ಶ್ರೀ ರಾಮಾನುಜಾಚಾರ್ಯರು, ಶ್ರೀವೈಷ್ಣವ ಸಂಪ್ರದಾಯ ಮತ್ತು ವಿಶಿಷ್ಟಾದ್ವೈತ ಸಿದ್ಧಾಂತ
ವೈಯುಕ್ತಿಕ ವಿವರಗಳು: ಕಾಲ:- 1017 – 1137. ಜನ್ಮಸ್ಥಳ:- ಶ್ರೀಪೆರಂಬದೂರು, ತಮಿಳುನಾಡು. ತಂದೆ:-ಕೇಶವ ಸೋಮಯಾಜಿ. ತಾಯಿ:- ಕಾಂತಿಮತಿ. ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನನ. ಬಾಲ್ಯ ಮತ್ತು ವಿದ್ಯಾಭ್ಯಾಸ: ಕಂಚಿಯಲ್ಲಿ ಶಿಕ್ಷಣ. ಗುರು:- ಯಾದವ ಪ್ರಕಾಶರು. ಬಾಲ್ಯದಲ್ಲಿಯೇ ಅಪಾರ ಬುದ್ಧಿವಂತಿಕೆ. ಗುರುಗಳೊಂದಿಗೆ ವಾಗ್ವಾದ. ಕಾರಣ ಯಾದವರು ಅದ್ವೈತಿಗಳು. ವಿವಾಹವಾದರೂ ಸನ್ಯಾಸ ಸ್ವೀಕಾರ ಶ್ರೀರಂಗಂ ಮಠದ ಮುಖ್ಯಸ್ಥರು: ಶ್ರೀರಂಗಂ ಮಠದ ಯಾಮುನಾಚಾರ್ಯರ ಕೋರಿಕೆ. ಮಠದ ಮುಖ್ಯಸ್ಥರಾಗಿ ಅಧಿಕಾರ ಗ್ರಹಣ. ಶ್ರೀವೈಷ್ಣವ ಪಂಥದ ಪ್ರಚಾರ. ಕುಲೋತ್ತುಂಗ ಚೋಳನ ವಿರೋಧ. ಕರ್ನಾಟಕಕ್ಕೆ ವಲಸೆ. ವಿಷ್ಣುವರ್ಧನನ ಆಶ್ರಯ; ಮೇಲುಕೋಟೆಯಲ್ಲಿ ವಾಸ್ತವ್ಯ. ಕುಲೋತ್ತುಂಗ ಚೋಳನ ಮರಣಾನಂತರ ತಮಿಳುನಾಡಿಗೆ ಹಿಂತಿರುಗಿದರು ಧಾರ್ಮಿಕ ಕೃತಿಗಳು: ವೇದಾಂತ ಸಾರ, ವೇದಾಂತ ಸಂಗ್ರಹ ಮತ್ತು ವೇದಾಂತ ಸೂತ್ರಗಳಿಗೆ ಭಾಷ್ಯಗಳು. ಶ್ರೀಭಾಷ್ಯ ಸೂತ್ರ [ಬ್ರಹ್ಮಸೂತ್ರ ಭಾಷ್ಯ], ವೇದಾಂತ ದೀಪಿಕಾ, ಗೀತಾ ಭಾಷ್ಯ, ಶ್ರೀರಂಗ ಗದ್ಯ, ಶ್ರೀವೈಕುಂಠ ಗದ್ಯ, ಶರಣಾಗತ ಗದ್ಯ ಮತ್ತು ನಿತ್ಯ ಗದ್ಯ. ವಿಶಿಷ್ಟಾದ್ವೈತ ಸಿದ್ಧಾಂತ: ವಿಶಿಷ್ಟಾದ್ವೈತ ಎಂದರೆ ವಿಷೇಶಣಗಳಿಂದ ಕೂಡಿರುವ ಅದ್ವೈತ ಎಂದು ಅರ್ಥ. ಇದು ಆಗಮಗಳ ಅಂದರೆ ವೇದಗಳ ಆಧಾರಿತವಾದ ಸಿದ್ಧಾಂತ. ಅದ್ವೈತದ ನಿರಾಕರಣೆ. ದೇವರು ಸುಗುಣ; ಸೃಷ್ಠಿಕರ್ತ ಅವನೇ. ಸರ್ವಜೀವಿಗಳಿಗೂ ಆಧಾರ ಮತ್ತು ನಿಯಂತ್ರಕ. ಬ್ರ