ಅಧ್ಯಾಯ 10. ಬುಡಕಟ್ಟು ಮತ್ತು ರೈತರ ದಂಗೆಗಳು.

ಭಾಗ 1. ಬುಡಕಟ್ಟು ದಂಗೆಗಳು

I. ಪೀಠಿಕೆ:

A. ಬುಡಕಟ್ಟು ಪದದ ಅರ್ಥ: ಕ್ರೋಬರ್  ಅವರ ಪ್ರಕಾರ ಬುಡಕಟ್ಟು ಎಂದರೆ ನಿರ್ದಿಷ್ಟ ಪ್ರದೇಶದಲ್ಲಿ ನೆಲಸಿದ್ದು ನಿರ್ದಿಷ್ಟ ಭಾಷೆ ಮಾತನಾಡುವ ಒಬ್ಬ ಮೂಲ ಪುರುಷ, ಒಂದು ಅಧಿದೈವ, ಒಬ್ಬ ಸರ್ವಾನುಮತದ ಮುಖ್ಯಸ್ಥನನ್ನು ಹೊಂದಿರುವ, ಒಂದೇ ರೀತಿಯ ನೈಸರ್ಗಿಕ ಕಾಯಿದೆ ಕಟ್ಟಳೆ ಅನುಸರಿಸುವ ಮತ್ತು ಸಮಾನ ಸಂಸ್ಕೃತಿ ಹಾಗೂ ಸುಸಂಘಟಿತ ಸಾಮಾಜಿಕ ವ್ಯವಸ್ಥೆಯನ್ನು ರೂಢಿಸಿಕೊಂಡಿರುವ ಸಾಮಾಜಿಕ ಗುಂಪು.

II. ಬುಡಕಟ್ಟು ಮತ್ತು ರೈತರ ದಂಗೆಗಳಿಗೆ ಕಾರಣಗಳು

ಬ್ರಿಟಿಷ್‌ ವ್ಯಾಪಾರಿ ನೀತಿಗಳಿಂದಾಗಿ ಉಂಟಾದ ಕೃಷಿಯ ವಾಣಿಜ್ಯೀಕರಣ ಮತ್ತು ಕೈಗಾರಿಕೆಗಳ ನಾಶ.

ಕೃಷಿ ಭೂಮಿಯ ಮೇಲೆ ಹೆಚ್ಚಿದ ಭೂರಹಿತ ಕಾರ್ಮಿಕರ ಅವಲಂಬನೆ.

ಭಾರತದ ಸಂಪತ್ತಿನ ಸೋರಿಕೆ.

ಬ್ರಿಟಿಷರು ಜಾರಿಗೊಳಿಸಿದ ಕಂದಾಯ ಕಾನೂನುಗಳು.

ಮಧ್ಯವರ್ತಿಗಳ ಏಳಿಗೆ

ಬುಡಕಟ್ಟು ಪ್ರದೇಶಗಳಿಗೂ ಕಂದಾಯ ಕಾನೂನುಗಳ ವಿಸ್ತರಣೆ.

ರೈತರು ಮತ್ತು ಬುಡಕಟ್ಟು ಜನರಿಗೆ ನ್ಯಾಯದ ನಿರಾಕರಣೆ.

III. ಪ್ರಮುಖ ಬುಡಕಟ್ಟು ಅಥವಾ ಆದಿವಾಸಿ ದಂಗೆಗಳು:-

A. ಭಿಲ್ಲರ ದಂಗೆ - 1818-31:- ಭಿಲ್ಲರು ಮಧ್ಯಭಾರತದಲ್ಲಿದ್ದ ಖಾನ್‌ದೇಶದ ಬೆಟ್ಟಪ್ರದೇಶಗಳಲ್ಲಿದ್ದ ಆದಿವಾಸಿಗಳಾಗಿದ್ದರು. 1818ರಲ್ಲಿ ಬ್ರಿಟಿಷರು ಖಾನ್‌ದೇಶವನ್ನು ಆಕ್ರಮಿಸಿಕೊಂಡಾಗಿನಿಂದ ಭಿಲ್ಲರು ಅವರ ವಿರುದ್ಧ ದಂಗೆಯ ಮನಸ್ಥಿತಿಯಲ್ಲಿದ್ದರು. ಏಕೆಂದರೆ ಪರಕೀಯರು ತಮ್ಮ ನಾಡನ್ನು ಆಕ್ರಮಿಸಿಕೊಂಡಿದ್ದಾರೆ ಎಂಬುದು ಅವರ ಭಾವನೆಯಾಗಿತ್ತು. ಅಲ್ಲದೇ 2ನೆ ಭಾಜಿರಾಯನ ಆಪ್ತನಾಗಿದ್ದ ತ್ರಿಯಂಬಕಜಿಯು ಭಿಲ್ಲರನ್ನು ಬ್ರಿಟಿಷರ ವಿರುದ್ಧ ಬಂಡಾಯ ಹೂಡುವಂತೆ ಪ್ರೇರೆಪಿಸಿದ್ದನು ಎನ್ನಲಾಗಿದೆ. ಇದರಿಂದಾಗಿ 1819ರಲ್ಲಿ ಒಂದು ದಂಗೆ ನಡೆದು ಭಿಲ್ಲರು ಸಣ್ಣ-ಸಣ್ಣ ಗುಂಪುಗಳಲ್ಲಿ ಬಯಲುಸೀಮೆಗಳನ್ನು ಲೂಟಿ ಮಾಡತೊಡಗಿದರು. ಅಲ್ಲದೇ ಆಗಾಗ್ಗೆ ಭಿಲ್ಲರ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಹಲವಾರು ದಂಗೆಗಳು ನಡೆದವು. ಆದ್ದರಿಂದ ಬ್ರಿಟಿಷರು ಇವರ ದಂಗೆಯನ್ನು ಅಡಗಿಸಲು ಸೇನೆಯನ್ನು ಬಳಸಿದರು. ಜೊತೆಗೆ ಅವರನ್ನು ತೃಪ್ತಿಪಡಿಸುವ ಕೆಲವು ಕ್ರಮಗಳನ್ನೂ ಸಹ ಕೈಗೊಂಡರು. ಆದರೆ ಅವರ ಕ್ರಮಗಳು ಭಿಲ್ಲರನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.

