂದರೆ ಪ್ಲಾಸಿ ಕದನವು ಕೇವಲ ಒಂದು ವ್ಯವಹಾರವಾಗಿತ್ತೇ
ಹೊರತು ಅದೊಂದು ಯುದ್ಧವಾಗಿರಲಿಲ್ಲ; ನವಾಬನ ಶತೃಗಳು ಅವನನ್ನು ಅದಾಗಲೇ ಮಾಡಿಕೊಂಡ ಒಪ್ಪಂದದ ಸಮಯದಲ್ಲೇ
ಅವನನ್ನು ಬ್ರಿಟಿಷರಿಗೆ ಮಾರಿದ್ದರು ಎಂದು ಕೆ. ಎಂ. ಫಣಿಕ್ಕರ್ ಅವರು ಪ್ಲಾಸಿ ಕದನದ ಕುರಿತು ಅಭಿಪ್ರಾಯ
ನೀಡಿದ್ದಾರೆ.
ಪರಿಣಾಮಗಳು:-
ಸಿರಾಜನು ಸೋತು ಪಲಾಯನ ಮಾಡಿದನು. ನಂತರ ಸೆರೆ ಸಿಕ್ಕ ಅವನನ್ನು ಕೊಲ್ಲಲಾಯಿತು. ಒಪ್ಪಂದದಂತೆ ಮೀರ್
ಜಾಫರ್ ನವಾಬನಾದ. ಜೊತೆಗೆ ಬ್ರಿಟೀಷ್ ಸಾರ್ವಭೌಮತ್ವದ ಅಸ್ಥಿಭಾರ ಆರಂಭವಾಯಿತು. ಅವರು ಬಂಗಾಳದ ಮೇಲೆ
ಪರೋಕ್ಷ ಹಿಡಿತ ಸಾಧಿಸಿದರು. ಅಂದರೆ ಬಂಗಾಳದ ನವಾಬ ಬ್ರಿಟಿಷರ ಕೈಗೊಂಬೆ ನವಾಬನಾದನು. ರಾಬರ್ಟ್ ಕ್ಲೈವ್
ಬಂಗಾಳದ ಗವರ್ನರ್ ಆದನು. 24 ಪರಗಣಗಳ ಜಮೀನುದಾರಿಕೆ ಆಂಗ್ಲರಿಗೆ ದೊರೆಯಿತು. ಅಲ್ಲದೇ ಮೀರ್ ಜಾಫರ್
ಆಂಗ್ಲರಿಗೆ 1 ಕೋಟಿ ನೀಡಿದ. ನಷ್ಟ ಪರಿಹಾರವಾಗಿ ಮತ್ತಷ್ಟು
ಹಣ ನೀಡಿದ. ಆಂಗ್ಲರು ಬಂಗಾಳದಲ್ಲಿ ತೆರಿಗೆ ಮುಕ್ತ ವ್ಯಾಪಾರದ ಅನುಮತಿ ಪಡೆದರು. ಇದರಿಂದ ಬ್ರಿಟಿಷರಿಗೆ
ಹಿಂದುಗಳ ಬೆಂಬಲದಿಂದ ಭಾರತದಲ್ಲಿ ಅಧಿಕಾರ ಸ್ಥಾಪನೆ ಸಾದ್ಯ ಎಂಬ ಅಂಶದ ಅರಿವು ಉಂಟಾಯಿತು.
ಮಹತ್ವ:- RC
ಮಜೂಮ್‌ದಾರ್: ಇದೊಂದು ಸಣ್ಣ ಕದನ; ಆದರೆ ಭಾರತದ ರಾಜಕೀಯದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಿತು.
ಜೆ. ಎನ್ ಸರ್ಕಾರ್:
ಮಧ್ಯಯುಗದ ಅಂತ್ಯ ಮತ್ತು ಆಧುನಿಕ ಯುಗದ ಆರಂಭಕ್ಕೆ ನಾಂದಿ ಹಾಡಿತು.
ಮ್ಯಾಲೆಸನ್:
ಇದರಷ್ಟು ವ್ಯಾಪಕ ಪರಿಣಾಮಗಳನ್ನು ಮತ್ತ್ಯಾವ ಯುದ್ಧವೂ ಉಂಟು ಮಾಡಿಲ್ಲ.
