ತಾಮ್ರಶಿಲಾಯುಗ ಸಂಸ್ಕೃತಿ; ಆಹಾರೋತ್ಪಾದನೆಯ ಆವಿಷ್ಕಾರ, ತಾಮ್ರಶಿಲಾಯುಗ ಸಂಸ್ಕೃತಿಗಳ ಪ್ರಾದೇಶಿಕ ಮತ್ತು ಕಾಲಾನುಗತ ಹಂಚಿಕೆ.

ಅಹರ ಸಂಸ್ಕೃತಿ: ಇದು ರಾಜಸ್ಥಾನದ ಉದಯಪುರ ಜಿಲ್ಲೆಯ ಅಹರ ಗ್ರಾಮದಲ್ಲಿ ಕಂಡುಬಂದಿದೆ.  ಅಂದರೆ ಮೇವಾರ, ರಾಜಾಸ್ಥಾನದ ಆಗ್ನೇಯ ಭಾಗದಲ್ಲಿದೆ. ಹೆಚ್.‌ ಡಿ. ಸಂಕಾಲಿಯ 1961-62 ರಲ್ಲಿ ಸಂಶೋಧನೆ. ಒಟ್ಟು ೬೦ ಕ್ಕೂ ಅಧಿಕ ನೆಲೆಗಳ ಪತ್ತೆ. ಅವುಗಳಲ್ಲಿ ಅಹರ್‌ ಮತ್ತು ಬಾಲಾಥಲ್‌ ಪ್ರಮುಖ ಕೇಂದ್ರಗಳು. ಎರಡು ಹಂತಗಳನ್ನು ಗುರ್ತಿಸಲಾಗಿದೆ. 1. ತಾಮ್ರಶಿಲಾಯುಗ ಮತ್ತು 2. ಇತಿಹಾಸ ಆರಂಭ ಕಾಲ. ಇದರ ಕಾಲವನ್ನು ಸಾ.ಶ.ಪೂ. ೨೦೨೫ ರಿಂದ ೧೨೭೦ ವರೆಗೆ ಎಂದು ನಿಗದಿ ಮಾಡಲಾಗಿದೆ.

ಬಾಲಾಥಲ್‌ ಸಂಸ್ಕೃತಿಯ ಕಾಲವನ್ನು ಸಾ.ಶ.ಪೂ. ೩ ಶತಮಾನದಿಂದ ಸಾ.ಶ.ಪೂ. ೧೫೦೦ ವರೆಗೆ ನಿಗದಿ ಮಾಡಲಾಗಿದೆ. ಮಣ್ಣಿನ ಮನೆಗಳು, ಮೃದುಕಲ್ಲಿನ, ಬೆಲೆ ಬಾಳುವ ಕಲ್ಲುಗಳು, ದಂತಗಳು, ಚಿಪ್ಪುಗಳು  ಮತ್ತು ಸುಟ್ಟ ಮಣ್ಣಿನ ಮಣಿಗಳು ಕಂಡುಬಂದಿವೆ, ತಾಮ್ರದ ಗಣಿಗಳ ಪತ್ತೆಯಾಗಿದೆ; ಇಲ್ಲಿನ ತಾಮ್ರವು ಬಹುಶಃ ಹರಪ್ಪಾ ನಾಗರೀಕತೆಗೆ ಪೂರೈಕೆ ಆಗಿರಬಹುದು. ಅಕ್ಕಿ, ಗೋದಿ, ಜೋಳ, ಬಾರ್ಲಿ, ಆಡು, ಕುರಿ, ದನ, ಎಮ್ಮೆ, ಹಂದಿ, ನಾಇ ಸಾಕಾಣಿಕೆ ಮಾಡಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ. ಸಾಮಾಜಿಕವಾಗಿ ಕುಶಲಕರ್ಮಿಗಳು ಇದ್ದರು. ಆಡಳಿತ ಪದ್ಧತಿ ಬಗ್ಗೆ ನಿಖರ ಮಾಹಿತಿ ಅಲಭ್ಯ. ಆದರೆ ಕೆಲವು ಕಡೆ ಕೋಟೆಗಳಂತಹ ಅವಶೇಷಗಳಿವೆ.

