ತುಘಲಕನ ರಾಜಧಾನಿ ಬದಲಾವಣೆಯ ವಿವರಗಳು

ಬರನೀ ಕೊಟ್ಟಿರುವ ವಿವರಣೆ ಹೀಗಿದೆ :

" ಸುಲ್ತಾನನು ಕೈಗೊಂಡ ಎರಡನೆಯ ಯೋಜನೆಯು ಸಾಮ್ರಾಜ್ಯದ ರಾಜಧಾನಿಗೆ ವಿನಾಶಕಾರಿಯಾಗಿ ಪರಿಣಮಿಸಿತು. ದೌಲತಾಬಾದ್ ಎಂಬ ಹೆಸರಿನಲ್ಲಿ ' ದೇವಗೀರ್ ' ಅನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ ಸುಲ್ತಾನನ ಕ್ರಮ ದೇಶದ ಪ್ರಮುಖರಿಗೆ ತುಂಬ ವ್ಯಾಕುಲವುಂಟುಮಾಡಿತು. ಮೊದಲ ರಾಜಧಾನಿ ಕೇಂದ್ರ ಸ್ಥಾನದಲ್ಲಿತ್ತು. ದೆಹಲಿ, ಗುಜರಾತ್, ಲಖಿನಾವತಿ, ಸಾತ್ಗಾಂವ್‌, ಸೋನಾಗಾಂವ್‌, ತಿಲಂಗ್, ಮಾಬಾರ್, ಭೂರಸಮುಂದರ್ಮತ್ತು ಕಂಪಿಲಿ - ಊರುಗಳು ರಾಜಧಾನಿಗೆ ಸಮಾನ ದೂರದಲ್ಲಿದ್ದವು. ದೂರದಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇರಲಿಲ್ಲ. ಸುಲ್ತಾನ ಯಾರೊಡನೆಯೂ ಸಮಾಲೋಚಿಸದೆ ಮತ್ತು ಅನುಕೂಲ ಅನಾನುಕೂಲತೆಗಳನ್ನು ಪರಿಶೀಲಿಸದ, ರಾಜಧಾನಿಯನ್ನು ಬದಲಾಯಿಸಿದನು. ಇದರಿಂದ 170 ಅಥವಾ 180 ವರ್ಷಗಳ ದೀರ್ಘ ಇತಿಹಾಸ ಹೊಂದಿದ್ದು, ಏಳಿಗೆ ಸಾಧಿಸಿದ್ದ ಹಾಗೂ ಬಾಗ್ದಾದ್ ಮತ್ತು ಕೈರೋಗೆ ಸಮಾನ ಸ್ಥಾನ ಹೊಂದಿದ್ದ ದೆಹಲಿಗೆ ಅವನು ವಿನಾಶ ತಂದೊಡ್ಡಿದನು. ತನ್ನ ಸರಾಯ್ಗಳು, ಉಪಪಟ್ಟಣಗಳು ಮತ್ತು ಗ್ರಾಮಗಳ ಸಹಿತ, ನಗರ, ಸುಮಾರು ನಾಲ್ಕು ಅಥವಾ ಐದು ಕೋಸ್ಗಳಿಗೂ ಹೆಚ್ಚು ದೂರದ ಪ್ರದೇಶದವರೆಗೆ ವ್ಯಾಪಿಸಿತ್ತು. ಇವೆಲ್ಲವೂ ನಾಶವಾಗುವಂತಹ ಪರಿಸ್ಥಿತಿ ಒದಗಿತು. ನಗರದ ಕಟ್ಟಡಗಳು, ಅರಮನೆಗಳು ಮತ್ತು ಉಪಪಟ್ಟಣಗಳಲ್ಲಿ ಒಂದು ನಾಯಿ ಅಥವಾ ಬೆಕ್ಕು ಕೂಡಾ ಉಳಿಯಲಿಲ್ಲ. ಮೂಲನಿವಾಸಿಗಳನ್ನು ಅವರವರ ಕುಟುಂಬಗಳೊಂದಿಗೆ, ಅವಲಂಬಿಗಳೊಂದಿಗೆ ಹೆಂಗಸರು ಮತ್ತು ಮಕ್ಕಳೊಂದಿಗೆ ಹಾಗೂ ಗಂಡಾಳುಗಳು ಮತ್ತು ಹೆಣ್ಣಾಳುಗಳೊಂದಿಗೆ ಬಲಾತ್ಕಾರದಿಂದ ಹೊಸ ರಾಜಧಾನಿಗೆ ಸ್ಥಳಾಂತರಿಸಲಾಯಿತು. ಹಲವಾರು ವರ್ಷಗಳು ಮತ್ತು