Posts

Showing posts from December, 2021

ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾರ್ಗದರ್ಶಕರು ಪಾಲಿಸಬೇಕಾದ ಕೆಲವು ನಿಯಮಾವಳಿಗಳು

ಪ್ರಾದೇಶಿಕ ಮಟ್ಟದ ಮಾರ್ಗದರ್ಶಕರ ನಡತೆ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ಅನ್ವಯಿಸುವ ನೀತಿ ಮತ್ತು ನಿಯಮಾವಳಿಗಳು. 1. ಮಾರ್ಗದರ್ಶಕರು ಕರ್ತವ್ಯನಿರತರಾಗಿರುವಾಗ ಅಧಿಕೃತ ಗುರುತಿನ ಪತ್ರವನ್ನು ಹೊಂದಿರಬೇಕು ಮತ್ತು ತಮ್ಮ ಹೆಸರಿನ ವಿವರವುಳ್ಳ Badge ಅನ್ನು ಧರಿಸಿರಬೇಕು. 2. ಪ್ರವಾಸೋದ್ಯಮ ಇಲಾಖೆಯು ನೀಡಿರುವ ಮಾರ್ಗದರ್ಶಕರ ಗುರುತಿನ ಚೀಟಿಯು ವೈಯುಕ್ತಿಕ ದಾಖಲೆಯಾಗಿದ್ದು, ಅದನ್ನು ಅವರು ಬೇರೆ ಯಾರಿಗೂ ಉಪಯೋಗಿಸಲು ನೀಡಬಾರದು. ಒಂದುವೇಳೆ ಹಾಗೆ ಮಾಡಿದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ ಮತ್ತು ಅವರ ಪರವಾನಗಿಯನ್ನು ರದ್ದುಪಡಿಸಬಹುದು. 3. ಒಂದುವೇಳೆ ಗುರುತಿನ ಚೀಟಿ ಕಳೆದುಹೋದಲ್ಲಿ ಅಥವಾ ಹಾಳಾದಲ್ಲಿ ನಿಗದಿತ ಶುಲ್ಕ ಭರಿಸಿ ಹೊಸ ಗುರುತಿನ ಚೀಟಿಯನ್ನು ಪಡೆಯುವುದು. ಕಳೆದು ಹೋಗಿದ್ದಲ್ಲಿ ಪ್ರಥಮ ಮಾಹಿತಿ ವರದಿಯನ್ನು ಸಂಬಂಧಿತ ಅಧಿಕಾರಿಗೆ ಸಲ್ಲಿಸಬೇಕು. 4. ಮಾರ್ಗದರ್ಶಕರು ಪ್ರವಾಸಿಗರಿಂದ ಯಾವುದೇ ಭಕ್ಷೀಸು ರೂಪದ ಹಣವನ್ನು ನಿರೀಕ್ಷಿಸುವಂತಿಲ್ಲ. 5. ನೋಂದಾಯಿತ ಮಾರ್ಗದರ್ಶಕರು ಕರ್ತವ್ಯದ ವೇಳೆಯಲ್ಲಿ ತಮ್ಮ ಘನತೆಗೆ ತಕ್ಕ ಉತ್ತಮವಾದ ಉಡುಗೆಗಳನ್ನು ಧರಿಸಿರಬೇಕು. 6. ಮಾರ್ಗದರ್ಶಕರು ಭಾರತೀಯ ಮಾರ್ಗದರ್ಶಕರ ೊಕ್ಕೂಟವು ಕಾಲ-ಕಾಲಕ್ಕೆ ನಿಗದಿಪಡಿಸುವಷ್ಟು ಶುಲ್ಕವನ್ನು ಮಾತ್ರ ಪ್ರವಾಸಿಗರಿಂದ ಪಡೆಯಬೇಕು. 7. ಮಾರ್ಗದರ್ಶಕರು ಉದ್ಯಮದ ಯಾವುದೇ ಇತರೆ ಲಾಭದಾಯಕ ವ್ಯವಹಾರಸ್ಥರ ಪರವಾಗಿ ಶಿಫಾರಸ್ಸು ಮಾಡುವಂತಿಲ್ಲ ಮತ್ತು ಯಾವುದೇ ರೀತಿಯ ...

