ಸಾಹಿತ್ಯಾಧಾರಗಳು - Literary Sources.

   ಲಿಖಿತ ಅಂದರೆ ಬರವಣಿಗೆಯ ರೂಪದಲ್ಲಿರುವ ಆಧಾರಗಳನ್ನು ಸಾಹಿತ್ಯಾಧಾರಗಳು ಎನ್ನುವರು. ಇವುಗಳು ದೇಶೀಯ ಮತ್ತು ವಿದೇಶೀಯ ಬರವಣಿಗೆ ಎರಡರಲ್ಲೂ ಕಂಡುಬರುತ್ತವೆ. ದೇಶೀಯ ಭಾಷೆಗಳಾದ ಪಾಲಿ, ಪ್ರಾಕೃತ, ಸಂಸ್ಕೃತ, ಅರ್ಧಮಾಗಧಿ, ಕನ್ನಡ, ತೆಲುಗು, ತಮಿಳು ಮತ್ತು ಇನ್ನಿತರ ಭಾಷೆಗಳಲ್ಲಿ ಆಧಾರಗಳು ಕಂಡುಬರುತ್ತವೆ. ವಿದೇಶೀಯ ಭಾಷೆಗಳಾದ ಗ್ರೀಕ್‌, ರೋಮನ್‌, ಪರ್ಷಿಯಾ, ಅರಬ್‌, ತುರ್ಕಿ ಮತ್ತು ಚೀನೀ ಭಾಷೆಗಳಲ್ಲೂ ಸಹ ಕಂಡುಬರುತ್ತವೆ. ಧಾರ್ಮಿಕ ಕೃತಿಗಳು, ಲೌಕಿಕ ಕೃತಿಗಳು, ಐತಿಹಾಸಿಕ ಕೃತಿಗಳು, ಪ್ರವಾಸ ಕಥನಗಳುಹೀಗೆ ವಿವಿಧ ರೀತಿಯ ಬರವಣಿಗೆಗಳನ್ನು ಇವು ಒಳಗೊಳ್ಳುತ್ತವೆ.

 

    ಅಧ್ಯಯನದ ದೃಷ್ಟಿಯಿಂದ ಇವುಗಳನ್ನು 1. ದೇಶೀಯ ಮತ್ತು 2. ವಿದೇಶೀಯ ಬರವಣಿಗೆಗಳು ಎಂದು ವಿಭಾಗಿಸಬಹುದು.

 

1.     ದೇಶೀಯ ಬರವಣಿಗೆಗಳು: ಭಾರತೀಯ ಭಾಷೆಗಳಲ್ಲಿ (ಮೇಲೆ ಹೇಳಿರುವ), ಭಾರತೀಯರಿಂದಲೇ ರಚಿತವಾದ ಲಿಖಿತ ರೂಪದ ಆಧಾರಗಳಿವು. ಇವುಗಳನ್ನು ಮತ್ತೆ ಉಪವಿಭಾಗಗಳಾಗಿ ಮಾಡಬಹುದು: ಅವುಗಳೆಂದರೆ,

 

. ಧಾರ್ಮಿಕ ಸಾಹಿತ್ಯ.

 

. ಐತಿಹಾಸಿಕ ಸಾಹಿತ್ಯ.

 

. ಸಂಗಂ ಸಾಹಿತ್ಯ ಮತ್ತು

 

. ವೈಜ್ಞಾನಿಕ ಸಾಹಿತ್ಯ.

 

 

 

. ಧಾರ್ಮಿಕ ಸಾಹಿತ್ಯ: ಧರ್ಮನಿಷ್ಠರಾದ ಪ್ರಾಚೀನ ಭಾರತೀಯರು ವಿಫುಲ ಧಾರ್ಮಿಕ ಸಾಹಿತ್ಯ ರಚಿಸಿದ್ದಾರೆ. ಸಾಹಿತ್ಯವನ್ನು ಮತ್ತೆ ವೈದಿಕ, ಜೈನ ಮತ್ತು ಬೌದ್ಧ ಸಾಹಿತ್ಯವೆಂದು ಮರುವಿಭಾಗ ಮಾಡಬಹುದು.

 

1. ವೈದಿಕ ಸಾಹಿತ್ಯ: ಸಾಹಿತ್ಯದ ಕೃತಿಗಳು ವೇದಭಾಷೆ ಮತ್ತು ಸಂಸ್ಕೃತ ಭಾಷೆಗಳಲ್ಲಿವೆ. ವೇದಗಳು, ಬ್ರಾಹ್ಮಣಕಗಳು, ಅರಣ್ಯಕಗಳು, ಉಪನಿಷತ್ತುಗಳು, ಧರ್ಮಶಾಸ್ತ್ರಗಳು, ಸೂತ್ರಗಳು, ಪುರಾಣಗಳು ಮತ್ತು ಮಹಾಕಾವ್ಯಗಳು ಇದರಲ್ಲಿ ಸೇರಿವೆ.

 

2. ಜೈನ ಸಾಹಿತ್ಯ: ಅರ್ಧಮಾಗಧಿ ಭಾಷೆಯಲ್ಲಿವೆ. ಅಂಗಗಳು, ಉಪಾಂಗಗಳು ಮತ್ತು ಜೈನ ಸೂತ್ರಗಳು ಇವುಗಳಲ್ಲಿ ಸೇರಿವೆ. ಆಚಾರಾಂಗ, ಧವಳ ಮತ್ತು ಜಯಧವಳ ಮುಖ್ಯವಾದವು. ಮಹಾವೀರನ ಜೀವನ & ಬೋಧನೆಗಳನ್ನು ಒಳಗೊಂಡಿವೆ.

 

3. ಬೌದ್ಧ ಸಾಹಿತ್ಯ: ಪಾಲಿ ಭಾಷೆಗಳಲ್ಲಿವೆ. ತ್ರಿಪಿಠಕಗಳು ಮತ್ತು ಜಾತಕ ಕತೆಗಳು ಅಲ್ಲದೇ ಅನೇಕ ಬೌದ್ಧ ಕೃತಿಗಳು ಇದರಲ್ಲಿ ಸೇರಿವೆ.

 

ಕೃತಿ ಮತ್ತು ಒದಗಿಸುವ ಮಾಹಿತಿ

 

ವಿನಯಪೀಠಕಬೌದ್ಧಭಿಕ್ಷುಗಳು ಪಾಲಿಸಬೇಕಾದ ನಿಯಮಗಳು.

 

ಸುತ್ತ ಪೀಠಕಬುದ್ಧನ ಬೋಧನೆಗಳು.

 

ಅಭಿಧಮ್ಮ ಪೀಠಕಬುದ್ಧನ ಜೀವನ ಮತ್ತು ಮಹಾಜನಪದಗಳ ಕುರಿತ ಮಾಃಇತಿ.ಅಂಗುತ್ತರ ನಿಖಾಯಮಹಾಜನಪದಗಳ ಉಲ್ಲೇಖ, .ಪೂ. ಆರನೆ ಶತಮಾನದ ಸಾಮಾಜಿಕ ಜೀವನ.

 

ದಿಗ ನಿಖಾಯ.ಪೂ. ಆರನೆ ಶತಮಾನದ ಸಾಮಾಜಿಕ ಜೀವನ ಕುರಿತ ಮಾಹಿತಿ.

 

ಜಾತಕ ಕತೆಗಳುಬುದ್ಧನ ಪೂರ್ವಜನ್ಮದ ಕತೆಗಳು. 549 ಇವೆ.

 

ದೀಪವಂಶ & ಮಹಾವಂಶಸಿಂಹಳಿ ಭಾಷೆಯಲ್ಲಿರುವ ಇವು ಪ್ರಾಚೀನ ಶ್ರೀಲಂಕಾದ ಇತಿಹಾಸ ಮತ್ತು ಭಾರತದೊಂದಿಗಿನ ಸಂಬಂಧಗಳ ವಿವರಗಳನ್ನು ಒಳಗೊಂಡಿವೆ.

 

ಮಿಲಿಂದ ಪನ್ಹಇಂಡೋ-ಗ್ರೀಕ್ಅರಸ ಮಿನಾಂಡರ ಮತ್ತು ಬೌದ್ಧಪಂಡಿತ ನಾಗಸೇನರ ನಡುವಣ ಸಂಭಾಷಣೆಗಳ ಸಾರವನ್ನು ಒಳಗೊಂಡಿದೆ.

 

ಬುದ್ಧಚರಿತೆ-ಅಶ್ವಘೋಷಬುದ್ಧನ ಜೀವನ ಚರಿತ್ರೆ.