B. ಕೋಲರ ದಂಗೆ - 1831-32:-    ಸಿಂಘಭೂಮಿಯ ಕೋಲರು ಶತಮಾನಗಳವರೆಗೆ ತಮ್ಮ ಮುಖಂಡರ ನೇತೃತ್ವದಲ್ಲಿ ತಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಬಂದಿದ್ದರು. ಅವರು ಛೋಟಾ ನಾಗ್ಪುರ ಮತ್ತು ಮಯೂರ್‌ಗಂಜ್‌ಗಳ ರಾಜರ ಸತತ ಪ್ರಯತ್ನಗಳ ಹೊರತಾಗಿಯೂ ತಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಂಡಿದ್ದರು. ಆದರೆ ಬ್ರಿಟಿಷರ ಅತಿಕ್ರಮಣ ಮತ್ತು ಅವರ ಪ್ರದೇಶಗಳಲ್ಲಿ ಅವರ ಕಾನೂನುಗಳನ್ನು ಜಾರಿಗೊಳಿಸಿದುದು ಅವರ ಮುಖಂಡರಲ್ಲಿ ಆತಂಕವನ್ನುಂಟು ಮಾಡಿದವು. ಬ್ರಿಟಿಷರ ಈ ರೀತಿಯ ಅತಿಕ್ರಮಣ ಮತ್ತು ಕಾನೂನುಗಳ ಹೇರುವಿಕೆಯಿಂದಾಗಿ ಕೋಲರು ತಮ್ಮ ಜಮೀನುಗಳನ್ನು ಕಳೆದುಕೊಳ್ಳತೊಡಗಿದರು ಮತ್ತು ಅವರ ಜಾಗದಲ್ಲಿ ಹೊರಗಡೆಯಿಂದ ಬಂದಿದ್ದ ಮಧ್ಯವರ್ತಿಗಳು ಮತ್ತು ಜಮೀನುದಾರರು ಅವರ ಭೂಒಡೆತನಗಳನ್ನು ಕಿತ್ತುಕೊಳ್ಳತೊಡಗಿದರು. ಇದರಿಂದಾಗಿ ಕೋಲರು ಬುದ್ಧು ಭಗತ್‌ ಎಂಬ ತಮ್ಮ ನಾಯಕನ ನೇತೃತ್ವದಲ್ಲಿ ಸಂಕಾ ಎಂಬಲ್ಲಿ ಸಭೆ ಸೇರಿದರು. ಅಲ್ಲಿ ತಮ್ಮ ಪ್ರದೇಶಗಳಿಗೆ ಹೊರಗಿನಿಂದ ಬಂದವರನ್ನು ಕೊಲ್ಲಲು ಮತ್ತು ತಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ತೀರ್ಮಾನಿಸಿದರು. ಇವರು ಗುಂಪು-ಗುಂಪಾಗಿ ಹಳ್ಳಿಗಳು ಮತ್ತು ಜಮೀನುದಾರರ ಮನೆಗಳ ಮೇಲೆ ದಾಳಿ ಮಾಡುತ್ತಿದ್ದರು. ಒಟ್ಟು 4086 ಬೆಂಕಿ ಪ್ರಕರಣಗಳು ನಡೆದರೂ ಸತ್ತವರು ಕೇವಲ 315 ಜನ ಮಾತ್ರ. ಅಂದರೆ ಅವರು ಅನಗತ್ಯವಾಗಿ ಯಾರನ್ನೂ ಕೊಲ್ಲುತ್ತಿರಲಿಲ್ಲ. ಸು. 2,03000 ರಷ್ಟು ಬೆಲೆಯ ವಸ್ತುಗಳನ್ನು ಲೂಟಿ ಮಾಡಿದ್ದರೆ 32,000 ರೂ.ಗಳಷ್ಟು ನಗದನ್ನು ದೋಚಲಾಗಿತ್ತು. ಕೋಲರು ಕೊಂದುದು ಬಹುತೇಕ ಭಾರತೀಯರೇ ಆಗಿದ್ದರೂ ಬ್ರಿಟಿಷ್‌ ಸರ್ಕಾರವು ಅವರ ಹೋರಾಟವನ್ನು ಸ್ವಾತಂತ್ರ್ಯ ಹೋರಾಟವೆಂದು ಪರಿಗಣಿಸಿ, ಸಶಸ್ತ್ರ ಚಟುವಟಿಕೆಯ ಮೂಲಕ ಎರಡು ವರ್ಷಗಳ ಕಾಲ ಕಾರ್ಯಾಚರಣೆ ನಡೆಸಿ ದಂಗೆಯನ್ನು ಅಡಗಿಸಿತು. ಅವರ ನಾಯಕ ಬುದ್ಧು ಭಗತ್‌ ಆಂಗ್ಲರೊಂದಿಗೆ ಹೋರಾಡುತ್ತಲೇ ಹತನಾದನು.

