ಪ್ರಾಚೀನ ಭಾರತದ ಮಹಾಜನಪದಗಳು ಮತ್ತು ಗಣರಾಜ್ಯಗಳು
ಸೂಚನೆ: ಇಲ್ಲಿನ ಮಾಹಿತಿಯನ್ನು ಕಣಜ ಅಂತರ್ಜಾಲದ ಪುಟಗಳಿಂದ
ಸಂಗ್ರಹಿಸಿ, ಸಂಕಲಿಸಿ, ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.
ಪೀಠಿಕೆ:- ಮೌರ್ಯ ಸಾಮ್ರಾಜ್ಯವೆಂಬ ಪೂರ್ಣ ಪ್ರಮಾಣದ ‘ರಾಜ್ಯ’ ಆರಂಭವಾಗುವುದಕ್ಕೆ ಮೊದಲು ಈ ಪ್ರದೇಶದಲ್ಲಿ ವಿವಿಧ ರೀತಿಯ ರಾಜಕೀಯ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಅಂದರೆ ರಾಜ್ಯ ಸ್ವರೂಪಕ್ಕೆ ಹೋಲಿಕೆಯಾಗುವ ಹಲವಾರು ರಾಜಕೀಯ ವ್ಯವಸ್ಥೆಗಳು ಕಂಡುಬರುತ್ತವೆ. ಅವುಗಳಿಗೆ ‘ಜನಪದ’ಗಳೆಂದು ಕರೆಯುತ್ತಾರೆ. ಜನಪದಗಳು ರಚನೆ ಯಾಗುವುದಕ್ಕೆ ಮೊದಲು ಜನರು ತಮ್ಮದೇ ಆದ ಕುಲಗಳನ್ನು ರಚಿಸಿಕೊಂಡಿರುತ್ತಾರೆ. ಹಾಗೂ ಅವರು ವಾಸಮಾಡುವ ಪ್ರದೇಶಕ್ಕೆ ‘ಜಾನಪದ’ ಎಂದು ಹೆಸರು. ಇದೊಂದು ಬುಡಕಟ್ಟು ವ್ಯವಸ್ಥೆ ಹಾಗೂ ಇವುಗಳಲ್ಲಿದ್ದ ಜನರ ಕಸುಬು ‘ಬೇಟೆ’ ಹಾಗೂ ಪಶುಸಂಗೋಪನೆ. ತಮ್ಮ ಗಡಿಗಳನ್ನು ಅರಣ್ಯ, ನದಿ, ತೊರೆ, ಬೆಟ್ಟಗಳಿಂದ ಗುರುತಿಸಿಕೊಳ್ಳುತ್ತಿರುತ್ತಾರೆ. ಕ್ರಮೇಣ ಕ್ಷತ್ರಿಯ ರಾಜರು ಇಂಥ ಜನಪದಗಳ ಮೇಲೆ ಏಕಸ್ವಾಮ್ಯ ಸ್ಥಾಪಿಸುತ್ತಾರೆ. ಈ ರೀತಿ ರಾಜರಿಂದ ಕೂಡಿದ ಜನಪದಗಳು ಅಸ್ತಿತ್ವಕ್ಕೆ ಬರುತ್ತವೆ. ಅಲ್ಲದೆ ರಾಜರುಗಳ ಏಕಸ್ವಾಮ್ಯ ಇಲ್ಲದ ‘ಗಣ ಸಂಘ ಪದ್ಧತಿ’ಯ ಆಳುವ ವಂಶಗಳು ಇರುತ್ತವೆ. ಇವುಗಳು ತಮ್ಮದೇ ಲಾಂಛನ ಹೊಂದಿದ್ದು ತಮ್ಮಲ್ಲಿಯೇ ಒಬ್ಬ ಮುಖ್ಯಸ್ಥನನ್ನು ಆಯ್ಕೆಮಾಡಿ ಕೊಳ್ಳುತ್ತಿರುತ್ತವೆ. ಈ ರೀತಿ ಮೊದಲಿಗೆ ೧. ಗಣ ಪ್ರಭುತ್ವಗಳು ೨. ರಾಜ ಪ್ರಭುತ್ವಗಳು ಗಂಗಾಬಯಲಿನಲ್ಲಿ ಏಳಿಗೆ ಹೊಂದುತ್ತವೆ. ಈ ಜನಪದಗಳನ್ನು ಮಹಾ ಜನಪದಗಳು ಎಂದುಕರೆಯುತ್ತೇವೆ. ಗಂಗಾ ಬಯಲಿನಲ್ಲಿದ್ದ ರಾಜ್ಯ ಅಥವಾ ಪ್ರಭುತ್ವಗಳು ಕ್ರಿ.ಪೂ. ೬ನೇಯ ಶತಮಾನದ ಕಾಲದ ಹದಿನಾರು ‘ಮಹಾಜನಪದ’ಗಳನ್ನು ಬೌದ್ಧರ ಪಾಳಿ ಸಾಹಿತ್ಯವು ಹೆಸರಿಸುತ್ತದೆ. ಇವುಗಳ ಕುರಿತು ಪಾಣಿನಿಯು ಅಷ್ಟಾಧ್ಯಾಯಿಯಲ್ಲಿ ವಿವರಿಸಿದ್ದಾನೆ. ಆ ಹದಿನಾರು ಮಹಾಜನಪದಗಳು ಈ ಕೆಳಕಂಡಂತೆ ಇವೆ.