 

   ಜೊತೆಗೆ, ಅಭಿಧಮ್ಮಕೋಶ, ದಿವ್ಯಾವದಾನ,, ಮಾಧ್ಯಮಿಕ ಸೂತ್ರ, ಮಹಾಭಾಷ್ಯ ಗಳಂತಹ ಬೌದ್ಧ ಕೃತಿಗಳಿಂದ ಹೇರಳ ಐತಿಹಾಸಿಕ ಮಾಹಿತಿ ಲಭ್ಯ.

 

 

 

. ಐತಿಹಾಸಿಕ ಅಥವಾ ಲೌಕಿಕ ಸಾಹಿತ್ಯ: ಇತಿಹಾಸ ಪುನರ್ರಚನೆಗೆ ಹೆಚ್ಚಿನ ಮಾಹಿತಿ ಒದಗಿಸುವ ಸಾಹಿತ್ಯವಿದು. ಆಸ್ಥಾನಕವಿಗಳಿಂದ ರಚಿತವಾದ ಸಾಹಿತ್ಯದಲ್ಲಿ ಆತ್ಮಚರಿತ್ರೆಗಳು, ಜೀವನಚರಿತ್ರೆಗಳು, ರಾಜಾವಳಿಗಳು, ನಾಟಕಗಳು, ಕಾದಂಬರಿಗಳು, ವ್ಯಾಕರಣ ಗ್ರಂಥಗಳು ಒಳಗೊಂಡಿರುತ್ತವೆ. ಹೆಚ್ಚು ನಂಬಲರ್ಹ ಮಾಹಿತಿ ಇವುಗಳಿಂದ ಲಭ್ಯ.

 

   ಕೆಲವು ಪ್ರಮುಖ ಕೃತಿಗಳು ಮತ್ತು ಅವು ಒದಗಿಸುವ ಮಾಃಇತಿಗಳು ಕೆಳಕಂಡಂತಿವೆ:-

 

ಅರ್ಥಶಾಸ್ತ್ರ: ಕೌಟಿಲ್ಯಮೌರ್ಯರ ಕುರಿತ ಮಾಹಿತಿ.

 

ಅಷ್ಟಾಧ್ಯಯಿ: ಫಾಣಿನಿಪ್ರಾಚೀನ ಗಣರಾಜ್ಯಗಳು ಮತ್ತು ಭಾಷಾಶಾಸ್ತ್ರದ ಮಾಃಇತಿ.

 

ಬುದ್ಧಚರಿತೆ: ಅಶ್ವಘೋಷಬುದ್ಧನ ಜೀವನ ಚರಿತ್ರೆ.

 

ಹರ್ಷಚರಿತೆ: ಬಾಣಭಟ್ಟಹರ್ಷನ ಜೀವನ ಚರಿತ್ರೆ.

 

ಭೋಜಪ್ರಬಂಧಂ: ಬಲ್ಲಾಳಭೋಜರಾಜನ ಜೀವನ ಚರಿತ್ರೆ.

 

ಗೌಡವಾಹೊ: ವಾಕ್ಪತಿಕನೋಜದ ರಾಜ ಯಶೋವರ್ಮನ ಜೀವನ ಚರಿತ್ರೆ.

 

ಹಮ್ಮೀರಕಾವ್ಯ; ನಯಚಂದ್ರಚೌಹಾಣ ರಾಜ ಹಮ್ಮೀರನ ಸಾಹಸಗಳು.

 

ಪೃಥ್ವಿರಾಜ ರಾಸೋ: ಚಾಂದ್ಬರ್ದಾಯಿಪೃಥ್ವಿರಾಜನ ಜೀವನ ಚರಿತ್ರೆ.

 

ವಿಕ್ರಮಾಂಕದೇವ ಚರಿತಂ: ಬಿಲ್ಹಣಆರನೆ ವಿಕ್ರಮಾದಿತ್ಯನ ಜೀವನ ಚರಿತ್ರೆ.

 

ನೀತಿಸಾರ: ಕಾಮಂಡಕಗುಪ್ತರ ಆಡಳಿತ ನೀತಿ ಕುರಿತ ಮಾಃಇತಿ.

 

ರಘುವಂಶ: ಕಾಳಿದಾಸಗುಪ್ತರ ಎರಡನೆ ಚಂದ್ರಗುಪ್ತನ ಮಾಃಇತಿ.

 

ಮಾಳವಿಕಾಗ್ನಿಮಿತ್ರ: ಕಾಳಿದಾಸವಿದಿಶಾ & ವಿದರ್ಭಗಳ ನಡುವಣ ಯುದ್ಧದ ಮಾಃಇತಿ.