C. ಸಂತಾಲರ ದಂಗೆ - 1855-56:- ಸಂತಾಲರು ಬಂಗಾಳದಲ್ಲಿನ ಭೀರಭೂಮ್, ಬಂಕುರ, ಮುರ್ಶಿದಾಬಾದ್ದುಮ್ಕಾ, ಭಾಗಲ್‌ಪುರ್ ಮತ್ತು ಪೂರ್ನಿಯಾ ಜಿಲ್ಲೆಗಳ ನಿವಾಸಿಗಳಾಗಿದ್ದರು. ಅವರು ನೆಲೆಸಿದ್ದ ಪ್ರದೇಶವನ್ನು ಸಂತಾಲರ ಪರಗಣ ಅಥವಾ ದಮನ್-ಇ-ಕೋಹ ಎಂದು ಕರೆಯಲಾಗುತ್ತಿತ್ತು. ಆದರೆ ಸಂತಾಲರು ಈ ಪ್ರದೇಶಗಳಿಗೆ ಬಂದು ನೆಲೆಸುವ ಮೊದಲು ಒರಿಸ್ಸಾ ಮತ್ತು ಬಂಗಾಳದ ಕಡಲತೀರದ ಜಿಲ್ಲೆಗಳಲ್ಲಿದ್ದರು. ಆದರೆ ಕಾರ್ನವಾಲೀಸನ ಕಾಲದಲ್ಲಿ ಜಾರಿಗೊಳಿಸಿದ ಜಮೀನ್ದಾರಿ ಪದ್ಧತಿಯಿಂದಾಗಿ ಅವರು ತಮ್ಮ ಕೃಷಿಭೂಮಿಗಳನ್ನು ಕಳೆದುಕೊಂಡು ಬಂಗಾಳದ ಪಶ್ಚಿಮದ ಜಿಲ್ಲೆಗಳಿಗೆ ತೆರಳಿದರು. ಅಲ್ಲಿ ಅವರು ಕಾಡನ್ನು ಕಡಿದು ಹೊಸ ಕೃಷಿಭೂಮಿಗಳನ್ನು ಸಿದ್ಧಪಡಿಸಿಕೊಂಡು ಉತ್ತಮ ಬೆಳೆ ತೆಗೆಯತೊಡಗಿದರು. ಇದರಿಂದಾಗಿ ನೆರೆಯ ರಾಜ್ಯಗಳಾದ ಮಹೇಶ್‌ಪುರ ಮತ್ತು ಪಾಕುರ್‌ಗಳ ರಾಜರುಗಳು ಸಂತಾಲರ ಗ್ರಾಮಗಳನ್ನು ಜಮೀನುದಾರರಿಗೆ ಗುತ್ತಿಗೆ ನೀಡಿ ಅವರಿಂದ ಕಂದಾಯ ವಸೂಲಿ ಮಾಡಲು ಸೂಚಿಸಿದರು. ಈ ತೆರನಾದ ಸಂತಾಲರ ಪ್ರದೇಶಗಳ ಮೇಲಿನ ಅತಿಕ್ರಮಣವು ಸರಳ ಜೀವಿಗಳಾಗಿದ್ದ ಸಂತಾಲರಲ್ಲಿ ಅಸಂತೋಷವನ್ನುಂಟು ಮಾಡಿತು. 1856ರಲ್ಲಿ ಕಲ್ಕತ್ತಾ ರಿವ್ಯೂ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಸಮಕಾಲೀನ ಲೇಖನವೊಂದು ಸಂತಾಲರ ವಿರುದ್ಧದ ಶೋಷನೆಯನ್ನು “ಜಮೀನುದಾರರು, ಪೋಲೀಸರು, ಕಂದಾಯ ಮತ್ತು ನ್ಯಾಯಾಲಯಗಳು ಒಟ್ಟಾಗಿ ನಡೆಸಿದ ಒತ್ತಡಗಳು, ದಮನಕಾರಿ ನೀತಿಗಳು, ಬಲವಂತದಿಂದ ಆಸ್ತಿಗಳ  ವಶ, ಅವಮಾನ ಮತ್ತು ವೈಯುಕ್ತಿಕ ಅತ್ಯಾಚಾರಗಳು ಮತ್ತು ವಿವಿಧ ಬಗೆಯ ಶೋಷಣೆಗಳು ಮುಗ್ಧ ಮತ್ತು ಶ್ರಮಜೀವಿಗಳಾದ ಸಂತಾಲರನ್ನು ಕೆರಳುವಂತೆ ಮಾಡಿದವು” ಎಂದು ವರದಿ ಮಾಡಿದೆ. ಆರು ಆಣೆಯಿಂದ ಆರು ರೂಪಾಯಿಗೆ ಏರಿಸಿದ ಭೂ ತೆರಿಗೆ,    ಸಾಲದ ಮೇಲಿನ ಶೇ. 50 ರಿಂದ 500ರಷ್ಟು ಬಡ್ಡಿದರಗಳು, ಮಾರುಕಟ್ಟೆಗಳಲ್ಲಿ ಮೋಸದ ಅಳತೆ ಮತ್ತು ತೂಕಗಳು, ಸಂತಾಲರ ಪಶುಗಳು ಮತ್ತು ಸಾಕು ಪ್ರಾಣಿಗಳ ವಶ, ಅಲ್ಲದೇ ಅವರ ಬೆಳೆಗಳ ಮೇಲೆ ಶ್ರೀಮಂತರು ಮತ್ತು ಜಮೀನುದಾರರ ಬೇಟೆ ಮತ್ತಿತರ ಸಂತೋಷಗಳಿಗಾಗಿ ಪ್ರಾಣಿಗಳನ್ನು ನುಗ್ಗಿಸಿ ಬೆಳೆ ಹಾನಿ ಮಾಡುವುದು ಇವೇ ಮೊದಲಾದ ಶೋಷಣಾ ಕ್ರಮಗಳಿಂದ ಸಂತಾಲರನ್ನು ಹಿಂಸಿಸಲಾಗುತ್ತಿತ್ತು. ಅಲ್ಲದೇ ಆ ಕಾಲದಲ್ಲಿ ನಡೆಯುತ್ತಿದ್ದ ರೈಲ್ವೆ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟಿಷ್‌ರು ಸಂತಾಲರ ಹುಡುಗಿಯ ಮೇಲೆ ಅತ್ಯಾಚಾರಗಳನ್ನೂ ಎಸಗುತ್ತಿದ್ದರು. ಅವರ ಮೇಲಿನ ಇಂತಹ ದಬ್ಬಾಳಿಕೆಗಳಿಂದಾಗಿ ಸಂತಾಲರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಶಸ್ತ್ರ ಹೋರಾಟಕ್ಕಿಳಿಯುವುದು ಅನಿವಾರ್ಯವಾಯಿತು. ಆರಂಭದಲ್ಲಿ ಜಮೀನುದಾರರು ಮತ್ತು ಲೇವಾದೇವಿಗಾರರ ಮನೆಗಳ ಮೇಲೆ ದಾಳಿ ಮತ್ತು ಲೂಟಿ ಮಾಡುವುದರಲ್ಲಿ ಸಂತಾಲರು ತೊಡಗಿದರು.  ಆದರೆ ಸಂತಾಲರ ಈ ರೀತಿಯ ಕ್ರಮಗಳನ್ನು ತಡೆಯಲು ಪೋಲೀಸರು ಮತ್ತು ಸ್ಥಳೀಯ ನೌಕರರು  ಕೈಗೊಂಡ ಹಿಂಸಾತ್ಮಕ ಕ್ರಮಗಳು ಸಂತಾಲರನ್ನು ಮತ್ತಷ್ಟು ಕೆರಳಿಸಿದವು. ಅಂದರೆ ಭೀರ್‌ಸಿಂಗ್‌ ಎಂಬ ಸಂತಾಲ ಮುಖಂಡನನ್ನು ಕರೆಯಿಸಿ, ಅವನಿಗೆ ದಂಡ ವಿಧಿಸಿದ್ದಲ್ಲದೇ ಚಪ್ಪಲಿಗಳಿಂದ ಹೊಡೆದು ಅವಮಾನಿಸಲಾಯಿತು. ಪರಿಣಾಮವಾಗಿ ಸಂತಾಲರು ಸಿಧು ಮತ್ತು ಕನು ಎಂಬ ಇಬ್ಬರು ನಾಯಕರ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜೂನ್‌ 1855ರಲ್ಲಿ ಭಗ್ನಾದೀಯಿ ಎಂಬಲ್ಲಿ ತಮ್ಮ ಬಿಲ್ಲು-ಬಾಣ, ಕೊಡಲಿ ಮತ್ತು ಈಟಿಗಳನ್ನು ಹಿಡಿದು  ಸಭೆ ಸೇರಿ ತಮ್ಮ ವಿರುದ್ಧದ ಶೋಷಣೆಯನ್ನು ನಿಲ್ಲಿಸುವಂತೆ ಜಮೀನುದಾರರು ಮತ್ತು ಅಧಿಕಾರಿಗಳಿಗೆ ಅಂತಿಮ ಎಚ್ಚರಿಕೆ ನೀಡಿದರು. ಅಲ್ಲದೇ ಅವರು ತಮ್ಮ ಜಮೀನುಗಳ ಒಡೆತನವನ್ನು ಕಿತ್ತುಕೊಳ್ಳಲು ಮತ್ತು ತಮ್ಮದೇ ಆದ ಸರ್ಕಾರವನ್ನು ಸ್ಥಾಪಿಸಲು ನಿರ್ಧರಿಸಿದರು. ಆದರೆ ಸ್ಥಳೀಯ ಅಧಿಕಾರಿಗಳು ಸಂತಾಲರ ಈ ಎಚ್ಚರಿಕೆಗೆ ಯಾವುದೇ ಗಮನ ನೀಡಲಿಲ್ಲ. ಪರಿಣಾಮವಾಗಿ ಸಂತಾಲರು ಶೋಷಕರ ವಿರುದ್ಧ ಸಶಸ್ತ್ರ ಬಂಡಾಯವನ್ನು ಆರಂಭಿಸಿದರು ಮತ್ತು ದಂಗೆಯು ತೀವ್ರ ಸ್ವರೂಪದಲ್ಲಿ ಹರಡಿತು. ಅಲ್ಲದೇ ಸಂತಾಲ ಪರಗಣಗಳಲ್ಲಿದ್ದ ಕೆಳವರ್ಗದ ಸಂತಾಲರೂ ಸಹ ಸಂತಾಲರ ಬೆಂಬಲಕ್ಕೆ ಬಂದರು. ಸರ್ಕಾರ ಮತ್ತು ಜಮೀನುದಾರರು ಸಂತಾಲರ ಬಂಡಾಯದ ವಿರುದ್ಧ ಉಗ್ರ ಕ್ರಮಗಳನ್ನು ಕೈಗೊಂಡರು. ಇದರಿಂದಾಗಿ ಬ್ರಿಟಿಷರ ಉತ್ತಮ ದರ್ಜೆಯ ಸೈನ್ಯ ಮತ್ತು ಶಸ್ತ್ರಗಳ ಎದುರು ಸಂತಾಲರ ವೀರೋಚಿತ ಹೋರಾಟವು ವಿಫಲವಾಯಿತು. ದಂಗೆ ಆರಂಭವಾದ ಎರಡೇ ತಿಂಗಳಲ್ಲಿ ಸಿಧು ಸೆರೆ ಸಿಕ್ಕರೆ, ಕನು 1856ರ ಫೆಬ್ರವರಿಯಲ್ಲಿ ಸೆರೆ ಸಿಕ್ಕನು. ಒಟ್ಟು 15,000 ಸಂತಾಲರು ಈ ಹೋರಾಟದಲ್ಲಿ ಮಡಿದರೆಂದು ಅಂದಾಜಿಸಲಾಗಿದೆ.