ಮಾರ್ಗದರ್ಶಕರ ವಿಧಗಳು Types of tour guides & ಸಾಮಾನ್ಯ ಕೌಶಲ್ಯಗಳು - Common Skills

ಮಾರ್ಗದರ್ಶಕರ ವಿಧಗಳು   Types of tour guides ಪ್ರಪಂಚದ ವಿವಿಧ ಭಾಗಗಳಲ್ಲಿ ಅನೇಕ ಬಗೆಯ ಮಾರ್ಗದರ್ಶಕರು ಕರ್ತವ್ಯ ನಿರ್ವಹಿಸುತ್ತಿದ್ದು, ಅವರಲ್ಲಿ ಸಾಮಾನ್ಯವಾಗಿರುವ ಕೆಲವು ಮಾರ್ಗದರ್ಶಕರ ಬಗೆಗಳನ್ನು ಇಲ್ಲಿ ನೀಡಲಾಗಿದೆ. ೧. ಐತಿಹಾಸಿಕ ಮಾರ್ಗದರ್ಶಕರು: ಐತಿಹಾಸಿಕ ಅವಶೇಷಗಳು, ಕೋಟೆಗಳು, ದೇವಾಲಯಗಳು, ಯುದ್ಧಭೂಮಿಗಳು ಮೊದಲಾದೆಡೆ ಮಾರ್ಗದರ್ಶಿಸುವ ಮಾರ್ಗದರ್ಶಕರು ಆಯಾ ಸ್ಥಳಗಳ ಐತಿಹಾಸಿಕ ಮಾಹಿತಿ ಹೊಂದಿರುತ್ತಾರೆ ಮತ್ತು ಪ್ರವಾಸಿಗರಿಗೆ ಆಕರ್ಷಕವಾಗಿ ಅವುಗಳ ಬಗ್ಗೆ ವಿವರಣೆ ನೀಡುತ್ತಾರೆ. ೨. ಸಾಹಸ ಮಾರ್ಗದರ್ಶಕರು: ಪ್ರವಾಸಿಗರಿಗೆ ಅಗತ್ಯವಾದ ಸುರಕ್ಷತಾ ವಿವರಗಳನ್ನು ನೀಡುವುದರ ಜೊತೆಗೆ, ಸುರಕ್ಷತಾ ಸಾದನ ಸಲಕರಣೆಗಳನ್ನು ಬಳಸುವ ಮತ್ತು ಅವುಗಳ ಪ್ರಾಯೋಗಿಕ ತಿಳುವಳಿಕೆಯನ್ನು ಹೊಂದಿ ಪ್ರವಾಸಿಗರಿಗೆ ಅಗತ್ಯವಾದ ಮಾರ್ಗದರ್ಶನ ಮಾಡುತ್ತಾರೆ. ಕೆಳಗೆ ಅಂತಹ ಕೆಲವು ಸಾಹಸ ಮಾರ್ಗದರ್ಶಕರ  ವಿವರಗಳನ್ನು ನೀಡಲಾಗಿದೆ.: ನದಿ ಮಾರ್ಗದರ್ಶಕರು: ನದಿ ನೀರಿನಲ್ಲಿ ಪುಟ್ಟ ದೋಣಿಗಳಲ್ಲಿ ಪ್ರವಾಹದೊಂದಿಗೆ ಸಂಚರಿಸುವ ಈ ಕ್ರೀಡೆಯಲ್ಲಿ ಮಾರ್ಗದರ್ಶಕರು ಪ್ರವಾಸಿಗರಿಗೆ ಅಗತ್ಯ ಸೇವೆ ಒದಗಿಸುವ ಜೊತೆಗೆ ಉಳಿದುಕೊಳ್ಳಲು ವ್ಯವಸ್ಥೆ ಮತ್ತು ಆಹಾರದ ಅನುಕೂಲಗಳನ್ನೂ ಕಲ್ಪಿಸಬೇಕಾಗುತ್ತದೆ. ಏಕೆಂದರೆ ಈ ಪ್ರವಾಸವು ಒಂದು ದಿನ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ತೆಗೆದುಕೊಳ್ಳಬಹುದು. ಪ್ರವಾಸಿಗರ ಸುರಕ್ಷತೆಗ...

ಭಾಗ 3: ಪ್ರವಾಸಿ ಮಾರ್ಗದರ್ಶಕರ ವಿವಿಧ ವಿವರಗಳು

ಮಾರ್ಗದರ್ಶಕರ ವ್ಯಾಖ್ಯಾನ - Definition of Tourist Guide ಪ್ರವಾಸಿ ಮಾರ್ಗದರ್ಶಕರು ಒಂದು ದೇಶದ ರಾಯಭಾರಿಗಳಂತೆ ಕಾರ್ಯ ನಿರ್ವಹಿಸುತ್ತಾರೆ. ಯಾವುದೇ ಪ್ರವಾಸಿಗರನ್ನು ಸ್ವಾಗತಿಸುವ ಮತ್ತು ಅವರು ಹೊರಡುವ ಸಮಯದಲ್ಲಿ ಬೀಳ್ಕೊಡುವವರು ಸಹಾ ಮಾರ್ಗದರ್ಶಕರೇ. ವಿವಿಧ ಅಂತರಾಷ್ಟ್ರೀಯ ಸಂಘಟನೆಗಳು ಅಂದರೆ ವಿಶ್ವ ಪ್ರವಾಸಿ ಮಾರ್ಗದರ್ಶಕರ ಸಂಘಗಳ ಮಹಾಒಕ್ಕೂಟವು ಪ್ರವಾಸಿ ಮಾರ್ಗದರ್ಶಕರನ್ನು ಕೆಳಕಂಡಂತೆ ವ್ಯಾಖ್ಯಾನಿಸಿದೆ:  “ ಒಂದು ಕ್ಷೇತ್ರ ಅಥವಾ ಪ್ರದೇಶದ ಬಗ್ಗೆ ವಿಶೇಷ ಜ್ಞಾನ ಮತ್ತು ವಿದ್ಯಾರ್ಹತೆ ಹೊಂದಿರುವ ವ್ಯಕ್ತಿಯು ಪ್ರವಾಸಿಗರ ಭಾಷೆಯಲ್ಲಿಯೇ ಒಂದು ಪ್ರದೇಶದ ಸಾಂಸ್ಕೃತಿಕ ಪರಂಪರೆ ಮತ್ತು ಸ್ವಾಭಾವಿಕ ರಚನೆಗಳ ವಿವರವನ್ನು ನೀಡುವ ವ್ಯಕ್ತಿ ” ಇಂತಹ ನಿರ್ದಿಷ್ಟಗೊಳಿಸಿದ ಜ್ಞಾನ ಮತ್ತು ವಿದ್ಯಾರ್ಹತೆಗಳು ಸೂಕ್ತವಾದ ಸಂಘ/ಸಂಸ್ಥೆಗಳಿಂದ ನಿಗದಿಗೊಳಿಸಲ್ಪಟ್ಟಿರುತ್ತವೆ. ಪ್ರವಾಸಿ ಮಾರ್ಗದರ್ಶಕನು ಪ್ರವಾಸಿಗರನ್ನು ಅವರ ಪ್ರವಾಸದ ವೇಳೆಯಲ್ಲಿ ಮಾರ್ಗದರ್ಶಿಸುತ್ತಾನೆ. ಸಾಮಾನ್ಯವಾಗಿ ಮಾರ್ಗದರ್ಶಕರು ಒಂದು ನಿರ್ದಿಷ್ಟ ಪ್ರದೇಶ ಅಥವಾ ನಗರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಆದರೆ, ಕೆಲವು ವೇಳೆ ಮಾರ್ಗದರ್ಶಕರು ದೇಶದ ವಿವಿಧ ಪ್ರವಾಸೀ ತಾಣಗಳಲ್ಲೂ ಸಹಾ ಮಾರ್ಗದರ್ಶಕರಾಗಿ ಕರ್ತವ್ಯ ನಿರ್ವಹಿಸಬಹುದು.   ಪ್ರವಾಸೀ ಮಾರ್ಗದರ್ಶಕ ಎಂದರೇನು? ಪ್ರವಾಸಿ ಮಾರ್ಗದರ್ಶಕರು ಒಂದು ಪ್ರದೇಶದಲ್ಲಿ ಆದರಾತಿಥ್ಯ ನೀಡುವವರ...

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization Antiquity : The Harappan civilisation is dated between 2600 and 1900 BC. There were earlier and later cultures, known as Early Harappan and Later Harappan. The Harappan period characterised by seals, beads, weights, stone blades and baked bricks is called as the Mature Harappan culture. The Carbon-14 datings indicate the mature Harappan period to be from C. 2800/2900–1800 BC. Modern research on the Harappan civilization, establishing evidence of their contact with the Mesopotamian Civilization also corroborates this dating. ಪ್ರಾಚೀನತೆ: ಹರಪ್ಪಾ ನಾಗರೀಕತೆಯು ಸಾ.ಶ.ಪೂ. ಸು. ೨೫೦೦ ವರ್ಷಗಳಷ್ಟು ಹಿಂದಿನದ್ದಾಗಿದ್ದು, ಪೂರ್ವಹರಪ್ಪ ಮತ್ತು ನಂತರದ ಹರಪ್ಪ ಎಂಬ ಸಂಸ್ಕೃತಿಗಳು ಇದ್ದವು ಎಂಬುದು ವಿದ್ವಾಂಸರ ಅಭಿಪ್ರಾಯ. ಮುದ್ರೆಗಳು, ಮಣಿಗಳು, ತೂಕದ ಸಾಧನಗಳು, ಕಲ್ಲಿನ ಆಯುಧಗಳು ಮತ್ತು ಸುಟ್ಟ ಇಟ್ಟಿಗೆಗಳಿಂದ ಕೂಡಿದ ಹರಪ್ಪಾ ಕಾಲಘಟ್ಟವನ್ನು ಪ್ರಬುದ್ಧ ಹರಪ್ಪಾ ಕಾಲವೆಂದು ಕರೆಯಲಾಗಿದೆ. ಆದರೆ, ಇಂಗಾಲ ೧೪ರ ಪರೀಕ್ಷೆಯ ಪ್ರಕಾರ ಪ್ರಬುಧ್ಧ ಹರಪ್ಪ ನಾಗರೀಕತೆಯು ಸಾ.ಶ..ಪೂ. 2900 ರಿಂದ 1800 ವರ್...