*****
ಬಕ್ಸಾರ್ ಕದನ:- ಅಕ್ಟೋಬರ್
22, ೧೭೬೪
ಭಾಗವಹಿಸಿದವರು:- ಮೀರ್ ಖಾಸೀಂ,
ಶೂಜ ಉದ್ ದೌಲ
ಮತ್ತು ಮೊಗಲ್ ಚಕ್ರವರ್ತಿ ೨ನೆ
ಶಾ ಆಲಂ ಹಾಗೂ
ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿ.
ಕೆಲವು ಪೂರಕ ಮಾಹಿತಿಗಳು:-
ಬಕ್ಸಾರ್
- ಇದು ಪಾಟ್ನಾದಿಂದ (ಬಿಹಾರ) ಸು. ೧೮೦
ಕಿ.ಮೀ. ದೂರದಲ್ಲಿರುವ
ಪ್ರದೇಶ. ಅಂದಿಗೆ ಇದೊಂದು ವ್ಯಾಪಾರಿ
ಕೇಂದ್ರ ಮತ್ತು ಸಣ್ಣ ಕೋಟೆಯೊಂದರಿಂದ
ಕೂಡಿತ್ತು. ಇದು ಗಂಗಾನದಿಯ ದಡದಲ್ಲಿದೆ.
ಯುದ್ಧದ ಹಿನ್ನೆಲೆ:-
ಪ್ಲಾಸಿ ಕದನಾನಂತರ ಮೀರ್ ಜಾಫರನನ್ನು
ಬಂಗಾಳದ ನವಾಬನನ್ನಾಗಿ ಮಾಡಲಾಗಿತ್ತು. ಈತ
ಮತ್ತು ಕಂಪೆನಿಯ ನಡುವೆ ಆರಂಭದಲ್ಲಿ
ಬಾಂಧವ್ಯ ಉತ್ತಮವಾಗಿತ್ತು. ಆದರೆ,
ಕ್ರಮೇಣ ಬ್ರಿಟಿಷರ ಹೆಚ್ಚುತ್ತಿರುವ ಬೇಡಿಕೆಗಳನ್ನು
ಈಡೇರಿಸಲು ಜಾಫರನಿಗೆ ಆಗಲಿಲ್ಲ. ಪರಿಣಾಮವಾಗಿ ಅವನು ಬ್ರಿಟಿಷರ ಹಿಡಿತದಿಂದ ಮುಕ್ತನಾಗಲು ಬಂಗಾಳದ
ಚಿನ್ಸುರದಲ್ಲಿದ್ದ ಡಚ್ಚರ ಸಹಾಯ ಕೋರಿದ.
ಈ ವೇಳೆಗೆ
ಬಂಗಾಳದ ಗವರ್ನರ್ ಆಗಿದ್ದ ರಾಬರ್ಟ್
ಕ್ಲೈವ್ ಡಚ್ಚರನ್ನು ಪುಲ್ಟಾ ಎಂಬಲ್ಲಿ
ನಿರ್ಣಾಯಕವಾಗಿ ಸೋಲಿಸಿ ಅವರೊಂದಿಗೆ “ಚಿನ್ಸುರ
ಒಪ್ಪಂದ” ಮಾಡಿಕೊಂಡ.
ಚಿನ್ಸುರ ಒಪ್ಪಂದ – ಬ್ರಿಟಿಷರು ಮತ್ತು ಡಚ್ಚರ ನಡುವೆ.
ಡಚ್ಚರ ಅಧಿಕಾರ ಚಿನ್ಸುರಕ್ಕೆ ಸೀಮಿತವಾಯಿತು.
ಅವರು ದೇಶೀಯ ಅರಸರ
ವ್ಯವಹಾರಗಳಲ್ಲಿ ತಲೆ ಹಾಕದಿರುವಂತೆ ನಿರ್ಬಂಧಿಸಲಾಯಿತು.
ಇದರಿಂದ ಮೀರ್ ಜಾಫರ್
ಮತ್ತು ಬ್ರಿಟಿಷರ ನಡುವೆ ಸಂಬಂಧ
ಹದಗೆಟ್ಟಿತು. ರಾಬರ್ಟನ
ನಂತರ ಬಂದ ಗವರ್ನರ್ ಗಳು
ಮೀರ್ ಜಾಫರನನ್ನು 1760 ರಲ್ಲಿ ಪದಚ್ಯುತನನ್ನಾಗಿಸಿದರು.
ನಂತರ ಅವನ ಅಳಿಯ “ಮೀರ್ ಖಾಸಿಂನನ್ನು ಬಂಗಾಳದ
ನವಾಬನ ಹುದ್ದೆಗೆ ಏರಿಸಿದರು.