೧. ಕಾಶಿ::- ಇದು ಈಗಿನ ವಾರಣಾಸಿ ಪ್ರದೇಶದಲ್ಲಿತ್ತು. ಬನಾರಸ್ರಾಜಧಾನಿ ಯಾಗಿದ್ದು. ನದಿ ದಡದಲ್ಲಿದ್ದ ಇದು ಸರಕು ಉತ್ಪಾದನೆ ಹಾಗೂ ಉತ್ತಮ ಗುಣಮಟ್ಟದ ಬಟ್ಟೆ ಉತ್ಪಾದನೆ ಕೇಂದ್ರವಾಗಿತ್ತು.
೨. ಕೋಸಲ:- ಇದು ಈಗಿನ ಈಶಾನ್ಯ ಉತ್ತರ ಪ್ರದೇಶದಲ್ಲಿತ್ತು. ಇದರ ಮೊದಲ ರಾಜಧಾನಿ; ಶ್ರಾವಸ್ತಿ, ನಂತರ ಸಾಕೇತ(ಆಯೋಧ್ಯ) ರಾಜಧಾನಿಯಾಯಿತು.
೩. ಅಂಗ:- ಬಿಹಾರದ ಬಾಗಲ್ಪುರ ಪ್ರದೇಶದಲ್ಲಿತ್ತು. ಇದರ ರಾಜಧಾನಿ ಚಂಪಾನಗರ.
೪. ಮಗಧ:- ಮೊದಲು ರಾಜಗೃಹವು ರಾಜಧಾನಿಯಾಗಿತ್ತು. ನಂತರ ಪಾಟಲಿಪುತ್ರ.
೫. ವಜ್ಜಿ:-
ವೈಶಾಲಿ ಪ್ರಾಂತ್ಯ. ಇದೊಂದು ಗಣ ಪ್ರಭುತ್ವ.
೬. ಮಲ್ಲ:- ಹಿಮಾಲಯದ ತೆಹ್ರಿ ಪ್ರದೇಶದ ಗಣ ಸಂಘವಾಗಿತ್ತು.
೭. ಚೇದಿ:- ನರ್ಮದಾ ನದಿ ಭಾಗದಲ್ಲಿತ್ತು.
೮. ವತ:- ಕೌಶಾಂಬಿ ರಾಜಧಾನಿ, ಜಮುನಾ ನದಿ ಪ್ರದೇಶ, ರಾಜಪ್ರಭುತ್ವ.
೯. ಕುರು:- ಹಸ್ತಿನಾವತಿ ರಾಜಧಾನಿ, ಸರಸ್ವತಿ ಮತ್ತು ದೃಶದ್ವತಿ ನದಿ ಪ್ರದೇಶ.
೧೦. ಪಂಚಾಲ:-
ಕಪಿಲ ರಾಜಧಾನಿ.
೧೧. ಮತ್ಸ್ಯ:-
ಉತ್ತರ ಪ್ರದೇಶ ಭರತಪುರ ಪ್ರಾಂತ್ಯ.
೧೨. ಶೂರಸೇನ:-
ಈಗಿನ ಮಧುರಾ ಪ್ರಾಂತ್ಯ.
೧೩. ಅಶ್ಮಕ:-
ಗೋದಾವರಿ ನದಿ ದಡದಲ್ಲಿ, ವ್ಯಾಪಾರ ಕೇಂದ್ರ.
೧೪. ಅವಂತಿ:-
ಉಜ್ಜೈನಿ ರಾಜಧಾನಿ.
೧೫. ಗಾಂಧಾರ:-
ಕಾಂದಾಹಾರ ಕಣಿವೆ ಪ್ರದೇಶ, ತಕ್ಷಶಿಲೆ ರಜಧಾನಿ, ವ್ಯಾಪರ ಹಾಗೂ ಬ್ರಾಹ್ಮಣ ಕಲಿಕಾಕೇಂದ್ರ.
೧೬. ಕಾಂಬೋಜ:-
ಕಾಶ್ಮೀರ ಪ್ರಾಂತ್ಯದ ಕುಕ್ಕುಟವತಿ ನಗರ.
ಇವುಗಳಲ್ಲಿ ಬಹುತೇಕ ಮಹಾ ಜನಪದಗಳು ‘ರಾಜ’ ಪ್ರಭುತ್ವ ಹೊಂದಿದ್ದು ಕ್ಷತ್ರಿಯರಿಂದ ಆಳಲ್ಪಡುತ್ತಿದ್ದವು. ಇವುಗಳಲ್ಲದೆ ಬೌದ್ಧ ಸಾಹಿತ್ಯವು ಈ ಕೆಳಕಂಡ ಗಣರಾಜ್ಯಗಳು ಅಥವಾ ಗಣ ಸಂಘಗಳ ಬಗ್ಗೆ ಪ್ರಾಸ್ತಾಪಿಸಿರುತ್ತದೆ.