 

ಮೇಘದೂತ, ವಿಕ್ರಮೋರ್ವಶೀಯ & ಶಾಕುಂತಲಾ ನಾಟಕಗಳಲ್ಲಿ ಗುಪ್ತರ ಕಾಲದ ಜನಜೀವನದ ಮಾಹಿತಿ.

 

ಮುದ್ರಾರಾಕ್ಷಸ: ವಿಶಾಖದತ್ತನಂದರ ನಿರ್ಮೂಲನೆ ಮತ್ತು ಮೌರ್ಯ ರಾಜ್ಯದ ಸ್ಥಾಪನೆಯ ವಿವರಗಳು.

 

ದೇವಿಚಂದ್ರಗುಪ್ತಂ: ವಿಶಾಖದತ್ತಒಂದನೇ ಚಂದ್ರಗುಪ್ತ & ಕುಮಾರದೇವಿಯರ ವಿವಾಹದ ಮಾಹಿತಿ.

 

ಭಾಸನ 13 ನಾಟಕಗಳು: ಗುಪ್ತರ ಕಾಲದ ಮಾಹಿತಿ.

 

ರತ್ನಾವಳಿ, ನಾಗಾನಂದ & ಪ್ರಿಯದರ್ಶಿಕಾ: ಹರ್ಷವರ್ಧನಏಳನೆ ಶತಮಾನದ ಜನಜೀವನದ ಮಾಹಿತಿ.

 

ರಾಜತರಂಗಿಣಿ: ಕಲ್ಹಣಕಾಶ್ಮೀರದ ಇತಿಹಾಸ.

 

  ಇವುಗಳಲ್ಲದೆ ಕೆಳಗಿನ ಕೃತಿಗಳಿಂದಲೂ ಸಹ ಐತಿಹಾಸಿಕ ಮಾಹಿತಿ ಲಭ್ಯ:

 

ಹರಿಸೇನನ ಬೃಹತ್ಕಥಾಕೋಶ, ವಾತ್ಸಾಯನನ ಕಾಮಸೂತ್ರ, ಶೂದ್ರಕನ ಮೃಚ್ಛಕಟಿಕಾ, ಭಾರವಿಯ ಕಿರಾತಾರ್ಜುನೀಯ, ವಿಷ್ಣುಶರ್ಮನ ಪಂಚತಂತ್ರ, ದಂಡಿಯ ಕಾವ್ಯಾದರ್ಶ, ಆರ್ಯಭಟನ ಆರ್ಯಭಟೀಯಂ, ಜಯದೇವನ ಗೀತಗೋವಿಂದ, ಭಾಸ್ಕರಾಚಾರ್ಯನ ಲೀಲಾವತಿ, ರಾಜಶೇಖರನ ಪ್ರಬಂಧಕೋಶ, ಜಯಸಿಂಹನ ಹಮ್ಮೀರಮದಮರ್ದನ, ಪದ್ಮಗುಪ್ತನ ನವಶಶಾಂಕಚರಿತೆ ಮತ್ತು ದಕ್ಷಿಣ ಭಾರತದ ಚರಿತ್ರೆ ತಿಳಿಯಲು ಶಾತವಾಹನರ ದೊರೆ ಹಾಲನ ಗಾಥಾಸಪ್ತಶತಿ, ಗುಣಾಢ್ಯನ ಬೃಹತ್ಕಥಾ (ವಡ್ಡಕಥಾ), ಅಮೋಘವರ್ಷನ ಕವಿರಾಜಮಾರ್ಗ, ಚಾವುಂಡರಾಯನ ಚಾವುಂಡರಾಯಪುರಾಣ, ಪಂಪನ ಆದಿಪುರಾಣ, ರನ್ನನ ಗದಾಯುದ್ಧ, ಮತ್ತು ಕೃಷ್ಣದೇವರಾಯನ ಅಮುಕ್ತ ಮಾಲ್ಯದ ಮೊದಲಾದವು ವಿಫುಲ ಐತಿಹಾಸಿಕ ಮಾಹಿತಿ ಒದಗಿಸುತ್ತವೆ.

