Posts

ಫಿರೋಜ್‌ ಶಾ ತುಘಲಕ್‌ನ ಸುಧಾರಣೆಗಳು.

FIROZ SHAH TUGHLUQ 1351 – 1388 ಆಂತರಿಕ ನೀತಿ - DOMESTIC POLICY:- ಫಿರೋಜ್‌ ಶಾನು ಕೈಗೊಂಡ ಆಡಳಿತಾತ್ಮಕ ಸುಧಾರಣೆಗಳನ್ನು ಅವನ ಆಂತರಿಕ ನೀತಿ ಅಥವಾ Domestic Policy ಎಂದು ಕರೆಯಲಾಗಿದೆ. ಅವನು ಮಾಡಿದ ಹಲವು ಸುಧಾರಣೆಗಳ ವಿವರಗಳು ಕೆಳಕಂಡಂತಿವೆ. ೧. ಕಂದಾಯ ಸುಧಾರಣೆ: ಅನಗತ್ಯ ೨೪ ರಿಂದ ೨೬ ರಷ್ಟು ತೆರಿಗೆಗಳ ರದ್ದು. ಖುರಾನ್ ನಿಗದಿಪಡಿಸಿದ ೪ ತೆರಿಗೆಗಳ ಜಾರಿ. ಅಧಿಕಾರಿಗಳಿಗೆ ಕಂದಾಯ ವಸೂಲಿಗೆ ಕಟ್ಟುನಿಟ್ಟಿನ ಆದೇಶ. ನಿಗದಿತ ಕಂದಾಯ ಮಾತ್ರ ವಸೂಲಿಗೆ ಆದೇಶ. ತಪ್ಪಿದಲ್ಲಿ ಶಿಕ್ಷೆ. ಅನಗತ್ಯ ವ್ಯಾಪಾರಿ ತೆರಿಗೆಗಳ ರದ್ದು; ಸುಗಮ ಸರಕು ಸಂಚಾರಕ್ಕೆ ಅವಕಾಶ. ನೀರಾವರಿ ಭೂಮಿಗಳ ಮೇಲೆ ಉತ್ಪಾದನೆಯ ಶೇ. ೧೦ ರಷ್ಟು ತೆರಿಗೆ. (ಪರ್ಬ್) ಖಾಲ್ಸಾ (ಸರ್ಕಾರಿ ಒಡೆತನದ) ಜಮೀನುಗಳ ಮೇಲೆ ಹಿಂದಿನ ದಾಖಲೆಗಳನ್ನು ಆಧರಿಸಿ ತೆರಿಗೆ ನಿಗದಿ. ಬ್ರಾಹ್ಮಣರ ಮೇಲೂ ಜೆಸಿಯಾ ಕಂದಾಯ ಹೇರಿಕೆ. ಮೇಲಿನ ಕ್ರಮಗಳಿಂದ ರಾಜ್ಯದ ಆದಾಯ ಹೆಚ್ಚಳ; ಸಮೃದ್ಧಿ. ಪರಿಣಾಮಗಳು: ಶಂಶಿ ಇ ಸಿರಾಜನ ಹೇಳಿಕೆ:- “ಸುಲ್ತಾನನ ಕ್ರಮಗಳಿಂದ ರೈತರ ಮನೆಗಳು ದವಸ-ಧಾನ್ಯ, ಪೀಠೋಪಕರಣಗಳಿಂದ ಕೂಡಿದ್ದವು. ಪ್ರಜೆಗಳಲ್ಲಿ ಸಾಕಷ್ಟು ಚಿನ್ನ-ಬೆಳ್ಳಿ ಲಭ್ಯವಿತ್ತು. ಯಾವೊಬ್ಬ ಮಹಿಳೆಯೂ ಆಭರಣಗಳಿಲ್ಲದೇ ಇರುತ್ತಿರಲಿಲ್ಲ. ಇವನ ಕಾಲದಲ್ಲಿ ಎಂದಿಗೂ ಆರ್ಥಿಕ ದಿವಾಳಿತನ ಉಂಟಾಗಲಿಲ್ಲ. ಮಾರುಕಟ್ಟೆಯಲ್ಲಿ ದಿನಬಳಕೆಯ ವಸ್ತುಗಳು ಹೇರಳವಾಗಿ ದೊರೆಯುತ್ತಿದ್ದವು.” ೨. ಸಾರ್ವಜನಿಕ ಕ...

ತುಘಲಕ್‌ ಸಂತತಿ: ಮಹಮದ್‌ ಬಿನ್‌ ತುಘಲಕ್‌ನ ಆಡಳಿತಾತ್ಮಕ ಪ್ರಯೋಗಗಳು

  ಪೀಠಿಕೆ: ಭಾರತದ ಇತಿಹಾಸದಲ್ಲಿ ಮಹಮದ್‌ ಬಿನ್‌ ತುಘಲಕ್‌ ಒಬ್ಬ ಅಪರೂಪದ ವ್ಯಕ್ತಿ. ಇವನು ಈ ಮನೆತನದ ಶ್ರೇಷ್ಠ ಸುಲ್ತಾನ. ಅಲ್ಲಾವುದ್ದೀನ್ ಖಿಲ್ಜಿಯಂತೆ ಸಮರ್ಥ; ಆದರೆ ಅವನಂತೆ ಯಶಸ್ವಿ ಆಗಲಿಲ್ಲ. ಇವನ ಆಡಳಿತದ ಸು. ೨೫ ವರ್ಷಗಳು ದಂಡಯಾತ್ರೆಗಳು, ದಂಗೆಗಳು ಮತ್ತು ಆಡಳಿತಾತ್ಮಕ ಸುಧಾರಣೆಗಳಿಂದ ಕೂಡಿದ್ದವು. ಇವನಲ್ಲಿದ್ದ ವಿಶೇಷ ಗುಣಗಳ ಕಾರಣ   ಹೊಗಳಿಕೆಗೆ ಪಾತ್ರನಾದರೆ ವಿಫಲ ಯೋಜನೆಗಳ ಕಾರಣ ಚರಿತ್ರಕಾರರ ಟೀಕೆಗೆ ಗುರಿಯಾಗಿದ್ದಾನೆ. ಇವನ ಕಾಲದ ಗಟನೆಗಳ ಕುರಿತು ಇಬ್ನ ಬತೂತ ಮತ್ತು ಜಿಯಾವುದ್ದೀನ್ ಬರೌನಿಯವರ ಬರಹಗಳಿಂದ ಮಾಹಿತಿ ಲಭ್ಯವಾಗುತ್ತದೆ. ಬರೌನಿ ಇವನನ್ನು ಕುರಿತು “ಪರಸ್ಪರ ವಿರುದ್ಧ ಗುಣಗಳ ಮಿಶ್ರಣದ ವ್ಯಕ್ತಿ ” ಎಂದಿದ್ದಾನೆ. ಇಬ್ನ ಬತೂತನು “ಸಮಕಾಲೀನ ಯುಗದ ಸೋಜಿಗದ ವ್ಯಕ್ತಿ!” ಎಂದಿದ್ದಾನೆ. ಇವನು ಬಹುಮುಖ ಪ್ರತಿಭೆಯ, ಪ್ರಚಂಡ ಬುದ್ಧಿಶಕ್ತಿ, ಸ್ಮರಣ ಶಕ್ತಿ, ಪ್ರಚಂಡ ವೀರ, ಬಹುಭಾಷಾ ಪಂಡಿತ, ವಿಭಿನ್ನ ಆಸಕ್ತಿಗಳುಳ್ಳ ವ್ಯಕ್ತಿಯಾಗಿದ್ದ. ಅಲ್ಲದೇ ಅನೇಕ ದೌರ್ಬಲ್ಯಗಳಿಂದ ಕೂಡಿದ್ದ. ಅವುಗಳೆಂದರೆ ಸಮಕಾಲೀನ ವ್ಯವಹಾರ ಜ್ಞಾನದ ಕೊರತೆ, ಕೋಪ, ಚಂಚಲಬುದ್ಧಿ, ಕ್ರೂರತನ ಮತ್ತು ಮಾನಸಿಕ ಅಸಮತೋಲನಗಳು ಇವನ ವ್ಯಕ್ತಿತ್ವದ ಪ್ರಮುಖ ದೌರ್ಬಲ್ಯಗಳು. ಇವನ ಆಡಳಿತ ಕಾಲವು ವಿಜಯಗಳು, ಪ್ರಗತಿಪರ ಯೋಜನೆಗಳು, ಅವುಗಳ ವಿಫಲತೆ ಮತ್ತು ಸಾಮ್ರಾಜ್ಯದಲ್ಲಿ ಎದ್ದ ವಿವಿಧ ದಂಗೆಗಳಿಂದ ಕೂಡಿತ್ತು. ಆರಂಭಿಕ ಜೀವನ ಮತ್ತು ಏಳ...

ನಾಗರೀಕತೆಗಳ ಯುಗ: ಹರಪ್ಪಾ ನಾಗರೀಕತೆಯ ಪ್ರಮುಖ ಲಕ್ಷಣಗಳು

ಹರಪ್ಪ ನಾಗರೀಕತೆ    ಸಾ.ಶ.ವ. 1921 ಕ್ಕೆ ಮುನ್ನ ಪ್ರಾಚೀನ ಭಾರತದ ಇತಿಹಾಸವು ಕೇವಲ ಸಾ.ಶ.ಪೂ. 1500 ಅಂದರೆ ವೈದಿಕ ಸಂಸ್ಕೃತಿಯ ಕಾಲಕ್ಕೆ ಸೀಮಿತಗೊಂಡಿತ್ತು. ಆದರೆ ಮೇಲಿನ ವರ್ಷದಲ್ಲಿ ಅವಿಭಜಿತ ಭಾರತದ ವಾಯುವ್ಯ ಭಾಗದಲ್ಲಿ ಸಾ.ಶ.ವ. 1904  ರಲ್ಲಿ ಲಾರ್ಡ್‌ ಕರ್ಜನ್‌  ಜಾರಿಗೆ ತಂದ ಪುರಾತತ್ವ ವಸ್ತುಗಳ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅಸ್ಥಿತ್ವಕ್ಕೆ ಬಂದ ಭಾರತೀಯ ಪುರಾತತ್ವ ಇಲಾಖೆಯ ನಿರ್ದೇಶಕರಾದ ಸರ್‌ ಜಾನ್‌ ಮಾರ್ಷಲ್‌ರವರ ನೇತೃತ್ವದಲ್ಲಿ ಡಾ. ದಯಾರಾಂ ಸಹಾನಿ ಮತ್ತು ಸಾ.ಶ.ವ. 1922 ರಲ್ಲಿ ಡಾ. ಆರ್.‌ ಡಿ. ಬ್ಯಾನರ್ಜಿಯವರು ನಡೆಸಿದ ಉತ್ಖನನಗಳು ಭಾರತದ ಇತಿಹಾಸವನ್ನು ಸು. 3000 (ಸಾ.ಶ.ಪೂ.) ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿತು. ಅಂದರೆ ಭಾರತದ ಇತಿಹಾಸವು ಅದುವರೆಗೂ ನಂಬಲಾಗಿದ್ದ 1500 ವರ್ಷಗಳಿಗೆ ಬದಲು ಒಟ್ಟು 5000 ವರ್ಷಗಳಷ್ಟು ಪ್ರಾಚೀನತೆಯನ್ನು ಪಡೆಯಿತು. ಭಾರತದ ನಾಗರೀಕತೆಯ ತೊಟ್ಟಿಲು ಎನಿಸಿದ ಸಿಂಧೂ ನದಿ ಮತ್ತು ಅದರ ಉಪನದಿಗಳ ವಿಶಾಲವಾದ ಬಯಲಿನಲ್ಲಿ ಬೆಳೆದುಬಂದ ಈ ನಾಗರೀಕತೆಯು ಅದುವರೆಗೂ ಭೂಮಿಯಲ್ಲಿ ಹೂತುಹೋಗಿತ್ತು. ಇದರ ಅವಶೇಷಗಳನ್ನು ಮೊದಲು ಗಮನಿಸಿದವರು ಚಾರ್ಲ್ಸ್‌ ಮೇಸನ್‌ ಎಂಬ ಬ್ರಿಟೀಷ್‌ ವ್ಯಕ್ತಿ. ನಂತರ 1856 ರಲ್ಲಿ ವಾಯುವ್ಯ ಭಾರತದ ಸಿಂಧ್‌ ಪ್ರಾಂತ್ಯದ ಮೊಹೆಂಜೊ ದಾರೊ ಬಳಿ  ರೈಲ್ವೆ ಮಾರ್ಗದ ನಿರ್ಮಾಣದಲ್ಲಿ ತೊಡಗಿದ್ದ ತಂತ್ರಜ್ಞರಿಗೆ ಮಣ್ಣಿನ ದಿಬ್ಬಗಳನ್ನು ಅಗೆಯುತ್ತಿ...