ಬಹಮನೀ ರಾಜ್ಯ 1347-1538
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ, ಸಂಕಲಿಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಿದೆ. ಬಹಮನೀ ರಾಜ್ಯ 1347-1538 ರ ಅವಧಿಯ ಉತ್ತರ ಕರ್ನಾಟಕದಲ್ಲಿ ಉತ್ತರ ಕರ್ನಾಟಕ ಮತ್ತು ದಖನ್ನಿನ ಬಹುಭಾಗದ ಮೇಲೆ ಒಡೆತನ ನಡೆಸಿದ ಮತ್ತು ಕರ್ನಾಟಕದಲ್ಲಿ ನೆಲೆಹೂಡಿದ ಪ್ರಥಮ ಇಸ್ಲಾಮ್ ರಾಜ್ಯ . ಸುಮಾರು ಎರಡು ಶತಮಾನಗಳ ಕಾಲ ದಕ್ಷಿಣ ಭಾರತದ ಇತಿಹಾಸದಲ್ಲಿ ಈ ರಾಜ್ಯ ಪ್ರಮುಖ ಪಾತ್ರ ವಹಿಸಿತು . ದೆಹಲಿಯ ಸುಲ್ತಾನ ಮಹಮ್ಮದ್ - ಬಿನ್ - ತುಗಲಕನ ಆಳ್ವಿಕೆಯ ಕಾಲದಲ್ಲಿ ಅವನ ದುರಾಡಳಿತದ ವಿರುದ್ಧ ದಖನ್ನಿನ ಸರದಾರರು ದಂಗೆಯೆದ್ದು ದೌಲತಾಬಾದ್ ಕೋಟೆಯನ್ನು ಸ್ವಾಧೀನಪಡಿಸಿಕೊಂಡು ತಮ್ಮಲ್ಲೇ ಒಬ್ಬನಾದ ಆಫ್ ಘನ್ ಇಸ್ಮಾಯಿಲ್ ಮುಖ್ ಎಂಬುವನನ್ನು ನಾಸಿರ್ ಉದ್ದೀನ್ ಷಾ ಎಂಬ ಬಿರುದನ್ನು ನೀಡಿ ದಖನ್ನಿನ ರಾಜನೆಂದು ಘೋಷಿಸಿದರು . ಇಸ್ಮಾಯಿಲ್ ಮುಖ್ ವೃದ್ಧ , ಸುಖಲೋಲುಪ , ಜವಾಬ್ದಾರಿ ಸ್ಥಾನಕ್ಕೆ ಅನರ್ಹನೆನಿಸಿದ . ಸ್ವಲ್ಪ ಕಾಲದಲ್ಲಿಯೇ ಈತ ತನಗಿಂತಲೂ ಸಮರ್ಥನಾದ ಹಸನ್ ಗಂಗುವಿಗೆ ಅಧಿಕಾರ ಬಿಟ್ಟುಕೊಟ್ಟ . ದಖನ್ನಿನ ಸರದಾರರು ಇವನನ್ನು ಅಬುಲ್ ಮುಜಫರ್ ಅಲ್ಲಾಉದ್ದೀನ್ ಹಸನ್ ಬಹವ i ನ್ ಷಾ ಎಂಬ ಬಿರುದಿನಿಂದ 1347 ಆಗಸ್ಟ್ 3 ರಂದು ರಾಜನೆಂದು ಘೋಷಿಸಿದರು . ಹಸನ್ ಪರ್ಷಿಯನ್ ವೀರ ಇಸ್ ಫಂದಿಯಾರ್ ನ ಮಗ ಬಹ...