 

. ಸಂಗಂ ಸಾಹಿತ್ಯ: ಸಾ... 1 ರಿಂದ 3 ನೆ ಶತಮಾನದ ಕಾಲಾವಧಿಯಲ್ಲಿ ರಚಿತವಾಗಿದೆ ಎನ್ನಲಾದ ಪ್ರಾಚೀನ ತಮಿಳು ಸಾಹಿತ್ಯವೇ ಸಂಗಂ ಸಾಹಿತ್ಯ. ಮೂರು ಸಂಗಂಗಳು ಅಸ್ಥಿತ್ವದಲ್ಲಿದ್ದ ಬಗ್ಗೆ ಮಾಹಿತಿಗಳಿದ್ದರೂ ಮೂರನೇ ಸಂಗಂ ಕಾಲದ ಸಾಹಿತ್ಯ ಕೃತಿಗಳು ಹೆಚ್ಚಾಗಿ ಲಭಿಸಿವೆ. ಅವುಗಳಲ್ಲಿ ಪ್ರಾಚೀನ ತಮಿಳುನಾಡಿನ ಐತಿಹಾಸಿಕ, ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಂಗತಿಗಳು ತಿಳಿದುಬರುತ್ತವೆ. ಸಂಗಂ ಕಾಲದ ಕೆಲವು ಪ್ರಮುಖ ಸಾಹಿತ್ಯ ಕೃತಿಗಳು ಕೆಳಕಂಡಂತಿವೆ:

 

ಇಳಂಗೊ ಅಡಿಗಳ್ ರಚಿತ ಶಿಲಪ್ಪದಿಕಾರಂ, ಚತ್ತನಾರನ ಮಣಿಮೇಖಲೈ, ತಿರುವಳ್ಳುವರನ ತಿರುಕ್ಕುರಳ್ಮತ್ತು ಸೆಕಿಲಾರನ ಪೆರಿಯಪುರಾಣಗಳು. ಅಲ್ಲದೇ ಜಯಗೊಂಡರ್ರಚಿತ ಕಳಿಂಗತುಪ್ಪರಣಿ ಒಂದನೆ ಕುಲೋತ್ತುಂಗ ಚೋಳನ ಒರಿಸ್ಸಾ ಮೇಲಿನ ವಿಜಯದ ಮಾಹಿತಿ ಒದಗಿಸುತ್ತದೆ. ಮಾಣಿಕ್ಯ ವಾಚಕರ್ಬರೆದಿರುವ ತಿರುವಾಚಕಂ ತಮಿಳುನಾಡಿನ ಅಂದಿನ ಭಕ್ತಿಪಂಥ ಕುರಿತ ಮಾಹಿತಿ ಒದಗಿಸುತ್ತದೆ.

 

. ವೈಜ್ಞಾನಿಕ ಸಾಹಿತ್ಯ: ಪ್ರಾಚೀನ ಭಾರತೀಯರು ಖಗೋಳ, ಗಣಿತ, ವೈದ್ಯ, ಪ್ರಾಣಿವೈದ್ಯ, ರಸವಿದ್ಯೆ, ಲೋಹಶಾಸ್ತ್ರ ಮೊದಲಾದ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ತಾವು ಗಳಿಸಿದ ಪರಿಣತಿಯನ್ನು ಗ್ರಂಥಗಳ ರೂಪದಲ್ಲಿ ದಾಖಲಿಸಿದ್ದಾರೆ. ಇವುಗಳನ್ನೇ ವೈಜ್ಞಾನಿಕ ಕೃತಿಗಳು ಎನ್ನಲಾಗಿದೆ. ಕೆಲವು ಪ್ರಮುಖ ವೈಜ್ಞಾನಿಕ ಕೃತಿಗಳು ಮತ್ತು ಕೃತಿಕಾರರ ವಿವರಗಳು ಕೆಳಕಂಡಂತಿವೆ:

 

ಶುಶ್ರೂತನ ಶುಶ್ರೂತ ಸಂಹಿತೆ, ಚರಕನ ಚರಕ ಸಂಹಿತೆ, ವಾಗ್ಭಟನ ಅಷ್ಟಾಂಗ ಸಂಗ್ರಹ ಮತ್ತು ಅಷ್ಟಾಂಗ ಹೃದಯ, ಬ್ರಹ್ಮಗುಪ್ತನ ಶೂನ್ಯಸಿದ್ಧಾಂತ, ವರಾಹಮಿಹಿರನ ಬೃಹತ್ಜಾತಕ, ಲಘು ಜಾತಕ, ಬೃಹತ್ಸಂಹಿತೆ, ಆರ್ಯಭಟನ ಆರ್ಯಭಟೀಯಂ, ಆರ್ಯಸಿದ್ಧಾಂತ, ದುರ್ವಿನೀತನ ಗಜಾಷ್ಟಕ, ಶಿವಮಾರನ ಗಜಶಾಸ್ತ್ರ, ಕೀರ್ತಿವರ್ಮನ ಗೋವೈದ್ಯ, ಚಾವುಂಡರಾಯನ ಲೋಕೋಪಕಾರ, ಭಾಸ್ಕರಾಚಾರ್ಯನ ಲೀಲಾವತಿ ಮೊದಲಾದವು ವಿಜ್ಞಾನದ ಹೇರಳ ಮಾಹಿತಿಗಳೊಂದಿಗೆ ಕೆಲವು ಐತಿಹಾಸಿಕ, ಸಾಮಾಜಿಕ, ಧಾರ್ಮಿಕ & ಆರ್ಥಿಕ ಮಾಹಿತಿಗಳನ್ನೂ ಒದಗಿಸುತ್ತವೆ.