ಮೀರ್ ಖಾಸೀಂ ನವಾಬನಾದ
ಮೇಲೆ ಬ್ರಿಟಿಷರಿಗೆ ಮಿಡ್ನಾಪುರ, ಚಿತ್ತಗಾಂಗ್ ಮತ್ತು ಬರ್ದ್ವಾನ್ ಪ್ರದೇಶಗಳನ್ನು
ಬಿಟ್ಟುಕೊಟ್ಟನು. ಆದರೆ, ಇವನು ಮಹತ್ವಾಕಾಂಕ್ಷಿಯಾಗಿದ್ದನು.
ಬಂಗಾಳದ ಆಡಳಿತದ
ಸುಧಾರಣೆಗೆ ಅನೇಕ ಕ್ರಮಗಳನ್ನು ಕೈಗೊಂಡನು.
ರಾಜಧಾನಿಯನ್ನು
ಮುರ್ಶಿದಾಬಾದ್‌ನಿಂದ ಬಿಹಾರದಲ್ಲಿದ್ದ ಮೋಂಗೇರ್‌ಗೆ ಬದಲಾಯಿಸಿದ. ಅಲ್ಲದೇ ತನ್ನ ಸೈನ್ಯವನ್ನು ತರಬೇತುಗೊಳಿಸಲು ಗುಟ್ಟಾಗಿ
ವಿದೇಶಿ ಅಧಿಕಾರಿಗಳನ್ನು ನೇಮಿಸಿದನು.
ಘರ್ಷಣೆಗೆ ಕಾರಣವಾದ ಅಂಶಗಳು:-
ದಸ್ತಕ್ (ಪರವಾನಗಿ ಪತ್ರ)
ಗಳ ದುರುಪಯೋಗದಿಂದ ನವಾಬನ
ಖಜಾನೆಗೆ ಆರ್ತಿಕ ನಷ್ಟ ಉಂಟಾಗುತ್ತಿತ್ತು. ಇದನ್ನು
ತಡೆಯುವಂತೆ ಬ್ರಿಟಿಷ್ ಅಧಿಕಾರಿಗಳಿಗೆ ನವಾಬ
ಸೂಚನೆ ನೀಡಿದನು;ಆದರೆ ಬ್ರಿಟಿಷರು
ಇದಕ್ಕೆ ಯಾವುದೇ ಗಮನ ಕೊಡಲಿಲ್ಲ.
ಕಾರಣ,
ನವಾಬ ಆಂಗ್ಲರ ಕೆಲವು ವಿಶೇಷ
ಸವಲತ್ತುಗಳನ್ನು ರದ್ದುಪಡಿಸಿದ. ಜೊತೆಗೆ,
ಭಾರತೀಯ ವ್ಯಾಪಾರಿಗಳಿಗೂ “ತೆರಿಗೆ ಮುಕ್ತ ವ್ಯಾಪಾರ” ಮಾಡಲು ಅನುಮತಿ ನೀಡಿದ. ನವಾಬನ ಕ್ರಮದಿಂದ ಮಾರುಕಟ್ಟೆಯಲ್ಲಿ
ಬ್ರಿಟಿಷರು ಮತ್ತು ಭಾರತೀಯ ವ್ಯಾಪಾರಿಗಳ
ನಡುವೆ ಪೈಪೋಟಿ ಏರ್ಪಟ್ಟಿತು. ಬ್ರಿಟಿಷರು ನವಾಬನಿಗೆ ತನ್ನ
ತೆರಿಗೆ ಮುಕ್ತ ವ್ಯಾಪಾರದ ಸೌಲಭ್ಯವನ್ನು
ತಡೆಯುವಂತೆ ಸೂಚಿಸಿದರು. ನವಾಬ ಇದಕ್ಕೆ ಒಪ್ಪಲಿಲ್ಲ.
ಪರಿಣಾಮ
ಘರ್ಷಣೆಗಳು ಆರಂಭವಾದವು.
