ಸಾಹಿತ್ಯಾಧಾರಗಳ ಪ್ರಶ್ನಾವಳಿಗಳು.

ಕೆಳಗಿನ ಪ್ರಶ್ನೆಗಳಿಗೆ ಸಾಹಿತ್ಯಾಧಾರಗಳು ಎಂಬ ಬ್ಲಾಗ್‌ ನೋಟ್ಸ್‌ ಓದಿಕೊಂಡು ಉತ್ತರಗಳನ್ನು ಸಿದ್ಧಪಡಿಸಿರಿ

1)      ಸಾಹಿತ್ಯಾಧಾರಗಳು ಎಂದರೇನು?

2)      ಯಾವುವು ಸಾಹಿತ್ಯಾಧಾರಗಳು?

3)      ಸಾಹಿತ್ಯಾಧಾರಗಳು ಯಾವೆಲ್ಲಾ ಭಾಷೆಗಳಲ್ಲಿ ಕಂಡುಬರುತ್ತವೆ?

4)      ದೇಶೀಯ ಭಾಷೆಗಳು ಯಾವುವು?

5)      ಸಾಹಿತ್ಯಾಧಾರದ ಪ್ರಮುಖ ವರ್ಗಗಳು ಯಾವುವು?

6)      ದೇಶೀಯ ಸಾಹಿತ್ಯಾಧಾರಗಳನ್ನು ಮತ್ತೆ ಎಷ್ಟು ವಿಧವಾಗಿ ವಿಂಗಡಿಸಬಹುದು?

7)      ಅವು ಯಾವುವು?

8)      ವಿದೇಶೀಯ ಸಾಹಿತ್ಯಾಧಾರಗಳನ್ನು ಮತ್ತೆ ಎಷ್ಟು ವಿಧವಾಗಿ ವಿಂಗಡಿಸಬಹುದು?

9)      ಅವು ಯಾವುವು?

10)   ಧಾರ್ಮಿಕ ಸಾಹಿತ್ಯಾಧಾರಗಳನ್ನು ಮತ್ತೆ ಎಷ್ಟು ವಿಧಗಳಾಗಿ ವಿಂಗಡಿಸಬಹುದು?

11)   ಅವು ಯಾವುವು?

12)   ಯಾವುವು ಐತಿಹಾಸಿಕ ಆಧಾರಗಳು ಎನಿಸಿಕೊಳ್ಳುತ್ತವೆ?

13)   ಐತಿಹಾಸಿಕ ಸಾಹಿತ್ಯವನ್ನು ಸಾಮಾನ್ಯವಾಗಿ ಯಾರು ರಚಿಸುತ್ತಿದ್ದರು?

14)   ಸಂಗಂ ಸಾಹಿತ್ಯ ಎಂದರೆ ಯಾವುದು?

15)   ವೈಜ್ಞಾನಿಕ ಸಾಹಿತ್ಯ ಎಂದರೇನು?

16)   ವೈದಿಕ ಸಾಹಿತ್ಯ ಯಾವ ಭಾಷೆಯಲ್ಲಿ ಕಂಡುಬರುತ್ತವೆ?

17)   ವೈದಿಕ ಸಾಹಿತ್ಯದ ಕೆಲವು ಕೃತಿಗಳನ್ನು ಹೆಸರಿಸಿ.

18)   ಜೈನ ಸಾಹಿತ್ಯ ಕೃತಿಗಳು ಯಾವ ಭಾಷೆಯಲ್ಲಿ ಕಂಡುಬರುತ್ತವೆ?

19)   ಬೌದ್ಧ ಸಾಹಿತ್ಯದ ಕೃತಿಗಳು ಯಾವ ಭಾಷೆಯಲ್ಲಿ ಕಂಡುಬರುತ್ತವೆ?

20)   ಜೈನ ಸಾಹಿತ್ಯದ ಕೆಲವು ಕೃತಿಗಳನ್ನು ಹೆಸರಿಸಿ.

21)   ಬೌದ್ಧ ಸಾಹಿತ್ಯದ ಕೆಲವು ಕೃತಿಗಳನ್ನು ಹೆಸರಿಸಿ.

22)   ಹರ್ಷನ ಜೀವನ ಚರಿತ್ರೆ ಯಾವುದು?

23)   ಬರೆದವರು ಯಾರು?

24)   ಬಿಲ್ಹಣನ ಕೃತಿ ಯಾವುದು?

25)   ರಾಜತರಂಗಿಣಿಯ ಕರ್ತೃ ಯಾರು?

26)   ರಾಜತರಂಗಿಣಿ ಯಾವ ರಾಜ್ಯದ ಇತಿಹಾಸವನ್ನು ಒಳಗೊಂಡಿದೆ?

27)   ಬುದ್ಧ ಚರಿತ್ರೆ ರಚಿಸಿದವರು ಯಾರು?

28)   ಜಾತಕ ಕತೆಗಳು ಎಂದರೇನು?