 

2.     ವಿದೇಶೀಯ ಸಾಹಿತ್ಯಾಧಾರಗಳು – Foreign Literary Sources: ಪ್ರಾಚೀನ ಕಾಲದಿಂದಲೂ ನಮ್ಮ ದೇಶಕ್ಕೆ ಭೇಟಿ ನೀಡಿದ ವಿದೇಶಿ ವ್ಯಾಪಾರಿಗಳು, ರಾಯಭಾರಿಗಳು, ಪ್ರವಾಸಿಗರು & ಧರ್ಮಪ್ರಚಾರಕರು ಭಾರತದಲ್ಲಿನ ತಮ್ಮ ಅನುಭವಗಳನ್ನು ಲಿಖಿತ ರೂಪದಲ್ಲಿ ದಾಖಲಿಸಿದ್ದಾರೆ. ಅವರು ತಾವು ನೇರವಾಗಿ ಕಂಡ ಮತ್ತು ಸ್ಥಳೀಯರಿಂದ ಕೇಳಿ ತಿಳಿದ ಮಾಹಿತಿಗಳನ್ನು ತಮ್ಮ ದಾಖಲೆಗಳಲ್ಲಿ ನಿರೂಪಿಸಿದ್ದಾರೆ. ಅವರ ಇಂತಹ ಬರಹಗಳು ಪ್ರಾಚೀನ ಭಾರತದ ಇತಿಹಾಸ ಪುನರ್ರಚನೆಯಲ್ಲಿ ಅಪಾರವಾದ ಐತಿಹಾಸಿಕ ಮಾಹಿತಿಗಳನ್ನು ಒದಗಿಸುತ್ತವೆ. ಹೀಗೆ ಭಾರತಕ್ಕೆ ಭೇಟಿ ನೀಡಿದ ವಿದೇಶಿಯರಲ್ಲಿ ಗ್ರೀಕರು, ರೋಮನ್ನರು, ಪರ್ಷಿಯನ್ನರು, ಚೀನಿಯರು ಮತ್ತು ಅರಬ್ಬರು ಪ್ರಮುಖರು. ದೇಶೀಯ ಬರವಣಿಗೆಗಳು ಒದಗಿಸದ ಮಾಹಿತಿಗಳು ಕೆಲವೊಮ್ಮೆ ವಿದೇಶೀಯ ಬರವಣಿಗೆಗಳಿಂದ ಲಭ್ಯವಾಗುತ್ತವೆ. ಅಲ್ಲದೇ ಇವು ಸತ್ಯನಿಷ್ಠ ಸಂಗತಿಗಳನ್ನು ಒಳಗೊಂಡಿರುತ್ತವೆ ಎಂಬುದು ವಿದ್ವಾಂಸರ ಅಭಿಪ್ರಾಯ. ಆದರೂ ಕೆಲವೊಮ್ಮೆ ಇವರ ಮಾಹಿತಿಗಳು ಅಪೂರ್ಣ ಮತ್ತು ಉತ್ಪ್ರೇಕ್ಷೆಗಳಿಂದ ಕೂಡಿರುತ್ತವೆ. ಕಾರಣ ಇವರ ಕೃತಿಗಳಲ್ಲಿನ ಮಾಹಿತಿಗಳನ್ನು ಆಧಾರಗಳಾಗಿ ಬಳಸುವಾಗ ಇತಿಹಾಸಕಾರನು ಎಚ್ಚರಿಕೆ ವಹಿಸಬೇಕಾಗುತ್ತದೆ. ಇವರ ಬರವಣಿಗೆಗಳಲ್ಲಿನ ಇಂತಹ ದೋಷಗಳಿಗೆ ಕಾರಣಗಳೆಂದರೆ, ಅವರು ಅಲ್ಪಕಾಲ ಭಾರತದಲ್ಲಿ ಉಳಿದಿರುವುದು, ಸ್ಥಳೀಯ ಭಾಷೆಗಳ ಜ್ಞಾನದ ಕೊರತೆ, ಕಂಡು, ಕೇಳಿದ್ದನ್ನು ಪರಿಶೀಲನೆಗೆ ಒಳಪಡಿಸದಿರುವುದು ಇತ್ಯಾದಿಗಳು. ವಿದೇಶಿ ಬರವಣಿಗೆಗಳನ್ನು ಗ್ರೀಕೋರೋಮನ್‌, ಚೀನೀ & ಮುಸ್ಲೀಂ ದಾಖಲೆಗಳೆಂದು ಮರುವಿಭಾಗ ಮಾಡಬಹುದು.

