ಅಧ್ಯಾಯ 9. ಸಾಮಾಜಿಕ ತಾರತಮ್ಯಗಳು - ಜಾತೀಯತೆ ಮತ್ತು ಅಸ್ಪೃಶ್ಯತೆ. ಲಿಂಗ ತಾರತಮ್ಯ ಮತ್ತು ಹೆಣ್ಣು ಭ್ರೂಣ ಹತ್ಯೆ. ಬಂಗಾಳದಲ್ಲಿ ಕುಲೀನತೆ. ಸತಿ ಪದ್ಧತಿ ಮತ್ತು ವಿಧವಾ ಪದ್ಧತಿ.

I. ಪೀಠಿಕೆ: When the British came to India, they brought new ideas such as liberty, equality, freedom and human rights from the Renaissance. These ideas appealed to some sections of our society and led to several reform movements in different parts of the country. At the forefront of these movements were visionary Indians such as Raja Ram Mohan Roy, Sir Syed Ahmed Khan, Aruna Asaf Ali and Pandita Ramabai. These movements looked for social unity and strived towards liberty, equality and fraternity.

Many legal measures were introduced to improve the status of women.

The practice of sati was banned in 1829 by Governor General William Bentinck.

Widow Remarriage was permitted by a law passed in 1856.

A law passed in 1872, sanctioned inter-caste and inter-communal marriages.

Sharada Act was passed in 1929 preventing child marriage.

The act provided that it was illegal to marry a girl below 14 and a boy below 18 years.

II. ಜಾತಿಯತೆ:

A. ಜಾತಿ ಪದದ ಅರ್ಥ: ಜಾತಿ ಪದವು ಸಂಸ್ಕೃತದ ಜಾತ ಎಂಬ ಪದದಿಂದ ಬಂದಿದೆ. ಜಾತ ಅಂದರೆ, ಹುಟ್ಟು ಅಥವಾ ಅಸ್ತಿತ್ವಕ್ಕೆ ಬರುವುದು ಎಂದರ್ಥ. ಅಮರಕೋಶದ ಪ್ರಕಾರ “ರಕ್ತಸಂಬಂಧದ ಏಕತೆಯನ್ನುಳ್ಳ ವರ್ಗ ಅಥವಾ ಸಮೂಹ”. ಕುಲ, ವಂಶ, ವರ್ಗ ಎಂಬ ಸಮಾನಾರ್ಥಕಗಳೂ ಇವೆ.

ಆದರೆ, caste ಎಂಬ ಪದವು ಸ್ಪ್ಯಾನಿಶ್/ಪೋರ್ಚುಗೀಸ್‌ ಪದ casta  ಎಂಬುದರಿಂದ ಬಂದಿದ್ದು, ಅದರ ಅರ್ಥವು ಜನಾಂಗ, ವಂಶಾವಳಿ ಅಥವಾ ತಳಿ ಎಂದಾಗುತ್ತದೆ.

In Ambedkar's words,

”caste is a notion, it is a state of the mind. The destruction of the caste does not therefore mean the destruction of the physical barrier. It means a notional change."'

Sarvapalli Radhakrishnan held that the caste divisions are based on individual temperament which is not unchangeable. In his view there was only one caste during the earlier times. All were either brahmanas or all were shudras. In a Smriti text it was written that through purification one becomes a brahmana though born as shudra. People were divided into different castes depending on their needs and actions.

Origin of Caste System

Several theories have been formulated about the origin of caste.

Some theories are occupational or racial, others are attributed to colour and to the doctrine of Karma.”

During the Vedic period there are four varnas based on the occupation of an individual : Brahmins, Kshatriya, Viashya, and Shudra.

Gradually the basis of birth replaced occupation as the criterion to determine ones caste.

In the Bhagavat Gita, Chapter IV, verse 13 In the Bhagavat Gita, Chapter IV, verse 13

Lord Krishna stated:

“The order of the four Varnas was created by Me according to the different gunas and Karma of each; yet know that though, therefore, author, thereof, being changeless I am not the author.”

Difference between Varna and Caste Difference between Varna and Caste

Varna does not relate to the physical colour or physical appearance but to the mental qualities.

The qualities or gunas find symbolic expression in terms of colour or Varna which is compatible with explanation given in the Bhagavadgita:-  All the members of the four castes should be treated equally without any distinction or difference.”

Gandhi had no hesitation in rejecting scriptural authority of a doubtful character if it supported a sinful institution. Varnashrama was not a system of watertight compartment, according to him.

18ನೆ ಶತಮಾನದಲ್ಲಿದ್ದ ಭಾರತದಲ್ಲಿನ ಜಾತಿ ಪದ್ಧತಿಯ ಸ್ಥಿತಿ-ಗತಿ

ಜಾತಿ ಪದ್ಧತಿಯು ಹಿಂದೂ ಸಮಾಜದ ಅತ್ಯಂತ ಗಮನಾರ್ಹವಾದ ಪ್ರಧಾನ ಲಕ್ಷಣವಾಗಿತ್ತು.

ಜಾತಿಗೆ ಸಂಬಂಧಿಸಿದ ನಿಯಮಗಳನ್ನು ಮದುವೆ ಮತ್ತು ಆಹಾರಕ್ರಮವೇ ಮೊದಲಾದ ವಿಷಯಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತು.

ಜಾತಿ ನಿಯಮಗಳು ವಿವಿಧ ದೋಷಗಳನ್ನೂ ಹೊಂದಿದ್ದವು. ಅಂದರೆ ಇದು ವೃತ್ತಿಯು ವಂಶಪಾರಂಪರ್ಯವಾಗಿ ಮುಂದುವರಿಯಲು ಸಹಾಯಕವಾಗಿತ್ತು.

ಆದರೆ ಹದಿನೆಂಟನೆಯ ಶತಮಾನದ ಮಧ್ಯಭಾಗದಿಂದ ಭಾರತದಲ್ಲಿ ಪ್ರಾರಂಭವಾಗತೊಡಗಿದ ಆರ್ಥಿಕ ಹಾಗೂ ಆಡಳಿತಾತ್ಮಕ ಬದಲಾವಣೆಗಳಿಂದಾಗಿ, ಜಾತಿ ಆಧಾರಿತವಾದ ವೃತ್ತೀಯ ಪರಿಣತಿಗಳಲ್ಲಿ ಕೆಲಮಟ್ಟಿನ ಬದಲಾವಣೆಗಳು ಕಂಡುಬಂದವು.

ಇದಕ್ಕೆ ಸಂಬಂಧಿಸಿದಂತೆ ಬುಕಾನನ್ "ಯಾವುದೇ ಜಾತಿಯ ಜನರು ತಮ್ಮ ಜಾತಿ ವೃತ್ತಿಗಳಿಗೇ ಅಂಟಿಕೊಂಡಿಲ್ಲ ಎಂಬುದು ಎಲ್ಲ ಹಿಂದೂಗಳ ವಿಷಾದಕ್ಕೆ ಕಾರಣವಾಗಿದೆ, ತಮ್ಮ ಜೀವನೋಪಾಯಕ್ಕಾಗಿ ಗಳಿಸಲು ಅನೇಕ ಜನರು, ಸಾಮಾನ್ಯವಾಗಿ ತಾವು ಮಾಡಬೇಕಾದ ಜಾತಿ ಕಸುಬಿಗಿಂತ ಭಿನ್ನವಾದ ವೃತ್ತಿಗಳನ್ನು ಅನುಸರಿಸುತ್ತಿದ್ದಾರೆ". ಎಂದಿದ್ದಾನೆ.

