Posts

Showing posts from November, 2020

ಅಲ್ಲಾವುದ್ದೀನ್‌ ಖಿಲ್ಜಿಯ ಆಡಳಿತಾತ್ಮಕ ಸುಧಾರಣೆಗಳು ಭಾಗ ೨ - ಮಾರುಕಟ್ಟೆ ಸುಧಾರಣೆಗಳು.

ಮಾರುಕಟ್ಟೆ ಸುಧಾರಣೆಗಳು    ಅಲ್ಲಾನು ಈ ಕ್ಷೇತ್ರದಲ್ಲಿ ಮಾಡಿದ ಸುಧಾರಣೆಗಳು ಅವನ ಕಾಲಕ್ಕೆ ಮೀರಿದ ಸುಧಾರಣೆಗಳಾಗಿದ್ದವು. ಸಮಕಾಲೀನ ಚರಿತ್ರಕಾರರು ಇವನ ಮಾರುಕಟ್ಟೆ ಸುಧಾರಣೆಗಳನ್ನು ಕುರಿತು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಅವರುಗಳೆಂದರೆ, ಅಮೀ‌ರ್ ಖುಸ್ರೊ ಮತ್ತು ಜಿಯಾವುದ್ದೀನ್ ಬರೌನಿ. ಅಮೀರ್‌ ಖುಸ್ರೋ ಅಭಿಪ್ರಾಯ: “ತನ್ನ ಪ್ರಜೆಗಳ ಅನುಕೂಲಕ್ಕಾಗಿ ಖಿಲ್ಜಿ ಈ ಸುಧಾರಣೆಗಳನ್ನು ಜಾರಿಗೆ ತಂದನು.” ಜಿಯಾವುದ್ದೀನ್‌ ಬರೌನಿಯ ಅಭಿಪ್ರಾಯ: “ಅಲ್ಲಾನು ತನ್ನ ಸೈನಿಕರಿಗೆ ಕನಿಷ್ಠ ವೇತನ ನಿಗದಿ ಮಾಡಿದ್ದ; ಕಾರಣ ಸೈನಿಕರಿಗೆ ಕಡಿಮೆ ಬೆಲೆಗೆ ಜೀವನಾವಶ್ಯಕ ವಸ್ತುಗಳು ದೊರೆಯುವಂತೆ ಮಾಡಲು ಮಾರುಕಟ್ಟೆ ಸುಧಾರಣೆಗಳನ್ನು ಜಾರಿಗೊಳಿಸಿದ.” ಬರೌನಿಯ ಮತ್ತೊಂದು ಅಭಿಪ್ರಾಯ: “ಅಲ್ಲಾನು ತನ್ನ ರಾಜ್ಯದಲ್ಲಿ ವ್ಯಾಪಾರದಿಂದ ಅಧಿಕ ಲಾಭ ಗಳಿಸುತ್ತಿದ್ದ ಹಿಂದೂ ವ್ಯಾಪಾರಿಗಳನ್ನು ದುರ್ಬಲಗೊಳಿಸಲು ಮಾರುಕಟ್ಟೆ ಸುಧಾರಣೆಗಳನ್ನು ಜಾರಿಗೊಳಿಸಿದನು ” ಮಾರುಕಟ್ಟೆ ಸುಧಾರಣೆಯ ಕ್ರಮಗಳು: ಖಿಲ್ಜಿಯು ಕೈಗೊಂಡ ಮಾರುಕಟ್ಟೆ ಸುಧಾರಣೆಯ ಪ್ರಮುಖ ಕ್ರಮಗಳು ಕೆಳಕಂಡಂತಿವೆ: ಬೆಲೆಗಳ ನಿಯಂತ್ರಣ, ಸರ್ಕಾರಿ ಗೋದಾಮುಗಳ ಸ್ಥಾಪನೆ, ಸರಕು ಸಾಗಾಣಿಕೆಗೆ ಕ್ರಮ, ವಿವಿಧ ಮಾರುಕಟ್ಟೆಗಳ ಸ್ಥಾಪನೆ, ಮೇಲ್ವಿಚಾರಣೆಗೆ ಪ್ರತ್ಯೇಕ ಇಲಾಖೆ ಮತ್ತು ಅಧಿಕಾರಿಗಳು, ಗೂಢಾಚಾರರ ನೇಮಕ & ನಿಯಮ ಮೀರಿದವರಿಗೆ ಉಗ್ರ ಶಿಕ್ಷೆಗಳು. ಬೆಲೆಗಳ ನಿಗದಿ ಅಥ...