 

. ಗ್ರೀಕೋರೋಮನ್ಬರವಣಿಗೆಗಳು: ಇತಿಹಾಸದ ಪಿತಾಮಹ ಅರೊಡಾಟಸನ ಹಿಸ್ಟರಿಸ್‌, ಟಾಲೆಮಿಯ ಭೂಗೋಳ ಅಥವಾ Geography, ಅನಾಮಧೇಯ ರಚಿತ ದಿ ಪೆರಿಪ್ಲಸ್ಆಫ್ದಿ ಎರಿತ್ರಿಯನ್ಸೀ, ಗ್ರೀಕ್ದೊರೆ ಡೇರಿಯಸ್ಸನ ದಾಳಿಗೆ ಮುನ್ನ ಇಲ್ಲಿನ ಪರಿಸ್ಥಿತಿ ಅಧ್ಯಯನಕ್ಕೆ ಅವನ ಪ್ರತಿನಿಧಿಯಾಗಿ ಭಾರತದ ವಾಯುವ್ಯ ಭಾಗವನ್ನು ಸಂದರ್ಶಿಸಿದ್ದ ಸ್ಕೈಲ್ಯಾಕ್ಸ್ ಬರವಣಿಗೆಗಳು, ಅರಿಯನ್‌, ನಿಯಾರ್ಕಸ್‌ & ಅರಿಸ್ಟೋಬಲಸ್ಅವರ ಯುದ್ಧದ ವಿವರಗಳು ಭಾರತದ ಮೇಲಿನ ಗ್ರೀಕರ ದಾಳಿಗಳು ಮತ್ತು ವಿದೇಶಿಯ ಸಂಬಂಧಗಳ ವಿವರಗಳನ್ನು ಒದಗಿಸುತ್ತವೆ. ಸಿರಿಯಾದ ಡಿಮ್ಯಾಕಸ್‌, ಡೆಮಿಟ್ರಿಯಸ್ಮತ್ತು ಈಜಿಪ್ಟಿನ ಡಯೋನಿಸಿಸ್ಇವರ ಬರವಣಿಗೆಗಳು ಪಾರ್ಥಿಯನ್ನರ ಬಗ್ಗೆ ವಿವರ ಒದಗಿಸುತ್ತವೆ. ಸೆಲ್ಯೂಕಸನ ರಾಯಭಾರಿ ಮೆಗಸ್ತಾನೀಸನ ಇಂಡಿಕಾ ಮೌರ್ಯರ ಕಾಲದ ಮಾಹಿತಿ ಒದಗಿಸುತ್ತದೆ. ಪ್ಲೀನಿಯ ಬರವಣಿಗೆಗಳು ಭಾರತದಲ್ಲಿನ ಪ್ರಕೃತಿ ಮತ್ತು ಪ್ರಾಣಿ ಹಾಗೂ ಸಸ್ಯವರ್ಗಗಳ ವಿವರ ನೀಡುತ್ತವೆ.

