Posts

Showing posts from December, 2024

ಪ್ರಾಚೀನ ಭಾರತದ ಮಹಾಜನಪದಗಳು ಮತ್ತು ಗಣರಾಜ್ಯಗಳು

ಸೂಚನೆ: ಇಲ್ಲಿನ ಮಾಹಿತಿಯನ್ನು ಕಣಜ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ, ಸಂಕಲಿಸಿ, ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ. ಪೀಠಿಕೆ:- ಮೌರ್ಯ ಸಾಮ್ರಾಜ್ಯವೆಂಬ ಪೂರ್ಣ ಪ್ರಮಾಣದ ‘ ರಾಜ್ಯ ’ ಆರಂಭವಾಗುವುದಕ್ಕೆ ಮೊದಲು ಈ ಪ್ರದೇಶದಲ್ಲಿ ವಿವಿಧ ರೀತಿಯ ರಾಜಕೀಯ ವ್ಯವಸ್ಥೆ ಅಸ್ತಿತ್ವದಲ್ಲಿತ್ತು . ಅಂದರೆ ರಾಜ್ಯ ಸ್ವರೂಪಕ್ಕೆ ಹೋಲಿಕೆಯಾಗುವ ಹಲವಾರು ರಾಜಕೀಯ ವ್ಯವಸ್ಥೆಗಳು ಕಂಡುಬರುತ್ತವೆ . ಅವುಗಳಿಗೆ ‘ ಜನಪದ ’ ಗಳೆಂದು ಕರೆಯುತ್ತಾರೆ . ಜನಪದಗಳು ರಚನೆ ಯಾಗುವುದಕ್ಕೆ ಮೊದಲು ಜನರು ತಮ್ಮದೇ ಆದ ಕುಲಗಳನ್ನು ರಚಿಸಿಕೊಂಡಿರುತ್ತಾರೆ . ಹಾಗೂ ಅವರು   ವಾಸಮಾಡುವ ಪ್ರದೇಶಕ್ಕೆ ‘ ಜಾನಪದ ’ ಎಂದು ಹೆಸರು . ಇದೊಂದು ಬುಡಕಟ್ಟು ವ್ಯವಸ್ಥೆ ಹಾಗೂ ಇವುಗಳಲ್ಲಿದ್ದ ಜನರ ಕಸುಬು ‘ ಬೇಟೆ ’ ಹಾಗೂ ಪಶುಸಂಗೋಪನೆ . ತಮ್ಮ ಗಡಿಗಳನ್ನು ಅರಣ್ಯ , ನದಿ , ತೊರೆ , ಬೆಟ್ಟಗಳಿಂದ ಗುರುತಿಸಿಕೊಳ್ಳುತ್ತಿರುತ್ತಾರೆ . ಕ್ರಮೇಣ ಕ್ಷತ್ರಿಯ ರಾಜರು ಇಂಥ ಜನಪದಗಳ ಮೇಲೆ ಏಕಸ್ವಾಮ್ಯ ಸ್ಥಾಪಿಸುತ್ತಾರೆ . ಈ ರೀತಿ ರಾಜರಿಂದ ಕೂಡಿದ ಜನಪದಗಳು ಅಸ್ತಿತ್ವಕ್ಕೆ ಬರುತ್ತವೆ . ಅಲ್ಲದೆ ರಾಜರುಗಳ ಏಕಸ್ವಾಮ್ಯ ಇಲ್ಲದ ‘ ಗಣ ಸಂಘ ಪದ್ಧತಿ ’ ಯ ಆಳುವ ವಂಶಗಳು ಇರುತ್ತವೆ . ಇವುಗಳು ತಮ್ಮದೇ ಲಾಂಛನ ಹೊಂದಿದ್ದು ತಮ್ಮಲ್ಲಿಯೇ ಒಬ್ಬ ಮುಖ್ಯಸ್ಥನನ್ನು ಆಯ್ಕೆಮಾಡಿ ಕೊಳ್ಳುತ್...

ಮೌರ್ಯರ ಪತನದ ಕಾರಣಗಳು

ಸೂಚನೆ:- ಇಲ್ಲಿನ ಮಾಹಿತಿಗಳನ್ನು ಕಣಜ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ, ಸಂಕಲಿಸಿ ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ. ಮೌರ್ಯರ ಶೀಘ್ರ ಅವನತಿಗೆ ವಿವಿಧ ಕಾರಣಗಳನ್ನು ನೀಡಲಾಗಿದೆ . ಅಶೋಕನ ಕಾಲದಿಂದಲೇ ಮೌರ್ಯರ ಅವನತಿಯ ಪ್ರಕ್ರಿಯೆ ಆರಂಭವಾಹಿತೆಂದು ಕೆಲವರು ಅಭಿಪ್ರಾಯಿಸಿದ್ದಾರೆ . ಮೌರ್ಯರ ಅವನತಿ ಕುರಿತ ವಿವಿಧ ಕಾರಣಗಳನ್ನು ಅಥವಾ ಅಭಿಪ್ರಾಯಗಳನ್ನು ಇಲ್ಲಿ ಚರ್ಚಿಸಲಾಗಿದೆ:- 1.     ಬೌದ್ಧ ಧರ್ಮದ ಅನುಸರಣೆ:- ಒಂದು ಪಂಥದ ಇತಿಹಾಸಕಾರರ ಪ್ರಕಾರ ಅಶೋಕನ ಧಾರ್ಮಿಕ ನೀತಿಯು ಮೌರ್ಯರ ಅವನತಿಗೆ ಮೂಲ ಕಾರಣವಾಗಿದೆ . ಈ ಪಂಥಕ್ಕೆ ಸೇರಿದ ಡಾ . ಹರಪ್ರಸಾದ ಶಾಸ್ತ್ರೀಯವರು ಹೇಳುವಂತೆ , ಅಶೋಕನು ಬೌದ್ಧ ಮತಕ್ಕೆ ರಾಜಾಶ್ರಯ ನೀಡಿದ್ದು , ಹಿಂದೂ ಧರ್ಮದ ಆಚರಣೆಗಳು ಮತ್ತು ಯಜ್ಞ ಯಾಗಗಳನ್ನು ಕೈಬಿಟ್ಟಿದ್ದು , ಧರ್ಮ ಮಹಾಮಾತ್ರರ ನೇಮಕಾತಿ ಹಾಗೂ ಬ್ರಾಹ್ಮಣರ ನಿರ್ಲಕ್ಷ್ಯ , ಶೂದ್ರ ವರ್ಗಕ್ಕೆ ಸೇರಿದ ಮೌರ್ಯ ಅರಸರು ಹಲವು ಕಾಯ್ದೆಗಳನ್ನು ರೂಪಿಸಿದುದು ಮೊದಲಾದವುಗಳು ಬ್ರಾಹ್ಮಣ ವರ್ಗದ ಪ್ರತಿಭಟನೆಗೆ ಕಾರಣವಾದವು . ಬ್ರಾಹ್ಮಣ ವರ್ಗಕ್ಕೆ ಸೇರಿದ ಪುಷ್ಯಮಿತ್ರ ಶೃಂಗನು ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದನು .” ಈ ದೃಷ್ಟಿಕೋನವನ್ನು ಸಮರ್ಥಿಸುವ ಅಂಶಗಳೆಂದರೆ , ಮೌರ್ಯರ ಅವನತಿಯ ನಂತರ ಅಸ್ತಿತ್ವಕ್ಕೆ ಬಂದ ರಾಜವಂಶಗಳು ...