ಆರಂಭಿಕ ಘರ್ಷಣೆಗಳು:-
1763ರಲ್ಲಿ ಮೋಂಗೇರ್,
ಮುರ್ಶಿದಾಬಾದ್, ಕಾಟ್ವಾ, ಗಿರಿಯ, ಸೂಟಾ
ಮತ್ತು ಉದಯನಾಲಾಗಳಲ್ಲಿ ನಡೆದ ಕದನಗಳಲ್ಲಿ ಮೀರ್
ಖಾಸೀಂನಿಗೆ ಸೋಲುಂಟಾಯಿತು. ಬ್ರಿಟೀಷರು ಪಾಟ್ನಾವನ್ನು ತಮ್ಮ
ವಶಕ್ಕೆ ಪಡೆದರು. ನವಾಬನು ಪುನಃ ಅದನ್ನು ತನ್ನ
ವಶಕ್ಕೆ ಪಡೆದು ೧೪೮ ಕ್ಕೂ
ಹೆಚ್ಚು ಆಂಗ್ಲರನ್ನು ಸೆರೆ ಹಿಡಿದನು. ಇತ್ತ
ಕಲ್ಕತ್ತಾ ಕೌನ್ಸಿಲ್ ಮೀರ್ ಖಾಸೀಂ
ಬದಲಿಗೆ ಮತ್ತೆ ಮೀರ್ ಜಾಫರನನ್ನು
ನವಾಬನ ಹುದ್ದೆಗೇರಿಸಿತು. ಕೋಪಗೊಂಡ ಮೀರ್ ಖಾಸೀಂ
ಬಂಧಿತ ಆಂಗ್ಲರನ್ನು ಕೊಂದನು. ಮುಂದೆ
ಮೀರ್ ಖಾಸೀಂ ಅವಧ್ ಪ್ರಾಂತ್ಯಕ್ಕೆ
ಪಲಾಯನಮಾಡಿದನು. ಅಲ್ಲಿ
ಮೀರ್ ಖಾಸೀಂ ಬ್ರಿಟಿಷರ ವಿರುದ್ಧ
ಮೈತ್ರಿಕೂಟ ರಚಿಸಿದ.
ಮೈತ್ರಿಕೂಟದ
ಸದಸ್ಯರು ಮತ್ತು ಯುದ್ಧದ ಘಟನೆಗಳು:-
ಅವಧ್ ನವಾಬ ಶೂಜ ಉದ್
ದೌಲ ಮತ್ತು ಮೊಗಲ್
ಚಕ್ರವರ್ತಿ ೨ನೆ ಶಾ ಆಲಂ
ಉಳಿದಿಬ್ಬರು ಸದಸ್ಯರು. ಆಂಗ್ಲರನ್ನು
ಬಂಗಾಳದಿಂದ ಓಡಿಸುವುದು ಮೈತ್ರಿಕೂಟದ ಉದ್ಧೇಶವಾಗಿತ್ತು.
ಮೈತ್ರಿಕೂಟದಲ್ಲಿ ಸು. ೫೦ ಸಾವಿರದಷ್ಟು
ಸೈನ್ಯವಿತ್ತು. ಬ್ರಿಟಿಷರ
ಬಳಿ ೭೦೭೨ ರಷ್ಟು ಸೈನ್ಯವಿತ್ತು.
ಹೆಕ್ಟೆರ್
ಮನ್ರೊ ಅದರ ನಾಯಕತ್ವ ವಹಿಸಿದ್ದನು.
ಯುದ್ಧ
ಕೇವಲ ಅರ್ಧ ದಿನದಲ್ಲಿ ಮುಗಿದು
ಹೋಯಿತು.
ಪರಿಣಾಮಗಳು:-
ಬ್ರಿಟಿಷರ ಕಡೆ ಸು. ೮೪೭
ರಷ್ಟು ಸಾವು ಮತ್ತು ಮೈತ್ರಿಕೂಟದ
ಸು. ೨೦೦೦ ಸೈನಿಕರು
ಸತ್ತರು. ಮೀರ್ ಖಾಸೀಂ ರಣರಂಗದಿಂದ
ಪಲಾಯನ ಮಾಡಿದನು. ಶೂಜ
ಉದ್ ದೌಲ ಮತ್ತು
ಮೊಗಲ್ ಚಕ್ರವರ್ತಿ ಇಬ್ಬರೂ ಬ್ರಿಟಿಷರಿಗೆ
ಶರಣಾಗತರಾದರು. ಅಲಹಾಬಾದ್
ಒಪ್ಪಂದದ ಮೂಲಕ ಬಕ್ಸಾರ್ ಯುದ್ಧ
ಮುಕ್ತಾಯವಾಯಿತು.
ಅಲಹಾಬಾದ್
ಒಪ್ಪಂದ – ಆಗಸ್ಟ್ ೧೬, ೧೭೬೫.