 

. ಚೀನೀ ಬರವಣಿಗೆಗಳು: ಭಾರತದ ನೆರೆರಾಷ್ಟ್ರ ಚೀನಾದಿಂದ ಫಾಹಿಯಾನ್‌ (ಸಾ... 399-414) ಗುಪ್ತರ ದೊರೆ ಎರಡನೆ ಚಂದ್ರಗುಪ್ತನ ರಾಜ್ಯಕ್ಕೆ ಭೇಟಿ ನೀಡಿದ್ದು ತನ್ನ ಫೋ ಕ್ಯೂ ಕಿ ಎಂಬ ಕೃತಿಯಲ್ಲಿ ಅಂದಿನ ಕಾಲದ ವಿದ್ಯಮಾನಗಳನ್ನು ವಿವರಿಸಿದ್ದಾನೆ. ಸಾ... 630-45 ಕಾಲಘಟ್ಟದಲ್ಲಿ ಭೇಟಿ ನೀಡಿದ್ದ ಯಾತ್ರಿಕರ ರಾಜ ಎಂದೇ ಹೆಸರಾದ ಹೂ ಎನ್ ತ್ಸಾಂಗನು ರಚಿಸಿದ ಸೀ ಯೂ ಕೀ ಕೃತಿಯಲ್ಲಿ ಅಂದಿನ ಬೌದ್ಧ ಧರ್ಮದ ಸ್ಥಿತಿಗತಿಗಳ ಜೊತೆಗೆ ವರ್ಧನ, ಚಾಲುಕ್ಯ ಮತ್ತು ಪಲ್ಲವರ ರಾಜ್ಯಗಳ ವಿವರಗಳನ್ನು ನೀಡಿದ್ದಾನೆ. ನರ್ಮದಾ ನದಿಯ ಯುದ್ಧದ ಮಾಃಇತಿಯು ಇದರಲ್ಲಿ ಸೇರಿದೆ. ಸಾ... 675ರಲ್ಲಿ ಭಾರತಕ್ಕೆ ಬಂದಿದ್ದ ಇತ್ಸಿಂಗನು ತನ್ನ ಬರವಣಿಗೆನಾನ್ಹೈ ಕಿ ಕೂಚೆ ನೈಪಚೌಅಂದರೆ ಬೌದ್ಧ ನಾಡಿನ ದಾಖಲೆಗಳು ಎಂಬ ಕೃತಿಯಲ್ಲಿ ತನ್ನ ಅನುಭವಗಳನ್ನು ದಾಖಲಿಸಿದ್ದಾನೆ. ಇವರನ್ನು ಯಾತ್ರಿಕತ್ರಯರು ಎಂದು ಕರೆಯುವರು.

 

. ಮುಸ್ಲೀಂ ಬರವಣಿಗೆಗಳು: ಎಂಟನೇ ಶತಮಾನದ ನಂತರ ಭಾರತಕ್ಕೆ ಮುಸ್ಲೀಂರ ಆಗಮನ ಆರಂಭವಾಯಿತು. ಬಾದಾಮಿ ಚಾಲುಕ್ಯರ ಇಮ್ಮಡಿ ಪುಲಕೇಶಿಯ ಆಸ್ಥಾನಕ್ಕೆ ಭೇಟಿ ನೀಡಿದ್ದ ಪರ್ಷಿಯಾದ ಎರಡನೆ ಖುಸ್ರೊನ ರಾಯಬಾರಿ ತಬರಿ, ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಆಸ್ಥಾನಕ್ಕೆ ಭೇಟಿ ನೀಡಿದ್ದ ಸುಲೇಮಾನ್‌ (ಸಾ... 851), ಅಲ್ಮಸೂದಿ, ಅಬು ರಿಹಾನ್ಅಲ್ಬೇರೂನಿ, ಮತ್ತು ವಿಜಯನಗರದ ಅರಸು ದೇವರಾಯನ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಅಬ್ದುಲ್ರಜಾಕ್ಇವರಲ್ಲಿ ಪ್ರಮುಖರು. ಇವರಲ್ಲದೇ ಉದ್ಬಿ ರಚಿತ ತಾರಿಕ್ ಯಾಮಿನಿ, ಫಿರ್ದೂಸಿ ರಚಿತ ಶಹನಾಮಾ, ಅಲ್ಬೇರೂನಿ ರಚಿಸಿದ ತಹಕಿಕ್ ಹಿಂದ್ಕೃತಿಗಳು ಪ್ರಮುಖ ಮುಸ್ಲೀಂ ಬರವಣಿಗೆಗಳಾಗಿವೆ.

 

   ಹೀಗೆ ವಿದೇಶೀಯ ಬರವಣಿಗೆಗಳು ಭಾರತದ ಇತಿಹಾಸ ಪುನರ್ರಚನೆಯಲ್ಲಿ ತಮ್ಮದೇ ಆದ ಪ್ರಮುಖ ಪಾತ್ರವಹಿಸಿವೆ.

**********

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