ಕಾಯತ್ತ ಸಂಸ್ಕೃತಿ: ಇದು ಮಾಳವ ಸಂಸ್ಕೃತಿಯ ಒಂದು ಭಾಗವಾಗಿದೆ. ಮಧ್ಯಪ್ರದೇಶದ ಉಜ್ಜಯಿನಿ ಬಳಿ ಇದೆ. ಕಪಿತ್ತಕ ಎಂಬ ಸ್ಥಳದ ಕಾರಣ ಆ ಹೆಸರು ಬಂದಿದೆ. ನಾಗ್ಡಾ, ಎರಾನ್‌ ಇಲ್ಲಿನ ಇನ್ನಿತರ ಪ್ರಮುಖ ನೆಲೆಗಳಾಗಿವೆ. ಈ ಸಂಸ್ಕೃತಿಯು ಸಾ.ಶ.ಪೂ. 1700ರ ವೇಳೆಗೆ ಮಹಾರಾಷ್ಟ್ರಕ್ಕೂ   ವ್ಯಾಪಿಸಿತು. ಭೀಮಾ ತೀರದ ಇನಾಂಗಾವ್‌, ಗೋದಾವರಿ ತೀರದ  ಧೀಮಾಬಾದ್‌ ಮತ್ತು ತಪತಿ ತೀರದ ಪ್ರಕಾಶ್‌ ಎಂಬುವವು ಮಹಾರಾಷ್ಟ್ರದ ಪ್ರಮುಖ ನೆಲೆಗಳಾಗಿವೆ. ಸಾ.ಶ.ಪೂ. ೨೪೦೦ ರಿಂದ ಸಾ.ಶ.ಪೂ. ೬೦೦ ವರೆಗೆ ಐದು ಹಂತಗಳ ಸಂಸ್ಕೃತಿಗಳ ಸಂಶೋಧನೆ ಮಾಡಲಾಗಿದೆ. ೪೦ಕ್ಕೂ ಹೆಚ್ಚು ನೆಲೆಗಳು ಪತ್ತೆಯಾಗಿವೆ.

ಇಲ್ಲಿ ತಾಮ್ರ ಮತ್ತು ಶಿಲಾ ಉಪಕರಣಗಳೆರಡೂ ಕಂಡುಬಂದಿವೆ. ಸಣ್ಣ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದ ಕುರುಹುಗಳು ಲಭಿಸಿವೆ. ಮಿಶ್ರ ಆರ್ಥಿಕ ವ್ಯವಸ್ಥೆ ಇಲ್ಲಿ ಕಂಡುಬಂದಿದೆ. ಭೂಕಂಪನದ ಕಾರಣ ಇಲ್ಲಿನ ನೆಲೆಗಳು ನಾಶವಾಹಿರಬಹುದು.

ಜೊರ್ವಿ ಸಂಸ್ಕೃತಿ: ಈ ಸಂಸ್ಕೃತಿಯು  ಮಹಾರಾಷ್ಟ್ರದಲ್ಲಿ ಕಂಡುಬಂದಿದೆ. ಅರಬ್ಬಿ ತೀರದಿಂದ ವಿದರ್ಭದವರೆಗೆ ಇದರ ವ್ಯಾಪ್ತಿ ಹರಡಿದೆ.

ಭಾರತದಲ್ಲಿ ತಾಮ್ರ-ಶಿಲಾಯುಗ ಸಂಸ್ಕೃತಿಯ ನೆಲೆಗಳ ರಾಜ್ಯವಾರು ವಿವರ:-

ಹರ್ಯಾಣ – 5

ರಾಜಸ್ಥಾನ – 6

ಉತ್ತರ ಪ್ರದೇಶ – 33

ಬಿಹಾರ – 19

ಪಶ್ಚಿಮ ಬಂಗಾಳ – 6

ಒರಿಸ್ಸಾ – 7

ಮಧ್ಯ ಪ್ರದೇಶ – 8

ಕರ್ನಾಟಕ – 1

*****

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