ಹಲವಾರು ಪೀಳಿಗೆಗಳಿಂದ ಸ್ವಂತ ನಾಡಿನಲ್ಲಿ ನೆಲಸಿದ್ದ ಮೂಲ ನಿವಾಸಿಗಳು ಭಗ್ನ ಹೃದಯಿಗಳಾದರು. ಅನೇಕರು ದೂರ ಪ್ರಯಾಣದ ಬಳಲಿಕೆಯಿಂದ ಮಾರ್ಗ ಮಧ್ಯದಲ್ಲೇ ಅಸು ನೀಗಿದರು. ' ದೇವಗೀರ್ ' ಅನ್ನು ಮುಟ್ಟಿದವರಿಗೂ ಸ್ಥಳಾಂತರಗೊಂಡಿದ್ದರ ವೇದನೆಯು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಕೊರಗಿ,  ಕೃಶರಾಗಿ ಮರಣವನೈದಿದರು. ದೈವ ನಂಬಿಕೆಯ ಕುರುಹು ಇರದಿದ್ದ ದೇವಗೀರ್ ಸುತ್ತಲೂ, ಬರಿ ಗೋರಿಗಳೇ ಕಾಣತೊಡಗಿದವು. ವಲಸಿಗರಿಗೆ ಪ್ರಯಾಣ ಕಾಲದಲ್ಲಿ ಹಾಗೂ ಅವರು ಹೊಸ ರಾಜಧಾನಿ ಮುಟ್ಟಿದಾಗ, ಸುಲ್ತಾನನು ಅವರಿಗಾಗಿ ಸಕಲ ಸೌಲಭ್ಯಗಳನ್ನೂ ಉದಾರವಾಗಿ ಕಲ್ಪಿಸಿಕೊಟ್ಟಿದ್ದನು. ಆದರೂ ಮೃದು ಹೃದಯಿಗಳಾದ ವಲಸಿಗರಿಗೆ ಸ್ವಂತ ಸ್ಥಳವನ್ನು ಬಿಟ್ಟು ಬಂದಿದ್ದರೆ ವೇದನೆ ದೂರವಾಗಲಿಲ್ಲ. ಅವರು ಸಂಕಟವನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಕಡೆಗೆ ಅವರು ವಿಧರ್ಮಿ ನಾಡಿನಲ್ಲೇ ಕೊನೆಯುಸಿರೆಳೆದರು. ಅಲ್ಲಿಗೆ ಹೋದ ಅಗಾಧ ಜನಜಂಗುಳಿಯಲ್ಲಿ, ಬದುಕುಳಿದು ಮನೆಗೆ ಮರಳಿದವರ ಸಂಖ್ಯೆ ಅತಿ ಕಡಿಮೆ, ಒಮ್ಮೆ ಅಸೂಯೆಪಡುವಂತಹ ಸ್ಥಿತಿಯಲ್ಲಿದ್ದ ನಗರ, ಅವನತಿಯ ಅಂಚಿಗೆ ಬಂದು ಕಡೆಗೂ ವಿನಾಶಗೊಂಡಿತು.15

ಈ ಘಟನೆ ಕುರಿತಂತೆ ಇಬ್ನ ಬತೂತನು ಹೀಗೆ ಪ್ರಸ್ತಾಪಿಸಿದ್ದಾನೆ : " ಸುಲ್ತಾನನು ದೆಹಲಿ ನಿವಾಸಿಗಳನ್ನು ನಗರ ಬಿಟ್ಟು ಹೋಗುವಂತೆ ಬಲಾತ್ಕರಿಸಿದನೆಂಬುದು ಅವನ ವಿರುದ್ಧ ಮಾಡಲಾಗಿರುವ ತೀವ್ರ ಆಕ್ಷೇಪಣೆಗಳಲ್ಲಿ ಒಂದಾಗಿದೆ. ಅವನು ಹಾಗೆ ಮಾಡಿದ್ದಕ್ಕೆ ಕಾರಣವಿತ್ತು. ಜನರು ಸುಲ್ತಾನನಿಗೆ ನಿಂದೆ ಮತ್ತು ಲೋಕಾಪವಾದಗಳನ್ನೊಳಗೊಂಡ ಪತ್ರಗಳನ್ನು ಬರೆಯುತ್ತಿದ್ದರು. ಅವರು ಪತ್ರಗಳನ್ನು ಮುದ್ರೆ ಹಾಕಿ ಆಂಟಿಸಿದ ಲಕೋಟೆಯೊಳಗಿಟ್ಟು, " ಸುಲ್ತಾನ ಸಾಹೇಬರಲ್ಲದೆ ಬೇರಾರೂ ಪತ್ರವನ್ನು ಓದಬಾರದು " ಎಂದು ಲಕೋಟೆಯ ಮೇಲೆ ಬರೆಯುತ್ತಿದ್ದರು. ಜನರು ಪತ್ರಗಳನ್ನು ರಾತ್ರಿ ಹೊತ್ತು, ಮಂತ್ರಾಲೋಚನೆ ಸಭೆ ನಡೆಯುತ್ತಿದ್ದ ಸ್ಥಳದಲ್ಲಿ ಎಸೆದು ಹೋಗುತ್ತಿದ್ದರು. ಸುಲ್ತಾನನ್ನು ಲಕೋಟೆಗಳನ್ನು ಒಡೆದು, ಪತ್ರಗಳನ್ನು ಓದಿದಾಗ, ಅದರಲ್ಲಿ ಬರೀ ತೆಗಳಿಕೆಗಳು ಮತ್ತು ಅಪನಿಂದೆಗಳೇ ತುಂಬಿರುತ್ತಿದ್ದವು. ಆದ್ದರಿಂದ ಸುಲ್ತಾನನಿಗೆ ಜನರ ಬಗ್ಗೆ ತೀವ್ರ ಅಸಮಾಧಾನ ಉಂಟಾಗಿ ಅವನು ದೆಹಲಿಯನ್ನು ನಿರ್ಜನಗೊಳಿಸಿ, ಬಾಳುಗೆಡವಲು ನಿರ್ಧರಿಸಿದನು. ಸುಲ್ತಾನನು ದೆಹಲಿಯ ಎಲ್ಲ ನಿವಾಸಿಗಳಿಂದಲೂ ಅವರ ಮನೆಗಳನ್ನು ಖರೀದಿಸಿ, ಅವುಗಳ ಮೌಲ್ಯವನ್ನು ಅವರಿಗೆ ಕೊಟ್ಟನು. ಅನಂತರ, ದೆಹಲಿಯನ್ನು ತ್ಯಜಿಸಿ ದೌಲತಾಬಾದಿಗೆ ಹೋಗಿ ನೆಲಸುವಂತೆ ಅವನು ಪ್ರಜೆಗಳಿಗೆ ಆಜ್ಞಾಪಿಸಿದನು. ಆದರೆ ಜನರು ದೆಹಲಿಯನ್ನು ಬಿಡಲು ನಿರಾಕರಿಸಿದರು. ಇನ್ನು ಮೂರು ದಿನಗಳಲ್ಲಿ ದೆಹಲಿಯನ್ನು ಖಾಲಿ ಮಾಡಬೇಕೆಂದು ಸಾರಿ, ಸುಲ್ತಾನ ಡಂಗೂರ ಹೊಡೆಸಿದನು. ಇದರ ಪರಿಣಾಮವಾಗಿ ಬಹಳಷ್ಟು ಜನರು ದೆಹಲಿಯಿಂದ ದೌಲತಾಬಾದಿಗೆ ಹೊರಟು ಹೋದರು. ದೆಹಲಿಯನ್ನು ಬಿಡಲು ಹಿಂದು ಮುಂದು ನೋಡುತ್ತಿದ್ದ ಜನರನ್ನು ಹುಡುಕುವಂತೆ ಸುಲ್ತಾನನು ತನ್ನ ಚಾರರಿಗೆ ಆಜ್ಞೆ ಮಾಡಿದನು. ಕಡೆಗೆ ಅವನ ಗುಲಾಮರು ನಗರದ ಓಣಿಗಳಲ್ಲಿ ಒಬ್ಬ ಹೆಳವ ಮತ್ತು ಇನ್ನೊಬ್ಬ ಕುರುಡನನ್ನು ಪತ್ತೆ ಹಚ್ಚಿ, ಅವರಿಬ್ಬರನ್ನೂ ಸುಲ್ತಾನನ ಆಸ್ಥಾನಕ್ಕೆ ಕರೆದೊಯ್ದರು. ಹಳವನನ್ನು ಯುದ್ಧ ಯಂತ್ರವೊಂದರ (ಮಿಂಜನೀಕ್) ನೆರವಿನಿಂದ ಮೇಲಕ್ಕೆ ಎಸೆಯಬೇಕೆಂದು ಮತ್ತು ಕುರುಡನನ್ನು ದೆಹಲಿಯಿಂದ ದೌಲತಾಬಾದಿನವರೆಗೆ ರಸ್ತೆಯಲ್ಲಿ ದರ ದರ ಎಳೆದೊಯ್ಯಬೇಕೆಂದು ಆಜ್ಞೆಯಾಯಿತು. ಎರಡು ಸ್ಥಳಗಳ ನಡುವೆ, ಪ್ರಯಾಣಕ್ಕೆ ನಲವತ್ತು ದಿನಗಳು ಹಿಡಿಯುವಷ್ಟು ದೂರವಿತ್ತು, ಕುರುಡನನ್ನು ಎಳೆದೊಯ್ಯುತ್ತಿದ್ದಾಗ, ರಸ್ತೆಯಲ್ಲಿ ಅವನ ದೇಹ ಛಿದ್ರ ಛಿದ್ರವಾಯಿತು. ಕಡೆಗೆ ದೌಲತಾಬಾದ್ ಮುಟ್ಟಿದ್ದು ಕುರುಡವಲ್ಲ; ಅವನ ಒಂದು ಕಾಲು ಮಾತ್ರ, ಕುರುಡನಿಗಾದ ಪಾಡು ಕಂಡು, ದೆಹಲಿಯಲ್ಲೇ ಉಳಿದುಕೊಂಡಿದ್ದ ಇತರ ಎಲ್ಲ ನಿವಾಸಿಗಳು, ತಮ್ಮ ಆಸ್ತಿ - ಪಾಸ್ತಿಗಳು ಮತ್ತು ಸಾಮಾನು - ಸರಂಜಾಮುಗಳನ್ನು ಅಲ್ಲೇ ಬಿಟ್ಟು ಅವಸರ- ಅವಸರವಾಗಿ, ದೌಲಶಾಬಾದಿಗೆ ತೆರಳಿದರು. ಹೀಗ ದೆಹಲಿ ನಗರ, ಜನರೇ ಇಲ್ಲದ ಬಿಕೊ ಎನ್ನುತ್ತಿತ್ತು. ಸುಲ್ತಾನ ರಾತ್ರಿ ಅರಮನೆಯ ಛಾವಣಿಯ ಮೇಲೆ ನಿಂತು, ದೆಹಲಿಯ ಸುತ್ತ ದೃಷ್ಟಿ ಹಾಯಿಸುತ್ತಿದ್ದನು. ಒಂದು ಸಣ್ಣ ಬೆಳಕು, ದೀಪ ಅಥವಾ ಹೊಗೆ ಕಾಣಿಸದಿದ್ದಾಗ ಸುಲ್ತಾನನ ಆನಂದಕ್ಕೆ ಪಾರವಿಲ್ಲ. " ಈಗ ನನ್ನ ಮನಸ್ಸಿಗೆ ಆನಂದ, ಆತ್ಮಕ್ಕೆ ಶಾಂತಿ'- ಎಂದು ಸುಲ್ತಾನ ಉದ್ಭರಿಸುತ್ತಿದ್ದ, ದೆಹಲಿ ನಗರದ ವೈಶಾಲ್ಯ ಹಾಗೂ ಬಾಹುಳ್ಯದ ಕಾರಣ, ಅದು ಮತ್ತೆ ಜನಭರಿತವಾಗಲಿಲ್ಲ. ದೆಹಲಿ ಜಗತ್ತಿನ ಅತಿ ದೊಡ್ಡ ನಗರಗಳಲ್ಲೊಂದು. ನಾವು ನಗರವನ್ನು ಪ್ರವೇಶಿಸಿದಾಗ ಅದು ಖಾಲಿ ಖಾಲಿಯಾಗಿಯೇ ಗೋಚರಿಸಿತು. ಅಲ್ಲೊಂದೆಡೆ ಇನ್ನೊಂದೆಡೆ ಮಾತ್ರ ಜನರು ಅತಿ ಕಡಿಮೆ ಸಂಖ್ಯೆಯಲ್ಲಿ ವಾಸಿಸುತ್ತಿದ್ದರು.'16

ಇಬ್ಬರು ಸಮಕಾಲೀನ ಸಾಕ್ಷಿದಾರರು ಪುರಾವೆಯಾಗಿ ನೀಡಿರುವ ಮಾಹಿತಿಗಳಲ್ಲಿ ಸಾಮ್ಯವಿದೆ. ಅವರ ಪುರಾವೆಗಳನ್ನು ಇನ್ನೊಬ್ಬ ಸಮಕಾಲೀನನಾಗಿದ್ದ ಇಸಾಮೀ ಕೂಡಾ ಒಪ್ಪಿಕೊಂಡಿದ್ದಾನೆ. ಆದರೂ, ಆಧುನಿಕ ಯುಗದ ಕೆಲವು ವಿದ್ವಾಂಸರು, ಸಮಕಾಲೀನರ ವಿವರಣೆಗಳು ಉತ್ತೇಕ್ಷಿತವಾದವೆಂದು ಅಭಿಪ್ರಾಯಪಟ್ಟಿದ್ದಾರೆ. ದೆಹಲಿ ನಗರವು ಕ್ರಿ.. 1334 ರಲ್ಲಿ ಜನಭರಿತವಾಗಿತ್ತೆಂಬ ಇಬ್ನ ಬತೂತನ ವರ್ಣನೆಗೂ, ಆಗ ಅದು ಸಂಪೂರ್ಣವಾಗಿ ಪಾಳು ಬಿದ್ದಿತ್ತೆಂಬ ಸಮಕಾಲೀನರ ಹೇಳಿಕೆಗೂ ತಾಳೆಯಾಗುವುದಿಲ್ಲ. ಇವೆರಡು ಅಭಿಪ್ರಾಯಗಳೂ ಒಂದಕ್ಕೊಂದು ವಿರುದ್ಧವಾಗಿವೆ. ಇಬ್ನ  ಬತೂತನ ' ರೆಹ'ದಿಂದ ಉಲ್ಲೇಖಿಸಲಾಗಿರುವ ಉದೂತ ಭಾಗದ ಕಡೇ ಮೂರು ವಾಕ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ದೆಹಲಿಯ ಎಲ್ಲ ನಿವಾಸಿಗಳನ್ನು ' ದೇವಗೀರ್'ಗೆ ಸ್ಥಳಾಂತರಿಸಲಾಯಿತೆಂದು ಹೇಳಲಾಗಿರುವ ವರ್ಷಗಳಲ್ಲಿ, ಸುಲ್ತಾನನು ದೆಹಲಿಯಲ್ಲಿ ಅನೇಕ ರಚನಾತ್ಮಕ ಕ್ಷಾಮಗಾರಿಗಳನ್ನು ಕೈಗೊಂಡಿದ್ದನೆಂದು ಅದರಲ್ಲಿ ಸೂಚಿಸಲಾಗಿತ್ತು. ಡಾ. ಎಂ. ಹುಸೇನ್, ಎಲ್ಲ ಅಂಶಗಳನ್ನು ಆಧಾರವಾಗಿಟ್ಟುಕೊಂಡು, ದೆಹಲಿ ನಗರ ರಾಜಧಾನಿಯಾಗಿ ಮುಂದುವರಿದಿತ್ತೇ ವಿನಃ ಅದು ಎಂದೂ ತನ್ನ ಸ್ಥಾನವನ್ನು ಕಳೆದುಕೊಂಡಿರಲಿಲ್ಲ ಎಂಬ ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ. ಆದ್ದರಿಂದ ನಗರ ಎಂದೂ ನಿರ್ಜನವಾಗಿರಲಿಲ್ಲ ಅಥವಾ ನಾಳು ಬಿದ್ದಿರಲಿಲ್ಲ ' ' ಎಂದು ಡಾ. ಹುಸೇನ್ಪ್ರಬಲವಾಗಿ ಅಭಿಪ್ರಾಯಪಟ್ಟಿದ್ದಾರೆ. ಇವರ ವಾದವನ್ನು ಸುದೀರ್ಘವಾಗಿ ಪರಿಶೀಲಿಸಿದ ಪ್ರೊ. ಎನ್.ಬಿ. ರಾಮ್ ಅವರ ತೀರ್ಮಾನ ಇನ್ನೂ ಸಮಂಜಸವಾಗಿ ತೋರುತ್ತದೆ. " ಹಳೆಯ ರಾಜಧಾನಿ ಸಂಪೂರ್ಣವಾಗಿ ಪಾಳು ಬಿದ್ದಿರಲಿಲ್ಲ. ಅದು ಆಡಳಿತ ಕೇಂದ್ರವಾಗಿಯೇ ಉಳಿದಿತ್ತು. ನಗರದಲ್ಲಿ ಟಂಕಸಾಲೆ ಕೂಡಾ ಇತ್ತು. ಹಿಜರಿಶಕ 728, 729 ಮತ್ತು 730 ರಲ್ಲಿ (ಕ್ರಿ.. 1327-30) ದೆಹಲಿಯಿಂದ ನಾಣ್ಯಗಳನ್ನು ಹೊರಡಿಸಿಲಾಯಿತು. ವರ್ಷಗಳಲ್ಲಿ ಸುಲ್ತಾನನ ಅರಮನೆ, ಚಟುವಟಿಕೆಗಳಿಂದ ಕಲಕಲಗುಟ್ಟುತ್ತಿತ್ತು. ದೊಂಬಿಗಳು ನಡೆದು, ಅಗತ್ಯವಾದಾಗಲೆಲ್ಲ ಸುಲ್ತಾನನು, ಅರಮನೆಗೆ ಬರುತ್ತಿದ್ದನು. ಆದರೂ ದೆಹಲಿ ಪಾಳು ಬಿದ್ದ ನಗರದಂತೆಯೇ ಕಾಣುತ್ತಿತ್ತು. ಸುಲ್ತಾನನು ಇತರ ಸ್ಥಳಗಳಿಂದ ಜನರನ್ನು ಕರೆತಂದು, ಅವರು ದೆಹಲಿಯಲ್ಲಿ ನೆಲಸುವಂತೆ ಮಾಡಲೆತ್ನಿಸಿದನು. ಆದರೂ ಘಟನೆಯಾದ ಆರು ವರ್ಷಗಳ ಬಳಿಕ ಇಬ್ನ ಬತೂತನು ದೆಹಲಿಗೆ ಭೇಟಿ ಕೊಟ್ಟಾಗ ಅಲ್ಲಿದ್ದ ಕೆಲವೇ ಕೆಲವು ನಿವಾಸಿಗಳನ್ನು ಬಿಟ್ಟರೆ ಇಡೀ ನಗರ ಅವನಿಗೆ ಬರಿದಾಗಿಯೇ ಕಾಣಬಂದಿತು. 19

ದೆಹಲಿ ನಗರ ಸಂಪೂರ್ಣವಾಗಿ ಜನಮುಕ್ತವಾಗಿರಲಿಲ್ಲ ಮತ್ತು ಅದು ಪಾಳುಬಿದ್ದಂತೆ ಕಾಣುತ್ತಿರಲಿಲ್ಲ ಎಂದಿಟ್ಟುಕೊಂಡರೂ, ಅಲ್ಲಿನ ಜನರನ್ನು ಸಾಮೂಹಿಕವಾಗಿ ದೇವಗಿರಿಗೆ ಸ್ಥಳಾಂತರಿಸಲಾಯಿತು ಮತ್ತು ಅದರಿಂದ ಜನರು ಊಹೆಗೂ ಮೀರಿದ ಕಷ್ಟಕೋಟಲೆಗಳನ್ನು ಅನುಭವಿಸಬೇಕಾಯಿತು ಎಂಬುದರಲ್ಲಿ ಏನೂ ಸಂದೇಹವಿಲ್ಲ.

ಅದೇ ಸಮಯದಲ್ಲಿ ಸುಲ್ತಾನನು ದೇವಗಿರಿಗೆ ವಲಸೆ ಹೋದವರ ತೊಂದರೆಗಳ ನಿವಾರಣೆಗಾಗಿ ಅನೇಕ ಏರ್ಪಾಡುಗಳನ್ನು ಮಾಡಿದ್ದನೆಂಬುದನ್ನು ಮರೆಯುವುದು ಉಚಿತವಲ್ಲ. " ಎರಡು ನಗರಗಳ ನಡುವ ಒಳ್ಳೆಯ ರಸ್ತೆಯನ್ನು ನಿರ್ಮಿಸಲಾಯಿತು. ರಸ್ತೆಯಲ್ಲಿ ಪ್ರಯಾಣ ಮಾಡುವ ಜನರು ಹಾಗೂ ಪಶುಗಳ ನೆರಳಿಗಾಗಿ ರಸ್ತೆಯ ಅಂಚುಗಳಲ್ಲಿ ಸಾಲುಮರಗಳನ್ನು ಬೆಳೆಸಲಾಗಿತ್ತು. ಪತ್ರಗಳನ್ನು ಕೈಯಿಂದ ಕೈಗೆ ರವಾನಿಸಿಕೊಂಡು ಹೋಗಿ ತಲುಪಿಸಲು, ಅತ್ಯಂತ ದಕ್ಷ ಸೇವೆ ನೀಡುತ್ತಿದ್ದ ಹರಿಕಾರರಿದ್ದರು. ದಾರಿಯಲ್ಲಿ ಹಂತ ಹಂತದಲ್ಲೂ ವಿಶ್ರಾಂತಿಗೃಹಗಳು ಮತ್ತು ಅನ್ನಸತ್ರಗಳನ್ನು ಸ್ಥಾಪಿಸಲಾಗಿತ್ತು, ವಿಶ್ರಾಂತಿಗೃಹದ ನಿರ್ವ ಹಣೆಯನ್ನು ಒಬ್ಬ ಶೇಖರಿಗೆ ಒಪ್ಪಿಸಲಾಗಿತ್ತು. ಗೃಹಗಳಲ್ಲಿ ಪ್ರಯಾಣಿಕರಿಗೆ ಆಹಾರ, ತಂಪು ಪಾನೀಯ ಮತ್ತು ಎಲೆಯಡಿಕೆ ಮುಂತಾದವನ್ನು ಒದಗಿಸಲಾಗುತ್ತಿತ್ತು, ಹಸಿವು - ಬಾಯಾರಿಕೆಯಿಂದ ಬಳಲಿದ ಪ್ರಯಾಣಿಕರಿಗೆ ಒಳ್ಳೆಯ ಉಪಶಮನ ದೊರೆಯುತ್ತಿತ್ತಂಬುದರಲ್ಲಿ ಸಂಶಯವಿಲ್ಲ; ಆದರೆ ಸುಡುಬಿಸಿಲಿನಿಂದ ತತ್ತರಿಸುತ್ತಿದ್ದ ಹಾಗೂ ಮನೆ - ಮಠಗಳನ್ನು ಬಿಟ್ಟು ಬಂದು ಅತಿ ಖಿನ್ನರಾಗಿದ್ದ ಜನರ ವ್ಯಾಕುಲತೆಯನ್ನು ಪರಿಹರಿಸಲು ಮಾತ್ರ ಅವಕ್ಕೆ ಸಾಧ್ಯವಿರಲಿಲ್ಲ. ಇದು ಊರು ಬಿಟ್ಟು ಪರ ಊರಿಗೆ ಹೋಗಿ ಒಲ್ಲದ ಮನಸ್ಸಿನಿಂದ ಅಲ್ಲಿ ನೆಲಸಬೇಕಾದ ಭಾರತೀಯನನ್ನು ಕೊಲ್ಕುತ್ತದೆ. '21

ಸುಲ್ತಾನನು ರಾಜಧಾನಿಯನ್ನು ಬದಲಾಯಿಸಿದ್ದಕ್ಕೆ ಇಬ್ನ ಬತೂತನು ಕೊಟ್ಟಿರುವ ಕಾರಣಗಳು ವಿಶ್ವಾಸಾರ್ಹವೆನಿಸುವುದಿಲ್ಲ. ಬರನೀ ಕೊಟ್ಟಿರುವ ಕಾರಣಗಳೂ ಅಷ್ಟೇನೂ ನಿಖರವಾದುವಲ್ಲ ಎಂಬುದು ಕೆಲವು ಆಧುನಿಕ ಬರಹಗಾರರ ಅಭಿಪ್ರಾಯ. ಮಂಗೋಲರ ಆಕ್ರಮಣ ಅಂತ್ಯಗೊಂಡಿತು. ದೆಹಲಿ ಸುಲ್ತಾನಾಧಿಪತ್ಯ ದಕ್ಷಿಣದ ತುದಿಯವರೆಗೂ ವಿಸ್ತರಿಸಿತ್ತು. ಪರಿಸ್ಥಿತಿಯಲ್ಲಿ ರಾಜಧಾನಿ ನಗರವಾಗಿದ್ದ ದೆಹಲಿಯ ಪ್ರಾಮುಖ್ಯ ಕಡಿಮೆಯಾಯಿತು. ಆದ್ದರಿಂದ ಇನ್ನೂ ಹೆಚ್ಚು ಕೇಂದ್ರಸ್ಥಾನದಲ್ಲಿರುವ ದೌಲತಾಬಾದಿನಂತಹ ಒಂದು ಸ್ಥಳವನ್ನು ರಾಜಕೀಯ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡಿಕೊಳ್ಳಬೇಕಾದ ಅಗತ್ಯ ಹೆಚ್ಚಿತು ಎಂದು ಆಧುನಿಕ ಬರಹಗಾರರು ಅಭಿಪ್ರಾಯಪಟ್ಟಿದ್ದಾರೆ. ದಬ್ಬಿನ್ನಿನಲ್ಲಿ ಮುಸ್ಲಿಮರ ಸಂಖ್ಯೆ ಅತಿ ಕಡಿಮೆಯಿತ್ತು. ಆದ್ದರಿಂದ ರಾಜಧಾನಿಯನ್ನು ದೇವಗಿರಿಗೆ ವರ್ಗಾಯಿಸಲು ಸುಲ್ತಾನನು ನಿರ್ಧರಿಸಿರಬಹುದೆಂದು ಕಾಣುತ್ತದೆ. ಅವನು ದೌಲತಾಬಾದನ್ನು ಮುಸಲ್ಮಾನ ಸಂಸ್ಕೃತಿಯ ಒಂದು ಕೇಂದ್ರವನ್ನಾಗಿ ಮಾಡಬಯಸಿದನು. ಅಲ್ಲಿ ಅವನು ' ಉಲೇಮಾ ' ಮತ್ತು ಮುಸಲ್ಮಾನ ಸಂತರುಗಳಿಗಾಗಿ ಒಂದು ವಸಾಹತನ್ನೇ ಸ್ಥಾಪಿಸ ಬಯಸಿದನು ಎಂಬುದು ಡಾ. ಎಂ. ಹುಸೇನ್ ಅವರ ಅಭಿಪ್ರಾಯ. ಇತರ ವಿದ್ವಾಂಸರು ಸಹ ಇದೇ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ.2

ತಾರೀಖ್ - - ಮುಬಾರಕ್ ಷಾಹೀ ಎಂಬ ಕೃತಿಯ ಪ್ರಕಾರ, ದೌಲತಾಬಾದಿಗೆ ವಲಸೆ ಹೋಗುವುದನ್ನು ಎರಡು ಬಾರಿ ಕೈಗೊಳ್ಳಲಾಯಿತು. ಕ್ರಿ.. 1327 ರಲ್ಲಿ ಗಮನಾರ್ಹ ವ್ಯಕ್ತಿಗಳು ದೌಲತಾಬಾದಿಗೆ ವಲಸೆ ಹೋದರು. ಅವರು ವಲಸೆ ಹೋದ ಎರಡು ವರ್ಷಗಳ ತರುವಾಯ, ದಂಡನೆಯ ಒಂದು ಕ್ರಮವಾಗಿ ದೆಹಲಿಯ ನಿವಾಸಿಗಳು ದೌಲತಾಬಾದಿಗೆ ವಲಸೆ ಹೋಗಬೇಕಾಯಿತು.

ದೇವಗಿರಿಗೆ ಜನರನ್ನು ಸ್ಥಳಾಂತರಿಸುವ ಕಾರ್ಯ ಎರಡು ಹಂತಗಳಲ್ಲಿ ನಡೆಯಿತೆಂದು ಡಾ. ಹುಸೇನ್ ಅಭಿಪ್ರಾಯಪಟ್ಟಿದ್ದಾರೆ. ಗಣ್ಯ ಮುಸ್ಲಿಮರನ್ನು ಹೊಸ ರಾಜಧಾನಿಗೆ ಹೋಗುವಂತೆ ಬಲಾತ್ಕರಿಸಲಾಯಿತೇ ಹೊರತು " ಜನ ಸಾಮಾನ್ಯರನ್ನಾಗಲಿ ಅಥವಾ ಹಿಂದೂಗಳನ್ನಾಗಲಿ ಅಲ್ಲ " ಎಂಬುದು ಹುಸೇನ್ ಅವರ ಅಭಿಪ್ರಾಯ. " ದೆಹಲಿ ಎಂದೂ ನಾಳು ಬಿದ್ದಿರಲಿಲ್ಲ ಮತ್ತು ರಾಜಧಾನಿಯಾಗಿದ್ದ ನಗರ ಎಂದೂ ತನ್ನ ಸ್ಥಾನವನ್ನು ಕಳೆದುಕೊಂಡಿರಲಿಲ್ಲ " ಎಂದು ಅವರು ದೃಢಪಡಿಸಿದ್ದಾರೆ. ಸುಲ್ತಾನ ಮುಹಮ್ಮದ್ ದೆಹಲಿಯನ್ನು ನಾಶಪಡಿಸುವ ಮಾತು ಹಾಗಿರಲಿ, ನಗರವನ್ನು ಬಿಟ್ಟು ಹೋಗುವ ಉದ್ದೇಶವೇ ಅವನಿಗಿರಲಿಲ್ಲ ಎನ್ನುತ್ತಾರೆ ಡಾ. ಹುಸೇನ್. ದೂರದವರೆಗೆ ವ್ಯಾಪಿಸಿದ್ದ ತನ್ನ ಸಾಮ್ರಾಜ್ಯಕ್ಕೆ ದೆಹಲಿ ಮತ್ತು ದೌಲತಾಬಾದ್ - ಎರಡು ಸ್ಥಳಗಳೂ ರಾಜಧಾನಿಗಳಾಗಿರಬೇಕೆಂಬುದು ಅವನ ಅಪೇಕ್ಷೆಯಾಗಿತ್ತು. ಇದಕ್ಕೆ ಇತರ ವಿದ್ವಾಂಸರ ಸಹಮತವಿಲ್ಲ. ಯಾವ ತಾರೀಖ್ - - ಮುಬಾರಕ್ ಷಾಹಿಯನ್ನು ಕುರಿತು ಡಾ. ಹುಸೇನ್ಪ್ರಸ್ತಾಪಿಸಿರುವರೋ ಅದು ಕೂಡಾ ಅಭಿಪ್ರಾಯವನ್ನು ಸಮರ್ಥಿಸಿಲ್ಲ. ಏಕೆಂದರೆ, ದೇವಗಿರಿಗೆ ವಲಸೆ ಹೋಗುವಂತೆ ಜನರನ್ನು ಬಲಾತ್ಕರಿಸಲಾಯಿತೆಂದು ಅದರಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಕ್ರಿ..1329 ರಲ್ಲಿ ದೆಹಲಿಯನ್ನು ಎಷ್ಟು ಪೂರ್ಣವಾಗಿ ಖಾಲಿ ಮಾಡಿಸಲಾಗಿತ್ತೆಂದರೆ, ಒಂದು ನಾಯಿ - ಬೆಕ್ಕಿನ ಕೂಗು ಸಹ ಕೇಳಿ ಬರದಷ್ಟು ನೀರವತೆ ಅಲ್ಲಿ ತುಂಬಿಹೋಗಿತ್ತು.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