೧. ಕಪಿಲ ವಸ್ತುವಿನ ಶಾಕ್ಯರು (ಹಿಮಾಲಯದ ತೆಹರಿ ಪ್ರದೇಶ)
೨. ಅಲ್ಲಕಪ್ಪದ ಮಲ್ಲರು
೩. ಕೆಶ ಪಟ್ಟದ
ಕಲಮರು
೪. ಸಾಮ ಸುಮಾಸ
ಬೆಟ್ಟಗಳ ಭಗ್ಗರು
೫. ಮಿಥಿಲ
ಪ್ರದೇಶದ ವಿದೇಹರು
೬. ವಾರಾಣಾಸಿ ಉತ್ತರಕ್ಕಿದ್ದ ಲಿಚ್ಚಿವಿಗಳು
೭. ವೈಶಾಲಿ ಪ್ರಾಂತ್ಯದ ಜ್ಞಾತ್ರಿಕರು
೮. ಪಿಪ್ಪಲವನದ ಮೌರ್ಯರು
೯. ಪಾವ ಮತ್ತು
ಕುಷಿನಗರದ ಮಲ್ಲರು
ಈ ರಾಜ್ಯಗಳು ಪರಸ್ಪರ ಕಾದಾಟದಲ್ಲಿ ತೊಡಗಿದ್ದು ಒಂದನ್ನೊಂದು ಆಕ್ರಮಿಸಲು ಪ್ರಯತ್ನಿಸುತ್ತಿದ್ದವು. ಇವುಗಳಲ್ಲಿ ಬಲಶಾಲಿಯಾಗಿ ಹೊರ ಹೊಮ್ಮಿದ ರಾಜ್ಯಗಳೆಂದರೆ ಕೋಸಲ ಹಾಗೂ ಮಗಧ. ಕೋಸಲ ರಾಜ್ಯಕ್ಕೆ ಪುರೋಹಿತರ ಬೆಂಬಲವು ಇತ್ತು. ಇದರ ಮೊದಲು ರಾಜಧಾನಿ ಶಾವಸ್ತಿ. ಇದು ಐರಾವತಿ ನದಿ ದಡದಲ್ಲಿದ್ದು. ಇದರ ಸಾಂಪ್ರದಾಯಿಕ ರಾಜಧಾನಿ ‘ಸಾಕೇತ’ ಅಥವಾ ಅಯೋಧ್ಯೆ. ಆರಂಭಿಕ ಆರ್ಯರ ನೆಲೆಯೂ ಆಗಿದ್ದು, ವ್ಯಾಪಾರಿ ಮಾರ್ಗವಾಗಿತ್ತು. ಕೋಸಲದ ರಾಜಕುಮಾರ ದಿಗಾವು ಕಾಶಿಯನ್ನು ವಶಪಡಿಸಿ ಕೊಂಡು ರಾಜ್ಯದಲ್ಲಿ ವಿಲೀನಗೊಳಿಸಿಕೊಂಡನು. ಅಲ್ಲದೇ ಸುತ್ತ ಮುತ್ತಲಿನ ಅನೇಕ ಗಣ ಸಂಘಗಳನ್ನು ವಶಪಡಿದಿ ಕೊಳ್ಳಲಾಯಿತು. ಕೋಸಲದ ಮತ್ತೊಬ್ಬ ರಾಜನಾದ ‘ಪ್ರಸೇನಜೀತ್’ ಕ್ಷತ್ರಿಯನಾಗಿದ್ದು ವೈದಿಕ ಆಚರಣೆಗಳನ್ನು ಮಾಡುತ್ತಿದ್ದನ್ನು. ಕ್ರಿ.ಪೂ. ೫ನೇಯ ಶತಮಾನದಲ್ಲಿ ಈ ಎಲ್ಲಾ ಮಹಾಜನಪದಗಳು ಒಂದನ್ನೊಂದು ಆಕ್ರಮಿಸುತ್ತಾ ಕೊನೆಗೆ ಕೋಸಲ ಮತ್ತು ಮಗಧ ಎರಡು ಮಾತ್ರ ಪ್ರಬಲವಾಗಿ ಉಳಿದುಕೊಂಡವು. ಸುಮಾರು ಕ್ರಿ.ಪೂ. ೪೮೫ರ ವೇಳೆಗೆ ಕೋಸಲವು ಮಗಧ ರಾಜ್ಯದಲ್ಲಿ ವಿಲೀನವಾಗುವುದರೊಂದಿಗೆ ಗಂಗಾಬಯಲಿನಲ್ಲಿ ಬೃಹತ್ರಾಜ್ಯ ಸ್ಥಾಪನೆಯಾಯಿತು.
*****
Comments
Post a Comment