ಅಧ್ಯಾಯ 6. ಪ್ರವಾಸೋದ್ಯಮ ಮತ್ತು ಆತಿಥ್ಯ - ವಸತಿನಿಲಯಗಳ ವಿಧಗಳು, ಗೃಹವಸತಿಗಳು, ಅರಣ್ಯ ವಸತಿಗಳು ಮತ್ತು ವಿಶೇಷ ವಸತಿಗಳು.

ಗೃಹ ವಸತಿಗಳು.

ಪೀಠಿಕೆ:- ಭಾರತದ ಸಂಸ್ಕೃತಿಯಲ್ಲಿ ಅತಿಥಿಗಳನ್ನು ದೇವರೆಂದು ಭಾವಿಸುವ “ಅಥಿಥಿದೇವೋಭವ“ ಎಂಬ ನುಡಿಯಿದೆ. ಅದರಂತೆ ಭಾರತೀಯರು ತಮ್ಮ ಅತಿಥಿಗಳನ್ನು ಉಪಚರಿಸುವಲ್ಲಿ ಉತ್ತಮ ಆಸ್ತೆ ವಹಿಸುತ್ತಾರೆ. ಆದರೆ ಭಾರತಕ್ಕೆ ಪ್ರವಾಸಕ್ಕೆಂದು ಬಂದು ಹೋಟೆಲುಗಳಲ್ಲಿ ಉಳಿದುಕೊಳ್ಳುವ ಪ್ರವಾಸಿಗರಿಗೆ ಭಾರತೀಯರ ಈ ಅತಿಥಿದೇವೋಭವ ಎಂಬ ಉದಾತ್ತ ಮೌಲ್ಯ ಅರಿವಿಗೆ ಬರುವುದೇ ಇಲ್ಲ. ಆದರೆ ಇತ್ತೀಚಿಗೆ ಪ್ರವಾಸೋದ್ಯಮದಲ್ಲಿ ಚಾಲ್ತಿಗೆ ಬರುತ್ತಿರುವ ಗೃಹ ವಾಸ್ತವ್ಯ ಅಥವಾ ಗೃಹ ವಸತಿಗಳಿಂದ ಭಾರತೀಯರ ಆತಿಥ್ಯದ ಅನುಭವವು ಆಗುತ್ತಿದೆ.

 

ಗೃಹವಸತಿ ಅಥವಾ ಗೃಹವಾಸ್ತವ್ಯ:- ಗೃಹವಸತಿ ಅಂದರೆ ಸಾಮಾನ್ಯ ಅಥವಾ ವಾಣಿಜ್ಯ ವಸತಿ ನಿಲಯಗಳಲ್ಲಿ ಗ್ರಾಹಕರಿಗೆ ಅಥವಾ ಪ್ರವಾಸಿಗರಿಗೆ ನೀಡುವ ಊಟ ಮತ್ತು ವಸತಿಗಳ ಸೌಲಭ್ಯವನ್ನು ಕುಟುಂಬಸ್ಥರು ವಾಸಿಸುವ ಮನೆಗಳಲ್ಲೇ ನೀಡುವುದಾಗಿದೆ. ಅಂದರೆ ತಾವು ವಾಸಕ್ಕೆಂದು ನಿರ್ಮಿಸುವ ಮನೆಗಳಲ್ಲಿಯೇ ಹೆಚ್ಚುವರಿಯಾಗಿ ಅಥವಾ ಅತಿಥಿಗಳಿಗೆಂದೇ ಪ್ರತ್ಯೇಕವಾದ ಮನೆಗಳನ್ನು ನಿರ್ಮಿಸಿ ಅಲ್ಲಿ ಅವರಿಗೆ ಉಳಿದುಕೊಳ್ಳಲು ಅವಕಾಶ ನೀಡುವುದರ ಜೊತೆಗೆ ಅವರ ಊಟ-ುಪಚಾರಗಳ ಜವಾಬ್ದಾರಿಯನ್ನೂ ಕುಟುಂಬದ ಸದಸ್ಯರೇ ವಹಿಸಿಕೊಳ್ಳುತ್ತಾರೆ. ಇಂತಹ ಗೃಹವಸತಿಗಳಲ್ಲಿ ವಾಣಿಜ್ಯ ಉದ್ದೇಶದ ಹೋಟೆಲು ಅಥವಾ ವಸತಿನಿಲಯಗಳಲ್ಲಿ ನೀಡುವ ಸೌಲಭ್ಯಗಳಿಗಿಂತ ಉತ್ತಮವಾದ ಮತ್ತು ಆತ್ಮೀಯವಾದ ಆತಿಥ್ಯವು ಗ್ರಾಹಕರಿಗೆ ಸಿಗುತ್ತದೆ. ಅದಕ್ಕೆ ಪ್ರತಿಯಾಗಿ ಅಲ್ಲಿ ಉಳಿದುಕೊಳ್ಳುವ ಅತಿಥಿಗಳು ಅಥವಾ ಗ್ರಾಹಕರು ನಿಗದಿತ ಹಣ ಪಾವತಿ ಮಾಡಬೇಕಾಗುತ್ತದೆ.