29)   ವಿನಯಪೀಠಕ ಯಾವ ಮಾಹಿತಿಯನ್ನು ಒದಗಿಸುತ್ತದೆ?

30)   ಸುತ್ತಪೀಠಕ ಯಾವ ಮಾಹಿತಿಯನ್ನು ಒದಗಿಸುತ್ತದೆ?

31)   ಅಭಿಧಮ್ಮಪೀಠಕ ಯಾವ ಮಾಹಿತಿಯನ್ನು ಒದಗಿಸುತ್ತದೆ?

32)   ಮಹಾಜನಪದಗಳ ವಿವರ ಯಾವ ಕೃತಿಯಲ್ಲಿ ಕಂಡುಬರುತ್ತದೆ?

33)   ಮಿಲಿಂದಪನ್ಹ ಯಾವುದರ ಸಾರವಾಗಿದೆ?

34)   ಅರ್ಥಶಾಸ್ತ್ರದ ಕರ್ತೃ ಯಾರು?

35)   ಅರ್ಥಶಾಸ್ತ್ರ ಯಾವ ರಾಜಮನೆತನದ ಮಾಹಿತಿ ಒದಗಿಸುತ್ತದೆ?

36)   ಅಷ್ಟಾಧ್ಯಾಯಿ ಯಾರು ರಚಿಸಿದ ಕೃತಿ?

37)   ಅದು ಯಾವ ಮಾಹಿತಿಯನ್ನು ಒದಗಿಸುತ್ತದೆ?

38)   ವಾಕ್ಪತಿ ರಚಿಸಿದ ಕೃತಿ ಯಾವುದು?

39)   ಚಾಂದ್ಬರ್ದಾಯಿ ರಚಿಸಿದ ಕೃತಿ ಯಾವುದು?

40)   ಗುಪ್ತರ ಆಡಳಿತ ಕುರಿತ ಮಾಹಿತಿ ಯಾವ ಕೃತಿಯಲ್ಲಿ ಕಂಡುಬರುತ್ತದೆ?

41)   ರಘುವಂಶದ ಕರ್ತೃ  ಯಾರು?

42)   ಮಾಳವಿಕಾಗ್ನಿಮಿತ್ರ ಯಾವ ಮಾಹಿತಿಯನ್ನು ಒದಗಿಸುತ್ತದೆ?

43)   ಗುಪ್ತರ ಕಾಲದ ಜನಜೀವನದ ಮಾಹಿತಿ ಕಾಳಿದಾಸನ ಯಾವ ಕೃತಿಗಳಲ್ಲಿ ಕಂಡುಬರುತ್ತದೆ?

44)   ಮುದ್ರಾರಾಕ್ಷಸ ಇದು ಯಾರ ಕೃತಿ?

45)   ವಿಶಾಖದತ್ತನ ಮತ್ತೊಂದು ಕೃತಿ ಯಾವುದು?

46)   ಹರ್ಷವರ್ಧನನ ನಾಟಕಗಳು ಯಾವುವು?

47)   ಶೂದ್ರಕನ ಕೃತಿ ಯಾವುದು?

48)   ಸಂಗಂ ಸಾಹಿತ್ಯ ಯಾವ ಕಾಲಘಟ್ಟದಲ್ಲಿ ರಚಿತವಾಗಿದೆ ಎಂದು ನಂಬಲಾಗಿದೆ?

49)   ಸಂಗಂ ಸಾಹಿತ್ಯ ಕಂಡು ಬರುವ ಪ್ರದೇಶ ಯಾವುದು?

50)   ಎಷ್ಟು ಸಂಗಂಗಳು ಇದ್ದವು ಎನ್ನಲಾಗಿದೆ?

51)   ಇಳಂಗೊ ಅಡಿಗಳ್ ರಚಿತ ಕೃತಿ ಯಾವುದು?

52)   ಚತ್ತನಾರನ ಕೃತಿ ಯಾವುದು?

53)   ತಿರುಕ್ಕುರಳ್ಇದು ಯಾರ ಕೃತಿ?

54)   ಸೆಕ್ಕಿಲಾರನು ರಚಿಸಿದ ಕೃತಿ ಯಾವುದು?

55)   ಶುಶ್ರೂತನ ಕೃತಿ ಯಾವುದು?

56)   ಚರಕ ಸಂಹಿತೆ ಇದು ಯಾರು ರಚಿಸಿದ ಕೃತಿ?

57)   ಬ್ರಹ್ಮಗುಪ್ತನ ಕೃತಿ ಯಾವುದು?

58)   ಆರ್ಯಭಟನು ಯಾರ ಕಾಲದಲ್ಲಿ ಜೀವಿಸಿದ್ದನು?

59)   ಕೀರ್ತಿವರ್ಮನ ಕೃತಿ ಯಾವುದು?

60)   ಗಜಾಷ್ಟಕ ರಚಿಸಿದ ರಾಜ ಯಾರು?

61)   ಗಜಶಾಸ್ತ್ರ ಇದು ಯಾರ ಕೃತಿ?

62)   ಲೋಕೋಪಕಾರದ ಕರ್ತೃ ಯಾರು?

63)   ಲೀಲಾವತಿಯ ಕರ್ತೃ ಯಾರು?

64)   ವೈಜ್ಞಾನಿಕ ಕೃತಿಗಳು ಒದಗಿಸುವ ಇನ್ನಿತರ ಮಾಹಿತಿಗಳು ಯಾವುವು?

65)   ವಿದೇಶೀಯ ಸಾಹಿತ್ಯ ಯಾರಿಂದ ರಚಿತವಾಗುತ್ತಿತ್ತು?

66)   ಅನಾಮಧೇಯ ರಚಿಸಿದ ಕೃತಿಯ ಹೆಸರೇನು?

67)   ಟಾಲೆಮಿಯು ಯಾವ ಕೃತಿಯನ್ನು ರಚಿಸಿದನು?

68)   ಸೆಲ್ಯುಕಸ್ಯಾವ ರಾಯಭಾರಿಯನ್ನು ಭಾರತಕ್ಕೆ ಕಳುಹಿಸಿದ್ದನು?

69)   ಇಂಡಿಕಾ ಇದು ಯಾರ ಕೃತಿ?

70)   ಇಂಡಿಕಾ ಕೃತಿ ಯಾವ ಅರಸರ ಮಾಹಿತಿ ಒದಗಿಸುತ್ತದೆ?

71)   ಪಾಟಲೀಪುತ್ರದ ಆಡಳಿತ ವ್ಯವಸ್ಥೆಯ ವಿವರಗಳು ಯಾವ ವಿದೇಶೀ ಕೃತಿಯಲ್ಲಿ ಕಂಡುಬಂದಿವೆ?

72)   ಸಿಂಹಳ ದೇಶದ ಪ್ರಾಚೀನ ಕೃತಿಗಳು ಯಾವುವು?

73)   ಅವು ಯಾವ ಭಾಷೆಯಲ್ಲಿ ರಚಿತಗೊಂಡಿವೆ?

74)   ಪ್ಲೀನಿಯ ಬರವಣಿಗೆಗಳು ಯಾವ ಮಾಹಿತಿಯನ್ನು ಒದಗಿಸುತ್ತವೆ?

75)   ಫಾಹಿಯಾನ್ಯಾವ ದೇಶದ ಯಾತ್ರಿಕ?

76)   ಅವನು ಯಾರ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ್ದನು?

77)   ಹು-ಎನ್-ತ್ಸಾಂಗ್ ವಿವರಗಳು ಯಾವ ನಿರ್ಣಾಯಕ ಯುದ್ಧದ ಮಾಹಿತಿ ಒದಗಿಸುತ್ತವೆ?

78)   ಇತ್ಸಿಂಗ್ಯಾವ ಕಾಲಘಟ್ಟದಲ್ಲಿ ಭಾರತಕ್ಕೆ ಭೇಟಿ ನೀಡಿದ್ದನು?

79)   ಯಾತ್ರಿಕರ ರಾಜ ಎಂದು ಹೆಸರಾದ ವ್ಯಕ್ತಿ ಯಾರು?

80)   ಬೌದ್ಧ ನಾಡಿನ ದಾಖಲೆಗಳು ಎಂಬ ಕೃತಿ ರಚಿಸಿದವರು ಯಾರು?

81)   ತಬರಿ ಯಾರ ರಾಯಭಾರಿಯಾಗಿದ್ದನು?

82)   ಅವನು ಯಾರ ಆಸ್ಥಾನಕ್ಕೆ ಭೇಟಿ ನೀಡಿದ್ದನು?

83)   ಸುಲೇಮಾನ್ಭಾರತಕ್ಕೆ ಭೇಟಿ ನೀಡಿದ್ದ ಕಾಲ ಯಾವುದು?

84)   ಅವನು ಯಾವ ಪ್ರಸಿದ್ಧ ಅರಸನ ಸಾಮ್ರಾಜ್ಯದ ವಿವರಗಳನ್ನು ನೀಡಿದ್ದಾನೆ?

85)   ಅಲ್ಬೆರೂನಿ ಯಾರೊಂದಿಗೆ ಭಾರತಕ್ಕೆ ಬಂದನು?

86)   ತಾರೀಕ್ ಯಾಮಿನಿ ಇದು ಯಾರ ಕೃತಿ?

87)   ಅಲ್ಬೆರೂನಿಯ ಕೃತಿ ಯಾವುದು?

88)   ಯಾತ್ರಿಕ ತ್ರಯರು ಎಂದು ಯಾರನ್ನು ಕರೆಯುತ್ತಾರೆ?

89)   ಫಾಹಿಯಾನನ ಕೃತಿ ಯಾವುದು?

90)   ವಿದೇಶೀಯ ಆಧಾರಗಳನ್ನು ಇತಿಹಾಸ ಪುನರ್ರಚನೆಗೆ ಬಳಸುವಾಗ ಇತಿಹಾಸಕಾರ ಏಕೆ ಎಚ್ಚರವಹಿಸಬೇಕು?

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources