ರಾಷ್ಟ್ರೀಯ ಏಕೀಕರಣದ ಸ್ವಾರಸ್ಯಕರ ಪ್ರಕರಣಗಳು
1. ತಿರುವಾಂಕೂರಿನ ವಿಲೀನ: ತಿರುವಾಂಕೂರು ದಕ್ಷಿಣ ಭಾರತದ ಕರಾವಳಿಯ ಸಮೃದ್ಧ ದೇಶೀಯ ಸಂಸ್ಥಾನವಾಗಿತ್ತು. ಭಾರತ ಒಕ್ಕೂಟಕ್ಕೆ ವಿಲೀನವಾಗಲು ನಿರಾಕರಿಸಿದ ಮೊದಲ ದೇಶೀಯ ಸಂಸ್ಥಾನವೆಂದು ಇದನ್ನು ಪರಿಗಣಿಸಲಾಗುತ್ತದೆ. ಏಕೆಂದರೆ 1946 ರಲ್ಲಿ ತಿರುವಾಂಕೂರಿನ ದಿವಾನ ಸಿ. ಪಿ. ರಾಮಸ್ವಾಮಿ ಅಯ್ಯರ್ ಸ್ವತಂತ್ರವಾಗಿ ಉಳಿಯುವ ಅದರ ಇಂಗಿತವನ್ನು ವ್ಯಕ್ತಪಡಿಸಿದ್ದರು. ಖನಿಜ ಸಂಪನ್ಮೂಲದ ಕಾರಣಕ್ಕೆ ರಹಸ್ಯ ಒಪ್ಪಂದ ಮಾಡಿಕೊಂಡ ಬ್ರಿಟಿಷರು ಅದನ್ನು ಸ್ವತಂತ್ರವಾಗಿ ಉಳಿಯಲು ಬೆಂಬಲ ನೀಡಿದ್ದರು. ಆದರೆ ಜುಲೈ 1947 ರ ಹೊತ್ತಿಗೆ ತನ್ನ ನಿಲುವನ್ನು ಬದಲಿಸಿದ ಅಯ್ಯರ್ ಭಾರತ ಒಕ್ಕೂಟದಲ್ಲಿ ಜುಲೈ 30, 1947 ರಂದು ತಿರುವಾಂಕೂರನ್ನು ವಿಲೀನಗೊಳಿಸಿದರು. 2. ಜೋಧಪುರದ ವಿಲೀನ: ಜೋಧಪುರವು ಹಿಂದೂಗಳೇ ಅಧಿಕವಾಗಿದ್ದ ಮತ್ತು ಹಿಂದೂ ಮಹಾರಾಜ ಹನುವಂತ್ ಸಿಂಗ್‌ನಿಂದ ಆಳಲ್ಪಡುತ್ತಿದ್ದ ದೇಶೀಯ ಸಂಸ್ಥಾನವಾಗಿತ್ತು. ಕರಾಚಿ ಬಂದರಿನ ಅನುಕೂಲ ಮತ್ತು ಮಹಮದಲಿ ಜಿನ್ನಾರವರ ವಿವಿಧ ಭರವಸೆಗಳಿಂದ ಪಾಕಿಸ್ತಾನ ಒಕ್ಕೂಟಕ್ಕೆ ಸೇರಲು ಜೋಧಪುರದ ಮಹಾರಾಜ ಉತ್ಸುಕನಾಗಿದ್ದ. ಆಗ ಗಡಿ ರಾಜ್ಯವೊಂದು ಕೈ ತಪ್ಪದಂತೆ ಎಚ್ಚೆತ್ತ ಸರ್ದಾರ್ ಪಟೇಲರು ಕಾತೇವಾಡ ಬಂದರಿನ ಅನುಕೂಲವನ್ನು ಮನವರಿಕೆ ಮಾಡಿದರಲ್ಲದೇ ವಿವಿಧ ಭರವಸೆಗಳನ್ನು ಒದಗಿಸಿ ಜೋಧಪುರ ಭಾರತ ಒಕ್ಕೂಟಕ್ಕೆ ಸೇರಲು ಹನ್ವಂತ್ ಸಿಂಗ್‌ನನ್ನು ಮನವೊಲಿಸಿದರು. ಅಂತಿಮವಾಗಿ ಜೋಧಪುರ ಆಗಸ್ಟ್ 11, 1947 ರಂದು...