ಬಕ್ಸಾರ್ ಯುದ್ಧ ಮುಗಿಯುವ
ವೇಳೆಗೆ ೧೭೬೫ ರಲ್ಲಿ
ರಾಬರ್ಟ್ ಕ್ಲೈವ್ ೨ನೆ ಸಲ
ಬಂಗಾಳದ ಗವರ್ನರ್ ಆಗಿ ಭಾರತಕ್ಕೆ
ಬಂದನು. ಅವನು
ಯುದ್ಧವನ್ನು ಮುಂದುವರಿಸಲು ಇಚ್ಛಿಸದೇ ಶೂಜ್ ಉದ್
ದೌಲ ಮತ್ತು ಶಾ
ಆಲಂರೊಂದಿಗೆ ಒಪ್ಪಂದ ಮಾಡಿಕೊಂಡ. ಒಪ್ಪಂದ ಅಲಹಾಬಾದ್ ನಲ್ಲಿ
ನಡೆಯಿತು. ಒಪ್ಪಂದದ
ಕರಾರುಗಳೆಂದರೆ:-
ಶೂಜ ಉದ್ ದೌಲನಿಗೆ
ಕಾರಾ, ಮಾಣಿಕ್ ಪುರ ಮತ್ತು
ಅಲಹಾಬಾಧ್ ಹೊರತು ಪಡಿಸಿದ ಅವಧ್
ಪ್ರಾಂತ್ಯವನ್ನು ಬಿಟ್ಟು ಕೊಡಲಾಯಿತು. ಇದಕ್ಕೆ ಪ್ರತಿಯಾಗಿ ಅವನು
ಕಂಪೆನಿಗೆ ೫೦ ಲಕ್ಷ
ಕೊಡಲು ಒಪ್ಪಿದ. ಅವಧ್
ನವಾಬನ ಆಸ್ಥಾನದಲ್ಲಿ ಬ್ರಿಟಿಷ್ ಸೈನ್ಯವೊಂದನ್ನು ಇಡುವುದು
ಮತ್ತು ವಾರ್ಷಿಕವಾಗಿ ಅದರ ವೆಚ್ಚವನ್ನು ಕಂಪೆನಿಗೆ ನವಾಬ ಸಲ್ಲಿಸುವುದು.
ಕಾರಾ ಮತ್ತು ಅಲಹಾಬಾದ್‌ಗಳನ್ನು ಮೊಗಲ್
ಚಕ್ರವರ್ತಿಗೆ ಕೊಡಲಾಯಿತು. ಬಂಗಾಳದ ’ದಿವಾನಿ ಹಕ್ಕು’ (ಕಂದಾಯ ವಸೂಲಿ ಮಾಡುವ ಅಧಿಕಾರ)
ನ್ನು ಕಂಪೆನಿಗೆ ಕೊಡಲಾಯಿತು. ಪ್ರತಿಯಾಗಿ ಕಂಪೆನಿ ಚಕ್ರವರ್ತಿಗೆ
ವಾರ್ಷಿಕ ೨೬ ಲಕ್ಷಗಳ
ಕಪ್ಪಕಾಣಿಕೆ ಅಥವಾ ಗೌರವ ಧನ ಕೊಡಲು
ಒಪ್ಪಿತು.
ಯುದ್ಧದ
ಪ್ರಾಮುಖ್ಯತೆ:- ಈ ಯುದ್ಧವು ಪ್ಲಾಸಿ
ಕದನಕ್ಕಿಂತಲೂ ದೂರಗಾಮಿ ಪರಿಣಾಮಗಳನ್ನು ಉಂಟು
ಮಾಡಿತು. ಪ್ಲಾಸಿಯ
ಕದನದಂತೆ ಇದು ಮೋಸದ ಯುದ್ಧವಾಗಿರಲಿಲ್ಲ.
ಬ್ರಿಟಿಷರು
ಮೂವರು ಧೇಶಿಯ ಅರಸರನ್ನು ಸೋಲಿಸಿದ್ದರು.
ಬ್ರೂಮನ್:-
“ಭಾರತದ ಅದೃಷ್ಟವು ಬಕ್ಸಾರ್ ಕದನದ
ಮೇಲೆ ನಿಂತಿತ್ತು.”
ರಾಮ್ಸೆ ಮೈರ್:- “ಯುದ್ಧವು
ಬಂಗಾಳದಲ್ಲಿ ಬ್ರಿಟಿಷರ ಅಧಿಕಾರವನ್ನು ಸ್ಥಿರಪಡಿಸಿತು.
*****
Comments
Post a Comment