ಅಲ್ಲಾವುದ್ದೀನ್‌ ಖಿಲ್ಜಿಯ ಆಡಳಿತ ಪದ್ಧತಿ ಭಾಗ ೧

ಅಲ್ಲಾವುದ್ದೀನ್‌ ಖಿಲ್ಜಿಯ   ಆಡಳಿತಾತ್ಮಕ                                      ಸುಧಾರಣೆಗಳು .    ರಣರಂಗದಲ್ಲಿ ಸಮರ್ಥ ಯೋಧನಾಗಿದ್ದಂತೆ ಆಡಳಿತದಲ್ಲೂ ನಿಪುಣನಾಗಿದ್ದ . ಇವನ ಸಾಮ್ರಾಜ್ಯ ವಿಸ್ತರಣೆಯಷ್ಟೇ ಆಡಳಿತ ಕಾರ್ಯಗಳು ಸಹಾ ಮಹತ್ವ ಪಡೆದಿವೆ . ಪೂರ್ವಿಕರಿಂದ ಉಂಟಾದ ಅವ್ಯವಸ್ಥೆಯನ್ನು ತನ್ನ ಆಡಳಿತ ಸುಧಾರಣೆಗಳಿಂದ ಸರಿಪಡಿಸಿದ . ಅನಕ್ಷರಸ್ಥನಾದರೂ ತನ್ನ ಬುದ್ಧಿಬಲದಿಂದ ಗಮನಾರ್ಹ ಸುಧಾರಣೆಗಳನ್ನು ಜಾರಿಗೊಳಿಸಿದ. ಇವನ ಆಡಳಿತಾತ್ಮಕ ಸುಧಾರಣೆಗಳನ್ನು ಕೆಳಕಂಡಂತೆ ವಿವರಿಸಬಹುದು: 1.       ಖಿಲ್ಜಿಯ ರಾಜಪ್ರಭುತ್ವದ ನೀತಿ.    ಇವನು ಬಲ್ಬನ್ನನ ರಾಜಪ್ರಭುತ್ವದ ಕಲ್ಪನೆಯಲ್ಲಿ ನಂಬಿಕೆ ಇಟ್ಟಿದ್ದ . ಸುಲ್ತಾನ ದೇವರ ಪ್ರತಿನಿಧಿ ಎಂದು ನಂಬಿದ್ದ . ಅವನು ಭೂಮಿಯ ಮೇಲಿನ ಇತರರಿಗಿಂತ ಶ್ರೇಷ್ಠ ಎಂದು ನಂಬಿದ್ದ . ಅವನ ಇಚ್ಛೆಗೆ ವಿರುದ್ಧವಾಗಿ ನಡೆಯುವುದು ದೇವರ ಇಚ್ಛೆಗೆ ವಿರುದ್ಧವಾಗಿ ನಡೆದಂತೆ ಎಂಬುದು ಅವನ ಅಭಿಪ್ರಾಯವಾಗಿತ್ತು. ಉಲೇಮಾಗಳನ್ನು ಆಡಳಿತದಿಂದ ದೂರ ಇಟ್ಟಿದ್ದ . ಸರದಾರರ ಅಧಿಕಾರಗಳನ್ನು ...