 

ಗೃಹವಸತಿಗಳ ಜನಪ್ರಿಯತೆಗೆ ಕಾರಣಗಳು:- ವಾಣಿಜ್ಯ ವಸತಿನಿಲಯಗಳಿಗಿಂತ ಗೃಹವಸತಿಗಳು ಹೆಚ್ಚು ಜನಪ್ರಿಯವಾಗುತ್ತಿರುವುದಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ,

01. ವೈವಿಧ್ಯಮಯ ವಸತಿ ಸೌಲಭ್ಯಗಳು::-  ಗೃಹವಸತಿಗಳು ಭಾರತದ ಅಥವಾ ಆಯಾ ರಾಜ್ಯಗಳ ವೈವಿಧ್ಯಮಯ ಸನ್ನಿವೇಶಗಳು ಮತ್ತು ವಸತಿ ಸೌಲಭ್ಯಗಳ ಅನುಭವಗಳನ್ನು ಗ್ರಾಹಕರಿಗೆ ನೀಡುತ್ತವೆ. ಅಂದರೆ ತೋಟಗಳಲ್ಲಿನ ಮನೆಗಳು, ಐತಿಹಾಸಿಕ ಕಟ್ಟಡಗಳು, ಕೋಟೆಗಳು ಮತ್ತು ಒಳನಾಡುಗಳಲ್ಲಿನ ಗ್ರಾಮೀಣ ವಸತಿಗಳಂತಹ ವೈವಿಧ್ಯಮಯ ವಸತಿ ಸೌಲಭ್ಯಗಳು ಗೃಹವಸತಿಗಳಲ್ಲಿ ದೊರೆಯುತ್ತವೆ. ಇಲ್ಲಿ ಗ್ರಾಮೀಣ ಜನರೊಂದಿಗೆ ಮತ್ತು ಶ್ರೀಮಂತ ಜನರೊಂದಿಗೆ ಉಳಿದುಕೊಳ್ಳುವ ಅವಕಾಶ ಸಹಾ ದೊರೆಯುತ್ತದೆ. ಅಂದರೆ ಭಾರತದ ಎಲ್ಲಾ ವರ್ಗದ ಜನರೊಂದಿಗೂ ಒಡನಾಡುವ ಅವಕಾಶವನ್ನು ಗೃಹವಸತಿಗಳು ನೀಡುತ್ತವೆ.

02. ವೈಯುಕ್ತಿಕ ಉಪಚಾರ:-  ವಾಣಿಜ್ಯ ವಸತಿಗಳಿಗೆ ಹೋಲಿಸಿಕೊಂಡಲ್ಲಿ ಗೃಹವಸತಿಗಳಲ್ಲಿ ಸೀಮಿತ ಕೊಠಡಿಗಳಿರುವ ಕಾರಣದಿಂದಾಗಿ ಗ್ರಾಹಕರಿಗೆ ಉತ್ತಮ ಸೇವೆ ದೊರೆಯುತ್ತದೆ. ಏಕೆಂದರೆ ಗೃಹವಸತಿಗಳನ್ನು ನಡೆಸುವ ಕುಟುಂಬದ ಸದಸ್ಯರೇ ವೈಯುಕ್ತಿಕ ಗಮನ ಹರಿಸುವ ಮೂಲಕ ತಮ್ಮ ಅತಿಥಿಗಳಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಅಲ್ಲದೇ ಅತಿಥಿಗಳು ಅಥವಾ ಗ್ರಾಹಕರು ಆ ಕುಟುಂಬದ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯಲೂ ಅವಕಾಶವಿರುತ್ತದೆ. ಇದರಿಂದಾಗಿ ಪ್ರವಾಸಿಗರು ತಾವು ಉಳಿದುಕೊಳ್ಳುವ ಪ್ರದೇಶಗಳ ಸಂಸ್ಕೃತಿಯನ್ನು ಅರಿತುಕೊಳ್ಳಲು ಸಹಾಯಕವಾಗುತ್ತದೆ. ಗೃಹವಸತಿಯ ಸಮಯದಲ್ಲಿನ ಬಾಂಧವ್ಯವು ಗ್ರಾಹಕರು ಮತ್ತು ಆತಿಥೇಯರ ನಡುವೆ ಉತ್ತಮ ಸಂಬಂಧಗಳು ಬೆಳೆಯಲು ಕಾರಣವಾಗುತ್ತದೆ.

03. ಸುರಕ್ಷತೆ:-  ಸಾಮಾನ್ಯವಾಗಿ ಮಹಿಳೆಯರಿಗೆ ಹೊರಗಿನ ಸಂಚಾರಗಳಲ್ಲಿ ತಮ್ಮ ಸುರಕ್ಷತೆಯ ಭಯವಿರುತ್ತದೆ. ಆದರೆ ಗೃಹವಸತಿಗಳಲ್ಲಿ ಮಹಿಳೆಯರಿಗೆ ತಮ್ಮ ಸುರಕ್ಷತೆಯ ಬಗ್ಗೆ ಯಾವುದೇ ಚಿಂತೆ ಇರುವುದಿಲ್ಲ. ಏಕೆಂದರೆ ಅವರು ಕುಟುಂಬದೊಂದಿಗೆ ಉಳಿದುಕೊಳ್ಳುವುದರಿಂದ ಅವರ ಸುರಕ್ಷತೆಗೆ ಯಾವುದೇ ಆತಂಕವಿರುವುದಿಲ್ಲ. ಗೃಹವಸತಿ ಒದಗಿಸುವವರು ಸ್ಥಳೀಯ ಅಪಾಯಗಳ ಬಗ್ಗೆ ಗ್ರಾಹಕರಿಗೆ ಅಥವಾ ಪ್ರವಾಸಿಗರಿಗೆ ಸೂಕ್ತ ಮಾಹಿತಿ ನೀಡುತ್ತಾರೆ. ಕೆಲವೊಮ್ಮೆ ಅವರೇ ತಮ್ಮ ಗ್ರಾಹಕರಿಗೆ ವಾಹನ ಸೌಲಭ್ಯಗಳನ್ನೂ ಒದಗಿಸುವ ಸಾದ್ಯತೆಗಳಿರುತ್ತವೆ. ಇದರಿಂದ ಏಕಾಂಗಿಯಾಗಿ ಪ್ರವಾಸಗಳಿಗೆ ಹೋಗುವ ಮಹಿಳೆಯರಿಗೆ ಗೃಹವಸತಿಗಳು ಉತ್ತಮ ಆಯ್ಕೆಗಳಾಗಿರುತ್ತವೆ.

04. ಸ್ಥಳೀಯ ತಿಳುವಳಿಕೆ:-  ಗೃಹವಸತಿಗಳಲ್ಲಿ ಉಳಿದುಕೊಳ್ಳುವ ಪ್ರವಾಸಿಗರಿಗೆ ಕುಟುಂಬದ ಸದಸ್ಯರೇ ಅವರು ನೋಡಬೇಕಾದ ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಏಕೆಂದರೆ ಮಾರ್ಗದರ್ಶಿ ಪುಸ್ತಕಗಳಲ್ಲಿನ ಮಾಹಿತಿಗಳಿಗಿಂತ ಸ್ಥಳೀಯರು ಪಡೆದಿರುವ ಜ್ಞಾನವು ಹೆಚ್ಚು ನಂಬಲರ್ಹವಾಗಿರುತ್ತದೆ.

05. ಉತ್ತಮ ಆಹಾರ:-  ಗೃಹವಸತಿಗಳಲ್ಲಿ ಪ್ರವಾಸಿಗರಿಗೆ ಭಾರತದ ಅಥವಾ ಸ್ಥಳೀಯವಾಗಿ ತಯಾರಿಸುವ ಆಹಾರಗಳ ನೈಜ ರುಚಿಯನ್ನು ಸವಿಯಲು ಅವಕಾಶವಾಗುತ್ತದೆ. ಏಕೆಂದರೆ, ವಾಣಿಜ್ಯ ವಸತಿಗಳಲ್ಲಿ ತಯಾರಿಸುವ ಆಹಾರವು ಕೆಲವೊಮ್ಮೆ ನೈಜ ರುಚಿಯನ್ನು ನೀಡಲಾರವು. ಅಲ್ಲದೇ ಪ್ರವಾಸಿಗರು ಆ ಅಡುಗೆಗಳನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನೂ ನೋಡಲು ಗೃಹವಸತಿಗಳಲ್ಲಿ ಅವಕಾಶವಿರುತ್ತದೆ. ಏಕೆಂದರೆ ತಮ್ಮ ಗ್ರಾಹಕರನ್ನು ಆತಿಥೇಯರು ಅಡುಗೆ ಮನೆಗಳಿಗೂ  ಬರಲು ಅವಕಾಶ ನೀಡಬಹುದು.

06. ವೈವಿಧ್ಯಮಯ ಚಟುವಟಿಕೆಗಳು:-  ಗೃಹವಸತಿಗಳಲ್ಲಿನ ಪ್ರವಾಸಿಗರಿಗೆ ಕುಟುಂಬದ ಸದಸ್ಯರೊಂದಿಗೆ ವೈವಿಧ್ಯಮಯ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಏಕೆಂದರೆ ಗೃಹವಸತಿ ಸೇವೆ ಒದಗಿಸುವವರು ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಬಯಸುವುದರಿಂದ ಕೆಲವೊಮ್ಮೆ ಅವರನ್ನು ತಮ್ಮ ಕೌಟುಂಬಿಕ ಸಭೆ-ಸಮಾರಂಭಗಳಲ್ಲೂ ಪಾಲ್ಗೊಳ್ಳಲು ಆಹ್ವಾನಿಸಬಹುದು. ಅಥವಾ ಕೊಡಗು, ಚಿಕ್ಕಮಗಳೂರುಗಳಂತಹ ಪ್ರದೇಶಗಳಲ್ಲಿ ಕಾಫಿ ಅಥವಾ ಟೀ ಎಸ್ಟೇಟುಗಳಲ್ಲಿ ಉಳಿದುಕೊಳ್ಳುವ ಪ್ರವಾಸಿಗರನ್ನು ತಮ್ಮ ತೋಟಗಳನ್ನು ವೀಕ್ಷಿಸಲು ಕರೆದೊಯ್ಯಬಹುದು. ಅಲ್ಲದೇ ಸ್ಥಳೀಯ ಹಬ್ಬ, ಜಾತ್ರೆಗಳು ಮತ್ತು ದೇವಾಲಯಗಳ ಭೇಟಿಗೂ ಸಹ ತಮ್ಮ ಗ್ರಾಹಕರನ್ನು ಗೃಹವಸತಿಗಳ ಮಾಲೀಕರು ಕರೆದೊಯ್ಯಬಹುದು. ಇದರಿಂದ ಸ್ಥಳೀಯ ಸಂಸ್ಕೃತಿಯ ತಿಳುವಳಿಕೆಯ ಜೊತೆಗೆ ಹಬ್ಬಗಳ ಆಚರಣೆಗಳ ಹಿಂದಿನ ಉದ್ದೇಶಗಳನ್ನೂ ಪ್ರವಾಸಿಗರು ಅರಿಯಬಹುದು.

07. ಪ್ರಶಾಂತ ವಾತಾವರಣ:-  ಗೃಹವಸತಿಗಳು ಸಾಮಾನ್ಯವಾಗಿ ಪಟ್ಟಣದ ಅಥವಾ ನಗರಗಳ ಗೌಜು-ಗದ್ದಲಗಳಿಂದ ದೂರವಿರುವ ಕಾರಣದಿಂದಾಗಿ ಪ್ರವಾಸಿಗರಿಗೆ ಪ್ರಶಾಂತವಾದ ವಾತಾವರಣ ದೊರೆಯುತ್ತದೆ.

 

   ಮೇಲಿನ ಕಾರಣಗಳಿಂದಾಗಿ ಇಂದು ಕರ್ನಾಟಕದಲ್ಲಿ ಕೊಡಗು, ಮೈಸೂರು, ಚಿಕ್ಕಮಗಳೂರು ಮತ್ತು ಕರಾವಳಿ ಪ್ರದೇಶಗಳಲ್ಲದೇ ಬಯಲು ಸೀಮೆಯ ಪ್ರೇಕ್ಷಣೀಯ ಸ್ಥಳಗಳಲ್ಲೂ ಸಹ ಗೃಹವಸತಿಗಳ ಸೇವೆ ದೊರೆಯುತ್ತಿದೆ. ಇದರಿಂದಾಗಿ ಸ್ಥಳೀಯರಿಗೆ ಆರ್ಥಿಕ ಸಂಪಾದನೆಗೆ ಅವಕಾಶವಾದರೆ ಪ್ರವಾಸಿಗರಿಗೆ ಉತ್ತಮ ಸೇವೆಯ ಸೌಲಭ್ಯ ದೊರೆಯುತ್ತದೆ. ಒಟ್ಟಿನಲ್ಲಿ ಪ್ರವಾಸೋದ್ಯಮವು ವಿವಿಧ ವರ್ಗದ ಜನರಿಗೆ ವೈವಿಧ್ಯಮಯವಾದ ರೀತಿಯಲ್ಲಿ ಉದ್ಯೋಗವಕಾಶಗಳನ್ನು ಒದಗಿಸಿದೆ.

*****

 

Jungle Lodges and Resorts in Karnataka

Introduction:- Karnataka is a state that boasts of numerous sights of natural beauty along with an impressive amount of flora and fauna. Charming grasslands, dense forests, and glistening rivers are a common sight in the state. Due to the presence of an ocean in the vicinity, Karnataka enjoys maritime weather, with summer and mild winters. October through the month of April is the best time to visit if you want to witness exquisite flora and fauna.

If you want to explore the magnificent forests of Karnataka, nothing is better than staying at a jungle resort or camp. Top-notch experience along with never-ending thrill is some of the firm promises made by the jungle lodges and resorts that follow. Below are the some jungle lodges and resorts situated various places of Karnataka.

  1. Anejhari Butterfly Camp:- Anejhari Butterfly Camp is located at a distance of 80 km from Udupi, near Kollur. The camp allows visitors to discover the mysteries of Mookambika Wildlife Sanctuary. This camp is best suited for adventurers who love trekking; you can enjoy a trek to Kodachadri peak. The tranquil environment that surrounds that camp enriches you physically, mentally as well as spiritually. Two beautiful beaches like Byndoor and Maravanthe are located about 35 km from the camp.
  2. Sakrebyle Elephant Camp:- If you are a big fan of the majestic creatures, nothing better than the Sakrebyle Elephant Camp, which is located a few kilometers away from Shimoga. The camp is maintained and taken care of by the Karnataka Forest Department. Elephants receive the attention that they truly deserve in the Sakrebyle Elephant Camp. Elephants receive all kinds of treatments and training in this camp. Another attraction is the River Tunga with its clear water, located in the vicinity.
  3. Sharavathi Adventure Camp:- A camp that amalgamates the serenity of forests and the thrill of mountains, located at a mere distance of 6 km from Jog Falls, the Sharavathi Adventure Camp is an extraordinary place to leave behind worries. The camp offers an opportunity to catch a glimpse of the charming interplay between sparkling sunlight and peaceful water.  The light breeze flowing over the region is loaded with scents of trees and shrubs that fill up the senses and rejuvenate every vein in the body.
  4. Kabini River Lodge:- The lodge gets its name from River Kabini and is located near Nagarahole National Park or the Rajiv Gandhi National Park. Tourists can enjoy breathtaking views from this place and can often witness the presence of gaur, deer as well as elephants. Jeep safari, boat rides, are some of the activities open for visitors.
  5. Bandipura Safari Lodge:- Bandipur is a place for wildlife seekers. Originally used as a hunting ground by royals, the place is now frequented by deer, elephants, and peafowls. The Bandipur Safari Lodge captures the true essence of wildlife, a treat for all tourists. Bandipur Safari Lodge was among the first of JLRs declared /accommodation/kyathdevaraya-gudi-wilderness-camp/in 1973.
  6. Kyathadevara Gudi Wilderness Camp:- The Kyathadevara Gudi Wilderness Camp offers an extraordinary opportunity for wildlife lovers to catch a glimpse of the jungle from a short distance. Leopards, elephants, tigers, and gaurs are some of the common animals that are seen in this region, along with a good diversity of exquisite birds.
  7. River Tern Lodge:- Located near the foothills of the majestic Western Ghats, River Tern Lodge is a place radiating peace and tranquility. River terns often fly around the region especially during the mating season, hence the name. Jeep safaris to parks in the vicinity are an excellent opportunity for tourists to see the magic of wildlife.
  8. JLR Kings Sanctuary, Nagarahole:- Kings Sanctuary is located a few kilometers away from Mysore, in the northern region of the Rajiv Gandhi National Park. Awe-inspiring creatures like Asiatic elephants, majestic tigers, and leopards, reptiles, and birds are a common sight in this region.
  9. Kali Adventure camp:- A haven for water sports, Kali Adventure camp offers an unimaginable experience to all visitors. Whitewater rafting, kayaking, and coracle riding are some of the water sports. Apart from these, the camp is an excellent hub of nature and wildlife, conducting several safari tours. Its a great place for those interested in birds
  10. Devbagh Beach Resort, Karwar:- The resort offers a unique beach experience to visitors with its golden sand, sparkling water, and beautiful blue skies. Snorkeling, banana-boat rides, speed boat riding, and Parasailing are some of the exciting activities you can enjoy in Devbagh. Do not forget to taste native recipes of the fisherfolks, cooked with fresh and delicious fish. When doing nothing, you can try your luck at chasing crabs.
  11. Om Beach Resort:- Om Beach Resort borrows its names from Om Beach, one of the most popular and well-known beaches in Gokarna. Located between tall hills and the glistening sea, Om Beach is the perfect sight for beach lovers. The place combines the spirits of tradition and serenity of nature to create the perfect ambiance for tourists.
  12. Sadashivgad Sea View Resort:- The resort gets its name from chieftain Sadashiv Lingaraj, the father of Basavlingraj. Since 1715, Sadashivgad has stood strong, with each passing year bringing some reformation. The place has been modified for tourists and offers the opportunity to experience a great view and adventure sports.
  13. Hampi Heritage and Wilderness Resort:- As the name suggests, the resort is located close to the famous World Heritage Site, Hampi. The resort was built in the vicinity of Daroji Sloth Bear Sanctuary, a region frequented by sloth bears. The rugged terrain and robust vegetation in the area adds an element of adventure and mystery.
  14. Blackbuck Resort:- The resort is nestled snugly near the Vilaspur Lake and is in the vicinity of Honnikeri Reserve Forest. This region is populated with blackbuck, a beautiful and uncommon species. The forest, refreshing lake, and magnificent architectural sites near the region make it quite an important spot for tourists.
  15. Dubare Elephant Camp:- As the name suggests, the camp was built for elephants, to train and look after these majestic creatures. Visitors can interact with elephants and understand them personally. These humongous creatures are trained for the famous festival of Mysore Dasara in this camp. It is located in Kodagu.
  16. Bheemeshwari Adventure & Nature Camp:- The camp is located close to River Kaveri, a wild and free river that often sparks the flame of adventure in humans. Meticulously combining the beauty of nature and the addiction of adventure, this camp allows visitors to enjoy the best of both worlds.
  17. Galibore Nature Camp:- The camp is a haven for nature lovers, with an atmosphere of calmness and enigma. The region boasts species like marsh crocodiles, spotted deer, snakes, grizzled giant squirrel, and different species of fish.
  18. Bannerghatta Nature Camp:- Bannerghatta Nature Camp is an escape from the cacophony of Bangalore, a city that is always busy. Detaching itself from the fast life, the camp is an area of peace and rediscovery. The camp offers visitors the sight of frail and beautiful butterflies, elegant elephants, bears, and deer.
  19. Bhimgad Nature Camp:- The camp is at a mere distance of 10 km from Belgaum. The famous and popular Belgaum Golf Course is located a few minutes away from the camp. This is a place for calmness and the atmosphere promises to rejuvenate the senses of every visitor. Placed in the heart of Khanapur, it enjoys the hilly climate of the Western Ghats. As the place is just 2 hours away from entertainment hubs like Goa and Hubli, this provides a great opportunity for tourists to explore new territories.
  20. Bhagawathi Nature Camp:- Bhagawathi Nature Camp is located within the area of the Kudremukh National Park and is an excellent place to enjoy treks. The Camp’s main attraction is the beautiful evergreen forests and luscious green grasslands. Three important rivers of the south Tunga, Nethravathi, and Bhadra originate from this region. The sounds of the water and the breeze lightly brushing the leaves of the trees is an extraordinary experience that tourists always enjoy whole-heartedly.
  21. Seethanadi Nature Camp:- It is located in Hebri, at a distance of 40 km from Udupi. The enchanting sights of the Someshwara Wildlife Sanctuary are breathtaking and invigorating. The camp arranges guided tours so visitors can unleash the ultimate essence of the forest.

Conclusion :- The attraction to wildlife is best fulfilled when it is observed from proximity. The above-mentioned Jungle lodges allow visitors to peacefully take in the scents and sounds of the jungle. If visiting Karnataka is on your wishlist, do not forget to include Jungle Lodges to the trip.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources