Posts

Showing posts from October, 2020

ಭಾರತದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ

ಭಾರತದ ಭೌಗೋಳಿಕ ಲಕ್ಷಣಗಳು . Geography of India. ಭಾರತದ ಇತಿಹಾಸದ ಮೇಲೆ ಅದರ ಪ್ರಭಾವ .    ಯಾವುದೇ ದೇಶದ ಇತಿಹಾಸವು ಆಯಾ ದೇಶದ ಭೌಗೋಳಿಕ ಅಂಶಗಳಿಂದ ಪ್ರಭಾವಿತವಾಗಿರುತ್ತದೆ . ಭೌಗೋಳಿಕ ಅಂಶಗಳು ಮಾನವನ ಚಟುವಟಿಕೆಗಳ ಮೇಲೆ ತಮ್ಮ ಪ್ರಭಾವ ಬೀರುತ್ತವೆ . ಭೌಗೋಳಿಕ ಅಂಶಗಳು ಪರ್ವತಗಳು , ನದಿಗಳು , ಬೆಟ್ಟ - ಗುಡ್ಡಗಳು , ಅರಣ್ಯಗಳು , ಹವಾಗುಣ , ಭೂಗುಣ ಇತ್ಯಾದಿ . ಇವುಗಳು ಮನುಷ್ಯನ ಮೇಲೆ ತಮ್ಮ ಪ್ರಭಾವ ಬೀರುವುದೇಕೆ ? ಮಾನವ ಪ್ರಕೃತಿಯ ಶಿಶು ; ಕಾರಣ ಅವನ ಮೇಲೆ ಪ್ರಕೃತಿಯ ಪ್ರಭಾವ ಇದ್ದೇ ಇರುತ್ತದೆ . ಅಂತೆಯೇ , ಇತಿಹಾಸದ ಹುಟ್ಟು , ಬೆಳವಣಿಗೆ ಮತ್ತು ನಿರಂತರತೆಗಳು ಭೌಗೋಳಿಕ ಅಂಶಗಳಿಂದ ಪ್ರಭಾವಿತವಾಗಿರುತ್ತವೆ . ಜನರ ರಾಜಕೀಯ , ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಈ ಅಂಶಗಳಿಂದ ಪ್ರಭಾವಿತ . ಎಲ್ಲಾ ನಾಗರೀಕತೆಗಳು ನದಿಗಳ ತೀರಗಳಲ್ಲಿಯೇ ಹುಟ್ಟಿ ಬೆಳೆದಿವೆ . ಉದಾ :- ಈಜಿಪ್ಟ್ ನಾಗರೀಕತೆ . ಹರಪ್ಪ ನಾಗರೀಕತೆ . ಇಂಗ್ಲೆಂಡ್ ಸುದೀರ್ಘ ಸಮುದ್ರ ತೀರ ಹೊಂದಿರುವ ಕಾರಣ ನೌಕಾಯಾನದಲ್ಲಿ ಶ್ರೇಷ್ಠತೆ ಸಾಧಿಸಿತು ; ಜಗತ್ತಿನ ಮೇಲೆ ಒಡೆತನ ಸಾಧಿಸಿತು . ಭೂಗೋಳದ ಅಧ್ಯಯನ ಏಕೆ? ಇತಿಹಾಸವು ಭೂಗೋಳದ ನಿರ್ಮಾಣ . ಭೂಗೋಳವನ್ನು ತಿಳಿಯದೇ ಅದರ ಇತಿಹಾಸ ಅಧ್ಯಯನ ಅಪೂರ್ಣ ; ಅಸಾಧ್ಯ . ಭೂಗೋಳವಿಲ್ಲದೇ ಇತಿಹಾಸವಿಲ್ಲ

ಅಲ್ಲಾವುದ್ದೀನ್‌ ಖಿಲ್ಜಿಯ ದಿಗ್ವಿಜಯಗಳು & ಸಾಮ್ರಾಜ್ಯ ವಿಸ್ತರಣೆ, 3ನೆ ಸೆಮಿಸ್ಟರ್‌ ಗಾಗಿ, ಕ.ವಿ, ಧಾರವಾಡ

ಅಲ್ಲಾವುದ್ದೀನನ ದಿಗ್ವಿಜಯಗಳು ಅಥವಾ ಸಾಮ್ರಾಜ್ಯ ವಿಸ್ತರಣೆ ಸಾಮ್ರಾಜ್ಯ ವಿಸ್ತರಣೆಯನ್ನು ಎರಡು ಹಂತಗಳಲ್ಲಿ ಅಧ್ಯಯನ ಮಾಡಬಹುದು . 1.      ಉತ್ತರ ಭಾರತ ಮತ್ತು 2. ದಕ್ಷಿಣ ಭಾರತದ ಮೇಲಿನ ವಿಜಯಗಳು . ಉತ್ತರ ಭಾರತದ ಯುದ್ಧಗಳು ಗುಜರಾತ್ ೧೨೯೯ :- ಗುಜರಾತ್ ಶ್ರೀಮಂತ ಪ್ರಾಂತ್ಯ. ರಾಜಾ ಕರ್ಣದೇವನ ಆಳ್ವಿಕೆ. ನುಸ್ರತ್ ಕಾನ್ ನೇತೃತ್ವದಲ್ಲಿ ದಾಳಿ. ಕರ್ಣದೇವನ ಪ್ರಬಲ ವಿರೋಧ, ಆದರೂ ಖಿಲ್ಜಿ ಸೈನ್ಯದ ಗೆಲುವು. ಕರ್ಣದೇವ ಪಲಾಯನ – ದೇವಗಿರಿಗೆ – ತನ್ನ ಮಗಳು ದೇವಲ ದೇವಿಯೊಂದಿಗೆ. ಕರ್ಣನ ರಾಣಿ ಕಮಲಾದೇವಿ ಸೆರೆ, ದೆಹಲಿಗೆ ರವಾನೆ. ಮುಂದೆ ಅಲ್ಲಾನ ರಾಣಿ. ‌ ಗುಜರಾತ್ ಲೂಟಿ , ಅಪಾರ ಸಂಪತ್ತು ವಶ . ನುಸ್ರತ್ ಖಾನ್ ಗುಜರಾತಿನ ಬಂದರು ಕ್ಯಾಂಬೆವರೆಗೆ ಮುನ್ನುಗ್ಗಿದ . ಇಲ್ಲಿಯೇ ’ ಕಫೂರ್ ” ಎಂಬ ಗುಲಾಮ ನಪುಂಸಕನ ಖರೀದಿ . ೧೦೦೦ ದಿನಾರಗಳಿಗೆ . ಮುಂದೆ ಖಿಲ್ಜಿಯ ಪರಮಾಪ್ತ ಮತ್ತು ದಕ್ಷಿಣದ ದಂಡಯಾತ್ರೆಗಳ ನಾಯಕ . ರಣಥಂಬೋರ್ ೧೩೦೧ :- ರಣಥಂಬೋ‌ರ್ ಬಲಿಷ್ಠ ಕೋಟೆ. ರಾಣಾ ಹಮ್ಮೀರದೇವ ಇದರ ರಾಜ. ನುಸ್ರತ್ ನೇತೃತ್ವದಲ್ಲಿ ಮುತ್ತಿಗೆ. ಹಮ್ಮೀರದೇವನ ಪ್ರಬಲ ವಿರೋಧ. ನುಸ್ರತ್ ಖಾನ್ ಕಲ್ಲಿನ ಏಟು ತಿಂದು ಮರಣ. ಅಲ್ಲಾ ತಾನೇ ನೇತೃತ್ವ ವಹಿಸಿಕೊಂಡ. ಕುತಂತ್ರ – ರಣಮಲ್ಲನೆಂಬ ದ್ರೋಹಿಯ ಸಹಾಯದಿಂದ ಕೋಟೆ ಪ್ರವೇಶ. ಕೋಟೆಯ ವಶ – ರಣಮಲ್ಲನ ಕೊಲೆ. ಅಧಿಕಾರಿಯಾಗಿ ಉಲುಗ್ ಖಾನನ ನೇಮಕ. ಚಿತ್ತೋಡ್

ಇತಿಹಾಸದೊಂದಿಗೆ ಇತರೆ ಸಮಾಜ ವಿಜ್ಞಾನಗಳು & ಸಹಾಯಕ ಶಾಸ್ತ್ರಗಳ ಸಂಬಂಧಗಳು

ಇತಿಹಾಸದೊಂದಿಗೆ ಇತರೆ ಸಮಾಜಶಾಸ್ತ್ರಗಳು & ಸಹಾಯಕ ಶಿಸ್ತುಗಳ ಸಂಬಂಧ    ಇತಿಹಾಸವು ಇಂದು ಸ್ವತಂತ್ರವಾದ ಅಧ್ಯಯನದ ವಿಷಯವಾದರೂ ಅದಕ್ಕೆ ವಿವಿಧ ಸಾಮಾಜಿಕ ವಿಜ್ಞಾನಗಳೊಂದಿಗೆ ಪೂರಕ ಸಂಬಂಧವಿರುವುದು ಕಂಡುಬರುತ್ತದೆ. ಅಲ್ಲದೇ ಇತಿಹಾಸ ಅಧ್ಯಯನಕ್ಕೆ ಮತ್ತು ಅದರ ಪುನರ್‌ ರಚನೆಗೆ ಇತರೆ ಕೆಲವು ಸಹಾಯಕ ಶಿಸ್ತುಗಳು ಅಂದರೆ ಶಾಸ್ತ್ರಗಳ ಜ್ಞಾನ ಅಗತ್ಯ. ಕಾರಣ ಇತಿಹಾಸದೊಂದಿಗೆ ಮಾನವಿಕ ಅಥವಾ ಸಾಮಾಜಿಕ ವಿಜ್ಞಾನಗಳು ಮತ್ತು ಸಹಾಯಕ ಶಿಸ್ತುಗಳು ಅಥವಾ ಶಾಸ್ತ್ರಗಳ ಅಧ್ಯಯನ ಅಗತ್ಯವೆನಿಸಿದೆ. • Archeology , the study of human activity through the recovery and analysis of material culture. ಇತಿಹಾಸದ ಪುನರ ರಚನೆಗೆ ಅಗತ್ಯವಾದ ಕೆಲವು ಸಹಾಯಕ ಶಿಸ್ತುಗಳ ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ಕೊಡಲಾಗಿದೆ. ಪುರಾತತ್ವ ಶಾಸ್ತ್ರ:- ಪಳೆಯುಳಿಕೆಗಳ ಸಂಗ್ರಹಣೆ ಮತ್ತು ಅಧ್ಯಯನದ ಮೂಲಕ ಆದಿಮಾನವನ ಚಟುವಟಿಕೆಗಳನ್ನು ಅಧ್ಯಯನ ಮಾಡುವುದು. Chronology , the study of the sequence of past events . ಕಾಲಗಣನಾಶಾಸ್ತ್ರ:- ಐತಿಹಾಸಿಕ ಘಟನೆಗಳ ಕಾಲಾನುಕ್ರಮಣಿಕೆಯ ಅಧ್ಯಯನ. Epigraphy , the study of ancient inscriptions ಶಾಸನಶಾಸ್ತ್ರ:- ಪ್ರಾಚೀನ ಶಾಸನಗಳ ಅಧ್ಯಯನ. Numismatics , the study of coins ನಾಣ್ಯಶಾಸ್ತ್ರ:- ನಾಣ್ಯಗಳ ವ್ಯವಸ್ಥಿತ ಅಧ್ಯಯನ. Paleography , the study of ol

ಇತಿಹಾಸದ ವಿವಿಧ ನಿರೂಪಣೆಗಳು- Definitions of History.

ಇತಿಹಾಸದ ನಿರೂಪಣೆಗಳು “ಜೀವನವೇ ಇತಿಹಾಸ” ಎಂಬುದೊಂದು ಸರಳ ಆದರೆ ವಿಶಾಲ ವ್ಯಾಪ್ತಿಯ ಅರ್ಥವುಳ್ಳ ನಿರೂಪಣೆ. ಸಂಸ್ಕೃತದ ನಿರೂಪಣೆಯೊಂದು “ಧರ್ಮ ಅರ್ಥ ಕಾಮ ಮೋಕ್ಷಾಣಾಂ ಉಪದೇಶ ಸಮನ್ವಿತಾಂಪೂರ್ವವೃತ್ತಂ ಕಥಾಯುಕ್ತಂ ಇತಿಹಾಸ ಪ್ರಚಕ್ಷತೆ” ಎಂದಿದೆ. ಎರೊಡಟಾಸ್:‌ ಸಾಮಾನ್ಯ ಶಕ ಪೂರ್ವ 484-424; ಗ್ರೀಕ್.‌ ಇತಿಹಾಸದ ಪಿತಾಮಹ. “ಮುಂದಿನ ಪೀಳಿಗೆಯು ನೆನಪಿಡಬೇಕಾದ ಮಹಾನ್‌ ವೀರರ ಅಥವಾ ಮಹತ್ವಪೂರ್ಣ ಘಟನೆಗಳ ದಾಖಲೆಯೇ ಇತಿಹಾಸ” ಡಯೋನೀಸಿಯಸ್:‌ ಗ್ರೀಕ್:‌ “ನಿದರ್ಶನಗಳ ಮೂಲಕ ತತ್ವಶಾಸ್ತ್ರ ಅಥವಾ ನೀತಿಶಾಸ್ತ್ರವನ್ನು ಹೇಳಿಕೊಡುವುದೇ ಇತಿಹಾಸ” ಅರಿಸ್ಟಾಟಲ್:‌ ಗ್ರೀಕ್: “ಬದಲಾಗದ ಗತಕಾಲದ ವೃತ್ತಾಂತವೇ ಇತಿಹಾಸ” ಎಡ್ವರ್ಡ್‌ ಫ್ರೀಮನ್:‌ ಆಂಗ್ಲ: “ಭೂತಕಾಲದ ರಾಜಕೀಯವೇ ವರ್ತಮಾನದ ಇತಿಹಾಸ & ಇಂದಿನ ರಾಜಕೀಯವೇ ಮುಂದಿನ ಇತಿಹಾಸ” Past politics is the present history and present politics will be future history. ಸಂಕುಚಿತವಾದ ನಿರೂಪಣೆ ಎನಿಸಿದೆ. ಥಾಮಸ್‌ ಕಾರ್ಲೈಲ್:‌ ಆಂಗ್ಲ: “ವ್ಯಕ್ತಿಗಳ ಜೀವನ ಚರಿತ್ರೆಯೇ ಇತಿಹಾಸ” ಕಾರ್ಲ್‌ ಮಾರ್ಕ್ಸ್‌: ಜರ್ಮನಿ: 1818-1883: “ಉಳ್ಳವರ ಮತ್ತು ಇಲ್ಲದವರ ನಡುವಿನ ಸಂಘರ್ಷವೇ ಇತಿಹಾಸ” ಜಾದೂನಾಥ್‌ ಸರ್ಕಾರ್:‌ ಭಾರತ: 1870-1958: “ಇತಿಹಾಸ ಮಾನವನ ಎಲ್ಲಾ ಅನುಭವಗಳನ್ನು, ನಡವಳಿಗಳನ್ನು, ಧರ್ಮ, ನಂಬಿಕೆ, ರೀತಿ-ನೀತಿ, ಮತ್ತು ಎಲ್ಲಾ ಉದಾತ್ತ ಚಿಂತನೆಗಳನ್ನೂ