ಕರ್ನಾಟಕದ ಇತಿಹಾಸ ರಚನೆಯ ಸಾಹಿತ್ಯಾಧಾರಗಳು

ಸಾಹಿತ್ಯಾಧಾರಗಳು    ಲಿಖಿತ ಅಂದರೆ ಬರವಣಿಗೆಯ ರೂಪದಲ್ಲಿರುವ ಆಧಾರಗಳನ್ನು ಸಾಹಿತ್ಯಾಧಾರಗಳು ಎನ್ನುವರು. ಇವುಗಳು ದೇಶೀಯ ಮತ್ತು ವಿದೇಶೀಯ ಬರವಣಿಗೆ ಎರಡರಲ್ಲೂ ಕಂಡುಬರುತ್ತವೆ. ದೇಶೀಯ ಭಾಷೆಗಳಾದ ಪಾಲಿ, ಪ್ರಾಕೃತ, ಸಂಸ್ಕೃತ, ಅರ್ಧಮಾಗಧಿ, ಕನ್ನಡ, ತೆಲುಗು, ತಮಿಳು ಮತ್ತು ಇನ್ನಿತರ ಭಾಷೆಗಳಲ್ಲಿ ಈ ಆಧಾರಗಳು ಕಂಡುಬರುತ್ತವೆ. ವಿದೇಶೀಯ ಭಾಷೆಗಳಾದ ಗ್ರೀಕ್‌, ರೋಮನ್‌, ಪರ್ಷಿಯಾ, ಅರಬ್‌, ತುರ್ಕಿ ಮತ್ತು ಚೀನೀ ಭಾಷೆಗಳಲ್ಲೂ ಸಹ ಕಂಡುಬರುತ್ತವೆ. ಧಾರ್ಮಿಕ ಕೃತಿಗಳು, ಲೌಕಿಕ ಕೃತಿಗಳು, ಐತಿಹಾಸಿಕ ಕೃತಿಗಳು, ಪ್ರವಾಸ ಕಥನಗಳು – ಹೀಗೆ ವಿವಿಧ ರೀತಿಯ ಬರವಣಿಗೆಗಳನ್ನು ಇವು ಒಳಗೊಳ್ಳುತ್ತವೆ.     ಅಧ್ಯಯನದ ದೃಷ್ಟಿಯಿಂದ ಇವುಗಳನ್ನು 1. ದೇಶೀಯ ಮತ್ತು 2. ವಿದೇಶೀಯ ಬರವಣಿಗೆಗಳು ಎಂದು ವಿಭಾಗಿಸಬಹುದು. 1.      ದೇಶೀಯ ಬರವಣಿಗೆಗಳು : ಸ್ಥಳೀಯ ಭಾಷೆಗಳಲ್ಲಿ  ರಚಿತವಾದ ಆಧಾರಗಳಿವು. ಆಶ್ರಿತ ಕವಿಗಳು ರಚಿಸಿದ ಐತಿಹಾಸಿಕ ಅಥವಾ ಲೌಕಿಕ ಸಾಹಿತ್ಯ ಕೃತಿಗಳು ಇತಿಹಾಸ ಪುನರ್‌ ರಚನೆಗೆ ಹೆಚ್ಚಿನ ಮಾಹಿತಿ ಒದಗಿಸುತ್ತವೆ. ಈ ಸಾಹಿತ್ಯದಲ್ಲಿ ಆತ್ಮಚರಿತ್ರೆಗಳು, ಜೀವನಚರಿತ್ರೆಗಳು, ರಾಜಾವಳಿಗಳು, ನಾಟಕಗಳು, ಕಾದಂಬರಿಗಳು, ವ್ಯಾಕರಣ ಗ್ರಂಥಗಳು ಒಳಗೊಂಡಿರುತ್ತವೆ. ಹೆಚ್ಚು ನಂಬಲರ್ಹ ಮಾಹಿತಿ ಇವುಗಳಿಂದ ಲಭ್ಯ.    ಕರ್ನಾಟಕದ ಇತಿಹಾಸ ರಚನೆಗೆ ಪೂರಕವಾದ ಕೆಲವು ಪ್ರ...

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಕರ್ನಾಟಕ ಇತಿಹಾಸದ ಪುನರ್‌ ರಚನೆಯ ಆಧಾರಗಳು     ಗತಿಸಿಹೋದ ಘಟನೆಗಳ ವ್ಯವಸ್ಥಿತ ಅಧ್ಯಯನವೇ ಇತಿಹಾಸ. ಗತಕಾಲದ ಘಟನೆಗಳನ್ನು ಕಾಲಾನುಕ್ರಮದಲ್ಲಿ ಸಂಯೋಜಿಸುವ ಕಾರ್ಯವನ್ನು ಇತಿಹಾಸದ ಪುನರ್‌ ರಚನೆ ಎನ್ನುವರು. ಇತಿಹಾಸದ ಪುನರ್‌ ರಚನೆಗೆ ಆಧಾರಗಳು ಅತ್ಯವಶ್ಯಕ. ಆಧಾರಗಳಿಲ್ಲದೇ ಇತಿಹಾಸವಿಲ್ಲ. ಆಧಾರಗಳಿಲ್ಲದೇ ರಚಿಸಿದ ಇತಿಹಾಸವು ಇತಿಹಾಸವಲ್ಲ; ಅದು ಕಪೋಲಕಲ್ಪಿತ ಅಥವಾ ಕಟ್ಟುಕಥೆ ಎನಿಸಿಕೊಳ್ಳುತ್ತದೆ. ಇತಿಹಾಸ ಪುನರ್‌ ರಚನೆಗೆ ಬಳಸುವ ಆಧಾರಗಳನ್ನು ಮೂಲಾಧಾರಗಳು ಎಂತಲೂ ಕರೆಯುವರು.  ಇಂತಹ ಮೂಲಾಧಾರಗಳು ಐತಿಹಾಸಿಕ ಮಹತ್ವವನ್ನು ಹೊಂದಿರಬೇಕು. ಯಾವುದೇ ದೇಶದ ಇತಿಹಾಸ ಪುನರ್‌ ರಚನೆಗೆ ವಿವಿಧ ಮೂಲಾಧಾರಗಳ ಅವಶ್ಯಕತೆ ಇರುತ್ತದೆ. ಆದರೆ ಪ್ರಾಚೀನ ಭಾರತದ ಇತಿಹಾಸ ರಚಿಸುವಲ್ಲಿ ಆಧಾರಗಳ ಕೊರತೆಯನ್ನು ವಿದ್ವಾಂಸರು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಪ್ರಾಚೀನ ಭಾರತೀಯರಿಗೆ ಐತಿಹಾಸಿಕ ಪ್ರಜ್ಞೆಯ ಕೊರತೆ ಇದ್ದು, ಅವರು ಇತಿಹಾಸದ ಕೃತಿಗಳನ್ನು ರಚಿಸಿಲ್ಲ ಎಂಬುದು ಬಹುತೇಕ ವಿದ್ವಾಂಸರ ಅಭಿಪ್ರಾಯ. ಪ್ರಾಚೀನ ಭಾರತದ ಲಭ್ಯ ಸಾಹಿತ್ಯವು ಅಧಿಕ ಪ್ರಮಾಣದಲ್ಲಿ ಧಾರ್ಮಿಕ ಅಂಶಗಳನ್ನು ಒಳಗೊಂಡಿರುವುದೇ ಇದಕ್ಕೆ ಕಾರಣ. ಆದ್ದರಿಂದಲೇ ಅರಬ್‌ ವಿದ್ವಾಂಸ ಅಲ್ಬೇರೂನಿ (12 ನೆ ಶತಮಾನದ ಆದಿಭಾಗ) “ಭಾರತೀಯರನ್ನು ತಮ್ಮ ಪೂರ್ವ ಇತಿಹಾಸದ ಬಗ್ಗೆ ಕೇಳಿದರೆ ಏಕಪ್ರಕಾರವಾಗಿ ಕತೆ ಹೇಳಲು ತೊಡಗುತ್ತಾರೆ” ಎಂದಿದ್ದಾನೆ. R.C ಮಜೂಮದಾರ್‌ ಅವ...

Battle of Buxar ಬಕ್ಸಾರ್‌ ಕದನ - 1764

                         ಬಕ್ಸಾರ್ ‌ ಕದನ ೧೭೬೪ •   ಮೀರ್ ಖಾಸೀಂ , ಶೂಜ ಉದ್ ದೌಲ್ ಮತ್ತು ಮೊಗಲ್ ಚಕ್ರವರ್ತಿ ೨ನೆ ಶಾ ಆಲಂ ಹಾಗೂ ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿಯ ನಡುವೆ . •   ಕೆಲವು ಪೂರಕ ಮಾಹಿತಿಗಳು . •   ಬಕ್ಸಾರ್ ‌ - ಇದು ಪಾಟ್ನಾದಿಂದ ( ಬಿಹಾರ ) ಸು . ೧೮೦ ಕಿ . ಮೀ . ದೂರದಲ್ಲಿರುವ ಪ್ರದೇಶ . •   ಅಂದಿಗೆ ಇದೊಂದು ವ್ಯಾಪಾರಿ ಕೇಂದ್ರ ಮತ್ತು ಸಣ್ಣ ಕೋಟೆಯೊಂದರಿಂದ ಕೂಡಿತ್ತು . •   ಗಂಗಾನದಿಯ ದಡದಲ್ಲಿದೆ . ಸ್ವಲ್ಪ ಹಿನ್ನೆಲೆ . . . • ಪ್ಲಾಸಿ ಕದನಾನಂತರ ಮೀರ್ ಜಾಫರನನ್ನು ಬಂಗಾಳದ ನವಾಬನನ್ನಾಗಿ ಮಾಡಲಾಗಿತ್ತು . • ಈತ ಮತ್ತು ಕಂಪೆನಿಯ ನಡುವೆ ಆರಂಭದಲ್ಲಿ ಬಾಂಧವ್ಯ ಉತ್ತಮವಾಗಿತ್ತು . • ಆದರೆ , ಕ್ರಮೇಣ ಬ್ರಿಟಿಷರ ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸಲು ಜಾಫರನಿಗೆ ಆಗಲಿಲ್ಲ . • ಬ್ರಿಟಿಷರ ಹಿಡಿತದಿಂದ ಮುಕ್ತನಾಗಲು ಬಂಗಾಳದ ಚಿನ್ಸುರದಲ್ಲಿದ್ದ ಡಚ್ಚರ ಸಹಾಯ ಕೋರಿದ . • ಈ ವೇಳೆಗೆ ಬಂಗಾಳದ ಗವರ್ನರ್ ‌ ಆಗಿದ್ದ ರಾಬರ್ಟ್ ಕ್ಲೈವ್ ಡಚ್ಚರನ್ನು ಪುಲ್ಟಾ ಎಂಬಲ್ಲಿ ನಿರ್ಣಾಯಕವಾಗಿ ಸೋಲಿಸಿ “ ಚಿನ್ಸುರ ಒಪ್ಪಂದ ” ಮಾಡಿಕೊಂಡ . • ಚಿನ್ಸುರ ಒಪ್ಪಂದ – ಬ್ರಿಟಿಷರು...