Posts

Showing posts from August, 2025

ಕರ್ನಾಟಕ ವಿಶ್ವವಿದ್ಯಾಲಯದ ಮೂರನೆ ಚತುರ್ಮಾಸದ ಇತಿಹಾಸ ಪಠ್ಯಕ್ರಮ - ಪರಿಷ್ಕೃತ ಹೊಸ ಶಿಕ್ಷಣ ನೀತಿಯ ಅನುಸಾರ.

ಶೈಕ್ಷಣಿಕ ವರ್ಷ 2025-26 ಪತ್ರಿಕೆಯ ಶೀರ್ಷಿಕೆ: ಭಾರತದ ಇತಿಹಾಸ (ಸಾ.ಶ.ವ. 1206 ರಿಂದ   1526 ) Course Title:: History of India 1206 A.D. to 1526 Course Code: A3 HIS 1T1 ಘಟಕ 1. ದೆಹಲಿ ಸುಲ್ತಾನರು.   Unit I: Interpreting the Delhi Sultanate ಅಧ್ಯಾಯ 1. ಮೂಲಾಧಾರಗಳ ಸಮೀಕ್ಷೆ. ಪುರಾತತ್ವ ಮತ್ತು ಸಾಹಿತ್ಯಾಧಾರಗಳು.   Survey of sources: Archeological and Literary Sources. ಅಧ್ಯಾಯ 2. ದೆಹಲಿ ಸುಲ್ತಾನರ ಮೂಲ; ವಿಸ್ತರಣೆ ಮತ್ತು ಸಾಮ್ರಾಜ್ಯದ ಸಂಘಟನೆ. ಗುಲಾಮಿ ಸಂತತಿ; ಕುತುಬ್ ಉದ್‌ ದೀನ್‌ ಐಬಕ್‌, ಇಲ್ತಮಶ್‌, ರಜಿಯಾಸುಲ್ತಾನಾ ಮತ್ತು ಬಲ್ಬನ್.   Delhi Sultanate- Foundation, expansion and consolidation of the Sultanate of   Delhi; The Slaves- Ku tub Din Aibak, Iltutmish, Raziya Sultan and Bulban. ಅಧ್ಯಾಯ 3. ಖಿಲ್ಜಿಗಳು. ಅಲಾ ಉದ್‌ ದೀನ್‌ ಖಿಲ್ಜಿ. ದಿಗ್ವಿಜಯಗಳು ಮತ್ತು ಆಡಳಿತ ಪದ್ಧತಿ.   The Khiljis: Alla- Ud Din Khilji- Conquests & Administration   ಘಟಕ 2. ತುಘಲಕರು ಮತ್ತು ಲೋದಿಗಳು. Unit II: Tughluqs and Lodis ಅಧ್ಯಾಯ 4. ತುಘಲಕ್‌ ಸಂತತಿ; ಮಹಮದ್‌ ಬಿನ್‌ ತುಘಲಕ್‌, ಫಿರೋಜ್‌ ಶಾ ತುಘಲಕ್‌ ಮತ್ತು ಅವರ ದಿಗ್ವಿಜಯಗಳು ಮತ್ತು ಆಡ...

ಹೊಯ್ಸಳರ ಸಾಂಸ್ಕೃತಿಕ ಕೊಡುಗೆಗಳು

ಹೊಯ್ಸಳರ ಆಡಳಿತ ವ್ಯವಸ್ಥೆ    ಪ್ರಾರಂಭದ ಹೊಯ್ಸಳ ಪ್ರಭುಗಳು ತಲಕಾಡಿನ ಗಂಗರ ಮತ್ತು ಕಲ್ಯಾಣ ಚಾಳುಕ್ಯರ ಆಡಳಿತ ಪದ್ಧತಿಯನ್ನು ಅಳವಡಿಸಿ ಕೊಂಡಿದ್ದರು . ಮುಂದೆ ರಾಜ್ಯ ವಿಸ್ತಾರವಾಗಿ , ಆಡಳಿತದ ಭಾರ ಹೆಚ್ಚಾಗುತ್ತಿದ್ದಂತೆ ಆಯಾ ಸಂದರ್ಭಕ್ಕೆ ಅನುಕೂಲವಾಗುವಂತೆ , ಮೂಲ ವ್ಯವಸ್ಥೆಗೆ ಭಂಗ ಬರದ ರೀತಿಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳನ್ನು ಮಾಡಿಕೊಂಡಿದ್ದೂ ಉಂಟು . ರಾಜ್ಯಾಡಳಿತ ಮೂರು ಘಟ್ಟಗಳಲ್ಲಿ ನಡೆಯುತ್ತಿತ್ತು . ಎಲ್ಲಕ್ಕೂ ಉನ್ನತ ಘಟ್ಟದಲ್ಲಿ ಇಡೀ ರಾಜ್ಯದ ಮೇಲೆ ಅಧಿಕಾರವನ್ನು ಚಲಾಯಿಸುತ್ತಿ ದ್ದವನು ಚಕ್ರವರ್ತಿ . ಈ ರಾಜ್ಯವು ಅನೇಕ ಸಣ್ಣ ವಿಭಾಗಗಳಾಗಿ ವಿಂಗಡಿತವಾಗಿದ್ದು , ಅವುಗಳ ಮೇಲೆ ರಾಜನ ಸಂಬಂಧಿಗಳೋ ದಂಡನಾಯಕರೋ ಅಥವಾ ಸಾಮಂತ ರಾಜವಂಶದವರೋ ಅಧಿಕಾರ ನಡೆಸುತ್ತಿದ್ದರು . ಈ ಪ್ರಾಂತಗಳಲ್ಲಿದ್ದ ಗ್ರಾಮಗಳಲ್ಲಿ ಒಂದೊಂದಕ್ಕೂ ಪ್ರತ್ಯೇಕವಾದ ಸ್ಥಳೀಯ ಆಡಳಿತ ಸಂಸ್ಥೆಗಳಿರುತ್ತಿದ್ದುವು . ರಾಜ ಆಡಳಿತದ ಸರ್ವಶ್ರೇಷ್ಠ ಅಧಿಕಾರಿಯಾಗಿದ್ದ . ರಾಜತ್ವ ವಂಶಪಾರಂಪರ್ಯವಾಗಿತ್ತು . ಹಿರಿಯ ಮಗ ಉತ್ತರಾಧಿಕಾರಿಯಾಗುತ್ತಿದ್ದ . ಮಂತ್ರಿಗಳನ್ನೂ ಸೇನಾಧಿಕಾರಿಗಳನ್ನೂ ಆಡಳಿತ ಯಂತ್ರದ ಇತರ ಉಚ್ಚ ಅಧಿಕಾರಿಗಳನ್ನೂ ಆರಿಸುವುದು ರಾಜನ ಕರ್ತವ್ಯವಾಗಿತ್ತು . ರಾಜನು ಸವೋಚ್ಚ ಸೇನಾನಿಯೂ ನ್ಯಾಯಾಧಿಪತಿಯೂ ಆಗಿರುತ್ತಿದ್ದ . ಆದರೆ ಸ್ವೇಚ...