ಜಾತಿ ನಿಯಮಗಳ ರಕ್ಷಣೆ ಹೆಗೆ ಮಾಡಲಾಗುತ್ತಿತ್ತು?

   ಜಾತಿ ನಿಯಮಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೇ ಎಂಬುದರ ಮೇಲೆ ನಿಗಾವಹಿಸುವ ಕೆಲವು ಜಾತಿ ಸಂಪ್ರದಾಯಗಳೂ ಇದ್ದವು.

ಜಾತಿಗೆ ಸಂಬಂಧಿಸಿದ ವಿವಾದಗಳನ್ನು ಜಾತಿ ಸಮಿತಿಗಳ ಅಥವಾ ಜಾತಿಯ ಮುಖ್ಯಸ್ಥರು ತೀರ್ಮಾನಿಸುತ್ತಿದ್ದರು.

ಮರಣದಂಡನೆಯೊಂದನ್ನು ಬಿಟ್ಟು ಉಳಿದಂತೆ ದಂಡ, ಪಾಪನಿವೇದನೆ (ಪ್ರಾಯಶ್ಚಿತ್ತ), ಬಹಿಷ್ಕಾರಗಳೇ ಮುಂತಾದ ವಿವಿಧ ಶಿಕ್ಷೆಗಳನ್ನೂ ಜಾತಿ ನಿಯಮಗಳನ್ನು ಮೀರಿ ನಡೆದ ಅಪರಾಧಿಗಳಿಗೆ ವಿಧಿಸಲಾಗುತ್ತಿತ್ತು.

ಜಾತಿಯತೆಯ ಉಳಿವಿಗೆ ಕಾರಣವಾಗಿರುವ ಅಂಶಗಳು ಯಾವುವು?
ಚರ್ಚಿಸಿರಿ

ಅನಕ್ಷರತೆ.

ಸಂಪ್ರದಾಯಗಳ ಅಸ್ತಿತ್ವ.

ಅನುವಂಶೀಯ ವೃತ್ತಿಯ ಅನುಸರಣೆ

ಪರಿಣಾಮಗಳು: ಸಾಮಾಜಿಕ ಹಿಂಸೆ.

ಅಸ್ಪೃಶ್ಯರ ಸ್ವತ್ತುಗಳು ಮತ್ತು ಜೀವ ಹಾನಿ.

ಮೇಲ್ವರ್ಗದವರ ತಾರತಮ್ಯ ನೀತಿ.

ಬಡತನದಲ್ಲಿಯೇ ಉಳಿಯುವಂತೆ ಮಾಡುವುದು.

ಜನರ ಕೋಪ, ಅತೃಪ್ತಿಗಳಿಗೆ ಕಾರಣ.

ಶೈಕ್ಷಣಿಕ ಹಿಂದುಳಿಯುವಿಕೆ.

ಜಾತಿಯತೆಯ ನಾಶದ ಮಾರ್ಗಗಳು:- ಶೈಕ್ಷಣಿಕ ಅವಕಾಶಗಳು.

ಮಾಧ್ಯಮಗಳ ಪಾತ್ರ.

ಧಾರ್ಮಿಕ ಮುಖಂಡರ ಪಾತ್ರ.

ಸಾರ್ವಜನಿಕ ಜಾಗೃತಿ.

ಜಾತಿ ತಾರತಮ್ಯದ ವಿರುದ್ಧ ಕಾನೂನುಗಳು.

ನೈತಿಕ ಮೌಲ್ಯಗಳು ಮತ್ತು ಜಾತ್ಯಾತೀತತೆಯ ಬೋಧನೆ.

 

ಅಸ್ಪೃಶ್ಯತೆ:-

ಸ್ಪೃಶ್ಯ ಎಂದರೆ ಸ್ಪರ್ಶಿಸಬಹುದಾದದ್ದು

ಸ್ಪೃಶ್ಯ ಪದದ ವಿರುದ್ಧಾರ್ಥಕ ಅಸ್ಪೃಶ್ಯ

ಅರ್ಥ : ಯಾವುದೋ ಒಂದನ್ನು ಮುಟ್ಟಬಾರದು ಅಥವಾ ಅದು ಮುಟ್ಟಲು ಯೋಗ್ಯವಾಗಿ ಇಲ್ಲದೆ ಇರುವುದು

ಸಮಾನಾರ್ಥಕ : ಮುಟ್ಟಬಾರದ, ಮುಟ್ಟಲಾಗದ, ಮುಟ್ಟಲು ಯೋಗ್ಯವಲ್ಲದ

ಮನುಷ್ಯರ ಹುಟ್ಟು, ಜಾತಿ ಅಥವಾ ಬಣ್ಣದ ಆಧಾರದ ಮೇಲೆ ಮುಟ್ಟದೇ ಇಲ್ಲವೇ ಮುಟ್ಟಿಸಿಕೊಳ್ಳದೇ ಇರುವುದನ್ನು ಅಸ್ಪೃಶ್ಯತೆ ಎನ್ನಬಹುದು.

The English term untouchability is recent coinage.

Its first appearance in print was in 1909.

ಭಾರತದ ನ್ಯಾಯಾಲಯಗಳು ನೀಡಿರುವ ಅರ್ಥವಿವರಣೆಯ ಪ್ರಕಾರ ಅಸ್ಪೃಶ್ಯತೆ ಎಂದರೆ:-

ಒಬ್ಬನು ಮತ್ತೊಬ್ಬನನ್ನು ಅಶುದ್ಧನೆಂದು ಪರಿಗಣಿಸುವುದು ಅಥವಾ ಮಾಲಿನ್ಯದ ಮೂಲವೆಂದು ಭಾವಿಸುವುದು ಅಸ್ಪೃಶ್ಯತೆ ಎನಿಸಿಕೊಳ್ಳುತ್ತದೆ. ಈ ಅರ್ಥದಲ್ಲಿ ಹೇಳುವುದಾದರೆ, ಹಡೆದ ಸ್ತ್ರೀ, ಋತುಸ್ರಾವಕ್ಕೆ ಒಳಗಾದ ಮಹಿಳೆ,, ಸಾಂಕ್ರಾಮಿಕ ರೋಗಕ್ಕೆ ಒಳಗಾದವರು, ,  ಶವವನ್ನು ಸಾಗಿಸುವವರು, ,  ನಿಷೇಧಿಸಲ್ಪಟ್ಟ ಆಹಾರವನ್ನು ಸೇವಿಸುವವರು, ,  ನಿಗದಿಗೊಳಿಸಿದ ಸ್ವಚ್ಛತೆಯ ನಿಯಮಗಳನ್ನು ಮೀರಿದವರು ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದವರು ಸಹಾ ಅಸ್ಪೃಶ್ಯರೇ ಎನಿಸಿಕೊಳ್ಳುತ್ತಾರೆ.

ಲಿಂಗ ತಾರತಮ್ಯ

ಲಿಂಗಾಧಾರಿತ ತಾರತಮ್ಯದ ಕ್ಷೇತ್ರಗಳು:-

ಲಿಂಗಾನುಪಾತ - Sex Ratio.

ಆರೋಗ್ಯ - Health.

ಸಾಕ್ಷರತೆ – Literacy.

ದುಡಿಮೆ - Work-Life.

ರಾಜಕೀಯ ಸ್ಥಾನ-ಮಾನ - Political Life.

ಆರ್ಥಿಕ ಸ್ವಾತಂತ್ರ್ಯ – Financial Freedom.

ಸಾಮಾಜಿಕ ಸ್ವಾತಂತ್ರ್ಯ – Social Freedom.

“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಹ

ನಮ್ಮ ಸಂಸ್ಕೃತಿಯಲ್ಲಿ ಒಂದೆಡೆ ಸ್ತ್ರೀಯನ್ನು ಲಕ್ಷ್ಮಿ, ದುರ್ಗೆ, ಸರಸ್ವತಿ ಎಂಬಿತ್ಯಾದಿಯಾಗಿ ದೇವತೆಯ ಸ್ಥಾನದಲ್ಲಿಟ್ಟು ಪೂಜಿಸುತ್ತೇವೆ.

Our culture demonstrates that on the one hand, we revere women as goddesses in the form of Lakshmi, Saraswati, Durga, and Kali.

ಇನ್ನೊಂದೆಡೆ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಅಪಹರಣ, ಬಾಲ್ಯವಿವಾಹ, ವರದಕ್ಷಿಣೆ ಕಿರುಕುಳ ಮತ್ತು ಇತ್ತೀಚೆಗೆ ಸ್ತ್ರೀ ಶಿಶು ಹತ್ಯೆಯಂತಹ ಕ್ರೂ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಅವಳ ವಿರುದ್ಧ ಅನುಸರಿಸುತ್ತೇವೆ.

On the other hand, we perpetrate heinous and illegal acts against them such as sexual exploitation, rape, kidnapping, child marriage, dowry system, and, most recently, female foeticide.

ಆದರೆ, ಮುಂದೊಂದು ದಿನ ಈ ಎಲ್ಲಾ ಸಮಸ್ಯೆಗಳಿಂದ ನಮ್ಮ ಸ್ತ್ರೀ ಮುಕ್ತಳಾಗಿ, ನಾವು ಆದರ್ಶ ಸಮಾಜವೊಂದನ್ನು ಸ್ಥಾಪಿಸಿ, ಅದರಲ್ಲಿ ಮಹಿಳೆ ಗೌರವಯುತಳಾಗಿ ಆಕೆ ಬಯಸುವ ಪತ್ನಿ, ಉತ್ತಮ ತಾಯಿ, ಸ್ನೇಹಿತೆ, ತತ್ವಜ್ಞಾನಿ, ಮಾರ್ಗದರ್ಶಕಿ, ವಿದ್ವಾಂಸೆ, ವೈದ್ಯೆ, ವಿಜ್ಞಾನಿ, ಲೇಖಕಿ, ಕಲೆಗಾರ್ತಿ ಅಥವಾ ಉತ್ತಮ ಮನುಷ್ಯಳಾಗಿ ಬದುಕಲು ಮುಕ್ತ ಅವಕಾಶ ಪಡೆಯುತ್ತಾಳೆ ಎಂಬುದರಲ್ಲಿ ನಂಬಿಕೆ ಇಡಬೇಕು.

ಹೆಣ್ಣು ಭ್ರೂಣ ಹತ್ಯೆ

ಬಂಗಾಳದಲ್ಲಿ ಕುಲೀನತೆ

ಕುಲೀನತೆ ಪದದ ಅರ್ಥ: ಎತ್ತರವಾಗಿರುವುದು, ಶ್ರೇಷ್ಠತೆ, ಅಥವಾ ಉತ್ತಮ ಅಂತಸ್ತು.

ಹಾಗಾದರೆ ಯಾರನ್ನು ಕುಲೀನರು ಎಂದು ಕರೆಯಬಹುದು?

ಪದಾರ್ಥ ಚಿಂತಾಮಣಿಯ ಪ್ರಕಾರ ಪುರುಷನ ಯೋಗ್ಯತೆಯನ್ನು ವರ್ಧಿಸುವ ಅಷ್ಟ ಗುಣಗಳು:

ಬುದ್ಧಿ, ಕುಲೀನತೆ, ದಮ, ಶ್ರುತ

ಪರಾಕ್ರಮ, ಮಿತಭಾಷಣ, ಯಥಾಶಕ್ತಿದಾನ, ಕೃತಜ್ಞತೆ.

 

ವಾಚಸ್ಪತಿ ಮಿಶ್ರ ಎಂಬುವವರ ಪ್ರಕಾರ: ಆಚಾರ, ವಿದ್ಯೆ, ವಿನಯ, ಪ್ರತಿಷ್ಠೆ, ತೀರ್ಥಯಾತ್ರೆ, ನಿಷ್ಠೆ, ತಪಸ್ಸು, ವಿವಾ ಹ  ಸಮಾನಕುಲದವರಲ್ಲಿ ಮತ್ತು ದಾನ ಮಾಡುವ ಗುಣಗಳಿದ್ದರೆ ಅವರನ್ನು ಕುಲೀನರೆಂದು ಕರೆಯಬಹುದು.

ಇಂತಹ ಕುಲೀನ ಕುಟುಂಬಗಳಲ್ಲಿ ಜನಿಸಿದ ಮಹಿಳೆಯರನ್ನೂ ಸಹ ಕುಲೀನ ಸ್ತ್ರೀ ಎಂದು ಕರೆಯುವರು.

 

ಬಂಗಾಳದಲ್ಲಿ ಕುಲೀನ ಪದ್ಧತಿ ಬೆಳೆಯಲು ಕಾರಣಗಳು:-

ಆದಿಶೂರ ಎಂಬ ಅರಸನ ಕಾಲದಲ್ಲಿ ಕನ್ಯಾಕುಬ್ಜದಿಂದ ಐದು ಬ್ರಾಹ್ಮಣ ಕುಟುಂಬಗಳಿಗೆ ಸೇರಿದ ಬ್ರಾಹ್ಮಣರನ್ನು ಬಂಗಾಳಕ್ಕೆ ಆಹ್ವಾನಿಸಲಾಯಿತು. ಅವುಗಳೆಂದರೆ, ಕ್ಷಿತಿಶಾ, ಮೇಧಾದಿತಿ, ವೀತರಾಗ, ಸುಧಾನಿಧಿ & ಸಂಭಾರಿ.

ಅಲ್ಲದೇ ಗೌಡ ಮನೆತನದ ಶಶಾಂಕ ಮತ್ತು ವರ್ಮನ್‌ ಮನೆತನದ ಹರಿವರ್ಮನ ಕಾಲದಲ್ಲೂ ಶಕದ್ವೀಪಿ ಮತ್ತು ವೈದಿಕ ಬ್ರಾಹ್ಮಣರೆಂಬ ಎರಡು ಗುಂಪುಗಳನ್ನು ಬಂಗಾಳಕ್ಕೆ ಕರೆತರಲಾಯಿತು.

ಆದರೆ ಆದಿಶೂರನ ಬಗ್ಗೆ ಐತಿಹಾಸಿಕ ದಾಖಲೆಗಳು ಲಭ್ಯವಿಲ್ಲ.

ಸೇನ ಅರಸ ಬಲ್ಲಾಳ ಸೇನನ ಕಾಲದಲ್ಲಿ ಕುಲೀನತೆಯನ್ನು ಪರಿಚಯಿಸಲಾಯಿತು ಎಂದು ಹೇಳುತ್ತಾರಾದರೂ ಅದಕ್ಕೆ ಲಿಖಿತ ಆಧಾರಗಳು ಲಭ್ಯವಿಲ್ಲ.

ಅಲ್ಲದೇ ಪಾಲ ಮನೆತನದ 3ನೆ ವಿಗ್ರಹಪಾಲನ ಬಂಗಾಯನ ತಾಮ್ರಶಾಸನದಲ್ಲಿ ಅವನ ಅಧಿಕಾರಿಯಾಗಿದ್ದ “ಘಂಟಿಸ ಎಂಬುವನ ವಂಶವು ಅವನ ತಾಯಿಯ ಕಡೆಯಿಂದ ಕನ್ಯಾಕುಬ್ಜ ಬ್ರಾಹ್ಮಣರಿಗೆ ಸೇರಿದ್ದು ಎಂಬ ಉಲ್ಲೇಖವಿದೆ.

ಹೀಗೆ ಕುಲೀನರೆನಿಸಿಕೊಂಡವರೊಂದಿಗೆ ಬೆಳೆಸಿದ ಸಾಮಾಜಿಕ ಅಂದರೆ ವೈವಾಹಿಕ ಸಂಬಂಧಗಳೇ ಬಂಗಾಳದಲ್ಲಿ ಕುಲೀನ ಪದ್ಧತಿ ಬೆಳೆಯಲು ಕಾರಣವಾಯಿತು.

ಆದ್ದರಿಂದ ಸು. 6-7ನೆ ಶತಮಾನಗಳ ಕಾಲದಲ್ಲಿ ಬಂಗಾಳದಲ್ಲಿನ ಕುಲೀನ ಪದ್ಧತಿಯ ಅಂಕುರಾರ್ಪಣೆ ಆಯಿತು ಎನ್ನಬಹುದು.

ಇವರ ಸಂಖ್ಯೆಯು 8-12 ಶತಮಾನಗಳಲ್ಲಿ ಉತ್ತರ ಭಾರತ, ಗುಜರಾತ್‌ ಮತ್ತು ಮಧ್ಯಭಾರತದಿಂದ  ನಡೆದ ಮತ್ತಷ್ಟು ವಲಸೆಯಿಂದ ಅಧಿಕಗೊಂಡಿತು.

ಕಾಲಾಂತರದಲ್ಲಿ ಬಂಗಾಳದ ಈ ಬ್ರಾಹ್ಮಣರಲ್ಲಿ 4 ಪ್ರಮುಖ ಗುಂಪುಗಳು ರೂಪುಗೊಂಡವು. ಅವುಗಳೆಂದರೆ-

ರಾಧೀಯ, ವಾರೇಂದ್ರ, ವೈದಿಕ ಮತ್ತು ಶಕದ್ವೀಪಿ.

ಇವರು ಕುಲಜಿಗಳು, ಕುಲಶಾಸ್ತ್ರಗಳು, ಕುಲಗ್ರಂಥಗಳು ಅಥವಾ ಕುಲಪಂಜಿಕಾಗಳು ಎಂಬ ಗ್ರಂಥಗಳ ಮೂಲಕ ತಮ್ಮ ಕುಲವನ್ನು ಗುರುತಿಸಿಕೊಳ್ಳುತ್ತಾರೆ.

ಈ ರೀತಿಯ ಕುಲಮೂಲದ ಪದ್ಧತಿಯು ಸಮಾಜಪತಿ ಅಥವಾ ಘಟಕ ಎಂಬ ವೈವಾಹಿಕ ದಲ್ಲಾಳಿಗಳಿಂದ ಮತ್ತಷ್ಟು ಬಲಗೊಂಡಿತು.

 

ಕುಲೀನ ಪದ್ಧತಿಯ ವಿಸ್ತರಣೆ ಮತ್ತು ಉಪವರ್ಗಗಳ ಏಳಿಗೆ

ಕೇವಲ ಬ್ರಾಹ್ಮಣರಲ್ಲಿದ್ದ ಈ ಪದ್ಧತಿಯು ಕ್ರಮೇಣ ವೈದ್ಯ ಮತ್ತು ಕಾಯಸ್ಥ ಎಂಬ ಬಂಗಾಳದ ಇತರ ಸಮುದಾಯಗಳಿಗೂ ವ್ಯಾಪಿಸಿತು.

ಅಲ್ಲದೇ ಇವರಲ್ಲಿಯೇ ಪುನಃ ಉಪವರ್ಗಗಳು ಬೆಳೆದು ಬಂದವು. ಉದಾ: ರಾಧೀಯ ಬ್ರಾಹ್ಮಣರು ತಮ್ಮಲ್ಲಿಯೇ  ಕುಲೀನ, ಸಿದ್ಧ, ಸದ್ಧ ಮತ್ತು ಕಾಶ್ಟ ಶ್ರೋತ್ರೀಯರೆಂಬ ಉಪವರ್ಗಗಳನ್ನು ಬೆಳೆಸಿಕೊಂಡರು.

ರಾಧೀಯ ಬ್ರಾಹ್ಮಣರು ಕೇವಲ ತಮ್ಮ ಉಪವರ್ಗಗಳಲ್ಲಿ ಮಾತ್ರ ವಿವಾಹವಾಗುವ ಮೂಲಕ ತಮ್ಮ ಕುಲದ ಪಾವಿತ್ರ್ಯತೆಯನ್ನು ಕಾಪಾಡುತ್ತಿದ್ದರು.

ಹಾಗಾದರೆ ಭಾರತದಲ್ಲಿರುವ ಇತರ ಜಾತಿಗಳಲ್ಲಿ ಈ ಉಪವರ್ಗ ಅಥವಾ ಉಪಜಾತಿ ಎಂಬ ವರ್ಗೀಕರಣಗಳಿಲ್ಲವೇ?

 

ಕುಲೀನತೆ ಕಾಪಾಡಲು ಉಂಟಾದ ಸಮಸ್ಯೆ

ಕುಲೀನ ಪದ್ಧತಿ'ಯಿಂದ ಪ್ರಾರಂಭವಾದ ಅತ್ಯಂತ ಆಘಾತಕರ ಸಂಗತಿಯೆಂದರೆ ಬಹುಪತ್ನಿತ್ವದ ಬೆಳವಣಿಗೆ.

ವಂಶಪರಂಪರೆಯನ್ನು ಉಳಿಸಿಕೊಳ್ಳಲು ಕುಲೀನ ಗಂಡಸರು ಶ್ರೋತ್ರಿಯ ವರ್ಗಕ್ಕೆ ಸೇರಿದ ಹೆಣ್ಣು ಮಕ್ಕಳನ್ನು ಅಧಿಕವಾಗಿ ವಿವಾಹವಾಗತೊಡಗಿದರು.

ಅಲ್ಲದೇ ವರದಕ್ಷಿಣೆಯ ಮೂಲಕ ಸಂಪತ್ತಿನ ಗಳಿಕೆ ಮಾಡುವುದೂ ಸಹಾ ಒಂದು ಕಾರಣವಾಗಿತ್ತು.

ಅದಕ್ಕಾಗಿ ವಯಸ್ಸು ಅಥವಾ ವೈವಾಹಿಕ ಹೊಂದಾಣಿಕೆಗಳಿಗೂ ಗಮನಕೊಡದೆ, ಅಧಿಕ ಸಂಖ್ಯೆಯ ಹೆಂಗಸರನ್ನು ಮದುವೆಯಾಗಿ ಅಪಾರ ಸಂಪತ್ತನ್ನು ಗಳಿಸುತ್ತಿದ್ದರು.

ಕೆಲವು ಸಲ ಹಣಕಾಸಿಗೆ ಸಂಬಂಧಿಸಿದ ಕಾರಣವಾಗಿ, ಪೂರ್ಣ ಪ್ರೌಢಳಾದ ಹುಡುಗಿಯೊಬ್ಬಳನ್ನು 12 ಅಥವಾ 13 ವರ್ಷ ವಯಸ್ಸಿನ ಹುಡುಗನಿಗೆ ಹಾಗೂ ಯುವತಿಯನ್ನು ಮುದುಕನಿಗೆ ಮದುವೆ ಮಾಡಿಕೊಡಲಾಗುತ್ತಿತ್ತು.

'ಕುಲೀನ'ರು ಎಂದೂ ತಮ್ಮ ಹೆಂಡಂದಿರೊಂದಿಗೆ ಜೀವಿಸುತ್ತಿದ್ದಿಲ್ಲ; ಅವರು ತಮ್ಮ ತಂದೆಯ ಅಥವಾ ಸಹೋದರರ ಮನೆಗಳಲ್ಲಿ ತೀವ್ರ ಮಾನಸಿಕ ಯಾತನೆಯನ್ನು ಅನುಭವಿಸುತ್ತ ತಮ್ಮ ದಿನಗಳನ್ನು ಕಳೆಯುತ್ತಿದ್ದರು.

ಗಂಡಂದಿರು ಹಣವನ್ನು ಬಲಾತ್ಕಾರದಿಂದ ಪಡೆಯುವುದಕ್ಕಾಗಿಯೇ ಆಗಾಗ ತಮ್ಮ ಹೆಂಡಂದಿರನ್ನು ಭೇಟಿಮಾಡುತ್ತಿದ್ದರು.

ಬುಕಾನನ್ ವರದಿ ಮಾಡಿರುವಂತೆ:- ”ಒಬ್ಬ ಕುಲೀನ ಬ್ರಾಹ್ಮಣನು ತನಗೆ ಇಷ್ಟ ಬಂದಷ್ಟು ಹೆಂಗಸರನ್ನು ಮದುವೆಯಾಗಬಹುದಾಗಿತ್ತು; ಕೆಲವರು 60 ಮಂದಿ ಹೆಂಗಸರನ್ನು ಮದುವೆಯಾದುದೂ ಉಂಟು.

ಆದರೆ ಸಾಮಾನ್ಯವಾಗಿ ಅವರು 8 ಅಥವಾ 10 ಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವಂತಿರಲಿಲ್ಲ.

ಅವರು ಒಬ್ಬಳ ಅನಂತರ ಇನ್ನೊಬ್ಬಳಂತೆ ಹೆಂಡಂದಿರನ್ನು ಭೇಟಿಯಾಗುತ್ತಿದ್ದರು ಅವರು ಅಥವಾ ಅವರ ಮಕ್ಕಳ ಜೀವನ ನಿರ್ವಹಣೆಗೆ ಸಂಬಂಧಿಸಿದಂತೆ ಯಾವ ತೊಂದರೆಯನ್ನೂ ಉಂಟುಮಾಡುತ್ತಿರಲಿಲ್ಲ.”

ಮಿಥಿಲಾದ ಬಗ್ಗೆ ಅವನು ಹೀಗೆ ಬರೆದಿದ್ದಾನೆ

"ಹಲ್ಲುಗಳನ್ನು ಕಳೆದುಕೊಂಡ ಅಥವಾ ಇನ್ನೇನು ಸಾಯುವಂತಿರುವ ಕುಲೀನ  ವ್ಯಕ್ತಿಯನ್ನು ಶ್ರೋತ್ರಿಯ ಹೆಣ್ಣು ಶಿಶುವಿನೊಂದಿಗೆ ಮದುವೆ ಮಾಡಲು ಪ್ರಯತ್ನಿಸಲಾಗುತ್ತಿತ್ತು. ಅವನು ಸತ್ತಾಗ ವಿಧವೆಯಾದ ಅವನ ಹೆಂಡತಿ ಮರುಮದುವೆಯಾಗುವಂತಿರಲಿಲ್ಲ. ಏಕೆಂದರೆ ತನ್ನ ತಂದೆಯ ಕುಟುಂಬದ ಸದಸ್ಯರ ಪೋಷಣೆಗಾಗಿ ಹಾಗೂ ತನ್ನ ಸಹೋದರರು ಹೆಚ್ಚು ಸುಲಭವಾಗಿ ಮದುವೆಯಾಗುವ ಅವಕಾಶಮಾಡಿ ಕೊಡುವುದಕ್ಕಾಗಿ ಅವಳು ವಿಧವೆಯಾಗಿಯೇ ಉಳಿಯುತ್ತಿದ್ದಳು".

 

ಇದನ್ನು ತಡೆಯಲು ದರ್ಭಾಂಗಾದ ರಾಜನು ಕೈಗೊಂಡ ಕ್ರಮವೇನು?

1805ರಲ್ಲಿ, ಮಿಥಿಲಾ ಬ್ರಾಹ್ಮಣರ ವಿವಾದಾತೀತ ಮುಖ್ಯಸ್ಥನೆಂದು ಭಾವಿಸಲಾದ ದರ್ಭಾಂಗಾದ ರಾಜನು "ತನ್ನ ಅಧಿಕಾರವ್ಯಾಪ್ತಿಯ ಪ್ರದೇಶದಲ್ಲಿ ಯಾವನೇ ವ್ಯಕ್ತಿ ಐವರಿಗಿಂತ ಹೆಚ್ಚು ಮಂದಿ ಹೆಂಗಸರನ್ನು ಮದುವೆಯಾಗದಂತೆ ಪ್ರತಿಬಂಧಿಸಿದ; ಆ ಮೊದಲು ಐವರಿಗಿಂತ ಹೆಚ್ಚು ಮಂದಿಯನ್ನು ವ್ಯಕ್ತಿ ಮದುವೆಯಾಗುವುದು ಸಾಮಾನ್ಯವಾಗಿತ್ತು".

*****

ವಿಧವಾ ಪದ್ಧತಿ – Widowhood

ಉಚ್ಚ ದರ್ಜೆಯ ಹಿಂದೂ ಕುಟುಂಬಗಳಲ್ಲಿ ವಿಧವೆಯರ ಪುನರ್ವಿವಾಹಕ್ಕೆ ಅನುಮತಿ ಸಿಗುತ್ತಿರಲಿಲ್ಲ.

ಆದರೆ 1756ರಲ್ಲಿ ಡಾಕಾದ ರಾಜಾ ರಾಜವಲ್ಲಭನು, ವಿಧವೆಯಾಗಿರುವ ತನ್ನ ಮಗಳಿಗೆ ಮರುಮದುವೆ ಮಾಡಲು ಪ್ರಯತ್ನಿಸಿದ್ದ ಹಾಗೂ ಈ ವಿಷಯವನ್ನು ಕುರಿತಂತೆ ದ್ರಾವಿಡ, ತೆಲಂಗ, ಬನಾರಸ್, ಮಿಥಿಲಾ ಮತ್ತು ಇತರ ಕೆಲವು ಸ್ಥಳಗಳ ವಿದ್ವಾಂಸ ಪಂಡಿತರೊಡನೆ ಸಮಾಲೋಚನೆ ನಡೆಸಿದ್ದ.

ಅವರು ಮುಂದೆ ಕಾಣಿಸಲಾದ ಸರ್ವಾನುಮತದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸಾಮಾನ್ಯವಾಗಿ ತಮ್ಮ ಗಂಡಂದಿರನ್ನು ಕುರಿತಂತೆ ಯಾವುದೇ ಸುದ್ದಿ ಸಮಾಚಾರಗಳೂ ಇಲ್ಲದಿದ್ದರೆ, ಅವರು ಸತ್ತಿದ್ದರೆ, ಐಹಿಕ ಜೀವನದಿಂದ ನಿವೃತ್ತರಾಗಿದ್ದರೆ, ನಪುಂಸಕರೆಂದು ಸಾಬೀತಾಗಿದ್ದರೆ ಅಥವಾ ಬೇರೆ ಜಾತಿಗಳಿಗೆ ಸೇರಿದ್ದರೆ, ಆಗ ಮಾತ್ರ ಮಹಿಳೆಯರಿಗೆ ಮರುಮದುವೆಯಾಗುವ ಸ್ವಾತಂತ್ರ್ಯವಿದೆ

ನಾದಿಯಾದ ವಲ್ಲಭನ ಪ್ರಯತ್ನಗಳಿಗೆ ಯಶ ದೊರೆಯಲಿಲ್ಲ.

ತುಂಬ ಎಳೆಯ ವಯಸ್ಸಿನಲ್ಲಿಯೇ ತನ್ನ ಮಗಳು ವಿಧವೆಯಾದಾಗ ವ್ಯಥೆಗೊಂಡ ಪ್ರಸಿದ್ಧ ಮರಾಠಾ ಸೇನಾನಿ ಪರಶುರಾಮ ಭಾವು ಅವಳಿಗೆ ಪುನಃ ಮದುವೆಮಾಡಲು ಯೋಚಿಸಿದ.

ಆಗ ಬನಾರಸ್‌ನ ಪಂಡಿತರು ಅನುಕೂಲವಾದ ಅಭಿಪ್ರಾಯವನ್ನೇ ವ್ಯಕ್ತಪಡಿಸಿದರು.

ಆದರೆ ಪರಶುರಾಮ ಭಾವುನ ಮಡದಿ ಮಗಳ ಮರುಮದುವೆಗೆ ಒಪ್ಪದುದರಿಂದ ಈ ಪುನರ್ವಿವಾಹ ಕಾರ್ಯಸಾಧ್ಯವಾಗಲಿಲ್ಲ.

ಆದರೆ, ಬಂಗಾಳದ ಹೊರಗೆ ಇರುವ ಕೆಲವು ಸ್ಥಳಗಳಲ್ಲಿ ವಿಧವೆಯರ ಮರುಮದುವೆಗೆ ಅನುಮತಿಯಿತ್ತು.

ವಿಧವೆಯರು ಪುನರ್ವಿವಾಹವಾದಾಗ ಪತ್‌ರಮ್ ಎಂಬ ತೆರಿಗೆಯನ್ನು ಪೇಶ್ವೆಗಳು ವಸೂಲಿ ಮಾಡುತ್ತಿದ್ದರು. ಅಲ್ಲದೇ, ಮಹಾರಾಷ್ಟ್ರದ ಬ್ರಾಹ್ಮಣೇತರರಲ್ಲಿ ವಿಧವಾ ಪುನರ್ವಿವಾಹ ತುಂಬ ಚಾಲ್ತಿಯಲ್ಲಿತ್ತು.

ವಿಧವಾ ಪುನರ್ವಿವಾಹದ ಎರಡು ವಿಧಗಳಿವೆ. ಅವೇ ಪತ್ ಮತ್ತು ಮುಹೂರ್ತ.

ಪತ್ ಹೆಚ್ಚು ಔಪಚಾರಿಕವಾದ ಪದ್ಧತಿಯಾಗಿ ತೋರುತ್ತದೆ.

ಮಾಳವದ ಮೊನ್ ಭುನ್ಯಾಗಳೂ, ಮಾರು ಅಥವಾ ಔಧಪುರಿ ಬ್ರಾಹ್ಮಣರೂ ತಮ್ಮ ಸಾಮಾಜಿಕ ಪದ್ಧತಿಯಲ್ಲಿ ಈ ಸಂತೋಷಕರ ಬದಲಾವಣೆಯನ್ನು ಪ್ರಾರಂಭಿಸಿದರು.

ಜೈಪುರದ ರಾಜಾ ಎರಡನೆಯ ಜಯಸಿಂಗ, ಕೋಟದ ರಾಜಾ ಜಾಲಿಮ್‌ಸಿಂಗ್ ಮತ್ತು ಇತರ ಕೆಲವರು ಪುನರ್ವಿವಾಹದ ಮುನ್ನಡೆಯಲ್ಲಿ ಶ್ಲಾಘನೀಯವಾದ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಮಾನವತ್ವವನ್ನು ಮೆರೆದ ಮಹನೀಯರಾಗಿ ಪ್ರಸಿದ್ದಿ ಪಡೆದಿದ್ದಾರೆ.

ಸತಿ ಪದ್ಧತಿ - Sati system

ಭಾರತದ ಕೆಲವು ಭಾಗಗಳಲ್ಲಿ ಬಹುವ್ಯಾಪಕವಾಗಿದ್ದ ಇನ್ನೊಂದು ಆಘಾತಕರ ಆಚರಣೆಯೇ ಸತಿ.

ಸತಿಯೆಂದರೆ ಸ್ತ್ರೀಯರು ಸತ್ತ ತಮ್ಮ ಗಂಡಂದಿರ ಚಿತೆಯಲ್ಲಿ ಬಿದ್ದು ತಮ್ಮನ್ನು ತಾವೇ ಸುಟ್ಟುಕೊಳ್ಳುವುದು.

ಈ ಪದ್ಧತಿಯನ್ನು ನಿರ್ಮೂಲಮಾಡುವ ಕೆಲವು ಮುಘಲ್ ದೊರೆಗಳ ಪ್ರಯತ್ನಗಳಿಗೆ ಯಶ ದೊರೆಯಲಿಲ್ಲ.

ಹದಿನೆಂಟನೆಯ ಶತಮಾನದಲ್ಲಿ, ಸತಿಪದ್ಧತಿ ದಕ್ಷಿಣಭಾರತಕ್ಕಿಂತ ಹೆಚ್ಚಾಗಿ ಉತ್ತರಭಾರತದ ಕೆಲವು ಭಾಗಗಳಲ್ಲಿ, ಗಂಗಾ ನದೀ ತೀರದ ಪ್ರದೇಶಗಳಲ್ಲಿ ಹಾಗೂ ರಾಜಸ್ಥಾನದಲ್ಲಿ ಬಹಳ ವ್ಯಾಪಕವಾಗಿತ್ತು.

ಹಾಗಾದರೆ ದಕ್ಷಿಣ ಭಾರತದಲ್ಲಿ ಸತೀ ಆಚರಣೆ ಇರಲಿಲ್ಲವೇ?

ಡುಬಾಯಿಸ್ ಬರೆದಿರುವಂತೆ. ಭಾರತ ಪರ್ಯಾಯದ್ವೀಪದ ದಕ್ಷಿಣ ಭಾಗಗಳಲ್ಲಿ ಸತೀ ಪ್ರಸಂಗಗಳನ್ನು ನಾನೆಂದೂ ನೋಡಿಲ್ಲ. ಸುಮಾರು ಮೂವತ್ತು ದಶಲಕ್ಷ ಜನರಿದ್ದ ಮದ್ರಾಸ್ ಪ್ರಾಂತದಲ್ಲಿ, ಮೂವತ್ತು ಮಂದಿ ವಿಧವೆಯರಿಗೂ, ಆ ವರ್ಷ, ಸತಿಯನ್ನು ಆಚರಿಸುವ ಅವಕಾಶ ಸಿಗಲಿಲ್ಲವೆಂಬುದು ನನಗೆ ತಿಳಿದಿದೆ

ಮಧ್ಯ ಭಾರತಕ್ಕೆ ಸಂಬಂಧಿಸಿದಂತೆ ಮಾಲ್ಕಮ್ ಹೀಗೆ ಬರೆದಿದ್ದಾನೆ : ವಿಧವೆಯರು ಸತಿ ಹೋಗುವ ಅಥವಾ ಗಂಡಂದಿರ ಚಿತೆಯೇರಿ ಸಾಯುವ ಪದ್ದತಿ ಮಧ್ಯ ಭಾರತದಲ್ಲಿ ತುಂಬ ಸಾಮಾನ್ಯವಾಗಿ ಕಂಡುಬರುತ್ತಿತ್ತು...

ರಜಪೂತರಿಗೆ ಅಧಿಕಾರ ಹಾಗೂ ಪ್ರಭಾವಗಳಿದ್ದಾಗ, ಈ ಪದ್ಧತಿಯ ಆಚರಣೆ ವ್ಯಾಪಕವಾಗಿತ್ತು...

ಮರಾಠರ ಅವಧಿಯಲ್ಲಿ ಸತಿ ಆಚರಣೆ ತುಂಬ ವಿರಳವಾಗಿತ್ತು. ಏಕೆಂದರೆ,

ಮರಾಠರು ಪರಮಾಧಿಕಾರವನ್ನು ಪಡೆದಂದಿನಿಂದ ಜಾಣತನದಿಂದ ಸತಿಯ ಬಗ್ಗೆ ಉಪೇಕ್ಷೆ ಮತ್ತು ನಿರ್ಲಕ್ಷ್ಯಗಳನ್ನು ತೋರಿಸಿದರು.

ಅವರು ಅನುಮತಿ ನೀಡುವುದರ ಮೂಲಕ ಸತಿ ಪದ್ಧತಿಗೆ ಪ್ರೋತ್ಸಾಹ ನೀಡಲೂ ಇಲ್ಲ, ಅಥವಾ ಪ್ರತಿಬಂಧಿಸುವುದರ ಮೂಲಕ ಅದನ್ನು ವಿರೋಧಿಸಲೂ ಇಲ್ಲ.

ಸಮಗ್ರ ಮಧ್ಯಭಾಗದಲ್ಲಿ ಕಳೆದ 20 ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷ ಮೂರು ಅಥವಾ ನಾಲ್ಕಕ್ಕಿಂತ ಹೆಚ್ಚು ಸತಿ ಪ್ರಕರಣಗಳು ನಡೆದಿಲ್ಲ.

ಭಾರತದ ನೈರುತ್ಯ ಭಾಗದಲ್ಲಿ, ಸತಿ ಆಚರಣೆಯು ಪ್ರಾಯಃ ಬಂಗಾಳದಲ್ಲಿ ಇದ್ದಷ್ಟೂ ಇರಲಿಲ್ಲ.

ಬಂಗಾಳಕ್ಕೆ ಸಂಬಂಧಪಟ್ಟಂತೆ ನಿಮ್ಮ ಅಭಿಪ್ರಾಯವೇನು?

ಹದಿನೆಂಟನೆಯ ಶತಮಾನದ ಮಧ್ಯಕಾಲದಲ್ಲಿ ಸತಿ ಆಚರಣೆಯು ಸಾಮಾನ್ಯವಾಗಿರಲಿಲ್ಲ ಹಾಗೂ ಸುಪ್ರಸಿದ್ಧ ಕುಟುಂಬಗಳಿಗೆ ಸೇರಿದ ಮಹಿಳೆಯರು ಸತಿ ಹೋಗುವ ಕೋರಿಕೆಯನ್ನು ಒಪ್ಪುತ್ತಿದ್ದಿಲ್ಲವೆಂದು ಸ್ಕ್ಯಾಪ್ಟನ್ ಗಮನಿಸಿದ್ದಾನೆ.

ಕೆಲವು ವರ್ಷಗಳ ಅನಂತರವಷ್ಟೇ ಬರದ ಸ್ಟಾವೊರಿನಸ್‌ನ ಅಭಿಪ್ರಾಯದಂತೆ ಸತಿ ಆಚರಣೆಯು ಕೆಲವು ಜಾತಿಗಳಲ್ಲಷ್ಟೇ ಚಾಲ್ತಿಯಲ್ಲಿತ್ತು. ಎಂದರೆ ಅದು ಎಲ್ಲ ಜಾತಿಗಳಲ್ಲಿಯೂ ಸಾರ್ವತ್ರಿಕವಾಗಿ ಚಾಲ್ತಿಯಲ್ಲಿರಲಿಲ್ಲ.

ಈ ಅಂಕಿ-ಅಂಶಗಳನ್ನು ಗಮನಿಸಿರಿ

ಆದರೆ, ಹದಿನೆಂಟನೆಯ ಶತಮಾನದ ಕೊನೆಯ ಮತ್ತು ಹತ್ತೊಂಬತ್ತನೆಯ ಶತಮಾನದ ಪ್ರಾರಂಭದ ವರ್ಷಗಳಲ್ಲಿ ಅದರ ಸಂಖ್ಯೆ ಪರಿಗಣನಾರ್ಹವಾಗಿ ಏರಿತು. 1799ರಲ್ಲಿ 22 ಮಂದಿ ಕುಲೀನ ಬ್ರಾಹ್ಮಣ ಮಡದಿಯರು ನಾದಿಯಾದಲ್ಲಿ ತಮ್ಮ ಗಂಡಂದಿರ ಚಿತೆಯನ್ನೇರಿ ಸತ್ತರು.

ಅದೇ ಸಮಯದ ಸುಮಾರಿಗೆ, ಒಬ್ಬ ಕುಲೀನ ಬ್ರಾಹ್ಮಣನ ಅನೇಕ ಮಡದಿಯರು, ಸೆರಾಂಪುರದಿಂದ 3 ಮೈಲಿ ಪೂರ್ವದಲ್ಲಿರುವ ಸುಕ್‌ಚರದಲ್ಲಿ ಸತಿ ಆಚರಿಸಿದರು.

ಸುಮಾರು 300 ಮಂದಿ ಮಹಿಳೆಯರು 1804ರಲ್ಲಿ ಕಲ್ಕತ್ತದ ಸುತ್ತಮುತ್ತ 40 ಮೈಲಿಗಳ ಒಳಗೆ ಇರುವ ಪ್ರದೇಶಗಳಲ್ಲಿ ತಮ್ಮ ಗಂಡಂದಿರೊಂದಿಗೆ ಚಿತೆ ಏರಿ ಮೃತರಾದರು.

ಸತಿ ಆಚರಣೆಗೆ ಬಲವಂತವಿತ್ತೆ?

ಕೆಲವು ಪ್ರಕರಣಗಳಲ್ಲಿ ಸತಿಯನ್ನು ಆಚರಿಸಲು ಪುರೋಹಿತರು ಹಾಗೂ ಬಂಧುಗಳು ಮಹಿಳೆಯರಿಗೆ ಒತ್ತಾಯ ಮಾಡಿರಬಹುದು. ಆದರೆ ಸಾಮಾನ್ಯವಾಗಿ ಹೇಳುವುದಾದರೆ ಸತಿಯು ವೈವಾಹಿಕ ನಿಷ್ಠೆಯ ಫಲಿತಾಂಶವಾಗಿದೆ. ಈ ಸಂಬಂಧದಲ್ಲಿ ಬೋಲ್ಟ್ ಅಭಿಪ್ರಾಯ ಪಟ್ಟಿರುವುದು ಹೀಗೆ : ಐಹಿಕ ಜೀವನದಿಂದ ದೂರವಾಗಿ ಉಳಿದಂತಹ, ಹಾಗೂ ತುಂಬ ಕಷ್ಟಕರವೂ ದುರದೃಷ್ಟಕರವೂ ಆದ ಸಂದರ್ಭಗಳಲ್ಲಿ ಮಹಿಳೆಯರು ಸ್ವಇಚ್ಛೆಯಿಂದ ತಮ್ಮ ಗಂಡಂದಿರ ಚಿತೆಯೇರಿ ಸ್ವತಃ ಸುಟ್ಟು ಹೋಗುವಷ್ಟು ಧೈರ್ಯವನ್ನು ತೋರಿಸಿದ್ದಾರೆ.

ಸ್ಟ್ರಾಫ್‌ಟನ್ ಎಂಬ ಇನ್ನೊಬ್ಬ ಸಮಕಾಲೀನ ಲೇಖಕನ ವೀಕ್ಷಣೆಯಂತೆ:-  ಗಂಡಂದಿರ ಬಗೆಗಿರುವ ಗೌರವ ಮತ್ತು ನಿಷ್ಠೆ ಹಾಗೂ ವೈವಾಹಿಕ ವಾತ್ಸಲ್ಯಗಳ ದ್ಯೋತಕವಾಗಿ ಮಹಿಳೆಯರು ಚಿತೆಯೇರುತ್ತಾರೆ ಎಂಬುದು ನನ್ನ ಅಚಲ ನಂಬಿಕೆಯಾಗಿರುತ್ತದೆ.

ಹಾಗಾದರೆ ಸತಿ ನಿರ್ಮೂಲನೆಯಲ್ಲಿ ಬ್ರಿಟಿಷರ ಪಾತ್ರವೇನು?

ಕ್ರಾಫರ್ಡ್ ಹೇಳುವಂತೆ,  ಯಾವುದೇ ಪ್ರಾಚೀನ ತತ್ತ್ವಜ್ಞಾನಿಗಳು ಎಂದೂ ತೋರಿಸದಿರುವಂತಹ ಧೈರ್ಯ ಮತ್ತು ಸಹನೆಗಳೊಂದಿಗೆ ಈ ಭಯಂಕರ ಸತಿಯನ್ನು ಉತ್ತಮ ಕುಲದಲ್ಲಿ ಜನಿಸಿದ ಮಹಿಳೆಯರು ಆಚರಿಸುತ್ತಿದ್ದರು.

ಪಾಶ್ಚಾತ್ಯ ಶಿಕ್ಷಣದ ಪ್ರಸಾರ, ರಾಜಾರಾಮ ಮೋಹನ ರಾಯ್ ಅವರ ನೇತೃತ್ವದಲ್ಲಿ ಜ್ಞಾನೋದಯ ಹೊಂದಿದ ಸಾರ್ವಜನಿಕರ ಅಭಿಪ್ರಾಯದಲ್ಲಿ ಉಂಟಾದ ಬೆಳವಣಿಗೆ ಹಾಗೂ ಕಂಪೆನಿ ಸರ್ಕಾರದ ಕೆಲವು ಅಧಿಕಾರಿಗಳಲ್ಲಿ ಉಂಟಾದ ಜಾಗೃತಿ ಮತ್ತು ಕ್ರೈಸ್ತಧರ್ಮ ಪ್ರಸಾರಕರ ಕೆಲಮಟ್ಟಿನ ಪ್ರಭಾವ ಇವುಗಳ ಫಲಿತಾಂಶವಾಗಿ ಸತಿ ಆಚರಣೆಯನ್ನು ರದ್ದುಪಡಿಸುವ 1829ರ ಡಿಸೆಂಬರ್ 4ರ ತೇದಿಯ XVIIನೆಯ ಕಾನೂನಿಗೆ ಮಂಜೂರಾತಿ ನೀಡಲು ಲಾರ್ಡ್ ವಿಲಿಯಮ್ ಬೆಂಟಿಂಕನ ಸರ್ಕಾರಕ್ಕೆ ಸಹಾಯ ಮಾಡಿದವು.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