D. ಮುಂಡರ ದಂಗೆ – 1895-1900: ಇದೊಂದು ಆರ್ತಿಕ ಮತ್ತು ಧಾರ್ಮಿಕ ಸ್ವರೂಪದ ದಂಗೆಯಾಗಿತ್ತು. ಬಿರ್ಸಾ ಮುಂಡಾ ಇವರ ನಾಯಕ. ಆಗ್ಗೆ ಆತನಿಗೆ ಕೇವಲ 25 ವರ್ಷ ವಯಸ್ಸು ಮಾತ್ರ. ಮುಂಡಾ ಜನರು ತಮ್ಮ ಜಮೀನುಗಳನ್ನು ಕುಲಕ್ಕೆ ಸೇರಿದ ಒಟ್ಟು ಆಸ್ತಿ ಎಂದು ಪರಿಗಣಿಸಿ ಕೃಷಿ ಮಾಡುತ್ತಿದ್ದರು. ಆದರೆ ಬ್ರಿಟಿಷರ ಕಂದಾಯ ಕಾನೂನುಗಳ ಪ್ರಕಾರ ಈ ರೀತಿಯ ಒಡೆತನಕ್ಕೆ ಅವಕಾಶವಿರಲಿಲ್ಲ. ಪರಿಣಾಮವಾಗಿ ಅವರ ಭೂ ಒಡೆತನವನ್ನು ಕಸಿದುಕೊಂಡು ಜಮೀನುದಾರರಿಗೆ ನೀಡಲಾಯಿತು. ಅಲ್ಲದೇ ಮಿಷನರಿಗಳು ತಮ್ಮ ಮತಾಂತರದ ತೀವ್ರ ಚಟುವಟಿಕೆಗಳಿಂದಾಗಿ ಮುಂಡಾ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದರು. ಇದರಿಂದಾಗಿ ಬಿರ್ಸಾ ಬ್ರಿಟಿಷರ ವಿರುದ್ಧ ದಂಗೆ ಎದ್ದು, ಆದಿವಾಸಿಗಳನ್ನು ಸಂಘಟಿಸಿ ಸೈನ್ಯ ಕಟ್ಟಿದರು. ಅದನ್ನೇ ಮುಂಡಾ ದಂಗೆ ಎಂದು ಕರೆಯಲಾಗುತ್ತದೆ. ಈ ದಂಗೆ ವೇಳೆ ಸಾವಿರಾರು ಆದಿವಾಸಿಗಳು ಮಡಿದರು. ಬಿರ್ಸಾ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಲ್ಲಿಯೇ ಅವರು ಮೃತಪಟ್ಟರು. ಆದರೆ ಇವರ ದಂಗೆಯ ಪರಿಣಾಮವಾಗಿ 1908ರ ವೇಳೆಗೆ ಕಾನೂನು ಮಾರ್ಪಡಿಸಿ ಮುಂಡರ ಕುಲ ಪದ್ಧತಿಯ ಭೂ ಒಡೆತನವನ್ನು ಮಾನ್ಯ ಮಾಡಲಾಯಿತು.

 

ಭಾಗ 2. ರೈತರ ದಂಗೆಗಳು

ರೈತರ ದಂಗೆಗಳು:- ಭಾರತವು ಕೃಷಿ ಪ್ರಧಾನ ದೇಶ. ಶೇ ೭೦ ರಷ್ಟು ಜನರು ಭಾರತದಲ್ಲಿ ಇಂದಿಗೂ ಕೃಷಿಯನ್ನೇ ತಮ್ಮ ಜೀವನಾಧಾರ  ಉದ್ಯೋಗವೆಂದು ಪರಿಗಣಿಸಿದ್ದಾರೆ. ಕೃಷಿಯಲ್ಲಿ ತೊಡಗಿದ ಜನರು ಪ್ರಾಚೀನ ಕಾಲದಿಂದಲೂ ನಾನಾ ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದ್ದು ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಕೃಷಿಯನ್ನು ಅವಲಂಬಿಸಿದವರ ಸಮಸ್ಯೆಗಳು ಉಲ್ಬಣಗೊಂಡವು. ಮುಂದೆ ಸ್ವತಂತ್ರ ಭಾರತದಲ್ಲೂ ಕೃಷಿಕರ ಸಮಸ್ಯೆಗಳು ಬೇರೆ ಸ್ವರೂಪದೊಡನೆ ಜೀವಂತವಾಗಿಯೇ ಮುಂದುವರೆದಿವೆ. ಕೃಷಿಕರು ಆಯಾ ಕಾಲಗಟ್ಟದಲ್ಲಿ ಸಮಸ್ಯೆಗಳ ಸ್ವರೂಪಕ್ಕನುಸಾರ ತಮ್ಮ ಹಿತಾಸಕ್ತಿ ರಕ್ಷಣೆಗಾಗಿ ಹೋರಾಟ ಮಾಡುತ್ತಾ ಬಂದಿರುವರು. ಭಾರತದ ರೈತ ಚಳುವಳಿಗಳನ್ನು ಮೊಗಲರ ಕಾಲದಿಂದಲೇ ಗುರುತಿಸಬಹುದು. ವಿಶೇಷವಾಗಿ ಬ್ರಿಟಿಷರ ಆಳ್ವಿಕೆಯಲ್ಲಿ ರೈತ ಹೋರಾಟಗಳು ತೀವ್ರಗೊಂಡವು. ಕ್ಯಾಥಲಿನ್‌ ಗಾಫೆ ಎಂಬ ಚಿಂತಕಿ  ೭೭ ರೈತ ಚಳುವಳಿಗಳನ್ನು ಭಾರತದ ಇತಿಹಾಸದಲ್ಲಿ ಗುರುತಿಸಿದ್ದಾಳೆ. ಅನ್ನದಾತ, ನೇಗಿಲ ಯೋಗಿ, ದೇಶದ ಬೆನ್ನೆಲುಬು ಎಂಬುದಾಗಿ ಪರಿಗಣಿಸಲ್ಪಡುವ ರೈತ  ಇಂದಿಗೂ ಸಹ ಸಂಕಷ್ಟದಲ್ಲಿದ್ದಾನೆ. ಹೀಗಾಗಿ ಭಾರತದಲ್ಲಿ ರೈತರ ಚಳುವಳಿ ಸರ್ವೇ ಸಾಮಾನ್ಯ ಸಂಗತಿ ಎಂದರೆ ತಪ್ಪಾಗಲಾರದು.

ಬ್ರಿಟಿಷರು ತಮ್ಮ ನಿಯಂತ್ರಣಕ್ಕೊಳಪಟ್ಟ ಪ್ರದೇಶಗಳ ರೈತರಿಂದ ಕಂದಾಯ ವಸೂಲಿ ಹಕ್ಕನ್ನು ಪಡೆದರು. ಮುಂದೆ ಭಾರತದಲ್ಲಿ ಪ್ರಬಲರಾಗುತ್ತಿದ್ದಂತೆ ಖಚಿತ ಕಂದಾಯ ಕ್ರೋಢೀಕರಣಕ್ಕಾಗಿ ರೈತ ವಿರೋಧಿ ಕಂದಾಯ ನೀತಿಗಳನ್ನು ಬ್ರಿಟಿಷರು ಅನುಷ್ಟಾನಕ್ಕೆ ತಂದರು. ಖಾಯಂ ಗುತ್ತಾ ಪದ್ಧತಿ, ರೈತವಾರಿ ಪದ್ಧತಿ ಹಾಗು ಮಹಲ್ವಾರಿ ಪದ್ಧತಿಗಳು ಭಾರತೀಯ ರೈತರನ್ನು ಹಲವು ವಿಧದಲ್ಲಿ ಶೋಷಣೆಗೆ ಗುರಿಪಡಿಸಿದವು. ಬ್ರಿಟಿಷರ ಕಂದಾಯ ನೀತಿ ಮಧ್ಯವರ್ತಿಗಳ ವರ್ಗಗಳನ್ನು ಸೃಷ್ಟಿಸಿ ಅವರಿಂದ ರೈತರ ಕಿರುಕುಳಕ್ಕೆ ಕಾರಣವಾಯಿತು. ಅಧಿಕ ಕಂದಾಯ ಕಟ್ಟಲಾಗದ ರೈತರು ಸಾಲದ ಸುಳಿಗೆ ಸಿಲುಕಿಕೊಳ್ಳುವಂತಾಯಿತು. ಬ್ರಿಟಿಷರ ಕಂದಾಯ ನೀತಿಯಿಂದ ಉತ್ಪನ್ನ ಹಾಗು ಶ್ರಮದ ರೂಪದಲ್ಲಿದ್ದ ಗೇಣಿ ನಗದು ರೂಪವನ್ನು ತಾಳಿತು. ಭೂ ಒಡೆತನದ ಅಭದ್ರತೆ ಸಾಮಾನ್ಯವಾದ ಮತ್ತು ಕಡ್ಡಾಯ ಬೆಳೆ ಬೆಳೆಯಬೇಕಾದ ಅನಿವಾರ್ಯತೆಗೆ ಬ್ರಿಟಿಷರ ಕಂದಾಯ ನೀತಿ ರೈತರನ್ನು ದೂಡಿತು. ಹೀಗೆ ಬ್ರಿಟಿಷ್ ಕಂದಾಯ ನೀತಿಯ ಪರಿಣಾಮಗಳು ರೈತರು ಚಳುವಳಿ ಹೂಡಲು ಪ್ರೇರೇಪಿಸಿದವು. ಉದಾ: ಿಂಡಿಗೊ ಚಳುವಳಿ.

ಬ್ರಿಟಿಷರು ಲಾಭದ ಕಾರಣವೊಂದಕ್ಕೆ ಕಂದಾಯ ವಸೂಲಿ ಹಕ್ಕನ್ನು ಪಡೆದ ಪ್ರದೇಶದಲ್ಲಿ ಭೂ ಒಡೆತನವನ್ನು ಕೆಲವರ ಸ್ವಾಧೀನಕ್ಕೆ ನೀಡಿದರು. ನಂತರ  ರೈಲ್ವೆ, ರಸ್ತೆ, ಕಾರ್ಕಾನೆಗಳ ಅಭಿವೃದ್ಧಿಯ ಕಾರಣಕ್ಕೆ ರೈತರ ಭೂಮಿಯನ್ನು ವಶಪಡಿಸಿಕೊಂಡರು. ಈ ರೀತಿ ಬ್ರಿಟಿಷರ ಕಾಲದಲ್ಲಿ ರೈತ ಚಳುವಳಿಗೆ ಭೂ ಸ್ವಾಧೀನವು ಕಾರಣವಾಗಿತ್ತು.

The Sanyasi Rebellion, 1763-1800

The East India Company's official correspondence in the second half of the eighteenth century referred many times to the incursion of the nomadic Sanyasis and Fakirs, mainly in northern Bengal. Even before the great famine of Bengal(1770) small groups( of Hindu and Muslim holy men travelled from place to place and made sudden attack on the store houses of food crops and property of the local rich men and government offices. Though the Sanyasis and Fakirs were religious mendicants, originally they were peasants, including some who were evicted from land. However, the growing hardship of the peasantry, increasing revenue demand and the Bengal famine of 1770 brought a large member of dispossessed small Zamindars, disbanded soldiers and rural poor into the bands of Sanyasis and Fakirs. They moved around different parts of Bengal and Bihar in bands of 5 to 7 thousand and adopted the guerilla technique of attack. Their target of attack was the grain stocks of the rich and at later stage, government officials. They looted local government treasuries. Sometimes the wealth looted was distributed among the poor. They established an independent government in Bogra and Mymensingh. The contemporary government records describe these insurrections in their own way, thus, "A set of lawless banditti known under the name of Sanyasis and Fakirs, have long infested these countries and under the pretence of religious pilgrimage, have been accustomed to traverse the chief parts of Bengal, begging, stealing and plundering wherever they go and as it best suits their convenience to practice. In the years subsequent to the famine, their ranks were swollen by a crowd of starving peasants, who had neither seed nor implements to recommence cultivation with, and the cold weather of 1772 brought them down upon the harvest fields of lower Bengal, burning, plundering, ravaging in bodies. Sanyasi Rebels: A Sketch One noticeable feature of these insurrections was the equal participation of Hindus and Muslims in it. Some of the important leaders of these movements were Manju Shah, Musa Shah, Bhawani Pathak and Debi Chaudhurani. Encounter between the Sanyasis-Fakirs and the British forces became a regular feature all over Bengal and Bihar till 1800. The British used its full force to suppress the rebels.

Peasant Uprising of Rangpur, Bengal, 1783

The establishment of British control over Bengal after 1757 and their various land revenue experiments in Bengal to extract as much as possible from peasants brought unbearable hardship for the common man. Rangpur and Dinajpur were two of the districts of Bengal which faced all kinds of illegal demands by the East India Company and its revenue contractors. Harsh attitude of the revenue contractors and their exactions became a regular feature of peasant life. One such revenue contractor was Debi Singh of Rangpur and Dinajpur. He and his agents created a reign of terror in the two districts of northern Bengal. Taxes on the Zamindars were increased which actually were passed on from Zamindars to cultivators or ryots. Ryots were not in a position to meet the growing demands of Debi Singh and his agents. Debi Singh and his men used to beat and flog the peasants, burn their houses and destroy their crops and not even women were spared. Peasants appealed to the company officials to redress their grievances. Their appeal however remained unheeded. Being deprived of justice the peasants took the law in their own hands. By beat of drum the rebel peasants gathered large number of peasants, armed with swords, shields, bows and arrows. They elected Dirjinarain as their leader and attacked the local cutcheries and store houses of crops of local agents of the contractors and government officials. In many cases they snatched away the prisoners from the government guards. The rebels formed a government of their own, stopped payments of revenue to the existing government and levied 'insurrection charges' to meet the expenses of the rebellion. Both Hindus and Muslims fought side by side in the insurrection. Ultimately the government's armed forces took control of the situation and suppressed the revolt.

The Rebellion at Mysore, 1830-31

After the final defeat of Tipu Sultan the British restored Mysore to the Wodeyar ruler and imposed on him the subsidiary alliance. The financial pressure from the company on the Mysore ruler compelled him to increase revenue demands from the Zamindars. The increasing burden of revenue ultimately fell on the cultivators. The corruption and extortion of local officials added 'to the existing miseries of the peasants. The growing discontent of the peasants broke out into an open revolt in the province of Nagar, one of the four divisions of Mysore. Peasants from other provinces joined the rebellious peasants of Nagar and the rebel peasants found their leader in Sardar Malla, the son of a common ryot of Kremsi. The peasants defied the authority of the Mysore ruler. The British force regained control of Nagar from the rebel peasants after strong opposition and ultimately the administration of the country passed into the hand of the British.

The Mappila Uprisings, 1836-54

Though the various peasant uprisings that posed serious challenge to the colonial rule the Mappila uprisings of Malabar occupy an important place. Mappilas are the descendants of the Arab settlers and converted Hindus. Majority of them were cultivating tenants, landless labourers, petty traders and fishermen.

   TheBritish occupation of Malabar in the last decade of the eighteenth century and the consequent changes that the British introduced in the land revenue administration of the area brought unbearable hardship in the life of the Mappilas. Most important change was

The transfer of 'Janmi' from that of traditional, partnership with the Mappila to that of an independent owner of land and the right of eviction of Mappila tenants which did not exist earlier. Over-assessment, illegal taxes,\eviction from land, hostile attitude of  government officials were some of the many reasons that made the Mappilas rebel Peasant and against the British and the landlords.

The religious leaders played an important role in strengthening the solidarity of the Mappilas through socio-religions reforms and-also helped in the evolution of anti-British consciousness among the Mappilas. The growing discontent of the Mappilas broke out in open insurrections against the state and landlords. Between 1836 and 1854 there were about twenty-two uprisings in Malabar. In these uprisings the rebels came mostly from the poorer section of the Mappila population. The target of the rebels were generally the British officials. Janmis and their dependents. The British armed forces swung into action to suppress the rebels but failed to subdue them for many years.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources